Tag: ಐಟಿ ಅಧಿಕಾರಿ

  • ಪುನೀತ್ ವಿರುದ್ಧ ತೆರಿಗೆ ವಂಚನೆ ಮಾಡಿರುವ ಆರೋಪ- ಮುಂದುವರಿದ ಐಟಿ ದಾಳಿ

    ಪುನೀತ್ ವಿರುದ್ಧ ತೆರಿಗೆ ವಂಚನೆ ಮಾಡಿರುವ ಆರೋಪ- ಮುಂದುವರಿದ ಐಟಿ ದಾಳಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಇಂದು ಕೂಡ ದಾಳಿ ಮುಂದಿವರಿದಿದೆ.

    ಕೆಲವು ದಾಖಲಾತಿ ಪರಿಶೀಲನೆ ಬಾಕಿ ಇರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಬಂದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಪುನೀತ್ ವಿರುದ್ಧ ಸಾಕಷ್ಟು ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಪುನೀತ್ ನಿವಾಸದ ಮೇಲೆ ಗುರುವಾರ ದಾಳಿ ಐಟಿ ಅಧಿಕಾರಿಗಳು ನಡೆಸಿದ್ದರು.

    ಬಿಗ್ ಬಜೆಟ್ ಮೂವಿಗಳಿಂದ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಆದರೆ ಆದಾಯ ತೆರಿಗೆ ಕಟ್ಟದೇ ವಂಚಿಸಿದರು ಎಂಬ ಆರೋಪ ಕೇಳಿಬಂದಿತ್ತು. ಪುನೀತ್ ಅವರು ನಟಸೌರ್ವಭೌಮ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಿದ್ದಾರೆ.

    ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಪುನೀತ್ ಮನೆಗೆ ಬಂದಿದ್ದಾರೆ. ತಡರಾತ್ರಿ ಪರಿಶೀಲನೆ ಮುಗಿತು ಎಂದು ಐಟಿ ಅಧಿಕಾರಿಗಳು ತೆರಳಿದ್ದರು. ಬಳಿಕ ಮಧ್ಯರಾತ್ರಿ ಪುನೀತ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಧಿಕಾರಿಗಳು ಪುನೀತ್ ಮನೆಯಲ್ಲೆ ಬೀಡು ಬಿಟ್ಟಿದ್ದಾರೆ. ಅಧಿಕಾರಿಗಳು ವಾಹನವನ್ನು ದೂರ ನಿಲ್ಲಿಸಿ ಮನೆಯ ಒಳಗೆ ಹೋಗಿದ್ದಾರೆ. ಅಲ್ಲದೇ ಅವರ ವಾಹನ ಮತ್ತೆ ಪುನೀತ್ ಮನೆ ಬಳಿ ಬಂದಾಗ ಅಧಿಕಾರಿಗಳು ಒಳಗಿರೋದು ಪತ್ತೆಯಾಗಿದೆ. ಅಧಿಕಾರಿಗಳು ಪುನೀತ್ ಮನೆ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ಪುನೀತ್ ಮನೆಗೆ ಮತ್ತೊಬ್ಬ ಐಟಿ ಅಧಿಕಾರಿ ಎಂಟ್ರಿ ನೀಡಿದ್ದಾರೆ. ಈಗಾಗಲೇ ಮೂರು ಜನ ಐಟಿ ಅಧಿಕಾರಿಗಳು ಮನೆ ಒಳಗಡೆ ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಮತ್ತೊಬ್ಬ ಐಟಿ ಅಧಿಕಾರಿ ಎಂಟ್ರಿ ನೀಡಿದ್ದು, ಎಲ್ಲ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ಅಧಿಕಾರಿಗಳಿಗಾಗಿ ಮುಂಬೈನಿಂದ ಬರುತ್ತಿದ್ದಾರೆ ರಾಖಿ ಬಾಯ್!

    ಐಟಿ ಅಧಿಕಾರಿಗಳಿಗಾಗಿ ಮುಂಬೈನಿಂದ ಬರುತ್ತಿದ್ದಾರೆ ರಾಖಿ ಬಾಯ್!

    ಬೆಂಗಳೂರು: ಸ್ಯಾಂಡಲ್‍ವುಡ್ ನಟರ ಮನೆಗೆ ಐಟಿ ಶಾಕ್ ನೀಡಿದೆ. ಐಟಿ ದಾಳಿ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರು ಮನೆಯಲ್ಲಿ ಇಲ್ಲದ ಕಾರಣ ತಕ್ಷಣ ಮನೆಗೆ ಬರುವಂತೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಯಶ್ ಮನೆಯಲ್ಲಿ ಇರಲಿಲ್ಲ. ಹಾಗಾಗಿ ಅಧಿಕಾರಿಗಳು ಯಶ್ ಅವರಿಗೆ ತಕ್ಷಣ ಮನೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಯಶ್ ಮುಂಬೈಯಲ್ಲಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇಂದು ಮುಂಜಾನೆಯಿಂದ ಐಟಿ ಅಧಿಕಾರಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದಲ್ಲಿ ತಾಯಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಯಶ್ ತಾಯಿ ಗೊತ್ತಿಲ್ಲ ಎನ್ನುವ ಮಾತು ಬಿಟ್ಟರೆ ಬೇರೆ ಏನೂ ಉತ್ತರ ನೀಡುತ್ತಿಲ್ಲ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ. ಅಲ್ಲದೇ ಯಶ್ ಅವರ ಸಹೋದರಿಯನ್ನು ಪ್ರಶ್ನಿಸಿದ್ದರೆ, ನಾನು ಬೇರೆ ಕಡೆ ಇರುವುದು ಅವರ ವ್ಯವಹಾರ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಧಿಕಾ ಮನೆಯಲ್ಲಿ ಒಟ್ಟು ಆರು ಜನ ಐಟಿ ಅಧಿಕಾರಿಗಳಿದ್ದು ತಂದೆ- ತಾಯಿ ಹೆಸರಿನಲ್ಲಿರುವ ಆಸ್ತಿ ಪತ್ರ ಕಲೆ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನಗೇನು ಗೊತ್ತಿಲ್ಲ – ಐಟಿ ಅಧಿಕಾರಿಗಳ ಪ್ರಶ್ನೆಗೆ ಯಶ್ ತಾಯಿ ಉತ್ತರ

    ನನಗೇನು ಗೊತ್ತಿಲ್ಲ – ಐಟಿ ಅಧಿಕಾರಿಗಳ ಪ್ರಶ್ನೆಗೆ ಯಶ್ ತಾಯಿ ಉತ್ತರ

    ಬೆಂಗಳೂರು: ಬೆಳ್ಳಂಬೆಳ್ಳಗೆ ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಅವರ ತಾಯಿ, ಸಹೋದರಿ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ನಟ ಯಶ್ ಅವರ ಮನೆ, ತಾಯಿ, ಸಹೋದರಿ, ಪತ್ನಿ ರಾಧಿಕಾ ಪಂಡಿತ್ ತಂದೆಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.

    ಇಂದು ಮುಂಜಾನೆಯಿಂದ ಐಟಿ ಅಧಿಕಾರಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದಲ್ಲಿ ತಾಯಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಯಶ್ ತಾಯಿ ಗೊತ್ತಿಲ್ಲ ಎನ್ನುವ ಮಾತು ಬಿಟ್ಟರೆ ಬೇರೆ ಏನೂ ಉತ್ತರ ನೀಡುತ್ತಿಲ್ಲ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ. ಅಲ್ಲದೇ ಯಶ್ ಅವರ ಸಹೋದರಿಯನ್ನು ಪ್ರಶ್ನಿಸಿದ್ದರೆ, ನಾನು ಬೇರೆ ಕಡೆ ಇರುವುದು ಅವರ ವ್ಯವಹಾರ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಧಿಕಾ ಮನೆಯಲ್ಲಿ ಒಟ್ಟು ಆರು ಜನ ಐಟಿ ಅಧಿಕಾರಿಗಳಿದ್ದು ತಂದೆ- ತಾಯಿ ಹೆಸರಿನಲ್ಲಿರುವ ಆಸ್ತಿ ಪತ್ರ ಕಲೆ ಹಾಕುತ್ತಿದ್ದಾರೆ.

    ಇದೇ ವೇಳೆ ರಾಧಿಕಾ ನಿವಾಸಕ್ಕೆ ಇಬ್ಬರು ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅಂತಾ ಶರ್ಟ್ ಧರಿಸಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಂದಿನ ಚಿತ್ರದ ಸಂಭಾವನೆ ಎಷ್ಟು? – ಶಿವಣ್ಣರನ್ನು ವಿಚಾರಿಸುತ್ತಿರುವ ಐಟಿ ಅಧಿಕಾರಿಗಳು

    ಹಿಂದಿನ ಚಿತ್ರದ ಸಂಭಾವನೆ ಎಷ್ಟು? – ಶಿವಣ್ಣರನ್ನು ವಿಚಾರಿಸುತ್ತಿರುವ ಐಟಿ ಅಧಿಕಾರಿಗಳು

    ಬೆಂಗಳೂರು: ಇಂದು ಬೆಳಗ್ಗೆ ಸುಮಾರು ಎಂಟು ಗಂಟೆ ಸುಮಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ನಡೆಸಿದ ಬಳಿಕ ಐಟಿ ಅಧಿಕಾರಿಗಳು ಶಿವಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಶ್ರೀಮುತ್ತು ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಹಿಂದಿನ ಚಿತ್ರದ ಸಂಭಾವನೆ ಎಷ್ಟು? ಎಷ್ಟು ಸಂಭಾವನೆ ಪಡೆದುಕೊಂಡಿದ್ದೀರಿ? ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನೀಡುವಂತೆ ಅಧಿಕಾರಿಗಳು ಶಿವಣ್ಣನಿಗೆ ಸೂಚಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.

    ಮನೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಮಹಿಳಾ ಅಧಿಕಾರಿ ಆಗಮಿಸಿದ್ದಾರೆ. ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಐಟಿ ದಾಳಿ ನಡೆಸಿದ್ದಾರೆ. ದಾಳಿ ನಂತರ ಭದ್ರತೆ ಒದಗಿಸುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv