Tag: ಐಜಿಪಿ ಅಲೋಕ್ ಕುಮಾರ್

  • ಪರೇಡ್ ವೇಳೆ ರೌಡಿಶೀಟರ್ ಗೆ ನೆರಳಲ್ಲಿ ಕೂರಲು ಅವಕಾಶ ಕೊಟ್ಟ ಪೇದೆಗೆ ಐಜಿಪಿ ಫುಲ್ ಕ್ಲಾಸ್

    ಪರೇಡ್ ವೇಳೆ ರೌಡಿಶೀಟರ್ ಗೆ ನೆರಳಲ್ಲಿ ಕೂರಲು ಅವಕಾಶ ಕೊಟ್ಟ ಪೇದೆಗೆ ಐಜಿಪಿ ಫುಲ್ ಕ್ಲಾಸ್

    ವಿಜಯಪುರ: ಜಿಲ್ಲೆಯ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ರೌಡಿಗಳಿಗೆ ಪರೇಡ್ ನಡೆಸಿದರು. ವಿಜಯಪುರದ ಪೊಲೀಸ್ ಕ್ಯಾಂಟೀನ್ ಆವರಣದಲ್ಲಿ ಇಂದು ಬೆಳಗ್ಗೆ ರೌಡಿಗಳಿಗೆ ಐಜಿಪಿ ಅಲೋಕ್ ಕುಮಾರ್ ಖಡಕ್ ಕ್ಲಾಸ್ ತೆಗೆದುಕೊಂಡರು.

    ಜಿಲ್ಲೆಯಿಂದ ಹೊರಹೋಗುವಂತೆ ರೌಡಿಗಳಿಗೆ ಎಚ್ಚರಿಕೆ ಕೂಡಾ ಮಾಡಿದರು. ಅಲ್ಲದೇ, ಪುಡಿ, ಮರಿ ರೌಡಿಗಳಿಗೂ ಕೂಡಾ ಐಜಿಪಿ ಅಲೋಕ್ ಕುಮಾರ್ ಪರೇಡ್ ನಡೆಸಿದರು.

    ಇದೇ ಸಂದರ್ಭದಲ್ಲಿ ರೌಡಿ ಶೀಟರ್ ಗೆ ನೆರಳಲ್ಲಿ ಕೂರಲು ಅವಕಾಶ ಕೊಟ್ಟಿದ್ದ ಕ್ರೈಂ ಪೊಲೀಸ್ ಪೇದೆಯೊಬ್ಬರಿಗೆ ಕ್ಲಾಸ್ ಕೂಡ ತೆಗೆದುಕೊಂಡರು. ರೌಡಿಗಳಿಗೆ ನೀವು ಸಾತ್ ನೀಡುತ್ತಿರಾ, ನಿಮಗೆ ನಾಚಿಕೆ ಆಗಲ್ವಾ ಎಂದು ಸಖತ್ ಕ್ಲಾಸ್ ತೆಗೆದುಕೊಂಡರು. ಆದಷ್ಟು ಬೇಗ ರೌಡಿಗಳು ಜಾಗ ಖಾಲಿ ಮಾಡದಿದ್ದರೆ ನಾನೇ ನಿಮ್ಗೆ ಜಾಗ ಖಾಲಿ ಮಾಡಿಸೋದಾಗಿ ಎಚ್ಚರಿಕೆ ನೀಡಿದರು.

    ಐಜಿಪಿ ಅಲೋಕ್ ಕುಮಾರ ಎಚ್ಚರಿಕೆಯಿಂದ ಜಿಲ್ಲೆಯಲ್ಲಿರುವ ರೌಡಿ ಶೀಟರ್ ಗಳಲ್ಲಿ ನಡುಕ ಹುಟ್ಟಿದೆ.