Tag: ಐಂದ್ರಿತಾ

  • ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ದಿಗಂತ್- ಐಂದ್ರಿತಾ ರಕ್ಷಣೆಗೆ ಪ್ರಭಾವಿ ಸ್ವಾಮೀಜಿಯೊಬ್ಬರು ನಿಂತಿದ್ದಾರೆ ಎಂಬ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.

    ಬುಧವಾರ ವಿಚಾರಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕರೆ ಮಾಡಿದ್ದ ಪ್ರಭಾವಿ ಮಠಾಧೀಶರೊಬ್ಬರು, ದಿಗಂತ್-ಐಂದ್ರಿತಾ ನಮ್ಮ ಮಠದ ಭಕ್ತರು. ಅವರನ್ನು ಬಂಧಿಸಬೇಡಿ, ಈಗಾಗಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಒತ್ತಡ ಹೇರಿದ ವಿಚಾರ ಈಗ ರಾಜಕೀಯ ಮತ್ತು ಪೊಲೀಸ್‌ ವಲಯದಿಂದ ಕೇಳಿ ಬಂದಿದೆ.

    ಕಾಕತಾಳೀಯ ಎಂಬಂತೆ ದಿಗಂತ್-ಐಂದ್ರಿತಾರನ್ನು ಕೇವಲ ಮೂರೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಿಟ್ಟು ಕಳಿಸಿದ್ದಾರೆ. ಸೋಮವಾರ ಮನಸಾರೆ ದಂಪತಿಯ ಮೂರು ಮೊಬೈಲ್‍ಗಳ ರಿಟ್ರೀವ್‌ ವರದಿ ಬರುವ ಸಾಧ್ಯತೆ ಇದ್ದು, ನಂತರ ಸಿಸಿಬಿ ಇಬ್ಬರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಂಭವ ಇದೆ. ಇದನ್ನೂ ಓದಿ: ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ

    ಡ್ರಗ್ಸ್ ಪ್ರಕರಣವನ್ನು ಮುಚ್ಚಿ ಹಾಕಿಲು ಪ್ರಭಾವಿಗಳು ಪ್ರಯತ್ನ ಮಾಡುತ್ತಿರುವ ಸುದ್ದಿ ಹೊಸದೇನು ಅಲ್ಲ. 14 ದಿನಗಳ ಹಿಂದೆ ನಟಿ ರಾಗಿಣಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಫೋನ್ ಮಾಡಿ, ಎಷ್ಟು ವಿಚಾರಣೆ ಮಾಡುತ್ತೀರಿ. ಬಿಟ್ಟು ಕಳುಹಿಸಿ ಅಂತಾ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು.

  • ದಿಗಂತ್, ಐಂದ್ರಿತಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ರು – ಸುಚೇಂದ್ರ ಪ್ರಸಾದ್

    ದಿಗಂತ್, ಐಂದ್ರಿತಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ರು – ಸುಚೇಂದ್ರ ಪ್ರಸಾದ್

    – ತುಂಬಾ ಸಭ್ಯ, ಸಜ್ಜನ ಕುಟುಂಬ ಅವರದ್ದು

    ಬೆಂಗಳೂರು: ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಆದರೆ ಒಮ್ಮೆ ದಿಗಂತ್ ಮತ್ತು ಐಂದಿತ್ರಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್ ಹೇಳಿದರು. ಇದನ್ನೂ ಓದಿ: ಸಿಸಿಬಿ ವಿಚಾರಣೆಗೆ ಹಾಜರಾದ ಗುಳಿ ಕೆನ್ನೆ ದಂಪತಿ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಡ್ರಗ್ ಮಾಫಿಯಾ ಏಕಾಏಕಿ ಹುಟ್ಟಿದ್ದಲ್ಲ. ಯಾರ‍್ಯಾರ ಬಳಿ ಮಾಹಿತಿ ಇದಿಯೋ ಅವರನ್ನು ಒಬ್ಬೊಬ್ಬರಾಗಿ ಕರೆಸಿ ಪ್ರಶ್ನೆ ಮಾಡುವ ಕೆಲಸವನ್ನು ಇದಕ್ಕೆ ಸಂಬಂಧಪಟ್ಟ ಇಲಾಖೆ ಮಾಡುತ್ತಿದೆ. ನಾವು ನಮ್ಮ ಕೆಲಸ ಆಯಿತು ಎಂದು ಇದ್ದವರು. ಹೀಗಾಗಿ ನಮಗೆ ಇದರ ಬಗ್ಗೆ ಗೊತ್ತಿಲ್ಲ. ಆದರೆ ಇದೆಲ್ಲವನ್ನು ಗಮನಿಸಿದಾಗ ಐಷಾರಾಮಿ ಬದುಕು ಈ ರೀತಿ ಮಾಡಿಸುತ್ತಿದೆ ಎಂದರು. ಇದನ್ನೂ ಓದಿ: ರಾಗಿಣಿಗೆ ಬಿಗ್ ಶಾಕ್- ಜಾಮೀನು ಅರ್ಜಿ ಮುಂದೂಡಿಕೆ

    ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಒಂದು ಸಿನಿಮಾದಲ್ಲಿ ಮಾತ್ರ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಅವರ ತಂದೆ ಪ್ರಾಂಶುಪಾಲರು ಎಂದು ಗೊತ್ತು. ಅದನ್ನು ಬಿಟ್ಟು ಅಷ್ಟೇನು ಗೊತ್ತಿಲ್ಲ. ನಮ್ಮ ಮನೆ ಇರುವ ಏರಿಯಾದ ಕೊನೆಯಲ್ಲಿ ಅವರ ಮನೆ ಇದೆ. ಆದರೆ ನಾನು ಹೆಚ್ಚಾಗಿ ಅವರಿಬ್ಬರನ್ನೂ ನೋಡಿಯೇ ಇಲ್ಲ. ಇತ್ತೀಚೆಗೆ ಆ ಮನೆಗೆ ದಂಪತಿ ಬಂದಿದ್ದರು. ಒಂದು ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.

    ಮಧ್ಯರಾತ್ರಿ ಆದರೂ ಸಂಭ್ರಮಾಚರಣೆಯ ಸದ್ದು ಕೇಳಿಸಿತ್ತು. ಜೋರು ಧ್ವನಿಗೆ ಮಧ್ಯರಾತ್ರಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಆಗ ನಾನು ನಟರಾಗಿರುವುದರಿಂದ ಈ ಬಗ್ಗೆ ಮಾತನಾಡಿ ಎಂದು ನಮ್ಮ ನೆರೆಹೊರೆಯವರು ಹೇಳಿದ್ದರು. ಆದರೆ ನಾನು ಬೆಳಗ್ಗೆ ಹೋಗಿ ಮಾತನಾಡುತ್ತೇನೆ ಎಂದಿದ್ದೆ. ನಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ದಂಪತಿ ನನಗೆ ಏಲ್ಲೂ ಕಾಣಿಸಿಕೊಂಡಿಲ್ಲ. ತುಂಬಾ ಸಭ್ಯ ರೀತಿಯಲ್ಲಿ ದಂಪತಿ ನಡೆದುಕೊಂಡಿದ್ದಾರೆ. ಮಧ್ಯರಾತ್ರಿ ಯಾಕೆ ಸಂಭ್ರಮಾಚರಣೆ ಮಾಡಬೇಕು ಎಂದು ನನಗೆ ಆಶ್ವರ್ಯ ಆಯಿತು. ಆದರೆ ಮತ್ತೆ ಆ ರೀತಿಯ ಘಟನೆಯ ಸಂಭವಿಸಿಲ್ಲ ಎಂದು ತಿಳಿಸಿದರು.

    ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರು ಈಗಲಾದರೂ ನಾವು ಈ ರೀತಿ ಮಾಡುವುದು ತಪ್ಪು ಎಂದು ತಿಳಿದುಕೊಳ್ಳಲಿ. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಕ್ಷೇತ್ರ ಮಾತ್ರವಲ್ಲದೇ ಯಾವುದೇ ವಲಯದಲ್ಲಿ ಇದ್ದರೂ ಪರವಾಗಿಲ್ಲ ಅವರ ಹೆಡೆಮುರಿ ಕಟ್ಟಿ ಅವರಿಗೆ ಶಿಕ್ಷೆಯಾಗುವ ರೀತಿ ಸರ್ಕಾರ ಅಥವಾ ಅದಕ್ಕೆ ಸಂಬಂಧಪಟ್ಟ ಇಲಾಖೆ ಮಾಡಬೇಕು ಎಂದು ನಾನು ಆಶಿಸುತ್ತೇನೆ ಎಂದರು.

    ನನಗೆ ಸಿನಿಮಾ ಹೊಟ್ಟೆ ತುಂಬಿಸಿದೆ, ನನ್ನ ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದೆ. ನಾವು ಬೇರೆಯವರಿಗೆ ಉಪಕಾರ ಮಾಡದಿದ್ದರೂ ಸಮಾಜಕ್ಕೆ ಅಪಕಾರ ಮಾಡಬಾರದು. ಆದರೆ ಹಿಂದಿನಿಂದಲೂ ಸಿನಿಮಾ ಎಂದಾಕ್ಷಣ ಹಣ ಎಂಬ ಭಾವನೆ ಇದೆ. ನನಗಿದು ಗೊತ್ತಿಲ್ಲದ ಸಂಗತಿ. ಇದು ನಾಗರೀಕರು ಮಾಡುವಂತ ಕೆಲಸವಲ್ಲ. ಸಾಮಾಜಿಕ ಸ್ವಾಸ್ಥ್ಯವನ್ನು ಇವೆಲ್ಲ ಹಾಳು ಮಾಡುತ್ತಿದೆ. ಇಂತಹ ಪ್ರಕರಣದಿಂದ ಮುಂದಿನ ಯುವ ಜನತೆ ಎಚ್ಚರವಾಗಿರುತ್ತಾರೆ ಎಂದು ಹೇಳಿದರು.

    ಮಾಹಿತಿ ಇದೆ ಎಂದು ಹೇಳುವರು ಬಹಿರಂಗವಾಗಿ ತನಿಖೆ ಮಾಡುವ ಇಲಾಖೆಗೆ ತಿಳಿಸಬೇಕು. ಈ ಮೂಲಕ ಅವರಿಗೆ ಸಹಕರಿಸಬೇಕು. ನಿಜವಾದ ಸಮಾಜ ನಿರ್ಮಾಣ ಮಾಡಲು ಯಾರಾದರೂ ಆಗಲಿ ಸಹಕರಿಸಬೇಕು. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.

     

  • ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು

    ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು

    – ವಿಚಾರಣೆ ವೇಳೆ ಬಾಯಿಬಿಟ್ಟಿದ್ದ ಸಂಜನಾ
    – ಡ್ರಗ್‌ ಪೆಡ್ಲರ್ಸ್‌ಗಳ ಜೊತೆ ಐಂದ್ರಿತಾ ಫೋಟೋ

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಐಂದ್ರಿತಾಗೆ ಸಂಜನಾ ಮುಳುವಾದ್ರಾ ಎಂಬ ಪ್ರಶ್ನೆ ಎದ್ದಿದೆ.

    ಈ ಪ್ರಕರಣ ಬೆಳಕಿಗೆ ಬಂದ ಆರಂಭದಿಂದಲೂ ತಾರಾ ದಂಪತಿ ಹೆಸರು ಕೇಳಿ ಬರುತ್ತಿತ್ತು. ಆ ತಾರಾ ದಂಪತಿ ದಿಗಂತ್‌, ಐಂದ್ರಿತಾ ಆಗಿದ್ದರು. ಆದರೆ ಸಿಸಿಬಿ ಇವರಿಗೆ ನೋಟಿಸ್‌ ನೀಡಿರಲಿಲ್ಲ. ಆದರೆ ಈಗ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡಿರುವ ಪೊಲೀಸರು ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

    ಈ ನೋಟಿಸ್‌ ನೀಡಲು ಸಂಜನಾ ನೀಡಿದ ಹೇಳಿಕೆಯೇ ಕಾರಣ ಎನ್ನಲಾಗುತ್ತಿದೆ. ಸಿಸಿಬಿ ವಿಚಾರಣೆಯಲ್ಲಿ ಐಂದ್ರಿತಾ ಹೆಸರನ್ನು ಸಂಜನಾ ತಿಳಿಸಿದ್ದರು. ಶೇಖ್‌ ಫಾಝಿಲ್‌ ಜೊತೆ ಜೊತೆ ನಾನೊಬ್ಬಳೇ ಅಲ್ಲ, ಐಂದ್ರಿತಾ ಕೂಡ ಕ್ಯಾಸಿನೋಗೆ ಬರುತ್ತಿದ್ದಳು. ಆದರೆ ಆಕೆ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾಳಾ ಇಲ್ಲವೋ ಗೊತ್ತಿಲ್ಲ. ಆದ್ರೆ ಪಾರ್ಟಿಗೆ ಬರುತ್ತಿದ್ದವರೆಲ್ಲ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ: ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು

    ಶಿವಪ್ರಕಾಶ್‌ ಜೊತೆ ಐಂದ್ರಿತಾ
    ಶಿವಪ್ರಕಾಶ್‌ ಜೊತೆ ಐಂದ್ರಿತಾ

    ವಿಚಾರಣೆಯ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಬಂಧಿತನಾಗಿರುವ ಮೊದಲ ಆರೋಪಿ ಶಿವಪ್ರಕಾಶ್‌ ಜೊತೆಗೂ ಐಂದ್ರಿತಾ ಫೋಟೋ ಇರುವುದು ಬೆಳಕಿಗೆ ಬಂದಿತ್ತು. ಡ್ರಗ್‌ ಪೆಡ್ಲರ್‌ ಸಂಜನಾ ಆಪ್ತ ರಾಹುಲ್‌ ಜೊತೆಯೂ ಐಂದ್ರಿತಾ ಇದ್ದ ಫೋಟೋ ಲಭ್ಯವಾಗಿತ್ತು. ಐಂದ್ರಿತಾ ಮತ್ತು ದಿಗಂತ್‌

    2017ರಲ್ಲಿ ಐಂದ್ರಿತಾ ಶೇಖ್‌ ಫಾಝಿಲ್‌ ಒಡೆತನದಲ್ಲಿರುವ ಕೊಲಂಬೋ ಕ್ಯಾಸಿನೋಗೆ ತೆರಳಿ ಡ್ಯಾನ್ಸ್‌ ಮಾಡಿದ್ದರು. ಈದ್‌ ಸಮಯದಲ್ಲಿ ನಡೆದಿದ್ದ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಐಂದ್ರಿತಾ ರೇ ಬರಲಿರುವ ಮಾಹಿತಿಯನ್ನು ನೀಡಲಾಗಿತ್ತು.

  • ಡ್ರಗ್ಸ್‌ ಕೇಸ್‌ – ದಿಗಂತ್‌, ಐಂದ್ರಿತಾಗೆ ಸಿಸಿಬಿ ನೋಟಿಸ್‌

    ಡ್ರಗ್ಸ್‌ ಕೇಸ್‌ – ದಿಗಂತ್‌, ಐಂದ್ರಿತಾಗೆ ಸಿಸಿಬಿ ನೋಟಿಸ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.

    ಬುಧವಾರ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸೂಚಿಸಿಲಾಗಿದೆ.

    ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿತ್ತು.

    ಈ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ ರೇ, ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರಿಂದ ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೇನೆ. ಶೇಖ್ ಫಾಝಿಲ್ ನನಗೆ ವೈಯಕ್ತಿಯ ಪರಿಚಯವಿಲ್ಲ ಎಂದು ತಿಳಿಸಿದ್ದರು.

    ಅರ್ಬಾಜ್ ಖಾನ್ ಜೊತೆ ‘ಮೇ ಜರೂರ್ ಆವೂಂಗಾ’ ಸಿನಿಮಾ ಮಾಡುತ್ತಿರುವಾಗ ಕ್ಯಾಸಿನೋಗೆ ಹೋಗಿದ್ದೇನೆ. ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನ ಕ್ಯಾಸಿನೋಗೆ ಕಳುಹಿಸಿದ್ದರು. ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಪ್ರೊಫೆಷನಲ್ ಗಾಗಿ ಕ್ಯಾಸಿನೋಗೆ ಹೋಗಿದ್ದೆ, ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು ಎಂದು ವಿವರಿಸಿದ್ದರು.

    ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಬರ್ತ್ ಡೇ ಪಾರ್ಟಿ ವೇಳೆ ಫಾಝಿಲ್ ಬಂದಿದ್ದ. ಆದ್ರೆ ಅವನನ್ನ ನಾನು ಭೇಟಿಯಾಗಿರಲಿಲ್ಲ. ಪಾರ್ಟಿಯಲ್ಲಿದ್ದಾಗ ಸಹಜವಾಗಿ ಫಾಝಿಲ್ ಜೊತೆ ಫೋಟೋ ತೆಗೆಸಿಕೊಳ್ಳಲಾಗಿತ್ತು. ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿವೆ. ಎರಡು ಬಾರಿಯೂ ಅರ್ಬಾಜ್ ಖಾನ್ ಮೂಲಕವೇ ಫಾಝಿಲ್ ಭೇಟಿಯಾಗಿದೆ. ಅರ್ಬಾಜ್ ಖಾನ್ ಬರ್ತ್ ಡೇ ಪಾರ್ಟಿ ವೇಳೆ ಮಾಧ್ಯಮದವರು ಸಹ ಇದ್ರು. 10 ರಿಂದ 20 ನಿಮಿಷ ನಾನು ಅಲ್ಲಿದ್ದು ಹೊರ ಬಂದಿದ್ದೇನೆ. ಆಗ ಯಾರಿಗೂ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಗಿಣಿ ಜೈಲು ಸೇರುತ್ತಿದ್ದಂತೆ ಪ್ರೀತಿಯ ಮನೆ ಸೇಲ್ – 2 ಕೋಟಿಗೆ ಸೇಲಿಗಿಟ್ಟ ನಟಿಯ ತಂದೆ

    ಶ್ರೀಲಂಕಾದ ಕ್ಯಾಸಿನೋಗೆ ಹಬ್ಬದ ಸಮಯದಲ್ಲಿ ಸಿನಿಮಾದ ದೊಡ್ಡ ದೊಡ್ಡ ತಾರೆಯರನ್ನ ಕರೆಸುತ್ತಾರೆ. ನಮಗೂ ಆ ರೀತಿಯ ಆಹ್ವಾನಗಳು ಬರುತ್ತವೆ. ಆಹ್ವಾನ ಬಂದಾಗ ಆ ವ್ಯಕ್ತಿಯ ಹಿನ್ನೆಲೆ ಚೆಕ್ ಮಾಡಲು ಆಗಲ್ಲ. ಪಾರ್ಟಿಗಳಲ್ಲಿ ಫೋಟೋ ತೆಗೆದುಕೊಳ್ಳುವಾಗ ಪ್ರತಿಯೊಬ್ಬರ ಹಿನ್ನೆಲೆ ಕೇಳಲು ಆಗಲ್ಲ. ಫೋಟೋ ತೆಗೆದುಕೊಂಡವರು ತಪ್ಪು ಮಾಡಿದ್ರೆ ನಮ್ಮನ್ನ ಪ್ರಶ್ನೆ ಮಾಡೋದು ಎಷ್ಟು ಸರಿ ಎಂದು ಐಂದ್ರಿತಾ ಪ್ರಶ್ನಿಸಿದ್ದರು.

  • ಬಟ್ಟೆ, ಕಿಸ್ ಸೀನ್ ಬಗ್ಗೆ ಐಂದ್ರಿತಾ ಪ್ರಸ್ತಾಪ- ಕಾಯಕವೇ ಕೈಲಾಸ ಎಂದ ದಿಗಂತ್

    ಬಟ್ಟೆ, ಕಿಸ್ ಸೀನ್ ಬಗ್ಗೆ ಐಂದ್ರಿತಾ ಪ್ರಸ್ತಾಪ- ಕಾಯಕವೇ ಕೈಲಾಸ ಎಂದ ದಿಗಂತ್

    ಬೆಂಗಳೂರು: ಮದುವೆ ನಂತರ ಈ ರೀತಿಯ ಬಟ್ಟೆ ಹಾಕಬೇಡ, ಕಿಸ್ ಸೀನ್ ಮಾಡಬೇಡ ಅಂತಾ ದಿಗಂತ್ ಮನೆಯಲ್ಲಿ ಹೇಳಿಲ್ಲ ಎಂದು ಐಂದ್ರಿತಾ ರೇ ಹೇಳಿದ್ದಾರೆ.

    ಮದುವೆಯಾದ ಬಳಿಕ ಇದೇ ಮೊದಲಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮನಸಾರೆ ಸಿನಿಮಾದ ಜೋಡಿ ಹಕ್ಕಿಗಳು, ನಮ್ಮ ಮನೆಯಲ್ಲಿ ನಟನೆ, ಬಟ್ಟೆ ವಿಚಾರದಲ್ಲಿ ಯಾವತ್ತೂ ಹೀಗೆ ಇರಬೇಕು ಅಂತಾ ಒತ್ತಡ ಹೇರಿಲ್ಲ. ದಿಗಂತ್ ಮನೆಯವರು ಇದಕ್ಕೆ ಹೊರತಾಗಿಲ್ಲ. ಕ್ಯಾರೆಕ್ಟರ್ ಹಾಗೂ ಕಥೆಗೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು ಎಂದು ಐಂದ್ರಿತಾ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ದಿಗಂತ್, ಕಾಯಕವೇ ಕೈಲಾಸ ಎಂದು ನಗೆ ಬೀರಿದರು.

    ನಂದಿಬೆಟ್ಟ ಅಂದ್ರೆ ಇಬ್ಬರಿಗೂ ತುಂಬಾ ಇಷ್ಟ. ಹೀಗಾಗಿ ಮದುವೆಗೆ ನಂದಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವು. ಮದುವೆ ದಿನ ತುಂಬಾ ಶಾಸ್ತ್ರ ಹಾಗೂ ಸಂಪ್ರದಾಯಗಳನ್ನು ಫಾಲೋ ಮಾಡಿದ್ವಿ. ಫ್ಯಾಶನ್ ಶೋನಲ್ಲಿ ನಮಗೆ ಅನುಭವ ಇರುವುದರಿಂದ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿದ್ವಿ ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ಹೇಳಿಕೊಂಡರು.

    2009ರ ಮನಸಾರೆ ಶೂಟಿಂಗ್ ವೇಳೆ ನಮ್ಮ ಪ್ರೀತಿ ಆರಂಭವಾಯಿತು. 2010ರ ಜನವರಿಯಲ್ಲಿ ರಿಂಗ್ ಕೊಟ್ಟು ದಿಗಂತ್ ಪ್ರಪೋಸ್ ಮಾಡಿದ್ದರು. ಇಬ್ಬರೂ ಸೇರಿ ನಾವು ಹೀಗೆ ಮದುವೆ ಆಗಬೇಕಿತ್ತು ಅಂತ ಕನಸು ಕಂಡಿದ್ದೇವು. ಅದರಂತೆ ಈಗ ನಮ್ಮ ಕನಸು ನನಸಾಗಿದೆ ಎಂದು ಐಂದ್ರಿತಾ ಹೇಳಿದರು.

    ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‍ನಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಐಂದ್ರಿತಾ – ದಿಗಂತ್ ಡಿಸೆಂಬರ್ 12ರಂದು ಸಪ್ತಪದಿ ತುಳಿದರು. ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ರಿಡ್ಜ್ ಕಾರ್ಟನ್‍ನಲ್ಲಿ ಶನಿವಾರ ಸ್ಯಾಂಡಲ್‍ವುಡ್‍ನ ನಟ, ನಟಿಯರು, ಸ್ನೇಹಿತರು ಹಾಗೂ ಆಪ್ತರಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಇದನ್ನು ಓದಿ: ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಬೆಂಗಾಳಿ ಸಂಪ್ರದಾಯದಲ್ಲಿ ನಡೆಯಿತು. ಇವರಿಬ್ಬರ ಮದುವೆ ಸಮಾರಂಭಕ್ಕೆ ನಟಿ ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನಿತರ ಕಲಾವಿದರು, ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತಿಚೇಗೆ ಸುದ್ದಿಗೋಷ್ಠಿ ನಡೆಸಿದ್ದ ಐಂದ್ರಿತಾ , “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv