Tag: ಏಷ್ಯಾ ಕಪ್‌ 2023

  • ಮುಂಜಾನೆಯೇ ಕೊಲೊಂಬೊದಲ್ಲಿ ಮಳೆ – ಏನಾಗಲಿದೆ ರಿಸರ್ವ್ ಡೇ ಭವಿಷ್ಯ?

    ಮುಂಜಾನೆಯೇ ಕೊಲೊಂಬೊದಲ್ಲಿ ಮಳೆ – ಏನಾಗಲಿದೆ ರಿಸರ್ವ್ ಡೇ ಭವಿಷ್ಯ?

    ಕೊಲಂಬೊ: ಭಾರತ (Team India) ಪಾಕ್ (Pakistan) ನಡುವಿನ ಪಂದ್ಯಗಳಿಗೆ ನಿರಂತರವಾಗಿ ಆಘಾತ ನೀಡುತ್ತಿರುವ ಮಳೆ ಇಂದು ಕೂಡ ಮುಂದುವರೆದಿದೆ. ಮುಂಜಾನೆ ಕೂಡ ಕೊಲೊಂಬೊದಲ್ಲಿ ಮಳೆ ಸುರಿದಿದೆ. ಈ ನಡುವೆ ಎರಡೂ ತಂಡಗಳ ಪಂದ್ಯಕ್ಕೆ ಮೀಸಲು ದಿನವಾದ ಇಂದು ಪಂದ್ಯ ಮುನ್ನೆಡಸಲು ತಯಾರಿ ನಡೆಸಲಾಗುತ್ತಿದೆ.

    ಭಾನುವಾರ ಶ್ರೀಲಂಕಾದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮಳೆಯಿಂದ ಸ್ಥಗಿತಗೊಂಡಿದ್ದ ಭಾರತ ಪಾಕ್ ನಡುವಿನ ಸೂಪರ್ ಫೋರ್ ಪಂದ್ಯ ಇಂದು (ಸೋಮವಾರ) ಅದೇ ಓವರ್‌ನಿಂದ ಮುಂದುವರೆಯಲಿದೆ. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್

    ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಈಗ ಮೀಸಲು ದಿನದಂದು ಎರಡು ತಂಡಗಳ ಹಣಾಹಣಿ ಅದೇ ಹಂತದಿಂದ ಪುನರಾರಂಭಗೊಳ್ಳಲಿದೆ.

    ಟೀಂ ಇಂಡಿಯಾ ಉಳಿದ 25.5 ಓವರ್‌ಗಳನ್ನು ಆಡುವುದು ಬಾಕಿ ಇದೆ. ಮಂಗಳವಾರ ಸಹ ಶ್ರೀಲಂಕಾ ವಿರುದ್ಧ ಭಾರತ ಸೆಣಸಲಿದ್ದು, ಸತತ ಮೂರು ದಿನಗಳ ಕಾಲ ಮೈದಾನದಲ್ಲಿ ತಂಡ ಕಾಣಿಸಿಕೊಳ್ಳಲಿದೆ. ಇದನ್ನೂ ಓದಿ: Asia Cup 2023ː ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನಕ್ಕೆ ಮತ್ತೆ ಮಳೆ ಅಡ್ಡಿ – ಸೋಮವಾರಕ್ಕೆ ಮುಂದೂಡಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್

    ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್

    ಕೊಲಂಬೋ: ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ (Team India) ಹಾಗೂ ಪಾಕ್ ಸೂಪರ್ ಫೋರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇದರ ನಡುವೆ ಮಳೆ ತರಿಸಿ ಅಲ್ಲಾ ಕಾಪಾಡಿದ್ದಾನೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

    ಅಖ್ತರ್ ತಮ್ಮ ನೇರ ನುಡಿಗಳಿಂದ ಹೆಸರುವಾಸಿಯಾಗಿದ್ದಾರೆ. ಈ ಪಂದ್ಯ ನಡೆಯುವಾಗ ಅವರು ಟ್ವಿಟ್ಟರ್‌ನಲ್ಲಿ (ಎಕ್ಸ್‌ನಲ್ಲಿ) ಪಾಕ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಚಾರವಾಗಿ ಇದೊಂದು ಮೂರ್ಖತನದ ನಿರ್ಧಾರ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಪಂದ್ಯದ ವೇಳೆ ಮಳೆ ಬಂದು ನಮ್ಮ ತಂಡವನ್ನು ಕಾಪಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Asia Cup 2023ː ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನಕ್ಕೆ ಮತ್ತೆ ಮಳೆ ಅಡ್ಡಿ – ಸೋಮವಾರಕ್ಕೆ ಮುಂದೂಡಿಕೆ

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಬರ್ ಅಜಮ್ ನಿರ್ಧಾರದ ಬಗ್ಗೆ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ನಡುವಿನ ಬ್ಯಾಟಿಂಗ್ ಅಬ್ಬರದಿಂದ 121 ರನ್ ತಲುಪಿದಾಗ ಅಖ್ತರ್ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಮೀಸಲು ದಿನದಂದು ಪಂದ್ಯವು ಮುಂದುವರಿದರೆ ಬಾಬರ್ ಅಜಮ್ ವಿಭಿನ್ನ ತಂತ್ರ ಅನುಸರಿಸಬೇಕು. ಮೊದಲು ಬೌಲಿಂಗ್ ಅಥವಾ ಬ್ಯಾಟಿಂಗ್‌ಗೆ ಬಂದಾಗ ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: KL ರಾಹುಲ್‌ ಈಸ್‌ ಬ್ಯಾಕ್‌ – ‌ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕನ್ನಡಿಗನ ವಿಶೇಷ ಸಾಧನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ಎದುರಿಸಲು ನಮ್ಮ ಬಳಿ ಬಲಿಷ್ಠ ಬೌಲಿಂಗ್‌-ಬ್ಯಾಟಿಂಗ್‌ ಪಡೆ ಇದೆ: ಬಾಬರ್‌ ಆಜಂ

    ಟೀಂ ಇಂಡಿಯಾ ಎದುರಿಸಲು ನಮ್ಮ ಬಳಿ ಬಲಿಷ್ಠ ಬೌಲಿಂಗ್‌-ಬ್ಯಾಟಿಂಗ್‌ ಪಡೆ ಇದೆ: ಬಾಬರ್‌ ಆಜಂ

    ಕೊಲಂಬೊ: ಭಾರತ ಮತ್ತು ಪಾಕಿಸ್ತಾನ (INDvsPAK) ನಡುವಿನ ಏಷ್ಯಾಕಪ್ ಟೂರ್ನಿಯ (Asia Cup 2023) ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

    ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂಡೋ-ಪಾಕ್‌ ಕದನ ನಡೆಯಲಿದ್ದು, ಈ ಕುರಿತು ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಮಾತನಾಡಿದ್ದಾರೆ. ಇದನ್ನೂ ಓದಿ: ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್‌ಗೆ ವರುಣನ ಅವಕೃಪೆ ಭೀತಿ

    ನಾವು ನಮ್ಮ ಆಟಗಾರರನ್ನ ಚೆನ್ನಾಗಿ ರೂಪಿಸಿದ್ದೇವೆ. ಟೀಂ ಇಂಡಿಯಾವನ್ನ (Team India) ಎದುರಿಸಲು ಬಲಿಷ್ಠ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪಡೆಯನ್ನ ಹೊಂದಿದ್ದೇವೆ. ಒಂದು ವೇಳೆ ಬ್ಯಾಟಿಂಗ್‌ ಆಯ್ದುಕೊಂಡರೆ ಬ್ಯಾಟಿಂಗ್‌ನಲ್ಲಿ, ಬೌಲಿಂಗ್‌ ಆಯ್ದುಕೊಂಡರೆ ಬೌಲಿಂಗ್‌ನಲ್ಲಿ ಟೀಂ ಇಂಡಿಯಾವನ್ನ ಕಟ್ಟಿಹಾಕಲು ಸಿದ್ಧರಾಗಿದ್ದೇವೆ. ಎಲ್ಲದಕ್ಕೂ ನಮ್ಮ ಆಟಗಾರರು ರೆಡಿ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ

    ಕಳೆದ ಎರಡು ತಿಂಗಳಿನಿಂದಲೂ ನಾವು ಶ್ರೀಲಂಕಾ ಪಿಚ್‌ನಲ್ಲಿ (Sri Lanka Ground Pitch) ಆಡುತ್ತಿದ್ದೇವೆ. ಟೆಸ್ಟ್‌ ಕ್ರಿಕೆಟ್‌, ಅಫ್ಘಾನಿಸ್ತಾನ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿ, ನಂತರ ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ್ದೇವೆ. ಆದ್ದರಿಂದ ಪಿಚ್‌ ಪರಿಸ್ಥಿತಿ ನಮಗೆ ಚೆನ್ನಾಗಿ ತಿಳಿದಿದೆ. ಅಲ್ಲದೇ ನಮ್ಮ ತಂಡದಲ್ಲಿ ವೇಗಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶಾಹೀನ್‌ ಶಾ ಅಫ್ರಿದಿ, ಹ್ಯಾರಿಸ್‌ ರೌಫ್‌ ಹಾಗೂ ನಸೀಮ್‌ ಶಾ ಕೇವಲ ಮೂರೇ ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನ ಪಡೆದಿದ್ದಾರೆ. ಆದ್ದರಿಂದ ಬೌಲಿಂಗ್, ಬ್ಯಾಟಿಂಗ್‌ ಯಾವುದೇ ಆಯ್ದುಕೊಂಡರೂ ಉತ್ತಮ ಆರಂಭ ನೀಡುವ ನಿರೀಕ್ಷೆ ಹೊಂದಿದ್ದೇವೆ ಎಂದು ಬಾಬರ್‌ ಹೇಳಿದ್ದಾರೆ.

    ಏಷ್ಯಾಕಪ್‌ನಲ್ಲಿ ಭಾರತದ್ದೇ ಮೇಲುಗೈ:
    ಈವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 133 ಏಕದಿನ ಪಂದ್ಯಗಳು ನಡೆದಿವೆ. ಭಾರತ 55ರಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 73 ಪಂದ್ಯಗಳಲ್ಲಿ ಜಯ ಸಾಧಿಸಿದೆ, 5 ಡ್ರಾನಲ್ಲಿ ಅಂತ್ಯಗೊಂಡಿದೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 7ಕ್ಕೆ 7 ಪಂದ್ಯಗಳಲ್ಲೂ ಭಾರತವೇ ಗೆಲುವು ಸಾಧಿಸಿದೆ. ಇನ್ನೂ 14 ಏಕದಿನ ಏಷ್ಯಾಕಪ್‌ ಟೂರ್ನಿ ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನ 5ರಲ್ಲಿ ಗೆಲುವು ಸಾಧಿಸಿದೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್‌ಗೆ ವರುಣನ ಅವಕೃಪೆ ಭೀತಿ

    ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್‌ಗೆ ವರುಣನ ಅವಕೃಪೆ ಭೀತಿ

    – ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ಶಿಫ್ಟ್

    ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ (IND vs Pak) ನಡುವಿನ ಏಷ್ಯಾಕಪ್ (Asia Cup 2023) ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ ಆಗಿದೆ. ಲೀಗ್‌ನಲ್ಲಿ ಪಂದ್ಯ ಮಳೆಯಿಂದ ವಾಶ್‌ಔಟ್ ಆಗಿತ್ತು. ಇವತ್ತಿನ ಪಂದ್ಯಕ್ಕೂ ವರುಣ ಅವಕೃಪೆ ತೋರುವ ಭೀತಿ ಎದುರಾಗಿದ್ದು, ಇಂದು ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ಶಿಫ್ಟ್ ಆಗಲಿದೆ. ಆದರೆ ಮೀಸಲು ದಿನದ ಆಟಕ್ಕೆ ಕೆಲ ನಿಯಮಗಳ ಬದಲಾಗಲಿವೆ.

    ಶ್ರೀಲಂಕಾದಲ್ಲಿ (Sri Lanka) ನಡೆಯುತ್ತಿರೋ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಬದ್ದ ವೈರಿಗಳ ಕಾಳಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರಣಿಯ ಲೀಗ್ ಹಂತದಲ್ಲಿ ಪ್ರೇಕ್ಷಕರ ಆಸೆಗೆ ಮಳೆರಾಯ ತಣ್ಣೀರೆರಚಿದ್ದ. ಆದರೆ ಅದಾದ ಬಳಿಕ ಮತ್ತೆ ಎರಡು ತಂಡಗಳು ಇಂದು ಸೂಪರ್ 4 ಹಂತದಲ್ಲಿ ಮತ್ತೆ ಕಾಳಗಕ್ಕೆ ಸಜ್ಜಾಗಿದ್ದು, ಪಂದ್ಯ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಭಾರತ ಪಾಕ್‍ಗೆ ರಿಸರ್ವ್ ಡೇ – ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳ ತಕರಾರು

    ಶ್ರೀಲಂಕಾದ ಕೊಲಂಬೋದಲ್ಲಿ ಭಾರತ-ಪಾಕ್ ತಂಡಗಳು ಎದುರಾಗಲಿವೆ. ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಭಾರತ ತಂಡದ ಘಟಾನುಘಟಿ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಮಕಾಡೆ ಮಲಗಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶಾನ್ ಜೊತೆಯಾಗಿದ್ದ ಪಾಂಡ್ಯ ಭಾರತವನ್ನ 250 ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.

    ಅತ್ತ ಪಾಕಿಸ್ತಾನ ತಂಡ ಕೂಡ ಬಲಿಷ್ಠವಾಗಿದ್ದು, ಸ್ಪೀಡ್ ಬೌಲರ್‌ಗಳ ಮೂಲಕ ಭಾರತೀಯ ಬ್ಯಾಟ್ಸ್ಮನ್‌ಗಳನ್ನ ಕಾಡಲು ತಯಾರಿ ನಡೆಸಿದ್ದು, ಶಾಹಿನ್ ಆಫ್ರಿದಿ, ಮಹಮ್ಮದ್ ರೌಫ್, ನಸ್ಸಿಮ್ ಶಾ ರಂತಹ ಬಲಿಷ್ಠ ಬೌಲಿಂಗ್ ಪಡೆಯೊಂದಿಗೆ ಪಾಕ್ ತಂಡ ಕಣಕ್ಕಿಳಿಯಲು ತಯಾರಿ ನಡೆಸಿದೆ. ಇತ್ತ ತವರಿಗೆ ವಾಪಸ್ ಆಗಿದ್ದ ಬುಮ್ರಾ ಮತ್ತೆ ತಂಡಕ್ಕೆ ವಾಪಸ್ ಆಗಿದ್ದು, ಭಾರತ ತಂಡದ ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?

    ಏಷ್ಯಾಕಪ್ ಇತಿಹಾಸದಲ್ಲಿ ಒಟ್ಟು 16 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಭಾರತ 9 ಬಾರಿ ಗೆಲುವು ಸಾಧಿಸಿದ್ದು, ಪಾಕಿಸ್ತಾನ 6 ಬಾರಿ ಮಾತ್ರ ಜಯ ಸಾಧಿಸಿದೆ. ಉಳಿದ ಒಂದು ಪಂದ್ಯ ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಇನ್ನೂ ಸದ್ಯ ಇವತ್ತಿನ ಪಂದ್ಯಕ್ಕೆ ಮಳೆಯ ಭೀತಿ ಇದ್ದು, ಒಂದೊಮ್ಮೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯ ಮೀಸಲು ದಿನಕ್ಕೆ ಶಿಫ್ಟ್ ಆಗಲಿದೆ. ಆದರೆ ಮೀಸಲು ದಿನದಲ್ಲಿ ಹಿಂದಿನ ಪಂದ್ಯ ಎಲ್ಲಿಗೆ ಸ್ಥಗಿತಗೊಂಡಿತ್ತು, ಅಲ್ಲಿಂದಲೇ ಆರಂಭವಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ

    Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ

    ನವದೆಹಲಿ: ಏಷ್ಯಾ ಕಪ್ 2023ರ (Asia Cup 2023) ಹೊಸ್ತಿಲಲ್ಲಿ ಟೀಂ ಇಂಡಿಯಾ (Team India) ತರಬೇತಿ ಜೋರಾಗಿದೆ. ಬೆಂಗಳೂರಿನ ಆಲೂರಿನ ಅಭ್ಯಾಸ ಶಿಬಿರದಲ್ಲಿ ಆಟಗಾರರನ್ನು ಜೋಡಿಯಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತಿದೆ.

    ತರಬೇತಿಯ ಭಾಗವಾಗಿ ಬ್ಯಾಟರ್‌ಗಳನ್ನು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್, ವಿರಾಟ್ ಕೊಹ್ಲಿ (Virat Kohli) ಮತ್ತು ಶ್ರೇಯಸ್ ಅಯ್ಯರ್ ಜೋಡಿಯಾಗಿ ವಿಂಗಡಿಸಲಾಗಿದೆ. ಈ ಆಟಗಾರರು ಬ್ಯಾಟಿಂಗ್‍ನಲ್ಲಿ ತೊಡಗಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೋದಲ್ಲಿ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದು, ಇಬ್ಬರೂ ಆಟಗಾರರು ಸ್ಪಿನ್ ಬೌಲರ್‌ಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಇದಕ್ಕೂ ಮೊದಲು ಪಂದ್ಯದ ತರಬೇತಿಯ ಕ್ರಮವಾಗಿ ನಂ. 5 ಮತ್ತು ನಂ. 6 ಸ್ಥಾನಗಳಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಜೋಡಿಯಾಗಿ ಬ್ಯಾಟಿಂಗ್ ಅಭ್ಯಾಸವನ್ನು ಮಾಡಿಸಲಾಯಿತು. ಅಭ್ಯಾಸದಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನಂ.4 ರಲ್ಲಿ ಅಭ್ಯಾಸ ನಡೆಸಿದರು.

    ಸೆ.2 ರಂದು 2023ರ ಏಷ್ಯಾ ಕಪ್‍ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಇದನ್ನೂ ಓದಿ: India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ

    ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ

    ಢಾಕಾ: ಏಷ್ಯಾ ಕಪ್ 2023 (Asia Cup 2023) ಹಾಗೂ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಟಗಾರರ ನೂತನ ಮಾದರಿಯ ತರಬೇತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬಾಂಗ್ಲಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ನಯಿಮ್ ಶೇಖ್ (Mohammad Naim) ಬೆಂಕಿಯ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಹುತೇಕ ತಂಡಗಳು ಏಷ್ಯಾ ಕಪ್ 2023ರ ಪಂದ್ಯಗಳಿಗಾಗಿ ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಹೊತ್ತಿನಲ್ಲಿ ನಯಿಮ್ ಶೇಖ್ ಅವರ ಉರಿಯುವ ಕೆಂಡದ ಮೇಲಿನ ನಡಿಗೆಯ ವೀಡಿಯೋ ಬಾರೀ ಸದ್ದು ಮಾಡಿದೆ. ಇದನ್ನೂ ಓದಿ: ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ: ನಸೀಮ್ ಶಾ

    ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್‍ನಲ್ಲಿ ಪಾಕ್ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಘರ್ಷಣೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಂತರದ ಹಂತದಲ್ಲಿ ಸೆ.4 ರಂದು ಭಾರತವು ನೇಪಾಳವನ್ನು ಎದುರಿಸಲಿದೆ. ಪಾಕಿಸ್ತಾನವು ಮೂರು ಗ್ರೂಪ್ ಹಂತದ ಪಂದ್ಯಗಳು ಮತ್ತು ಸೂಪರ್ ಫೋರ್ ಹಂತದ ಪಂದ್ಯವನ್ನು ಆಯೋಜಿಸುತ್ತದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

    ಸೂಪರ್ ಫೋರ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಮ್ಮೆ ಆಡುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ. ಇದನ್ನೂ ಓದಿ: ಮೊದಲ ಓವರ್‌ನಲ್ಲೇ 2 ವಿಕೆಟ್‌ ಉಡೀಸ್‌ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ​ಭಾರತಕ್ಕೆ ಜಯ ತಂದ ಬುಮ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ನವದೆಹಲಿ: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಮುಂಬರುವ ಏಷ್ಯಾ ಕಪ್‌ 2023 ಟೂರ್ನಿಯ (Asia Cup 2023) ಅಧಿಕೃತ ವೇಳಾಪಟ್ಟಿ ಹೊರಬಿದ್ದಿದೆ. ಪಂದ್ಯಾವಳಿಯು ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ.

    ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ರಾಷ್ಟ್ರಗಳು ಭಾಗವಹಿಸಲಿವೆ. ಇದನ್ನೂ ಓದಿ: RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

    ಈ ಕುರಿತು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಜಯ್‌ ಶಾ ಟ್ವೀಟ್‌ ಮಾಡಿ, ಬಹು ನಿರೀಕ್ಷಿತ ಪುರುಷರ ODI Asia Cup 2023 ವೇಳಾಪಟ್ಟಿಯನ್ನು ಪ್ರಕಟಿಸಲು ನನಗೆ ಸಂತೋಷವಾಗಿದೆ. ಇದು ವೈವಿಧ್ಯಮಯ ರಾಷ್ಟ್ರಗಳನ್ನು ಒಟ್ಟಿಗೆ ಬೆಸೆಯುವ ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಕ್ರಿಕೆಟ್ ಶ್ರೇಷ್ಠತೆಯ ಸಂಭ್ರಮದಲ್ಲಿ ಕೈಜೋಡಿಸೋಣ ಎಂದು ಬರೆದುಕೊಂಡಿದ್ದಾರೆ.

    ಪಾಕ್‌-ಭಾರತ ಹೈವೋಲ್ಟೇಜ್‌ ಪಂದ್ಯ
    ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India – Pakistan Match) ನಡುವಣ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

    ಏಷ್ಯಾ ಕಪ್‌ 2023 ಟೂರ್ನಿಯು ಸಂಪೂರ್ಣವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ಆಯೋಜನೆ ಆಗಬೇಕಿತ್ತು. ಪಾಕಿಸ್ತಾನದಲ್ಲಿ ನಡೆದರೆ ಟೀಮ್‌ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. ಹೀಗಾಗಿ ಎಸಿಸಿ ಕೂಡ ತನ್ನ ನಿಲುವು ಬದಲಾಯಿಸಿತ್ತು. ಹೈಬ್ರಿಡ್‌ ನಿಯಮದೊಂದಿಗೆ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸಲು ಮುಂದಾಗಿದೆ.

    ಭಾರತ, ಪಾಕಿಸ್ತಾನ, ನೇಪಾಳ ತಂಡಗಳು ‘ಎ’ ಗುಂಪಿನಲ್ಲಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ‘ಬಿ’ ಗುಂಪಿನಲ್ಲಿ ಪೈಪೋಟಿ ನಡೆಸಲಿವೆ. ಗ್ರೂಪ್‌ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೂಪರ್‌ 4 ಹಂತಕ್ಕೆ ತೇರ್ಗಡೆ ಆಗಲಿವೆ. ಸೂಪರ್‌ 4 ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್‌ ನಡೆಯಲಿದೆ. ಇದನ್ನೂ ಓದಿ: ಅಂದು ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹೀರೋ, ಈಗ ನೆರೆ ಸಂತ್ರಸ್ತರ ಪಾಲಿನ ಆಪದ್ಬಾಂಧವ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]