Tag: ಐಎಸ್‍ಐಎಸ್

  • ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

    ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ISIS) ಮಾಡ್ಯೂಲ್‌ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ (Delhi Police Speical Cell) ಶುಕ್ರವಾರ (ಆ.9) ಮುಂಜಾನೆ ಬಂಧಿಸಿದೆ.

    ಪುಣೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಲಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್‌ನ (ISIS Module) ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ (Mumbai) ವಿಧ್ವಂಸಕ ಕೃತ್ಯ ಎಸಗಲು ಹಲವಾರು ಪ್ಲ್ಯಾನ್‌ ಮಾಡಿದ್ದನು ಎಂದು ಆರೋಪಿಸಲಾಗಿದೆ.

    ಬಂಧನದ ವೇಳೆ ಅಲಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುಣೆ ಐಸಿಸ್ ಮಾಡ್ಯೂಲ್‌ನ ಹಲವಾರು ಸದಸ್ಯರನ್ನು ಈ ಹಿಂದೆ ಪುಣೆ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.

    ಈ ಹಿಂದೆಯೇ 11 ಆರೋಪಿಗಳ ಬಂಧನ:
    ಮಹಾರಾಷ್ಟ್ರದ ಪುಣೆಯಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ರಾಸಾಯನಿಕಗಳು ಮತ್ತು ಐಸಿಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2023 ರಲ್ಲಿ ಎನ್‌ಐಎ ಒಟ್ಟು 11 ಆರೋಪಿಗಳನ್ನು ಬಂಧಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಇತರ ಮೂವರು ಆರೋಪಿಗಳೊಂದಿಗೆ ರಿಜ್ವಾನ್ ಅಲಿಯನ್ನು ಹೆಸರಿಸಲಾಗಿತ್ತು.

    ಎಲ್ಲಾ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸದಸ್ಯರಾಗಿದ್ದರು. ಹಾಗೂ ಎನ್‌ಐಎ ಪ್ರಕಾರ, ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ದೊಡ್ಡ ಪಿತೂರಿಯ ಭಾಗವಾಗಿ ಪುಣೆ ಮತ್ತು ಸುತ್ತಮುತ್ತ ಭಯೋತ್ಪಾದನೆಯ ಯೋಜನೆಗಳಲ್ಲಿ ಭಾಗಿಯಾಗಿದ್ದರು. ಈ ವ್ಯಕ್ತಿಗಳು ಪುಣೆಯ ಕೊಂಧ್ವಾದಲ್ಲಿ ಐಇಡಿ ಫ್ಯಾಬ್ರಿಕೇಶನ್ ತರಬೇತಿಯನ್ನು ಪಡೆದಿದ್ದರು ಮತ್ತು ನಿಯಂತ್ರಿತ ಸ್ಫೋಟವನ್ನು ಸಹ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

    ಪಶ್ಚಿಮ ಘಟ್ಟದ ​​ಪ್ರದೇಶಗಳನ್ನು ಅಡಗುತಾಣ ಮಾಡಿಕೊಂಡಿದ್ದರು. ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಹಾರಾಷ್ಟ್ರ ಮತ್ತು ಗುಜರಾತ್‌ನಾದ್ಯಂತ ನಗರಗಳಲ್ಲಿ ಸ್ಥಳಗಳನ್ನು ಪರಿಶೀಲಿಸಿದ್ದರು. ಅಲ್ಲದೇ ಭಯೋತ್ಪಾದಕ ದಾಳಿಗೆ ಶೂಟಿಂಗ್‌ ತರಬೇತಿಯನ್ನೂ ಪಡೆದಿದ್ದರು ಎಂದು ಎನ್‌ಐಎ ತಿಳಿಸಿದೆ.

  • ಕಾಬೂಲ್ ಗುಂಡಿನ ದಾಳಿಗೆ ಮೂವರು ಗನ್‍ಮ್ಯಾನ್‍ಗಳು ಬಲಿ – ಹೊಣೆಹೊತ್ತ ISIS

    ಕಾಬೂಲ್ ಗುಂಡಿನ ದಾಳಿಗೆ ಮೂವರು ಗನ್‍ಮ್ಯಾನ್‍ಗಳು ಬಲಿ – ಹೊಣೆಹೊತ್ತ ISIS

    ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‍ನಲ್ಲಿ (Kabul) ಚೀನೀಯರ ವಸತಿ ಗೃಹದ ಮೇಲೆ ದಾಳಿ ನಡೆಸಿ ಮೂವರು ಗನ್‍ಮ್ಯಾನ್‍ಗಳನ್ನು ದಾಳಿಕೋರರು ಬಲಿ ಪಡೆದಿದ್ದಾರೆ. ಈ ಘಟನೆಯ ಬಳಿಕ ದಾಳಿಯ ಹೊಣೆಯನ್ನು ಐಸಿಸ್‌ (ISIS) ಹೊತ್ತುಕೊಂಡಿದೆ.

    ಕಾಬೂಲ್‍ನ ಶಹರ್-ಇ ನಾವ್ ಪ್ರದೇಶದಲ್ಲಿ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಿನ್ನೆ ನಡೆದಿತ್ತು. ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚೀನಾದ ವ್ಯಾಪಾರಸ್ಥರು ಕಾಬೂಲ್‍ನ ಜನಪ್ರಿಯ ಲಾಂಹನ್ ಹೋಟೆಲ್‍ಗೆ ತೆರಳುತ್ತಾರೆ. ಹಾಗಾಗಿ ಹೋಟೆಲ್‍ಗೆ ದಾಳಿಕೋರರು ನುಗ್ಗಿ ಗುಂಡಿನ ಮಳೆ ಸುರಿಸಿದ್ದರು. ಶಸ್ತ್ರಾಸ್ತ್ರಗಳನ್ನು ಬ್ಯಾಗ್‍ನಲ್ಲಿ ತುಂಬಿ ಹೋಟೆಲ್ ಪ್ರವೇಶಿಸಿದ ದಾಳಿಕೋರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿ ಮೂವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

    ದಾಳಿ ನಡೆಯುತ್ತಿದ್ದಂತೆ ಹೋಟೆಲ್‍ನ ಬಾಲ್ಕನಿಯಿಂದ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರು ವಿದೇಶಿಗರು ಗಾಯಗೊಂಡಿದ್ದಾರೆ. ಶಾಹರ್-ಎ-ನಾವ್ ಪ್ರದೇಶದಲ್ಲಿ ದಾಳಿಗೊಳಗಾದ ಹೋಟೆಲ್ ಬಳಿ ಇರುವ ಸ್ಥಳೀಯ ಆಸ್ಪತ್ರೆಗೆ 20ಕ್ಕೂ ಹೆಚ್ಚು ಮಂದಿ ಗಾಯಳುಗಳನ್ನು ದಾಖಲಿಸಲಾಗಿದ್ದು, 3 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದನ್ನೂ ಓದಿ: ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ

    ಚೀನಾದ ರಾಯಭಾರಿಯು ಅಫ್ಘಾನಿಸ್ತಾನದ ಉಪ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಭದ್ರತೆ ಸಂಬಂಧಿತ ವಿಷಯಗಳ ಬಗ್ಗೆ ಒಂದು ದಿನದ ಹಿಂದೆ ಚರ್ಚಿಸಿದ್ದರು. ಅಲ್ಲದೇ ಅಘ್ಘಾನಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿಯ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗಿ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ದಾಳಿ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಯುದ್ಧದಲ್ಲಿ ಐಸಿಸ್ ನಾಯಕ ಖುರಾಶಿ ಸಾವು

    ಯುದ್ಧದಲ್ಲಿ ಐಸಿಸ್ ನಾಯಕ ಖುರಾಶಿ ಸಾವು

    ಬೈರುತ್: ಇಸ್ಲಾಮಿಕ್ ಸ್ಟೇಟ್ಸ್ ಅಥವಾ ಐಸಿಸ್‌ (ISIS) ಭಯೋತ್ಪಾದಕ ಗುಂಪಿನ ನಾಯಕ ಅಬು ಹಸನ್ ಅಲ್-ಹಶಿಮಿ ಅಲ್-ಖುರಾಶಿ (Abu Hasan al-Hashimi al-Qurashi) ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಭಯೋತ್ಪಾದಕ ಗುಂಪು ಘೋಷಿಸಿದೆ. ಈ ಬೆನ್ನಲ್ಲೇ ಗುಂಪಿಗೆ ಬದಲಿ ನಾಯಕನನ್ನೂ ಘೋಷಣೆ ಮಾಡಿದೆ.

    ಐಸಿಸ್‌ (ISIS) ಭಯೋತ್ಪಾದಕ ಸಂಘಟನೆಯು ಗುಂಪನ್ನು ಮುನ್ನಡೆಸಲು ಬದಲಿ ನಾಯಕನಾಗಿ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಹೆಸರನ್ನು ಘೋಷಿಸಿದೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    ದೇವರ ಶತ್ರುಗಳೊಂದಿಗಿನ ಯುದ್ಧದಲ್ಲಿ ನಾಯಕ ಹಸನ್ ಅಲ್-ಹಶಿಮಿ ಅಲ್-ಖುರಾಶಿ ಕೊಲ್ಲಲ್ಪಟ್ಟಿದ್ದಾರೆ ಎಂದು ಗುಂಪು ಘೋಷಿಸಿದೆ. ಇದನ್ನೂ ಓದಿ: ಝಾಕೀರ್‌ ನಾಯ್ಕ್‌ The Real Inspiration – ಐಸಿಸ್‌ ಉಗ್ರರಂತೆ ಪೋಸ್‌ ನೀಡಿ ಪ್ರತೀಕಾರದ ಪ್ರತಿಜ್ಞೆ

    ಐಸಿಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿ ಈ ವರ್ಷದ ಆರಂಭದಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದ. ಹಿಂದಿನ ನಾಯಕ ಅಬುಬಕರ್ ಅಲ್-ಬಾಗ್ದಾದಿಯನ್ನು 2019ರ ಅಕ್ಟೋಬರ್ ನಲ್ಲಿ ಇಡ್ಲಿಬ್‌ನಲ್ಲಿ ಪ್ರದೇಶದಲ್ಲಿ ಸಾವನ್ನಪ್ಪಿದ್ದ

    Live Tv
    [brid partner=56869869 player=32851 video=960834 autoplay=true]

  • ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ

    ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ

    ಕಾರವಾರ: ಐಎಸ್‍ಐಎಸ್ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್ಐಎ ತಂಡದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿ ಅಬ್ದುಲ್ ಮಸ್ತಿರ್‌ (30) ಎಂಬಾತನನ್ನು ಎನ್ಐಎ ತಂಡ ಇಂದು ವಶಕ್ಕೆ ಪಡೆದಿದೆ. ಐಎಸ್‍ಐಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಕಾರಣಕ್ಕಾಗಿ ಅಬ್ದುಲ್ ಮಸ್ತಿರನನ್ನು ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಬಳಿ ಇರುವ ಆತನ ಮನೆಯಿಂದ ಎನ್‍ಐಎ ತಂಡ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಆರೋಪಿಗಳೊಂದಿಗೆ ಅಜಿತ್‍ಗೆ ಸಂಪರ್ಕವಿದೆ – ಆದಷ್ಟು ಬೇಗ ಇತರ ಆರೋಪಿಗಳನ್ನು ಬಂಧಿಸುತ್ತೇವೆ: ಶಶಿಕುಮಾರ್

    ಪ್ರಾಥಮಿಕ ಮಾಹಿತಿಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಐಎಸ್‍ಐಎಸ್‍ನ ಬರಹಗಳನ್ನು ಭಾರತೀಯ ಭಾಷೆಗಳಿಗೆ ಈತ ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಎಂಬ ಆರೋಪದಡಿ ಈತನನ್ನು ವಶಕ್ಕೆ ಪಡೆಯಲಾಗಿದ್ದು, ಭಟ್ಕಳದಲ್ಲೇ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಮನೆಗೆ ಶೋಭಾ ಕರಂದ್ಲಾಜೆ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ, 5 ಲಕ್ಷ ಪರಿಹಾರ

    Live Tv
    [brid partner=56869869 player=32851 video=960834 autoplay=true]