Tag: ಏಷ್ಯಾ ಕಪ್

  • ಕೊಹ್ಲಿಯ ಪೇಂಟಿಂಗ್ ಚಿತ್ರಿಸಿ ಉಡುಗೊರೆ ನೀಡಿದ ಕಲಾವಿದೆ

    ಕೊಹ್ಲಿಯ ಪೇಂಟಿಂಗ್ ಚಿತ್ರಿಸಿ ಉಡುಗೊರೆ ನೀಡಿದ ಕಲಾವಿದೆ

    ಕೊಲಂಬೋ: ಟೀಂ ಇಂಡಿಯಾ (Team India) ಆಟಗಾರ ಕೊಹ್ಲಿಗೆ (Virat Kohli) ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ (Asia Cup) ಪಂದ್ಯದ ವೇಳೆ ಚಿತ್ರ ಕಲಾವಿದೆಯೊಬ್ಬರು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

    ಕೊಹ್ಲಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಆಗಾಗ ಈ ರೀತಿಯ ಉಡುಗೊರೆಗಳು ಒಲಿದು ಬರುತ್ತವೆ. ಈಗ ಈ ಭಾವಚಿತ್ರವನ್ನು ಪಡೆದು ಸಂಭ್ರಮಿಸಿದ ಕ್ಷಣ ವೀಡಿಯೋದಲ್ಲಿ ಸೆರೆಯಾಗಿದೆ. ಅದರಲ್ಲಿ ಯುವತಿಗೆ ಕೊಹ್ಲಿ ಧನ್ಯವಾದ ತಿಳಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

    ಈ ವಾರದ ಆರಂಭದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ 47ನೇ (ಏಕದಿನ ಪಂದ್ಯದಲ್ಲಿ) ಶತಕವನ್ನು ದಾಖಲಿಸಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ನಾನು ತಂಡಕ್ಕೆ ಸಹಾಯ ಮಾಡುವ ರೀತಿಯಲ್ಲಿ ಆಡಲು ಸದಾ ತಯಾರಾಗಿರುತ್ತೇನೆ ಎಂದಿದ್ದರು.

    ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಆಡಲಿದೆ. ಅಲ್ಲದೇ ಭಾನುವಾರ ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣೆಸಲಿದೆ. ಇದನ್ನೂ ಓದಿ: Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾದಾಬ್‌ ವಿರುದ್ಧ ಅಂಗಳದಲ್ಲೇ ಸಿಟ್ಟು ಹೊರ ಹಾಕಿದ ಬಾಬರ್‌ ಅಜಂ, ಅಫ್ರಿದಿ

    ಶಾದಾಬ್‌ ವಿರುದ್ಧ ಅಂಗಳದಲ್ಲೇ ಸಿಟ್ಟು ಹೊರ ಹಾಕಿದ ಬಾಬರ್‌ ಅಜಂ, ಅಫ್ರಿದಿ

    ಕೊಲಂಬೋ: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಟೂರ್ನಿಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಶ್ರೀಲಂಕಾ (Sri Lanka) ರೋಚಕ 2 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಶಾದಾಬ್ ಖಾನ್‌ (Shadab Khan) ವಿರುದ್ಧ ನಾಯಕ ಬಾಬರ್‌ ಅಜಂ ಮತ್ತು ಬೌಲರ್‌ ಶಾಹಿನ್‌ ಅಫ್ರಿದಿ ಸಿಟ್ಟಾಗಿರುವ ವಿಡಿಯೋ ವೈರಲ್‌ ಆಗಿದೆ.

    ನಡೆದಿದ್ದು ಏನು?
    36 ಎಸೆತಗಳಲ್ಲಿ 36 ರನ್‌ ಬೇಕಿದ್ದಾಗ 37ನೇ ಓವರ್‌ ಎಸೆಯಲು ಶಾಹಿನ್‌ ಅಫ್ರಿದಿ ಬಂದಿದ್ದರು. ಎರಡನೇ ಎಸೆತವನ್ನು ಅಸಲಂಕಾ ಪಾಯಿಂಟ್‌ ಕಡೆಗೆ ಹೊಡೆದಿದ್ದರು. ಈ ವೇಳೆ ಅಲ್ಲಿದ್ದ ಶಾದಾಬ್ ಅವರು ಫೀಲ್ಡ್‌ ಮಾಡಿ ಕೀಪರ್‌ ಕಡೆಗೆ ಥ್ರೋ ಮಾಡಿದರು. ಇದನ್ನೂ ಓದಿ: ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

    https://twitter.com/Hanji_CricDekho/status/1702401034143015024?

    ಕೂಡಲೇ ಥ್ರೋ ಮಾಡಿದ ಕಾರಣ ಕೀಪರ್‌ ವಿಕೆಟ್‌ ಬಳಿ ಬಂದಿರಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಬಳಿ ಹೋಯ್ತು. ಅಸಲಂಕಾ ಈ ಎಸೆತಕ್ಕೆ ರನ್‌ ಗಳಿಸುವ ಉದ್ದೇಶ ಇರಲಿಲ್ಲ. ಆದರೆ ಚೆಂಡನ್ನು ಯಾರು ಹಿಡಿಯದ ಕಾರಣ ಲಂಕಾ ಎರಡು ರನ್‌ ಗಳಿಸಿತು. ಸುಮ್ಮನೇ ಚೆಂಡನ್ನು ಎಸೆದದ್ದಕ್ಕೆ ಬಾಬರ್‌ ಅಜಂ ಎರಡು ಕೈಯನ್ನು ಅಗಲಿಸಿ ಸಿಟ್ಟು ಹೊರ ಹಾಕಿದರು. ಶಾಹಿನ್‌ ಆಫ್ರಿದಿ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

    ಲಂಕಾಗೆ ರೋಚಕ ಜಯ
    ಮಳೆಯಿಂದಾಗಿ 2 ಗಂಟೆ 15 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 45 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಮ ಓವರ್‌ ಕಡಿತಗೊಳಿಸಲಾಗಿತ್ತು.

    ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 252 ರನ್‌ ಹೊಡೆಯಿತು. ಡಕ್‌ವರ್ತ್‌ ನಿಯಮದ ಅನ್ವಯ ಲಂಕಾಗೆ 42 ಓವರ್‌ಗಳಲ್ಲಿ 252 ರನ್‌ ನೀಡಲಾಯಿತು.

    ಕೊನೆಯ ಓವರಲ್ಲಿ ಲಂಕಾಕ್ಕೆ ಗೆಲ್ಲಲು 8 ರನ್ ಬೇಕಿತ್ತು. ಜಮಾನ್‌ ಖಾನ್‌ ಎಸೆದ ಮೊದಲ ಎಸೆತದಲ್ಲಿ ಲೆಗ್‌ಬೈ ಮೂಲಕ ಪ್ರಮೋದ್ ಮದುಶನ್ 1 ರನ್‌ ತೆಗೆದರು. 2ನೇ ಎಸೆತದಲ್ಲಿ ಯಾವುದೇ ರನ್‌ ಗಳಿಸಲಿಲ್ಲ. 3ನೇ ಎಸೆತದಲ್ಲಿ ಅಸಲಂಕಾ 1 ರನ್‌ ಪಡೆದರು. 4ನೇ ಎಸೆತದಲ್ಲಿ ಮಧುಶಾನ್ ರನೌಟ್ ಆದರೂ ಅಸಲಂಕಾ ಸ್ಟ್ರೈಕ್‌ಗೆ ಬಂದರು. ಕೊನೆಯ 2 ಎಸೆತದಲ್ಲಿ 6 ರನ್ ಅಗತ್ಯವಿತ್ತು. 5ನೇ ಎಸೆತವನ್ನು ಅಸಲಂಕಾ ಬೌಂಡರಿಗಟ್ಟಿದರೆ ಕೊನೆಯ ಎಸೆತದಲ್ಲಿ 2 ರನ್‌ ಓಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

    ಶ್ರೀಲಂಕಾ ಪರ ಮೆಂಡಿಸ್‌ 91 ರನ್‌(87 ಎಸೆತ, 8 ಬೌಂಡರಿ, 1 ಸಿಕ್ಸರ್‌), ಸಮರ ವಿಕ್ರಮ 48 ರನ್‌(51 ಎಸೆತ, 4 ಬೌಂಡರಿ) ಗಳಿಸಿ ಔಟಾದರೆ ಅಸಲಂಕ ಔಟಾಗದೇ 49 ರನ್‌ ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    ಕೊಲಂಬೊ: 2023ರ ಏಕದಿನ ಏಷ್ಯಾಕಪ್‌ (Asia Cup 2023) ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಬಿಡುವು ನೀಡಿದ್ದು ತಡವಾಗಿದ್ದರಿಂದ ಓವರ್‌ ಕಡಿತಗೊಳಿಸಲಾಗಿದೆ.

    ಮಳೆಯಿಂದ (Rain) ಮೈದಾನವನ್ನು ಒಣಗಿಸುವ ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಪಂದ್ಯವನ್ನು 45 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇತ್ತಂಡಗಳಿಗೂ ತಲಾ 45 ಓವರ್‌ ನಿಗದಿಪಡಿಸಲಾಗಿದ್ದು, 9 ಓವರ್‌ಗೆ ಪವರ್‌ ಪ್ಲೇ ಮುಕ್ತಾಯವಾಗಲಿದೆ. ಮಳೆಯ ಕಾಟ ಮುಂದುವರಿದರೆ, ಮತ್ತಷ್ಟು ಓವರ್‌ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತದೆ. ಒಂದು ವೇಳೆ ಪಂದ್ಯ ರದ್ದಾದರೆ ರನ್‌ರೇಟ್‌ ಮೇಲೆ ಫೈನಲ್‌ಗೆ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

    ಸದ್ಯ ಪಾಕಿಸ್ತಾನ (Pakistan) ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಭಾರತದ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

    ಪಂದ್ಯ ರದ್ದಾದರೆ ಮುಂದೇನು?
    ಒಂದು ವೇಳೆ ಮಳೆ ಕಾಟ ಮುಂದುವರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ (SriLanka) ಫೈನಲ್‌ ಪ್ರವೇಶಿಸಲಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ಸೂಪರ್‌-4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ 2ನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್‌ ವಿರುದ್ಧ 228 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಸೂಪರ್‌-4ನಲ್ಲಿ ಆಡಿದ ಎರಡು ಪಂದ್ಯಗಳನ್ನೂ ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್‌ ರನ್‌ ರೇಟ್‌ನೊಂದಿಗೆ ಈಗಾಗಲೇ ಫೈನಲ್‌ ಪ್ರವೇಶ ಮಾಡಿದೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್‌ ರನ್‌ ರೇಟ್‌ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್‌ ರನ್‌ ರೇಟ್‌ನೊಂದಿಗೆ 3ನೇ ಸ್ಥಾನ ಪಡೆದಿದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಮಳೆಯಿಂದಾಗಿ ಪಂದ್ಯ ರದ್ದಾದರೆ, ಶ್ರೀಲಂಕಾ ತಂಡ ಸುಲಭವಾಗಿ ಫೈನಲ್‌ ಪ್ರವೇಶ ಮಾಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

    Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

    ಕೊಲಂಬೋ: ಏಷ್ಯಾ ಕಪ್‌ ಟೂರ್ನಿಯಲ್ಲಿ (Asia Cup Cricket) ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Srilanka) ನಡುವಿನ ಪಂದ್ಯಕ್ಕೂ ಮಳೆ (Rain) ಸುರಿಯುವ ಸಾಧ್ಯತೆಯಿದೆ. ಒಂದು ವೇಳೆ ಮಳೆ ಸುರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ ಫೈನಲ್‌ ಪ್ರವೇಶಲಿದೆ.

    ಹೌದು. ಈ ಮೊದಲು ಭಾರತ (India) ಮತ್ತು ಪಾಕಿಸ್ತಾನದ ಸೂಪರ್‌ 4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ ಎರಡನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್‌ ವಿರುದ್ಧ 228 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ.

    ಮೀಸಲು ದಿನ ನಿಗದಿಯಾಗದ ಕಾರಣ ನೆಟ್‌ ರನ್‌ರೇಟ್‌ ಆಧಾರದಲ್ಲಿ ಶ್ರೀಲಂಕಾ ಫೈನಲ್‌ ಪ್ರವೇಶಿಸಲಿದೆ. ಏಷ್ಯಾ‌ ಕಪ್ ಫೈನಲ್‌ನಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ಆಡಿಲ್ಲ. ಇಂದು ಒಂದು ವೇಳೆ ಪಾಕ್‌ ಜಯಗಳಿಸಿದರೆ  ಸೆ.17ರಭಾನುವಾರ ಕೊಲಂಬೋದಲ್ಲಿ ಹೈವೋಲ್ಟೇಜ್‌ ಫೈನಲ್‌ ಪಂದ್ಯ ನಡೆಯಲಿದೆ.  ಇದನ್ನೂ ಓದಿ: ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

    ನೆಟ್‌ ರನ್‌ ರೇಟ್‌ ಎಷ್ಟಿದೆ?
    ಆಡಿದ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್‌ ರನ್‌ ರೇಟ್‌ನೊಂದಿಗೆ ಈಗಾಗಲೇ ಫೈನಲ್‌ ಪ್ರವೇಶ ಮಾಡಿದೆ. ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್‌ ರನ್‌ ರೇಟ್‌ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್‌ ರನ್‌ ರೇಟ್‌ನೊಂದಿಗೆ ಮೂರನೇ ಸ್ಥಾನ ಪಡೆದಿದೆ.

    ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಶ್ರೀಲಂಕಾ ಸುಲಭವಾಗಿ ಫೈನಲ್‌ ಪ್ರವೇಶ ಮಾಡಲಿದೆ. ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ಪಾಕ್‍ಗೆ ರಿಸರ್ವ್ ಡೇ – ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳ ತಕರಾರು

    ಭಾರತ ಪಾಕ್‍ಗೆ ರಿಸರ್ವ್ ಡೇ – ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳ ತಕರಾರು

    – ಇಂಡಿಯಾ ಪಾಕ್ ಸೂಪರ್ 4 ರಿಸರ್ವ್ ಡೇಗೂ ಮಳೆ ಸುರಿಯುವ ಭೀತಿ

    ನವದೆಹಲಿ: ಸೆ.10ರ ಸೂಪರ್ ಫೋರ್ ಪಂದ್ಯದ ವೇಳೆ ಮಳೆಯ ಭೀತಿಯಿಂದ ಪಾಕ್ (Pakistan) ಹಾಗೂ ಭಾರತ (Team India) ತಂಡಕ್ಕೆ ಮಾತ್ರ ರಿಸರ್ವ್ ಡೇ ಘೋಷಿಸಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‍ಗೆ (ACC) ಶ್ರೀಲಂಕಾ (Sri Lanka) ಹಾಗೂ ಬಾಂಗ್ಲಾ  (Bangladesh) ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ಸೆ.1ಂ ರಂದು ಕೊಲಂಬೋದಲ್ಲಿ ನಡೆಯಲಿರುವ ಭಾರತ ಮತ್ತು ಪಾಕ್ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಸೆ.11ನ್ನು ರಿಸರ್ವ್ ಡೇ ಆಗಿ ನಿಗದಿಪಡಿಸಲಾಗಿದೆ. ಆದರೆ ಎರಡೇ ತಂಡಗಳಿಗೆ ಈ ಆಯ್ಕೆ ನೀಡಿರುವುದು ಬಾಂಗ್ಲಾ ಹಾಗೂ ಶ್ರೀಲಂಕಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಸಿಸಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಾಯಿ ಮರಿ ಮುದ್ದಾಡಿ ಸುದ್ದಿಯಾದ ಕೊಹ್ಲಿ

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸಿಸಿ ಸೂಪರ್ ಫೋರ್ ಪ್ರವೇಶಿಸಿರುವ ಎಲ್ಲಾ ತಂಡಗಳ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಏಷ್ಯಾ ಕಪ್ ಸೂಪರ್ 4 ಹಂತದ ಭಾರತ-ಪಾಕಿಸ್ತಾನ ಸ್ಪರ್ಧೆಯ ಮೀಸಲು ದಿನವನ್ನು ಸೂಪರ್ 4 ಸ್ಪರ್ಧಾತ್ಮಕ ತಂಡಗಳ ಎಲ್ಲಾ ನಾಲ್ಕು ಸದಸ್ಯ ಮಂಡಳಿಗಳೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗಿದೆ. ಎಲ್ಲರೂ ಒಪ್ಪಿದ ಬಳಿಕವೇ ಈ ಬದಲಾವಣೆಯನ್ನು ಮಾಡಲಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿದ್ದ ತಾರತಮ್ಯದ ವಿಚಾರದ ಗೊಂದಲಕ್ಕೆ ಎಸಿಸಿ ತೆರೆ ಎಳೆದಿದೆ.

    ಶ್ರೀಲಂಕಾದ ಕ್ರಿಸ್ ಸಿಲ್ವರ್‍ವುಡ್ ಮತ್ತು ಬಾಂಗ್ಲಾದೇಶದ ಮುಖ್ಯ ಕೋಚ್ ಚಂಡಿಕಾ ಹತುರುಸಿಂಗಾ ಅವರು ರಿಸರ್ವ್ ದಿನವನ್ನು ಘೋಷಿಸಿದ ಬಳಿಕ ಆಶ್ಚರ್ಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಪಂದ್ಯಾವಳಿಯ ನಡುವೆ ನಿಯಮ ಬದಲಾವಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಇದು ಸೂಕ್ತ ನಿರ್ಧಾರವಲ್ಲ ಎಂದು ಅವರು ಹೇಳಿದ್ದರು.

    ಈಗ ರಿಸರ್ವ್ ಡೇಗೂ ಮಳೆ ಸುರಿಯುವ ಲಕ್ಷಣ ಗೋಚರಿಸಿದೆ. ಸೆ.10 ರಂದು 90% ಮಳೆ ಬರುವ ಸಾಧ್ಯತೆ ಇದ್ದರೆ, ಸೆ.11 ರಂದು 75% ಮೋಡ ಕವಿಯಲಿದ್ದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ಮರಿ ಮುದ್ದಾಡಿ ಸುದ್ದಿಯಾದ ಕೊಹ್ಲಿ

    ನಾಯಿ ಮರಿ ಮುದ್ದಾಡಿ ಸುದ್ದಿಯಾದ ಕೊಹ್ಲಿ

    ನವದೆಹಲಿ: ಏಷ್ಯಾ ಕಪ್ (Asia Cup 2023) ಅಭ್ಯಾಸದ ವೇಳೆ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ನಾಯಿಮರಿಯೊಂದನ್ನು ಮುದ್ದಾಡಿ ಸುದ್ದಿಯಾಗಿದ್ದಾರೆ.

    ಹಂಚಿಕೊಂಡ ಚಿತ್ರದಲ್ಲಿ ನಾಯಿಮರಿಯೊಂದಿಗೆ ನಗುತ್ತಾ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಈ ಚಿತ್ರವು 20 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಅಲ್ಲದೇ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್‍ಗಳು ಬಂದಿವೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

    ಕೊಹ್ಲಿಯವರು ಶ್ವಾನ ಪ್ರಿಯರಾಗಿದ್ದಾರೆ. ಈ ವಿಚಾರ ಗುಟ್ಟಾಗಿ ಉಳಿದಿಲ್ಲ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ನಾಯಿಗಳೊಂದಿಗೆ ಆಟವಾಡುವ ಚಿತ್ರಗಳು ಮತ್ತು ವೀಡಿಯೋಗಳಿಂದ ತುಂಬಿವೆ. ಈ ಹಿಂದೆ ಅವರು ಭೂತಾನ್ ಪ್ರವಾಸದಲ್ಲಿದ್ದಾಗ ಹೃದಯಸ್ಪರ್ಶಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ಅವರು ಮುದ್ದಾದ ನಾಯಿಮರಿಯೊಂದನ್ನು ತಬ್ಬಿಕೊಂಡು ಪೊಲೀಸ್ ನೀಡಿದ್ದರು.

    ಟೀಂ ಇಂಡಿಯಾ ಏಷ್ಯಾ ಕಪ್ 2023ರ ಪಂದ್ಯದಲ್ಲಿ ಬಹು ನಿರೀಕ್ಷಿತ ಸೂಪರ್ 4 ಹಂತವನ್ನು ತಲುಪಿದೆ. ಈ ಮೂಲಕ ಸೆ. 10 ರಂದು ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹಂತದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಪಾಕಿಸ್ತಾನವು (Pakistan) ಈಗಾಗಲೇ ಪ್ರಬಲ ಆರಂಭವನ್ನು ಮಾಡಿದೆ.

    ಪಂದ್ಯಕ್ಕೆ ಈಗ ಮಳೆ ಸವಾಲಾಗಿದೆ. ಕಳೆದ ವಾರದಿಂದ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಮಳೆಯ ಕಾರಣದಿಂದ ರಿಸರ್ವ್ ದಿನವನ್ನು ನಿಗದಿಪಡಿಸಲಾಗಿದ್ದು, ಸೆ.10 ರಂದು ಮಳೆಯಿಂದ ಪಂದ್ಯ ರದ್ದಾದರೆ ಸೆ.11 ರಂದು ಪಂದ್ಯ ನಡೆಯಲಿದೆ. ಆದರೆ ರಿಸರ್ವ್ ದಿನ ಕೂಡ ಮಳೆಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?

    ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?

    ನವದೆಹಲಿ: ಸೆ.10ರ ಭಾರತ (Team India) ಮತ್ತು ಪಾಕ್‍ನ (Pakistan) ಸೂಪರ್ ಫೋರ್ ಪಂದ್ಯಕ್ಕೆ 90% ವರುಣ ಅಡ್ಡಗಾಲಾಗುವ ಲಕ್ಷಣ ಕಂಡು ಬಂದಿದೆ. ಒಂದು ವೇಳೆ ಪಂದ್ಯ ರದ್ದಾದರೆ ರಿಸರ್ವ್ ದಿನದಂದು ಪಂದ್ಯ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಖಚಿತಪಡಿಸಿದೆ.

    ಪಂದ್ಯದ ದಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಗೋಚರವಾಗುತ್ತಿರುವ ಹಿನ್ನೆಲೆಯಲ್ಲಿ ಎಸಿಸಿ ಈ ನಿರ್ಧಾರಕ್ಕೆ ಕೈಗೊಂಡಿದೆ. ಈ ಮೂಲಕ ಸೆ.10 ರಂದು ಕೊಲಂಬೋದ ಆರ್. ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮರುದಿನ ಪಂದ್ಯ ನಡೆಯಲಿದೆ. ಅಂದರೆ ಸೆ.11 ರಂದು ಪಂದ್ಯ ನಡೆಯಲಿದೆ ಎಂದು ಎಸಿಸಿ ತಿಳಿಸಿದೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ

    ಈ ಪಂದ್ಯಕ್ಕೆ ಟಿಕೆಟ್ ಪಡೆದ ಪ್ರೇಕ್ಷಕರಿಗೆ ಒಂದು ವೇಳೆ ಮಳೆಯಿಂದ ನಿರಾಸೆಯಾದರೆ ಅದೇ ಟಿಕೆಟ್ ಮೂಲಕ ಮರುದಿನದ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಪಂದ್ಯ ರದ್ದಾದರೆ ಟಿಕೆಟ್ ಯಾವುದೇ ಕಾರಣಕ್ಕೂ ಎಸೆಯದಂತೆ ಪ್ರೇಕ್ಷಕರಿಗೆ ಎಸಿಸಿ ಮನವಿ ಮಾಡಿದೆ.

    ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಹಿಂದಿನ ಪಂದ್ಯ ಕ್ಯಾಂಡಿಯಲ್ಲಿ ಮಳೆಯಿಂದ ರದ್ದಾಗಿತ್ತು. ಈ ವೇಳೆ ಮೊದಲ ಇನ್ನಿಂಗ್ಸ್ ಮಾತ್ರ ಆಡಲು ಸಾಧ್ಯವಾಗಿತ್ತು. ಪಂದ್ಯದಲ್ಲಿ ಭಾರತ 266 ರನ್ ಗಳಿಸಿತ್ತು. ಆದರೆ ನಿರಂತರ ಮಳೆಯಿಂದಾಗಿ ಅದು ಬೌಲಿಂಗ್‍ಗೆ ಮರಳಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: World Cup 2023 – 5 ತಂಡಗಳ ಪ್ರಕಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೋರಾಟ ಅಂದ್ರೆ ಇದು – ಕೊನೆಯವರೆಗೂ ಕಾದಾಡಿ ಸೋತ ಅಫ್ಘಾನಿಸ್ತಾನ

    ಹೋರಾಟ ಅಂದ್ರೆ ಇದು – ಕೊನೆಯವರೆಗೂ ಕಾದಾಡಿ ಸೋತ ಅಫ್ಘಾನಿಸ್ತಾನ

    – 2 ರನ್‌ ರೋಚಕ ಜಯ, ಸೂಪರ್‌ 4ಗೆ ಶ್ರೀಲಂಕಾ

    ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಸೂಪರ್‌ 4 ಪ್ರವೇಶಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲನ್ನು ಅನುಭವಿಸಿದ್ದು, ಶ್ರೀಲಂಕಾ (Sri Lanka) 2 ರನ್‌ಗಳ ಜಯ ಸಾಧಿಸುವ ಮೂಲಕ ಸೂಪರ್‌ 4 ಪ್ರವೇಶ ಮಾಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತು. ಈ ಮೊತ್ತ ಸವಾಲಿನ ಮೊತ್ತವಾಗಿದ್ದರೂ ಅಫ್ಘಾನಿಸ್ತಾನಕ್ಕೆ ಮತ್ತೊಂದು ಸವಾಲು ಇತ್ತು.

    ಬಾಂಗ್ಲಾದೇಶದ (Bangladesh) ವಿರುದ್ಧ ಪಂದ್ಯ ಸೋತಿದ್ದರಿಂದ ನೆಟ್‌ ರನ್‌ ರೇಟ್‌ ಬಹಳ ಕಡಿಮೆ ಇತ್ತು. ಹೀಗಾಗಿ 37 ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಇತ್ತು. ಈ ಕಾರಣಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ 37.4 ಓವರ್‌ಗಳಲ್ಲಿ 289 ರನ್‌ಗಳಿಸಿ ಆಲೌಟ್‌ ಆಗಿ ಟೂರ್ನಿಯಿಂದ ಹೊರ ಬಿತ್ತು.

    ಆರಂಭದಲ್ಲೇ ಅಫ್ಘಾನಿಸ್ತಾನ ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 59 ರನ್‌(66 ಎಸೆತ, 3 ಬೌಂಡರಿ, 1 ಸಿಕ್ಸರ್‌) ರಹ್ಮತ್‌ ಶಾ 45 ರನ್‌ (40 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಚೇತರಿಕೆ ನೀಡಿದರು. ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

    ನಂತರ ಬಂದ ಮೊಹಮ್ಮದ್‌ ನಬಿ ಬಿರುಸಿನ ಬ್ಯಾಟ್‌ ಬೀಸಿದರು. ಕೇವಲ 32 ಎಸೆತಗಳಲ್ಲಿ 65 ರನ್‌(6 ಬೌಂಡರಿ, 5 ಸಿಕ್ಸರ್‌ ) ಸಿಡಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು. ಕೊನೆಯಲ್ಲಿ ನಜಿಬುಲ್ಲಾ ಮತ್ತು ರಷೀದ್‌ ಖಾನ್‌ ಗೆಲುವಿನ ದಡದತ್ತ ತಂದಿದ್ದರು. ಇವರಿಬ್ಬರು 23 ಎಸೆತಗಳಲ್ಲಿ 39 ರನ್‌ ಜೊತೆಯಾಟವಾಡಿದರು. ಇನ್ನೇನು ಅಫ್ಘಾನ್‌ಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾಗ ನಜಿಬುಲ್ಲಾ 23 ರನ್‌( 15 ಎಸೆತ, 1 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು. ಹೀಗಿದ್ದರೂ ರಶೀದ್‌ ಖಾನ್‌ ಇನ್ನೊಂದು ಕಡೆಯಲ್ಲಿ ನಿಂತು ಅಬ್ಬರಿಸುತ್ತಿದ್ದರು. ಆದರೆ 37.1ನೇ ಓವರಿಗೆ ಮುಜೀಬ್‌ ಮತ್ತು 37.4ನೇ ಎಸೆತಕ್ಕೆ ಫಾರೂಕಿ ಔಟಾಗುವುದರೊಂದಿಗೆ ಅಫ್ಘಾನಿಸ್ತಾನ ಏಷ್ಯಾ ಕಪ್‌ನಿಂದ ನಿರ್ಗಮಿಸಿತು.

    ರಶೀದ್‌ ಖಾನ್‌ ಔಟಾಗದೇ 27 ರನ್‌(16 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು. ರಶೀದ್‌ ಖಾನ್‌ ನಾನ್‌ ಸ್ಟ್ರೈಕ್‌ನಲ್ಲಿ ಇದ್ದ ಕಾರಣ 37ನೇ ಓವರ್‌ನಲ್ಲಿ ಸ್ಟ್ರೈಕ್‌ ಸಿಕ್ಕಿರಲಿಲ್ಲ. 37ನೇ ಓವರ್‌ನಲ್ಲಿ ಪಂದ್ಯ ಮುಗಿಸದೇ ಇದ್ದರೂ 37.4 ಓವರ್‌ನಲ್ಲಿ ಸಿಕ್ಸ್‌ ಚಚ್ಚಿ 295 ರನ್‌ ಗಳಿಸಿದ್ದರೆ ಅಫ್ಘಾನಿಸ್ತಾನ ಸೂಪರ್‌ 4 ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಧನಂಜಯ ಡಿಸಿಲ್ವಾ ಬಿಗಿಯಾದ ಬೌಲಿಂಗ್‌ನಿಂದಾಗಿ ಲಂಕಾ 2 ರನ್‌ಗಳ ಜಯ ಸಾಧಿಸುವುದರೊಂದಿಗೆ ಸೂಪರ್‌ 4 ಪ್ರವೇಶಿಸಿದೆ.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಲಂಕಾ ಪರವಾಗಿ ಕುಸಾಲ್ ಮೆಂಡಿಸ್ 92 ರನ್‌( 84 ಎಸೆತ, 6 ಬೌಂಡರಿ, 3 ಸಿಕ್ಸರ್‌), ಪಾತುಮ್‌ ನಿಸ್ಸಾಂಕ 41 ರನ್‌, ಮಹೇಶ್‌ ತೀಕ್ಷಣ 28 ರನ್‌, ದುನಿತ್ ವೆಲ್ಲಲಾಗೆ 36 ರನ್‌ ಹೊಡೆದರು.

    ಅಫ್ಘಾನಿಸ್ತಾನ ಸೋತರೂ ಕ್ರಿಕೆಟ್‌ ಇತಿಹಾಸದಲ್ಲಿ ರೋಚಕ ಹೋರಾಟ ನಡೆಸಿದ ಪಂದ್ಯಗಳ ಸಾಲಿಗೆ ಈ ಪಂದ್ಯ ಸೇರ್ಪಡೆಯಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಅಫ್ಘಾನ್‌ ಆಟಗಾರರ ಕೆಚ್ಚೆದೆಯ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೇಪಾಳ ವಿರುದ್ಧ 10 ವಿಕೆಟ್‌ಗಳ ಜಯ – ಸೂಪರ್ 4ಗೆ ಟೀಂ ಇಂಡಿಯಾ ಎಂಟ್ರಿ

    ನೇಪಾಳ ವಿರುದ್ಧ 10 ವಿಕೆಟ್‌ಗಳ ಜಯ – ಸೂಪರ್ 4ಗೆ ಟೀಂ ಇಂಡಿಯಾ ಎಂಟ್ರಿ

    ಪಲ್ಲೆಕೆಲೆ: ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರ ಅಜೇಯ ಅರ್ಧಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಟೂರ್ನಿಯಲ್ಲಿ ನೇಪಾಳ (Nepal) ವಿರುದ್ಧ ಟೀಂ ಇಂಡಿಯಾ (Team India) 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸೂಪರ್‌ 4 ಪ್ರವೇಶಿಸಿದೆ.

    ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ನೇಪಾಳ 48.2 ಓವರ್‌ನಲ್ಲಿ 230 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಬ್ಯಾಟಿಂಗ್‌ ಆರಂಭಿಸಿದ ಭಾರತ 2.1 ಓವರ್‌ಗಳಲ್ಲಿ 17 ರನ್‌ ಗಳಿಸಿದ್ದಾಗ ಜೋರಾಗಿ ಮಳೆ (Rain) ಸುರಿಯಿತು.

    ಮಳೆ ನಿಂತ ಮೇಲೆ ಭಾರತಕ್ಕೆ ಡಕ್‌ವರ್ಥ್‌ಲೂಯಿಸ್‌ ನಿಯಮದ ಅನ್ವಯ 23 ಓವರ್‌ಗಳಲ್ಲಿ 145 ರನ್‌ ಗುರಿ ನೀಡಲಾಯಿತು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ (Rohith Sharma) ಮತ್ತು ಶುಭಮನ್‌ ಗಿಲ್‌ (Shubman Gill) ಶತಕದ ಜೊತೆಯಾಟವಾಡಿದ ಪರಿಣಾಮ 20.1 ಓವರ್‌ನಲ್ಲಿ 147 ನ್‌ ಹೊಡೆದು ಜಯಗಳಿಸಿತು. ರೋಹಿತ್‌ ಶರ್ಮಾ ಔಟಾಗದೇ 74 ರನ್‌(59 ಎಸೆತ, 6 ಬೌಂಡರಿ, 5 ಸಿಕ್ಸರ್‌), ಶುಭಮನ್‌ ಗಿಲ್‌ ಔಟಾಗದೇ 67 ರನ್‌(62 ಎಸೆತ, 8 ಬೌಂಡರಿ, 1 ಸಿಕ್ಸ್‌) ಹೊಡೆದರು.

    ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ನೇಪಾಳ ಪರ ಆರಂಭಿಕ ಆಟಗಾರರಾದ ಕುಶಾಲ್ ಭುರ್ಟೆಲ್ 38 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸ್‌), ಅಸೀಫ್‌ ಶೇಕ್‌ 58 ರನ್‌(97 ಎಸೆತ, 8 ಬೌಂಡರಿ) ಹೊಡೆದರೆ  ಸೋಂಪಾಲ್ ಕಾಮಿ 48 ರನ್‌( 56 ಎಸೆತ, 1 ಬೌಂಡರಿ, 2 ಸಿಕ್ಸರ್‌) ಚಚ್ಚಿ ಔಟಾದರು.  ಇದನ್ನೂ ಓದಿ: ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಮೊಹಮ್ಮದ್‌ ಸಿರಾಜ್‌ ಮತ್ತು ಜಡೇಜಾ ತಲಾ 3 ವಿಕೆಟ್‌ ಕಿತ್ತರೆ, ಶಮಿ, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೂಪರ್‌ 4 ಹಂತವನ್ನು ಪ್ರವೇಶಿಸಿದೆ. ಎರಡೂ ಪಂದ್ಯವನ್ನು ಸೋತ ನೇಪಾಳ ಟೂರ್ನಿಯಿಂದ ಹೊರ ಬಿದ್ದಿದೆ.

    ಬಿ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಬಾಂಗ್ಲಾದೇಶ 2 ಅಂಕ ಸಂಪಾದಿಸಿದ್ದರೆ ಶ್ರೀಲಂಕಾ 1 ಪಂದ್ಯದಿಂದ 2 ಅಂಕ ಸಂಪಾದಿಸಿದೆ. ಅಫ್ಘಾನಿಸ್ತಾನ ತಾನು ಆಡಿದ ಒಂದು ಪಂದ್ಯವನ್ನು ಸೋತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಲಾಹೋರ್‌: ಮೆಹ್ದಿ, ನಜ್ಮಲ್‌ ಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ (Asia Cup Cricket) ಅಫ್ಘಾನಿಸ್ತಾನದ (Afghanistan) ವಿರುದ್ಧ ಬಾಂಗ್ಲಾದೇಶ (Bangladesh) 89 ರನ್‌ಗಳ ಭರ್ಜರಿ ಜಯಗಳಿಸಿದೆ.

    ಗೆಲ್ಲಲು 335 ರನ್‌ಗಳ ಕಠಿಣ ಗುರಿಯನ್ನು ಪಡೆದ ಅಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್‌ ಆಯ್ತು. ಇದನ್ನೂ ಓದಿ: Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?

    ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ 75 ರನ್‌ (74 ಎಸೆತ, 10 ಬೌಂಡರಿ, 1 ಸಿಕ್ಸರ್)‌, ಹಶ್ಮತುಲ್ಲಾ ಶಾಹಿದಿ 51 ರನ್‌ (60 ಎಸೆತ, 6 ಬೌಂಡರಿ), ರಹ್ಮತ್‌ ಶಾ 33 ರನ್‌ (‌ 51 ರನ್‌, 60 ಎಸೆತ, 6 ಬೌಂಡರಿ) ಕೊನೆಯಲ್ಲಿ ರಶೀದ್‌ ಖಾನ್‌ 24 ರನ್‌ (15 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಪ್ರತಿರೋಧ ತೋರಿದರು. ಬಾಂಗ್ಲಾ ಪರ ತಸ್ಕಿನ್‌ ಅಹ್ಮದ್‌ 4 ವಿಕೆಟ್‌, ಶರಿಫುಲ್ ಇಸ್ಲಾಂ 3 ವಿಕೆಟ್‌ ಕಿತ್ತರು.

    ಮೆಹ್ದಿ, ನಜ್ಮಲ್‌ ಶತಕದ ಆಟ:
    63 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದಾಗ ಜೊತೆಯಾದ ಮೆಹ್ದಿ ಹಸನ್‌ (Mehidy Hasan Miraz ) ಮತ್ತು ನಜ್ಮಲ್‌ ಹಸನ್‌ (Najmul Hossain Shanto) ಮೂರನೇ ವಿಕೆಟಿಗೆ 190 ಎಸೆತಗಳಲ್ಲಿ 194 ರನ್‌ ಜೊತೆಯಾಟವಾಡಿದರು.

    ಮೆಹ್ದಿ ಹಸನ್‌ 112 ರನ್‌(119 ಎಸೆತ, 7 ಬೌಂಡರಿ, 3 ಸಿಕ್ಸರ್)‌ ಸಿಡಿಸಿದರೆ ನಜ್ಮಲ್‌ 104 ರನ್‌ (105 ಎಸೆತ, 9 ಬೌಂಡರಿ, 2 ಸಿಕ್ಸರ್‌) ಸಿಡಿಸಿ ರನೌಟ್‌ ಆದರು.  ಇದನ್ನೂ ಓದಿ: ನೇಪಾಳ ಪಂದ್ಯಕ್ಕೆ ಗೈರು – ಭಾರತಕ್ಕೆ ಮರಳಿದ ಬುಮ್ರಾ

    ಕೊನೆಯಲ್ಲಿ ಮುಶ್ಫಿಕರ್ ರಹೀಮ್ 25 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್)‌ , ನಾಯಕ ಶಕಿಬ್‌ ಉಲ್‌ ಹಸನ್‌ 32 ರನ್‌( 18 ಎಸೆತ, 4 ಬೌಂಡರಿ, 1 ಸಿಕ್ಸರ್)‌ ಚಚ್ಚಿದ ಪರಿಣಾಮ ತಂಡದ ಮೊತ್ತ 330 ರನ್‌ಗಳ ಗಡಿದಾಟಿತು.

     

    ಗುಂಪು ಬಿಯಲ್ಲಿ ಬಾಂಗ್ಲಾ ಎರಡು ಪಂದ್ಯವಾಡಿ ಲಂಕಾ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ 2 ಅಂಕ ಗಳಿಸಿದೆ. ಶ್ರೀಲಂಕಾ ಬಾಂಗ್ಲಾವನ್ನು ಸೋಲಿಸಿದ ಪರಿಣಾಮ 2 ಅಂಕ ಪಡೆದುಕೊಂಡಿದೆ. ಅಫ್ಘಾನಿಸ್ತಾನದ ನೆಟ್‌ ರನ್‌ ರೇಟ್‌ -1.780 ಇದ್ದು ಲಂಕಾ ವಿರುದ್ಧ ಭಾರೀ ಅಂತರದಿಂದ ಜಯಗಳಿಸಿದರೆ ಮಾತ್ರ ಸೂಪರ್‌ 4 ಪ್ರವೇಶಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]