Tag: ಐಐಐಟಿ

  • ಹುಟ್ಟುಹಬ್ಬದ ಮುನ್ನಾ ದಿನ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ

    ಹುಟ್ಟುಹಬ್ಬದ ಮುನ್ನಾ ದಿನ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ

    ಲಕ್ನೋ: ಹುಟ್ಟುಹಬ್ಬದ ಮುನ್ನಾ ದಿನವೇ ಅಲಹಾಬಾದ್‌ನ (Allahabad) ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (IIIT) ಪ್ರಥಮ ವರ್ಷದ ವಿಶೇಷಚೇತನ ವಿದ್ಯಾರ್ಥಿ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶನಿವಾರ ರಾತ್ರಿ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಯಾಗರಾಜ್‌ನ (Prayagraj) ಝಲ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತೆಲಂಗಾಣದ ವಿಶೇಷಚೇತನ ವಿದ್ಯಾರ್ಥಿ ರಾಹುಲ್ ಮದಲ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ – ಸಿಡಿಲು ಬಡಿದು ವೃದ್ಧ ಸಾವು

    ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನಂತರ ಬೇಸರಗೊಂಡಿದ್ದ ಎಂದು ತಿಳಿದುಬಂದಿದೆ. ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು

    ಪೊಲೀಸರ ಪ್ರಕಾರ, ಶನಿವಾರ ರಾತ್ರಿ 11:55ರ ಸುಮಾರಿಗೆ ರಾಹುಲ್ ಐಐಐಟಿ ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್‌ನ ಐದನೇ ಮಹಡಿಯಿಂದ ಹಾರಿದ್ದಾನೆ. ಮಾಹಿತಿ ದೊರೆತ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಾಹುಲ್‌ನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ರಾಹುಲ್ ಕೊನೆಯುಸಿರೆಳೆದಿದ್ದಾನೆ ಎಂದು ಧೂಮಂಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಜೇಂದ್ರ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ, ದೃತರಾಷ್ಟ್ರರಲ್ಲ: ಯತ್ನಾಳ್‌

    ಆತ್ಮಹತ್ಯೆಗೂ ಮುನ್ನ ಶನಿವಾರ ರಾತ್ರಿ ರಾಹುಲ್ ತನ್ನ ಕಿರಿಯ ಸಹೋದರ ಮತ್ತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಾಯಿಗೆ ಸಂದೇಶ ಕಳುಹಿಸಿದ್ದ. ಸಂದೇಶವನ್ನು ನೋಡಿ ಭಯಭೀತರಾದ ತಾಯಿ ಮತ್ತು ಆತನಿಗೆ ಕರೆ ಮಾಡಿದ್ದಾರೆ. ಆದರೆ ರಾಹುಲ್‌ನ ಫೋನ್ ಸ್ವಿಚ್‌ಆಫ್ ಆಗಿತ್ತು. ಭಾನುವಾರ ಕ್ಯಾಂಪಸ್ ತಲುಪಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು. ಈ ವೇಳೆ ರಾಹುಲ್ ಆರು ತಿಂಗಳಿನಿಂದ ತರಗತಿಗಳನ್ನು ತಪ್ಪಿಸಿದ್ದಾನೆ ಎಂದು ಸಂಸ್ಥೆ ನನಗೆ ತಿಳಿಸಿದೆ. ಇದಕ್ಕೂ ಮುನ್ನ ಕಾಲೇಜು ಆಡಳಿತ ಮಂಡಳಿ ಈ ಕುರಿತು ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಹುಲ್ ತಾಯಿ ಸ್ವರ್ಣಲತಾ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ಹೋಗುವ ಮುನ್ನ ಸಿಎಂ, ಡಿಸಿಎಂ ಮೀಟಿಂಗ್

  • ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಬೆಂಗಳೂರು: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನ (ಐಐಐಟಿ-ಬಿ) 22 ವರ್ಷದ ವಿದ್ಯಾರ್ಥಿಯೊಬ್ಬರು ಗೂಗಲ್ ಸಂಸ್ಥೆಗೆ ಆಯ್ಕೆಯಾಗಿದ್ದು, ಸದ್ಯ ಅವರ ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ. ನಿಗದಿಯಾಗಿದೆ.

    ನ್ಯೂಯಾರ್ಕ್ ನಲ್ಲಿರುವ ಗೂಗಲ್ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ವಿಂಗ್‍ಗೆ ಐಐಐಟಿ-ಬಿ ವಿದ್ಯಾರ್ಥಿ ಆದಿತ್ಯ ಪಾಲಿವಾಲ್ ಅವರು ಆಯ್ಕೆಯಾಗಿದ್ದಾರೆ. ಆದಿತ್ಯ ಅವರು ಮುಂಬೈ ಮೂಲದವರು. ಬೆಂಗಳೂರಿನ ಐಐಐಟಿಯಲ್ಲಿ ಐದು ವರ್ಷ ಇಂಟಿಗ್ರೆಟೆಡ್ ವ್ಯಾಸಂಗ ಮಾಡಿ ಎಂ.ಟೆಕ್ ಪದವಿ ಪಡೆದಿದ್ದರು.

    ಬೆಂಗಳೂರು ಬಗ್ಗೆ ಆದಿತ್ಯ ಹೇಳಿದ್ದೇನು?
    ಬೆಂಗಳೂರಿನಲ್ಲಿ ಕಳೆದ ಐದು ವರ್ಷ ಅನುಭವ ಅದ್ಭುತವಾಗಿತ್ತು. ಕಾಲೇಜಿನ ಶಿಕ್ಷಕರು ಸೃಜನಾತ್ಮಕ ವಿಚಾರಗಳನ್ನು ಬೆಳೆಸುತ್ತಿದ್ದರು, ಅಷ್ಟೇ ಅಲ್ಲದೆ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಗೂಗಲ್ ಸಂಸ್ಥೆಯ ಆಯ್ಕೆಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೆಮ್ಮೆಯಿಂದ ಆದಿತ್ಯ ಹೇಳಿದರು.

    ಗೂಗಲ್ ಸಂಸ್ಥೆಯು ಕೋಡಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಆದಿತ್ಯ ಕೂಡಾ ಒಬ್ಬರಾಗಿದ್ದಾರೆ.

    2017-18ರಲ್ಲಿ ಎಸಿಎಂನಿಂದ ನಡೆಯುವ ಕಾಲೇಜು ಮಟ್ಟದ ಅಂತರಾಷ್ಟ್ರೀಯ ಪ್ರೋಗ್ರಾಮಿಂಗ್ ಸ್ಪರ್ಧೆ (ಐಸಿಪಿಸಿ)ಯ ಅಂತಿಮ ಸ್ಪರ್ಧಿಗಳಲ್ಲಿ ಆದಿತ್ಯ ಕೂಡಾ ಒಬ್ಬರಾಗಿದ್ದರು. ಆದಿತ್ಯ ಅವರ ತಂಡದಲ್ಲಿ ಸಿಮ್ರಾನ್ ಡೊಜನಿಯಾ ಹಾಗೂ ಶ್ಯಾಮ್ ಕೆ.ಬಿ. ಕೂಡಾ ಇದ್ದರು. ಈ ಸ್ಪರ್ಧೆಯು ಕಂಪ್ಯೂಟರ್ ಭಾಷೆಯ ಕೋಡಿಂಗ್ ಉತ್ಸಾಹಿಗಳಿಗೆ ಆಯೋಜಿಸುವ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿದೆ. ಇದೇ ವರ್ಷ ಏಪ್ರಿಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 3,098 ವಿಶ್ವವಿದ್ಯಾನಿಲಯಗಳ 50 ಸಾವಿರ ವಿದ್ಯಾರ್ಥಿಗಳು ಭಾಗವಹಸಿದ್ದರು.

  • 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಐಐಐಟಿ ವಿದ್ಯಾರ್ಥಿ

    7ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಐಐಐಟಿ ವಿದ್ಯಾರ್ಥಿ

    ಬೆಂಗಳೂರು: ಐಐಐಟಿ ವಿದ್ಯಾರ್ಥಿಯೋರ್ವ ಹಾಸ್ಟೆಲ್‍ನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಗರದ ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.

    ಆಂಧ್ರ ಮೂಲದ ಸಾಯಿಶರತ್ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸಾಯಿಶರತ್ ಐಐಐಟಿಯಲ್ಲಿ 4ನೇ ವರ್ಷದ ಇನ್ಟಿಗ್ರೇಟೆಡ್ ಎಂಟೆಕ್ ವ್ಯಾಸಂಗ ಮಾಡುತ್ತಿದ್ದನು. ಇಂದು ಬೆಳಗಿನ ಜಾವ ಸ್ನೇಹಿತರೆಲ್ಲಾ ಗಾಢ ನಿದ್ರೆಯಲ್ಲಿರುವಾಗ 5 ಗಂಟೆಗೆ ವಿದ್ಯಾರ್ಥಿ ನಿಲಯದ ಏಳನೇ ಮಹಡಿಯಿಂದ ಸಾಯಿಶರತ್ ಹಾರಿದ್ದಾನೆ.

    ಸಾಯಿಶರತ್ ತಂದೆ ಕೋದಂಡರೆಡ್ಡಿ ಆಂಧ್ರ ಪ್ರದೇಶದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರೇ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಾಯಿಶರತ್ ಉತ್ತಮ ವಿದ್ಯಾರ್ಥಿಯಾಗಿದ್ದನೆಂದು ಕಾಲೇಜಿನವರು ತಿಳಿಸಿದ್ದಾರೆ.

    ಸಾಯಿಶರತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಹುಶಃ ಓದಿನ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಾಯಿಶರತ್ ಪೋಷಕರಿಗೆ ವಿಷಯ ತಿಳಿಸಿದ್ದಾರೆ.