Tag: ಏಷ್ಯಾ ಇಲೆವೆನ್

  • ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್: ಕೊಹ್ಲಿ, ರಾಹುಲ್ ಸೇರಿ ಐವರು ಭಾರತೀಯರಿಗೆ ಸ್ಥಾನ

    ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್: ಕೊಹ್ಲಿ, ರಾಹುಲ್ ಸೇರಿ ಐವರು ಭಾರತೀಯರಿಗೆ ಸ್ಥಾನ

    – ಟೂರ್ನಿಯಲ್ಲಿ ಪಾಕ್ ಆಟಗಾರರಿಗಿಲ್ಲ ಅವಕಾಶ

    ಢಾಕಾ: ತಮ್ಮ ದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಈ ವರ್ಷದ ಮಾರ್ಚ್ ನಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವೆ ಎರಡು ಟಿ20 ಟೂರ್ನಿ ಆಯೋಜಿಸಿದೆ.

    ವಿಶ್ವ ಕ್ರಿಕೆಟ್‍ನ ಕೆಲವು ಸ್ಟಾರ್ ಆಟಗಾರರು ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಸ್ನೇಹಪರ ಪಂದ್ಯದ ಭಾಗವಾಗಲಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಏಷ್ಯಾ ಇಲೆವೆನ್‍ನ ತಂಡ 15 ಆಟಗಾರರ ಪಟ್ಟಿಯನ್ನು ಬಿಸಿಬಿ ಮಂಗಳವಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕನ್ನಡಿಗನ ಪರ ಬ್ಯಾಟ್ ಬೀಸಿ, ಮ್ಯಾನೇಜ್‍ಮೆಂಟ್ ವಿರುದ್ಧ ಕಿಡಿಕಾರಿದ ಕಪಿಲ್ ದೇವ್

    ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ ಐವರು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದು ಹೆಮ್ಮೆಯ ವಿಚಾರವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗಿ ಮೊಹಮ್ಮದ್ ಶಮಿ ಏಷ್ಯಾ ಇಲೆವೆನ್ ಪರ ಆಡಲಿದ್ದಾರೆ. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್‌: ಮಂಜ್ರೇಕರ್

    ಏಷ್ಯಾ ಇಲೆವೆನ್‍ನಲ್ಲಿ ಭಾರತವು ಗರಿಷ್ಠ ಸಂಖ್ಯೆಯ ಪ್ರಾತಿನಿಧ್ಯವನ್ನು ಹೊಂದಿದ್ದು, ಐದು ಆಟಗಾರರು ಭಾಗವಹಿಸಲಿದ್ದಾರೆ. ಬಾಂಗ್ಲಾದೇಶದ ನಾಲ್ವರು ಆಟಗಾರರಾದ ತಮೀಮ್ ಇಕ್ಬಾಲ್, ಲಿಟನ್ ದಾಸ್ ಮತ್ತು ಮುಷ್ಫಿಕರ್ ರಹೀಮ್ ಮತ್ತು ಮುಸ್ತಾಫಿಜುರ್ ರಹಮಾನ್ ಏಷ್ಯಾ ಇಲೆವೆನ್ ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಿಂದ ತಲಾ 2 ಆಟಗಾರರನ್ನು ಒಳಗೊಂಡ 15 ಸದಸ್ಯರ ತಂಡದಲ್ಲಿ ಯಾವುದೇ ಪಾಕಿಸ್ತಾನಿ ಆಟಗಾರನನ್ನು ಸೇರಿಸಲಾಗಿಲ್ಲ. ನೇಪಾಳದ ಪರ ಸಂದೀಪ್ ಲಮಿಚಾನೆ ಮಾತ್ರ ಪ್ರತಿನಿಧಿಸಲಿದ್ದಾರೆ . ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್

    ಏಷ್ಯಾ ಇಲೆವೆನ್ ತಂಡ:
    ಕೆ.ಎಲ್. ರಾಹುಲ್, ಶಿಖರ್ ಧವನ್, ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ, ಲಿಟಾನ್ ದಾಸ್, ರಿಷಭ್ ಪಂತ್, ಮುಶ್ಫಿಕೂರ್ ರಹೀಮ್, ಥಿಸರಾ ಪೆರೆರಾ, ರಶೀದ್ ಖಾನ್, ಮುಸ್ತಾಫಿಜುರ್ ರಹಮಾನ್, ಸಂದೀಪ್ ಲಾಮಿಚ್ಚಾನೆ, ಲಸಿತ್ ಮಾಲಿಂಗ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.

  • ಭಾರತದ ಒತ್ತಡಕ್ಕೆ ಮಣಿದ ಬಾಂಗ್ಲಾ – ಏಷ್ಯಾ ಇಲೆವೆನ್‍ನಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ

    ಭಾರತದ ಒತ್ತಡಕ್ಕೆ ಮಣಿದ ಬಾಂಗ್ಲಾ – ಏಷ್ಯಾ ಇಲೆವೆನ್‍ನಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ

    ನವದೆಹಲಿ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಮ್ಮ ದೇಶದ ರಾಷ್ಟ್ರಪಿತ ಶೇಕ್ ಮುಜಿಬುರ್ ರೆಹಮಾನ್ ಜನ್ಮ ಶಮಾನೋತ್ಸವ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳ ನಡುವೆ ಎರಡು ಟಿ20 ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ.

    ಬಿಸಿಬಿಯ ಈ ಮನವಿಗೆ ಐಸಿಸಿ ಕೂಡ ಸಮ್ಮತಿ ಸೂಚಿಸಿದೆ. ಅಲ್ಲದೇ ಪಂದ್ಯಗಳ ವೇಳಾಪಟ್ಟಿ ಹಾಗೂ ಏಷ್ಯಾ ಇಲೆವೆನ್ ಆಟಗಾರರ ಪಟ್ಟಿಯನ್ನು ನೀಡಲು ಸೂಚಿಸಿದೆ. ಆದರೆ ಏಷ್ಯಾ ಇಲೆವೆನ್ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರು ಅವಕಾಶ ಪಡೆದರೆ ಬಿಸಿಸಿಐ ಭಾರತೀಯ ಆಟಗಾರರಿಗೆ ಅವಕಾಶ ನೀಡುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿತ್ತು.

    ಒಂದೊಮ್ಮೆ ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಆಟಗಾರರಿಗೆ ಅವಕಾಶ ನೀಡಿದರೆ, ಭಾರತ ಆಟಗಾರರು ಇದೇ ತಂಡದಲ್ಲಿ ಆಡುವುದು ಕಷ್ಟಸಾಧ್ಯ. ಬಿಸಿಸಿಐ ಕೂಡ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿರುವ ಬಿಸಿಬಿ ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಹಾಗೂ ಭಾರತದ ಆಟಗಾರರು ಒಂದೇ ತಂಡದಲ್ಲಿ ಆಡುವ ಸನ್ನಿವೇಶ ಉದ್ಭವಿಸುವುದಿಲ್ಲ. ಏಕೆಂದರೆ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಪಂದ್ಯಗಳಿಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ. ಸದ್ಯ ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ 5 ಆಟಗಾರರು ಆಡಲಿದ್ದು, ಈ ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಮಾಡಲಿದ್ದಾರೆ.

    ಇತ್ತೀಚೆಗಷ್ಟೇ ಭಾರತದಲ್ಲಿನ ಭದ್ರತೆ ಕುರಿತು ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ, ಭದ್ರತೆಯ ದೃಷ್ಟಿಯಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ಸುರಕ್ಷಿತ ಎಂಬುದನ್ನು ನಾವು ಸಾಬೀತು ಪಡಿಸಿದ್ದೇವೆ ಎಂದಿದ್ದರು.

    ಶ್ರೀಲಂಕಾ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಪಾಕಿಸ್ತಾನ ಸರಣಿಯ ಬಳಿಕ ಪಾಕ್ ಕ್ರಿಕೆಟ್ ಆಡಲು ಸೂಕ್ತ ದೇಶ. ಪಾಕ್‍ನಲ್ಲಿ ಕ್ರಿಕೆಟ್ ಪುನರುಜ್ಜೀವನಗೊಳ್ಳಲು ಈ ಸರಣಿ ಮಹತ್ವ ವಹಿಸಿದೆ ಎಂದು ಪಿಸಿಬಿ ಹೇಳಿತ್ತು. ಕಳೆದ 2 ದಿನಗಳ ಹಿಂದೆ ಸೌರವ್ ಗಂಗೂಲಿ ಅವರ ಸೂಪರ್ ಸೀರಿಸ್ ಕ್ರಿಕೆಟ್ ಯೋಜನೆಯನ್ನು ಪಾಕ್ ಮಾಜಿ ಆಟಗಾರ ರಶೀದ್ ಲತೀಫ್ ಟೀಕೆ ಮಾಡಿ ಇದು ಫ್ಲಾಪ್ ಪ್ಲಾನ್ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಕಡೆಗೆ ಒಲವು ತೋರಿರುವ ಬಾಂಗ್ಲಾದೇಶ ಪಾಕ್ ಆಟಗಾರರಿಗೆ ಏಷ್ಯಾ ಇಲೆವೆನ್‍ಗೆ ಆಹ್ವಾನವನ್ನೇ ನೀಡಿಲ್ಲ.