Tag: ಐಪಿಎಲ್ ಫೈನಲ್

  • Bengaluru | ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ ಚಾಕು ಇರಿತ

    Bengaluru | ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ ಚಾಕು ಇರಿತ

    ಬೆಂಗಳೂರು: ಐಪಿಎಲ್ ಫೈನಲ್‌ನಲ್ಲಿ (IPL Final) ಆರ್‌ಸಿಬಿ ಕಪ್ ತನ್ನದಾಗಿಸಿಕೊಂಡ ಹಿನ್ನೆಲೆ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ (RCB Fan) ದುಷ್ಕರ್ಮಿಗಳು ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ (Jalahalli Cross) ಬಳಿ ನಡೆದಿದೆ.

    ಆರ್‌ಸಿಬಿ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಜಯಭೇರಿಯಾದ ಹಿನ್ನೆಲೆ ಯುವಕ ಸಂಭ್ರಮಾಚರಣೆ ಮಾಡುತ್ತಾ ಬಾರ್‌ಗೆ ತೆರಳುವ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಯುವಕನ ಕುತ್ತಿಗೆಯ ಭಾಗಕ್ಕೆ ಇರಿದು ಎಸ್ಕೇಪ್ ಆಗಿದ್ದಾರೆ. ತಡರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್

    ಅದೃಷ್ಟವಶಾತ್ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಪ್ರತಿರೋಧ ಬಳಿಕ ದುಷ್ಕರ್ಮಿಗಳ ಗ್ಯಾಂಗ್ ಘಟನಾ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳೀಯರ ಸಹಾಯದಿಂದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: IPL 2025 – ಫೈನಲ್ ಪಂದ್ಯದ ‘ಲಕ್ಕಿ ಕ್ರಿಕೆಟರ್’ ಹೇಜಲ್‌ವುಡ್

  • Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    ಅಹಮದಾಬಾದ್‌: 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ (IPL Final) ಪಂದ್ಯ ಆರಂಭಗೊಂಡಿದೆ. ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಆರ್‌ಸಿಬಿಗೆ ಬಿಟ್ಟುಕೊಟ್ಟಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ಭಾರತ ಸೇನೆಗೆ ವಿಶೇಷ ಗೌರವ ಸಲ್ಲಿಸಲಾಯಿತು. ಖ್ಯಾತ ಹಿನ್ನೆಲೆ ಗಾಯಕ ಶಂಕರ್‌ ಮಹಾದೇವನ್‌ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿದರು. ಅಲ್ಲದೇ ವಾಯುಪಡೆಯ ಅದ್ಭುತ ಏರ್‌ಶೋ ಕೂಡ ಗಮನ ಸೆಳೆಯಿತು. ಇಂತಹ ಅದ್ಭುತ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ….

  • ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ (IPL 2025) ಕೊನೇ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs PBKS) ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ ತಂಡಕ್ಕೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

    ಆದ್ರೆ ಗೆಲ್ಲುವ ಫೇವರೆಟ್‌ ಆಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಅಭಿಮಾನಿಗಳು (RCB Fans) ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಕಿರುತೆರೆಯ ಖ್ಯಾತ ನಟಿ ರಜಿನಿ ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಯೂ ಆಗಿರುವ ʻಅಮೃತ ವರ್ಷಿಣಿʼ ಧಾರಾವಾಹಿ ಖ್ಯಾತಿಯ ನಟಿ ರಜನಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲ್ಲಲೆಂದು ರಕ್ತದಾನ ಮಾಡಿದ್ದಾರೆ. ಆ ಫೋಟೋವನ್ನ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ʻಆರ್‌ಸಿಬಿ ವಿನ್ ಆಗ್ಲಿ ಅಂತ ಬ್ಲಡ್ ಕೊಟ್ಟಿದ್ದೀವಿ, ಈ ಸಲ ಕಪ್ ನಮ್ದೇ.. ʻಜೈ ಆರ್‌ಸಿಬಿʼ ಅಂತ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಇಂದು ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ಆರ್‌ಸಿಬಿ ಗೆಲ್ಲುವ ಫೇವರೆಟ್
    ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ಮಳೆ ಸಾಧ್ಯತೆ ಇದೆಯೇ?
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.

  • ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಅಹಮದಾಬಾದ್: ಐಪಿಎಲ್ ಫೈನಲ್‌ಗೆ (IPL  Final) ಕೆಲವೇ ಗಂಟೆಗಳು ಬಾಕಿಯಿರುವಾಗಲೇ ಆರ್‌ಸಿಬಿ (RCB) ಅಭಿಮಾನಿಗಳಿಗೆ ಫಿಲ್ ಸಾಲ್ಟ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ.  ಇಂದು ಆರ್‌ಸಿಬಿ ಮತ್ತು ಪಂಜಾಬ್‌ ಮಧ್ಯೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ (Phil Salt) ಆಡಲಿದ್ದಾರೆ.

    ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಅಭ್ಯಾಸ ವೇಳೆ ಸಾಲ್ಟ್ ಕಾಣಿಸಿಲ್ಲ ಎಂದು ವರದಿಯಾಗಿತ್ತು. ಇಂಗ್ಲೆಂಡಿನ ಫಿಲ್ ಸಾಲ್ಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಅವರು ತವರಿಗೆ ತೆರಳಿರಬಹುದು. ಇಂದಿನ ಪಂದ್ಯದಲ್ಲಿ ಅವರು ಆಡುವುದಿಲ್ಲ ಎಂದೆಲ್ಲಾ ಹೇಳಲಾಗುತ್ತಿತ್ತು. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ.  ಇದೀಗ ಇಂದಿನ ಫೈನಲ್ ಪಂದ್ಯದಲ್ಲಿ ಆಡುವ ಸಲುವಾಗಿ ಫಿಲ್ ಸಾಲ್ಟ್ ಮರಳಿ ಅಹಮದಾಬಾದ್‌ಗೆ ಬಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

    ಪತ್ನಿಗೆ ಹೆರಿಗೆಯಾದ ಹಿನ್ನೆಲೆ ಮಗುವನ್ನು ನೋಡಲು ಸಾಲ್ಟ್ ತವರಿಗೆ ತೆರಳಿದ್ದರು. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಮತ್ತೆ ಅಹಮದಾಬಾದ್‌ಗೆ ಫಿಲ್ ಸಾಲ್ಟ್ ಬಂದಿಳಿದಿದ್ದಾರೆ. ಇದರಿಂದ ಐಪಿಎಲ್ ಫೈನಲ್ ಆಡಲು ಆರ್‌ಸಿಬಿ ತಂಡಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಇದನ್ನೂ ಓದಿ: ಆರ್‌ಸಿಬಿಗೆ ಡಬಲ್‌ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಆರ್‌ಸಿಬಿ ಪರ 12 ಪಂದ್ಯ ಆಡಿರುವ ಸಾಲ್ಟ್ ಒಟ್ಟು 387 ರನ್ ಹೊಡೆದು ಟಾಪ್ 20 ಬ್ಯಾಟರ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

  • IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಅಹಮದಾಬಾದ್: ಆರ್‌ಸಿಬಿ (RCB) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ತಂಡದ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗಲೇ ನರೇಂದ್ರ ಮೋದಿ ಕ್ರೀಡಾಂಗಣದ (Narendra Modi Stadium) ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ.

    ಸ್ಟೇಡಿಯಂನ ಗೇಟ್ ನಂಬರ್ 1ರ ಬಳಿ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಕೆಲಹೊತ್ತು ಆತಂಕ ಮನೆಮಾಡಿತ್ತು. ಘಟನೆ ನಡೆದ ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು. ಕ್ರೀಡಾಂಗಣದ ಹೊರಗಿನ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ

    ಸಿಲಿಂಡರ್ ಸ್ಫೋಟದಿಂದಾಗಿ (Cylinder Balst) ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಪ್ರದರ್ಶನ ನೀಡಲಿದ್ದಾರೆ. ಇದನ್ನೂ ಓದಿ: ಕಪ್‌ ನಮ್ದೆ ಅಂತ ಗೆದ್ದ ಮೇಲೆ ಹೇಳೋಣ: ಅನಿಲ್‌ ಕುಂಬ್ಳೆ

    ಆರ್‌ಸಿಬಿ ತಂಡ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆದ್ದಿರಲಿಲ್ಲ. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, ಪಂಜಾಬ್ ಜೊತೆ ಸೆಣಸಾಡಲಿದೆ. ಈ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

  • ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    – ನಗರ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

    ಬೆಂಗಳೂರು: ಆರ್‌ಸಿಬಿ (RCB) ಹಾಗೂ ಪಂಜಾಬ್ (Punjab Kings) ನಡುವೆ ಇಂದು ಐಪಿಎಲ್ ಫೈನಲ್ ಹಣಾಹಣಿ ನಡೆಯಲಿದೆ. ಈ ಹಿನ್ನೆಲೆ ಅವಧಿಗೂ ಮೀರಿ ಬೆಂಗಳೂರು ನಗರದ ಪಬ್‌ಗಳನ್ನು ಓಪನ್ ಮಾಡದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರು ನಗರದ ಪಬ್‌ಗಳ ಸ್ವರ್ಗವಾಗಿರುವ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಮಳೆ ಇರುವ ಕಾರಣ ಪಂದ್ಯ ತಡವಾಗಿ ಆರಂಭವಾಗಿ ತಡ ರಾತ್ರಿ ಮುಕ್ತಾಯವಾಗಿತ್ತು. ಅದೇ ರೀತಿ ಇಂದು ಕೂಡ ನಡೆಯುವ ಆರ್‌ಸಿಬಿ – ಪಂಜಾಬ್ ಫೈನಲ್ ಪಂದ್ಯ ಮಳೆ ಬಂದು ತಡವಾದರೆ ಪಬ್‌ಗಳನ್ನ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕ್ಲೋಸ್ ಮಾಡಬೇಕು. ಮ್ಯಾಚ್ ಮುಗಿದಿಲ್ಲ ಎಂದು ತಡರಾತ್ರಿಯ ತನಕ ಪಬ್ ಓಪನ್ ಮಾಡಿಕೊಂಡಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಒಂದು ವೇಳೆ ಪೊಲೀಸರ ಖಡಕ್ ಸೂಚನೆ ಮೀರಿ ಅವಧಿ ಮುಗಿದರೂ ಪಬ್ ಓಪನ್ ಮಾಡಿಕೊಂಡರೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಪಬ್ ಮಾಲೀಕರಿಗೆ ಎಚ್ಚರಿಸಲಾಗಿದೆ. ಇದನ್ನೂ ಓದಿ: ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

  • IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    ಅಹಮದಾಬಾದ್‌: 18ನೇ ಆವೃತ್ತಿಯ ಐಪಿಎಲ್‌ ಆವೃತ್ತಿಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಎರಡು ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ಗೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

    ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಉಭಯ ತಂಡಗಳ ನಡುವೆ ಈವರೆಗೆ 36 ಪಂದ್ಯಗಳು ನಡೆದಿದ್ದು, ಇತ್ತಂಡಗಳೂ ತಲಾ 18 ಪಂದ್ಯಗಳಲ್ಲಿ ಗೆಲುವು ಕಂಡಿವೆ.

    ಪ್ರತಿ ವರ್ಷವೂ ʻಈ ಸಲ ಕಪ್‌ ನಮ್ದೇ’ ಎನ್ನುವ ಘೋಷವಾಕ್ಯ ಈ ಬಾರಿಯಾದ್ರೂ ನಿಜವಾಗಲಿ ಅನ್ನೋದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಅದಕ್ಕಾಗಿ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲೆಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಎರಡೂ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇರುವುದರಿಂದ 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ.

    ಆರ್‌ಸಿಬಿ ಗೆಲ್ಲುವ ಫೇವರೆಟ್
    ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab King) ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ (RCB) ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ.

    ಬ್ಯಾಟಿಂಗ್‌ನಲ್ಲಿ ಕಿಂಗ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌, ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮಾ ಬಲ ತುಂಬಿದ್ರೆ ಬೌಲಿಂಗ್‌ನಲ್ಲಿ ಮಾರಕ ವೇಗಿ ಜೋಷ್‌ ಹೇಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌, ಕೃನಾಲ್‌ ಪಾಂಡ್ಯ, ರೊಮಾರಿಯೊ ಶೆಫರ್ಡ್‌ ಹೀಗೆ ತಂಡದ ಪ್ರತಿಯೊಬ್ಬ ಸದಸ್ಯನೂ ಫೈನಲ್‌ ತನಕದ ತಂಡದ ಪಯಣದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ಹೆಗಲು ನೀಡಿದ್ದಾರೆ.

    ಅಯ್ಯರ್‌ ಕಡೆಗಣಿಸುವಂತಿಲ್ಲ
    ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದ, ಕೆಕೆಆರ್‌ಗೆ ಪ್ರಶಸ್ತಿ ತಂದುಕೊಟ್ಟಿದ್ದ ಶ್ರೇಯಸ್‌ ಅವರನ್ನೂ ಕಡೆಗಣಿಸುವಂತಿಲ್ಲ. 18 ವರ್ಷದ ಐಪಿಎಲ್‌ ಇತಿಹಾಸದಲ್ಲಿ ಮೂರು ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷವೂ ಪಂಜಾಬ್‌ ತಂಡವನ್ನು ಫೈನಲ್‌ ತಲುಪಿಸುವ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪ್ರಶಸ್ತಿ ಗೆಲುವಿನ ಶ್ರೇಯವನ್ನು ಅಯ್ಯರ್‌ ನೀಡಿರಲಿಲ್ಲ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಪ್ರಭ್‌ಸಿಮ್ರನ್‌ ಸಿಂಗ್‌, ಜೋಷ್‌ ಇಂಗ್ಲಿಸ್‌, ಪ್ರಿಯಾಂಶ್‌ ಆರ್ಯ, ಶಶಾಂಕ್‌ ಸಿಂಗ್‌, ಅಯ್ಯರ್‌ ಪಡೆಗೆ ಆಸರೆ ಒದಗಿಸಿದ್ದಾರೆ. ಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್‌ ಸ್ಪಿನ್ನರ್‌ ಯಜ್ವೇಂದ್ರ ಚಾಹಲ್‌ ಕ್ವಾಲಿಫೈಯರ್‌-2 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡ, ಚಾಹಲ್‌ ಫೈನಲ್‌ನಲ್ಲಿ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದೆ.

    ಮಳೆ ಸಾಧ್ಯತೆ ಇದೆಯೇ?
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.

  • RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    ಬೆಳಗಾವಿ: ಪಂಜಾಬ್‌ ಕಿಂಗ್ಸ್‌ ವಿರುದ್ಧ ಕ್ವಾಲಿಫೈಯರ್‌-1ನಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 4ನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ. 2009, 2011, 2016ರ ಬಳಿಕ ನಾಲ್ಕನೇ ಬಾರಿ ಐಪಿಎಲ್‌ ಫೈನಲ್‌ ತಲುಪಿದ್ದು, ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್‌ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ (Chief Minister) ವಿಶೇಷ ಪತ್ರ ಬರೆಯಲಾಗಿದೆ.

    ಆರ್‌ಸಿಬಿ ಕಪ್‌ ಗೆದ್ದರೆ ಆದ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ (RCB Fans Festival) ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

    ಗೋಕಾಕ ಮೂಲದ ಯುವಕ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಸಿಎಂಗೆ ಪತ್ರ ಬರೆದಿದ್ದು ರಾಜ್ಯೋತ್ಸವದ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ. ಇದನ್ನೂ ಓದಿ: ಕಪ್‌ ಗೆಲ್ಲೋಕೆ ಇನ್ನೊಂದೇ ಹೆಜ್ಜೆ – ಅನುಷ್ಕಾ ಕಡೆ ತಿರುಗಿ ಸನ್ನೆ ಮಾಡಿದ ಕೊಹ್ಲಿ

    ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್:
    ಇನ್ನೂ 2009, 2011, 2016ರ ಬಳಿಕ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಲ್ಲಿ ನಡೆದ ಐಪಿಎಲ್ ಆವೃತ್ತಿಗಳಲ್ಲಿ ಐಪಿಎಲ್ ಕ್ವಾಲಿಫೈರ್-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ‘ಇದು ಅಭಿಮಾನಿ ದೇವ್ರುಗಳಿಗೆ’: ಅಣ್ಣಾವ್ರ ಸ್ಟೈಲಲ್ಲಿ ಕೈಮುಗಿದ ಕೊಹ್ಲಿ – ಆರ್‌ಸಿಬಿ ಫ್ಯಾನ್ಸ್‌ ಥ್ರಿಲ್‌

    ಯಾವ ವರ್ಷ – ಯಾವ ತಂಡ?
    2018 – CSK.
    2019 – MI.
    2020 – MI.
    2021 – CSK.
    2022 – GT.
    2023 – CSK.
    2024 – KKR
    2025 – ….?

    2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್ ಟೈಟಾನ್ಸ್, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್ ತಂಡಗಳು ಕ್ವಾಲಿಫೈಯರ್-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್-1 ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಚೆನ್ನೈ: 2024ರ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಹೀನಾಯ ಸೋಲನುಭವಿಸಿತು. ತಂಡದ ಸೋಲಿನ ದುಃಖ ತಡೆಯಲಾರದೇ ಕಾವ್ಯ ಮಾರನ್‌ ಅವರು ಕಣ್ಣೀರಿಟ್ಟರು.

    ಚೆಪಕ್‌ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಳಪೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನದಿಂದಾಗಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ಸೋಲೊಪ್ಪಿಕೊಂಡಿತು.‌ ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಇದನ್ನು ಕಂಡು ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್‌ ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದರು. ಪಂದ್ಯದ ಆರಂಭದಿಂದ ಕೊನೆ ವರೆಗೂ ಅವರ ಮುಖದಲ್ಲಿ ಬೇಸರ ಆವರಿಸಿತ್ತು.

    ಕೊನೆ ಕ್ಷಣದಲ್ಲಿ ಹೈದರಾಬಾದ್‌ ಸೋಲು ಖಚಿತವಾಗುತ್ತಿದ್ದಂತೆ ಕಾವ್ಯ ಮಾರನ್‌ ಅವರ ಮನದಲ್ಲಿದ್ದ ದುಃಖದ ಕಟ್ಟೆಯೊಡೆಯಿತು. ಎಷ್ಟೇ ಪ್ರಯತ್ನಿಸಿದರೂ ಅಳು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ಹರಿಯಿತು. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂಡ ಸೋತರೂ ರನ್ನರ್‌ ಅಪ್‌ ವರೆಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಅಭಿನಂದಿಸಿದರು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

    2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಅದ್ಧೂರಿ ಜಯ ಸಾಧಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇನ್ನೂ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

  • IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

    IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

    ಚೆನ್ನೈ: ಸನ್‌ ರೈಸರ್ಸ್‌ ಹೈದರಾಬಾದ್‌ ಹಾಗೂ ಕೆಕೆಆರ್‌ ನಡುವಿನ ಐಪಿಎಲ್‌ ಫೈನಲ್‌ (IPL Final) ಪಂದ್ಯವು ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೂಪರ್‌ ಸಂಡೇ (ಮೇ 26) ನಡೆಯಲಿದೆ. ಅಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಆದ್ರೆ ಫೈನಲ್‌ ಪಂದ್ಯಕ್ಕೆ ಇದೀಗ ʻರೆಮಲ್‌ʼ ಚಂಡಮಾರುತದ (Cyclone Remal) ಆತಂಕ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯದಿಂದ ತೀವ್ರ ಚಂಡಮಾರುತ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

    ಫೈನಲ್‌ ಪಂದ್ಯವು ಮಳೆಗೆ ಬಲಿಯಾದರೆ ವಿಜೇತರು ಯಾರಾಗ್ತಾರೆ? ನಿಯಮಗಳು ಹೇಗೆ ಅನ್ವಯವಾಗುತ್ತದೆ ಅನ್ನೋ ಬಗ್ಗೆ ತಿಳಿಯುವ ಕುತೂಹಲ ನಿಮಿಗಿದ್ದರೆ ಮುಂದೆ ಓದಿ..

    ಭಾನುವಾರ ಚೆನ್ನೈ ಹವಾಮಾನ ಹೇಗಿರಲಿದೆ?
    ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ತಮಿಳುನಾಡಿನ ಚೆನ್ನೈನಲ್ಲಿ (Chennai weather) ಭಾನುವಾರ ಬಿಸಿಲು ಹಾಗೂ ಮೋಡ ಮುಸುಕಿದ ವಾತಾವರಣ ಇರಲಿದೆ. 20% ಮಳೆ ಸಾಂದ್ರತೆಯಿರಲಿದ್ದು, 56% ತೇವಾಂಶ ಇರಲಿದೆ. ಗಂಟೆಗೆ 23 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: 2024ರ ಐಪಿಎಲ್‌ಗೆ ವಿದಾಯ; ಅಭಿಮಾನಿಗಳೊಂದಿಗೆ ಸಿಹಿ-ಕಹಿ ನೆನಪು ಹಂಚಿಕೊಂಡ ಆರ್‌ಸಿಬಿ!

    ಮಳೆ ಅಡ್ಡಿಯಾದ್ರೆ ಮೀಸಲು ದಿನ ಇದೆಯೇ?
    ಲೀಗ್‌ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನ ಇರಲಿಲ್ಲ. ಫೈನಲ್​ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ಲೂಯಿಸ್‌ (DSL) ನಿಯಮದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ. ಕಳೆದ ವರ್ಷ ಏಕದಿನ ಏಷ್ಯಾಕಪ್‌ (ODI Asia Cup) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈ ನಿಯಮವನ್ನು ಅನ್ವಯಿಸಲಾಗಿತ್ತು. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

    ಮೀಸಲು ದಿನಕ್ಕೂ ಮಳೆ ಬಂದರೆ ಕಥೆ ಏನು?
    ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾಗಿ ಮೀಸಲು ದಿನಕ್ಕೂ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವುಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಪಡೆದ ರನ್‌ರೇಟ್‌, ಅಂಕಗಳ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಪಾಯಿಂಟ್ಸ್‌ ಪಟ್ಟಿಯಲ್ಲಿ ವಿಜೇತರನ್ನ ನಿರ್ಧರಿಸುವುದಾದರೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವೇ ಚಾಂಪಿಯನ್‌ ಆಗಲಿದೆ, ಸನ್‌ ರೈಸರ್ಸ್‌ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಲಿದೆ. ಏಕೆಂದರೆ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿ 17 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.