Tag: ಐಎಂಎಫ್

  • Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    ಅಂಕಾರಾ/ನವದೆಹಲಿ: ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ (Turkey) ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ (USA), ರಷ್ಯಾ (Russia), ಚೀನಾ (China) ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

    ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ (Microphone) ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು (Drone Camera) ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದರ ಸಂಖ್ಯೆ 16,000ಕ್ಕೆ ಏರಿದೆ. ಟರ್ಕಿಯಲ್ಲಿ ಕನಿಷ್ಠ 12,873 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,142 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ಹೇಳಿದೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಟರ್ಕಿ ತಲುಪಿದ ಭಾರತದ 6ನೇ ವಿಮಾನ: ಟರ್ಕಿಗೆ ಭಾರತದ ನೆರವು ಮುಂದುವರಿದಿದೆ. ಗುರುವಾರ ವಾಯುಸೇನೆಯ 6ನೇ ವಿಮಾನ ಹೆಚ್ಚುವರಿ ವೈದ್ಯಕೀಯ ಸಾಮಾಗ್ರಿಗಳು ಹೊತ್ತು ತೆರಳಿದೆ. ಇದರಲ್ಲಿ 44 ಮಂದಿ ತಂತ್ರಜ್ಞರಿದ್ದು ಟರ್ಕಿಯಲ್ಲಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದಕ್ಕೂ ಮುನ್ನ ಎನ್‌ಡಿಆರ್‌ಎಫ್ (NDRF) ತಂಡಗಳು ಹಾಗೂ ವೈದ್ಯರನ್ನ ಭಾರತ ಕಳುಹಿಸಿತ್ತು. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಬೆಂಗಳೂರು ಮೂಲದ ಟೆಕ್ಕಿ ಸುಳಿವಿಲ್ಲ: ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಸುಳಿವು ಸಿಕ್ಕಿಲ್ಲ. ಮಾಹಿತಿಗಳ ಪ್ರಕಾರ ಡೆಹ್ರಾಡೂನ್ ಮೂಲದ ವಿಜಯಕುಮಾರ್ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಪ್ಲ್ಯಾನೆಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್, ಕಳೆದವಾರ ಟರ್ಕಿಯ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಾದ ಕುಲ್ಕು ಗಾಜ್ ಎಂಬ ಕಂಪನಿಗೆ ಕರಗಿದ ಅಸಿಟಿಲೀನ್ ಗ್ಯಾಸ್ ಪ್ಲಾಂಟ್‌ನ ನಿರ್ಮಾಣ ಮತ್ತು ಕಾರ್ಯಾರಂಭ ಹಿನ್ನೆಲೆ ಟರ್ಕಿಗೆ ತೆರಳಿದ್ದರು. ಸದ್ಯ ಅವರ ಹುಡುಕಾಟವೂ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pakistan Economy) ದಿನಕಳೆದಂತೆ ದಯನೀಯವಾಗುತ್ತಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರೀ ಪ್ರಮಾಣದಲ್ಲಿ ವಿದ್ಯುತ್‌ ದರ (Electricity Tariff) ಏರಿಸುವಂತೆ ಸೂಚನೆ ನೀಡಿದೆ.

    ಮಂಗಳವಾರದಿಂದ ಪಾಕ್ (Pakistan) ಪ್ರವಾಸದಲ್ಲಿದ್ದ ಐಎಂಎಫ್ ತಂಡ, ಪಾಕ್ ಸರ್ಕಾರದ ಸಾಲ ನಿರ್ವಹಣೆ ಯೋಜನೆಯನ್ನು(CDMP)ತಿರಸ್ಕರಿಸಿದೆ. ಅಲ್ಲದೇ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 11-12.50 ಪಾಕಿಸ್ತಾನ ರೂಪಾಯಿ ಮಿತಿಯಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.

    ವಿದ್ಯುತ್‌ ದರ ಏರದ ಹೊರತು ಹೊಸ ಸಾಲ ನೀಡದಿರುವ ತೀರ್ಮಾನಕ್ಕೆ ಬಂದಿದೆ. ಐಎಂಫ್‌ ನಿರ್ಧಾರದಿಂದ ಪಾಕಿಸ್ತಾನ ಇನ್ನಷ್ಟು ಶೋಚನೀಯ ಸ್ಥಿತಿ ತಲುಪಿದೆ. ರೂಪಾಯಿ ಮೌಲ್ಯ ಪತನ, ಅಂಕೆ ಮೀರಿದ ಹಣದುಬ್ಬರದಂತಹ ಕಾರಣಗಳಿಂದಾಗಿ ಪಾಕ್ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದನ್ನೂ ಓದಿ: ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಐಎಂಫ್‌ ಪಾಕಿಸ್ತಾನ ಕಳೆದ ಹಣಕಾಸು ವರ್ಷದಲ್ಲೇ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 7.91 ಪಾಕಿಸ್ತಾನ ರೂಪಾಯಿಗೆ ಏರಿಸುವಂತೆ ಸೂಚನೆ ನೀಡಿತ್ತು. ಆದರೆ ಕಳೆದ ಜುಲೈ 1 ರಿಂದ ಇದು ಜಾರಿಗೆ ಬಂದಿತ್ತು. ಕಳೆದ 7 ದಶಕಗಳಿಂದ ಪಾಕ್‌ ಆಕ್ರಮಿತ ಕಾಶ್ಮೀರಲ್ಲಿ (PoK) ವಿದ್ಯುತ್‌ ಸಬ್ಸಿಡಿ ನೀಡಲಾಗುತ್ತಿತ್ತು. ಫೆ.1 ರಿಂದ ಈ ಸಬ್ಸಿಡಿಯನ್ನು ಪಾಕ್‌ ಸ್ಥಗಿತಗೊಳಿಸಿದೆ. ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿ ಯೂನಿಟ್‌ಗೆ 16-22 ಪಾಕ್‌ ರೂಪಾಯಿ ನಿಗದಿ ಪಡಿಸಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಆಡಳಿತ ಈ ನಿರ್ಧಾರವನ್ನು ವಿರೋಧಿಸಿದ್ದು ಜನತೆ ಪ್ರತಿಭಟನೆಗೆ ಇಳಿದಿದ್ದಾರೆ.

    ಪಾಕಿಸ್ತಾನದ ವಿದೇಶಿ ಮೀಸಲು ನಿಧಿ 3.2 ಶತಕೋಟಿ ಡಾಲರ್‌ಗೆ ಕುಸಿದಿದ್ದು, ಸುಮಾರು ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುತ್ತದೆ. ಇದರಿಂದ ತೈಲ ಖರೀದಿ ಇನ್ಮುಂದೆ ಕಷ್ಟವಾಗಲಿದ್ದು, ಈಗಾಗಲೇ ಗಾರ್ಮೆಂಟ್ಸ್ ಫ್ಯಾಕ್ಟರಿಗಳೆಲ್ಲಾ ಬಹುತೇಕ ಮುಚ್ಚಿವೆ.

    ದಿನಗೂಲಿ ಕೂಡ ಸಿಗದೇ ಬಡವರು ತತ್ತರಿಸಿದ್ದಾರೆ. ಪಾಕಿಸ್ತಾನದಲ್ಲೀಗ ಭಿಕ್ಷುಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಒಂದು ರೀತಿಯಲ್ಲಿ ದಿವಾಳಿ ಹಂತ ತಲುಪಿದೆ. ಲಂಕಾದಲ್ಲಿ ಇತ್ತೀಚಿಗೆ ಕಂಡು ಬಂದ ಪರಿಸ್ಥಿತಿಗಳು ಇಲ್ಲೂ ಕಾಣುವ ದಿನಗಳು ದೂರವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

    ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

    ಲಕ್ನೋ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಬಳಿಕ ಅದೇ ಹೆಸರಿನ ಯುವತಿಯೊಬ್ಬರು ಇದೀಗ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

    ಹೌದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಪರೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಅವರು 149ನೇ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಉತ್ತರ ಪ್ರದೇಶದ ಮಿರ್ಜಾಪುರದ ಸಾನಿಯಾ, ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ (Woman Fighter Pilot) ಎನಿಸಿಕೊಳ್ಳಲಿದ್ದಾರೆ.

    ಎನ್‌ಡಿಎ ಪರೀಕ್ಷೆಯಲ್ಲಿ (NDA Exams) ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ 2ನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅವರ ಜತೆಗೆ ಮೋಹನಾ ಸಿಂಗ್ ಜಿತರ್ವಾಲ್ ಮತ್ತು ಭಾವನಾ ಕಾಂತ್ ಕೂಡ ಯುದ್ಧ ವಿಮಾನಗಳನ್ನು ಹಾರಿಸಿದ ಮಹಿಳೆಯರ ಸಾಲಿನಲ್ಲಿ ಸೇರಿದ್ದಾರೆ.

    ಯಾರಿದು ಸಾನಿಯಾ ಮಿರ್ಜಾ?
    ಸಣ್ಣ ಗ್ರಾಮದಿಂದ ಬಂದ ಸಾನಿಯಾ ಮಿರ್ಜಾ, ತಮ್ಮ ಗ್ರಾಮದ ಪಂಡಿತ್ ಚಿಂತಾಮಣಿ ದುಬೆ ಅಂತರ್ ಕಾಲೇಜಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. 10ನೇ ತರಗತಿ ಬಳಿಕ ಮಿರ್ಜಾಪುರದ ಗುರು ನಾನಕ್ ಬಾಲಕಿಯರ ಅಂತರ್ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. 12ನೇ ತರಗತಿಯಲ್ಲಿ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯಲ್ಲಿ ಮಿರ್ಜಾಪುರಕ್ಕೆ ಟಾಪರ್ ಆಗಿದ್ದರು. 2022ರ ಏಪ್ರಿಲ್‌ನಲ್ಲಿ ಎನ್‌ಡಿಎ ಪರೀಕ್ಷೆಗೆ ಹಾಜರಾದ ಸಾನಿಯಾ, ಇದೀಗ 149ನೇ ರ‍್ಯಾಂಕ್ ಪಡೆಯುವ ಮೂಲಕ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ.

    ಸಾನಿಯಾ ಅವರು ಡಿ. 27ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಎನ್‌ಡಿಎ ಖಾಡಕ್ವಲ್ಸಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ನಡೆದರೆ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಮೊದಲ ಮುಸ್ಲಿಂ ಪೈಲಟ್ ಎನಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    ಈ ಕುರಿತು ಮಾತನಾಡಿರುವ ಸಾನಿಯಾ `ನಾನು ಪೈಲಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರನ್ನು ಯಟ್ಯೂಬ್‌ನಲ್ಲಿ ನೋಡಿದ ನಂತರ ಅವರಿಂದ ಬಹಳ ಸ್ಫೂರ್ತಿ ಪಡೆದಿದ್ದೇನೆ. ಅವರನ್ನು ನೋಡಿಯೇ ನಾನು ಎನ್‌ಡಿಎ ಸೇರಿರುವುದು. ಯುವ ಪೀಳಿಗೆ ಮುಂದೊಮ್ಮೆ ನನ್ನಿಂದ ಕೂಡ ಪ್ರೇರಣೆ ಪಡೆಯಲಿದೆ ಎಂಬ ಆಶಯ ನನ್ನದು’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

    ಏನಿದು ಯೋಜನೆ?
    ಈ ವರ್ಷದ ಆರಂಭದಲ್ಲಿ ರಕ್ಷಣಾ ಸಚಿವಾಲಯವು ಐಎಎಫ್‌ನಲ್ಲಿ (IAF) ಮಹಿಳಾ ಪೈಲಟ್‌ಗಳನ್ನು ನಿಯೋಜಿಸುವ ತನ್ನ ಪ್ರಾಯೋಗಿಕ ಯೋಜನೆಯನ್ನು ಶಾಶ್ವತಗೊಳಿಸಲು ನಿರ್ಧರಿಸಿತು. ರಕ್ಷಣಾ ಸಚಿವಾಲಯವು ಮಹಿಳೆಯರೂ ಫೈಟರ್ ಪೈಲಟ್‌ಗಳಾಗಿ ವಾಯುಪಡೆ ಸೇರಲು 2015ರಲ್ಲಿ ಅನುಮತಿಸಿತ್ತು. ನಂತರ `ಫೈಟರ್ ಸ್ಟ್ರೀಮ್‌ ಆಫ್ ಫ್ಲೈಯಿಂಗ್‌ʼ ಬ್ರಾಂಚ್‌ನಲ್ಲಿ ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳನ್ನು ಸೇರಿಸುವ ಯೋಜನೆ 2016ರಲ್ಲಿ ಪ್ರಾರಂಭವಾಯಿತು.

    Live Tv
    [brid partner=56869869 player=32851 video=960834 autoplay=true]

  • ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    ವಾಷಿಂಗ್ಟನ್‌: ಯುನೈಟೆಡ್‌ ಕಿಂಗ್‌ಡಮ್‌ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ.

    2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಹೇಳಿದೆ. ಇದನ್ನೂ ಓದಿ: ಏಪ್ರಿಲ್‌- ಜೂನ್‌ GDP ಬೆಳವಣಿಗೆ 13.5% ರಷ್ಟು ಏರಿಕೆ

     

    ಈಗಾಗಲೇ ಕೋವಿಡ್‌ ನೀಡಿದ ಹೊಡೆತದಿಂದ ಪಾರಾಗಲು ಹೆಣಗಾಡುತ್ತಿರುವ ಇಂಗ್ಲೆಂಡ್‌ಗೆ ಈ ವರದಿ ಮತ್ತಷ್ಟು ಹೊಡೆತ ನೀಡಿದೆ. ಇದನ್ನೂ ಓದಿ: ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು: ಮೋದಿ

    ಡಾಲರ್‌ ವಿನಿಮಯ ದರವನ್ನು ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ ಗಾತ್ರವು 854.7 ಬಿಲಿಯನ್ ಡಾಲರ್‌ ಆಗಿದ್ದರೆ ಯುಕೆ ಆರ್ಥಿಕತೆ 816 ಬಿಲಿಯನ್ ಡಾಲರ್‌ ಆಗಿದೆ ಎಂದು ವರದಿ ತಿಳಿಸಿದೆ.

    ಯುಕೆ ಎರಡನೇ ತ್ರೈಮಾಸಿಕದಲ್ಲಿ ಶೇ.1 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಇದು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ. ಭಾರತದ ರೂಪಾಯಿ ಮುಂದೆ ಪೌಂಡ್‌ ಮೌಲ್ಯ ಈ ವರ್ಷ ಶೇ.8ರಷ್ಟು ಕುಸಿತ ಕಂಡಿದೆ.

    ದಶಕಗಳ ಹಿಂದೆ ವಿಶ್ವದ ದೊಡ್ಡ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದ್ದರೆ ಯುಕೆ 5ನೇ ಸ್ಥಾನ ಪಡೆದಿತ್ತು. ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕ, ಚೀನಾ, ಜಪಾನ್‌, ಜರ್ಮನಿ ನಂತರದ ಸ್ಥಾನವನ್ನು ಭಾರತ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇಡೀ ದೇಶ ನಲುಗಿ ಹೋಗಿದೆ. ಸಾವಿನ ಸಂಖ್ಯೆಯೂ ವ್ಯಾಪಕವಾಗಿ ಏರಿಕೆ ಕಾಣುತ್ತಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನ ಸರ್ಕಾರಕ್ಕೆ 1.17 ಶತಕೋಟಿ ಡಾಲರ್ ನಿಧಿ ಬಿಡುಗಡೆಗೆ ಒಪ್ಪಿಕೊಂಡಿದೆ.

    ಈ ಹಣ ಮೂಲತಃ 2019ರಿಂದ ತಡೆಹಿಡಿಯಲಾದ ಬೇಲ್‌ಔಟ್ ಸಾಲದ ಭಾಗವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಸಮಯ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದ ಐಎಂಎಫ್‌ನ ಬೇಡಿಕೆಯನ್ನು ಪೂರೈಸದ್ದಕ್ಕೆ ಈ ಪಾವತಿಯನ್ನು ತಡೆಹಿಡಿಯಲಾಗಿತ್ತು.

    ಇದೀಗ ಐಎಂಎಫ್ ತಡೆಹಿಡಿಯಲಾದ ಪಾವತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಕೊಂಡಿದೆ. ಅದರೊಂದಿಗೆ ಹೆಚ್ಚುವರಿ 1 ಶತಕೋಟಿ ಡಾಲರ್ ಅನ್ನು ನೀಡಲು ಐಎಂಎಫ್ ಮುಂದಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ

    ಭಾರೀ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಸುಮಾರು 1,100 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ನೆರವಿಗೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಕೃಷಿ ಭೂಮಿಯಲ್ಲಿ ವಾಯಸೇನೆ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – ಓಡೋಡಿ ಬಂದ ಜನ

    ಕೃಷಿ ಭೂಮಿಯಲ್ಲಿ ವಾಯಸೇನೆ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ – ಓಡೋಡಿ ಬಂದ ಜನ

    ಜೈಪುರ: ಭಾರತೀಯ ವಾಯುಪಡೆ(ಐಎಎಫ್)ಯ ಹೆಲಿಕಾಪ್ಟರ್ ಮಂಗಳವಾರ ತಾಂತ್ರಿಕ ದೋಷದಿಂದಾಗಿ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ಗ್ರಾಮದ ಜನರು ಹೆಲಿಕಾಪ್ಟರ್ ನೋಡಲು ಕುತೂಹಲದಿಂದ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ.

    ಐಎಎಫ್‌ನ ಎಂಐ-35 ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಹನುಮಾನ್‌ಗಢ ಜಿಲ್ಲೆಯ ಕೃಷಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ಸಂಗಾರಿಯಾ ಪೊಲೀಸ್ ಠಾಣೆಯ ಅಧಿಕಾರಿ ಹನುಮನರಾಮ್ ವಿಷ್ಣೋಯ್ ತಿಳಿಸಿದ್ದಾರೆ. ಸದ್ಯ ಐಎಎಫ್‌ನ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿಗೆ ನಾವೇನು ಕುಸ್ತಿ ಮಾಡೋಕೆ ಹೋಗ್ತಿದ್ವಾ: ಡಿಕೆಶಿ ಪ್ರಶ್ನೆ

    ತಾಂತ್ರಿಕ ದೋಷದ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದ್ದು, ತಾಂತ್ರಿಕ ದೋಷದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    Live Tv
    [brid partner=56869869 player=32851 video=960834 autoplay=true]

  • MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    ನವದೆಹಲಿ: MIG-21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ನಿನ್ನೆ ನಡೆದ ಅಪಘಾತದಿಂದ ಮೃತಪಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಮಿಗ್-21 ವಿಮಾನಗಳನ್ನು `ಹಾರುವ ಶವಪೆಟ್ಟಿಗೆ’ ಎಂದು ಕರೆದಿದ್ದಾರೆ. ಈ ವಿಮಾನವನ್ನು ಸೇವೆಯಿಂದ ತೆಗೆದು ಹಾಕೋದು ಯಾವಾಗ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ  ಓದಿ: ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಗುರುವಾರ ರಾತ್ರಿ ನಡೆದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ ಹಾಗೂ ದುಃಖಿತವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಿಗ್-21 ವಿಮಾನಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವಿಮಾನವು ಇಲ್ಲಿಯ ವರೆಗೆ 200 ಪೈಲೆಟ್‌ಗಳನ್ನು ಬಲಿ ಪಡೆದಿವೆ. ಈ ಹಾರುವ ಶವಪೆಟ್ಟಿಗೆಯನ್ನು ನಮ್ಮ ವಾಯುಪಡೆಯಿಂದ ಯಾವಾಗ ತೆಗೆದುಹಾಕಲಾಗುತ್ತದೆ? ಸಂಸತ್ತು ಯೋಚಿಸಬೇಕು, ನಾವು ನಮ್ಮ ಮಕ್ಕಳಿಗಾದರೆ ಈ ವಿಮಾನವನ್ನು ಹಾರಿಸಲು ಬಿಡುತ್ತೇವೆಯೇ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ  ಓದಿ: ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ಏನಿದು ಘಟನೆ?
    ನಿನ್ನೆ ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡು ವಿಂಗ್ ಕಮಾಂಡರ್ ಎಂ.ರಾಣಾ ಮತ್ತು ಫೈಟ್ ಲೆಫ್ಟಿನೆಂಟ್ ಅದ್ವಿತೀಯ ಬಾಲ್ ಮೃತಪಟ್ಟಿದ್ದಾರೆ. ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿ, ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಅಲ್ಲಿನ ಸ್ಥಿತಿಗತಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಜೈಪುರ: ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

    ಇದು IAFನ ಮಿಗ್-21 ವಿಮಾನವಾಗಿದ್ದು, ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಬಾರ್ಮರ್ ಜಿಲ್ಲೆಯ ಗ್ರಾಮದಲ್ಲಿ ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

    ಸದ್ಯ ವಿಮಾನ ಪತನಗೊಂಡಿರುವ ಬಗ್ಗೆ ಐಎಎಫ್‌ನಿಂದ ಯಾವುದೇ ಅಧಿಕೃತ ಮಾಹಿತಿಗಳೂ ಲಭ್ಯವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತನಾಡಿ ಅಪಘಾತದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

    ಐಎಫ್‌ಎಸ್ 1963ರಲ್ಲಿ `MiG-21‘ ಅನ್ನು ಪಡೆದುಕೊಂಡಿತು. ಇದು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸೋವಿಯತ್ ಮೂಲದ ಸೂಪರ್‌ಸಾನಿಕ್ ಫೈಟರ್‌ಗಳ 874 ರೂಪಾಂತರಗಳನ್ನು ಹಂತಹಂತವಾಗಿ ಸೇರಿಸಿತು. ಆದರೆ ಕಳೆದ 6 ದಶಕಗಳಲ್ಲಿ ನಡೆದ 400ಕ್ಕೂ ಹೆಚ್ಚು `MiG-21‘ನ ಅಪಘಾತಗಳಲ್ಲಿ 200 ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

    ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

    ಡಿಸ್ಪುರ್: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆ(IAF) ಮುಂದಾಗಿದೆ. ಇಲ್ಲಿವರೆಗೂ ಐಎಎಫ್ 253ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದೆ.

    ಅಸ್ಸಾಂ ಮತ್ತು ಮೇಘಾಲಯದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಜೂನ್ 21 ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹದಿಂದ ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಅಂದಿನಿಂದ, ಇಲ್ಲಿವರೆಗೂ ಐಎಎಫ್ ಸುಮಾರು 74 ಕಾರ್ಯಾಪಡೆಗಳನ್ನು ಕಳುಹಿಸಿದ್ದು, 253 ಜನರನ್ನು ರಕ್ಷಿಸಿದೆ. ಇದನ್ನೂ ಓದಿ: ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

    ಕಳೆದ 4 ದಿನಗಳಿಂದ ಅಸ್ಸಾಂ ಮತ್ತು ಮೇಘಾಲಯದ ಪ್ರವಾಹ ಪೀಡಿತ ಜನರಿಗೆ ಪರಿಹಾರವನ್ನು ಒದಗಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. 200 ಟನ್‍ಗಳಿಗಿಂತ ಹೆಚ್ಚು ಆಹಾರ ಮತ್ತು ಚಿಕಿತ್ಸೆಯ ಸಾಮಾಗ್ರಿಗಳನ್ನು ಈ ಪಡೆ ಹೊಂದಿದೆ. ವಿವಿಧ ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳನ್ನು ಬಳಸಿಕೊಂಡು 253 ಜನರನ್ನು ರಕ್ಷಿಸಲಾಗಿದೆ ಎಂದು ಟ್ವೀಟ್‌ ಮಾಡುವ ಮೂಲಕ ಐಎಎಫ್ ತಿಳಿಸಿದೆ.

    ಹೇಗಿದೆ ಪ್ರವಾಹದ ಸ್ಥಿತಿ?
    ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಜನರ ಪ್ರಾಣಕ್ಕೆ ಕುತ್ತು ತಂದಿದ್ದು, ಸಾವಿನ ಸಂಖ್ಯೆ 118ಕ್ಕೆ ಏರಿದೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣ ಸತತ ಆರನೇ ದಿನವೂ ಮುಳುಗಿದೆ. ಅಸ್ಸಾಂನ ಪ್ರವಾಹದಿಂದಾಗಿ 28 ಜಿಲ್ಲೆಗಳಲ್ಲಿ 33.03 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದೊಡ್ಡ ವಿನಾಶಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ನ ಪಡೆ ಸಿಲ್ಚಾರ್ ಪಟ್ಟಣದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.

    Live Tv

  • ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

    ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

    ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಭಾರತದಲ್ಲಿ ಸುಮಾರು 96 ಸುಧಾರಿತ ಯುದ್ಧ ವಿಮಾನಗಳನ್ನು ನಿರ್ಮಿಸಲು ಯೋಜಿಸಿದ್ದು, ಇದಕ್ಕಾಗಿ ಜಾಗತಿಕ ವಿಮಾನ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಇನ್ನೊಂದು ಪ್ರಮುಖ ಉತ್ತೇಜನ ದೊರಕಿದೆ.

    ಐಎಎಫ್ ತನ್ನ ಭತ್ತಳಿಕೆಗೆ 114 ವಿಮಾನಗಳನ್ನು ಸೇರಿಸಲು ಯೋಜನೆ ನಡೆಸಿದೆ. ಅದರಲ್ಲಿ 18 ವಿಮಾನಗಳನ್ನು ವಿದೇಶೀ ಮಾರಾಟಗಾರರಿಂದ ಆಮದು ಮಾಡಿಕೊಂಡು, ಉಳಿದ 96 ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಯೋಜಿಸಿದೆ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    Fighter jet

    60 ವಿಮಾನಗಳನ್ನು ಭಾರತೀಯ ಕರೆನ್ಸಿಯಲ್ಲಿ ಪಾವತಿ ಮಾಡಲಾಗುವುದು. ಉಳಿದ 36 ವಿಮಾನಗಳಿಗಾಗಿ ಭಾಗಶಃ ಭಾರತೀಯ ಹಾಗೂ ಭಾಗಶಃ ವಿದೇಶೀ ಕರೆನ್ಸಿಯಿಂದ ಪಾವತಿ ಮಾಡಲಾಗುವುದು. ಸುಮಾರು ಶೇ.70 ರಷ್ಟು ವೆಚ್ಚವನ್ನು ಪಾವತಿಸಲು ಭಾರತೀಯ ಕರೆನ್ಸಿಯನ್ನೇ ಬಳಸುವ ಬಗ್ಗೆ ಯೋಜಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶದಲ್ಲಿ ಆರಂಭವಾಗಿರುವ ದ್ವೇಷದ ಭಾವನೆ ಕುರಿತು ಮೋದಿ ಮೌನ ಮುರಿಯಲಿ: ಶಶಿ ತರೂರ್

    ದೇಶದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಹಳೆ ವಿಮಾನಗಳನ್ನು ಬದಲಿಸಲು ಐಎಎಫ್ 114 ವಿಮಾನಗಳನ್ನು ಸ್ವಾಧೀನಪಡಿಸುವ ಯೋಜನೆ ಮಾಡಿದೆ. ಯೋಜನೆಯಲ್ಲಿ ಕೆಲವು ವಿದೇಶೀ ವಿಮಾನಗಳನ್ನು ಸ್ಪರ್ಧೆಗೆ ನಿಲ್ಲಿಸಿ, ಪ್ರಯೋಗಗಳನ್ನು ನಡೆಸಿ, ಬಳಿಕ ಆಯ್ಕೆ ಮಾಡಲಾಗುವ 18 ವಿಮಾನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಎಂಐಜಿ, ಡಸಲ್ಟ್ ಹಾಗೂ ಸಾಬ್‌ನಂತಹ ಕಂಪನಿಗಳು 3 ವರ್ಷಗಳಲ್ಲಿ ವಿಮಾನಗಳನ್ನು ತಯಾರಿಸುವ ಗುರಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.