Tag: ಐಟಿಒ

  • ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತೆಯನ್ನು ಟಚ್ ಮಾಡಿ ಲೈಂಗಿಕ ಕಿರುಕುಳ: ಶಾಕಿಂಗ್ ವಿಡಿಯೋ

    ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತೆಯನ್ನು ಟಚ್ ಮಾಡಿ ಲೈಂಗಿಕ ಕಿರುಕುಳ: ಶಾಕಿಂಗ್ ವಿಡಿಯೋ

    ನವದೆಹಲಿ: ಇಲ್ಲಿನ ಐಟಿಒ ಮೆಟ್ರೋ ನಿಲ್ದಾಣದಲ್ಲಿ 25 ವರ್ಷದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ ಯುವತಿ ಮೆಟ್ರೋ ನಿಲ್ದಾಣದ ಮೆಟ್ಟಿಲಿನಲ್ಲಿ ಇಳಿದುಕೊಂಡು ಬರುತ್ತಿದ್ದ ವೇಳೆ ಕಾಮುಕನೊಬ್ಬ ಆಕೆಯನ್ನು ಟಚ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಯುವತಿ ಏನೋ ಬೈ ಮಿಸ್ಟೆಕ್ ಅಂತ ಸುಮ್ಮನಾಗಿದ್ರು. ಆದ್ರೆ ಇದನ್ನೇ ಬಳಸಿಕೊಂಡ ಕಾಮುಕ ಮುಂದುವರೆದು ಆಕೆಯನ್ನು ಸುತ್ತುವರಿದು ಮತ್ತೊಂದು ಬಾರಿ ಮುಟ್ಟಿದ್ದಾನೆ. ಘಟನೆ ಸಂದರ್ಭದಲ್ಲಿ ಯಾವೊಬ್ಬ ಭದ್ರತಾ ಸಿಬ್ಬಂದಿ ಅಲ್ಲಿ ಇರಲಿಲ್ಲ. ಹೀಗಾಗಿ ಯುವತಿಯೇ ಕಾಮುಕನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಯುವತಿ ಕಾಮುಕನ್ನು ಹಿಡಿಯಲೆಂದು ಆತನ ಹಿಂದೆ ಓಡುತ್ತಿದ್ದಂತೆಯೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಘಟನೆ ನಡೆದಾಗ ನಾನು ಸುತ್ತ ನೋಡಿದರೂ ಒಬ್ಬನೇ ಒಬ್ಬ ಸೆಕ್ಯುರಿಟಿ ಅಲ್ಲಿ ಇರಲಿಲ್ಲ. ಒಬ್ಬ ಸೆಕ್ಯುರಿಟಿ ಇರುತ್ತಿದ್ದರೂ ಆತನನ್ನು ಹಿಡಿಯಬಹುದಿತ್ತು ಅಂತ ವೃತ್ತಿಯಲ್ಲಿ ಪತ್ರಕರ್ತೆಯಾಗಿರೋ ಯುವತಿ ಹೇಳಿದ್ದಾರೆ.

    ಈ ಘಟನೆ ನವೆಂಬರ್ 13ರಂದು ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಕಾಮುಕನನ್ನು ಬಂಧಿಸಿದ್ದಾರೆ. ಪಟಿಯಾಲ ಹೌಸ್ ಕೋರ್ಟ್ ಇಂದು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಆರೋಪಿ ಕಾಮುಕ ಪತ್ರಕರ್ತೆಗೆ ಕಿರಿಕುಳ ನೀಡಿದ ದಿನವೇ ಇನ್ನಿಬ್ಬರು ಯುವತಿಯರಿಗೂ ಕಿರುಕುಳ ನೀಡಿದ್ದನು ಎಂದು ವರದಿಯಾಗಿದೆ.