Tag: ಐಪಿಎಲ್

  • IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

    IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

    ಮುಂಬೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ (IPL 2025) ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಅ.31ರ ಒಳಗೆ ಪ್ರಕಟಿಸುವಂತೆ ಬಿಸಿಸಿಐ (BCCI) ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿವೆ.

    2025ರ ಐಪಿಎಲ್‌ ಆವೃತ್ತಿಯು ಅನೇಕ ದಿಗ್ಗಜ ಆಟಗಾರರ ಪಾಲಿಗೆ ಸವಾಲಿದ್ದಾಗಿದೆ. 6 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಲೆಜೆಂಡ್‌ ಎಂ.ಎಸ್‌ ಧೋನಿ, ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಎಂಬುದು ಕನ್ಫರ್ಮ್‌ ಎನ್ನಲಾಗಿದೆ. ಆದ್ರೆ ಆರ್‌ಸಿಬಿ ತಂಡದಲ್ಲಿ ಇನ್ನೂ ಮಹತ್ವದ ಬದಲಾವಣೆ ಕಂಡುಬಂದಿದೆ. ಮುಂಬೈ ಇಂಡಿಯನ್ಸ್‌ ತಂಡಕ್ಕೆ 5 ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಟ್ಟಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಡಲಿದ್ದು, ಹಾಲಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ತಂಡದಿಂದ ಔಟ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

    10 ಫ್ರಾಂಚೈಸಿಗಳ ಸಂಭಾವ್ಯ ಪಟ್ಟಿ ಹೀಗಿದೆ…
    * ಚೆನ್ನೈ ಸೂಪರ್ ಕಿಂಗ್ಸ್:
    ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಡೇರಿಲ್‌ ಮಿಚೆಲ್, ಮತೀಶ ಪತಿರಣ, ಎಂ.ಎಸ್ ಧೋನಿ

    * ಮುಂಬೈ ಇಂಡಿಯನ್ಸ್:
    ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅನ್ಶುಲ್ ಕಾಂಬೋಜ್

    * ರಾಯಲ್ ಚಾಲೆಂಜರ್ಸ್ ಬೆಂಗಳೂರು:
    ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಯಶ್ ದಯಾಳ್

    * ರಾಜಸ್ಥಾನ್ ರಾಯಲ್ಸ್:
    ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ

    * ಕೋಲ್ಕತ್ತಾ ನೈಟ್ ರೈಡರ್ಸ್:
    ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಫಿಲ್ ಸಾಲ್ಟ್, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ

    * ಗುಜರಾತ್ ಟೈಟಾನ್ಸ್:
    ಶುಭಮನ್ ಗಿಲ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ

    * ಲಕ್ನೋ ಸೂಪರ್ ಜೈಂಟ್ಸ್:
    ಕೆ.ಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಯಾದವ್

    * ಡೆಲ್ಲಿ ಕ್ಯಾಪಿಟಲ್ಸ್‌:
    ರಿಷಬ್ ಪಂತ್, ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಮಾರ್ಷ್, ಜೇಕ್ ಫ್ರೇಸರ್-ಮೆಕ್‌ ಗಾರ್ಕ್‌, ಅಕ್ಷರ್‌ ಪಟೇಲ್, ಅಭಿಷೇಕ್ ಪೊರೆಲ್

    * ಪಂಜಾಬ್ ಕಿಂಗ್ಸ್:
    ಸ್ಯಾಮ್ ಕುರ್ರಾನ್, ಅರ್ಷ್‌ದೀಪ್‌ ಸಿಂಗ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್‌, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ

    * ಸನ್‌ರೈಸರ್ಸ್ ಹೈದರಾಬಾದ್:
    ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ.

    ಟ್ರೇಡ್‌ ಇನ್‌ ವಿಂಡೋನಲ್ಲಿ ಬದಲಾವಣೆ ಸಾಧ್ಯತೆ:
    ಸದ್ಯ ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮಾ ಅವರು ರಿಟೇನ್‌ ಆಟಗಾರರ ಪಟ್ಟಿಯಲ್ಲಿದ್ದರೂ, ಅವರು ಟ್ರೇಡ್‌ ಇನ್‌ ವಿಂಡೋ ನಿಯಮದಲ್ಲಿ ಆರ್‌ಸಿಬಿ ಪಾಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಲಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ರಿಟೇನ್‌ ಸಂಭಾವ್ಯ ಪಟ್ಟಿಯಲ್ಲಿ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. 2024ರ ಆವೃತ್ತಿಯಲ್ಲಿ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ ಮುಂಬೈ ಇಂಡಿಯನ್ಸ್‌ ಮತ್ತು ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದರೂ ಅವರನ್ನು ಟ್ರೆಡ್‌ ಇನ್‌ ವಿಂಡೋ ನಿಯಮದ ಪ್ರಕಾರ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ಗೆ ಕರೆತಂದು, ಗ್ರೀನ್‌ ಅವರನ್ನ ಆರ್‌ಸಿಬಿ ತಂಡಕ್ಕೆ ಬಿಟ್ಟುಕೊಡಲಾಗಿತ್ತು.

  • IPL Mega Auction | ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಫ್ರಾಂಚೈಸಿಗಳಿಗೆ ಡೆಡ್‌ಲೈನ್‌ ಫಿಕ್ಸ್‌!

    IPL Mega Auction | ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಫ್ರಾಂಚೈಸಿಗಳಿಗೆ ಡೆಡ್‌ಲೈನ್‌ ಫಿಕ್ಸ್‌!

    ಮುಂಬೈ: ಮುಂದಿನ ನವೆಂಬರ್‌-ಡಿಸೆಂಬರ್‌ನಲ್ಲಿ 2025ರ ಐಪಿಎಲ್‌ ಟೂರ್ನಿಗೆ ಮೆಗಾ ಹರಾಜು (IPL Mega Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ.

    ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದದ ಆಟಗಾರರ ಪಟ್ಟಿಯನ್ನು ಅಕ್ಟೋಬರ್‌ 31ರ ಒಳಗೆ ಪ್ರಕಟಿಸುವಂತೆ ಗಡುವು ನೀಡಿದೆ. ಎಲ್ಲಾ ಫ್ರಾಂಚೈಸಿಗಳಿಗೂ ಈ ಬಾರಿ ರೈಟ್‌ ಟು ಮ್ಯಾಚ್‌ (RTM Card) ಕಾರ್ಡ್‌ನೊಂದಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಬಿಸಿಸಿಐ ಅನುಮತಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷಗಳಾಗಿರುವ ಆಟಗಾರರನ್ನು ಅನ್‌ಕ್ಯಾಪ್ಟ್‌ ಪ್ಲೇಯರ್‌ ಎಂದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಚೊಚ್ಚಲ ಆವೃತ್ತಿ ಪ್ರವೇಶಿಸುವ ಆಟಗಾರರನ್ನು ಕ್ಯಾಪ್ಡ್‌ ಪ್ಲೇಯರ್‌ ಎಂದೂ ಪರಿಗಣಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

    ಏನಿದು ಆರ್​ಟಿಎಂ ಕಾರ್ಡ್​ ರೂಲ್ಸ್‌?
    ಆರ್​ಟಿಎಂ ಕಾರ್ಡ್‌ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೇ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

    ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಐತಿಹಾಸಿಕ ನಿರ್ಣಯ
    ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ (IPL 2025) ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದೆ. ಟೂರ್ನಿ ವೇಳೆ ಲೀಗ್‌ ಪಂದ್ಯಅಗಳನ್ನಾಡುವ ಪ್ರತಿಯೊಬ್ಬ ಆಟಗಾರನೂ ಹರಾಜಿನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚುವರಿ ನಗದು ಹಣವನ್ನು ಪಡೆಯಲಿದ್ದಾರೆ ಎಂದು ಬಿಸಿಸಿಐ (BCCI) ಘೋಷಣೆ ಮಾಡಿದೆ. ಇದನ್ನೂ ಓದಿ: ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

    ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ತಮ್ಮ ಎಕ್ಸ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗಿನ ಲೀಗ್‌ನಲ್ಲಿ ಆಟಗಾರರು ಹರಾಜಿನಲ್ಲಿ ಪಡೆದ ಮೊತ್ತ ಪಡೆಯುತ್ತಿದ್ದರು. ಇದರೊಂದಿಗೆ ಸೂಪರ್‌ ಸಿಕ್ಸ್‌, ಬೌಂಡರಿ, ಕ್ಯಾಚ್‌, ಎಲೆಕ್ಟ್ರಿಕ್‌ ಸ್ಟ್ರೈಕರ್‌, ಪ್ಲೇಯರ್‌ ಆಫ್‌ದಿ ಮ್ಯಾಚ್‌, ಪ್ಲೇಯರ್‌ ಆಫ್‌ ದಿ ಸೀರಿಸ್‌ ಮೂಲಕ ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಿದ್ದರು. ಇನ್ಮುಂದೆ ಇದರ ಹೊರತಾಗಿ ಪ್ರತಿ ಲೀಗ್‌ ಪಂದ್ಯದಲ್ಲೂ ಆಟಗಾರರು ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಗಳಿಸಲಿದ್ದಾರೆ. ಇದನ್ನೂ ಓದಿ: IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್‌

    ಜಯ್‌ ಶಾ ಎಕ್ಸ್‌ ಖಾತೆಯಲ್ಲಿ ಏನಿದೆ?
    ಐತಿಹಾಸಿಕ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಘೋಷಿಸಿದೆ. ಹರಾಜಿನಲ್ಲಿ ಬಿಕರಿಯಾದ ನಂತರ ಕಾಂಟ್ರ್ಯಾಕ್ಟ್‌ನೊಂದಿಗೆ ಪ್ರತಿ ಆಟಗಾರನೂ ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ. ಈ ಪೈಕಿ ಆಟಗಾರನೊಬ್ಬ ಒಂದು ಋತುವಿನಲ್ಲಿ ಎಲ್ಲಾ ಲೀಗ್‌ ಪಂದ್ಯಗಳನ್ನು ಆಡಿದರೆ, ಹರಾಜಿನಲ್ಲಿ ನಿಗದಿಯಾದ ಹಣ ಹೊರತುಪಡಿಸಿ, ಹೆಚ್ಚುವರಿಯಾಗಿ 1.05 ಕೋಟಿ ರೂ. ಹೆಚ್ಚುವರಿ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಮೀಸಲಿಡುತ್ತವೆ. ಐಪಿಎಲ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಆಟಗಾರರಲ್ಲಿ ಅತ್ತುತ್ತಮ ಪ್ರದರ್ಶನಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

  • ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

    ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

    ಬೆಂಗಳೂರು: 2025ರ ಐಪಿಎಲ್‌ (IPL 2025) ಕ್ರಿಕೆಟ್‌ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳು ಮತ್ತು ಐಪಿಎಲ್‌ ಆಡಳಿತ ಮಂಡಳಿ ಸಿದ್ಧತೆಯಲ್ಲಿ ತೊಡಗಿದೆ. ಈ ನಡುವೆ ಬಿಸಿಸಿಐ 2025 ರಿಂದ 2027ರ ಐಪಿಎಲ್‌ ಋತುಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಮಹತ್ವದ ಬದಲಾವಣೆ ತಂದಿದೆ.

    ಈ ಹಿಂದಿನ ಆವೃತ್ತಿಗಳಲ್ಲಿ ಕೆಲ ಆಟಗಾರರು ಅದರಲ್ಲೂ ವಿದೇಶಿ ಆಟಗಾರರು ಹರಾಜಿನಲ್ಲಿ ಆಯ್ಕೆಯಾದ ಬಳಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದರು. ರಾಷ್ಟ್ರೀಯ ತಂಡಗಳಿಗೆ ಆಡುವ ಕಾರಣ ನೀಡಿ ತಮ್ಮ ತವರು ತಂಡಗಳಿಗೆ ಮರಳುತ್ತಿದ್ದರು. ಇದೀಗ ಅಂತಹ ಆಟಗಾರರಿಗೆ ಬಿಸಿಮುಟ್ಟಿಸಲು ಬಿಸಿಸಿಐ ಹೊಸ ನಿಯಮ ಜಾರಿಗೊಳಿಸಿದೆ.

    ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಇದರಿಂದ ಹರಾಜಿನಲ್ಲಿ ಬಿಕರಿಯಾದ ಆಟಗಾರರು ಆವೃತ್ತಿ ಮುಗಿಯುವವರೆಗೆ ಆಯ್ಕೆಯಾದ ಫ್ರಾಂಚೈಸಿಗಳಿಗೆ ಆಡಬೇಕಾಗುತ್ತದೆ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

    16.25 ಕೋಟಿ ಪಡೆದು 15 ರನ್‌ ಗಳಿಸಿದ್ದ ಸ್ಟೋಕ್ಸ್‌
    2023 ಐಪಿಎಲ್‌ ಆವೃತ್ತಿಗೆ ಬರೋಬ್ಬರಿ 16.25 ಕೋಟಿ ರೂ.ಗೆ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನ ಸಿಎಸ್‌ಕೆ ತಂಡವು ಖರೀದಿಸಿತ್ತು. ಆದ್ರೆ 31 ವರ್ಷದ ಆಟಗಾರ ಸ್ಟೋಕ್ಸ್‌ ಕೇವಲ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡು ಕ್ರಮವಾಗಿ 7 ಮತ್ತು 8 ರನ್‌ ಗಳಿಸಿದರು. ಹೀಗಾಗಿ ಅವರು ಗಳಿಸಿದ ಒಂದೊಂದು ರನ್‌ ಬೆಲೆ 1.08 ಕೋಟಿ ಮೊತ್ತವನ್ನು ಸಿಎಸ್‌ಕೆ ಫ್ರಾಂಚೈಸಿ ಕೊಟ್ಟಂತಾಗಿತ್ತು. ಒಂದೇ ಒಂದು ಓವರ್‌ ಬೌಲಿಂಗ್‌ ಮಾಡಿ 18 ರನ್‌ ಕೊಟ್ಟರು. ನಂತರ ಗಾಯಗೊಂಡ ಅವರು ಫಿಟ್‌ನೆಸ್‌ ಸಮಸ್ಯೆಗೆ ಒಳಗಾಗಿ ಪ್ಲೇಯಿಂಗ್‌ 11ನಿಂದ ಹೊರಗುಳಿದರು. ಆದ್ರೆ ಐಪಿಎಲ್‌ ಬಳಿಕ ನಡೆದ ಆಶಸ್‌ ಟೂರ್ನಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

    ಅಲ್ಲದೇ ಕಳೆದ ಎರಡು ಆವೃತ್ತಿಗಳಲ್ಲಿ ಆಸೀಸ್‌ ಟಾಪ್‌ ಆಟಗಾರರದ ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌ ಅವರು ತಮ್ಮ ರಾಷ್ಟ್ರೀಯ ತಂಡಕ್ಕೆ ಅರ್ಧದಲ್ಲೇ ಮರಳಿದ್ದರು. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಭಾರೀ ಹೊಡೆತ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಹರಾಜಿನಲ್ಲಿ ಆಯ್ಕೆಯಾದ ಬಳಿಕ ಅಲಭ್ಯರಾಗುವ ಆಟಗಾರರಿಗೆ ಬಿಸಿಮುಟ್ಟಿಸಲು ಹೊಸ ನಿಯಮ ಜಾರಿಗೊಳಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

    ಸಭೆಯ ಪ್ರಮುಖ ನಿರ್ಣಯಗಳೇನು?
    * ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
    * ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
    * ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಹಾಗಾಗಿ 2025ರ ಐಪಿಎಲ್‌ ಋತುವಿನಲ್ಲಿ ಸಂಬಳ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
    * ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
    * ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
    * ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
    * ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗುತ್ತಾರೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
    * 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

  • 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

    6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

    -2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ಗೆ ಅಸ್ತು

    ಬೆಂಗಳೂರು: 2025ರ ಐಪಿಎಲ್‌ (IPL 2025) ಕೂಟಕ್ಕೆ ತಯಾರಿ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳು ಮತ್ತು ಐಪಿಎಲ್‌ ಆಡಳಿತ ಮಂಡಳಿ ಸಿದ್ದತೆ ನಡೆಸುತ್ತಿದೆ. ಕಳೆದ ಕೆಲವು ವಾರಗಳಿಂದ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗೆಗಿನ ನಿಯಮಗಳ ಬಗ್ಗೆ ಚರ್ಚೆ ನಡೆದಿದೆ.

    ಶನಿವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಮಂಡಳಿ ಸಭೆಯಲ್ಲಿ 2025-27ರ ವರೆಗಿನ ಐಪಿಎಲ್‌ ನಿಯಮಾವಳಿಗಳ ಕುರಿತು ಬಿಸಿಸಿಐ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

    ಸಭೆಯ ಪ್ರಮುಖ ನಿರ್ಣಯಗಳೇನು?
    * ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
    * ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
    * ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಈ ಹಿಂದೆ 2024ರ ಐಪಿಎಲ್‌ನಲ್ಲಿ, ಸಂಬಳದ ಮಿತಿ (ಹರಾಜು ಪರ್ಸ್ + ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವೇತನ) 110 ಕೋಟಿ ರೂ. ಇತ್ತು. 2025ರ ಐಪಿಎಲ್‌ಗೆ ಸಂಬಳದ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
    * ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
    * ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
    * ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
    * ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗುತ್ತಾರೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
    * 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ.

  • IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್‌

    IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್‌

    – ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಐತಿಹಾಸಿಕ ನಿರ್ಣಯ

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ (IPL 2025) ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದೆ. ಟೂರ್ನಿ ವೇಳೆ ಲೀಗ್‌ ಪಂದ್ಯಅಗಳನ್ನಾಡುವ ಪ್ರತಿಯೊಬ್ಬ ಆಟಗಾರನೂ ಹರಾಜಿನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚುವರಿ ನಗದು ಹಣವನ್ನು ಪಡೆಯಲಿದ್ದಾರೆ ಎಂದು ಬಿಸಿಸಿಐ (BCCI) ಘೋಷಣೆ ಮಾಡಿದೆ.

    ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ತಮ್ಮ ಎಕ್ಸ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗಿನ ಲೀಗ್‌ನಲ್ಲಿ ಆಟಗಾರರು ಹರಾಜಿನಲ್ಲಿ ಪಡೆದ ಮೊತ್ತ ಪಡೆಯುತ್ತಿದ್ದರು. ಇದರೊಂದಿಗೆ ಸೂಪರ್‌ ಸಿಕ್ಸ್‌, ಬೌಂಡರಿ, ಕ್ಯಾಚ್‌, ಎಲೆಕ್ಟ್ರಿಕ್‌ ಸ್ಟ್ರೈಕರ್‌, ಪ್ಲೇಯರ್‌ ಆಫ್‌ದಿ ಮ್ಯಾಚ್‌, ಪ್ಲೇಯರ್‌ ಆಫ್‌ ದಿ ಸೀರಿಸ್‌ ಮೂಲಕ ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಿದ್ದರು. ಇನ್ಮುಂದೆ ಇದರ ಹೊರತಾಗಿ ಪ್ರತಿ ಲೀಗ್‌ ಪಂದ್ಯದಲ್ಲೂ ಆಟಗಾರರು ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಗಳಿಸಲಿದ್ದಾರೆ. ಇದನ್ನೂ ಓದಿ: IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

    ಜಯ್‌ ಶಾ ಎಕ್ಸ್‌ ಖಾತೆಯಲ್ಲಿ ಏನಿದೆ?
    ಐತಿಹಾಸಿಕ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಘೋಷಿಸಿದೆ. ಹರಾಜಿನಲ್ಲಿ ಬಿಕರಿಯಾದ ನಂತರ ಕಾಂಟ್ರ್ಯಾಕ್ಟ್‌ನೊಂದಿಗೆ ಪ್ರತಿ ಆಟಗಾರನೂ ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ. ಈ ಪೈಕಿ ಆಟಗಾರನೊಬ್ಬ ಒಂದು ಋತುವಿನಲ್ಲಿ ಎಲ್ಲಾ ಲೀಗ್‌ ಪಂದ್ಯಗಳನ್ನು ಆಡಿದರೆ, ಹರಾಜಿನಲ್ಲಿ ನಿಗದಿಯಾದ ಹಣ ಹೊರತುಪಡಿಸಿ, ಹೆಚ್ಚುವರಿಯಾಗಿ 1.05 ಕೋಟಿ ರೂ. ಹೆಚ್ಚುವರಿ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಮೀಸಲಿಡುತ್ತವೆ. ಐಪಿಎಲ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಆಟಗಾರರಲ್ಲಿ ಅತ್ತುತ್ತಮ ಪ್ರದರ್ಶನಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ? 

    ಪರ್ಸ್‌ ಇನ್ನಷ್ಟು ದೊಡ್ಡದಾಗುವ ಸಾಧ್ಯತೆ:
    ಮೂರು ವರ್ಷಗಳ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್‌ ಫ್ರಾಂಚೈಸಿಗಳ ಪರ್ಸ್‌ ಈ ಬಾರಿ ಇನ್ನಷ್ಟು ದೊಡ್ಡದಾಗುವ ಸಾಧ್ಯತೆಗಳಿವೆ. ಪ್ರತಿ ಫ್ರಾಂಚೈಸಿಯ ಮೊತ್ತ ಸದ್ಯ 100 ಕೋಟಿ ರೂ. ಮಿತಿಯಿದ್ದು, 115 ರಿಂದ 120 ಕೋಟಿ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಉಲ್ಲೇಖಿಸಿವೆ. ಮುಂದಿನ ನವೆಂಬರ್ 12ನೇ ವಾರದಲ್ಲಿ ಮೆಗಾ ಹರಾಜಿನ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

  • ರಾಜಸ್ಥಾನದಲ್ಲಿ ಎರಡನೇ ಇನ್ನಿಂಗ್ಸ್‌ – ರಾಯಲ್ಸ್‌ ಕೋಚ್‌ ಆಗಿ ದ್ರಾವಿಡ್‌ ನೇಮಕ

    ರಾಜಸ್ಥಾನದಲ್ಲಿ ಎರಡನೇ ಇನ್ನಿಂಗ್ಸ್‌ – ರಾಯಲ್ಸ್‌ ಕೋಚ್‌ ಆಗಿ ದ್ರಾವಿಡ್‌ ನೇಮಕ

    ಬೆಂಗಳೂರು: ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡಕ್ಕೆ ರಾಹುಲ್‌ ದ್ರಾವಿಡ್‌ (Rahul Dravid) ಮರಳಿದ್ದಾರೆ. ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ನಿಜವಾಗಿದ್ದು ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯ ಕೋಚ್‌ (Head Coach) ಆಗಿ ದ್ರಾವಿಡ್‌ ನೇಮಕವಾಗಿದ್ದಾರೆ.

    ರಾಹುಲ್‌ ದ್ರಾವಿಡ್‌  ಹಲವು ವರ್ಷಗಳ ಒಪ್ಪಂದಕ್ಕೆ ದ್ರಾವಿಡ್ ಸಹಿ ಹಾಕಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಆರ್‌ ಆರ್‌, ಭಾರತದ ದಂತಕಥೆ ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್‌ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಬರೆದುಕೊಂಡಿದೆ.

    ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್‌ಕ್ರಂ ಅವರಿಂದ ದ್ರಾವಿಡ್‌ ಪಿಂಕ್‌ ಜೆರ್ಸಿ ಸ್ವೀಕರಿಸಿದ್ದಾರೆ.

    ಆರ್‌ಆರ್‌ ತಂಡವನ್ನು ಸೇರಿದ ನಂತರ ಮಾತನಾಡಿದ ದ್ರಾವಿಡ್‌, ವಿಶ್ವಕಪ್ ಬಳಿಕ ಮತ್ತೊಂದು ಸವಾಲು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತದೆ. ಈ ಸವಾಲು ಸ್ವೀಕಾರಕ್ಕೆ ರಾಜಸ್ಥಾನ ರಾಯಲ್ಸ್ ಸೂಕ್ತ ತಂಡ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ (Team India) ವಿಶ್ವಕಪ್‌ ಗೆಲ್ಲುವುದರೊಂದಿಗೆ ದ್ರಾವಿಡ್‌ ಅವರ ಕೋಚ್‌ ಅವಧಿಯೂ ಅಂತ್ಯವಾಗಿತ್ತು. ಸದ್ಯ ದ್ರಾವಿಡ್‌ ಕಿರು ವಿರಾಮದಲ್ಲಿದ್ದು ಹಲವು ಐಪಿಎಲ್‌ (IPL) ತಂಡಗಳು ದ್ರಾವಿಡ್‌ ಅವರನ್ನು ಸಂಪರ್ಕಿಸಿದ್ದವು.


    ದ್ರಾವಿಡ್ 2011 ಮತ್ತು 2013ರ ಅವಧಿಯಲ್ಲಿ ರಾಯಲ್ಸ್‌ ಪರ ಆಡಿದ್ದ ದ್ರಾವಿಡ್‌ 2014ರಲ್ಲಿ ತಂಡದ ಮೆಂಟರ್‌ ಆಗಿ ಆಯ್ಕೆ ಆಗಿದ್ದರು. ನಂತರ ಭಾರತ A ಮತ್ತು U-19 ತಂಡಗಳಿಗೆ ತರಬೇತುದಾರರಾಗಿ ದ್ರಾವಿಡ್‌ ಆಯ್ಕೆಯಾಗಿದ್ದರು. ರವಿಶಾಸ್ತ್ರಿ ಅವಧಿ ಅಂತ್ಯವಾದ ನಂತರ 2021ರಲ್ಲಿ ದ್ರಾವಿಡ್‌ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು.

    ಶೇನ್ ವಾರ್ನ್ ನೇತೃತ್ವದಲ್ಲಿ 2008ರ ಟೂರ್ನಿಮೆಂಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ನಂತರ ರಾಜಸ್ಥಾನ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. 2022 ರಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಫೈನಲ್‌ ಪ್ರವೇಶಿಸಿತ್ತು. ಆದರೆ ಗುಜರಾತ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿತ್ತು.

     

  • ಲಕ್ನೋದಲ್ಲೇ ರಾಹುಲ್‌ ಉಳಿಸಿಕೊಳ್ಳಲು ಗೋಯೆಂಕಾ ಪ್ರಯತ್ನ

    ಲಕ್ನೋದಲ್ಲೇ ರಾಹುಲ್‌ ಉಳಿಸಿಕೊಳ್ಳಲು ಗೋಯೆಂಕಾ ಪ್ರಯತ್ನ

    ನವದೆಹಲಿ: ನಾಯಕ, ವಿಕೆಟ್ ಕೀಪರ್ ಕೆ.ಎಲ್ ರಾಹುಲ್ (KL Rahul) ಅವರನ್ನು ಲಕ್ನೋ ತಂಡದಲ್ಲಿಯೇ (Lucknow Super Giants) ಉಳಿಸಿಕೊಳ್ಳಲು ತಂಡದ ಮಾಲೀಕ ಸಂಜಯ್ ಗೋಯಂಕ್ ಮಾತುಕತೆ ನಡೆಸಿದ್ದಾರೆ.

    ಅಲಿಪುರ್‌ನ ತಮ್ಮ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ ಅವರು ರಾಹುಲ್ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಈ ಬಾರಿಯ ಐಪಿಎಲ್‌ನಲ್ಲಿ ಹೈದರಾಬಾದ್ ಮತ್ತು ಲಕ್ನೋ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡವು 10 ವಿಕೆಟ್‌ನಿಂದ ಹಿನಾಯವಾಗಿ ಸೋತಿತ್ತು. ಇದರಿಂದ ಸಿಟ್ಟಿಗೆದ್ದ ಲಕ್ನೋ ತಂಡದ ಮಾಲಿಕ ಗೋಯೆಂಕಾ ಡಗೌಟ್‌ಗೆ ಬಂದು ಸಾರ್ವಜನಿಕವಾಗಿಯೇ ನಾಯಕ ಕೆ.ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತುಂಬಾ ಚರ್ಚೆಗೆ ಕಾರಣವಾಗಿತ್ತು. ಮಾಲೀಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ಎಲ್ಲರ ಮುಂದೆಯೇ ಅವರು ಹೀಗೆ ಮಾಡಬಾರದಾಗಿತ್ತು. ರಾಹುಲ್‌ಗೆ ಲಕ್ನೋ ತಂಡದಲ್ಲಿ ಅವಮಾನವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದೀಗ ಲಕ್ನೋ ತಂಡದ ಮಾಲೀಕ ಸಂಜಯ್ ಗೋಯೆಂಕ್ ಅವರು ಕೆ.ಎಲ್ ರಾಹುಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯಲು ಕೇಳಿಕೊಂಡಿದ್ದು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟು – ಹೆಲ್ಮೆಟ್‌ನಲ್ಲಿ ಸಿಕ್ಸ್‌ ಹೊಡೆದ ಬ್ರಾಥ್‌ವೈಟ್!

    ಆರ್‌ಸಿಬಿ ತಂಡ ಸೇರ್ತಾರಾ?
    ಈ ಹಿಂದೆಯ ಸಂದರ್ಶನವೊಂದರಲ್ಲಿ ಕೆಎಲ್ ರಾಹುಲ್ ಆರ್‌ಸಿಬಿ (RCB) ತಂಡದ ಪರವಾಗಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕನ್ನಡಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ರಾಹುಲ್ ಅವರಿಗೆ ಲಕ್ನೋ ತಂಡದಲ್ಲಿ ಅವಮಾನವಾಗುತ್ತಿದೆ. ಹಾಗಾಗಿ ಅವರು ಆರ್‌ಸಿಬಿ ಪರವಾಗಿ ಆಟವಾಡಬೇಕು ಎಂದು ಕೋರಿಕೊಂಡಿದ್ದರು. ಆರ್‌ಸಿಬಿ ಫ್ರಾಂಚೈಸಿ ಕೂಡ ರಾಹುಲ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಲ್ಲಿಯವರೆಗೆ ರಾಹುಲ್ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ರಾಹುಲ್‌ರ ಮುಂದಿನ ನಡೆ ಕುತೂಹಲ ಮೂಡಿಸಿದೆ.

     

  • ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    ಮುಂಬೈ: ಭಾರತದ (India) ಸ್ಟಾರ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಪ್ರತಿಸ್ಪರ್ಧಿ ತಂಡ ಯಾವುದು ಎಂಬುವುದರ ಕುರಿತು ಇತ್ತೀಚಿಗೆ ಮಾತನಾಡಿದ್ದಾರೆ.

    ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ 3 ಬಾರಿ ಗೆದ್ದ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkatta Knight Riders) ತಂಡಗಳ ನಡುವೆ ನಿಮ್ಮ ನೆಚ್ಚಿನ ಪ್ರತಿಸ್ಪರ್ಧಿ ಯಾವುದು ಎಂದು ಕೇಳಿದಕ್ಕೆ ಪ್ರತಿಕ್ರಿಯಿಸಿ, ನನಗೆ ಕೆಕೆಆರ್ (KKR)  ನೆಚ್ಚಿನ ಪ್ರತಿಸ್ಪರ್ಧಿ ತಂಡ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿದ ಶ್ರುತಿ

    ಕಳೆದ ಭಾನುವಾರವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) 16 ವರ್ಷಗಳನ್ನು ಪೂರೈಸಿದ ಕೊಹ್ಲಿಗೆ ಬಿಸಿಸಿಐ (BCCI)  ಕಾರ್ಯದಶಿ ಜಯ್ ಶಾ (Jay Shah) 16 ವರ್ಷದ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 19 ವರ್ಷದ ಯುವಕ. ಇಂದು 16 ವರ್ಷಗಳನ್ನು ಪೂರೈಸಿದ್ದಾರೆ. ಇದು ನಿಜವಾದ ವೃತ್ತಿಜೀವನದ ಆರಂಭ ಹಾಗೂ ಪೂರೈಸಿದ ರಾಜನಿಗೆ ಅಭಿನಂದನೆಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಶುಭ ಹಾರೈಸಿದ್ದರು.

    ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ 2008ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಶಕ್ತಿಶಾಲಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಇದನ್ನೂ ಓದಿ: ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂ ಕೋರ್ಟ್

    ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್  (Sachin Tendulkar) ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಕೊಹ್ಲಿ 2008ರಲ್ಲಿ ಆರ್‌ಸಿಬಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಬೇರೆ ತಂಡಕ್ಕೆ ಹೋಗದೇ ನಿರಂತರವಾಗಿ ಆರ್‌ಸಿಬಿ (RCB) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

  • IPL 2025: ಪರ್ಸ್‌ ಮೊತ್ತ 140 ಕೋಟಿ ರೂ.ಗೆ ಏರಿಕೆ ಸಾಧ್ಯತೆ – ಫ್ರಾಂಚೈಸಿಗಳ ಬೇಡಿಕೆಗಳೇನು?

    IPL 2025: ಪರ್ಸ್‌ ಮೊತ್ತ 140 ಕೋಟಿ ರೂ.ಗೆ ಏರಿಕೆ ಸಾಧ್ಯತೆ – ಫ್ರಾಂಚೈಸಿಗಳ ಬೇಡಿಕೆಗಳೇನು?

    – ಆರ್‌ಟಿಎಂ ಕಾರ್ಡ್‌ ಬಳಕೆಯತ್ತ ಫ್ರಾಂಚೈಸಿಗಳ ಒಲವು

    ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಾಗಿ (IPL 2025) ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಎಲ್ಲಾ ತಂಡಗಳಿಗೂ ರಿಟೇನ್‌ ಆಟಗಾರರನ್ನು ಬಿಟ್ಟು ಉಳಿದ ಆಟಗಾರರನ್ನು ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್‌ ಆಟಗಾರರು ಹರಾಜಿನಲ್ಲಿ ಇರುವ ಸಾಧ್ಯತೆಗಳಿವೆ. ಈ ಬೆನ್ನಲ್ಲೇ ಐಪಿಎಲ್‌ ಫ್ರಾಂಚೈಸಿಗಳು (IPL Franchises) ವಿಶೇಷ ಬೇಡಿಕೆಯನ್ನಿರಿಸಿವೆ.

    ಸದ್ಯ ಮೆಗಾ ಹರಾಜಿಗೂ ಮುನ್ನ ಕನಿಷ್ಠ 3 ರಿಂದ 5 ಆಟಗಾರರನ್ನು ಮಾತ್ರ ರಿಟೇನ್‌ ಮಾಡಿಕೊಳ್ಳಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ 8 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಅನುಮತಿ ನೀಡುವಂತೆ ಫ್ರಾಂಚೈಸಿಗಳು ಮನವಿ ಮಾಡಿವೆ. ಅಲ್ಲದೇ ಹರಾಜಿಗೆ (IPL Mega Auction) 100 ಕೋಟಿ ರೂ.ಗಳಿಗೆ ನಿಗದಿ ಮಾಡಿರುವ ಪರ್ಸ್‌ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿವೆ. ಆದ್ದರಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ ಮೊತ್ತವನ್ನು 130 ರಿಂದ 140 ಕೋಟಿ ರೂ.ಗಳವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ ಹೇಳಲಾಗುತ್ತಿದೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    ಅಲ್ಲದೇ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM (ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿಗಳು ಡಿಮ್ಯಾಂಡ್ ಮಾಡಿವೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಲುವು ತೋರಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್‌, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ

    ಏನಿದು ಆರ್​ಟಿಎಂ ಕಾರ್ಡ್​?
    ಆರ್​ಟಿಎಂ ಕಾರ್ಡ್‌ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

    ಪರ್ಸ್‌ ಮೊತ್ತ 140 ಕೋಟಿ ರೂ.ಗೆ ಏರಿಕೆ ಸಾಧ್ಯತೆ?
    2025ರ ಐಪಿಎಲ್‌ ಟೂರ್ನಿಗೆ ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಮೆಗಾ ಹರಾಜಿಗೆ ಎಲ್ಲಾ 10 ತಂಡಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ.ಗಳಿಂದ 140 ಕೋಟಿ ರೂ.ಗಳ ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕೆಂದರೆ 2025 ಮತ್ತು 2026ರ ಟೂರ್ನಿಗಳಲ್ಲಿ 84 ಪಂದ್ಯಗಳು ನಡೆಯಲಿವೆ, 2027ರ ಆವೃತ್ತಿ 94 ಪಂದ್ಯಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಮೆಗಾ ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ಬಿಡ್‌ ಮಾಡಬೇಕಿರುವ ಕಾರಣ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಆದ್ದರಿಂದ ಪರ್ಸ್‌ ಮೊತ್ತ ಹೆಚ್ಚಿಸಬೇಕೆಂಬ ಫ್ರಾಂಚೈಸಿಗಳ ಮನವಿಯನ್ನು ಬಿಸಿಸಿಐ ಪುರಸ್ಕರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2024ರ ಐಪಿಎಲ್‌ ವರೆಗೆ ತಲಾ 10 ತಂಡಗಳಿಗೆ 100 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿತ್ತು. ಇದನ್ನೂ ಓದಿ: IPL: ರಾಜಸ್ಥಾನ್ ರಾಯಲ್ಸ್ ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್!

  • IPL: ರಾಜಸ್ಥಾನ್ ರಾಯಲ್ಸ್ ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್!

    IPL: ರಾಜಸ್ಥಾನ್ ರಾಯಲ್ಸ್ ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್!

    ನವದೆಹಲಿ: ಟೀಂ ಇಂಡಿಯಾ ಕೋಚ್ ಸ್ಥಾನ ತೊರೆದಿರುವ ರಾಹುಲ್ ದ್ರಾವಿಡ್ (Rahul Dravid) ರಾಜಸ್ಥಾನ ರಾಯಲ್ಸ್ ಐಪಿಎಲ್ (IPL) ಟೀಂ ಹೆಡ್ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

    ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಮುಖ್ಯಸ್ಥರು ಹಾಗೂ ರಾಹುಲ್ ದ್ರಾವಿಡ್ ಜೊತೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಹೇಳಿಕೆ ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

    51 ವರ್ಷದ ರಾಹುಲ್ ದ್ರಾವಿಡ್ ಕೆಕೆಆರ್ ತಂಡದಲ್ಲಿ ಗೌತಂ ಗಂಭೀರ್ ಸ್ಥಾನಕ್ಕೆ ಆಯ್ಕೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ದ್ರಾವಿಡ್ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಯೇ ಅಧಿಕ ಎನ್ನಲಾಗಿದೆ. 2013, 2014 ಮತ್ತು 2015ರಲ್ಲೂ ದ್ರಾವಿಡ್ ಅವರು ರಾಜಸ್ಥಾನ ತಂಡದ ಭಾಗವಾಗಿದ್ದರು.

    2015ರ ಬಳಿಕ ಬಿಸಿಸಿಐ ಜೊತೆ ಕೈಜೋಡಿಸಿದ್ದ ದ್ರಾವಿಡ್ ಅಂಡರ್ 19 ಹಾಗೂ ಇಂಡಿಯಾ ಎ ಟೀಂ ಕೋಚ್ ಆಗಿದ್ದರು. ಬಳಿಕ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾದರು. 2021ರ ಅಕ್ಟೋಬರ್ ತಿಂಗಳಿನಿಂದ ಅವರು ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದರು. ಇದನ್ನೂ ಓದಿ: Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

    ರಾಹುಲ್ ದ್ರಾವಿಡ್ ಕೋಚ್ ಆದರೆ 2021ರಿಂದ ರಾಯಲ್ಸ್ ತಂಡದ ನಿರ್ದೇಶಕರಾಗಿರುವ ಕುಮಾರ ಸಂಗಕ್ಕಾರ ತಂಡದ ಜೊತೆಯಲ್ಲೇ ಉಳಿಯುತ್ತಾರಾ ಇಲ್ಲವೋ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.