Tag: ಐಒಎಸ್

  • ಭಾರತ ತಯಾರಿಸಲಿದೆ ಸ್ವಂತ ಮೊಬೈಲ್ ಒಎಸ್ – ಐಒಎಸ್, ಆಂಡ್ರಾಯ್ಡ್‌ಗೆ ಕೊಡಲಿದೆಯಾ ಟಕ್ಕರ್?

    ಭಾರತ ತಯಾರಿಸಲಿದೆ ಸ್ವಂತ ಮೊಬೈಲ್ ಒಎಸ್ – ಐಒಎಸ್, ಆಂಡ್ರಾಯ್ಡ್‌ಗೆ ಕೊಡಲಿದೆಯಾ ಟಕ್ಕರ್?

    ನವದೆಹಲಿ: ಸ್ಮಾರ್ಟ್ ಫೋನ್ ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಆಂಡ್ರಾಯ್ಡ್ ಇಲ್ಲವೇ ಐಒಎಸ್ ಫೋನ್‌ಗಳು. ಗೂಗಲ್ ಹಾಗೂ ಆಪಲ್ ಕಂಪನಿ ಅಭಿವೃದ್ಧಿ ಪಡಿಸಿರುವ ಆಂಡ್ರಾಯ್ಡ್ ಹಾಗೂ ಐಒಎಸ್ ಪೋನ್‌ಗಳಿಗೆ ಟಕ್ಕರ್ ನೀಡುವಂತಹ ಇತರ ಯಾವುದೇ ಕಂಪನಿಗಳು ಇಲ್ಲಿಯವರೆಗೆ ಬೆಳೆದು ನಿಂತಿಲ್ಲ. ಆದರೆ ಇದೀಗ ಭಾರತ ತನ್ನದೇ ಆದ ಹೊಸ ಆಪರೇಟಿಂಗ್ ಸಿಸ್ಟಮ್(ಒಎಸ್) ಅನ್ನು ಹೊರ ತರಲು ಯೋಜಿಸುತ್ತಿದೆ.

    ಈ ಹಿಂದೆ ಮೈಕ್ರೊಸಾಫ್ಟ್ ಹಾಗೂ ಇತರ ಸಣ್ಣ ಪುಟ್ಟ ಕಂಪನಿಗಳು ತನ್ನದೇ ಆದ ಮೊಬೈಲ್ ಒಎಸ್‌ಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತಂದಿವೆ. ಆದರೆ ಆಂಡ್ರಾಯ್ಡ್ ಅಥವಾ ಐಒಎಸ್ ಬೆಳೆದಿರುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿಲ್ಲ. ಇದೀಗ ಭಾರತ ಇವುಗಳಿಗೆ ಟಕ್ಕರ್ ನೀಡುವಂತಹ ಒಎಸ್ ತರಲಿದೆ ಎಂಬ ವಿಷಯ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತಕ್ಕೆ ಇಂಧನ ಭದ್ರತೆ ಪೂರೈಸಲು ಸಿದ್ಧ ಎಂದ ಇರಾನ್

    ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್‌ಗಳಿಗೆ ಹೊಸದಾದ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ತಿನಲ್ಲಿ ತಿಳಿಸಿದ್ದರು.

    ಭಾರತದಲ್ಲಿ ತಯಾರಾಗಲಿರುವ ಒಎಸ್ ಕೇವಲ ಭಾರತೀಯ ಮಾರುಕಟ್ಟೆಗೆ ಸೀಮಿತವಾಗಲಿದೆಯೇ ಎಂದು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಚಂದ್ರಶೇಖರ್ ದೇಶದಲ್ಲಿ ತಯಾರಾಗಲಿರುವ ಒಎಸ್ ದೇಶದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನಲಾಗುವುದಿಲ್ಲ ಎಂದಿದ್ದಾರೆ.

    ಈ ಹೇಳಿಕೆ ಮೂಲಕ ಭಾರತದಲ್ಲಿ ತಯಾರಾಗಲಿರುವ ಒಎಸ್‌ಗಳು ಇತರ ದೇಶಗಳಿಗೂ ರಫ್ತಾಗುವ ಸಾಧ್ಯತೆ ಇದ್ದು, ಇದರ ವ್ಯಾಪಕ ಮಾರಾಟದ ಬಗ್ಗೆಯೂ ಸರ್ಕಾರ ಯೋಜಿಸುತ್ತಿದೆ ಎಂಬ ಬಗ್ಗೆ ಸುಳಿವು ದೊರಕಿದೆ. ಇದನ್ನೂ ಓದಿ: ಇನ್ನು ಮುಂದೆ ಪಾಸ್‌ವರ್ಡ್ ಹಂಚಿಕೆಗೂ ಹೆಚ್ಚುವರಿ ಶುಲ್ಕ ವಿಧಿಸಲಿದೆ ನೆಟ್‌ಫ್ಲಿಕ್ಸ್

    ಸ್ಟ್ಯಟಿಸ್ಟಾ ಡೇಟಾ ಪ್ರಕಾರ 2021ರಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಆಪರೇಟಿಂಗ್ ಸಿಸ್ಟಂ ಮಾರುಕಟ್ಟೆಯ ಶೇ.95.85 ರಷ್ಟು ಪಾಲನ್ನು ಆಂಡ್ರಾಯ್ಡ್ ಹೊಂದಿದ್ದರೆ, ಆಪಲ್‌ನ ಐಒಎಸ್ ಕೇವಲ ಶೇ.3.1 ರಷ್ಟು ಪಾಲನ್ನು ಹೊಂದಿದೆ. ಆಂಡ್ರಾಯ್ಡ್ ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ 5 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ ಹಾಗೂ ಐಒಎಸ್ ಫೋನ್‌ಗಳು 44 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ.

    ಇದೀಗ ಭಾರತದಲ್ಲಿ ತಯಾರಾಗಲಿರುವ ಫೋನ್‌ಗಳು ಎಷ್ಟು ಬೆಲೆಗೆ ಜನರ ಕೈಗೆ ಎಟುಕಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.

  • ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೊಟ್ಟ ಮೊದಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಟ್ರಂಪ್ ವರ್ಷದ ಬಳಿಕ ಸಾಮಾಜಿಕ ಮಾಧ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ.

    ಟ್ರಂಪ್ ಬಿಡುಗಡೆ ಮಾಡಿರುವ ಟ್ರೂಥ್ ಸೋಶಿಯಲ್ ಆ್ಯಪ್ ಹೆಸರೇ ಹೇಳುವಂತೆ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಆ್ಯಪ್ ಆ್ಯಪಲ್‍ನ ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್‍ಗೆ ಲಭ್ಯವಿದೆ.

    ಹಿಂಸಾಚಾರ ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಅಮೆರಿಕ ಮಾಜಿ ಅಧ್ಯಕ್ಷನ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ತನ್ನದೇ ಸ್ವಂತ ಅಪ್ಲಿಕೇಶನ್ ಅನ್ನು ಹೊರತರುವ ಮೂಲಕ ಸಾಮಾಜಿಕ ಮಾಧ್ಯಮ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

    ಟ್ರೂಥ್ ಸೋಶಿಯಲ್ ಆ್ಯಪ್ ಬಿಡುಗಡೆ ಬಗ್ಗೆ 2021ರ ಅಕ್ಟೋಬರ್‍ನಲ್ಲೇ ಸುದ್ದಿಯಾಗಿತ್ತು. ಇದೀಗ ಆ್ಯಪ್ ಕೊನೆಗೂ ಡೌನ್‍ಲೋಡ್ ಮಾಡಲು ಲಭ್ಯವಾಗಿದೆ. ಆಂಡ್ರಾಯ್ಡ್‍ಗೆ ಆ್ಯಪ್ ಸದ್ಯ ಲಭ್ಯವಾಗಿಲ್ಲವಾದರೂ ಐಒಎಸ್ ಬಳಕೆದಾರರು ಆ್ಯಪ್ ಅನ್ನು ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಬಹುದು.

    ಟ್ರೂಥ್ ಸೋಶಿಯಲ್‍ನ ಫೀಚರ್‍ಗಳೇನು?
    ಟ್ರೂಥ್ ಸೋಶಿಯಲ್ ಆ್ಯಪ್ ರಾಜಕೀgಯ ತಾರತಮ್ಯ ಮುಕ್ತವಾಗಿದೆ. ಈ ಆ್ಯಪ್‍ಗೆ ಯಾರು ಬೇಕಾದರೂ ಪ್ರವೇಶಿಸಬಹುದು ಹಾಗೂ ಜನರು ತಮ್ಮ ಅಭಿಪ್ರಾಯ, ಫೋಟೋ, ಸುದ್ದಿ, ವೀಡಿಯೋ ಲಿಂಕ್‍ಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು.

    ಆ್ಯಪ್ ಸ್ಟೊರ್‍ನಲ್ಲಿ ನೀಡಿರುವ ವಿವರಣೆ(ಡಿಸ್ಕ್ರಿಪ್‍ಶನ್) ಪ್ರಕಾರ ನಿಮ್ಮ ಪ್ರೊಫೈಲ್‍ನಲ್ಲಿ ನಿಮ್ಮನ್ನು ಫಾಲೋ ಮಾಡುವವರ ಹಾಗೂ ನೀವು ಫಾಲೋ ಮಾಡುತ್ತಿರುವವರ ಪಟ್ಟಿಯನ್ನು ನೋಡಬಹುದು. ನಿಮ್ಮ ಪೋಸ್ಟ್ ಹಾಗೂ ಲೈಕ್ಸ್‍ಗಳ ಇತಿಹಾಸವನ್ನೂ ಇದು ತೋರಿಸುತ್ತದೆ. ಇದನ್ನೂ ಓದಿ: ಹೊಸ ಗೆಳತಿಯನ್ನು ಪರಿಚಯಿಸಿದ ಮಸ್ಕ್

    ಆ್ಯಪ್‍ನ ಫೀಡ್ ಸೆಕ್ಷನ್‍ನಲ್ಲಿ ನೀವು ಫಾಲೋ ಮಾಡುವ ವ್ಯಕ್ತಿಗಳ ಪೋಸ್ಟ್‍ಗಳು ಕಾಣಿಸುತ್ತವೆ ಹಾಗೆಯೇ ನಿಮ್ಮ ಆಸಕ್ತಿಕರ ವಿಷಯಗಳ ಬಗೆಗಿನ ಲೇಟೆಸ್ಟ್ ವಿಷಯಗಳನ್ನೂ ಇದು ತೋರಿಸುತ್ತದೆ.

  • ವಾಟ್ಸಪ್ ಕಾರ್ಯ ಸ್ಥಗಿತ – ಆಂಡ್ರಾಯ್ಡ್, ಐಫೋನ್ ಫೋನ್‌ಗಳ ಪಟ್ಟಿ ಇಲ್ಲಿದೆ

    ವಾಷಿಂಗ್ಟನ್: ವಾಟ್ಸಪ್ 2022ರಲ್ಲಿ ಹಲವು ಹಳೆಯ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಸಿದ್ಧವಾಗಿದೆ. ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಆಂಡ್ರಾಯ್ಡ್ ಹಾಗೂ ಐಒಎಸ್‌ನ ಹಳೆಯ ಆವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇತ್ತೀಚಿನ ವರದಿ ತಿಳಿಸಿದೆ.

    ಹೌದು, ವಾಟ್ಸಪ್ ಒಂದು ವೇಳೆ ನಿಮ್ಮ ಹಳೆಯ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಸಂದೇಶ, ಫೋಟೋ ವೀಡಿಯೋಗಳನ್ನು ಇತರರಿಗೆ ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ 4.1 ಆವೃತ್ತಿ ನಂತರದ ಓಎಸ್ ಮತ್ತು ಐಒಎಸ್ 10 ಹಾಗೂ ಅದರ ನಂತರದ ಆವೃತ್ತಿಗಳಲ್ಲಿ ಮಾತ್ರವೇ ವಾಟ್ಸಪ್ ಬಳಕೆ ಸಾಧ್ಯವಾಗಲಿದೆ.

    ನಿಮ್ಮ ಹಳೆಯ ಫೋನ್‌ನಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು ನಿಮ್ಮ ಫೋನ್‌ನ ಸಾಫ್ಟ್‌ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸುವುದು ಅಗತ್ಯ. ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಸಾಫ್ಟ್‌ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸಬಹುದು. ಇದನ್ನೂ ಓದಿ: ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

    ಗಮನಿಸಬೇಕಾದ ವಿಷಯವೆಂದರೆ ವಾಟ್ಸಪ್ ಇಂಡಿಯಾ ಇದನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಬ್ರೆಜಿಲ್‌ನ ಹಲವು ಫೋನ್‌ಗಳಲ್ಲಿ ವಾಟ್ಸಪ್ ಕಾರ್ಯ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಶೀಘ್ರವೇ ಭಾರತ ಹಾಗೂ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸುವ ಸಾಧ್ಯತೆ ಇದೆ. 2022ರಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಫೋನ್‌ಗಳ ಪಟ್ಟಿ ಇಲ್ಲಿದೆ.

    ಆಂಡ್ರಾಯ್ಡ್ ಫೋನ್‌ಗಳು:
    ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ 2, ಮಿನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್3, ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ 2, ಸ್ಯಾಮ್ಸಂಗ್ ಗ್ಯಾಲಕ್ಸಿ ಎಕ್ಸ್ಕವರ್ 2, ಸ್ಯಾಮ್ಸಂಗ್ ಗ್ಯಾಲಕ್ಸಿ ಕೋರ್.

    ಎಲ್‌ಜಿ ಲುಸಿಡ್ 2, ಎಲ್‌ಜಿ ಆಪ್ಟಿಮಸ್ ಎಫ್7, ಎಲ್‌ಜಿ ಆಪ್ಟಿಮಸ್ ಎಲ್3 2ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್5, ಎಲ್‌ಜಿ ಆಪ್ಟಿಮಸ್ ಎಲ್5 2, ಎಲ್‌ಜಿ ಆಪ್ಟಿಮಸ್ ಎಲ್5 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಲ್3 2, ಎಲ್‌ಜಿ ಆಪ್ಟಿಮಸ್ ಎಲ್7 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್7 2, ಎಲ್‌ಜಿ ಆಪ್ಟಿಮಸ್ ಎಫ್6, ಎಲ್‌ಜಿ ಆ್ಯಕ್ಟ್, ಎಲ್‌ಜಿ ಆಪ್ಟಿಮಸ್ ಎಲ್4 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್3, ಎಲ್‌ಜಿ ಆಪ್ಟಿಮಸ್ ಎಲ್4 2, ಎಲ್‌ಜಿ ಆಪ್ಟಿಮಸ್ ಎಲ್2 2, ಎಲ್‌ಜಿ ಆಪ್ಟಿಮಸ್ ಎಫ್3ಕ್ಯೂ, ಇದನ್ನೂ ಓದಿ: ನೋಟಿಫಿಕೇಶನ್‌ನಲ್ಲಿ ಪ್ರೊಫೈಲ್ ಫೋಟೋ – ಐಒಎಸ್‌ಗೂ ಬರಲಿದೆ ವಾಟ್ಸಪ್‌ನ ಹೊಸ ಫೀಚರ್

    ಝಡ್‌ಟಿಇ ಗ್ರಾಂಡ್ ಎಕ್ಸ್ ಕ್ವಾಡ್ ವಿ987, ಝಡ್‌ಟಿಇ ಗ್ರಾಂಡ್ ಮೆಮೊ, ಝಡ್‌ಟಿಇ ಗ್ರಾಂಡ್ ಎಸ್ ಫ್ಲೆಕ್ಸ್, ಝಡ್‌ಟಿಇ ವಿ956 – ಯುಎಮ್‌ಐ ಎಕ್ಸ್2, ಹುವಾವೇಯ್ ಆಸ್ಕೆನ್ಡ್ ಜಿ740, ಹುವಾವೆ ಆಸ್ಕೆನ್ಡ್ ಮೇಟ್, ಹುವಾವೇ ಆಸ್ಕೆನ್ಡ್ ಡಿ2, ವಿಕೊ ಸಿಂಕ್ ಫೈವ್, ವಿಕೊ ಡಾರ್ಕ್ನೈಟ್, ಕ್ಯಾಟರ್ಪಿಲ್ಲರ್ ಕ್ಯಾಟ್ ಬಿ15, ಸೋನಿ ಎಕ್ಸ್ಪೀರಿಯಾ ಎಂ, ಟಿಹೆಚ್‌ಎಲ್ ಡಬ್ಲ್ಯೂ8, ಲೆನೊವೊ 0820, ಫೇಯಾ ಎಫ್1, ಆರ್ಕೋಸ್ 53 ಪ್ಲಾಟಿನಂ, ಹೆಚ್‌ಟಿಸಿ ಡಿಸೈರ್ 500. ಇದನ್ನೂ ಓದಿ: ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ

    ಐಒಎಸ್ ಫೋನ್‌ಗಳು:
    ಆ್ಯಪಲ್ ಐಫೋನ್ ಎಸ್‌ಇ (16ಜಿಬಿ), ಆ್ಯಪಲ್ ಐಫೋನ್ ಎಸ್‌ಇ (32ಜಿಬಿ), ಆ್ಯಪಲ್ ಐಫೋನ್ ಎಸ್‌ಇ (64ಜಿಬಿ), ಆ್ಯಪಲ್ ಐಫೋನ್ 6ಎಸ್(64ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (128ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (16ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (32ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (64ಜಿಬಿ), ಆ್ಯಪಲ್ ಐಫೋನ್ 6ಎಸ್ (128ಜಿಬಿ), ಆ್ಯಪಲ್ ಐಫೋನ್ 6ಎಸ್ (16ಜಿಬಿ), ಆ್ಯಪಲ್ ಐಫೋನ್ 6ಎಸ್ (32ಜಿಬಿ).