Tag: ಐತಿಹಾಸಿಕ ತಾಣ

  • ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

    ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

    ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕುತುಬ್ ಮಿನಾರ್, ಕೆಂಪು ಕೋಟೆ ಸೇರಿ ದೆಹಲಿ ಹಲವು ಐತಿಹಾಸಿಕ ತಾಣಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.

    ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ದಡಿಯಲ್ಲಿ (Operation Sindoor) ಭಾರತೀಯ ಸೇನೆ ಪಾಕ್ ಮತ್ತು ಪಿಒಕೆಯ ಉಗ್ರರ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತವು ತಕ್ಕ ಉತ್ತರ ನೀಡಿದೆ.ಇದನ್ನೂ ಓದಿ: ʻಆಪರೇಷನ್ ಅಭ್ಯಾಸ್ʼ – KRS ನಲ್ಲಿ ಮೇ 11 ರಂದು ಮಾಕ್ ಡ್ರಿಲ್

    ಇದರ ಪರಿಣಾಮ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಹೀಗಾಗಿ, ದೆಹಲಿ ಪೊಲೀಸರು ಕೆಂಪು ಕೋಟೆ, ಕುತುಬ್ ಮಿನಾರ್ ಸೇರಿದಂತೆ ನಗರದ ಐತಿಹಾಸಿಕ ಸ್ಮಾರಕಗಳ ಸುತ್ತಲೂ ಭದ್ರತೆ ಹೆಚ್ಚಿಸಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ.

    ಸಾಮಾನ್ಯವಾಗಿ ಐತಿಹಾಸಿಕ ತಾಣಗಳು ನಿಯಮಿತ ಭದ್ರತೆಯನ್ನು ಹೊಂದಿರುತ್ತವೆ. ಆದರೆ ಸದ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ ದೆಹಲಿಯ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಅವರ ಸುರಕ್ಷತೆಗಾಗಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

  • ಉತ್ತರ ಕರ್ನಾಟಕ ಐತಿಹಾಸಿಕ ತಾಣಗಳಿಗೆ ತಟ್ಟಿದ ಕೊರೊನಾ ವೈರಸ್

    ಉತ್ತರ ಕರ್ನಾಟಕ ಐತಿಹಾಸಿಕ ತಾಣಗಳಿಗೆ ತಟ್ಟಿದ ಕೊರೊನಾ ವೈರಸ್

    ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಸದ್ಯ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ತಟ್ಟಿದೆ. ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಸ್ಥಳಗಳಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.

    ಬೇಸಿಗೆ ಶುರುವಾಗುತ್ತಿದ್ದಂತೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುತ್ತಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಐತಿಹಾಸಿಕ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ. 2019ರ ಜನವರಿಯಲ್ಲಿ 1,406 ಜನ, ಫೆಬ್ರವರಿಯಲ್ಲಿ 1,502 ಮಂದಿ ವಿದೇಶಿಗರು ಭೇಟಿ ನೀಡಿದರು. ಆದರೆ ಸದ್ಯ ಫೆಬ್ರವರಿ ತಿಂಗಳಲ್ಲಿ 966 ವಿದೇಶಿಗರು ಭೇಟಿ ನೀಡಿದ್ದಾರೆ.

    ಅದೇ ರೀತಿ ಪಟ್ಟದಕಲ್ಲಿಗೆ ಜನವರಿಯಲ್ಲಿ 951 ಜನ, ಫೆಬ್ರವರಿಯಲ್ಲಿ 994 ಮಂದಿ. ಆದರೆ ಈ ಬಾರಿಯ ಫೆಬ್ರವರಿಯಲ್ಲಿ 543 ಜನ ವಿದೇಶಿಗರು ಭೇಟಿ ನೀಡಿದ್ದಾರೆ. ಐಹೊಳೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅಂತಹ ಗಣನೀಯ ಇಳಿಕೆ ಕಂಡು ಬಂದಿಲ್ಲ ಎಂದು ಪುರತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

    ಸೋಂಕು ತಗುಲಿರುವ ದೇಶಗಳಿಂದ ಯಾವುದೇ ವಿದೇಶಿಗರು ಬಂದಿಲ್ಲವಾದರೂ, ಜಿಲ್ಲಾ ಆರೋಗ್ಯ ಇಲಾಖೆ ಐತಿಹಾಸಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಬೇರೆ ದೇಶಗಳಿಂದ ಬರುವ ವಿದೇಶಿ ಪ್ರಜೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಸೋಂಕು ಹರಡದಂತೆ ಎಚ್ಚರವಹಿಸಿದೆ. ಅಲ್ಲದೆ ಸೋಂಕು ಕಾಣಿಸಿಕೊಂಡಿರುವ ದೇಶದಿಂದ ಸದ್ಯಕ್ಕೆ ಯಾವುದೇ ಪ್ರವಾಸಿಗರು ಬಂದಿಲ್ಲ ಎಂಬುದು ಆರೋಗ್ಯ ಇಲಾಖೆ ಅಭಿಪ್ರಾಯವಾಗಿದೆ.