Tag: ಐಟಿ ಕಂಪನಿ

  • ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ (Traffic Jam) ಪೊಲೀಸ್ ಇಲಾಖೆ ಹೊಸ ಪ್ಲಾನ್ ಮಾಡಿದೆ. ಬೆಂಗಳೂರು ಟೆಕ್ಕಿಗಳಿಗೆ ಪ್ರತಿ ಬುಧವಾರದಂದು ವರ್ಕ್ ಫ್ರಂ ಹೋಂ (Work From Home) ಮಾಡುವಂತೆ ಐಟಿ ಕಂಪನಿಗಳಿಗೆ (IT Company) ಸಲಹೆ ನೀಡಿದೆ.

    ಐಟಿ ಕಂಪನಿಗಳು ಇರುವ ಪ್ರದೇಶಗಳು, ಅದರ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತ ಆಗುತ್ತಿದೆ ಹೀಗಾಗಿ ಬುಧವಾರ ಒಂದು ದಿನ ವರ್ಕ್‌ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಬೇಕೆಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಕಾರ್ತಿಕ್ ರೆಡ್ಡಿ ಸಲಹೆ ನೀಡಿದ್ದಾರೆ.  ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಸಲಹೆ ಏನು?
    – ಪೀಕ್ ಅವರ್ ಬಿಟ್ಟು ಬೆಳಗ್ಗೆ 7:30 ಅಥವಾ 8 ಗಂಟೆಗೆ ಕಂಪನಿ ಆರಂಭಿಸಬೇಕು. ಇದನ್ನೂ ಓದಿ: ಬ್ರೇಕಪ್‌ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕೇವಲ 2 ಸಾವಿರಕ್ಕಾಗಿ ಬಿತ್ತು ಹೆಣ!
    – ಔಟರ್ ರಿಂಗ್ ರೋಡ್‌ನಲ್ಲಿ ಇರುವ ಕಂಪನಿಗಳ ಸಮಯ ಬದಲಾವಣೆ ಮಾಡಬೇಕು
    – ಪ್ರತಿ ಬುಧವಾರ ವರ್ಕ್ ಫ್ರಂ ಹೋಮ್‌ಗೆ ಸಲಹೆ, ಐಟಿ ಕಂಪನಿಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಿ
    – ಬಿಎಂಟಿಸಿ ಬಸ್‌ಗಳ ಮೂಲಕ ಪಿಕಪ್-ಡ್ರಾಪ್‌ಗೆ ಎಸಿ ಬಸ್ ಕೊಡೋದಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದೆ
    – ಸಾರ್ವಜನಿಕರು ಸ್ವಂತ ವೆಹಿಕಲ್ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ

    ಬುಧವಾರವೇ ಯಾಕೆ?
    ಬುಧವಾರ ವಾರದ ಮಧ್ಯದಲ್ಲಿ ಬರುವ ಕಾರಣ ಸಾಧಾರಣವಾಗಿ ಐಟಿ ಕಂಪನಿಗಳಲ್ಲಿ ಹೆಚ್ಚಾಗಿ ಯಾರೂ ರಜೆ ತೆಗೆದುಕೊಳ್ಳುವುದಿಲ್ಲ. ಸಾಧಾರಣವಾಗಿ ದೀರ್ಘ ರಜೆ ಹಾಕುವವರು ಸೋಮವಾರ, ಮಂಗಳವಾರ ಅಥವಾ ಗುರುವಾರ, ಶುಕ್ರವಾರ ಹಾಕುತ್ತಾರೆ. ಆಗ ಶನಿವಾರ, ಭಾನುವಾರ ಸೇರಿ 4 ದಿನ ಸಿಗುತ್ತದೆ. ಒಂದು ವೇಳೆ ಬುಧವಾರ ವರ್ಕ್‌ ಫ್ರಂ ಕೊಟ್ಟರೆ ಮನೆಯಲ್ಲೇ ಕೆಲಸ ಮಾಡಬಹುದು. ಜೊತೆ ಊರಿಗೆ ಹೋಗಿದ್ದವರು ಅಲ್ಲಿಯೇ ಕೆಲಸ ಮಾಡಬಹುದು. ಇದರಿಂದ ಸ್ವಲ್ಪ ಟ್ರಾಫಿಕ್‌ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ

    ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ

    ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಐದು ಅಂತಸ್ತಿನ‌ ಬಿಲ್ಡಿಂಗ್ ಭಾಗಶಃ ಭಸ್ಮವಾದ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಸವಾಡಿ ಔಟರ್ ರಿಂಗ್ ರೋಡ್‌ನಲ್ಲಿ ನಡೆದಿದೆ.

    ಮಧ್ಯರಾತ್ರಿ 12 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಕಟ್ಟಡದಲ್ಲಿ ಸಿಲುಕಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಫರ್ನಿಚರ್ ಅಂಗಡಿ, ಕೋಚಿಂಗ್ ಸೆಂಟರ್, ಐಟಿ ಕಂಪನಿ (IT Company) ಸಂಪೂರ್ಣ ಸುಟ್ಟು ಹೋಗಿದೆ.  ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಅವಘಡಕ್ಕೆ ನಿಖರ ಕಾರಣ ತಿಳಿದು ಬಾರದೇ ಇದ್ದರೂ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ರಜೆ ಮತ್ತು ರಾತ್ರಿ ಈ ಘಟನೆ ಸಂಭವಿಸಿದ ಕಾರಣ ಹೆಚ್ಚಿನ ಜನ ಕಟ್ಟಡದಲ್ಲಿ ಇರಲಿಲ್ಲ.

    ನೆಲ ಹಾಗೂ ಮೊದಲ ಮಹಡಿಯಲ್ಲಿ ಫರ್ನಿಚರ್‌ ಅಂಗಡಿ, ಎರಡನೇ ಮಹಡಿಯಲ್ಲಿ ಕಾಮೆಡ್ ಕೋಚಿಂಗ್ ಸೆಂಟರ್, 3 ಮತ್ತು 4ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್ ಹೆಸರಿನ ಸಾಫ್ಟ್‌ವೇರ್ ಕಂಪನಿ ಕಾರ್ಯನಿರ್ವಹಿಸುತ್ತಿತ್ತು.

    ಅವಘಡದ ಮಾಹಿತಿ ಪಡೆದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ.

  • ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಬೆಂಗಳೂರು: ಪ್ರಿಯಕರನ (Lover) ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.

    ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ (IT Company) ಕೆಲಸ ಮಾಡುತ್ತಿದ್ದ ಯುವತಿ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಪ್ರಿಯಕರನ ಹೆಸರು, ಕಾರಣ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ

    ಆರೋಪಿ ಅಕ್ಷಯ್ ಹಾಗೂ ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರ ತನ್ನಿಂದ ದೂರ ಹೋಗುತ್ತಿದ್ದಾನೆ ಅಂತಾ ಅನುಮಾನಗೊಂಡ ವಿದ್ಯಾಶ್ರೀ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ. ಯುವತಿ ಮನೆಯಲ್ಲಿ ಬುಧವಾರ ಡೆತ್‌ನೋಟ್ ಪತ್ತೆಯಾದ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿ ಅಕ್ಷಯ್‌ನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ (Soladevanahalli Police Station) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ:
    ಮಾಡೆಲ್ ಸಹ ಆಗಿದ್ದ ವಿದ್ಯಾಶ್ರೀ ಮತ್ತು ಅಕ್ಷಯ್ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಕ್ಷಯ್ ವಿದ್ಯಾ ಬಳಿ 1.76 ಲಕ್ಷ ಹಣ ಪಡೆದುಕೊಂಡಿದ್ದ. ಕೊಟ್ಟ ಹಣ ಕೇಳಿದ್ದಕ್ಕೆ ವಿದ್ಯಾ ಮತ್ತು ಆಕೆಯ ಕುಟುಂಬದವರನ್ನ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾಶ್ರೀ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮೀಸ್ ಆಂಧ್ರ ಕಾಂಪಿಟೇಷನ್ ನಲ್ಲಿ ವಿಜೇತಳಾಗಿದ್ದ ಮೃತ ವಿದ್ಯಾಶ್ರೀ ಬಸವೇಶ್ವರ ನಗರದಲ್ಲಿ ಜೀಮ್ ಟ್ರೈನರ್ ಆಗಿದ್ದ ಆರೋಪಿ ಅಕ್ಷಯ್‌ಗೆ ಹಣ ಕೊಟ್ಟಿದ್ದರ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

    ಡೆತ್‌ನೋಟ್‌ನಲ್ಲಿ ಏನಿದೆ?
    `ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಿದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬಗ್ಗೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಖಿನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ.. ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ… ಗುಡ್ ಬೈ ಟು ದಿಸ್ ವರ್ಲ್ಡ್’ ಅಂತಾ ಮೃತ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾನಸಿಕ ಖಿನ್ನತೆಯಿಂದ ಟೆಕ್ಕಿ ನೇಣಿಗೆ ಶರಣು

    ಮಾನಸಿಕ ಖಿನ್ನತೆಯಿಂದ ಟೆಕ್ಕಿ ನೇಣಿಗೆ ಶರಣು

    ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 26 ವರ್ಷದ ಟೆಕ್ಕಿಯೊಬ್ಬಳು (Techie) ನೇಣಿಗೆ ಶರಣಾಗಿರುವ (Suicide) ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸ್ವಾತಿ (26) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಮಾನಸಿಕ ಖಿನ್ನತೆಯಿಂದ ಪತಿ ದಾಮೋದರ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಅಯೋಧ್ಯೆ ಭದ್ರತೆಗೆ ನೇಮಿಸಿದ್ದ ಮಹಿಳಾ ಪೊಲೀಸರ ಸಖತ್ ಡಾನ್ಸ್ – ನಾಲ್ವರು ಅಮಾನತು

    ಗ್ಲೋಬಲ್ ವಿಲೇಜ್‌ನ (Global Village Tech Park) ಐಟಿ ಕಂಪನಿಯಲ್ಲಿ (IT Company) ಕೆಲಸ ಮಾಡ್ತಿದ್ದ ಸ್ವಾತಿ, ಕಳೆದ ಎರಡು ವರ್ಷಗಳ ಹಿಂದೆ ದಾಮೋದರ್ ಎಂಬಾತನನ್ನು ವಿವಾಹವಾಗಿದ್ದಳು. ನಿನ್ನೆ ತಡರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    CRIME 2

    ಸದ್ಯ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

    ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

    ಭುವನೇಶ್ವರ: ಒಡಿಶಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಯುವತಿಯೊಬ್ಬಳು ಪ್ರಿಯಕರನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಸಾಫ್ಟ್‌ವೇರ್‌ ಎಂಜಿನಿಯರ್ ಶ್ವೇತಾ ಉತ್ಕಲ್ ಕುಮಾರಿ ಎಂಬಾಕೆಯೇ ತನ್ನನ್ನು ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಇದು ಗೊತ್ತಾಗಿದ್ದು, ಯುವತಿ ಕುಟುಂಬಸ್ಥರು ಪ್ರಿಯಕರ ಸೌಮ್ಯಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

    ಏನಿದು ಟೆಕ್ಕಿ ಸುಂದರಿಯ ಕಹಾನಿ?
    ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ, ಸೌಮ್ಯಜಿತ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆಗಾಗ್ಗೆ ಇಬ್ಬರೂ ಹೊರಗೆ ಸುತ್ತಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸೌಮ್ಯಜಿತ್, ಶ್ವೇತಾಳ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದನು. ಇಬ್ಬರ ನಡುವೆ ಮದುವೆ ಮಾತುಕತೆ ನಡೆದಾಗ ಪಬ್‌ವೊಂದರಲ್ಲಿ ಜಗಳ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಸೌಮ್ಯಜಿತ್ 30 ಲಕ್ಷ ರೂ. ಬೇಡಿಕೆಯಿಟ್ಟದ್ದನು. ಇದನ್ನು ನಿರಾಕರಿಸಿದ ನಂತರ ಶ್ವೇತಾಳ ಖಾಸಗಿ ಫೋಟೋಗಳನ್ನು ತೋರಿಸಿ ಸೌಮ್ಯಜಿತ್ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ. ಹಣ ಕೊಡದೇ ಇದ್ದರೇ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿಯೂ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    ಇದರಿಂದ ಮನನೊಂದ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೌಮ್ಯಜಿತ್‌ಗೆ 15 ಬಾರಿ ಕರೆ ಮಾಡಿದ್ದರು. ಆದರೆ ಸೌಮ್ಯಜಿತ್ ಫೋನ್ ರಿಸೀವ್ ಮಾಡಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಚಂದ್ರಶೇಖರಪುರದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಶ್ವೇತಾಳ ಫೋನ್ ಕರೆಗಳು ಹಾಗೂ ಡೈರಿ ಪರಿಶೀಲಿಸಿದಾಗ ಗೆಳೆಯನ ಬಗ್ಗೆ ಮಾಹಿತಿ ಸಿಕ್ಕಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಸೊನಾಲಿ ಕೊಲೆಯಾಗಿದ್ದಾಳೆ: ಸಹೋದರ ರಿಂಕು ಆರೋಪ

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ಅಥವಾ ದುಷ್ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸೆರೆಹಿಡಿಯಲು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀನಿಯರ್ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್ ನೀಡಿದ ಐಟಿ ಕಂಪನಿ ಸಿಇಒ

    ಸೀನಿಯರ್ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್ ನೀಡಿದ ಐಟಿ ಕಂಪನಿ ಸಿಇಒ

    ಚೆನ್ನೈ: ಐಟಿ ಕಂಪನಿ ಸಿಇಒ, ಸೀನಿಯರ್  ಐದು ಮಂದಿ ಉದ್ಯೋಗಿಗಳಿಗೆ ದುಬಾರಿ ಬೆಲೆ ಬಾಳುವ ಬಿಎಮ್‍ಡಬ್ಲ್ಯೂ ಕಾರ್ ಉಡುಗೊರೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕೈಬಿಡದೆ ಜೊತೆಗಿದ್ದು, ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಐವರು ಸೀನಿಯರ್ ಉದ್ಯೋಗಿಗಳಿಗೆ ಚೆನ್ನೈ ಮೂಲದ ಕಿಸ್ ಫ್ಲೋ ಇಂಕ್ (Kissflow Inc)  ಎನ್ನುವ ಐಟಿ ಕಂಪನಿ, ಸಿಇಒ ಸುರೇಶ್ ಸಂಬಂದಂ ಅವರು BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    BMW ಕಾರಿನ ಬೆಲೆ 1 ಕೋಟಿ ರೂ. ಕಾರು ಉಡುಗೊರೆಯಾಗಿ ನೀಡುವ ವಿಚಾರವನ್ನು ಗೌಪ್ಯವಾಗಿರಿಸಲಾಗಿತ್ತು. ನಂತರ ಉಡುಗೊರೆ ನೀಡುವುದಕ್ಕೆ ಕೆಲವೇ ಗಂಟೆ ಮೊದಲು ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಕಾರು ನೀಡುವ ಸಂದರ್ಭ ಉದ್ಯೋಗಿಗಳ ಕುಟುಂಬಸ್ಥರೂ ಜೊತೆಗಿದ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಅನೇಕ ಸೀನಿಯರ್ ಉದ್ಯೋಗಿಗಳು ಕಂಪನಿ ಬೆಳೆಯುವುದಿಲ್ಲವೆಂದು ಅರ್ಧಕ್ಕೆ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಅನೇಕ ಮಂದಿ ಸಂಸ್ಥೆ ತೊರೆದಿದ್ದರು. ಆದರೆ ಐವರು ಮಂದಿ ಎಂಥ ಸಮಸ್ಯೆ ಎದುರಾದಾಗಲೂ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ ಎಂದು ಸಿಇಒ ಹೇಳಿದ್ದಾರೆ.

  • ಐಟಿ ಕಂಪನಿ ಉದ್ಯಮಿ ಅನುಮಾನಾಸ್ಪದ ಸಾವು

    ಐಟಿ ಕಂಪನಿ ಉದ್ಯಮಿ ಅನುಮಾನಾಸ್ಪದ ಸಾವು

    ನೆಲಮಂಗಲ: ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಉದ್ಯಮಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸ್ವಾತಿ ಲಾಡ್ಜಿಂಗ್ ಅಂಡ್ ಬೋರ್ಡಿಂಗ್ ನಲ್ಲಿ ನಡೆದಿದೆ.

    ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಉದ್ಯಮಿ ಪ್ರದೀಪ್ ಸಿಂಗ್ ಶೇಖಾವತ್(38) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ. ಕಳೆದ ಸಂಜೆ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿಕೊಂಡು ಲಾಡ್ಜ್‍ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 104 ರಲ್ಲಿ ತಂಗಿದ್ದ ಪ್ರದೀಪ್ ಸಿಂಗ್, ಬೆಳಗ್ಗೆ 9 ಗಂಟೆಯಾದರೂ ರೂಂ ನಿಂದ ಹೊರಬಾರದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ನೆಲಮಂಗಲ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಪೊಲೀಸರು ಬಾಗಿಲು ಹೊಡೆದು ಒಳಹೋದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್

    ಉಸಿರುಗಟ್ಟಿ ಹಾಗೂ ವಿಷಸೇವನೆ ಮಾಡಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪ್ರದೀಪ್ ಸಿಂಗ್ ಶೇಖಾವತ್ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲು ಮಾಡಿದ್ದು ಪೊಲೀಸರು ಹುಡುಕಾಟದಲ್ಲಿದ್ದರು. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ನೆಲಮಂಗಲ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

  • ಐಟಿ ಕಂಪನಿ ಉದ್ಯೋಗಿಯ ಕೃಷಿ ಸಾಧನೆ – ಗ್ರಾಮದ ಜನತೆಯಿಂದ ಯುವತಿಗೆ ಶ್ಲಾಘನೆ

    ಐಟಿ ಕಂಪನಿ ಉದ್ಯೋಗಿಯ ಕೃಷಿ ಸಾಧನೆ – ಗ್ರಾಮದ ಜನತೆಯಿಂದ ಯುವತಿಗೆ ಶ್ಲಾಘನೆ

    ಚಿತ್ರದುರ್ಗ: ಇಂದಿನ ಯುಗದಲ್ಲಿ ಕೃಷಿ ಅಂದರೆ ಮೂಗು ಮುರಿಯೋರೇ ಹೆಚ್ಚು, ಅದರಲ್ಲೂ ಯುವ ಸಮೂಹ ಉದ್ಯೋಗ ಅರಸಿ ಗ್ರಾಮ ತೊರೆದು ಪಟ್ಟಣ ವಲಸೆ ಹೋಗುತ್ತಾರೆ. ಎಂಜಿನಿಯರ್ ಪದವಿಧರರಾದರೆ ಸಾಕು ರೆಸ್ಯುಮ್ ಹಿಡಿದುಕೊಂಡು ಕಚೇರಿಗಳತ್ತ ಎಸಿ ಕೆಳಗೆ ಕೂರುವ ಕೆಲಸಕ್ಕಾಗಿ ಅಳೆದಾಡುತ್ತಾರೆ. ಆದರೆ ಇವೆಲ್ಲವುಗಳಿಗೆ ವಿರುದ್ಧ ಎನ್ನುವಂತೆ ಇಂಜಿನಿಯರಿಂಗ್ ಓದಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಕೈ ತುಂಬಾ ಸಂಬಳ ಪಡೆಯುತಿದ್ದ ಚಿತ್ರದುರ್ಗ ಜಿಲ್ಲೆಯ ಯುವತಿಯೊಬ್ಬರು, ಬರದ ನಾಡಿನಲ್ಲಿ ಬಂಗಾರ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿ, ತನ್ನ ಸಹೋದರನಿಗೆ ಉದ್ಯೋಗ ಸೃಷ್ಟಿಸಿದ್ದಲ್ಲದೇ ಗ್ರಾಮದ ಹತ್ತಾರು ಜನರಿಗೆ ಕೆಲಸ ನೀಡುವ ಮೂಲಕ ರೈತ ಸಂಕುಲಕ್ಕೆ ಮಾದರಿಯಾಗಿದ್ದಾರೆ.

    ಬರದನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ರೋಜಾ ರೆಡ್ಡಿ ಎಂಬ ಯುವತಿ ಇಂಜಿನಿಯರಿಂಗ್ ಓದಿ, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಎದುರಾದ ಲಾಕ್‍ಡೌನ್ ಸಂಕಷ್ಟದಿಂದ ಮನೆ ಸೇರಿದ ಯುವತಿ ತನ್ನ ತಂದೆ ಹಾಗು ಸಹೋದರನೊಂದಿಗೆ ಸೇರಿಕೊಂಡು ಸಾವಯವ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮೊದಲೇ ನೀರಿನ ಕೊರತೆಯಿಂದ ಬಳಲುತಿದ್ದ ಗ್ರಾಮದಲ್ಲಿ ಮಗಳು ಕೃಷಿ ಮಾಡುತ್ತೀನಿ ಎಂಬ ನಿರ್ಧಾರಕ್ಕೆ ಪೋಷಕರು ನಿರಾಕರಿಸಿದ್ದಾರೆ. ಆಗ ತಂದೆ ತಾಯಿಗಳ ಮನವೊಲಿಸಿ ಕೃಷಿ ಮಾಡಲು ನಿರ್ಧರಿಸಿದ ಯುವತಿ ಲಾಕ್‍ಡೌನ್ ಸಮಯವನ್ನ ಕೃಷಿ ಕಾರ್ಯಗಳಿಗೆ ಬಳಸಿಕೊಂಡು, ವಿವಿಧ ಪ್ರಗತಿಪರ ರೈತರ ಜೊತೆ ಚರ್ಚಿಸಿ,ಸಾವಯವ ಕೃಷಿ ಆರಂಭಿಸಿದ್ದಾರೆ. ಬಳಿಕ ರೋಜಾ ಕೃಷಿ ಚಟುವಟಿಕೆ ನೋಡಿ ಗ್ರಾಮದ ಜನರು ಮೊದಲು ವಿರೋಧಿಸುತ್ತಾ, ಗೇಲಿ ಮಾಡಿದರು. ಆದರೂ ಸಹ, ಛಲ ಬಿಡದ ಯುವತಿ 06 ಎಕರೆ ಪ್ರದೇಶದಲ್ಲಿ 35 ತಳಿಗಳ ತರಕಾರಿ ಬೆಳೆದು ಲಕ್ಷ ಲಕ್ಷ ಆದಾಯ ಸಂಪಾದನೆ ಮಾಡಿದರು. ಇದನ್ನು ನೋಡಿದ ಗ್ರಾಮದ ಜನತೆ ಯುವತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇಂಜಿನಿಯರಿಂಗ್ ಓದಿ ಜೊತೆಗೆ ಸಾವಯುವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನು ಯುವತಿ ಹೊಂದಿದ್ದಳು. ಇಂಜಿನಿಯರಿಂಗ್ ಓದಿ ಕೃಷಿ ಮಾಡುವುದು ಬೇಡ, ಆದಾಯ ಸಿಗುವುದಿಲ್ಲ ಎಂದು ಯುವತಿ ಪೋಷರು ಉದ್ಯೋಗ ಮಾಡಲು ಬೆಂಗಳೂರಿಗೆ ಕಳಿಹಿಸಿದ್ದರು. ಒಲ್ಲದ ಮನಸಿನಿಂದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಳಿಸಿ, ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿದ್ದ ಆಕೆ ಉದ್ಯೋಗದ ಜೊತೆಗೆ ಬಿಡುವಿನ ಸಮಯದಲ್ಲಿ ಸಾವಯವ ಕೃಷಿ ಪದ್ದತಿ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಲಾಕ್‍ಡೌನ ಅವಧಿಯಲ್ಲಿ ಹೊರ ರಾಜ್ಯದ ಕೃಷಿ ಸಾಧಕರ ಸಹಕಾರ ಪಡೆದುಕೊಂಡಿದ್ದಾರೆ. ತದ ನಂತರದಲ್ಲಿ ಬೆಳಗಾವಿ, ಮಹಾರಾಷ್ಟ್ರ, ಸೇರಿದಂತೆ ಹಲವು ಭಾಗಗಳಿಂದ ತರಕಾರಿ ಸಂಬಂಧಿಸಿದ ಬಿತ್ತನೆ ಬೀಜ ತಂದು, ತಾವೇ ಕೃಷಿಯಲ್ಲಿ ತೊಡಗಿ ಇಂದು ಪ್ರತಿ ದಿನ 10 ರಿಂದ 15 ಸಾವಿರ ಆದಾಯ ಪಡೆಯುತ್ತಿದ್ದಾರೆ. ಕೃಷಿ ಸಹವಾಸ ಬೇಡವೆಂದು ಸುಮ್ಮನಾಗಿದ್ದ ತಂದೆ ಸೇರಿದಂತೆ ಸಹೋದರನಿಗೆ ಬಿಡುವಿಲ್ಲದಷ್ಟು ಕಾಯಕ ನೀಡಿದ್ದಾರೆ. ಗ್ರಾಮದ ಹತ್ತಾರು ಜನರಿಗೆ ಕೂಲಿ ಕೆಲಸವನ್ನು ನೀಡಿದ್ದಾರೆ.

    ಬರದ ನಾಡಿಲ್ಲಿ ಬಂಗಾರದ ಬೆಳೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎನಿಸಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಪ್ರತಿ ವರ್ಷ ಬರಕ್ಕೆ ತುತ್ತಾಗುತ್ತದೆ. ಅದರಲ್ಲಿಯೂ ಬರದ ಭೂಮಿಯಲ್ಲಿ ಕೃಷಿ ಚಟುವಟಿಕೆ ಸಾಧ್ಯವಾಗದ ಮಾತು ಎಂದು ಹಲವು ಜನ ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಅದನ್ನೆ ಸವಾಲಾಗಿ ಸ್ವೀಕರಿಸಿದ ಯುವತಿ ರೋಜಾ ತಮ್ಮ ಬಳಿ ಇದ್ದ 15 ಎಕರೆ ಭೂಮಿಯಲ್ಲಿ ಕೇವಲ 06 ಎಕರೆ ಜಮೀನನ್ನು ಬಳಸಿಕೊಂಡು ಸಾವಯವ ಕೃಷಿ ಮಾಡಲು, ಒಂದು ಕೊಳವೆ ಬಾವಿ ಕೊರೆಯಿಸಿದ್ದಾರೆ. ಬಳಿಕ ಜಮೀನಿಗೆ ಹನಿ ನೀರಾವರಿ ಅಳವಡಿಕೆ ಮಾಡಿಕೊಂಡು, ಪ್ರಾರಂಭದಲ್ಲಿ ಕೃಷಿಗೆ ಅಗತ್ಯವಾದ ಸಗಣಿ ಹಾಗೂ ಕೊಟ್ಟಿಗೆ ಗೊಬ್ಬರ ಹಾಕುವ ಮೂಲಕ, ಇಂದು 35 ಬಗೆಯ ಮೆಣಸಿನಕಾಯಿ, ಟೊಮ್ಯಾಟೊ, ವಿವಿಧ ತಳಿಯ ಬದನೆಕಾಯಿ, ಹೂ ಕೋಸು, ಸೇರಿದಂತೆ ದೇಶಿ ವಿದೇಶಿ ತಳಿಯ ತರಕಾರಿಗಳನ್ನು ಬೆಳೆದು ತಾವೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.

    ಆನ್‍ಲೈನ್ ಮಾರುಕಟ್ಟೆ ಪ್ರಾರಂಭಿಸಿದ ಯುವತಿ: ತಾವು ಬೆಳೆದ ತರಕಾರಿ ಮಾರಾಟ ಮಾಡಲು ಆನ್‍ಲೈನ್ ಆ್ಯಪ್ ಡೆವಲಪ್ ಮಾಡಿದ್ದಾರೆ. ಬೆಂಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಅಗತ್ಯಕ್ಕೆ ತಕ್ಕಂತೆ ಸಾವಯುವ ತರಕಾರಿ ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿ ಭಾನುವಾರ ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಕ್ಕೆ ಧಾವಿಸುವ ರೈತರಿಗೆ ಸಾವಯುವ ಕೃಷಿ ಜಾಗೃತಿ ಮೂಡಿಸಿ ತರಕಾರಿ ಮಾರಾಟ ಮಾಡಿ ಬರುತ್ತಿದ್ದಾರೆ. ಜೊತೆಗೆ ಇವರು ಬೆಳೆದ ಸಾವಯವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಹಲವು ರೈತರು ಯುವತಿ ಅಳವಡಿಸಿದ ಕೃಷಿ ಪದ್ದತಿ ವೀಕ್ಷಿಸಲು ವಿವಿಧೆಡೆಗಳಿಂದ ಬರುತ್ತಿದ್ದಾರೆ. ಜಮೀನಿಗೆ ಬರುವ ರೈತರಿಗೆ ಕೃಷಿ ಮಹತ್ವ, ವಿಧಾನ ಕುರಿತು ಮಾಹಿತಿ ಹಾಗೂ ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ನೀಡುತ್ತಿದ್ದಾರೆ.

    ಆನ್‍ಲೈನ್ ತರಕಾರಿ ಕಂಪನಿ ಸ್ಥಾಪನೆ ಉದ್ದೇಶ: ರಾಸಾಯನಿಕ ಗೊಬ್ಬರದಿಂದ ಬೆಳೆದ ತರಕಾರಿಗಳು ಆರೋಗ್ಯಕ್ಕೆ ಮಾರಕ ಎಂದು ಅರಿತ ಯುವತಿ ರೋಜಾ ಅವರು, ಜನರಿಗೆ ಸಾವಯವ ಕೃಷಿ ತರಕಾರಿ ನೀಡಲು ಹಾಗೂ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆನ್‍ಲೈನ್ ಆರ್ಗಾನಿಕ್ ಮಾರುಕಟ್ಟೆ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಈಗಾಗಲೇ ಯುವತಿ ರೈತರಿಗೆ ಸಾವಯವ ಕೃಷಿ ಉಪಯೋಗ ಹಾಗೂ ಆದಾಯ ಗಳಿಕೆಯ ಬಗ್ಗೆ ತಿಳುವಕೆ ಮೂಡಿಸುತ್ತಿದ್ದಾರೆ. ಈಕೆಯ ಕೃಷಿ ಸಾಧನೆ ನೋಡಿದ ಪೋಷಕರು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆ ವಿಚಾರವಾಗಿ ಯುವತಿಗೆ ಕುಟುಂಬ ಸಾಥ್ ನೀಡಿದೆ. ಈ ಮೂಲಕ ಮನಸಿದ್ದರೆ ಮಾರ್ಗ ಎಂಬಂತೆ ಈ ಇಂಜಿನಿಯರಿಂಗ್ ಪದವೀಧರೆ ಇತರೆ ಕೃಷಿಕರಿಗೆ ಮಾದರಿಯಾಗಿದ್ದಾರೆ.

  • ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?

    ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?

    ಬೆಂಗಳೂರು: ದೇಶದಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಇಂಟರ್ನಿಗಳಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಿಂಗಳಿಗೆ ಅಂದಾಜು 40 ಸಾವಿರಕ್ಕೂ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ.

    ಸಿಸ್ಕೊ ಇಂಡಿಯಾದಲ್ಲಿ ಇಂಟರ್ನ್‌ಗಳ ಮಾಸಿಕ ವೇತನ 49,324 ರೂ.ಇದ್ದರೆ ಅಮೆಜಾನ್‌ನಲ್ಲಿ 49,008 ರೂ. ಇದೆ ಎಂದು ಕಂಪನಿಗಳ ಉದ್ಯೋಗ, ಸಂಬಳದ ಬಗ್ಗೆ ಅಧ್ಯಯನ ನಡೆಸುತ್ತಿರುವ ಗ್ಲಾಸ್‌ಡೂರ್‌ ವೆಬ್‌ಸೈಟ್‌ ತಿಳಿಸಿದೆ.

    ಯಾವ ಕಂಪನಿ ಎಷ್ಟು?
    ಮೈಕ್ರೋಸಾಫ್ಟ್‌ 47,798 ರೂ., ಅಡೋಬ್‌ 47,719 ರೂ., ಗೂಗಲ್‌ 46,963 ರೂ, ಸ್ಯಾಮ್‌ಸಂಗ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಇಂಡಿಯಾ 42,190 ರೂ. ಸಂಬಳ ನೀಡುತ್ತದೆ.

    ಗೋಲ್ಡ್‌ ಮ್ಯಾನ್‌ ಸ್ಯಾಕ್ಸ್‌ 36,873 ರೂ., ಎನ್ವಿಡಿಯಾ 36,840 ರೂ., ಐಬಿಎಂ 34,973 ರೂ., ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ 34,562 ರೂ., ಒರಾಕಲ್‌ 32,964 ರೂ. ಹಣವನ್ನು ತಿಂಗಳ ಸಂಬಳವಾಗಿ ನೀಡುತ್ತದೆ.

    ವರ್ಷವೊಂದಕ್ಕೆ ಭಾರತದಲ್ಲಿ 600 ಮತ್ತು ಅಮೆರಿಕದಲ್ಲಿ 700 ಇಂಟರ್ನ್‌ಗಳನ್ನು ಕಂಪನಿ ನೇಮಕ ಮಾಡಿಕೊಳ್ಳುತ್ತದೆ ಎಂದು ಸಿಸ್ಕೋ ವಕ್ತಾರರು ತಿಳಿಸಿದ್ದಾರೆ. ಇಂಟರ್ನ್‌ಗಳಾಗಿ ಅರೆ ಕಾಲಿಕ ಅವಧಿಗೆ ಸೇರ್ಪಡೆಗೊಂಡರೂ ಮುಂದೆ ಬಹಳಷ್ಟು ಮಂದಿ ನಂತರ ಕಾಯಂ ಉದ್ಯೋಗಿಗಳಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ ಶೇ.70 ಮಂದಿ ಇಂಟರ್ನ್‌ಗಳು ಕಾಯಂ ಉದ್ಯೋಗಿಗಳಾಗಿದ್ದಾರೆ.

    ಪ್ರಮುಖ ಬಿ-ಸ್ಕೂಲ್‌ಗಳಿಂದ ಬರುವ 100 ಅಭ್ಯರ್ಥಿಗಳಿಗೆ ವಿಪ್ರೋ ಮಾಸಿಕ 85,000 ರೂ.ಗಳ ಸ್ಟೈಫಂಡ್‌ ನೀಡುತ್ತದೆ. ಯಾವ ಶೈಕ್ಷಣಿಕ ಸಂಸ್ಥೆಯಲ್ಲಿ ಓದಿದ್ದಾರೆ? ಅವರ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಇಂಟರ್ನಿಗಳ ಸಂಬಳ ನಿರ್ಧಾರವಾಗುತ್ತದೆ.

  • ಏಪ್ರಿಲ್ 20ರ ಬಳಿಕ ಬೆಂಗ್ಳೂರಿನಲ್ಲಿ ಐಟಿ ಕಂಪನಿಗಳು ಓಪನ್ – ಪಾಸ್ ವ್ಯವಸ್ಥೆ ರದ್ದು

    ಏಪ್ರಿಲ್ 20ರ ಬಳಿಕ ಬೆಂಗ್ಳೂರಿನಲ್ಲಿ ಐಟಿ ಕಂಪನಿಗಳು ಓಪನ್ – ಪಾಸ್ ವ್ಯವಸ್ಥೆ ರದ್ದು

    ಬೆಂಗಳೂರು: ಕೇಂದ್ರ ಸರ್ಕಾರದಿಂದ ಏಪ್ರಿಲ್ 20ರ ಬಳಿಕ ಕೆಲ ವಲಯಗಳಿಗೆ ರಿಲ್ಯಾಕ್ಸೇಷನ್ ನೀಡಲಿರುವ ಹಿನ್ನೆಲೆ ಶೇ. 50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಐಟಿ ಕಂಪನಿಗಳು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಸುಳಿವು ನೀಡಿದ್ದಾರೆ.

    ಐಟಿ ಉದ್ಯೋಗಿಗಳ ಓಡಾಟಕ್ಕೆ ಪಾಸ್ ಉದ್ಭವ ಆಗೋದಿಲ್ಲ. ಶೇ. 50ರಷ್ಟು ಐಟಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಐಟಿ ಕಂಪನಿಗಳು ಬಸ್ ವ್ಯವಸ್ಥೆ ಕೇಳಿದ್ರೆ ಮಾತ್ರ ಬಿಎಂಟಿಸಿ ಬಸ್ ಕಾಂಟ್ರೆಕ್ಟ್ ಪಡೆದು ಸೆನಿಟೈಸ್ ಮಾಡಿದ ಬಸ್ ಐಟಿ ಕಂಪನಿಗಳಿಗೆ ನೀಡುತ್ತೇವೆ. ಒಟ್ಟಾರೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಇದು ಎಷ್ಟು ದಿನ ಇರಲಿದೆ ಎನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

    ಏಪ್ರಿಲ್ 20ರ ಬಳಿಕ ಜನರ ಓಡಾಟಕ್ಕೆ ಪಾಸ್ ಇರೋದಿಲ್ಲ. ಆದ್ರೆ ಲಾಕ್‍ಡೌನ್ ಯಥಾಪ್ರಕಾರ ಇರುತ್ತದೆ. ಯಾವ ಯಾವ ಆಫೀಸ್‍ಗಳು ತೆರೆಯಬೇಕೋ ಅದು ತೆರೆಯುತ್ತದೆ. ಸಾರ್ವಜನಿಕ ಸಾರಿಗೆ ಸೇವೆ ಇರುವುದಿಲ್ಲ. ಈಗಾಗಲೇ ಕೇಂದ್ರದ ಮಾರ್ಗಸೂಚಿಯಲ್ಲಿ ಯಾವ ವಾಹನದಲ್ಲಿ ಎಷ್ಟು ಮಂದಿ ಓಡಾಡಬೇಕು ಎನ್ನುವ ನಿಯಮವನ್ನು ತಿಳಿಸಲಾಗಿದೆ. ಅಲ್ಲದೇ ಅನುಮತಿ ಇರದ ಕಚೇರಿಗಳು, ಮಾಲ್‍ಗಳು ತೆರೆಯುವಂತಿಲ್ಲ. ಹೀಗಾಗಿ ಏಪ್ರಿಲ್ 20ರ ಬಳಿಕ ಪಾಸ್‍ಗಳು ಅವಶ್ಯಕತೆ ಇರಲ್ಲ ಎಂದು ಡಿಸಿಎಂ ಹೇಳಿದ್ದಾರೆ.

    ರ‍್ಯಾಪಿಡ್ ಟೆಸ್ಟ್ ಕಿಟ್ ಬಗ್ಗೆ ಪ್ರತಿಕ್ರಿಯಿಸಿ, ಮೊದಲ ಹಂತದಲ್ಲಿ 2 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಆರ್ಡರ್ ಮಾಡಿದ್ದೀವಿ. ಏಪ್ರಿಲ್ ಅಂತ್ಯಕ್ಕೆ ಕಿಟ್‍ಗಳು ಲಭ್ಯವಾಗಲಿದೆ. ರ‍್ಯಾಪಿಡ್ ಟೆಸ್ಟ್ ಕಿಟ್ ಚೀನಾದಿಂದ ಬರಬೇಕಿದೆ. ಈ ತಿಂಗಳ ಅಂತ್ಯಕ್ಕೆ ಒಂದಿಷ್ಟು ಕಿಟ್ ಬರಲಿದೆ, ಬಳಿಕ ಬಾಕಿ ಉಳಿದ ಕಿಟ್ ಬರುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.