Tag: ಐಇಡಿ ಸ್ಫೋಟ

  • ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ರಾಯ್ಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಸುಕ್ಮಾ (Sukma) ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ಸುಕ್ಮಾ ಜಿಲ್ಲೆಯ ಸಿಲ್ಗರ್ ಮತ್ತು ತೆಕುಲಗುಡೆಮ್ ಗ್ರಾಮಗಳ ನಡುವೆ ನಕ್ಸಲರು ಐಇಡಿ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್

    ಸಿಆರ್‌ಪಿಎಫ್‌ನ ಕೋಬ್ರಾ 201 ಬೆಟಾಲಿಯನ್‌ನ ಸಿಬ್ಬಂದಿ, ಸಿಲ್ಗರ್‌ನಿಂದ ಟೇಕುಲಗುಡೆಮ್ ಕ್ಯಾಂಪ್‌ಗಳಿಗೆ ಅದರ ರಸ್ತೆ ಉದ್ಘಾಟನೆಯ ಅಂಗವಾಗಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡು ಘಟನೆ ನಡೆದಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

    ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಯನ್ನು ಕೇರಳದ ತಿರುವನಂತಪುರದ ವಿಷ್ಣು ಆರ್ (35) ಮತ್ತು ಉತ್ತರ ಪ್ರದೇಶದ ಕಾನ್ಪುರದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

  • ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ರಾಯ್ಪುರ: ಛತ್ತೀಸ್‍ಗಢದ ಕಂಕರ್ ಜಿಲ್ಲೆಯಲ್ಲಿ ರೈಲ್ವೆ ಹಳಿ ನಿರ್ಮಾಣ ಕೆಲಸ ಮಾಡುತ್ತಿದ್ದಾಗ ಡೀಸೆಲ್ ಟ್ಯಾಂಕರ್ ಒಂದನ್ನು ನಕ್ಸಲಿಯರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಇಟ್ಟು ಸ್ಫೋಟಿಸಿದ್ದು, ನಕ್ಸಲಿಯರ ಅಟ್ಟಹಾಸಕ್ಕೆ ಮೂವರು ನಾಗರಿಕರು ಬಲಿಯಾಗಿದ್ದಾರೆ.

    ಕಂಕರ್ ಜಿಲ್ಲೆಯ ತುಮಾ ಪಾಲ್ ಗ್ರಾಮದ ಬಳಿ ಸೋಮವಾರ ರಾತ್ರಿ ನಕ್ಸಲಿಯರು ಈ ಕೃತ್ಯವೆಸೆಗಿದ್ದಾರೆ. ಜಿಲ್ಲೆಯ ರೌಫಾಟ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಟ್ರಕ್ ಮ್ಯಾನ್‍ಗಳು ಹಾಗೂ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ಕೆಲಸ ನಡೆಯುತ್ತಿದ್ದ ಪ್ರದೇಶದಲ್ಲಿ ಐಇಡಿ ಸ್ಫೋಟಿಸಿ ನಕ್ಸಲಿಯರು ಅಟ್ಟಹಾಸ ಮೆರೆದಿದ್ದಾರೆ.

    ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಲು ಜವಾನರು ಸ್ಥಳಕ್ಕೆ ಹೋದಾಗ, ಅಲ್ಲಿಯೇ ಹೊಂಚು ಹಾಕಿ ಕುಳಿತ್ತಿದ್ದ ನಕ್ಸಲರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಘಟನಾ ಸ್ಥಳಕ್ಕೆ ಕಂಕರ್ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗೃತ ಕ್ರಮವಾಗಿ ಘಟನಾ ಸ್ಥಳವನ್ನು ಹಾದು ಹೋಗುವ ಭಾನುಪ್ರತಾಪ್‍ಪುರ ಹಾಗೂ ನಾರಾಯಣ್‍ಪುರ ಮಾರ್ಗದ ರಸ್ತೆ ಸಂಚಾರವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನಕ್ಸಲರಿಗಾಗಿ ಹುಡುಕಾಟ ನಡೆಸಲಾಗಿದೆ

  • ಎಲ್‍ಒಸಿ ಬಳಿ ನೆಲಬಾಂಬ್ ಸ್ಫೋಟ – ಸೇನಾ ಅಧಿಕಾರಿ ಹುತಾತ್ಮ

    ಎಲ್‍ಒಸಿ ಬಳಿ ನೆಲಬಾಂಬ್ ಸ್ಫೋಟ – ಸೇನಾ ಅಧಿಕಾರಿ ಹುತಾತ್ಮ

    ಶ್ರೀನಗರ: ಪುಲ್ವಾಮಾ ದಾಳಿ ನಡೆದು 40 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡು ಸೇನೆಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.

    ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿ ನೆಲದ ಒಳಗಡೆ ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಗೊಂಡು ಮೇಜರ್ ಹುತಾತ್ಮರಾಗಿದ್ದರೆ, ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿಯಿಂದ 1.5 ಕಿ.ಮೀ ದೂರದಲ್ಲಿ ಐಇಡಿಯನ್ನು ಇಡಲಾಗಿತ್ತು.

    ಶನಿವಾರ ಸಂಜೆ 3 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಸೇನೆಯ ಅಧಿಕಾರಿಗಳು ಗಸ್ತು ತಿರುಗುವ ವೇಳೆ ಮಣ್ಣಿನಲ್ಲಿ ಹೂತ್ತಿದ್ದ ವಸ್ತು ಪತ್ತೆಯಾಗಿದೆ. ಈ ವಸ್ತುವನ್ನು ಮಣ್ಣಿನಿಂದ ತೆಗೆಯುವಾಗ ಸ್ಫೋಟಗೊಂಡಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv