Tag: ಐಜಿ ಪ್ರವೀಣ್ ಪವಾರ್

  • ದೋಣಿ ಮೂಲಕ ಕೇರಳದಿಂದ ರಾಜ್ಯಕ್ಕೆ ಬರುವುದೂ ನಿಷೇಧ

    ದೋಣಿ ಮೂಲಕ ಕೇರಳದಿಂದ ರಾಜ್ಯಕ್ಕೆ ಬರುವುದೂ ನಿಷೇಧ

    ಮೈಸೂರು: ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗ ಬಾವಲಿಗೆ ಐಜಿ ಪ್ರವೀಣ್ ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನದಿ ಹಾಗೂ ಕಾಡಿನ ಮೂಲಕ ಜನರು ರಾಜ್ಯಕ್ಕೆ ಬರುವ ಆತಂಕ ಹಿನ್ನಲೆಯಲ್ಲಿ ದೋಣಿ ಓಡಾಟಕ್ಕೆ ತಾಲೂಕು ಆಡಳಿತ ಬ್ರೇಕ್ ಹಾಕಿದೆ. ಈ ಹಿನ್ನಲೆ ನದಿ ಹಾಗೂ ಕಾಡಿನ ರಸ್ತೆಗಳ ಪರಿಶೀಲನೆ ನಡೆಸಿದರು. ದೋಣಿ ಮೂಲಕ ಸಹ ಕೇರಳದವರನ್ನು ರಾಜ್ಯದೊಳಗೆ ಬಿಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಐಜಿ ಪ್ರವೀಣ್ ಪವಾರ್‍ಗೆ ಎಸ್‍ಪಿ ಚೇತನ್, ಟಿಎಚ್ ಓ, ನೋಡಲ್ ಅಧಿಕಾರಿ ಸಾಥ್ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಐಜಿ, ದೋಣಿ ಸಂಚಾರ ನಿಷೇಧ, ಕಾಡಿನ ರಸ್ತೆಯ ಸಂಚಾರ ನಿಷೇಧ ಮಾಡಿರುವ ಬಗ್ಗೆ ಮಾಹಿತಿ ಪಡೆದು, ಅನಗತ್ಯವಾಗಿ ಓಡಾಡಿದರೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.