Tag: ಐತಿಹಾಸಿಕ ಸ್ಥಳಗಳು

  • ವಕ್ಫ್ ಆಸ್ತಿ ವಿವಾದ | ಗಡಿಜಿಲ್ಲೆ ಬೀದರ್‌ನ ಐತಿಹಾಸಿಕ ತಾಣಗಳ ಮೇಲೆಯೂ ವಕ್ಫ್ ವಕ್ರದೃಷ್ಟಿ!

    ವಕ್ಫ್ ಆಸ್ತಿ ವಿವಾದ | ಗಡಿಜಿಲ್ಲೆ ಬೀದರ್‌ನ ಐತಿಹಾಸಿಕ ತಾಣಗಳ ಮೇಲೆಯೂ ವಕ್ಫ್ ವಕ್ರದೃಷ್ಟಿ!

    ಬೀದರ್: ರೈತರ ಜಮೀನಿನ ಬಳಿಕ ಇದೀಗ ಜಿಲ್ಲೆಯಲ್ಲಿ ಐತಿಹಾಸಿಕ ತಾಣಗಳ ಮೇಲೆಯೂ ವಕ್ಫ್ (Waqf Property) ವಕ್ರದೃಷ್ಠಿ ಬೀರಿದೆ.

    ಗಡಿ ಜಿಲ್ಲೆ ಬೀದರ್‌ನ (Bidar) ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್, ಪ್ರವಾಸಿ ತಾಣಗಳು ವಕ್ಫಗೆ ಸೇರ್ಪಡೆಯಾಗಿದೆ.ಇದನ್ನೂ ಓದಿ: ಶಿವಮೊಗ್ಗ | ಅಕ್ರಮವಾಗಿ ಚಿರತೆಯ ಹಲ್ಲು, ಉಗುರು ಸಾಗಾಟಕ್ಕೆ ಯತ್ನ – ಆರೋಪಿ ಅರೆಸ್ಟ್

    ಬಹಮನಿ ಸುಲ್ತಾನರ (Bahamani Sultana) ಕಾಲದ ಕೋಟೆ ಆವರಣದಲ್ಲಿರುವ ಸೋಲಾ ಕಂಬ, ಅಷ್ಟೂರಿನಲ್ಲಿರುವ 15 ಗುಂಬಜ್‌ಗಳ ಪೈಕಿ 14 ಗುಂಬಜ್‌ಗಳು ಹಾಗೂ ಬರೀದ್ ಶಾಹಿ ಉದ್ಯಾನವನದಲ್ಲಿರುವ ಥಾಂಬ್ ಆಫ್ ಅಮೀರ್ ಬರೀದ್, ಖಾನ್ ಜಿಹಾನ್ ಬರೀದ್‌ಗಳು ಕೂಡ ವಕ್ಫ್ಗೆ ಸೇರ್ಪಡೆಯಾಗಿದೆ.

    ಈಗಾಗಲೇ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ 960ಕ್ಕೂ ಹೆಚ್ಚು ಎಕರೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಲಾಗಿದೆ. ಇನ್ನೂ ಇಡೀ ಧರ್ಮಾಪುರ ಗ್ರಾಮವೇ ವಕ್ಫ್ ಆಸ್ತಿಯಾಗಿದೆ. ಇದಿಷ್ಟೇ ಅಲ್ಲದೇ ಜಿಲ್ಲೆಯ ಹಲವು ಮಠ-ಮಂದಿರ, ಸರ್ಕಾರಿ ಕಚೇರಿ ಮೇಲೆಯೂ ವಕ್ಫ್ ಕಪ್ಪುಛಾಯೆ ಬಿದ್ದಿದೆ. ಈಗ ಕೋಟೆ ಆವರಣದ ಒಂದಿಷ್ಟು ಭಾಗ, ಐತಿಹಾಸಿಕ ಸ್ಮಾರಕಗಳೂ ವಕ್ಫ್ ಆಸ್ತಿಯೆಂದು ಉಲ್ಲೇಖವಾಗಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಕಡಿಮೆ ಬೆಲೆಗೆ ಅಕ್ಕಿ, ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

  • ಐತಿಹಾಸಿಕ ಮಂಟಪಗಳು, ಶಾಸನಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೊಪ್ಪಳ ಜಿಲ್ಲಾಧಿಕಾರಿ

    ಐತಿಹಾಸಿಕ ಮಂಟಪಗಳು, ಶಾಸನಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೊಪ್ಪಳ ಜಿಲ್ಲಾಧಿಕಾರಿ

    ಕೊಪ್ಪಳ: ಸುಮಾರು ವರ್ಷಗಳ ಇತಿಹಾಸವನ್ನು ಹೇಳುವ ಐತಿಹಾಸಿಕ ಮಂಟಪಗಳು ಹಾಗೂ ಶಾಸನಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ನಾವು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

    ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಮೌರ್ಯರ ಬೆಟ್ಟದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಭಾನುವಾರ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ವಿಕಾಸ್ ಕಿಶೋರ್ ಸುರಳ್ಕರ್ ಭಾಗವಹಿಸಿ ಐತಿಹಾಸಿಕ ಸ್ಥಳದ ಕುರಿತು ಮಾತನಾಡಿದರು. ಇದನ್ನೂ ಓದಿ: ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ

    ಈ ವೇಳೆ ಅವರು, ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಇತಿಹಾಸವನ್ನು ಹೇಳುವ ಸಾಕಷ್ಟು ಕುರುಹುಗಳಿವೆ. ನವಶಿಲಾಯುಗ ಚಿತ್ರಗಳು, ವಿಜಯನಗರ ಕಾಲದ ಗುಹೆಗಳು, ದೇವಸ್ಥಾನಗಳು, ಶಾಸನಗಳನ್ನು ಕಾಣಬಹುದು. ಇಂತಹ ಮಹತ್ವ ಸ್ಥಳವನ್ನು ನಾವುಗಳು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.

    ಯಾವುದೇ ಕಾರಣಕ್ಕೂ ಐತಿಹಾಸಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ನಾವು ನೋಡಿಕೊಳ್ಳಬೇಕು. ನಾವು ಇವುಗಳನ್ನು ರಕ್ಷಣೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸವನ್ನು ತಿಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಇತಿಹಾಸದ ಕುರುಹುಗಳ ರಕ್ಷಣೆಗೆ ಮುಂದಾಗಬೇಕು. ಅದು ನಮ್ಮ ಕರ್ತವ್ಯ ಎಂದು ಹೇಳಿದರು. ಇದನ್ನೂ ಓದಿ: ಶಾಲಾ ಮಕ್ಕಳಿಗೆ 100 ಟ್ಯಾಬ್ ಮತ್ತು ಮಹಿಳೆಯರಿಗೆ 200 ಟೈಲರಿಂಗ್ ಯಂತ್ರ ವಿತರಣೆ

    ಶಾಲಾ ವಿದ್ಯಾರ್ಥಿಗಳೊಂದಿಗೆ ಚಾರಣವನ್ನು ಹಮ್ಮಿಕೊಂಡು ಬೆಟ್ಟದ ಮೇಲಿರುವ ಪುರಾತನ ಮೌರ್ಯರ ಕಾಲದ ಕುರುಹುಗಳನ್ನು ವೀಕ್ಷಣೆ ಮಾಡಿದರು. ಇತಿಹಾಸಕಾರರಿಂದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದ್ದು, ಈ ವೇಳೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.