Tag: ಐಟಂ ಡಾನ್ಸ್

  • ‘ಪುಷ್ಪಾ 2’ ಐಟಂ ಹಾಡಿಗೆ ಸೊಂಟ ಬಳುಕಿಸಿದ ಕನ್ನಡದ ನಟಿ ಶ್ರೀಲೀಲಾ

    ‘ಪುಷ್ಪಾ 2’ ಐಟಂ ಹಾಡಿಗೆ ಸೊಂಟ ಬಳುಕಿಸಿದ ಕನ್ನಡದ ನಟಿ ಶ್ರೀಲೀಲಾ

    ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ (Pushpa 2) ಡಿ.6ರಂದು ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಸಿಕ್ಕಿದೆ. ಈ ಸಿನಿಮಾದ ಐಟಂ ಹಾಡಿಗೆ ಕನ್ನಡದ ನಟಿ ಶ್ರೀಲೀಲಾ  (Sreeleela) ಕುಣಿದಿದ್ದಾರೆ. ಆ ಫೋಟೋ ಲೀಕ್ ಕೂಡ ಆಗಿದೆ.

    ಈ ಹಿಂದೆ ಈ ಹಾಡಿಗೆ ಬಾಲಿವುಡ್ ನಟಿಯರ ಹೆಸರೆಲ್ಲ ಕೇಳಿ ಬಂದಿತ್ತು. ಅದರಲ್ಲೂ ಶ್ರದ್ಧಾ ಕಪೂರ್ (Shraddha Kapoor) ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

    ‘ಪುಷ್ಪ 1’ರಲ್ಲಿ ಸಮಂತಾ ಡ್ಯಾನ್ಸ್ ಮಾಡಿದ್ದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಗೆಲುವಿಗೆ ಕಥೆಯ ಜೊತೆ ಸಮಂತಾ ಡ್ಯಾನ್ಸ್ ಪ್ಲಸ್ ಆಗಿತ್ತು. ಹಾಗಾಗಿಯೇ ಪುಷ್ಪ 2ರಲ್ಲೂ ಇದನ್ನೇ ಫಾರ್ಮುಲಾ ಬಳಸುತ್ತಿದ್ದಾರೆ. ಈ ಹಿಂದೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಜಾನ್ವಿ ಕಪೂರ್, ತೃಪ್ತಿ ದಿಮ್ರಿ, ಶ್ರೀಲೀಲಾ ಹೀಗೆ ಅನೇಕರ ಹೆಸರು ಸದ್ದು ಮಾಡಿತ್ತು. ಈಗ ಶ್ರೀಲೀಲಾ ಕುಣಿದಿರೋದೇ ಪಕ್ಕಾ ಆಗಿದೆ.

     

    ಇದೀಗ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾಗೆ (Shraddha Kapoor) ಚಿತ್ರತಂಡ ಮಣೆ ಹಾಕಿದೆ ಎನ್ನಲಾಗಿತ್ತು. ಚಿತ್ರದಲ್ಲಿ ನಟಿಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಲಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ಈಗಾಗಲೇ ಹಾಡಿನ ಚಿತ್ರೀಕರಣ ಕೂಡ ಮುಗಿದಿದೆ.

  • ‘ಪುಷ್ಪ’ಗಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಜಾಹ್ನವಿ ಕಪೂರ್

    ‘ಪುಷ್ಪ’ಗಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಜಾಹ್ನವಿ ಕಪೂರ್

    ಪುಷ್ಪ 2 ಚಿತ್ರದ ಅಡ್ಡಾದಿಂದ ಲೇಟೆಸ್ಟ್ ಸುದ್ದಿಯೊಂದು ಹರಿದಾಡುತ್ತಿದೆ. ಈ ಸಿನಿಮಾದ ಮಾದಕ ಗೀತೆ (Item Dance_ ಬಾಲಿವುಡ್ ನಟಿ ಜಾಹ್ನವಿ ಕಪೂರ್ (Jahnavi Kapoor) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಈ ಹಿಂದೆ ನಾನಾ ನಾಯಕಿಯರ ಹೆಸರು ಇದೇ ಹಾಡಿಗೆ ಕೇಳಿ ಬಂದಿತ್ತು. ಆದರೆ, ಇದೀಗ ಜಾಹ್ನವಿ ಹೆಸರು ಓಡಾಡುತ್ತಿದೆ. ಅವರು ಡಾನ್ಸ್ ಮಾಡಿದ ನಂತರವೇ ಪಕ್ಕಾ ಆಗುವುದು.

    ಈ ನಡುವೆ ಚಿತ್ರದ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಕಾರಣ ಬಜೆಟ್ ತುಂಬಾನೇ ಏರಿಕೆ ಆಗಿದೆಯಂತೆ. ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾ ಕುರಿತಂತೆ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ. ಪ್ರತಿ ಬಾರಿಯೂ ಅವುಗಳೆಲ್ಲ ಕಟ್ಟುಕಥೆಗಳೇ ಇರುತ್ತಿದ್ದವು. ಇದೀಗ ಸ್ವತಃ ಸಿನಿಮಾದ ನಿರ್ದೇಶಕ ಸುಕುಮಾರನ್ (Sukumaran)  ಮಾತನಾಡಿದ್ದಾರೆ. ಸಿನಿಮಾ ಕುರಿತಂತೆ ಹಲವಾರು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಚಿತ್ರ ಬಜೆಟ್ ಬಗ್ಗೆ ಮಾತನಾಡಿದ್ದಾರೆ.

    ಪುಷ್ಪ ಸಿನಿಮಾಗಿಂತ ಪುಷ್ಪ 2 ಸಿನಿಮಾದ ಬಜೆಟ್ ಡಬಲ್ ಆಗಿದೆಯಂತೆ. ಜೊತೆಗೆ ಅಷ್ಟೇ ಶ್ರೀಮಂತಿಕೆಯಿಂದ ಕೂಡಿದೆಯಂತೆ. ಫಹಾದ್ ಫಾಸಿಲ್ (Fahadh Faasil) ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಮತ್ತೊಂದು ಲೆವಲ್ ನಲ್ಲಿ ಇದೆ ಎಂದಿದ್ದಾರೆ ನಿರ್ದೇಶಕ ಸುಕುಮಾರನ್. ಇಡೀ ಕಥೆಯನ್ನು ಈ ಇಬ್ಬರೂ ನಟರು ಹೇಗೆ ತೂಗಿಸಿಕೊಂಡು ಹೋಗಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ.

    ಒಂದು ಕಡೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಇನ್ನೊಂದು ಕಡೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

     

    ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.

  • ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಕ್ಷಿಣದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha) ಇದೇ ಮೊದಲ ಬಾರಿಗೆ ಹಲವು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.  ನಾಗ ಚೈತನ್ಯ (Nagachaitanya) ಜೊತೆಗಿನ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಸಪರೇಷನ್ ನಂತರ ತಮ್ಮ ಬದುಕಿನಲ್ಲಿ ಆದ ಘಟನೆಗಳನ್ನೂ ಅವರು ಯೂಟ್ಯೂಬ್ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಪ್ಪು ಮಾಡದೇ ಇರುವ ನಾನು ಯಾಕೆ ಹೆದರಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ಮುಂದುವರೆದ ಮಾತನಾಡಿದ ಅವರು ‘ನಾಗ ಚೈತನ್ಯ ಜೊತೆ ಬಾಂಧವ್ಯವನ್ನು (Divorce) ಕಡಿದುಕೊಳ್ಳುವಾಗ ಸಾಕಷ್ಟು ಯೋಚನೆ ಮಾಡಿದ್ದೇನೆ. ಅವರಿಂದ ಆಚೆ ಬಂದ ನಂತರ ಸಿನಿಮಾ ಉದ್ಯಮದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಕಲಿತಿದ್ದೇನೆ. ಕೆಲವರು ಏನೇ ಸಲಹೆ ನೀಡಿದರೂ, ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ. ಸರಿ ದಾರಿಯಲ್ಲೇ ನಡೆದಿದ್ದರಿಂದ ನನಗೆ ಯಾವುದೇ ಪಾಪಪ್ರಜ್ಞೆ ಕಾಡುತ್ತಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಪುಷ್ಪಾ (Pushpa) ಸಿನಿಮಾದಲ್ಲಿ ಐಟಂ ಡಾನ್ಸ್ (Item Dance) ಮಾಡಲು ಅವಕಾಶ ಬಂದಿದ್ದು ಡಿವೋರ್ಸ್ ನಂತರವಂತೆ. ಕುಟುಂಬಸ್ಥರು ಮತ್ತು ಕೆಲವು ಸ್ನೇಹಿತರು ಈ ಹಾಡನ್ನು ಒಪ್ಪಿಕೊಳ್ಳಬೇಡ ಎಂದು ಹೇಳಿದ್ದರಂತೆ. ಟ್ರೋಲ್ ಮಾಡುವವರು ಕೂಡ ಇದೇ ಸಲಹೆಯನ್ನೇ ನೀಡಿದ್ದರಂತೆ. ಆದರೆ, ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ಮನೆಯಲ್ಲಿ ಏಕೆ ಕೂರಬೇಕು. ಅಷ್ಟಕ್ಕೂ ನನಗೆ ಅದು ಐಟಂ ಡಾನ್ಸ್ ಅಂತ ಅನಿಸಲಿಲ್ಲ. ಅದೊಂದು ಕ್ಯಾರೆಕ್ಟರ್ ಅಂತ ಅನಿಸಿತ್ತು. ಹಾಗಾಗಿ ಹಾಡು ಒಪ್ಪಿಕೊಂಡೆ ಎಂದಿದ್ದಾರೆ ಸಮಂತಾ.

    ಸದ್ಯ ಸಮಂತಾ, ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಹಲವಾರು ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮಗಾದ ನೋವು, ಅವಮಾನಗಳನ್ನು ಎದುರಿಸಿದ ಬಗೆಯನ್ನು ಹೇಳಿಕೊಳ್ಳುತ್ತಿದ್ದಾರೆ.