Tag: ಐಜಿಪಿ

  • ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ – ಸಾತನೂರಿಗೆ ಐಜಿಪಿ ಭೇಟಿ

    ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ – ಸಾತನೂರಿಗೆ ಐಜಿಪಿ ಭೇಟಿ

    ರಾಮನಗರ: ಕನಕಪುರ (Kanakapura) ತಾಲೂಕಿನ ಸಾತನೂರಿನಲ್ಲಿ (Sathanur) ಗೋವುಗಳ ಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಈ ಬೆನ್ನಲ್ಲೇ ಸೋಮವಾರ ಸಂಜೆ ಐಜಿಪಿ (IGP) ರವಿಕಾಂತೇಗೌಡ ಸಾತನೂರಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

    ಮಂಡ್ಯ (Mandya) ಮೂಲದ ಇದ್ರೀಷ್ ಪಾಷಾ ಸಾವಿಗೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಕಾರಣ ಎಂದು ಪಾಷಾ ಕುಟುಂಬಸ್ಥರ ದೂರಿನ ಅನ್ವಯ ಎಫ್‌ಐಆರ್ (FIR) ದಾಖಲಾಗಿದ್ದು, ಪುನೀತ್ ಕೆರೆಹಳ್ಳಿ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಂತೆ ಒತ್ತಾಯಿಸಿ, ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ 

    ಇತ್ತ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಕೂಡಾ ಪ್ರಕರಣ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಇಡೀ ಪ್ರಕರಣದ ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧನಿದ್ದೇನೆ. ಅನವಶ್ಯಕವಾಗಿ ನನ್ನನ್ನು ತಪ್ಪಿತಸ್ಥ ಎಂದು ದೂರಲಾಗುತ್ತಿದೆ. ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ನಾಯಕರು ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಡೀ ಘಟನೆಯನ್ನು ನಾನು ಫೇಸ್‌ಬುಕ್ (Facebook) ಲೈವ್ ಮಾಡಿದ್ದೇನೆ. ಆದರೆ ಪೊಲೀಸರು ನನ್ನ ಲೈವ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ಎಫ್‌ಐಆರ್ ಅನ್ನು ಎಡಿಟ್ ಮಾಡಿ ನನ್ನ ಮೇಲೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ VIP ಅಭ್ಯರ್ಥಿ ಹಾಕಲು ತಯಾರಿ

  • ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಕಲಬುರಗಿ (Kalaburagi), ಬೆಳಗಾವಿ (Belagavi), ಬಳ್ಳಾರಿ ಹಾಗೂ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 11 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ (Government Of Karnataka) ಆದೇಶ ಹೊರಡಿಸಿದೆ.

    ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪ್ರಿನ್ಸಿಪಲ್ ಸೆಕ್ರೇಟರಿ ಆಗಿದ್ದ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಐಎಸ್‌ಡಿ ಹೆಚ್ಚುವರಿ ಪೊಲೀಸ್ (Police) ಮಹಾ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಎಸಿಬಿ (ACB) ಸೀಮಂತ್ ಕುಮಾರ್ ಸಿಂಗ್ ಅವರನ್ನ ಕೆಎಸ್‌ಆರ್‌ಪಿ (KSRP) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಜಡೇಜಾ

    ಕೆಎಸ್‌ಆರ್‌ಪಿ ಐಜಿಪಿ (IGP) ಆಗಿದ್ದ ಎಸ್.ರವಿ ಅವರನ್ನು ಪೊಲೀಸ್ ಅಂಡ್ ಪ್ರಿನ್ಸಿಪಲ್ ಸೆಕ್ರಟೆರಿ ಆಗಿ ವರ್ಗಾಯಿಸಲಾಗಿದೆ. ಅಜಯ್ ಹಿಲೋರಿ ಅವರನ್ನ ಡಿಸಿಆರ್‌ಇ (DCRE) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

    ಸಾಂದರ್ಭಿಕ ಚಿತ್ರ

    ಇನ್ನುಳಿದಂತೆ ಎಸಿಬಿ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಚಂದ್ರ ಅವರನ್ನ ಡಿಸಿಪಿ-2 ಅಪರಾಧ ವಿಭಾಗಕ್ಕೆ, ಕಲಬುರಗಿ ಜಿಲ್ಲೆಯ ಎಸಿಬಿ ಎಸ್ಪಿ ಆಗಿದ್ದ ವೈ ಅಮರನಾಥ ರೆಡ್ಡಿ ಅವರನ್ನ ಗುಪ್ತಚರ ದಳದ ಅಧೀಕ್ಷಕರಾಗಿ, ಎಸಿಬಿ ಎಸ್ಪಿ ಆಗಿದ್ದ ಡಾ.ಶೋಭಾರಾಣಿ ಅವರನ್ನ ಬೆಂಗಳೂರಿನ ಬಿಎಂಟಿಎಫ್ ಆಗಿ, ಎಸಿಬಿ ಎಸ್ಪಿ ಆಗಿದ್ದ ವಿ.ಜಿ ಸುಜೀತ್, ಬಳ್ಳಾರಿ ಎಸಿಬಿ ಎಸ್ಪಿ ಆಗಿದ್ದ ಬಿ.ಎಲ್. ಶ್ರೀಹರಿ ಬಾಬು ಹಾಗೂ ವಿಜಯಪುರದ ಹೆಚ್ಚುವರಿ ಎಸ್ಪಿ ಆಗಿದ್ದ ರಾಮ್ ಎಲ್ ಅರಸಿದ್ದಿ ಅವರನ್ನ ಲೋಕಾಯುಕ್ತ ಎಸ್ಪಿ ಆಗಿ ವರ್ಗಾಯಿಸಿದರೆ, ಬೆಳಗಾವಿ ಎಸಿಬಿ ಎಸ್ಪಿ ಆಗಿದ್ದ ಬಾಬಸಾಬ್ ನೇಮಗೌಡ್ ಅವರನ್ನು ಬೆಳಗಾವಿ ಗುಪ್ತಚರ ದಳದ ಅಧೀಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಲೋಕಾಯುಕ್ತ ಐಜಿಪಿಯಾಗಿ ಸುಬ್ರಹ್ಮಣ್ಯೇಶ್ವರ ರಾವ್‌ ನೇಮಕ

    ಲೋಕಾಯುಕ್ತ ಐಜಿಪಿಯಾಗಿ ಸುಬ್ರಹ್ಮಣ್ಯೇಶ್ವರ ರಾವ್‌ ನೇಮಕ

    ಬೆಂಗಳೂರು: ಲೋಕಾಯುಕ್ತ (Lokayukta) ಐಜಿಪಿಯಾಗಿ (IGP) ಎ.ಸುಬ್ರಹ್ಮಣ್ಯೇಶ್ವರ ರಾವ್‌ (A.Subramanyeswara Rao) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಸುಬ್ರಹ್ಮಣ್ಯೇಶ್ವರ ರಾವ್ ಅವರು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದರು. ಈಗ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ರಾಜ್ಯ ಸರ್ಕಾರ ವರ್ಗಾಯಿಸಿದೆ. ರಾವ್‌ ಅವರು ಈ ಹಿಂದೆ ಸಿಬಿಐನಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಗ್ಗೆ ಸರ್ಕಾರಕ್ಕೆ, ಸಿಎಂಗೆ ಬದ್ಧತೆಯಿಲ್ಲ: ಡಿ.ಕೆ.ಶಿವಕುಮಾರ್

    ಸಿದ್ದರಾಮಯ್ಯ ಸರ್ಕಾರ ಹುಟ್ಟುಹಾಕಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ACB) ಈಚೆಗೆ ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿತು. ಆ ಮೂಲಕ ಹಲ್ಲಿಲ್ಲದ ಹುಲಿಯಂತಾಗಿದ್ದ ಲೋಕಾಯುಕ್ತಕ್ಕೆ ಬಲ ನೀಡಿತ್ತು.

    ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹೈಕೋರ್ಟ್‌ ವರ್ಗಾಯಿಸಲು ಆದೇಶಿಸಿತ್ತು. ಹೈಕೋರ್ಟ್‌ ಕ್ರಮಕ್ಕೆ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ಎರಡುವರೆ ವರ್ಷ ಮೂರು ತಿಂಗಳ ಕಾಲ ಅಧಿಕಾರ ನಡೆಸಿದ ನೀಲಮಣಿ ಎನ್.ರಾಜು ಇಂದು ಸೇವೆಯಿಂದ ನಿವೃತ್ತಿಹೊಂದಿದರು.

    ಡಿಜಿ, ಐಜಿಪಿ ಜೊತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿ ಪಡೆದರು. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ, ವಸತಿ ಮೂಲ ಸೌಕರ್ಯ ನಿಗಮದ ಡಿಜಿಪಿ ನಿವೃತ್ತಿಯಾದರು. ನಿವೃತ್ತಿಯಾದ ಮೂವರು ಅಧಿಕಾರಿಗಳಿಗೆ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ಬಿಳ್ಕೋಡೆಗೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳ ಬಿಳ್ಕೋಡೆಗೆ ಕಾರ್ಯಕ್ರಮಕ್ಕೆ ಗೃಹ ಇಲಾಖೆ ಅಪರ ಕಾರ್ಯದರ್ಶಿ ರಜನೀಶ್ ಗೊಯಲ್, ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

    ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಾರಥಿಯಾಗಿ ಕೆಲಸ ಮಾಡುವುದಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಹಾಗೂ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಭದ್ರತೆಗೆ ಕೇಂದ್ರ ಚುನಾವಣಾ ಆಯೋಗ ಪ್ರಶಂಸೆಯ ಪತ್ರಕೊಟ್ಟಿದೆ. ಇದು ಕರ್ನಾಟಕ ಪೊಲೀಸರಿಗೆ ಸಿಕ್ಕ ದೊಡ್ಡಗೌರವ. ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಜನಸ್ನೇಹಿ ಪೊಲೀಸ್ ಸೇರಿ ಹಲವು ರೀತಿಯ ಬದಲಾವಣೆಗಳನ್ನ ಮಾಡಿದ್ದೇನೆ. ಇಲಾಖೆಯಲ್ಲಿ 100 ಪರ್ಸೆಂಟ್ ಯಶಸ್ಸು ಖಂಡಿರುವ ಹೆಮ್ಮೆ ಇದೆ ಎಂದು ತನ್ನ ಅಧಿಕಾರದ ಅವಧಿಯಲ್ಲಾದ ಕೆಲಸಗಳು ಹಾಗೂ ಘಟನೆಗಳ ಬಗ್ಗೆ ನೀಲಮಣಿ ಅವರು ಮೇಲಕು ಹಾಕಿದರು.

  • ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತಕ್ಕೆ ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಮೂಲಕ ತಿಳಿದು ಬಂದಿದೆ.

    ಭಕ್ತರು ಸೇವಿಸಿದ್ದ ವಿಷ ಪ್ರಸಾದದಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮೊದಲಿಗೆ ನೀರಿನಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿಕೊಂಡು ಬಳಿಕ ಪ್ರಸಾದಕ್ಕೆ ಬೆರೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಖಚಿತವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ಕರೆದುಕೊಂಡು ಪ್ರಶ್ನೆ ಮಾಡಿ ವಿಚಾರಣೆ ಮಾಡುತ್ತಿದ್ದೇವೆ. ಶೀಘ್ರವಾಗಿಯೇ ತನಿಖೆ ನಡೆಯುತ್ತಿದೆ ಎಂದು ಶರತ್ ಚಂದ್ರ ಅವರು ಹೇಳಿದ್ದಾರೆ. ಈಗಾಗಲೇ ಮಾರಮ್ಮ ದೇವಾಲಯದ ವಿಷಪ್ರಸಾದಕ್ಕೆ 14 ಮಂದಿ ಮೃತಪಟ್ಟಿದ್ದು, ಮೃತಪಟ್ಟ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಕೀಟನಾಶಕ ಶಂಕೆಯಿತ್ತು:
    ದೇವರ ಪ್ರಸಾದದಲ್ಲಿ ವಿಷ ಬೆರತಿರುವುದರಿಂದ ಈ ದುರಂತ ಸಂಭವಿಸಿರಬಹುದು ಎಂದು ಕೆ.ಆರ್.ಆಸ್ಪತ್ರೆಯ ವೈದ್ಯರಾದ ರಾಜೇಶ್ ಕುಮಾರ್ ಶುಕ್ರವಾರವೇ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಅವರು, ಇದೂವರೆಗೂ ಕೆಆರ್ ಆಸ್ಪತ್ರೆಯಲ್ಲಿ ಒಟ್ಟು 25 ಮಂದಿ ದಾಖಲಾಗಿದ್ದಾರೆ. ಅಸ್ವಸ್ಥರಾಗಿರುವವರೆಲ್ಲಾ ಉಸಿರಾಡಲೂ ಸಹ ಕಷ್ಟ ಪಡುತ್ತಿದ್ದಾರೆ. ಅಸ್ವಸ್ಥರ ಗುಣಲಕ್ಷಣಗಳನ್ನು ನೋಡಿದರೇ, ಆಹಾರದಲ್ಲಿ ಕೀಟನಾಶಕ ಬೆರೆತಿರುವ ಸಂಶಯ ವ್ಯಕ್ತವಾಗುತ್ತಿದೆ. ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾಗಿ ಈಗ ಹೇಳಲು ಸಾಧ್ಯವಾಗುವುದಿಲ್ಲ. ರೋಗಿಗಳ ರಕ್ತ, ವಾಂತಿ ಹಾಗೂ ಆಹಾರದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣವನ್ನು ಹೇಳಬಹುದೆಂದು ತಿಳಿಸಿದ್ದರು.

    ನಡೆದಿದ್ದು ಏನು?
    ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ.

    https://www.youtube.com/watch?v=EBJ_QLJGny8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv