Tag: ಐಜ್ವಾಲ್

  • ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಐಜ್ವಾಲ್:‌ ಇಂದು (ಮಂಗಳವಾರ) ಬೆಳಗ್ಗೆ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮಿಜೋರಾಂನ ಐಜ್ವಾಲ್ (Aizawl, Mizoram)  ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಐಜ್ವಾಲ್ ಪಟ್ಟಣದ ದಕ್ಷಿಣ ಪರಿಧಿಯಲ್ಲಿ ನೆಲೆಗೊಂಡಿರುವ ಮೆಲ್ತಮ್ ಮತ್ತು ಹ್ಲಿಮೆನ್ ಸಮೀಪದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರಲ್ಲಿ 7 ಮಂದಿ ಸ್ಥಳೀಯರು ಹಾಗೂ ಮೂವರು ಹೊರ ರಾಜ್ಯದವರು. ಇನ್ನೂ 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದುವರೆಗೆ 10 ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

    ಹಲವೆಡೆ ಭೂಕುಸಿತ: ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಮಳೆಯಿಂದಾಗಿ ರಾಜ್ಯದ ಹಲವೆಡೆ ಭೂಕುಸಿತ ಉಂಟಾಗಿದೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇದಲ್ಲದೆ ಹಲವಾರು ಅಂತರ್-ರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

    ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಲಾಲ್ದುಹೋಮ ಅವರು ಗೃಹ ಸಚಿವ ಕೆ ಸಪ್ದಂಗ, ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನು ಭಾರೀ ಮಳೆಯ ಕಾರಣ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

  • ಕೈಕೊಟ್ಟ EVM; ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

    ಕೈಕೊಟ್ಟ EVM; ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

    ಐಜ್ವಾಲ್: ಮಿಜೋರಾಂ (Mizoram) ಹಾಗೂ ಛತ್ತೀಸ್‌ಗಢ ವಿಧಾನಸಭೆಗೆ ಇಂದು (ಮಂಗಳವಾರ) ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಮತದಾನದ ದಿನದಂದು ಮಿಜೋರಾಂನ ಮುಖ್ಯಮಂತ್ರಿ ರಾಜಧಾನಿ ಐಜ್ವಾಲ್‌ನ (Aizawl) ಮತಗಟ್ಟೆಯನ್ನು ತಲುಪಿದರೂ ಮತಚಲಾಯಿಸಲಾಗದೆ ವಾಪಸಾಗಿದ್ದಾರೆ.

    ಮಿಜೋರಾಂ ಮುಖ್ಯಮಂತ್ರಿ ಮತ್ತು ಎಂಎನ್‌ಎಫ್ ಅಧ್ಯಕ್ಷ ಝೋರಂತಂಗ (Zoramthanga) ಅವರು ಚುನಾವಣೆಗೆ ಮತಚಲಾಯಿಸಲು ತೆರಳಿದರೂ ಇವಿಎಂ (EVM) ಯಂತ್ರ ಕೈಕೊಟ್ಟ ಕಾರಣ ಮತಚಲಾಯಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ. ಮತಯಂತ್ರ ಕಾರ್ಯನಿರ್ವಹಿಸದ ಕಾರಣ ಕೆಲ ಸಮಯ ಪ್ರಯತ್ನಿಸಿದೆ. ಆದರೆ ಮತಚಲಾಯಿಸಲು ಆಗದೇ ಹೋದ ಕಾರಣ ಬೆಳಗ್ಗೆ ಸಭೆಯ ನಂತರ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಮಿಜೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ರಾಜ್ಯಾದ್ಯಂತ 1,276 ಮತಗಟ್ಟೆಗಳಲ್ಲಿ 8,00,000 ಕ್ಕೂ ಹೆಚ್ಚು ಅರ್ಹ ಮತದಾರರು ಇಂದು ಮತಚಲಾಯಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಚುನಾವಣೆ ದಿನವೇ ಮಾವೋವಾದಿಗಳಿಂದ ಸ್ಫೋಟ – ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ

     

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ರಾಜ್ಯದ ಜನರಲ್ಲಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಿಜೋರಾಂ, ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ಇಂದು

  • ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ

    ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ

    ಐಜ್ವಾಲ್: ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು (Railway Bridge Collapse) ಬಿದ್ದ ಪರಿಣಾಮ 17 ಮಂದಿ ದುರ್ಮರಣಹೊಂದಿರುವ ಘಟನೆ ಮಿಜೋರಾಂನಲ್ಲಿ (Mizoram) ನಡೆದಿದೆ.

    ಮಿಜೋರಾಂನ ಐಜ್ವಾಲ್‌ನಿಂದ (Aizawl) ಸುಮಾರು 21 ಕಿ.ಮೀ ದೂರದಲ್ಲಿರುವ ಸಾಯಿರಾಂಗ್ (Sairang) ಪ್ರದೇಶದಲ್ಲಿ ಈ ದುರ್ಘಟನೆ ವರದಿಯಾಗಿದೆ. ಇನ್ನೂ ಹಲವರು ಸ್ಥಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸೇತುವೆ ಕುಸಿದ ಸಂದರ್ಭದಲ್ಲಿ ಸುಮಾರು 35-40 ಕಟ್ಟಡ ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

    ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಐಜ್ವಾಲ್ ಬಳಿಯ ಸಾಯಿರಾಂಗ್‌ನಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಇಂದು ಕುಸಿದಿದೆ. ಕನಿಷ್ಠ 17 ಕಾರ್ಮಿಕರ ಸಾವಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ದುರಂತದಿಂದ ತೀವ್ರ ದುಃಖವಾಗಿದೆ. ನಾನು ಎಲ್ಲಾ ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಯೋಗಿ ಅವರ ಕಾಲು ಮುಟ್ಟಿ ರಜನಿ ನಮಸ್ಕರಿಸಿದ್ದು ತಪ್ಪೇನೂ ಇಲ್ಲ: ಅಣ್ಣಾಮಲೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಂಡತಿಯನ್ನು ತಬ್ಬಿ ಕೊಂದೇ ಬಿಟ್ಟ – ಇದು ಸೂಸೈಡ್‌ ಬಾಂಬರ್‌ ಸಿಟ್ಟಿನ ಕಥೆ

    ಹೆಂಡತಿಯನ್ನು ತಬ್ಬಿ ಕೊಂದೇ ಬಿಟ್ಟ – ಇದು ಸೂಸೈಡ್‌ ಬಾಂಬರ್‌ ಸಿಟ್ಟಿನ ಕಥೆ

    ಐಜ್ವಾಲ್: ಪತ್ನಿಯ ಮೇಲೆ ಕೋಪ ಮಾಡಿಕೊಂಡು ಬೇರೆಯಾಗಿ ವಾಸಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಕೊಲ್ಲಲು ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಬಾಂಬ್ ಸ್ಫೋಟವಾಗಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಮಿಜೋರಾಂನ ಲುಂಗೇಲಿಯಲ್ಲಿ ನಡೆದಿದೆ.

    61 ವರ್ಷದ ಮಹಿಳೆ ಮತ್ತು ಈಕೆಯ ಪತಿ ರೋಹ್‍ಮಿಂಗ್ಲಿಯಾನ ಮೃತರಾಗಿದ್ದಾರೆ. ನಿನ್ನೆ ಮಧ್ಯಾಹ್ನ 12:15ರ ವೇಳೆಗೆ ಬಾಂಬ್ ಸ್ಫೋಟವಾಗಿದೆ. ಆತ್ಮಾಹುತಿ ಬಾಂಬ್ ಸಿಡಿಸಿ ಹೆಂಡತಿಯನ್ನು ಕೊಲ್ಲಲು ಮುಂದಾದ ಗಂಡ, ಆ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

     

    ಮಹಿಳೆ ರೋಹ್‍ಮಿಂಗ್ಲಿಯಾನನ್ನು ಎರಡನೇ ಮದುವೆಯಾಗಿದ್ದಳು. ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಪ್ರತ್ಯೇಕವಾಗಿ ಒಂದು ವರ್ಷದಿಂದ ವಾಸವಾಗಿದ್ದರು. ಆದರೆ ಅವರು ನಿನ್ನೆ ಒಂದೇ ಕಡೆ ಸೇರಿದ್ದರು. ತರಕಾರಿ ಮಾರುತ್ತಿದ್ದ ಆ ಮಹಿಳೆಯನ್ನು ಹುಡುಕಿ ಬಂದ ಆಕೆಯ ಪತಿ, ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ಮಗಳು ದೂರ ಹೋದ ನಂತರ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್

    ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದು ಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿ ಕೆಳಗೆ ಬೀಳುವವನಿದ್ದ. ಆಗ ಎದ್ದು ನಿಂತ ಆತನ ಹೆಂಡತಿಯನ್ನು ಜೋರಾಗಿ ತಬ್ಬಿಕೊಂಡ ಕೂಡಲೇ ಬಾಂಬ್ ಸ್ಫೋಟವಾಗಿತ್ತು. ಸುತ್ತಮುತ್ತಲಿದ್ದವರು ನೋಡನೋಡುತ್ತಿದ್ದಂತೆಯೇ ಅವರಿಬ್ಬರ ದೇಹ ಛಿದ್ರವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಪಿಡಿಒನಿಂದ ರಾಷ್ಟ್ರಪತಿವರೆಗೆ RSS ಕಾರ್ಯಕರ್ತರೇ ಇರೋದು- ಹೆಚ್‍ಡಿಕೆಗೆ ಸುನೀ

    ಈ ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ. ಬಾಂಬ್ ತಯಾರಿಸಲು ಬಳಸುವ ಜಿಲೆಟಿನ್ ಅನ್ನು ಬಟ್ಟೆಯೊಳಗೆ ಇಟ್ಟುಕೊಂಡಿದ್ದ ಗಂಡ ತಾನೂ ಸತ್ತು ಹೆಂಡತಿಯನ್ನೂ ಕೊಂದಿದ್ದಾನೆ.

  • ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂ ಬಹುಮಾನ

    ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂ ಬಹುಮಾನ

    ಐಜ್ವಾಲ್: ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಈಶಾನ್ಯ ರಾಜ್ಯ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಹೇಳಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ.

    ಜನಸಂಖ್ಯೆ ನಿಯಂತ್ರಣಕ್ಕೆ ದೇಶಗಳು ಯೋಜನೆ ರೂಪಿಸುತ್ತಿರುವ ಈ ಸಮಯದಲ್ಲಿ ಮಿಜೋರಾಂ ಸಚಿವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಆದರೆ ಇವರ ಹೇಳಿಕೆಯ ಹಿಂದಿನ ಉದ್ದೇಶ ತುಂಬಾ ವಿಭಿನ್ನವಾಗಿದೆ. ಇದನ್ನೂ ಓದಿ: ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್

    ಮೀಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಈ ಹೇಳಿಕೆ ನೀಡಿದ್ದು, ಬಹುಮಾನಕ್ಕೆ ಅರ್ಹರಾಗಬೇಕಾದರೆ ಕನಿಷ್ಠ ಎಷ್ಟು ಮಕ್ಕಳಿರಬೇಕು ಎಂದು ತಿಳಿಸಿಲ್ಲ. ಸಣ್ಣಗಾತ್ರದ ಮಿಜೋ ಸಮುದಾಯಗಳಲ್ಲಿ ಜನಸಂಖ್ಯೆ ಹೆಚ್ಚಿಸುವ ಕಾರಣದಿಂದ ಸಚಿವ ರಾಬರ್ಟ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ನೀಡಲಾಗುವುದು. ಅದರೊಂದಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೂರು ಮಕ್ಕಳ ನೀತಿ ಪ್ರಕಟಿಸಿದ ಚೀನಾ ಸರ್ಕಾರ – ಯಾಕೆ ಈ ನಿರ್ಧಾರ?

    ಮಿಜೋರಾಂನ ಕೆಲವು ಜನಾಂಗಗಳಲ್ಲಿ ಜನಸಂಖ್ಯೆ ತೀರಾ ಕಡಿಮೆಯಾಗಿದೆ, ಇದೊಂದು ಗಂಭೀರ ಸಮಸ್ಯೆಯಾಗಿದೆ. ಸಣ್ಣ ಬುಡಕಟ್ಟು ಪಂಗಡಗಳ ಉಳಿವು ಮತ್ತು ಅಭಿವೃದ್ದಿಗೆ ಇದು ಮಾರಕವಾಗಿದೆ ಎಂದು ಸಚಿವ ರಾಬರ್ಟ್ ಹೇಳಿದ್ದಾರೆ.

    ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದಲ್ಲಿ ತಮ್ಮ ದೇಶದ ಜನಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅನುಮತಿ ನೀಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭಾರತದ ಮಿಜೋರಾಂ ಇದೇ ವಿಷಯಕ್ಕೆ ಮತ್ತೆ ಸುದ್ದಿಯಾಗುತ್ತಿದೆ.