Tag: ಐತಿಹಾಸಿಕ ಸ್ಮಾರಕ

  • ಬೀದರ್ ಐತಿಹಾಸಿಕ ತಾಣಗಳಿಗೆ ಹರಿದು ಬಂದ ಪ್ರವಾಸಿಗರ ದಂಡು

    ಬೀದರ್ ಐತಿಹಾಸಿಕ ತಾಣಗಳಿಗೆ ಹರಿದು ಬಂದ ಪ್ರವಾಸಿಗರ ದಂಡು

    ಬೀದರ್: ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದ್ದು, ಬೀದರ್‌ನ (Bidar) ಐತಿಹಾಸಿಕ ಸ್ಮಾರಕಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    2024ಕ್ಕೆ ಬಾಯ್ ಹೇಳಿ, 2025ಕ್ಕೆ ಹಾಯ್ ಹೇಳಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಹೊಸ ವರ್ಷವನ್ನು ಸ್ವಾಗತಿಸಲು ಗಡಿಜಿಲ್ಲೆ ಬೀದರ್‌ನ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಐತಿಹಾಸಿಕ ಬೀದರ್ ಕೋಟೆ, ಅಷ್ಟೂರು ಗುಂಬಜ್ ಸೇರಿದಂತೆ ಹಲವು ತಾಣಗಳಿಗೆ ಪ್ರವಾಸಿಗರು ದಂಡು ದಂಡಾಗಿ ಬಂದು ಪೋಟೋ ಕ್ಲಿಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

    ಬೀದರ್ ಸೇರಿದಂತೆ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದಲೂ ಪ್ರವಾಸಿಗರು ಐತಿಹಾಸಿಕ ಬಹುಮನಿ ಸುಲ್ತಾನರ ಕೋಟೆ ನೋಡಲು ಬಂದಿದ್ದಾರೆ.ಇದನ್ನೂ ಓದಿ: ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

  • ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!

    ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!

    – ವೀರೇಶ್ ದಾನಿ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಗೆ ಮೊನ್ನೆ ಮೊನ್ನೆಯಷ್ಠೆ ಅಮೇರಿಕದ ನೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ 2ನೇ ಸ್ಥಾನ ದೊರೆತಿದೆ. ಆದರೆ ಇಂತಹ ಐತಿಹಾಸಿಕ ತಾಣವಾಗಿರುವ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿ ಇದೀಗ ಹಾಳು ಕೊಂಪೆಯಾಗಿತ್ತಿದೆ.

    ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಹಂಪಿ ಸ್ಮಾರಕಕ್ಕೆ ದಕ್ಕೆ ಮಾಡಿದ್ದಲ್ಲದೇ ಸ್ಮಾರಕಗಳ ಸಾಲು ಕಂಬಗಳನ್ನು ಕೆಡವುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹಂಪಿ ಪ್ರವಾಸಕ್ಕೆ ಬಂದಿದ್ದ ಉತ್ತರ ಭಾರತ ಮೂಲದ ಮೂವರು ಯುವಕರು ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳಿಗೆ ದಕ್ಕೆ ಮಾಡಿದ್ದಾರೆ.

    ಕಿಡಿಗೇಡಿ ಯುವಕರು ಸಾಲುಕಂಬಗಳ ಸ್ಮಾರಕಗಳನ್ನ ಹಾಳು ಮಾಡಿರುವ ವಿಡಿಯೋವನ್ನ ಬೆಂಗಳೂರಿನಲ್ಲಿ ವಾಸವಾಗಿರುವ ಮಧ್ಯಪ್ರದೇಶ ಮೂಲದ ಆಯುಷ್ಯ ಸಾಹು ಎಂಬವರು ತಮ್ಮ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ,

    ಆಯುಷ್ಯ ಸಾಹು ಸಾಮಾಜಿಕ ಜಾಲತಾಣಗಳಲ್ಲಿ ಸ್ಮಾರಕಗಳನ್ನ ಹಾನಿ ಮಾಡುತ್ತಿರುವ ವಿಡಿಯೋ ಪ್ರಸಾರ ಮಾಡಿದ ನಂತರವೂ ಸಹ ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಲ್ಲದೇ ಈ ಬಗ್ಗೆ ಇದೂವರೆಗೂ ಯಾವುದೇ ದೂರು ಸಹ ದಾಖಲು ಮಾಡದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv