Tag: ಐಪಿಎಲ್ ಹರಾಜು

  • IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    – ಐವರು ಸ್ಟಾರ್‌ ಪ್ಲೇಯರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    – ಫ್ರಾಂಚೈಸಿಗಳ ಪರ್ಸ್‌ ಮೊತ್ತ 151 ಕೋಟಿಗೆ ಹೆಚ್ಚಳ

    ಮುಂಬೈ: ಮುಂದಿನ ಡಿಸೆಂಬರ್‌ 13 ರಿಂದ 15ರ ಅವಧಿಯಲ್ಲಿ 2026ರ ಐಪಿಎಲ್‌ ಟೂರ್ನಿಗೆ ಮಿನಿ ಹರಾಜು (IPL Mini Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡಲಾಗಿದೆ.

    ಮುಂದಿನ ನವೆಂಬರ್‌ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್‌ ಮಂಡಳಿ ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2025ರ ಐಪಿಎಲ್‌ ಟೂರ್ನಿ ವೇಳೆ ಮೆಗಾ ಹರಾಜು ನಡೆದಿತ್ತು. ಆದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಆದ್ರೆ ಬಿಸಿಸಿಐ (BCCI) ಈಗಾಗಲೇ ವಿಧಿಸಿರುವಂತೆ ಕಳೆದಬಾರಿಗಿಂತ ಫ್ರಾಂಚೈಸಿಗಳ ಪರ್ಸ್‌ ಮೊತ್ತ ಹಿಗ್ಗಲಿದೆ.

    ಪರ್ಸ್‌ ಮೊತ್ತ ಇನ್ನಷ್ಟು ಹೆಚ್ಚಳ
    ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್‌ ಫ್ರಾಂಚೈಸಿಗಳ ಪರ್ಸ್‌ 2023-24ರ ಐಪಿಎಲ್‌ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್‌ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್‌ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ. ಇದನ್ನೂ ಓದಿ: 2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    ಐವರು ಸ್ಟಾರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    ಇನ್ನೂ ಮಿನಿ ಹರಾಜಿಗೂ ಮುನ್ನ ರಿಟೇನ್‌ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡ್ತಿದ್ದಂತೆ ದೀಪಕ್ ‌ಹೂಡ, ವಿಜಯ್‌ ಶಂಕರ್‌, ರಾಹುಲ್‌ ತ್ರಿಪಾಟಿ, ಸ್ಯಾಮ್‌ ಕರ್ರನ್‌, ಡಿವೋನ್‌ ಕಾನ್ವೆ ಅವರನ್ನ ತಂಡದಿಂದ ಹೊರಬ್ಬಲು ಫ್ರಾಂಚೈಸಿ ನಿರ್ಧರಿಸಿದೆ ಎಂಧು ತಿಳಿದುಬಂದಿದೆ. ಈ ಬಗ್ಗೆ ಸಿಎಸ್‌ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

  • IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ (IPL 2024 Auctio) ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ (Mitchell Starc) ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಇತಿಹಾಸವಾಗಿತ್ತು. ಆಸೀಸ್‌ ತಂಡದ ನಾಯಕ 20.50 ಕೋಟಿ ರೂ.ಗೆ ಮಾರಾಟವಾಗಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದರು. ಆದ್ರೆ 2023ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ತಂಡದ ಪಾಲಾಗಿ ದಾಖಲೆ ಬರೆದರು. ಇದನ್ನೂ ಓದಿ: IPL 2024 Auction: ದುಬಾರಿ ಆಟಗಾರ – 20.50 ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್‌ ಕಮ್ಮಿನ್ಸ್‌

    ತೀವ್ರ ಪೈಪೋಟಿಯಿಂದ ಕೂಡಿದ್ದ ಬಿಡ್‌ನಲ್ಲಿ ಸ್ಟಾರ್ಕ್‌ ಅವರನ್ನ ಖರೀದಿಸಲು ಗುಜರಾತ್‌ ಟೈಟಾನ್ಸ್‌ (Gujarat Taitans) ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ನಡುವೆ ಹಣಾಹಣಿ ನಡೆದಿತ್ತು. ಅಲ್ಲದೇ ಪ್ರೇಕ್ಷರಕ ಎದೆ ಬಡಿತವೂ ಹೆಚ್ಚಾಗಿತ್ತು, ಹರಾಜು ನಡೆಸಿಕೊಡುತ್ತಿದ್ದ ಮಹಿಳೆ ಮಲ್ಲಿಕಾ ಸಾಗರ್‌ ಬಿಡ್‌ ಕೂಗಿ ಕೂಗಿ ಸುಸ್ತಾಗಿದ್ದರು. ತನ್ನ ಪರ್ಸ್‌ನಲ್ಲಿ 38.15 ಕೋಟಿ ರೂ. ಉಳಿಸಿಕೊಂಡಿದ್ದ ಗುಜರಾತ್‌ ಟೈಟಾನ್ಸ್‌ 24.50 ಕೋಟಿ ರೂ.ವರೆಗೂ ಬಿಡ್‌ ಮಾಡಿತ್ತು. ಆದ್ರೆ ಪಟ್ಟು ಬಿಡದ ಕೆಕೆಆರ್‌ ಜೋಳಿಗೆಯಲ್ಲಿ 32.70 ಕೋಟಿ ರೂ. ಇದ್ದರೂ 24.75 ಕೋಟಿ ರೂ.ಗೆ ಸ್ಟಾರ್ಕ್‌ ಅವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

    ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಜಿದ್ದಾ-ಜಿದ್ದಿಯಲ್ಲಿ ಹೈದರಾಬಾದ್ ತಂಡ 20.50 ಕೋಟಿ ರೂ.ಗೆ ಬಿಡ್ ಮಾಡಿ ಪ್ಯಾಟ್‌ಕಮ್ಮಿನ್ಸ್ ಅವರನ್ನ ಖರೀದಿಸಿತು. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್‌ – ಕಿವೀಸ್‌ ಫ್ಲೇವರ್‌ ಆಯ್ತು ಸೂಪರ್‌ ಕಿಂಗ್ಸ್‌!

  • IPL 2024 Auction: ದುಬಾರಿ ಆಟಗಾರ – 20.50 ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್‌ ಕಮ್ಮಿನ್ಸ್‌

    IPL 2024 Auction: ದುಬಾರಿ ಆಟಗಾರ – 20.50 ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್‌ ಕಮ್ಮಿನ್ಸ್‌

    ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ (IPL 2024 Auction) ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಟಗಾರ ಹಾಗೂ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಬರೋಬ್ಬರಿ 20.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.

    2023ರ ಐಪಿಎಲ್‌ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ (Sam Curran) 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಇತಿಹಾಸವಾಗಿತ್ತು. ಆದರೀಗ ಏಕದಿನ ವಿಶ್ವಕಪ್‌ (ODI World Cup) ವಿಜೇತ ತಂಡದ ಸಾರಥ್ಯ ವಹಿಸಿದ್ದ ಪ್ಯಾಟ್‌ ಕಮ್ಮಿನ್ಸ್‌ ದುಬಾರಿ ಮೊತ್ತಕ್ಕೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪಾಲಾಗಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ತೀವ್ರ ಪೈಪೋಟಿಯಿಂದ ಕೂಡಿದ ಬಿಡ್‍ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಅವರನ್ನ ಖರೀದಿಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ಜಿದ್ದಾ-ಜಿದ್ದಿ ನಡೆದಿತ್ತು. ತನ್ನ ಪರ್ಸ್‌ನಲ್ಲಿ 23.25 ಕೋಟಿ ರೂ.ಗಳನ್ನಷ್ಟೇ ಉಳಿಸಿಕೊಂಡಿದ್ದ ಆರ್‌ಸಿಬಿ 20.25 ಕೋಟಿ ರೂ.ವರೆಗೂ ಬಿಡ್‌ ಮಾಡಿತ್ತು. ಅಂತಿಮವಾಗಿ ಹೈದರಾಬಾದ್‌ (Sunrisers Hyderabad) ತಂಡ 20.50 ಕೋಟಿ ರೂ.ಗೆ ಬಿಡ್‌ ಮಾಡಿ ಪ್ಯಾಟ್‌ಕಮ್ಮಿನ್ಸ್‌ ಅವರನ್ನ ತನ್ನತ್ತ ಸೆಳೆದುಕೊಂಡಿತು. ಇದನ್ನೂ ಓದಿ: ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿದ್ದ ಪ್ಯಾಟ್‌ ಕಮ್ಮಿನ್ಸ್‌ ವಿಶ್ವಕಪ್‌ ಗೆಲ್ಲಿಸುವಲ್ಲಿ ಯಶಸ್ವಿಯಾದರು. ಆಸೀಸ್‌ ತಂಡ 6ನೇ ಬಾರಿಗೆ ಟ್ರೋಫಿಗೆದ್ದ ಸಾಧನೆ ಮಾಡಲು ಕಾರಣರಾದರು. ಇದಕ್ಕೂ ಮುನ್ನ ಕಮ್ಮಿನ್ಸ್‌ ನಾಯಕತ್ವದಲ್ಲೇ ಆಸೀಸ್‌ ತಂಡ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಪಟ್ಟವನ್ನೂ ಗೆದ್ದುಕೊಂಡಿತ್ತು. ಈ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಚಾಂಪಿಯನ್‌ ಆದ ಮೊದಲ ತಂಡ ಆಸೀಸ್‌ ಎಂಬ ಹೆಗ್ಗಳಿಗೆ ಪಾತ್ರವಾಯಿತು. ಈ ಹಿನ್ನೆಲೆಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಅಧಿಕ ಮೊತ್ತಕ್ಕೆ ಬಿಡ್‌ ಮಾಡಲಾಗಿದೆ.

  • IPL 2024 Auction: ರಚಿನ್‌ ರವೀಂದ್ರ, ಮಿಚೆಲ್‌ ಸ್ಟಾರ್ಕ್‌ ಸೇರಿ 1,116 ಆಟಗಾರರು ನೋಂದಣಿ

    IPL 2024 Auction: ರಚಿನ್‌ ರವೀಂದ್ರ, ಮಿಚೆಲ್‌ ಸ್ಟಾರ್ಕ್‌ ಸೇರಿ 1,116 ಆಟಗಾರರು ನೋಂದಣಿ

    -830 ಭಾರತೀಯರು, 336 ವಿದೇಶಿ ಆಟಗಾರರು ಹರಾಜಿಗೆ ನೋಂದಣಿ

    ಅಬುಧಾಬಿ: ಮುಂಬರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ನವೆಂಬರ್ 30ರ ವರೆಗೂ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು (Auction Players Registration) ಆಟಗಾರರಿಗೆ ಅವಕಾಶವಿತ್ತು. ಶುಕ್ರವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಪಟ್ಟಿಯಲ್ಲಿ ಒಟ್ಟು 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

    2023ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅನೇಕ ಆಟಗಾರರು ಐಪಿಎಲ್‌ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ (Rachin Ravindra), ಡೇರಿಲ್‌ ಮಿಚೆಲ್‌, ವಿಶ್ವಕಪ್‌ ವಿಜೇತ ಆಸೀಸ್‌ ತಂಡದಿಂದ ವೇಗಿ ಮಿಚೆಲ್‌ ಸ್ಟಾರ್ಕ್‌ (Mitchell Starc), ಪ್ಯಾಟ್‌ ಕಮ್ಮಿನ್ಸ್‌, ಟ್ರಾವಿಸ್‌ ಹೆಡ್‌ (Travis Head) ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಚಿನ್‌ ರವಿಂದ್ರ ಅವರ ಮೂಲ ಬೆಲೆ 50 ಲಕ್ಷ ರೂ.ಗೆ ನಿಗದಿಯಾಗಿದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ

    ಆಸೀಸ್‌ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ 2015ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆರ್‌ಸಿಬಿ ತಂಡದಲ್ಲಿ ಮಿಂಚಿದ್ದರು. ಆ ನಂತರ ಐಪಿಎಲ್‌ನಿಂದ ದೂರ ಉಳಿದಿದ್ದರು. 2023ರಲ್ಲಿ‌ ಆಶಸ್‌ ಟೂರ್ನಿಯಿಂದಾಗಿ ಐಪಿಎಲ್‌ನಿಂದ ಹೊರಗುಳಿದ್ದರು. ಇನ್ನೂ ಜೋಶ್‌ ಹೇಝಲ್ವುಡ್‌, ಲೀಗ್‌ ಸುತ್ತಿನ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವಿದೆ. ಹೀಗಿದ್ದೂ ಅವರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದನ್ನೂ ಓದಿ: 2009ರಿಂದ ಸ್ಟೇಡಿಯಂ ಕರೆಂಟ್‌ ಬಿಲ್‌ ಕಟ್ಟಿಲ್ಲ – ಭಾರತ-ಆಸೀಸ್‌ 4ನೇ T20 ಪಂದ್ಯಕ್ಕೆ ಹೊಸ ತಲೆನೋವು!

    ಈ ಬಾರಿ ಐಪಿಎಲ್‌ ಮಿನಿ ಹರಾಜಿಗೆ ನೋಂದಣೆ ಮಾಡಿಕೊಂಡಿರುವ ಒಟ್ಟು 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ದೇಶದ ಆಟಗಾರರು ಸೇರಿದ್ದಾರೆ. 830 ಭಾರತೀಯರ ಪೈಕಿ ವರುಣ್ ಆರೋನ್, ಕೆ.ಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಚೇತನ್ ಸಕಾರಿಯ, ಮನ್‌ದೀಪ್ ಸಿಂಗ್, ಬರೀಂದರ್ ಸ್ರಾನ್ ಸೇರಿದಂತೆ 18 ಆಟಗಾರರಿದ್ದಾರೆ. ಇದನ್ನೂ ಓದಿ: ಮಗನ ಆಟ ಕಣ್ತುಂಬಿಕೊಳ್ಳಲು ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ರಾಹುಲ್ ದ್ರಾವಿಡ್

  • IPL 2024 Retention: 10 ತಂಡಗಳಲ್ಲಿ 173 ಜನ ಸೇಫ್‌ – 50 ಆಟಗಾರರಿಗೆ ಗೇಟ್‌ಪಾಸ್‌ – ಇಲ್ಲಿದೆ ಡಿಟೇಲ್ಸ್‌

    IPL 2024 Retention: 10 ತಂಡಗಳಲ್ಲಿ 173 ಜನ ಸೇಫ್‌ – 50 ಆಟಗಾರರಿಗೆ ಗೇಟ್‌ಪಾಸ್‌ – ಇಲ್ಲಿದೆ ಡಿಟೇಲ್ಸ್‌

    ಮುಂಬೈ: ಐಪಿಎಲ್‌  ಆಟಗಾರರ ಮಿನಿ ಹರಾಜು (IPL 2024 Auction) ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮುನ್ನವೇ ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಒಟ್ಟು 10 ತಂಡಗಳಿಂದ 173 ಆಟಗಾರರು ರಿಟೇನ್‌ ಆಗಿದ್ದಾರೆ. 50 ಆಟಗಾರರಿಗೆ ಗೇಟ್‌ ಪಾಸ್‌ ನೀಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

    RCB ಉಳಿಸಿಕೊಂಡಿರುವ ಆಟಗಾರರು:
    ಆಕಾಶ್ ದೀಪ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (T- ಟ್ರೇಡ್‌ ವಿಂಡೋ ನಿಯಮ- ಅಂದ್ರೆ ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳುವುದು), ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ರಜತ್ ಪಾಟಿದಾರ್, ರೀಸ್ ಟೋಪ್ಲಿ, ಸುಯಶ್ ಪ್ರಭುದೇಸಾಯಿ ಕೊಹ್ಲಿ, ವೈಶಾಕ್ ವಿಜಯ್ ಕುಮಾರ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ (T).

    CSK ಉಳಿಸಿಕೊಂಡ ಆಟಗಾರರು:
    ಅಜಯ್ ಮಂಡಲ್, ಅಜಿಂಕ್ಯ ರಹಾನೆ, ದೀಪಕ್ ಚಾಹರ್, ಡೆವೊನ್ ಕಾನ್ವೇ, ಮಹೀಶ್‌ ತೀಕ್ಷಣ, ಮಥೀಶ ಪತಿರಣ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಎಂ.ಎಸ್ ಧೋನಿ, ಮುಖೇಶ್ ಚೌಧರಿ, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ರಾಜ್ ಗಡೇಕ್, ರುದ್ತುರಾಜ್ ಗಡೇಕ್ಜಾ , ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ.

    DC ಉಳಿಸಿಕೊಂಡ ಆಟಗಾರರು:
    ಅಭಿಷೇಕ್ ಪೊರೆಲ್, ಅನ್ರಿಚ್ ನೋರ್ಟ್ಜೆ, ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ಲಲಿತ್ ಯಾದವ್, ಲುಂಗಿಸಾನಿ ಎನ್‌ಗಿಡಿ, ಮಿಚೆಲ್ ಮಾರ್ಷ್, ಮುಖೇಶ್ ಕುಮಾರ್, ಪ್ರವೀಣ್ ದುಬೆ, ಪೃಥ್ವಿ ಶಾ, ರಿಷಬ್‌ ಪಂತ್, ಸೈಯದ್ ಖಲೀಲ್ ಅಹ್ಮದ್, ವಿಕಿ ಡಿ ಓಟ್ಸ್‌ವಲ್‌, ಯಶ್‌ ಧುಲ್‌

    GT ಉಳಿಸಿಕೊಂಡ ಆಟಗಾರರು:
    ಅಭಿನವ್ ಸದಾರಂಗನಿ, ಬಿ.ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ಡೇವಿಡ್ ಮಿಲ್ಲರ್, ಜಯಂತ್ ಯಾದವ್, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಆರ್. ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಶುಭಮನ್ ಗಿಲ್, ಶಂಕರ್, ವೃದ್ಧಿಮಾನ್ ಸಾಹಾ

    KKR ಉಳಿಸಿಕೊಂಡ ಆಟಗಾರರು:
    ಆಂಡ್ರೆ ರಸೆಲ್, ಅನುಕೂಲ್ ರಾಯ್, ಹರ್ಷಿತ್ ರಾಣಾ, ಜೇಸನ್ ರಾಯ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಸುನಿಲ್ ನರೈನ್, ಸುಯಶ್ ಶರ್ಮಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್

    LSG ಉಳಿಸಿಕೊಂಡ ಆಟಗಾರರು:
    ಅಮಿತ್ ಮಿಶ್ರಾ, ಆಯುಷ್ ಬದೋನಿ, ದೀಪಕ್ ಹೂಡಾ, ದೇವದತ್ ಪಡಿಕ್ಕಲ್ (T), ಕೆ. ಗೌತಮ್, ಕೆ.ಎಲ್ ರಾಹುಲ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋಯ್ನಿಸ್‌, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ನಿಕೋಲಸ್ ಪೂರನ್, ಪ್ರೇರಕ್ ಮಂಕದ್ ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ಯಶ್ ಠಾಕೂರ್, ಯುದ್ಧವೀರ್ ಚರಕ್

    MI ಉಳಿಸಿಕೊಂಡ ಆಟಗಾರರು:
    ಆಕಾಶ್ ಮಧ್ವಲ್, ಅರ್ಜುನ್ ತೆಂಡೂಲ್ಕರ್, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ಜೇಸನ್ ಬೆಹ್ರೆನ್‌ಡಾರ್ಫ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ ಸಿಂಗ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಪಿಯೂಷ್ ಚಾವ್ಲಾ, ರೋಹಿತ್ ಶರ್ಮಾ, ರೊಮಾರಿಯೋ ಶೆಫರ್ಡ್ (T), ಶಮ್ಸ್ ಮುಲಾನಿ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ವಿಷ್ಣು ವಿನೋದ್, ಹಾರ್ದಿಕ್ ಪಾಂಡ್ಯ (T)

    PBKS ಉಳಿಸಿಕೊಂಡ ಆಟಗಾರರು:
    ಅರ್ಷ್‌ದೀಪ್‌ ಸಿಂಗ್‌, ಅಥರ್ವ ಟೈಡೆ, ಹರ್ಪ್ರೀತ್‌ ಬ್ರಾರ್‌, ಹರ್ಪ್ರೀತ್‌ ಭಾಟಿಯಾ, ಜಿತೇಶ್ ಶರ್ಮಾ, ಜಾನಿ ಬೈರ್‌ಸ್ಟೋವ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್, ನಾಥನ್ ಎಲ್ಲಿಸ್, ಪ್ರಭ್‌ಸಿಮ್ರಾನ್ ಸಿಂಗ್, ರಾಹುಲ್ ಚಾಹರ್, ರಿಷಿ ಧವನ್, ಸ್ಯಾಮ್ ಕರ್ರನ್‌, ಶಿಖರ್ ಧವನ್, ಶಿವಂ ಸಿಂಗ್, ವಿಕಂದರ್ ರಜಾ, ಸಿಕಂದರ್ ರಜಾರ್

    RR ಉಳಿಸಿಕೊಂಡ ಆಟಗಾರರು:
    ಆಡಂ ಝಂಪಾ, ಅವೇಶ್ ಖಾನ್ (T), ಧ್ರುವ್ ಜುರೆಲ್, ಡೊನೊವನ್ ಫೆರೇರಾ, ಜೋಸ್ ಬಟ್ಲರ್, ಕುಲದೀಪ್ ಸೇನ್, ಕುನಾಲ್ ರಾಥೋಡ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಆರ್. ಅಶ್ವಿನ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್‌, ಟ್ರೆಂಟ್ ಬೌಲ್ಟ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ರ ಚಾಹಲ್‌

    SRH ಉಳಿಸಿಕೊಂಡ ಆಟಗಾರರು:
    ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮರ್ಕ್ರಾಮ್, ಅನ್ಮೋಲ್ಪ್ರೀತ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಗ್ಲೆನ್ ಫಿಲಿಪ್ಸ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಮಯಾಂಕ್ ಅಗರ್ವಾಲ್, ಮಯಾಂಕ್ ಮಾರ್ಕಾಂಡೆ, ನಿತೀಶ್ ಕುಮಾರ್ ರೆಡ್ಡಿ, ರಾಹುಲ್ ತ್ರಿಪಾಠಿ, ಸನ್ವಿರ್ ಸಿಂಗ್, ಶಾಬಾಜ್‌ ಅಹಮದ್ (T), ಟಿ. ನಟರಾಜನ್, ಉಮ್ರಾನ್ ಮಲಿಕ್, ಉಪೇಂದ್ರ ಸಿಂಗ್ ಯಾದವ್, ವಾಷಿಂಗ್ಟನ್ ಸುಂದರ್

  • IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅಧಿಕೃತವಾಗಿ ಮುಂಬೈ ಇಂಡಿಯನ್ಸ್‌ (Mumbai Indians) ಬಳಗ ಸೇರಿದ್ದಾರೆ. ನಾಯಕನಾಗಿ 2 ವರ್ಷಗಳ ಕಾಲ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ತಂಡ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು.

    ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ (GujaratTaitans) ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದ್ರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟಾನ್ಸ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ 15 ಕೋಟಿ ರೂ. ನೀಡಲಿದೆ ಎಂದು ವರದಿಯಾಗಿದೆ.

    ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್‌ (Shubhman Gill) ತಂಡದ ಕ್ಯಾಪ್ಟನ್‌ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ ರೂ. ಮಾತ್ರವೇ ಹೊಂದಿತ್ತು. ಈಗ ಹಾರ್ದಿಕ್‌ ಪಾಂಡ್ಯ ಖರೀದಿ ಸಲುವಾಗಿ ತನ್ನ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮರೂನ್‌ ಅವರನ್ನು ಆರ್‌ಸಿಬಿಗೆ (RCB) ಬಿಟ್ಟುಕೊಡುವ ಮೂಲಕ ಪರ್ಸ್‌ ಮೊತ್ತ ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಈ ಸಲುವಾಗಿ ಉಳಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಲು ನವೆಂಬರ್‌ 26 ಅಂತಿಮ ದಿನವಾಗಿತ್ತು. ಆದರೂ, ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಇರುವ ಟ್ರೇಡಿಂಗ್‌ ವಿಂಡೋ ಡಿಸೆಂಬರ್‌ 12ರ ವರೆಗೆ ತೆರೆದಿರಲಿದೆ. ಹೀಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸುವ ಡೀಲ್‌ ಮುಗಿಸಲಾಗಿದೆ.

    ಐಪಿಎಲ್‌ 2014 ಟೂರ್ನಿಯಿಂದ 2021ರ ಆವೃತ್ತಿವರಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿ 5 ಬಾರಿ ಟ್ರೋಫಿ ಗೆದ್ದಿದ್ದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬಳಿಕ ಹೊಸ ಫ್ರಾಂಚೈಸಿ ಗುಜರಾತ್‌ ಟೈಟಾನ್ಸ್‌ ಸೇರಿದ್ದರು. ಐಪಿಎಲ್ 2022 ಟೂರ್ನಿಯಲ್ಲಿ ಮೊದಲ ಪ್ರಯತ್ನದಲ್ಲೇ ಟೈಟಾನ್ಸ್‌ಗೆ ಟ್ರೋಫಿ ಗೆದ್ದುಕೊಟ್ಟರು. ಐಪಿಎಲ್ 2023 ಟೂರ್ನಿಯಲ್ಲೂ ಫೈನಲ್‌ಗೆ ಮುನ್ನಡೆಸಿದರಾದರೂ, ಸಿಎಸ್‌ಕೆ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

    ಹಾರ್ದಿಕ್ ಪಾಂಡ್ಯ ಈ ಮೂಲಕ ಐಪಿಎಲ್‌ ಟ್ರೇಡಿಂಗ್ ವಿಂಡೋ ಮೂಲಕ ಬೇರೆ ತಂಡ ಸೇರಿದ 3ನೇ ಕ್ಯಾಪ್ಟನ್‌ ಆಗಿದ್ದಾರೆ. ಐಪಿಎಲ್ 2020 ಟೂರ್ನಿ ವೇಳೆ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಬೇರೆ ತಂಡಗಳನ್ನು ಸೇರಿದ ಕ್ಯಾಪ್ಟನ್‌ಗಳಾಗಿದ್ದರು.

    ಏನಿದು ಟ್ರೇಡ್‌ ವಿಂಡೋ ನಿಯಮ?
    ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದು ವ್ಯವಹಾರಗಳಲ್ಲಿ ಆಟಗಾರರನ್ನು ಖರೀದಿಸಬಹುದು. ಈ ಸಂಪೂರ್ಣ ವಿಷಯದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅಂತಿಮ ಅಧಿಕಾರ ನೀಡಿದೆ. ಹೆಚ್ಚಿನ ಫ್ರಾಂಚೈಸಿಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ. ಈ ಸಂದರ್ಭದಲ್ಲಿ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಆಟಗಾರನ ವ್ಯಾಪಾರ ಅಥವಾ ವರ್ಗಾವಣೆಯ ಮೊದಲು ಆಟಗಾರನ ಒಪ್ಪಿಗೆ ಕೂಡ ಅಗತ್ಯ. ಆಟಗಾರನು ನಿರಾಕರಿಸಿದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.

  • IPL 2024 Auction: ಮಹಿ ಮತ್ತೆ ಕಣಕ್ಕಿಳಿಯೋದು ಫಿಕ್ಸ್‌ – ಅಧಿಕೃತ ಪಟ್ಟಿ ರಿಲೀಸ್‌

    IPL 2024 Auction: ಮಹಿ ಮತ್ತೆ ಕಣಕ್ಕಿಳಿಯೋದು ಫಿಕ್ಸ್‌ – ಅಧಿಕೃತ ಪಟ್ಟಿ ರಿಲೀಸ್‌

    ಚೆನ್ನೈ: 2024ರ ಐಪಿಎಲ್‌ ಟೂರ್ನಿಯಲ್ಲೂ ಲೆಜೆಂಡ್‌ ಖ್ಯಾತಿಯ ಎಂ.ಎಸ್‌ ಧೋನಿ (MS Dhoni) ಕಣಕ್ಕಿಳಿಯೋದು ಫಿಕ್ಸ್‌ ಆಗಿದೆ. ಮಹಿ ಮುಂದಿನ ಐಪಿಎಲ್‌ನಲ್ಲಿ (IPL 2024) ಪಾಲ್ಗೊಳ್ಳುವುದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಅಧಿಕೃತಗೊಳಿಸಿದೆ.

    ಭಾನುವಾರ ಜಿಯೋಸಿನಿಮಾದಲ್ಲಿ (Jio Cinema) ನಡೆದ ಕಾರ್ಯಕ್ರಮದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರಿಟೇನ್‌, ರಿಲೀಸ್‌ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪೈಕಿ ಅಗ್ರ ಕ್ರಮಾಂಕದಲ್ಲಿ ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಶಿವಂ ದುಬೆ, ಮಧ್ಯಮ ಕ್ರಮಾಂಕದಲ್ಲಿ ಮೊಯಿನ್‌ ಅಲಿ, ರವೀಂದ್ರ ಜಡೇಜ, ಎಂ.ಎಸ್‌ ಧೋನಿ, ದೀಪಕ್‌ ಚಹಾರ್‌, ಕೆಳ ಕ್ರಮಾಂಕದಲ್ಲಿ ಮಹೀಶ್‌ ತೀಕ್ಷಣ, ಮತೀಶ ಪಥಿರಣ, ಮುಕೇಶ್‌ ವರುಣ್‌ ತಂಡಕ್ಕೆ ರಿಟೇನ್‌ ಆಗಿದ್ದಾರೆ.

    ಸಿಎಸ್‌ಕೆ ಬಳಿ ಇನ್ನೆಷ್ಟು ದುಡ್ಡಿದೆ: ಒಟ್ಟು 8 ಆಟಗಾರರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಗೇಟ್‌ಪಾಸ್‌ ಕೊಟ್ಟಿದೆ. ಇದರಿಂದ ಫ್ರಾಂಚೈಸಿ ಪರ್ಸ್‌ನಲ್ಲಿ (ಉಳಿತಾಯ ಖಾತೆ) 32.2 ಕೋಟಿ ಉಳಿದಿದೆ. ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಇನ್ನಷ್ಟು ಆಟಗಾರರನ್ನು ಬಿಕರಿ ಮಾಡುವ ಉತ್ಸಾಹ ಹೊಂದಿದೆ. ಇದನ್ನೂ ಓದಿ: IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    16ನೇ ಆವೃತ್ತಿಯ ಐಪಿಎಲ್‌ (IPL 2023) ಫೈನಲ್‌ ಪಂದ್ಯದಲ್ಲಿ ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 5ನೇ ಬಾರಿಗೆ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿತು. ಆರಂಭದಿಂದಲೂ ಸಹ ಸಿಎಸ್​ಕೆ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ 2023ರ ಐಪಿಎಲ್‌ ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದು, ಮುಂದಿನ ಐಪಿಎಲ್‌ನಲ್ಲೂ ಆಡುವ ಸುಳಿವು ಕೊಟ್ಟಿದ್ದರು.

    ಅಂದು ಮಹಿ ಹೇಳಿದ್ದೇನು?
    ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ್ದ ಮಹಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ. ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದರು.

    2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 215 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌ (DSL) ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಗಳ ಬೃಹತ್‌ ಮೊತ್ತದ ಟಾರ್ಗೆಟ್‌ ಪಡೆಯಿತು. ಆದರೆ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದಿಂದ ನಿಗದಿತ ಓವರ್‌ಗಳಲ್ಲಿ ರನ್‌ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು. ಇದನ್ನೂ ಓದಿ: IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್‌ ಪಾಸ್‌ – ರಿಲೀಸ್‌ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ

  • IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್‌ ಪಾಸ್‌ – ರಿಲೀಸ್‌ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ

    IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್‌ ಪಾಸ್‌ – ರಿಲೀಸ್‌ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ

    ಮುಂಬೈ: ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ಐಪಿಎಲ್‌ (IPL 2024) ಕ್ರಿಕೆಟ್‌ ಹಬ್ಬದ ಸದ್ದು ಜೋರಾಗಿದೆ. ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಉಳಿಸಿಕೊಳ್ಳಲಿರುವ ಮತ್ತು ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ (BCCI) ಸಲ್ಲಿಸಬೇಕಿದೆ. ಅಂತಿಮ ಪಟ್ಟಿ ಸಲ್ಲಿಸಲು ನವೆಂಬರ್‌ 26 ಕೊನೆಯ ದಿನವಾಗಿದೆ.

    ತಂಡಗಳ ನಡುವೆ ಆಟಗಾರರ ಬದಲಾವಣೆ ಮತ್ತು ರಿಟೇನ್​ (IPL Retention) ಮಾಡಿಕೊಳ್ಳುವ ಕುರಿತು ಆಟಗಾರರೊಂದಿಗೂ ಮಾತುಕತೆಗಳು ಭರದಿಂದ ಸಾಗಿದ್ದು, ಭಾನುವಾರ (ನ.26) ಸಂಜೆ 4 ಗಂಟೆಗೆ ಮಹತ್ವದ ಸಭೆ ನಡೆಯಲಿದೆ. ಜಿಯೋಸಿನಿಮಾದಲ್ಲಿ (JioCinema) ಸಭೆ ನೇರಪ್ರಸಾರವಾಗಲಿದೆ. ಯಾವ ತಂಡೆದಲ್ಲಿ ರಿಟೇನ್‌ ಆಟಗಾರರು ಉಳಿಯುತ್ತಾರೆ, ಬದಲಾವಣೆ ಆಟಗಾರರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

    ಗೇಟ್‌ ಪಾಸ್‌ ಪಡೆಯುವ ಸಂಭಾವ್ಯ ಆಟಗಾರರ ಪಟ್ಟಿ:

    ಆರ್​ಸಿಬಿ: ದಿನೇಶ್​ ಕಾರ್ತಿಕ್​, ಫಿನ್​ ಅಲೆನ್​, ರೀಸ್​ ಟಾಪ್ಲೆ, ವಿಲ್​ ಜಾಕ್ಸ್​.
    ಸಿಎಸ್​ಕೆ: ಬೆನ್​ ಸ್ಟೋಕ್ಸ್​, ಅಂಬಟಿ ರಾಯುಡು (ನಿವೃತ್ತಿ), ಡ್ವೇನ್​ ಪ್ರಿಟೋರಿಯಸ್​, ಸಿಸಾಂಡ, ಕೈಲ್​ ಜೇಮಿಸನ್​.
    ಡೆಲ್ಲಿ ಕ್ಯಾಪಿಟಲ್ಸ್​: ಮನೀಷ್​ ಪಾಂಡೆ, ಪೃಥ್ವಿ ಷಾ, ಫಿಲ್​ ಸಾಲ್ಟ್​, ರಿಲೀ ರೋಸೌ.
    ರಾಜಸ್ಥಾನ ರಾಯಲ್ಸ್​: ಜೇಸನ್​ ಹೋಲ್ಡರ್​, ಜೋ ರೂಟ್​, ಕೆಸಿ ಕಾರ್ಯಪ್ಪ, ಎಂ. ಅಶ್ವಿನ್​.
    ಲಖನೌ ಸೂಪರ್​ಜೈಂಟ್ಸ್​: ಮಾರ್ಕಸ್​ ಸ್ಟೋಯಿನಿಸ್​, ಇವಿನ್​ ಲೆವಿಸ್​, ಕೆ. ಗೌತಮ್​.
    ಸನ್​ರೈಸರ್ಸ್​: ಹ್ಯಾರಿ ಬ್ರೂಕ್​, ಅಕೀಲ್​ ಹೊಸೈನ್​, ಆದಿಲ್​ ರಶೀದ್​.
    ಮುಂಬೈ ಇಂಡಿಯನ್ಸ್​: ಜೈದೇವ್​ ಉನಾದ್ಕತ್​, ರಿಲೀ ಮೆರಿಡಿತ್​, ಪೀಯುಷ್​ ಚಾವ್ಲಾ.
    ಗುಜರಾತ್​ ಟೈಟಾನ್ಸ್​: ಯಶ್​ ದಯಾಳ್​, ದಸುನ್​ ಶನಕ, ಒಡೆನ್​ ಸ್ಮಿತ್​, ಪ್ರದಿಪ್​ ಸಂಗ್ವಾನ್​.
    ಕೆಕೆಆರ್​: ಲಾಕಿ ಫಗ್ಯುರ್ಸನ್​, ಟಿಮ್​ ಸೌಥಿ, ಲಿಟನ್​ ದಾಸ್​, ಡೇವಿಡ್​ ವೈಸ್​, ಎನ್​. ಜಗದೀಶನ್​.
    ಪಂಜಾಬ್​ ಕಿಂಗ್ಸ್​: ಸ್ಯಾಮ್​ ಕರನ್​, ಮ್ಯಾಥ್ಯೂ ಶಾರ್ಟ್​, ಭಾನುಕಾ ರಾಜಪಕ್ಷ, ರಿಷಿ ಧವನ್​.

  • IPL 2024: ಮಿನಿ ಹರಾಜಿಗೆ 590 ಮಂದಿ ಶಾರ್ಟ್‌ಲಿಸ್ಟ್‌ – ಮಹತ್ವದ ಬದಲಾವಣೆಗೆ ಮುಂದಾದ RCB

    IPL 2024: ಮಿನಿ ಹರಾಜಿಗೆ 590 ಮಂದಿ ಶಾರ್ಟ್‌ಲಿಸ್ಟ್‌ – ಮಹತ್ವದ ಬದಲಾವಣೆಗೆ ಮುಂದಾದ RCB

    ಮುಂಬೈ: ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೆ (IPL Auction) ಒಟ್ಟು 590 ಮಂದಿ ಶಾರ್ಟ್‌ಲಿಸ್ಟ್‌ ಆಗಿದ್ದಾರೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಿಡಗಡೆಗೊಳಿಸಬಲ್ಲ ಹಾಗೂ ಉಳಿಸಿಕೊಳ್ಳಬಲ್ಲ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗುತ್ತಿವೆ. ಇದರೊಂದಿಗೆ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್‌ ಕೂಡ ನಡೆಯುತ್ತಿದೆ.

    ವಿಶೇಷವೆಂದರೆ ಈ ಬಾರಿ ಮಿನಿ ಹರಾಜಿಗೆ ಶಾರ್ಟ್‌ಲಿಸ್ಟ್‌ ಆದವರ ಪೈಕಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) 10 ಕ್ರಿಕೆಟಿಗರು (Cricketers) ಸೇರಿದ್ದಾರೆ. ತಕ್ಕಮಟ್ಟಿಗೆ ಆಡುವ ಮುಜ್ತಾಬಾ ಯೂಸುಫ್, ರಾಸಿಖ್ ಸಲಾಮ್, ಪರ್ವೇಜ್ ರಸೂಲ್, ಕಮ್ರಾನ್ ಇಕ್ಬಾಲ್, ಫಾಜಿಲ್ ರಶೀದ್, ಹೆನಾನ್ ಮಲಿಕ್, ಅಬಿದ್ ಮುಷ್ತಾಕ್, ನಾಸಿರ್ ಲೋನ್, ಔಕಿಬ್ ನಬಿ ಮತ್ತು ವಿವ್ರಾಂತ್ ಶರ್ಮಾ 10 ಆಟಗಾರರ ಬಗ್ಗೆ ಪ್ರಮುಖ ಫ್ರಾಂಚೈಸಿಗಳು ಆಸಕ್ತಿ ತೋರಿವೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಮುಜ್ತಾಬಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿ ನೆಟ್ ಬೌಲರ್ ಆಗಿದ್ದರು, ಈ ಬಾರಿ ಅವರು ತಂಡಗಳಲ್ಲಿ ಒಂದರಲ್ಲಿ ಶಾಶ್ವತ ಸ್ಥಾನ ಪಡೆಯುವ ಉತ್ತಮ ಅವಕಾಶವಿದೆ. ಇನ್ನೂ ಹಿಂದಿನ ಮೂರು ಹರಾಜಿನಲ್ಲಿ ಮಾರಾಟವಾಗದ ನಂತರವೂ ಪರ್ವೇಜ್‌ ರಸೂಲ್‌ ಮತ್ತೊಮ್ಮೆ ತಮ್ಮ ಹೆಸದರನ್ನು 50 ಲಕ್ಷ ರೂ. ಮೂಲಬೆಲೆಗೆ ಹರಾಜಿಗೆ ಇಟ್ಟಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ಮಹತ್ವದ ಬದಲಾವಣೆಗೆ ಮುಂದಾದ RCB: 16 ಆವೃತ್ತಿ ಕಳೆದರೂ ಒಂದು ಟೂರ್ನಿಯಲ್ಲೂ ಟ್ರೋಫಿ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಈ ಬಾರಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ಎದುರು ನೋಡುತ್ತಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪರ ಆಡಿದ್ದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಅವರನ್ನ ಹರ್ಷಲ್‌ ಪಟೇಲ್‌ ಅವರ ಸ್ಥಾನಕ್ಕೆ ಆಯ್ಕೆ ಮಾಡಲು ಬೆಂಗಳೂರು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಹರ್ಷಲ್ ಪಟೇಲ್‌ 2021ರ ಐಪಿಎಲ್‌ ಟೂರ್ನಿಗಳಿಂದ ಆರ್‌ಸಿಬಿ ತಂಡಕ್ಕೆ ಪ್ರಮುಖ ಕೀ ಆಟಗಾರರಾಗಿದ್ದಾರೆ. 2021ರ ಆವೃತ್ತಿಯಲ್ಲಿ ಹರ್ಷಲ್ ಪಟೇಲ್‌ ಅವರು 15 ಪಂದ್ಯಗಳಿಂದ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪರ್ಪಲ್‌ ಕ್ಯಾಪ್‌ ಗೆದ್ದಿದ್ದರು. ಆದರೆ, ಕಳೆದ 2023ರ ಐಪಿಎಲ್‌ ಟೂರ್ನಿಯಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್‌ಗಳನ್ನಷ್ಟೇ ಪಡೆದಿದ್ದರು. ಮತ್ತೊಂದೆಡೆ ಶಾರ್ದುಲ್‌ ಠಾಕೂರ್‌ ಅವರು 2023ರ ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕೆಲ ಪಂದ್ಯಗಳನ್ನು ಹೊರತುಪಡಿಸಿ ಶಾರ್ದುಲ್‌ ಠಾಕೂರ್‌ ಅವರು ಬಹುತೇಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಅಂದ ಹಾಗೆ ಮಿನಿ ಹರಾಜಿಗೂ ಮುನ್ನ ಬೆಂಗಳೂರು ಹಾಗೂ ಕೋಲ್ಕತಾ ಫ್ರಾಂಚೈಸಿಗಳು ಹರ್ಷಲ್ ಪಟೇಲ್‌ ಮತ್ತು ಶಾರ್ದುಲ್‌ ಠಾಕೂರ್‌ ಅವರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

    ಶಾರ್ದುಲ್ ಠಾಕೂರ್‌ ಮತ್ತು ಹರ್ಷಲ್‌ ಪಟೇಲ್‌ ಇಬ್ಬರನ್ನೂ ಈ ಎರಡೂ ತಂಡಗಳು 10.75 ಕೋಟಿ ರೂ. ಗಳಿಗೆ ಖರೀದಿಸಿದ್ದವು ಎಂಬುದು ಆಸಕ್ತದಾಯಕ ಸಂಗತಿಯಾಗಿದೆ. ಶಾರ್ದುಲ್ ಠಾಕೂರ್ ಅವರು ಭಾರತ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದ್ದರಿಂದ ಬೌಲಿಂಗ್‌ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು ಎಂಬ ಕಾರಣದಿಂದ ಶಾರ್ದೂಲ್‌ ಠಾಕೂರ್‌ ಅವರನ್ನ ಆರ್‌ಸಿಬಿ ತನ್ನ ತಂಡಕ್ಕೆ ಕರೆತರಲು ಆಸಕ್ತಿ ತೋರಿದೆ.

  • WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಮುಂಬೈ: ಐಪಿಎಲ್ ಹರಾಜು (WPL Auction 2023) ಪ್ರಕ್ರಿಯೆಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮಂದಾನ (Smriti Mandhana) ದುಬಾರಿ ಬೆಲೆಗೆ ಆರ್‌ಸಿಬಿ (RCB) ತಂಡದ ಪಾಲಾಗಿದ್ದಾರೆ.

    3.40 ಕೋಟಿ ರೂ. ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಅವರನ್ನು ಖರೀದಿಸಿದೆ. ಈ ಮೂಲಕ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಲು ದುಬಾರಿ ಬೆಲೆ ವಿನಿಯೋಗಿಸಿದೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಮುಂಬೈನಲ್ಲಿ (Mumbai) ನಡೆದ ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮಂದಾನ ದುಬಾರಿ ಮೊತ್ತಕ್ಕೆ ಹರಾಜಾಗಿದ್ದು, ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.80 ಕೋಟಿ ರೂ.ಗಳಿಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯ ಸ್ಮೃತಿ ಮಂದಾನ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಸಾಕಷ್ಟು ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್‌ಸಿಬಿ 3.4 ಕೋಟಿ ರೂ. ಗಳಿಗೆ ಮಂದಾನ ಅವರನ್ನ ಖರೀದಿಸುವಲ್ಲಿ ಯಶಸ್ವಿಯಾಯಿತು.

    ಸ್ಮೃತಿ ಮಂದಾನ ಆರ್‌ಸಿಬಿ ಸೇರ್ಪಡೆಯಾಗುತ್ತಿದ್ದಂತೆ `ನಮಸ್ಕಾರ ಬೆಂಗಳೂರು’ ಎಂದು ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

    ಇನ್ನುಳಿದಂತೆ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಆಸ್ಟೇಲಿಯಾ ತಂಡದ ಆಶ್ಲೀಗ್ ಗಾರ್ಡ್ನರ್ (Ashleigh Gardner) 3.2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದು, 2ನೇ ದುಬಾರಿ ಆಟಗಾರ್ತಿಯಾಗಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 1.8 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರೆ, ದೀಪ್ತಿ ಶರ್ಮಾ (Deepti Sharma) 2.6 ಕೋಟಿಗೆ ಯುಪಿ ವಾರಿಯರ್ಸ್, ಶೆಫಾಲಿ ವರ್ಮಾ 1.90 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.

    IPL

    ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್(50 ಲಕ್ಷ ರೂ.), ಆಸ್ಟ್ರೇಲಿಯಾದ ಎಲ್ಲಿಸ್ ಪರ‍್ರೆ (1.7 ಕೋಟಿ ರೂ.) ಹಾಗೂ ರೇಣುಕಾ ಸಿಂಗ್ (1.5 ಕೋಟಿ ರೂ.) ಅವರನ್ನು ಆರ್‌ಸಿಬಿ ಖರೀದಿಸಿದೆ.

    ಸೋಫಿ ಎಕ್ಲೆಸ್ಟೋನ್ 1.8 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಖರೀದಿಸಿದರೆ, ಇಂಗ್ಲೆಂಡ್‌ನ ನಟಾಲಿಯಾ ಸ್ಕಿವರ್‌ಗೆ ಮುಂಬೈ 3.2 ಕೋಟಿ ರೂ. ನೀಡಿದೆ. ತಾಲಿಯಾ ಮೆಕ್‌ಗ್ರಾತ್ ಅವರಿಗೆ ಯುಪಿ ವಾರಿಯರ್ಸ್ 1.4 ಕೋಟಿ ರೂ. ನೀಡಿದರೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಬೆತ್ ಮೂನಿ ಅವರನ್ನು 2 ಕೋಟಿ ರೂ.ಗೆ ಬಿಡ್ ಮಾಡಿ ಗೆದ್ದಿದೆ.

    ಶಬ್ನಿಮ್ ಇಸ್ಮಾಯಿಲ್ ಅವರಿಗೆ ಯುಪಿ ವಾರಿಯರ್ಸ್ 1 ಕೋಟಿ ರೂ. ನೀಡಿದರೆ, ಮುಂಬೈ ಇಂಡಿಯನ್ಸ್ ಅಮೆಲಿಯಾ ಕೆರ್ ಅವರನ್ನು 1 ಕೋಟಿ ರೂ.ಗೆ ಬಿಡ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k