Tag: ಐಟಿಬಿಪಿ

  • ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು – ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು – ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಚಿಕ್ಕಬಳ್ಳಾಪುರ: ಇಂಡೋ ಟೆಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‍ನಲ್ಲಿ (ITBP) ಸೇವೆ ಸಲ್ಲಿಸುತ್ತಿದ್ದ ಯೋಧ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ನಡೆದಿದೆ.

    ಗಂಗಾಧರಪ್ಪ ಮೃತ ಯೋಧ. ಇಂದು ಮೃತ ಯೋಧನ (Soldier) ಹುಟ್ಟೂರು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದಲ್ಲಿ ಸೇನಾ ಗೌರವಗಳೊಂದಿಗೆ ಯೋಧ ಗಂಗಾಧರಪ್ಪಗೆ ಅಂತಿಮ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ಬಗೆಹರಿಸೋ ನೆಪದಲ್ಲಿ ಮಹಿಳೆ ಜೊತೆಗೆ ಲವ್ವಿ-ಡವ್ವಿ; ಪೊಲೀಸಪ್ಪನ ಕಾಮದಾಸೆಗೆ ಸುಂದರ ಕುಟುಂಬ ಬೀದಿಗೆ

    ಐಟಿಬಿಪಿಯ ಗಾಂಗ್ಟೋಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ ಕರ್ತವ್ಯ ಮುಗಿಸಿ ಮಲಗಿದ್ದ ವೇಳೆ ಹಾಗೆಯೇ ಮೃತಪಟ್ಟಿದ್ರು. ಹೀಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ

    ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ ಮೃತಪಡುವ ಮುನ್ನ ರಾತ್ರಿ ಮನೆಯವರ ಜೊತೆ ಫೋನ್‌ ಮೂಲಕ ಮಾತನಾಡಿದ್ರು. ಬೆಳಗ್ಗೆ ಮನೆಯವರಿಗೆ ಸಾವಿನ ಸುದ್ದಿ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಪಾರ್ಥೀವ ಶರೀರ ಆಗಮಿಸಿದ್ದು ಅಲ್ಲಿಂದ ಗೌರಿಬಿದನೂರು ತಾಲೂಕು ತೊಂಡೆಬಾವಿ ಗ್ರಾಮಕ್ಕೆ ಸೇನಾ ವಾಹನದ ಮೂಲಕ ಕರೆತರಲಾಯಿತು. ನಂತರ ಸೇನಾ ಗೌರವಗಳೊಂದಿಗೆ ಗಂಗಾಧರಪ್ಪ ಅಂತಿಮ ಕ್ರಿಯಾವಿಧಿವಾನಗಳನ್ನ ನೇರವೇರಿಸಲಾಯಿತು. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

  • ಛತ್ತೀಸ್‌ಗಢ| ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟ – ಇಬ್ಬರು ಯೋಧರು ಹುತಾತ್ಮ

    ಛತ್ತೀಸ್‌ಗಢ| ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟ – ಇಬ್ಬರು ಯೋಧರು ಹುತಾತ್ಮ

    – ಇಬ್ಬರು ಪೊಲೀಸರಿಗೆ ಗಾಯ

    ಛತ್ತೀಸ್‌ಗಢ: ಮಾವೋವಾದಿಗಳು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡ ಪರಿಣಾಮ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ (ITBP) ಇಬ್ಬರು ಯೋಧರು (Soldiers) ಹುತಾತ್ಮರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ.

    ಶನಿವಾರ ಮಧ್ಯಾಹ್ನದ ಸುಮಾರಿಗೆ, ಐಟಿಬಿಪಿ, ಗಡಿ ಭದ್ರತಾ ಪಡೆ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ ತಂಡಗಳು ಧುರ್ಬೇಡದಲ್ಲಿ ಕಾರ್ಯಾಚರಣೆ ನಡೆಸಿ ನಾರಾಯಣಪುರಕ್ಕೆ ಹಿಂತಿರುಗುತ್ತಿದ್ದಾಗ ಅಬುಜ್‌ಮಾದ್ ಪ್ರದೇಶದ ಕೊಡ್ಲಿಯಾರ್ ಗ್ರಾಮದ ಬಳಿ ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟಗೊಂಡಿದೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‌ ಹೆಸರಲ್ಲಿ ವಂಚನೆ – ಜೋಶಿ ಸಹೋದರ ಗೋಪಾಲ್‌ ಜೋಶಿ ಅರೆಸ್ಟ್‌

    ಐಇಡಿ ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರದ ಸತಾರಾ ಮೂಲದ ಅಮರ್ ಪನ್ವಾರ್ ಮತ್ತು ಆಂಧ್ರಪ್ರದೇಶದ ಕಡಪಾ ಮೂಲದ ಕೆ ರಾಜೇಶ್ ಎಂಬ ಇಬ್ಬರು ಐಟಿಬಿಪಿ ಯೋಧರು ಮೃತಪಟ್ಟಿದ್ದಾರೆ. ಪನ್ವಾರ್ ಮತ್ತು ರಾಜೇಶ್ ಇಬ್ಬರೂ 36 ವರ್ಷ ವಯಸ್ಸಿನವರಾಗಿದ್ದು, ಐಟಿಬಿಪಿಯ 53ನೇ ಬೆಟಾಲಿಯನ್‌ನ ಭಾಗವಾಗಿದ್ದರು. ಇದನ್ನೂ ಓದಿ: ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ: ಬಸವರಾಜ ಬೊಮ್ಮಾಯಿ

    ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ?: ಯತ್ನಾಳ್ ಕಿಡಿ

  • ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್

    ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್

    ಬೆಳಗಾವಿ: ಜಿಲ್ಲೆಯ ಹಾಲಬಾವಿಯಲ್ಲಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದಿಂದ ಎರಡು ಎಕೆ-47 ರೈಫಲ್‍ಗಳು ಕಳುವಾಗಿರೋದು ಭಾರೀ ಆತಂಕಕ್ಕೆ ಕಾರಣವಾಗಿದೆ.

    ನಕ್ಸಲ್ ನಿಗ್ರಹ ತರಬೇತಿಗೆಂದು ಬಂದಿದ್ದ ಮಧುರೈನ 45ನೇ ಬೆಟಾಲಿಯನ್ ಯೋಧರಾದ ರಾಜೇಶ್ ಕುಮಾರ, ಸಂದೀಪ ಮೀನಾ ಅವರು ತರಬೇತಿ ಕಟ್ಟಡದ ಮೂರನೇ ಮಹಡಿಯ 120 ಮೆನ್ಸ್ ಬ್ಯಾರಕ್‍ನಲ್ಲಿ ಆಗಸ್ಟ್ 17 ರಂದು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಎರಡು ಬಂದೂಕುಗಳನ್ನು ಕದ್ದೊಯ್ದಿದ್ದಾರೆ. ವಿಷಯ ತಿಳಿದ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಿಗಿ ಭದ್ರತೆ ನಡುವೆ ಎಕೆ-47 ರೈಫಲ್‍ಗಳು ಕಳುವಾಗಿದ್ದೇಗೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಮೊಟ್ಟೆಯ ವಿಭಿನ್ನ ಬಳಕೆ: ಕಾಂಗ್ರೆಸ್-ದಾಸೋಹ, ಬಿಜೆಪಿ-ಜನದ್ರೋಹ – ʼಕೈʼ ಟೀಕೆ

    ಐಟಿಬಿಪಿ ಯೋಧರು ನೀಡಿದ ದೂರು ಆಧರಿಸಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ನೇತೃತ್ವದ ವಿಶೇಷ ತಂಡ ಕಳುವಾದ ಬಂದೂಕುಗಳ ಬೆನ್ನತ್ತಿದೆ. ಅದೇ ಕೊಠಡಿಯಲ್ಲಿದ್ದ ಮನೀಶ್ ಪುನೇತಾ, ಮಹ್ಮದ್ ಅಸ್ಲಾಂ ಸೇರಿ ನಾಲ್ವರು ಯೋಧರ ವಿಚಾರಣೆಯನ್ನು ನಡೆಸಿದೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: 200 ಸಿಬ್ಬಂದಿ ನಿಯೋಜನೆ; ಇನ್ನೂ ಪತ್ತೆಯಾಗಿಲ್ಲ ಚಿರತೆ!

    Live Tv
    [brid partner=56869869 player=32851 video=960834 autoplay=true]

  • ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

    ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

    ಶ್ರೀನಗರ: ಐಟಿಬಿಪಿ ಮತ್ತು ಜಮ್ಮು ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿ ನದಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಐಟಿಬಿಪಿ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಾಶ್ಮೀರದ ಪಹಲ್ಗಾಮ್‍ನ ಫ್ರಿಸ್ಲಾನ್‍ನಲ್ಲಿ ಈ ದುರ್ಘಟನೆ ನಡೆದಿದೆ.

    ಅಮರನಾಥ ಯಾತ್ರೆ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ 37 ಐಟಿಬಿಪಿ, ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರನ್ನು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಕರೆದೊಯ್ಯುಲಾಗುತ್ತಿತ್ತು. ಈ ಸಂದರ್ಭದಲ್ಲಿ ಘಟನೆ ನಡೆದಿದ್ದು, ಇನ್ನು ಹಲವು ಸಿಬ್ಬಂದಿಗಳು ಗಾಯಗಳಾಗಿರುವ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಿಷೇಧಾಜ್ಞೆಯ ಮಧ್ಯೆ ಭದ್ರಾವತಿಯಲ್ಲೂ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

    ಬಹಳ ಎತ್ತರದ ಪ್ರದೇಶದಿಂದ ನದಿ ಕಣಿವೆಗೆ ಬಸ್ ಬಿದ್ದಿರುವ ಹಿನ್ನೆಲೆ ಸಾವು-ನೋವುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅವಘಡಕ್ಕೆ ಮೇಲ್ನೋಟಕ್ಕೆ ಬ್ರೇಕ್ ಫೇಲ್ ಎಂದು ಗೊತ್ತಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಐಟಿಬಿಪಿ ಯೋಧರಿಂದ ಹಿಮಾಲಯದ 17 ಸಾವಿರ ಅಡಿ ಎತ್ತರದಲ್ಲಿ ಯೋಗ

    ಐಟಿಬಿಪಿ ಯೋಧರಿಂದ ಹಿಮಾಲಯದ 17 ಸಾವಿರ ಅಡಿ ಎತ್ತರದಲ್ಲಿ ಯೋಗ

    ನವದೆಹಲಿ: 8ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರದ ಲಡಾಖ್‍ನಿಂದ ಸಿಕ್ಕಿಂವರೆಗೆ ಇರುವ ವಿವಿಧ ಎತ್ತರದ ಹಿಮಾಲಯ ಪರ್ವತದಲ್ಲಿ ಯೋಗಾಭ್ಯಾಸವನ್ನು ಮಾಡಿದರು.

    ಐಟಿಬಿಪಿ ಯೋಧರು ಹಲವಾರು ವರ್ಷಗಳಿಂದ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತ-ಚೀನಾ ಗಡಿಗಳ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ.

    ಈ ಬಾರಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಅಂತಾರಾಷ್ಟ್ರೀಯ ಯೋಗ ದಿನದಂದು ಹಾಡನ್ನು ಅರ್ಪಿಸಿದ್ದಾರೆ ಜೊತೆಗೆ ITBP ಯೋಧರು ಲಡಾಖ್‌ನಲ್ಲಿ 17,000 ಅಡಿ ಎತ್ತರದಲ್ಲಿ ಯೋಗವನ್ನು ಪ್ರದರ್ಶಿಸಿದ್ದಾರೆ.

    ಆಯುಷ್ ಸಚಿವಾಲಯವು ಈ ಬಾರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿರುವುದರಿಂದ ಈ ವಿಷಯವನ್ನು ಇಟ್ಟುಕೊಂಡು 75 ವರ್ಷಗಳ ಪ್ರಮುಖ ವಿಷಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಆಚರಿಸುತ್ತಿದೆ. ಇದರಿಂದಾಗಿ ಕೇಂದ್ರ ಮಂತ್ರಿಗಳಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ಪ್ರಮುಖ 75 ಸ್ಥಳಗಳನ್ನು ಗುರುತಿಸಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ದಸರಾ ಮೈದಾನದಲ್ಲಿ ಯೋಗವನ್ನು ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಟೇಡಿಯಂನಲ್ಲಿ ಸಾರ್ವಜನಿಕರೊಂದಿಗೆ ಕೇಜ್ರಿವಾಲ್ ಯೋಗ

    ಪ್ರಪಂಚದಾದ್ಯಂತ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೇ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಯೋಗ ಗುರು ರಾಮದೇವ್ ಯೋಗ ಪ್ರದರ್ಶನ ನೀಡಿದ್ದರು. ಅನೇಕ ಮಕ್ಕಳು ಮತ್ತು ಇತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು

    Live Tv

  • ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಡೆಹರಾಡೂನ್: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡವು ಉತ್ತರಾಖಂಡದ ಮಾಂಟ್ ಅಬಿ ಗಮಿನ್ ಪರ್ವತದ 22,850 ಅಡಿ ಎತ್ತರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗಾಭ್ಯಾಸ ಮಾಡಿ ದಾಖಲೆ ನಿರ್ಮಿಸಿದೆ.

    ಈ ಕುರಿತ ವೀಡಿಯೋವೊಂದನ್ನು ತಂಡವು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಐಟಿಬಿಪಿಯಿಂದ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡುವ ಹೊಸ ದಾಖಲೆ ಎಂದು ಬರೆದುಕೊಂಡಿದ್ದಾರೆ. ಜೂನ್ 2 ರಂದು, ತಂಡವು 24,131 ಅಡಿ ಎತ್ತರದ ಮೌಂಟ್ ಅಬಿ ಗಮಿನ್ ಶಿಖರವನ್ನೇರಿ ‘ಬದ್ರಿ ವಿಶಾಲ್ ಕಿ ಜೈ’ ಎಂದು ಘೋಷಣೆ ಮಾಡಿದೆ. ದನ್ನು ಓದಿ : ವಾಣಿಜ್ಯ ಮಂಡಳಿ ಅಧ್ಯಕ್ಷರ ಕೈಗೆ ಫಿನಾಯಿಲ್ ಮತ್ತು ಪೊರಕೆ ಕೊಟ್ಟ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

    ಕಳೆದ ತಿಂಗಳು ಡೆಹ್ರಾಡೂನ್‍ನಿಂದ ಹೊರಟಿದ್ದ ತಂಡ ಭಾನುವಾರ ಮರಳಿದೆ. ಉಪ ಕಮಾಂಡೆಂಟ್ ಕುಲದೀಪ್ ಕುಮಾರ್ ನೇತೃತ್ವದಲ್ಲಿ ಈ ಸಾಹಸ ಮಾಡಲಾಗಿದೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಐಟಿಬಿಪಿಯ ಉತ್ತರ ಫ್ರಾಂಟಿಯರ್ ಕೈಗೊಂಡ ದಂಡಯಾತ್ರೆಯನ್ನು ಮೇ 9 ರಂದು ಡೆಹ್ರಾಡೂನ್‍ನಿಂದ ಪ್ರಾರಂಭಿಸಲಾಯಿತು. ತಂಡವು ನಿನ್ನೆ ಬೇಸ್ ಕ್ಯಾಂಪ್‍ಗೆ ಮರಳಿದೆ.

  • 17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

    17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

    ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು ಉನ್ನತ ಪರ್ವತಾರೋಹಿಗಳ ತಂಡವು ಫೆಬ್ರವರಿ 20 ರಂದು 20,177 ಅಡಿ ಎತ್ತರದ ಶಿಖರವನ್ನು ಏರಿದೆ ಎಂದು ಐಟಿಬಿಪಿ ತಿಳಿಸಿದೆ.

    ಐಟಿಬಿಪಿ ಬಾರ್ಡರ್ ಪೊಲೀಸ್ ತಂಡವು ಮೌಂಟ್ ಕಾರ್ಜೋಕ್ ಕಾಂಗ್ರಿಯನ್ನು ಮೊದಲ ಬಾರಿ ಆರೋಹಣ ಮಾಡಿದ್ದಾರೆ. ಏಸ್ ಪರ್ವತಾರೋಹಿ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಐಟಿಬಿಪಿಯ 6 ಉನ್ನತ ದರ್ಜೆಯ ಪರ್ವತಾರೋಹಿಗಳ ತಂಡವು ಲಡಾಖ್‍ನ ಹಿಮಪರ್ವತವಾದ 20,177 ಅಡಿ ಎತ್ತರದ ಶಿಖರವನ್ನು ಏರಿತು ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ತೀವ್ರವಾದ ಚಳಿಗಾಲದಲ್ಲಿ ದೈಹಿಕ ಮತ್ತು ಮಾನಸಿಕ ಗಟ್ಟಿತನವನ್ನು ತಡೆದುಕೊಂಡು ತಂಡವು ಯಾವುದೇ ವಿಶೇಷ ಪರ್ವತಾರೋಹಣ ಉಪಕರಣಗಳು ಮತ್ತು ಬೆಂಬಲ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಆರೋಹಣವನ್ನು ಪೂರ್ಣಗೊಳಿಸಿತು ಎಂದು ಐಟಿಬಿಪಿಯ ಅಧಿಕಾರಿ ತಿಳಿಸಿದರು.

    ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರುತ್ತಿರುವ ಕೆಲ ದೃಶ್ಯಗಳನ್ನು ಐಟಿಬಿಪಿ ತಂಡವು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮೈ ನಡುಗಿಸುವ ಚಳಿಯಲ್ಲಿ, ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್-ಅಪ್‍ಗಳನ್ನು ಪೂರ್ಣಗೊಳಿಸಿದ ಕಮಾಂಡೆಂಟ್ ಸೋನಾಲ್ ಅವರ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ

    65 ಪುಷ್-ಅಪ್‍ಗಳನ್ನು ಹೊಡೆದ ಸೋನಾಲ್ 55 ವರ್ಷ ವಯಸ್ಸಿನ ಕಮಾಂಡೆಂಟ್ ಆಗಿದ್ದು, ಅವರ ಈ ಧಾಡಸಿ ವಾಯ್ಯಾಮವನ್ನು ನೋಡಿದ ನೆಟ್ಟಿಗರೊಬ್ಬರು ನಮ್ಮ ಸೇನಾ ಸಿಬ್ಬಂದಿ ಎಷ್ಟು ಪ್ರಬಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸೋನಾಲ್ ಅವರ ಈ ಧಾಡಸಿ ವ್ಯಾಯಾಮದ ವೀಡಿಯೋವು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 13,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದ್ದು, 1,800 ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

    1962 ರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ರಚಿಸಲಾಯಿತು. ಹಿಮಾಲಯದ 3,488 ಕಿಮೀ ಉದ್ದದ ಗಡಿ ಅಲ್ಲದೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಇತರ ಆಂತರಿಕ ಭದ್ರತಾ ಕರ್ತವ್ಯಗಳಿಗೆ ಈ ಪಡೆಯನ್ನು ನಿಯೋಜಿಸಲಾಗಿದೆ.

  • ವೈರಲ್ ಆಗಿದೆ 5ರ ಪೋರನ ಸೆಲ್ಯೂಟ್ ಮಾಡುವ ವೀಡಿಯೋ

    ವೈರಲ್ ಆಗಿದೆ 5ರ ಪೋರನ ಸೆಲ್ಯೂಟ್ ಮಾಡುವ ವೀಡಿಯೋ

    ನವದೆಹಲಿ: ಇಂಡೋ-ಟಿಬೆಟನ್ ಗಡಿಯಲ್ಲಿ 5ರ ಪೋರ ಖಡಕ್ ಆಗಿ ಸೆಲ್ಯೂಟ್ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟ ಪೋರ ಲಡಾಖ್‍ನಲ್ಲಿ ನಿಂತು ಖಡಕ್ ಆಗಿ ಸೆಲ್ಯೂಟ್ ಹೊಡೆದಿದ್ದು, ಇದೀಗ ನೆಟ್ಟಿಗರ ಮನ ಗೆದ್ದಿದೆ. ಸಾಕಷ್ಟು ಜನ ಶೇರ್ ಮಾಡಿ, ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸೈನಿಕರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಸಖತ್ ವೈರಲ್ ಆಗಿದೆ.

    ಪುಟ್ಟ ಪೋರ ಉತ್ಸಾಹಭರಿತನಾಗಿ ಹಾಗೂ ಮುಗ್ದತೆಯಿಂದ ಸೆಲ್ಯೂಟ್ ಮಾಡಿದ್ದು, ಸಾಕಷ್ಟು ಜನರ ಮನ ಗೆದ್ದಿದೆ. ಈ ಬಾಲಕನಿಗೆ ಇಂದು ಪ್ಯಾರಾ ಮಿಲಿಟರಿ ಪಡೆ ಸನ್ಮಾನ ಮಾಡಿದೆ. ನವಾಂಗ್ ನಮ್‍ಗ್ಯಾಲ್(5) ಎಲ್‍ಕೆಜಿ ವಿದ್ಯಾರ್ಥಿಯಾಗಿದ್ದು, ಲಡಾಖ್‍ನ ಚುಶುಲ್ ಪ್ರದೇಶದ ನಿವಾಸಿಯಾಗಿದ್ದಾನೆ. ಬಾಲಕ ಸೈನಿಕರಿಗೆ ಸೆಲ್ಯೂಟ್ ಮಾಡುವ ಈ ವೀಡಿಯೋವನ್ನು ಐಟಿಬಿಪಿ ಅಕ್ಟೋಬರ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗಿನಿಂದ ಜಾಲತಾಣಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾನೆ.

    ಬಾಲಕನ ಉತ್ಸಾಹ ಮುಗ್ದತೆಗೆ ಮನಸೋತ ಐಟಿಬಿಪಿ ಅಧಿಕಾರಿಗಳು ಇಂದು ಆತನಿಗೆ ಸೇನೆ ಸಮವಸ್ತ್ರ ಹಾಕಿ ಸನ್ಮಾನಿಸಿದ್ದಾರೆ. ಸಮವಸ್ತ್ರ ಧರಿಸಿ ಕ್ಯಾಂಪ್‍ನಲ್ಲಿ ಬಾಲಕ ಸೆಲ್ಯೂಟ್ ಮಾಡುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಐಟಿಬಿಪಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ಹ್ಯಾಪಿ ಆ್ಯಂಡ್ ಇನ್‍ಸ್ಪೈರಿಂಗ್ ಅಗೇನ್’ ಎಂದು ಬರೆದು ವೀಡಿಯೋ ಟ್ವೀಟ್ ಮಾಡಲಾಗಿದೆ.

    ಮೂಲ ವೀಡಿಯೋವನ್ನು ಐಟಿಬಿಪಿ ಅಧಿಕಾರಿ ಸೆರೆ ಹಿಡಿದಿದ್ದು, ಬಾಲಕ ಸೈನಿಕರಿಗೆ ಸೆಲ್ಯೂಟ್ ಮಾಡುವುದನ್ನು ತೋರಿಸಲಾಗಿದೆ. ಮೊಬೈಲ್ ಹಿಡಿದು ವೀಡಿಯೋ ಮಾಡುತ್ತಿದ್ದ ಅಧಿಕಾರಿ ಈ ರೀತಿ ಮಾಡು ಎಂದು ನಿರ್ದೇಶನ ನೀಡಿದಂತೆ ಬಾಲಕ ಉತ್ಸಾಹಭರಿತನಾಗಿ ಹೆಜ್ಜೆ ಹಾಕಿದ್ದಾನೆ.

  • ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಲದಾಖ್: ವಿಶ್ವ ಯೋಗ ದಿನಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ದೇಶದೆಲ್ಲೆಡೆ ಈ ಸುದಿನಕ್ಕಾಗಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲದಾಖ್‍ನಲ್ಲಿ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಸುದ್ದಿಯಾಗಿದ್ದಾರೆ.

    ಸುಮಾರು 18,000 ಅಡಿ ಎತ್ತರದ ಲದಾಖ್‍ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಹಿಮದ ರಾಶಿ ನಡುವೆ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದನ್ನೂ ಓದಿ:ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಐಟಿಬಿಪಿ ಸಿಬ್ಬಂದಿ ಯೋಗ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಉಣ್ಣೆಯ ವಸ್ತ್ರಗಳನ್ನು ತೆಗೆದು ಯೋಗ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

    ಈ ಬಗ್ಗೆ ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್ ಅವರು ಮಾತನಾಡಿ, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜನರ ಜೀವನದಲ್ಲಿ ಯೋಗ ಪ್ರಮುಖ ಅಂಶವಾಗಿದೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೇಳಿದರು.

    ಯೋಗ ಹಾಗೂ ಯೋಗದ ಪ್ರಾಮುಖ್ಯತೆ ಬಗ್ಗೆ ಐಟಿಬಿಪಿ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಕೆಲವು ಫೋಟೋಗಳು, ವಿಡಿಯೋಗಳನ್ನು ಕೂಡ ಐಟಿಬಿಪಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.