Tag: ಐಎಂಎ

  • ವೈದ್ಯೆ ಅತ್ಯಾಚಾರ-ಕೊಲೆ ಕೇಸ್; ಐಎಂಎ ಸದಸ್ಯತ್ವದಿಂದ ಆರ್‌ಜಿ ಕರ್‌ ಆಸ್ಪತ್ರೆ ಮಾಜಿ ವೈದ್ಯ ಡಾ. ಸಂದೀಪ್‌ ಅಮಾನತು‌

    ವೈದ್ಯೆ ಅತ್ಯಾಚಾರ-ಕೊಲೆ ಕೇಸ್; ಐಎಂಎ ಸದಸ್ಯತ್ವದಿಂದ ಆರ್‌ಜಿ ಕರ್‌ ಆಸ್ಪತ್ರೆ ಮಾಜಿ ವೈದ್ಯ ಡಾ. ಸಂದೀಪ್‌ ಅಮಾನತು‌

    ನವದೆಹಲಿ: ಕೋಲ್ಕತ್ತಾದ (Kolkata Doctor Rape-Murder) ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ (Sandip Ghosh) ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ ಅಮಾನತುಗೊಳಿಸಿದೆ.

    ಸೋಮವಾರ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾದ ಡಾ. ಘೋಷ್, ಮಹಿಳೆಯ ಶವ ಪತ್ತೆಯಾದಾಗ ಪೊಲೀಸ್ ದೂರು ದಾಖಲಿಸಲು ವಿಫಲವಾದುದೂ ಸೇರಿದಂತೆ ನಿರ್ಲಕ್ಷ್ಯ ಧೋರಣೆ ತಳೆದ ಆರೋಪ ಹೊತ್ತಿದ್ದಾರೆ. ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಹತ್ಯೆಗೆ ಸಂಬಂಧಿಸಿದಂತೆ ಅವರು ಆರೋಪ ಎದುರಿಸುತ್ತಿಲ್ಲ. ಆದರೆ, ಜಾಮೀನು ರಹಿತ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಪಾಕ್‌-ಚೀನಾ ಯುದ್ಧ, ನಕ್ಸಲರ ದಾಳಿ, ಕೋಮು ಗಲಭೆಗಳಿಗಿಂತ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯೇ ಹೆಚ್ಚಿದೆ: ಗಡ್ಕರಿ

    ಆದಾಗ್ಯೂ, ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪಗಳಿವೆ. ಮಾಜಿ ಉದ್ಯೋಗಿಯೊಬ್ಬರು, ಡಾ. ಘೋಷ್ ಅವರು ಮೃತದೇಹಗಳು ಮತ್ತು ಬಯೋಮೆಡಿಕಲ್ ತ್ಯಾಜ್ಯಗಳ ಕಳ್ಳಸಾಗಣೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಿಬಿಐ, ಘೋಷ್‌ ಅವರ ಕೋಲ್ಕತ್ತಾದ ಮನೆಯಲ್ಲಿ 11 ಗಂಟೆಗಳ ಸಮಗ್ರ ಶೋಧವನ್ನು ನಡೆಸಿತು. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದುವರೆಗೆ ಸುಮಾರು 90 ಗಂಟೆಗಳ ಕಾಲ ಡಾ. ಘೋಷ್ ಅವರನ್ನು ಪ್ರಶ್ನೆಗೊಳಪಡಿಸಿದೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

    IMA ಕೂಡ ಬಂಗಾಳದ ವೈದ್ಯರ ಆರೋಪಗಳನ್ನು ಉಲ್ಲೇಖಿಸಿದೆ. ಡಾ. ಘೋಷ್ ಅವರು ತಮ್ಮ ಕಾರ್ಯಗಳಿಂದ ವೃತ್ತಿಗೆ ಅಪಖ್ಯಾತಿ ತಂದಿದ್ದಾರೆ. ಶಿಸ್ತು ಸಮಿತಿಯು ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

  • ವೈದ್ಯರು ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕೆಂಬ NMC ಆದೇಶಕ್ಕೆ ತಡೆ

    ವೈದ್ಯರು ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕೆಂಬ NMC ಆದೇಶಕ್ಕೆ ತಡೆ

    ನವದೆಹಲಿ: ಜೆನೆರಿಕ್‌ ಔಷಧಗಳ (Generic Medicines) ಹೊರತಾಗಿ ಬೇರೆ ಔಷಧಗಳನ್ನು ವೈದ್ಯರು (Doctors) ಶಿಫಾರಸು ಮಾಡದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಹೊರಡಿಸಿದ್ದ ಆದೇಶವನ್ನ ತಡೆಹಿಡಿಯಲಾಗಿದೆ.

    ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನ ಸಂಪರ್ಕಿಸಿದ ನಂತರ ಈ ಬೆಳಗಣಿಗೆ ಕಂಡುಬಂದಿದೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ (ವೃತ್ತಿಪರ ನಡವಳಿಕೆ) ನಿಯಮಗಳು, 2023, ಇತರ ನಿರ್ದೇಶನಗಳೊಂದಿಗೆ ವೈದ್ಯರಿಗೆ ಜೆನೆರಿಕ್ ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಕಡ್ಡಾಯಗೊಳಿಸಿದೆ. ಬ್ರಾಂಡೆಡ್ ಔಷಧಿಗಳಿಗಿಂತ ಜೆನೆರಿಕ್ ಔಷಧಿಗಳು 30% ರಿಂದ 80% ರಷ್ಟು ಅಗ್ಗವಾಗಿರುವುದರಿಂದ, ಈ ಹೊಸ ನಿಯಮವು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಆಯೋಗ ಹೇಳಿದೆ. ಆದ್ರೆ ಆಯೋಗದ ಅಧಿಸೂಚನೆ ವಿರುದ್ಧ ವೈದ್ಯರು ತಿರುಗಿಬಿದ್ದಿದ್ದಾರೆ. ಭಾರತದಲ್ಲಿ ಜೆನೆರಿಕ್‌ ಔಷಧಗಳ ಗುಣಮಟ್ಟ ಕಳಪೆಯಾಗಿದೆ, ಇದರಿಂದ ರೋಗಿಗಳಿಗೆ ಅಪಾಯ ಉಂಟಾಗಲಿದೆ ಎಂದು ವಾದಿಸಿದ್ದಾರೆ.

    ಈ ನಡುವೆ ಬ್ರಾಂಡೆಡ್ ಜೆನೆರಿಕ್‌ ಔಷಧಗಳನ್ನು ಸೂಚಿಸದ ನೋಂದಾಯಿತ ವೈದ್ಯಕೀಯ ವೈದ್ಯರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು)ಗೆ ರಾಷ್ಟ್ರೀಯ ಗರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕಿತ್ಸೆಗೆ ಕರೆತಂದಿದ್ದ ಆರೋಪಿಯಿಂದ ಚಾಕು ಇರಿತ – ಯುವ ವೈದ್ಯೆ ಸಾವು

    ಚಿಕಿತ್ಸೆಗೆ ಕರೆತಂದಿದ್ದ ಆರೋಪಿಯಿಂದ ಚಾಕು ಇರಿತ – ಯುವ ವೈದ್ಯೆ ಸಾವು

    ತಿರುವನಂತಪುರಂ: ಪೊಲೀಸ್ ಕಸ್ಟಡಿಯಿಂದ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ (Doctor) ಚಾಕು ಇರಿದು ಹತ್ಯೆ ಮಾಡಿದ ಘಟನೆ ಕೇರಳದಲ್ಲಿ (Kerala) ಬುಧವಾರ ನಡೆದಿದೆ.

    ಮೃತ ವೈದ್ಯೆಯನ್ನು ವಂದನಾ ದಾಸ್ (23) ಎಂದು ಗುರುತಿಸಲಾಗಿದೆ. ಅವರು ಕೊಲ್ಲಮ್‍ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಆರೋಪಿಯನ್ನು ನೆಡುಂಬನಾದ ಶಾಲಾ ಶಿಕ್ಷಕ ಸಂದೀಪ್ (42) ಎಂದು ಗುರುತಿಸಲಾಗಿದೆ. ಆರೋಪಿ ವೈದ್ಯೆಗೆ ಆರು ಬಾರಿ ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಮದ್ಯ ಸೇವನೆ ಮಾಡಿ ನೆರೆಹೊರೆಯವರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಗಲಾಟೆ ಮಾಡುತ್ತಿದ್ದ ಮಾಹಿತಿ ಬಂದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ನಂತರ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತೀವ್ರ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ. ಚಿಕಿತ್ಸೆ ವೇಳೆ ಪೊಲೀಸರಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ನಾವು ಹೊರಗೆ ಇರಬೇಕಾಯಿತು. ಈ ವೇಳೆ ಆರೋಪಿ ವೈದ್ಯೆಯನ್ನು ಅಟ್ಟಿಸಿಕೊಂಡು ಬಂದಿದ್ದಾನೆ. ಪೊಲೀಸರು ತಡೆಯಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ನಂತರ ಆತನನ್ನು ತೀವ್ರ ಹರಸಾಹಸ ಪಟ್ಟು ಬಂಧಿಸಲಾಯಿತು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ಭಾರತೀಯ ವೈದ್ಯರ ಸಂಘಟನೆ (Indian Medical Association) ತೀವ್ರ ಆಕ್ರೋಶ ಹೊರಹಾಕಿದೆ. ಆರೋಪಿಗಳು ಹಾಗೂ ಅಪರಾಧಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೋಳ ತೊಡಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶವಿದೆ. ಆದರೂ ಸಹ ಪೊಲೀಸರು ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

  • ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

    ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

    ನವದೆಹಲಿ: ಚೀನಾದಲ್ಲಿ(China) ಕೊರೊನಾ ಸೋಂಕು(Corona Virus) ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ ಭಾರತದಲ್ಲಿ ಲಾಕ್‌ಡೌನ್‌(Lockdown) ಮಾಡುವ ಪರಿಸ್ಥಿತಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ(IMA) ಡಾ ಗೋಯಲ್ ಹೇಳಿದ್ದಾರೆ.

    ಶೇ.95 ರಷ್ಟು ಜನರು ಈಗಾಗಲೇ ಲಸಿಕೆಯನ್ನು(Vaccine) ಪಡೆದಿರುವ ಕಾರಣ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಇಲ್ಲ. ಭಾರತೀಯರು ಚೀನಾದ ಜನರಿಗಿಂತ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಭಾರತವು ಕೋವಿಡ್‌ ಮೂಲಭೂತ ಅಂಶಗಳಾದ ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚುವಿಕೆಗೆ ಮರಳಬೇಕು ಎಂದು ಅವರು ಹೇಳಿದ್ದಾರೆ.

    ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 185 ಹೊಸ ಪ್ರಕರಣಗಳು ದೃಢಪಟ್ಟರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402 ಕ್ಕೆ ಇಳಿದಿದೆ.  ಇದನ್ನೂ ಓದಿ: ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್‌ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್‌ & ಕ್ಯಾರಿ ಶಾಪಿಂಗ್‌

    ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,515) ದಾಖಲಾಗಿದೆ. ಒಟ್ಟು 5,30,681 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

    ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,42,432 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ.

    ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ದೇಶದಲ್ಲಿ 220.03 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರು: ಜನರೇ ಎಚ್ಚರ, ಎಚ್ಚರ. ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ ನಕಲಿ ವೈದ್ಯರು. ರಾಜ್ ಗೋಪಾಲ್ ನಗರ ನಕಲಿ ವೈದ್ಯರ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು (Fake Doctors) ಇರೋದಾಗಿ ಐಎಂಎ, ಫನಾ (ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ) ಸರ್ವೆಯಲ್ಲಿ ಬಯಲಾಗಿದೆ.

    ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದಷ್ಟೇ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಹೆಗ್ಗನಹಳ್ಳಿಯ ಜ್ಯೋತಿ ಎಂಬಾಕೆ ಕಾಲು ಕಳೆದುಕೊಂಡು ನರಕಯಾತನೆ ಅನುಭವಿಸಿದ ಬಗ್ಗೆ ವಿಸ್ತೃತ ವರದಿ ಮಾಡಿದ್ದೆವು. ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕಕಾರಿ ವಿಚಾರ ಬಿಚ್ಚಿಟ್ಟಿದೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಇರೋದಾಗಿ ಐಎಂಎ, ಫನಾ ಅಭಿಪ್ರಾಯ ವ್ಯಕ್ತಪಡಿಸಿವೆ. ನಗರದಾದ್ಯಂತ ಐಎಂಎ ಮತ್ತು ಫನಾ ನಕಲಿ ವೈದ್ಯರ ಬಗ್ಗೆ ಸರ್ವೆ ನಡೆಸ್ತಿದ್ದು, ಅದರಲ್ಲಿ ಸರ್ಟಿಫಿಕೇಟ್ ಇಲ್ಲದೇ, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ವೈದ್ಯ ಪದವಿ, ತರಬೇತಿಯನ್ನೂ ಪಡೆಯದೇ ಕ್ಲಿನಿಕ್‍ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡ್ತಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಕೆಪಿಎಂ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದ್ದಾರೆ. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಅನಾರೋಗ್ಯಕ್ಕೀಡಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ಇಂತಹ ರೋಗಿಗಳು ಬರ್ತಿದ್ದು, ಸಮಸ್ಯೆಗಳು ಉಲ್ಬಣಿಸುತ್ತಿದೆ. ಫನಾಗೆ ಇಂತಹ ದೂರುಗಳು ಹೆಚ್ಚು ಬರ್ತಿವೆಯಂತೆ. ಸರ್ಕಾರ ಕೂಡ ಇಂತಹವರ ವಿರುದ್ಧ ಕ್ರಮವಹಿಸಲು ಹಿಂದೇಟು ಹಾಕ್ತಿದೆ. ಸರ್ಕಾರ ಇಂತಹವರ ಪರ ನಿಲ್ಲಬಾರದು ಸೂಕ್ತ ಕಾನೂನು ಕ್ರಮವಹಿಸಬೇಕು. ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿ ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಫನಾ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಲೆ ಕ್ಲೋಸ್ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ: ಬಿ.ಸಿ ನಾಗೇಶ್

    ಶಾಲೆ ಕ್ಲೋಸ್ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ: ಬಿ.ಸಿ ನಾಗೇಶ್

    ಬೆಂಗಳೂರು: ಹೈಕೋರ್ಟ್ (High Court) ಆದೇಶ ಮತ್ತು ಐಎಂಎ (IMA) ನಡೆಸುತ್ತಿದ್ದ ಶಾಲೆ (School) ಬಂದ್ ಮಾಡುವ ಬಗ್ಗೆ ಯಾವುದೇ ಮಾಹಿತಿ ನಮಗೆ ಬಂದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ತಿಳಿಸಿದರು.

    IMA ನಡೆಸುತ್ತಿದ್ದ ಶಾಲೆ ಕ್ಲೋಸ್ ಮಾಡಲು ಹೈಕೋರ್ಟ್ ಆದೇಶ ನೀಡಿರುವ ವಿಚಾರಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ಆದೇಶ ಏನೇ ಇದ್ದರೂ ಮಕ್ಕಳ (Student) ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೂಡಲೇ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ತಿಳಿಸಲು ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಅಧಿಕಾರಿಗಳಿಂದ ಘಟನೆಯ ಕುರಿತು ಕೂಡಲೇ ಸಂಪೂರ್ಣ ವರದಿ ಪಡೆಯುತ್ತೇನೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗದಂತೆ ನಾವು ಕ್ರಮವಹಿಸುತ್ತೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ ಆಸ್ತಿ ಮುಟ್ಟುಗೋಲು ಹಾಕಿ ಹೂಡಿಕೆದಾರರ ಹಣವನ್ನು ವಾಪಸ್ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಹೈಕೋರ್ಟ್ ಆದೇಶದಂತೆ ನಿನ್ನೆ ರಾತ್ರಿ ಐಎಂಐ ನಡೆಸುತ್ತಿದ್ದ ಶಿವಾಜಿನಗರ ಭಾರತಿನಗರದ ನೆಹರೂ ಸ್ಕೂಲ್ ಆಸ್ತಿಯೂ ಕೂಡ ಸೀಜ್ ಆಗಿದ್ದು ನೋಟಿಸ್ ಅಂಟಿಸಲಾಗಿದೆ. ಇದರ ಅರಿವೇ ಇಲ್ಲದೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಲೆ ಸೀಜ್ ಆಗಿದ್ದು ನೋಡಿ ಫುಲ್ ಶಾಕ್ ಆಗಿದ್ದಾರೆ. ಶಾಲಾ ಆವರಣದಲ್ಲಿ ಧರಣಿ ಕೂತರು. ಸ್ಥಳಕ್ಕೆ ಬಂದ ಪೊಲೀಸರು ಪೋಷಕರನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು. ಪೋಷಕರ ಪ್ರತಿಭಟನೆಗೆ ಎಎಪಿ ಕೂಡ ಸಾಥ್ ಕೊಟ್ಟಿತ್ತು. ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆ

    ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಸಕ ರಿಜ್ವಾನ್ ಅರ್ಷದ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ರಕಾಶ್ ಸೋಮವಾರ ಶಿಕ್ಷಣ ಇಲಾಖೆಯ ಜೊತೆ ಪೋಷಕರ ಜೊತೆ ಸಭೆ ನಡೆಸುವುದಾಗಿ ಹೇಳಿದರು. ಆದರೆ ಪೋಷಕರು ಅನುದಾನಿತ ಅಥವಾ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಪರ್ಯಾಯ ವ್ಯವಸ್ಥೆ ಬೇಕಾಗಿಲ್ಲ. ಇದೇ ಶಾಲೆಯಲ್ಲಿ ಮುಂದುವರಿಸಿ ಎಂದು ಪಟ್ಟು ಹಿಡಿದರು. ಆದರೆ ಇಲ್ಲಿ ಮುಂದುವರಿಸಲು ಅಸಾಧ್ಯ, ಸೋಮವಾರ ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ಸಮಾಧಾನ ಪಡಿಸಿದರು. ಇದನ್ನೂ ಓದಿ: IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    Live Tv
    [brid partner=56869869 player=32851 video=960834 autoplay=true]

  • IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    ಬೆಂಗಳೂರು: ಐಎಂಎ (IMA) ನಡೆಸುತ್ತಿದ್ದ ಬೆಂಗಳೂರಿನ (Bengaluru) ಶಿವಾಜಿನಗರದ ನೆಹರೂ ಶಾಲೆಯನ್ನು (Neharu School) ಲಾಕ್ ಮಾಡಲಾಗಿದೆ. ಇದರಿಂದಾಗಿ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ ಆಸ್ತಿ ಮುಟ್ಟುಗೋಲು ಹಾಕಿ ಹೂಡಿಕೆದಾರರ ಹಣವನ್ನು ವಾಪಸ್ಸು ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಹೈಕೋರ್ಟ್ ಆದೇಶದಂತೆ ನಿನ್ನೆ ರಾತ್ರಿ ಐಎಂಐ ನಡೆಸುತ್ತಿದ್ದ ಶಿವಾಜಿನಗರ ಭಾರತಿನಗರದ ನೆಹರೂ ಸ್ಕೂಲ್ ಆಸ್ತಿಯೂ ಕೂಡ ಸೀಜ್ ಆಗಿದ್ದು ನೋಟಿಸ್ ಅಂಟಿಸಲಾಗಿದೆ. ಇದರ ಅರಿವೇ ಇಲ್ಲದೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಲೆ ಸೀಜ್ ಆಗಿದ್ದು ನೋಡಿ ಫುಲ್ ಶಾಕ್ ಆಗಿದ್ದಾರೆ. ಶಾಲಾ ಆವರಣದಲ್ಲಿ ಧರಣಿ ಕೂತರು. ಸ್ಥಳಕ್ಕೆ ಬಂದ ಪೊಲೀಸರು ಪೋಷಕರನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಪೋಷಕರ ಪ್ರತಿಭಟನೆಗೆ ಎಎಪಿ (AAP) ಕೂಡ ಸಾಥ್ ಕೊಟ್ಟಿತು.

    ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಸಕ ರಿಜ್ವಾನ್ ಅರ್ಷದ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ರಕಾಶ್ ಸೋಮವಾರ ಶಿಕ್ಷಣ ಇಲಾಖೆಯ ಜೊತೆ ಪೋಷಕರ ಜೊತೆ ಸಭೆ ನಡೆಸುವುದಾಗಿ ಹೇಳಿದರು. ಆದರೆ ಪೋಷಕರು, ಅನುದಾನಿತ ಅಥವಾ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಪರ್ಯಾಯ ವ್ಯವಸ್ಥೆ ಬೇಕಾಗಿಲ್ಲ. ಇದೇ ಶಾಲೆಯಲ್ಲಿ ಮುಂದುವರಿಸಿ ಅಂತಾ ಪಟ್ಟು ಹಿಡಿದರು. ಆದರೆ ಇಲ್ಲಿ ಮುಂದುವರಿಸಲು ಅಸಾಧ್ಯ. ಸೋಮವಾರ ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಅಂತಾ ಶಾಸಕರು ಸಮಾಧಾನಪಡಿಸಿದರು.

    4 ತಿಂಗಳು ಈಗಾಗಲೇ ಅಕಾಡೆಮಿಕ್ ಇಯರ್ ಶುರುವಾಗಿದೆ. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಮಕ್ಕಳನ್ನು ಬೀದಿಗೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು 490 ಮಕ್ಕಳನ್ನು ನಾವು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ಗಲಾಟೆ ಮಾಡಿದ್ದಾರೆ. ನಾವು ಇದೇ ಶಾಲೆಯಲ್ಲಿ ಓದಬೇಕು ಅಂತಾ ವಿದ್ಯಾರ್ಥಿಗಳು ಭಾವುಕ ಮಾತುಗಳನ್ನು ಆಡಿದರು. ಇದನ್ನೂ ಓದಿ: ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ರಕಾಶ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿ, ನೆಹರೂ ಸ್ಕೂಲ್‍ನಲ್ಲಿನ ಗಲಾಟೆ ಗಮನಕ್ಕೆ ಬಂದಿದೆ. ಮಕ್ಕಳ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ಪರ್ಯಾಯವಾಗಿ ಹತ್ತಿರ ಇರುವ ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಪೋಷಕರ ಜೊತೆ ಮಾತಾನಾಡಿ ಮಕ್ಕಳಿಗೆ ವ್ಯವಸ್ಥೆ ಮಾಡುತ್ತೇವೆ. ಶಾಲೆಗೆ ಭೇಟಿ ನೀಡಿ ಪೋಷಕರ ಜೊತೆ ಮಾತನಾಡಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರು ಹಾಸ್ಟೆಲ್‌ನ ಕಿಟಕಿ ರಾಡ್ ಮುರಿದು ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

    ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

    ನವದೆಹಲಿ: ಯುದ್ಧ ಪೀಡಿತ ಉಕ್ರೇನ್‍ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಕಳುಹಿಸಿದೆ.

    ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಇದೀಗ ಅನಿಶ್ಚಿತತೆಗೊಂಡಿದೆ. ಅವರೀಗ ದುರದೃಷ್ಟಕರ ಬಲಿಪಶುಗಳಾಗಿ ಹೊರಹೊಮ್ಮಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

    ಉಕ್ರೇನ್‍ನಿಂದ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳು ತಮ್ಮ ಉಳಿದ ವ್ಯಾಸಂಗವನ್ನು ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಮುಂದುವರಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳು ದೇಶದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗವನ್ನು ಮುಂದುವರಿಸಲು ಅನುಕೂಲ ಮಾಡುವಂತೆ ಶಿಫಾರಸು ಮಾಡಿದೆ.

    ಉಕ್ರೇನ್‍ನಲ್ಲಿ ಪದವಿಯನ್ನು ಪ್ರಾರಂಭಿಸಿ, ಭಾರತದಲ್ಲಿ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಲ್ಲಿ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಪದವೀಧರರಾಗಿಯೇ ಇರುತ್ತಾರೆ. ಅವರಿಗೆ ವಿದೇಶದ ಪ್ರಗತಿಪತ್ರವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಉಕ್ರೇನ್‍ನ ವಾಯುನೆಲೆಯನ್ನು ಮುಚ್ಚಲಾಗಿದೆ. ಯುದ್ಧ ಪೀಡಿತ ದೇಶದಲ್ಲಿ ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಉಕ್ರೇನ್‍ನ ಗಡಿ ದೇಶಗಳಿಗೆ ತಲುಪಿಸಿ ಅಲ್ಲಿಂದ ಭಾರತಕ್ಕೆ ಏರ್‍ಲಿಫ್ಟ್ ಮಾಡಲಾಗುತ್ತಿದೆ.

  • ಐಎಂಎ ಹಗರಣದಲ್ಲಿ ಸರ್ಕಾರದಿಂದ ಯಾರ ರಕ್ಷಣೆಯೂ ಇಲ್ಲ: ಬೊಮ್ಮಾಯಿ

    ಐಎಂಎ ಹಗರಣದಲ್ಲಿ ಸರ್ಕಾರದಿಂದ ಯಾರ ರಕ್ಷಣೆಯೂ ಇಲ್ಲ: ಬೊಮ್ಮಾಯಿ

    ಬೆಂಗಳೂರು: ಐಎಂಎ ಹಗರಣದಲ್ಲಿ ಯಾರನ್ನೂ ರಕ್ಷಣೆ ಮಾಡೋ ಕೆಲಸ ಸರ್ಕಾರ ಮಾಡುವುದಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡೋದಿಲ್ಲ ಅಂತಾ ಸ್ಪಷ್ಟಪಡಿಸಿದರು.

    ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಐಎಂಎ ಪ್ರಕರಣದ ಕುರಿತು ಪ್ರಶ್ನೆ ಮಾಡಿದರು. ಐಎಂಎ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಹೆಗ್ಗಣಗಳನ್ನು ಸ್ಪೀಕರ್ ಕಳ್ಸಿದ್ದಾರೆ ಅಂತಾ ಹೇಳ್ಬೇಡಿ: ಸಿದ್ದರಾಮಯ್ಯ ಕಾಲೆಳೆದ ಸ್ಪೀಕರ್!

    ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಯಾರೇ ಪ್ರಕರಣದಲ್ಲಿ ಇದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮೇಲೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೂ ಅನುಮತಿ ನೀಡಲಾಗಿದೆ. ಅದರ ವಿರುದ್ಧ ಹೇಮಂತ್ ನಿಂಬಾಳ್ಕರ್ ಕೋರ್ಟ್‍ನಿಂದ ಸ್ಟೇ ತಂದಿದ್ದಾರೆ. ಸಿಬಿಐ ತನಿಖೆ ನಡೆಸುತ್ತಿದ್ದು ಸುಪ್ರಿಂ ಕೋರ್ಟ್‍ಗೆ ಹೋಗಿದೆ. ಅಲ್ಲಿಂದ ತೀರ್ಪು ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು.

    ಇನ್ನೊಬ್ಬ ಐಪಿಎಸ್ ಅಧಿಕಾರಿ ಅಜಯ್ ಹಿಲರಿ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಬಗ್ಗೆಯೂ ಸರ್ಕಾರ ಕ್ರಮವಹಿಸಿದೆ. ಯಾರೇ ಹಗರಣದಲ್ಲಿ ಭಾಗಿಯಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

  • 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

    3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

    ಬೆಂಗಳೂರು: ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾಗಬಹುದು ಎಂದು ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಎಚ್ಚರಿಕೆ ನೀಡಿದೆ.

    ಮೂರನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಈ ತಕ್ಷಣವೇ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಓಮಿಕ್ರಾನ್‍ನಿಂದಲೇ ಮೂರನೇ ಅಲೆ ಸೃಷ್ಟಿಯಾಗಬಹುದು ಎಂದು ಒಮಿಕ್ರಾನ್ ಭೀತಿಯ ನಡುವೆ ಐಎಂಎ ಎಚ್ಚರಿಕೆಯೊಂದನ್ನು ನೀಡಿದೆ.

    ಸರ್ಕಾರಕ್ಕೆ ಐಎಂಎ ಸಲಹೆಗಳೇನು..?
    ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಅತಿ ಬೇಗ ಹೆಚ್ಚುವರಿ ಡೋಸ್ ನೀಡಿ. ಕಡಿಮೆ ಪ್ರತಿಕಾಯ ಶಕ್ತಿ ಇರುವವರಿಗೆ ಹೆಚ್ಚುವರಿ ಡೋಸ್ ನೀಡಿ. 12- 18 ವರ್ಷದ ಮಕ್ಕಳ ಲಸಿಕೆಗೆ ವೇಗ ನೀಡಿ. ಸಾರ್ವಜನಿಕ ದೊಡ್ಡ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ. ಎಲ್ಲೆಡೆ ಮಾಸ್ಕ್ ಕಡ್ಡಾಯಗೊಳಿಸಿ ಎಂದು ಸರ್ಕಾರಕ್ಕೆ ಐಎಂಎ ಸಲಹೆಗಳನ್ನು ನೀಡಿದೆ.