Tag: ಐಟಿ ಅಧಿಕಾರಿ

  • 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಟಿ ಅಧಿಕಾರಿ

    5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಟಿ ಅಧಿಕಾರಿ

    ಬೆಳಗಾವಿ: ಚಿನ್ನಾಭರಣದ ಅಂಗಡಿ ಮಾಲೀಕನಿಂದ 5 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿಯೊಬ್ಬನನ್ನು (IT Officer) ರೆಡ್‍ಹ್ಯಾಂಡ್ ಆಗಿ ಪೊಲೀಸರು (Police) ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಐಟಿ ಅಧಿಕಾರಿ ಅವಿನಾಶ್ ಟೊನಪೆ ಎಂಬಾತ ಚಿಕ್ಕೋಡಿಯ (Chikkodi) ಅಂಕಲಿಯ ಪರಶುರಾಮ್ ಬಂಕಾಪುರ ಎಂಬವರ ಬಳಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪರಶುರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಯೋಜನೆ ರೂಪಿಸಿದ್ದ ಪೊಲೀಸರು, ಖಾಸಗಿ ಡೆಂಟಲ್ ಕಾಲೇಜ್ ಮೈದಾನದಲ್ಲಿ ಅಧಿಕಾರಿ ಹಣ ಪಡೆಯುತ್ತಿದ್ದ ವೇಳೆ ಸಿನಿಮೀಯ ರೀತಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಅಧಿಕಾರಿಯನ್ನು ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ.

    ನಾಲ್ಕು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿ ಅವಿನಾಶ್ ಟೋನಪಿ ನೇತೃತ್ವದ ತಂಡ ಅಂಕಲಿ ಗ್ರಾಮದಲ್ಲಿರುವ ಬಂಕಾಪುರ ಚಿನ್ನದಂಗಡಿ ಮೇಲೆ ದಾಳಿ ಮಾಡಿತ್ತು. ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಟಿ ಅಧಿಕಾರಿ ಎಂದು ವಂಚಿಸಿ ಹಣ ದೋಚುತ್ತಿದ್ದವ ಅರೆಸ್ಟ್

    ಐಟಿ ಅಧಿಕಾರಿ ಎಂದು ವಂಚಿಸಿ ಹಣ ದೋಚುತ್ತಿದ್ದವ ಅರೆಸ್ಟ್

    – ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ

    ಕಾರವಾರ: ತಾನೊಬ್ಬ ಐಟಿ ಅಧಿಕಾರಿ ಎಂದು ಹೇಳಿಕೊಂಡು ರಾಜ್ಯದ ನಾನಾ ಪ್ರದೇಶದ ಜನರಿಗೆ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿದ ವ್ಯಕ್ತಿಯನ್ನು ಕಾರವಾರ ನಗರ ಪೊಲೀಸರು ಹಣದ ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹಾವೇರಿ ಮೂಲದ ಪ್ರಶಾಂತ್ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಪೊಲೀಸರಿಂದ ಬಂಧನಕ್ಕೊಳಗಾದವನು. ಈತ ಕಾರವಾರದ ವಿನೋದ್ ನಾಯ್ಕ ಎಂಬವರಿಗೆ ತಾನೊಬ್ಬ ಐಟಿ ಅಧಿಕಾರಿ ಪೆಪ್ಸಿ ಕಂಪನಿಯಲ್ಲಿ ಡಿಸ್ಟ್ರಿಬೂಶನ್ ಕೆಲಸ ಕೊಡಿಸುತ್ತೇನೆ. 15 ಲಕ್ಷ ಕಂಪನಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿ ಒಂದು ಲಕ್ಷ ಹಣ ಮುಂಗಡ ಪಡೆದು ಮೋಸ ಮಾಡಿರುತ್ತಾನೆ.

    ಕಾರವಾರದಲ್ಲಿ ಹಲವರಿಗೆ ಮೋಸ ಮಾಡಿದ್ದಲ್ಲದೇ ಕೊಪ್ಪಳ, ಮಂಗಳೂರು, ಉಡುಪಿ, ಮೈಸೂರು, ಹಾವೇರಿ, ಶಿವಮೊಗ್ಗಗಳಲ್ಲಿ ಸಹ ಜನರಿಗೆ ಸೈಟ್, ಡಿಸ್ಟ್ರಿಬ್ಯೂಷನ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿ ಪರಾರಿಯಾಗಿದ್ದ. ಈತ ಕಾರವಾರದಲ್ಲಿ ಹಲವರಿಂದ ದೋಚಿದ ಹಣವನ್ನು ಕೊಂಡೊಯ್ಯುತ್ತಿರುವ ವೇಳೆ ಕಾರವಾರ ನಗರದ ಪಿಎಸ್‍ಐ ಸಂತೋಷ್ ಕುಮಾರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನಿಂದ 5,95,000 ರೂ. ನಗದು, 13,00,000 ಮೌಲ್ಯದ 327 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ದುಬಾರಿ ಫೋರ್ಡ್ ಕಾರ್ ವಶಕ್ಕೆ ಪಡೆಯಲಾಗಿದೆ.

  • ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹಾಸನ: ದ್ವಿಚಕ್ರ ವಾಹನದಲ್ಲಿ ಸುಮಾರು 25 ಲಕ್ಷ ರೂ. ಹಣದೊಂದಿಗೆ ತೆರಳುತ್ತಿದ್ದ ಯುವಕನನ್ನು ಐಟಿ ಅಧಿಕಾರಿಗಳು ಹೊಳೆನರಸೀಪುರ ಪಟ್ಟಣದಲ್ಲಿ ವಶಕ್ಕೆ ಪಡೆದಿದ್ದಾರೆ.

    ಹಳೇ ಮೈಸೂರು ಕಡೆಯಿಂದ 30 ವರ್ಷದ ಯುವಕೊಬ್ಬ ಹೊಳೆನರಸೀಪುರ ಕಡೆಗೆ ಭಾರೀ ಹಣದೊಂದಿಗೆ ತೆರಳುತ್ತಿರುವ ಖಚಿತ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಮಾಹಿತಿ ಲಭಿಸುತ್ತಿದಂತೆ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳ ತಂಡ ಯುವಕನನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದೆ. ಆ ವೇಳೆ ಯುವಕನ ಬಳಿ 25 ಲಕ್ಷ ರೂ. ಹಣ ಪತ್ತೆಯಾಗಿದೆ.

    ಬೆಂಗಳೂರು ಮೂಲದ ರಿಜಿಸ್ಟರ್ ನಂಬರ್ ಇರುವ ಬೈಕಿನಲ್ಲಿ ಯುವಕ ತೆರಳುತ್ತಿದ್ದ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ಪ್ರಶ್ನಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಯುವಕ ಇದು ಅಡಿಕೆ ಮಾರಾಟ ಮಾಡಿದ ಹಣ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಹಾಸನ ಜಿಲ್ಲಾಧಿಕಾರಿ, ಎಸ್‍ಪಿ ವರ್ಗಾವಣೆ ಮಾಡಿದ ಬಳಿಕ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅವರ ವಿರುದ್ಧ ಮಾತನಾಡುವ ನಾಯಕರನ್ನೇ ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ದಾಳಿ ನಡೆಸಿದೆ. ಬಿಜೆಪಿ ಹೇಳಿದಂತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇತ್ತ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು , ಹಾಸನದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಪೂರ್ಣಗೊಳ್ಳದೆಯೇ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಐಟಿ ದಾಳಿ ನಡೆಸಿದೆ ವಿನಃ ಬಿಜೆಪಿ ಯಾವುದೇ ರೀತಿಯಲ್ಲಿ ಇದರಲ್ಲಿ ತೊಡಗಿಲ್ಲ. ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಲು ಅರ್ಹವಾಗಿದೆ. ಅದರಂತೆ ದಾಳಿ ನಡೆದಿದೆ ಎಂದು ಅಷ್ಟೇ ಎಂದು ಹೇಳಿದ್ದರು.

  • ಐಟಿ ರೇಡ್ ಅಂತ್ಯ- ದಾಳಿ ನಡೆಸಿ ‘ತಪ್ಪಾಯ್ತು’ ಎಂದು ಅಧಿಕಾರಿಗಳಿಂದ ಕ್ಷಮೆ!

    ಐಟಿ ರೇಡ್ ಅಂತ್ಯ- ದಾಳಿ ನಡೆಸಿ ‘ತಪ್ಪಾಯ್ತು’ ಎಂದು ಅಧಿಕಾರಿಗಳಿಂದ ಕ್ಷಮೆ!

    ಬೆಂಗಳೂರು: ಚುನಾವಣಾ ಹೊತ್ತಲ್ಲಿಯೇ ಮೊದಲ ಹಂತದ ಮತದಾನ ನಡೆಯುವ ಸುಮಾರು 6 ಜಿಲ್ಲೆಗಳಲ್ಲಿ ನಡೆದ ಐಟಿ ರೇಡ್ ಅಂತ್ಯವಾಗಿದೆ.

    ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಕನಕಪುರ, ಚಿಕ್ಕಮಗಳೂರಿನಲ್ಲಿ ತಲಾಶ್ ನಡೆದಿತ್ತು. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರರೊಬ್ಬರ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

    ಗುರುವಾರ ರಾತ್ರಿಯೇ ತಲಾಶ್ ಮುಗಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಐಟಿ ತಂಡ ದಾಳಿ ನಡೆಸಿದ ಕಡೆಗಳಲ್ಲಿ ಬ್ಯಾಗ್‍ಗಳಲ್ಲಿ ದಾಖಲೆ ಹೊತ್ತುಕೊಂಡು ಹೋಗಿದ್ದಾರೆ. ಸಚಿವ ರೇವಣ್ಣ ಆಪ್ತ ಗುತ್ತಿಗೆದಾರ ಶಿವಮೂರ್ತಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅವರ ಮನೆಯಲ್ಲಿ 50,000 ನಗದು ಇತ್ತು. ಆಗ ಅಧಿಕಾರಿಗಳು ಆ ಹಣವನ್ನು ವಾಪಸ್ ಕೊಟ್ಟು ಹೋಗಿದ್ದಾರೆ. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರನ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುತ್ತಿಗೆದಾರ ಶಿವಮೂರ್ತಿ ಆರೋಪ ಮಾಡಿದ್ದಾರೆ.

    ದಾಳಿ ವೇಳೆ ಎಷ್ಟು ದುಡ್ಡು ಸಿಕ್ಕಿದೆ. ಎಷ್ಟು ಬಂಗಾರ ಸಿಕ್ಕಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ಇಂದು ಅಧಿಕೃತವಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ. ಮೂಲಕಗಳ ಪ್ರಕಾರ ಐಟಿ ಬೇಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ.

  • ಐಟಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದರೆ ಅದು ತಪ್ಪು: ಮಾಜಿ ಸಚಿವ

    ಐಟಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದರೆ ಅದು ತಪ್ಪು: ಮಾಜಿ ಸಚಿವ

    ಕೊಪ್ಪಳ: ಜೆಡಿಎಸ್ ಮುಖಂಡರ, ಅಧಿಕಾರಿಗಳ ಮನೆಗಳ ಮೇಲೆ ಐಟಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದರೆ ಅದು ತಪ್ಪು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾನೂನಿನಲ್ಲಿ ಆದಾಯ ತೆರಿಗೆ ಇಲಾಖೆಯವರಿಗೆ ದಾಳಿ ಮಾಡಲು ಅವಕಾಶ ಇದೆ. ಆದಷ್ಟೂ ನಾವು ಜಾಗೂರಕರಾಗಿದ್ದು, ಕಾನೂನನ್ನು ಪರಿಪಾಲನೆ ಮಾಡಬೇಕು. ನಾನಂತೂ ಕಾನೂನನ್ನು ಪರಿಪಾಲನೆ ಮಾಡುತ್ತೇನೆ. ಐಟಿಯವರು ಯಾವ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದರು.

    ಒಂದೇ ಪಕ್ಷದವರ ಮಾಹಿತಿ ಬಂದಿದೆ ಅಂದರೆ ಅದಕ್ಕೆ ಸ್ಪಷ್ಟನೆ ನೀಡಲಿ. ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಅನಿಸಿರಬಹುದು ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು. ಚುನಾವಣೆ ಸಮಯದಲ್ಲಿ ಐಟಿ ದಾಳಿ ಆಗುತ್ತದೆ ಎಂದರೆ ಅದರ ಬಗ್ಗೆ ನಾನು ಹೇಳಲು ಇಷ್ಟಪಡುವುದಿಲ್ಲ. ಐಟಿ ಅಧಿಕಾರಿಗಳು ಮಾಹಿತಿ ಪ್ರಕಾರ ಎಲ್ಲರ ಮೇಲೂ ದಾಳಿ ಮಾಡುತ್ತಾರೆ. ಅದಕ್ಕೆ ಏನು ಮಾಡಲು ಆಗುತ್ತದೆ ಎಂದು ಅವರು ಪ್ರಶ್ನಿಸಿದ್ರು.

  • ಐಟಿ ವಿಚಾರಣೆಗೆ ಹಾಜರಾದ ಪವರ್ ಸ್ಟಾರ್

    ಐಟಿ ವಿಚಾರಣೆಗೆ ಹಾಜರಾದ ಪವರ್ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ, ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು, ಇದೀಗ ದಾಳಿಗೆ ಒಳಗಾಗಿದ್ದ ಒಬ್ಬೊಬ್ಬರನ್ನೇ ಐಟಿ ಕಚೇರಿಗೆ ಕರೆಸಿ ಡ್ರಿಲ್ ಮಾಡುತ್ತಿದ್ದಾರೆ. ಬುಧವಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಬುಧವಾರ ಹಾಜರಾಗಿದ್ದರು.

    ಸ್ಯಾಂಡಲ್‍ವುಡ್ ಸ್ಟಾರ್ ನಟ, ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು, ಈಗ ಒಬ್ಬೊಬ್ಬರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೂ ಕೂಡ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಬುಧವಾರ ಪುನೀತ್ ರಾಜ್‍ಕುಮಾರ್ ತಮ್ಮ ಆಡಿಟರ್ ಜೊತೆ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸಂಜೆ ಮೂರು ಮುಕ್ಕಾಲು ಗಂಟೆಗೆ ಬಂದಿದ್ದ ಪುನೀತ್ ಅವರಿಗೆ ಐಟಿ ಅಧಿಕಾರಿಗಳು ಸತತ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

    ಐಟಿ ಅಧಿಕಾರಿಗಳ ದಾಳಿ ವೇಳೆ ಪುನೀತ್ ರಾಜ್‍ಕುಮಾರ್ ಗೆ ಪಿಆರ್ ಕೆ ಪ್ರೊಡಕ್ಷನ್ ಹೌಸ್, ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್, ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಸೇರಿದಂತೆ ಜಾಹಿರಾತಿನಿಂದ ಬಂದ ಆದಾಯದ ಮೂಲಗಳ ಕುರಿತಾಗಿ ಕೆಲ ಪ್ರಶ್ನೆಗಳನ್ನು ಪುನೀತ್ ಅವರಿಗೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧಿತ ಪ್ರಶ್ನೆಗಳಿಗೆ ತಮ್ಮ ಆಡಿಟರ್ ಮೂಲಕ ಅಗತ್ಯ ದಾಖಲೆ ಪೂರೈಸಿರುವ ಮಾಹಿತಿ ಸಹ ಲಭ್ಯವಾಗಿದ್ದು, ಈಗಾಗಲೇ ಪುನೀತ್ ರಾಜ್‍ಕುಮಾರ್ ನೀಡಿರುವ ದಾಖಲೆಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅಗತ್ಯ ಬಿದ್ದರೆ, ಮತ್ತೆ ತಿಳಿಸಲಾಗುವುದು ಅಂತಾ ಹೇಳಿ ಕಳುಹಿಸಿದ್ದಾರೆ. ನಮ್ಮ ಮನೆಯಲ್ಲಿ ಯಾವುದೇ ಅಕ್ರಮ ಆಸ್ತಿ ಪತ್ತೆಯಾಗಿಲ್ಲ, ಐಟಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ದಾಖಲೆ ನೀಡಿದ್ದೇನೆ ಎಂದು ಪುನೀತ್ ತಿಳಿಸಿದ್ದಾರೆ.

    ಸದ್ಯದ ಮಟ್ಟಿಗೆ ಪುನೀತ್ ಅವರ ವಿಚಾರಣೆ ಮುಗಿದಿದ್ದು, ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಗೂ ಕೂಡ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ಅಂತ್ಯ: ಯಶ್ ಮೊದಲ ಪ್ರತಿಕ್ರಿಯೆ

    ಐಟಿ ದಾಳಿ ಅಂತ್ಯ: ಯಶ್ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಬರೋಬ್ಬರಿ 40 ಗಂಟೆ ನಡೆದಿದ್ದ ಐಟಿ ರೇಡ್ ಈಗ ಅಂತ್ಯವಾಗಿದೆ. ದಾಳಿಯ ಬಳಿಕ ಯಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳು ನಿರ್ಮಾಪಕ ವಿಜಯ್ ಕಿರಂಗದೂರ್ ಮತ್ತು ತಿಮ್ಮೇಗೌಡ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಂತ ಇದು ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ದಿನ ಮನೆಯಲ್ಲೇ ಇರಬೇಕಾಗಿದ್ದರಿಂದ ರಾಧಿಕಾ ಮತ್ತೆ ಮಗುವನ್ನು ನನಗೆ ಬಿಟ್ಟು ಇರಲು ಕಷ್ಟವಾಯಿತು. ಅಲ್ಲದೇ ಮಗುವಿಗೆ ಸ್ನಾನ ಮಾಡಿಸಬೇಕೆಂದು ಅಮ್ಮ ಚಿಂತೆಯಲ್ಲಿದ್ದರು. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ನಾವು ಕೂಡ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸತತ 2 ದಿನ ರಾಧಿಕಾ ತಂದೆ ಮನೆಯಲ್ಲಿ ನಡೆದ ಐಟಿ ದಾಳಿ ಮುಕ್ತಾಯ

    ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಪ್ರೋಸಿಜರ್ ಮಾಡಿದ್ದಾರೆ. ಕೆಲವು ಉಹಾಪೋಹಾಗಳನ್ನು ಮಾಡಬೇಡಿ. ಕೆಲವರು ಇಂತಹ ಅವಕಾಶಕ್ಕಾಗಿ ಕಾಯುಕೊಂಡು ಇರುತ್ತಾರೆ. ಊಹಾಪೋಹಗಳ ಮೇಲೆ ಕೆಲ ಮಾಧ್ಯಮಗಳು ವರದಿ ಬಿತ್ತರಿಸಿವೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ಐಟಿ ದಾಳಿ ಅಂತ್ಯವಾದ ಬಳಿಕ ಪತ್ನಿ ಮತ್ತು ಮಗಳ ಜೊತೆಗೆ ಕೆಲ ಸಮಯ ಕಳೆದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿರುವ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹುಬ್ಬಳ್ಳಿಗೆ ತೆರೆಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್

    ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಹಾಗೂ ಶಿವರಾಜ್‍ಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ಅಂತಿಮ ಹಂತಕ್ಕೆ ತಲುಪಿದೆ.

    ಪುನೀತ್ ರಾಜ್‍ಕುಮಾರ್ ಅವರ ಮನೆಯಲ್ಲಿರುವ ಐಟಿ ಅಧಿಕಾರಿಗಳು ಇನ್ನೂ ಕೆಲವೇ ಗಂಟೆಗಳಲ್ಲಿ ಹೊರಡಲಿದ್ದಾರೆ. ತಮಗೆ ಬೇಕಾದ ಕಾಗದ ಪತ್ರಗಳು, ದಾಖಲೆಗಳು ಹಾಗೂ ಹೂಡಿಕೆ ಪತ್ರಗಳನ್ನು ಅಧಿಕಾರಿಗಳು ಪ್ಯಾಕ್ ಮಾಡಿಕೊಂಡಿದ್ದಾರೆ. ಪುನೀತ್ ಹಾಗೂ ಅವರ ಪತ್ನಿ ಅಶ್ವಿನಿ ಸಮ್ಮುಖದಲ್ಲಿ ಐಟಿ ಅಧಿಕಾರಿಗಳು ಬ್ಯಾಂಕ್ ಸ್ಟೇಟ್‍ಮೆಂಟ್ ಬಗ್ಗೆ ಮಾಹಿತಿ ಪಡೆದುಕೊಂಡು ಪಂಚನಾಮೆ ಮಾಡುತ್ತಿದ್ದಾರೆ.  ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

    ಐಟಿ ಅಧಿಕಾರಿಗಳು ಪಂಚನಾಮೆ ಪಡೆದ ಬಳಿಕ ದಾಳಿಯ ಅಂತಿಮ ಪ್ರಕ್ರಿಯೆ ಮುಗಿಸಿ ಹೊರಡಲಿದ್ದಾರೆ. ದಾಳಿ ಬಗ್ಗೆ ಪುನೀತ್ ಹಾಗೂ ಪತ್ನಿಗೆ ವಿವರಣೆ ನೀಡಿ, ಅವರಿಂದ ಕೆಲವು ಕಾಗದಗಳಿಗೆ ಸಹಿ ಪಡೆದು ಹೊರಡಲಿದ್ದಾರೆ. ಅಲ್ಲದೇ ಪುನೀತ್ ಅವರು ‘ನಟಸಾರ್ವಭೌಮ’ ಚಿತ್ರದ ಆಡಿಯೋ ಲಾಂಚ್‍ಗಾಗಿ ನಾಳೆ ಹುಬ್ಬಳ್ಳಿಗೆ ತೆರಳಲು ಐಟಿ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

    ಪಂಚನಾಮೆ ಮಾಡುವ ಸಲುವಾಗಿ ಐಟಿ ಇಲಾಖೆ ಜಂಟಿ ಆಯುಕ್ತರು ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಆಗಮಿಸಿದ್ದಾರೆ. ಜಂಟಿ ಆಯುಕ್ತರ ಸಮ್ಮುಖದಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಯುತ್ತದೆ. ಪಂಚನಾಮೆ ಮುಗಿದ ಬಳಿಕ ಐಟಿ ಆಧಿಕಾರಿಗಳು ಪುನೀತ್ ಅವರ ಮನೆಯಿಂದ ಹೊರಡಲಿದ್ದಾರೆ. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!

    ಇತ್ತ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯ ಐಟಿ ರೇಡ್ ಕೊನೆಯ ಹಂತಕ್ಕೆ ತಲುಪಿದೆ. 10 ಜನ ಐಟಿ ಅಧಿಕಾರಿಗಳ ತಂಡ ಬೆಳಗ್ಗಿನಿಂದ ನಿರಂತರ ವಿಚಾರಣೆ ಮಾಡುತ್ತಿದೆ. ಮನೆಯಲ್ಲಿನ ಕಂಪ್ಯೂಟರ್ ಹಾರ್ಡ್ ಡ್ರೈವ್ ಸೇರಿದಂತೆ ಅನೇಕ ದಾಖಲೆಗಳ ಅಧಿಕಾರಿಗಳು ಸಾಫ್ಟ್ ಕಾಪಿ ಪಡೆದಿದ್ದಾರೆ. ಅಗತ್ಯ ದಾಖಲೆಗಳನ್ನು ತೆಗೆಯಲು ಸಹಾಯ ಮಾಡಿದ ತಂತ್ರಜ್ಞರು ಸದ್ಯ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಐಟಿ ತಂಡ ದಾಖಲೆಗಳನ್ನು ಜೋಡಿಸುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಒಟ್ಟುಗೂಡಿಸಿ ಪಂಚನಾಮೆ ಮಾಡಲಾಗುತ್ತದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

    ತಮ್ಮ ನೆಚ್ಚಿನ ನಟನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಅಭಿಮಾನಿಗಳು ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್, ಶಿವಣ್ಣ, ಪುನೀತ್‍ಗೆ ಜೈಕಾರ ಹಾಕುತ್ತ ಅಭಿಮಾನಿಗಳು ಮನೆ ಮುಂದೆ ಕುಳಿತಿದ್ದಾರೆ. ಬೇಕೆ ಬೇಕು ಶಿವಣ್ಣ ಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ

    ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಕೂಡ ಶೋಧ ಮುಂದುವರಿದಿದೆ. ಕಿಚ್ಚ ಸುದೀಪ್ ಅವರ ಜೆ.ಪಿ ನಗರ ನಿವಾಸದಲ್ಲೂ ದಾಳಿ ಮುಂದುವರಿದಿದ್ದು, ಪರಿಶೀಲನೆಯನ್ನು ಬೇಗ ಮುಗಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಶನಿವಾರ ಬಿಗ್‍ಬಾಸ್ ಶೂಟಿಂಗ್ ಇದೆ. ನಾನು ಹೋಗಲೇಬೇಕು, ಇಲ್ಲದಿದ್ದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಗೆ ಅಡ್ಡಿಯಾಗುತ್ತದೆ. ಇಂದು ಸಂಜೆಯೊಳಗೆ ಪರಿಶೀಲನೆ ಮಾಡಿ ಮುಗಿಸುವಂತೆ ಸುದೀಪ್ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

    ಗುರುವಾರ ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಅವರು ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಮರಳಿದ್ದರು. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!

    ಸುದೀಪ್ ಅವರ ಮನೆಗೆ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ. ಸುದೀಪ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸೇರಿ 12 ಜನರಿಗೆ ನಂದಿನಿ ಹೊಟೇಲ್‍ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಕೂಡ ರೇಡ್ ಮುಂದುವರಿದಿದ್ದು, ಸುಮಾರು 9 ಗಂಟೆಯಿಂದ ಪುನೀತ್ ಮತ್ತು ಪತ್ನಿ ಅಶ್ವಿನಿ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರು ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು, ನನ್ನ ವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆ ಇವೆ. ಆದರೆ ದಾಖಲೆ ಸಲ್ಲಿಸಲು ಸ್ವಲ್ಪ ಸಮಯ ಬೇಕು. ಸಾಕಷ್ಟು ವ್ಯವಹಾರ ಮಾಡಿರುವುದರಿಂದ ಸ್ವಲ್ಪ ಗೊಂದಲವಿದೆ. ಪ್ರತಿಯೊಂದಕ್ಕೂ ರಶೀದಿ ಇಟ್ಟಿದ್ದೀನಿ. ಹೀಗಾಗಿ ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಟ ಪುನೀತ್ ಸಮಾಧಾನವಾಗಿಯೇ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಪುನೀತ್ ವಿರುದ್ಧ ತೆರಿಗೆ ವಂಚನೆ ಮಾಡಿರುವ ಆರೋಪ- ಮುಂದುವರಿದ ಐಟಿ ದಾಳಿ

    ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಚಿನ್ನಾಭರಣಗಳ ಮೌಲ್ಯ, ಕೆಲವೊಂದು ಆಸ್ತಿ ಪತ್ರಗಳ ಮೌಲ್ಯ ಮಾಡಲಾಗಿತ್ತು. ಇಂದು ಆಸ್ತಿ ಪತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ದಂಪತಿಯ ಬ್ಯಾಂಕ್ ಅಕೌಂಟ್‍ಗಳ ಮಾಹಿತಿಯನ್ನು ಐಟಿ ಅಧಿಕಾರಿಗಳು ಪಡೆದುಕೊಂಡಿದ್ದು, ಮನೆಯಿಂದ ಬ್ಯಾಂಕ್ ಡಿಟೈಲ್ಸ್ ನೊಂದಿಗೆ ಅಕೌಂಟ್ ಡಿಟೈಲ್ಸ್ ತೆಗೆಯಲು ಅಧಿಕಾರಿಗಳು ಬ್ಯಾಂಕ್ ಗಳಿಗೆ ತೆರಳಿದ್ದಾರೆ.

    ಬಿಗ್ ಬಜೆಟ್ ಸಿನಿಮಾಗಳಿಂದ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಆದರೆ ಆದಾಯ ತೆರಿಗೆ ಕಟ್ಟದೇ ವಂಚಿಸಿದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಪುನೀತ್ ಅವರು ಮನೆಗೆ ಹೋಗಿದ್ದಾರೆ. ತಡರಾತ್ರಿ ಪರಿಶೀಲನೆ ಮುಗಿತು ಎಂದು ಐಟಿ ಅಧಿಕಾರಿಗಳು ತೆರಳಿದ್ದರು. ಆದರೆ ಬಳಿಕ ಮಧ್ಯರಾತ್ರಿ ಮತ್ತೆ ಪುನೀತ್ ಮನೆಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv