ಭೋಪಾಲ್: ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎನ್ನುವ ಖ್ಯಾತಿ ಪಡೆದಿದ್ದ ಮಧ್ಯಪ್ರದೇಶ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿದ್ದ ವತ್ಸಲಾ ತನ್ನ 100ನೇ ವಯಸ್ಸಿನಲ್ಲಿ ನಿಧನವಾಗಿದೆ.
ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಚರಂಡಿ ಬಳಿ ಮುಂಬದಿ ಕಾಲುಗಳಿಗೆ ಗಾಯವಾಗಿ ಆನೆ ಕುಳಿತುಕೊಂಡಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಆದರೂ ಮಧ್ಯಾಹ್ನದ ವೇಳೆಗೆ ಆನೆ ಮೃತಪಟ್ಟಿದೆ. ವತ್ಸಲಾ ಆನೆಯ ಅಂತ್ಯಕ್ರಿಯೆಯನ್ನು ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ಮಂಗಳವಾರ ನೆರವೇರಿಸಿದ್ದಾರೆ.
ಈ ಆನೆಯನ್ನು ಕೇರಳದಿಂದ ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಕರೆತರಲಾಗಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ವತ್ಸಲಾ, ಮೀಸಲು ಪ್ರದೇಶದಲ್ಲಿರುವ ಆನೆಗಳ ಸಂಪೂರ್ಣ ಗುಂಪನ್ನು ಮುನ್ನಡೆಸುತ್ತಿತ್ತು.
ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ನಲ್ಲಿ (Hong Kong) ಅಲರ್ಟ್ ಘೋಷಿಸಲಾಗಿದೆ. ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 03ರಿಂದ ಇಲ್ಲಿಯವರೆಗೂ 14,200 ಕೇಸ್ ದಾಖಲಾಗಿದ್ದು, ಅದರ ಹಿಂದಿನ ವಾರಕ್ಕಿಂತ ಶೇ.28ರಷ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.
ಹಾಂಕಾಂಗ್ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಆಯು ಮಾಧ್ಯಮದವರೊಂದಿಗೆ ಮಾತನಾಡಿ, ಈ ಒಂದು ವರ್ಷದಲ್ಲಿ ಕೋವಿಡ್ ಪಾಸಿಟಿವ್ ಪರೀಕ್ಷೆಗಾಗಿ ಆಸ್ಪತ್ರೆಗೆ ಬರುವ ಉಸಿರಾಟದ ಮಾದರಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ವೈರಸ್ ಇರಲಿಲ್ಲ. ಈಗ ಮತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷದ ಆರಂಭದಿಂದ ಮೇ 3ರವರೆಗೆ ಗಂಭೀರ ಪ್ರಕರಣಗಳು ಹಾಗೂ ಸಾವನ್ನಪ್ಪಿದವರು ಸೇರಿದಂತೆ 31 ಪ್ರಕರಣಗಳು ದಾಖಲಾಗಿವೆ ಎಂದರು.ಇದನ್ನೂ ಓದಿ: ಪಾಕ್ ವಿರುದ್ಧ ಅಗತ್ಯ ಇದ್ರೆ ಯುದ್ಧ ಮಾಡಿ ಅಂದಿದ್ದೆ, ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ: ಸಿದ್ದರಾಮಯ್ಯ
– 7,000 ಕೋಟಿ ಮೌಲ್ಯದ ಸ್ಥಿರ ಠೇವಣಿ ಹೊಂದಿರುವ ಗ್ರಾಮಸ್ಥರು
ಗಾಂಧಿನಗರ: ಗುಜರಾತ್‌ನ (Gujarat) ಕಛ್‌ನಲ್ಲಿರುವ ಮಾಧಾಪರ್ (Madhapar) ಗ್ರಾಮವು ‘ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಗಳು ಹೇಳಿವೆ.
ಗುಜರಾತ್ ಪ್ರಮುಖ ವ್ಯಾಪಾರ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಭುಜ್‌ನ ಹೊರವಲಯದಲ್ಲಿರುವ ಮಾಧಾಪರ್ ಗ್ರಾಮದ ನಿವಾಸಿಗಳು 7,000 ಕೋಟಿ ಮೌಲ್ಯದ ಸ್ಥಿರ ಠೇವಣಿಯನ್ನು ಹೊಂದಿದ್ದಾರೆ. ಮಾಧಾಪರ್‌ನಲ್ಲಿ ‘ಪಟೇಲ್’ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಗ್ರಾಮದ ಜನಸಂಖ್ಯೆಯು ಸುಮಾರು 32,000 ಎಂದು ಅಂದಾಜಿಸಲಾಗಿದೆ. 2011ರಲ್ಲಿ ಈ ಗ್ರಾಮದ ಜನಸಂಖ್ಯೆ 17,000 ಆಗಿತ್ತು. ಇದನ್ನೂ ಓದಿ: ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!
????કચ્છનું માધાપર બન્યું એશિયાનું સૌથી ધનિક ગામ
????ગામની 17થી વધારે બેંકોમાં આશરે 7,000 કરોડની છે ડિપોઝિટ…આશરે 32,000 વસ્તીના માથાદીઠ લગભગ 18.75 લાખની ડિપોઝિટ જમા
ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಪಿಎನ್‌ಬಿ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳನ್ನು ಒಳಗೊಂಡಂತೆ ಒಟ್ಟು 17 ಬ್ಯಾಂಕ್‌ಗಳು ಈ ಒಂದೇ ಗ್ರಾಮದಲ್ಲಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ಹೊಂದಿವೆ. ಇದನ್ನೂ ಓದಿ: ನಾಡದೇವಿ ಭುವನೇಶ್ವರಿ ಪ್ರತಿಮೆ ಸಿದ್ಧಗೊಳ್ಳುತ್ತಿರುವ ಸ್ಥಳಕ್ಕೆ ಸಚಿವ ತಂಗಡಗಿ ಭೇಟಿ, ಪರಿಶೀಲನೆ
ಈ ಬೆಳವಣಿಗೆಗೆ ಕಾರಣ ವಿದೇಶದಲ್ಲಿರುವ ಅನಿವಾಸಿ ಭಾರತೀಯರು. ಈ ಗ್ರಾಮದ ಅನೇಕರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು ತಮ್ಮ ಗ್ರಾಮದ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಗ್ರಾಮವು ಸುಮಾರು 20,000 ಮನೆಗಳನ್ನು ಹೊಂದಿದೆ. ಅದರಲ್ಲಿ 1,200 ಕುಟುಂಬಗಳು ವಿದೇಶದಲ್ಲಿ ವಾಸಿಸುತ್ತಿವೆ. ಈ ಪೈಕಿ ಆಫ್ರಿಕನ್ ದೇಶಗಳಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚು. ಇನ್ನೂ ಅನೇಕರು ಯುಕೆ, ಆಸ್ಟ್ರೇಲಿಯಾ, ಅಮೇರಿಕಾ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ನೆಲೆಸಿದ್ದಾರೆ. ಇದನ್ನೂ ಓದಿ: Kolkata Horror | ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿ – ವೈದ್ಯರಿಗೆ ಸುಪ್ರೀಂ ಸೂಚನೆ!
ಅನೇಕ ಗ್ರಾಮಸ್ಥರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸಿಸುತ್ತಿದ್ದರೂ ತಮ್ಮ ಗ್ರಾಮದ ನಂಟನ್ನು ಕಳೆದುಕೊಂಡಿಲ್ಲ. ಇನ್ನು ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ವಿದೇಶಕ್ಕಿಂತ ಹೆಚ್ಚಾಗಿ ತಮ್ಮ ಹಣವನ್ನು ಇಲ್ಲಿನ ಬ್ಯಾಂಕ್‌ಗಳಲ್ಲಿ ಇಡಲು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರುಲ್ಬೆನ್ ಕಾರ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು
ಅಪಾರ ಠೇವಣಿ ಇಡುವುದರಿಂದ ಈ ಗ್ರಾಮ ಸಮೃದ್ಧಿಯಾಗಿದೆ. ನೀರು, ನೈರ್ಮಲ್ಯ ಮತ್ತು ರಸ್ತೆಯಂತಹ ಎಲ್ಲಾ ಮೂಲಭೂತ ಸೌಕರ್ಯಗಳನಮೀ ಗ್ರಾಮ ಹೊಂದಿದೆ. ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕೆರೆಗಳು ಮತ್ತು ದೇವಾಲಯಗಳು ಹಾಗೂ ಬಂಗಲೆಗಳು ಕೂಡ ಇಲ್ಲಿವೆ ಎಂದು ರಾಷ್ಟ್ರೀಕೃತ ಬ್ಯಾಂಕ್‌ನ ಸ್ಥಳೀಯ ಶಾಖಾ ವ್ಯವಸ್ಥಾಪಕರು ಹೇಳಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿಎಂ ಸೂಚನೆ
ಬೆಂಗಳೂರು: ಸಿಂಗಾಪುರದ World Sustainability Congress ನೀಡುವ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿದೆ.
ಗುರುವಾರ ಸಿಂಗಾಪುರದಲ್ಲಿ World Sustainability Congress ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ವಿಲ್ಬರ್ ಎನ್.ಜಿ., ಕಂಟ್ರಿ ಮ್ಯಾನೇಜರ್, ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಸರ್ಟಿಪೈಡ್ ಪ್ರೋಫೆಶನಲ್ ಅಕೌಂಟೆಂಟ್ಸ್ ಹಾಗೂ ಅಟಾರ್ನಿ ಕರೀನ ಲೆನೋರ್ ಎಸ್. ಬಯೋನ್, ಚೀಫ್ ಎನ್ವೈರ್ಮೆಂಟ್, ಸೋಷಿಯಲ್ ಮತ್ತು ಗೌರ್ನನ್ಸ್ ಅಫೀಸರ್, ಕಂಪ್ಲಯನ್ಸ್ ಮತ್ತು ಡಾಟಾ ಪ್ರೈವೆಸಿ ಅಧಿಕಾರಿಯಿಂದ ನಿಗಮದ ಪರವಾಗಿ ಮುಖ್ಯ ಲೆಕ್ಕಾಧಿಕಾರಿ ಮಂಜುಳ ನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್
ಬೆಂಗಳೂರು: ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಫೆಡರೇಷನ್ (FIBA) ಏಷ್ಯಾ (Asia) ವಿಭಾಗದ ಅಧ್ಯಕ್ಷರಾಗಿ ಕನ್ನಡಿಗ ಹಾಗೂ ಮೇಲ್ಮನೆ ಸದಸ್ಯ ಡಾ.ಕೆ. ಗೋವಿಂದರಾಜ್ (K. Govindaraj) ಆಯ್ಕೆಯಾಗಿದ್ದಾರೆ.
ಫಿಭಾ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯರಿಗೆ, ಅದರಲ್ಲೂ ಕನ್ನಡಿಗರೊಬ್ಬರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ವಿಶೇಷವಾಗಿದೆ. ಫಿಬಾ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಬೆನ್ನಲ್ಲೇ ಕೆ. ಗೋವಿಂದರಾಜ್ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ನವದೆಹಲಿ: ಯುಎಸ್ ಫೆಡರಲ್ ಬ್ಯಾಂಕ್ (US Federal Reserve) ಹಣಕಾಸು ನೀತಿಯಿಂದಾಗಿ ಭಾರತದ ರೂಪಾಯಿ (Indian Rupee) ಮೌಲ್ಯ 2022ರ ವರ್ಷಾಂತ್ಯಕ್ಕೆ ಶೇ.11.3 ರಷ್ಟು ಕುಸಿತಕಂಡಿದೆ. ಈ ವರ್ಷಾಂತ್ಯಕ್ಕೆ ಅತೀ ಕೆಟ್ಟ ಸಾಮರ್ಥ್ಯ ತೋರಿದ್ದು, ಈ ಮೂಲಕ 2013ರ ನಂತರದಲ್ಲಿ ಅತಿಹೆಚ್ಚು ವಾರ್ಷಿಕ ಮೌಲ್ಯ ಕುಸಿತವಾಗಿರುವ ಏಷ್ಯನ್ ಕರೆನ್ಸಿ (Asian Currency) ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.
Sri Lanka Rupee – 82% Pakistan Rupee – 27% Bangladesh Taka – 20% Nepali Rupee – 10.90% Are these countries not in Asia? Are they not asian currencies? Indian rupee is one of the best performing currency. Indians are extremely unlucky because we have low IQ MPs like you. pic.twitter.com/6iYqbiW0Es
ಹೌದು. ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ (Russia Ukraine War) ತೈಲ ಬೆಲೆಯಲ್ಲಿ ಏರಿಳಿತಗಳಿಂದಾಗಿ ರೂಪಾಯಿ ಮೌಲ್ಯ ಕುಸಿತವಾಯಿತು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು. ಸದ್ಯ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು 81.50 ರೂ. ನಿಂದ 83.50 ರೂ. ನಡುವೆ ಇರಲಿದೆ. 2023ರಲ್ಲಿ ಇದಕ್ಕೆ ಸೂಕ್ತ ಪರಿಹಾರ ಸಿಗುವ ಅಭಿಪ್ರಾಯವನ್ನು ತಜ್ಞರು ಹೊಂದಿದ್ದಾರೆ. ಇದನ್ನೂ ಓದಿ: `ಕಾಂತಾರ’ ಹೀರೋ ರಿಷಬ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್
the Indian Rupee hasn’t performed worse, but in reality, it is the other Asian currencies that have performed better. pic.twitter.com/Nf8MkUKzZ1
ರೂಪಾಯಿ ಮೌಲ್ಯಯುತವಾಗಿದ್ದರೂ, ಅದು ಏಷ್ಯನ್ ಸಂಪರ್ಕಿತರನ್ನ ಕಡಿಮೆ ಮಾಡುತ್ತಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವಹಾರಗಳೆಲ್ಲವೂ ಡಾಲರ್ ಮೂಲಕ ನಡೆಯುವುದರಿಂದ ರೂಪಾಯಿ ಆಯ್ಕೆಯಾಗುವುದಿಲ್ಲ. ಆದ್ರೆ ಭಾರತೀಯ ಶೇರುಗಳಲ್ಲಿ ವಹಿವಾಟನ್ನು ಮುಂದುವರಿಸಿದ್ರೆ, ರೂಪಾಯಿ ಮೌಲ್ಯ ಸ್ಥಿರವಾಗಲಿದೆ ಎಂದು ಒಸಿಬಿಸಿ ಬ್ಯಾಂಕ್‌ನ ಎಫ್‌ಎಕ್ಸ್ ತಂತ್ರಜ್ಞ ಕ್ರಿಸ್ಟೋಫರ್ ವಾಂಗ್ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಕೆಲ ವರ್ಷಗಳ ಹಿಂದೆ ಭಾರತದ ಹೊರಗೆ ಕೆಲವರಿಗಷ್ಟೇ ತಿಳಿದಿದ್ದ ಭಾರತೀಯ ಉದ್ಯಮಿ ಗೌತಮ್ ಅದಾನಿ ಇದೀಗ ವಿಶ್ವದಲ್ಲೇ 3ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಲೇಜನ್ನು ಅರ್ಧಕ್ಕೇ ನಿಲ್ಲಿಸಿ, ವಜ್ರದ ವ್ಯಾಪಾರ ಪ್ರಾರಂಭಿಸಿದ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೇ ಈ ಸ್ಥಾನಕ್ಕೆ ಏರಿದ ಏಷ್ಯಾದ ಮೊದಲ ವ್ಯಕ್ತಿಯೂ ಆಗಿದ್ದಾರೆ.
ಹೌದು, ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ 3ನೇ ಸ್ಥಾನವನ್ನು ಪ್ರವೇಶಿಸಿರುವುದು ಇದೇ ಮೊದಲು. ಈ ಸ್ಥಾನವನ್ನು ಗಳಿಸಲು ಮುಖೇಶ್, ಅಂಬಾನಿ, ಚೀನಾದ ಜಾಕ್ ಮಾ ರಿಂದ ಕೂಡಾ ಆಗಿರಲಿಲ್ಲ. ಇದೀಗ 137.4 ಬಿಲಿಯನ್ ಡಾಲರ್(10.97 ಲಕ್ಷ ಕೋಟಿ ರೂ.) ಮೊತ್ತದ ಆಸ್ತಿಯನ್ನು ಹೊಂದಿರುವ ಅದಾನಿ ಅವರು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನೂ ಹಿಂದಿಕ್ಕಿದ್ದಾರೆ. ಇದೀದ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹಾಗೂ ಅಮೆಜಾನ್ ಜೆಫ್ ಬೆಜೋಸ್ ಬಳಿಕದ ಸ್ಥಾನವನ್ನು ಅದಾನಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ
60 ವಯಸ್ಸಿನ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು, ಬಂದರುಗಳ ಉದ್ಯಮಗಳನ್ನು ವಿಸ್ತರಿಸುತ್ತಿದ್ದಾರೆ. ಡೇಟಾ ಕೇಂದ್ರಗಳಿಂದ ಹಿಡಿದು ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮೀನಿಯಂ ವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದಾನಿ ಗ್ರೂಪ್ ಈಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು, ವಿಮಾನ ನಿಲ್ದಾಣ ನಿರ್ವಾಹಕ, ಅನಿಲ ವಿತರಕ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಿದೆ. ಇದನ್ನೂ ಓದಿ: ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ
ಕೆಲವು ತಜ್ಞರು ಹಾಗೂ ಮಾರುಕಟ್ಟೆ ವೀಕ್ಷಕರು ಅದಾನಿ ಗ್ರೂಪ್‌ನ ಷೇರು ಹೂಡಿಕೆಗಳ ಗೌಪ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಂಪನಿ ಷೇರುಗಳು ಒಂದೇ ಸಮನೆ ಏರಿಕೆ ಕಾಣುತ್ತಲೇ ಇವೆ. ಕೆಲವು ಷೇರುಗಳ ಬೆಲೆ 2020ರ ಬಳಿಕ ಶೇ.1,000ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ಅರ್ಥಶಾಸ್ತ್ರಜ್ಞರ ಸಮೀಕ್ಷೆ ತಿಳಿಸಿದೆ.
ಭಾರತದಲ್ಲಿ ಆರ್ಥಿಕ ಹಿಂಜರಿತ ಎದುರಿಸುವ ಪರಿಸ್ಥಿತಿ ಶೂನ್ಯ ಎಂದು ಹೇಳಿದೆ. ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.85ರಷ್ಟಿದೆ ಎಂದು ಅಂದಾಜಿಸಿದೆ.
All agencies are in favour of the Modi Govt’s economic policies. Bloomberg survey on recession probabilities tells that India has ZERO probability of slipping in recession. But @INCIndia can’t see this as they are busy doing propaganda.pic.twitter.com/TRrh5RM90m
— Rahul Kumar Valmiki (@irahulvalmiki) July 26, 2022
ಯಾವ ದೇಶದಲ್ಲಿ ಎಷ್ಟು ಸಾಧ್ಯತೆ?
ಶ್ರೀಲಂಕಾ ಶೇ.85, ನ್ಯೂಜಿಲೆಂಡ್ ಶೇ.33, ದಕ್ಷಿಣ ಕೊರಿಯಾ ಶೇ.25, ಜಪಾನ್ ಶೇ.25, ಚೀನಾ ಶೇ.20, ಹಾಂಕಾಂಗ್ ಶೇ.20, ಆಸ್ಟ್ರೇಲಿಯಾ ಶೇ.20, ತೈವಾನ್ ಶೇ.20, ಪಾಕಿಸ್ತಾನ ಶೇ.20, ಮಲೇಷ್ಯಾ ಶೇ.20, ವಿಯೆಟ್ನಾಂ ಶೇ.10, ಥೈಲ್ಯಾಂಡ್ ಶೇ.10, ಫಿಲಿಪೈನ್ಸ್ ಶೇ.8, ಇಂಡೋನೇಷ್ಯಾ ಶೇ.3 ಎಂದಿದೆ.
ಆರ್ಥಿಕವಾಗಿ ಮುಂದುವರಿದ ದೇಶಗಳ ಪೈಕಿ ಇಟಲಿ ಶೇ.65, ಫ್ರಾನ್ಸ್ ಶೇ.50, ಜರ್ಮನಿ ಶೇ.45, ಇಂಗ್ಲೆಂಡ್ ಶೇ.45, ಅಮೆರಿಕ ಶೇ.40, ಜಪಾನ್ ಶೇ.25, ಚೀನಾದಲ್ಲಿ ಶೇ. ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.20 ರಷ್ಟಿದೆ.
Recession probabilities for the world's 8 biggest economies.
Italy – 65% France – 50% Germany – 45% UK – 45% US – 40% Japan – 25% China – 20% INDIA – 0%
ಯುರೋಪ್ ಮತ್ತು ಅಮೆರಿಕ ಖಂಡದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.
ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹಿಂಜರಿತವಾದರೂ ಕಡಿಮೆ ಸಮಯದವರೆಗೆ ಇರಲಿದೆ. ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಏರಿಕೆಯಾಗಿರುವ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಬೆಲೆ ಏರಿಕೆ ಮತ್ತು ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಸಿದೆ. ಬಡ್ಡಿ ದರ ಏರಿಸಿದ ಪರಿಣಾಮ ವಿಶ್ವಾದ್ಯಂತ ಕರೆನ್ಸಿಗಳ ಮುಂದೆ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ. ಹೀಗಿದ್ದರೂ ಮುಂದಿನ ವರ್ಷ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್
ಸಾಮಾಜಿಕ ಜಾಲತಾಣದಲ್ಲಿ ಈಗ ಆರ್ಥಿಕ ಹಿಂಜರಿತ( Recession) ಟ್ರೆಂಡಿಂಗ್ ಟಾಪಿಕ್ ಆಗಿದೆ.
Live Tv
[brid partner=56869869 player=32851 video=960834 autoplay=true]
ಡೆಹ್ರಾಡೂನ್: ಉತ್ತರಾಖಂಡದ ವಿಶ್ವವಿಖ್ಯಾತ ಹುಲಿ ಸಂರಕ್ಷಿತ ಪ್ರದೇಶವಾದ ಎಡ್ವರ್ಡ್ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರು ನಾಮಕರಣ ಮಾಡುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಒತ್ತಾಯಿಸಿದ್ದಾರೆ.
ಅಶ್ವಿನಿ ಕುಮಾರ್ ಚೌಬೆ ಅವರು ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಬದಲಾವಣೆಗೊಳಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಈ ಉದ್ಯಾನವನ ಸುಮಾರು 521 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿದೆ. ಇದನ್ನು 1930 ರಲ್ಲಿ ಹೈಲಿ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಲ್ಲಿ ಸ್ಥಾಪಿಸಲಾಯಿತು. 1952 ರಲ್ಲಿ ಉದ್ಯಾನವನ್ನು ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಯಿತು. ಆದರೆ, 1956 ರಲ್ಲಿ ಇದನ್ನು ಎಡ್ವರ್ಡ್ ಜಿಮ್ ಕಾರ್ಬೆಟ್ ಅವರ ಹೆಸರನ್ನಿಡಲಾಯಿತು. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ
ಆದರೀಗಾ ಮತ್ತೆ ಈ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುತ್ತಿರುವುದರ ಬಗ್ಗೆ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ. ಇತ್ತೀಚಿಗೆ ಉದ್ಯಾನವನ ಪ್ರವಾಸದ ಮ್ಯೂಸಿಯಂ ಅತಿಥಿ ಪುಸ್ತಕದಲ್ಲಿ ಎಡ್ವರ್ಡ್ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಬದಲಾಯಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೂಕಂಪ – 20 ಮಂದಿ ಸಾವು
ಈ ಕುರಿತಂತೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಾಹುಲ್ ಬುಧವಾರ ಹೇಳಿಕೆ ನೀಡಿದ್ದು, ಈ ಉದ್ಯಾನವನದ ಹೆಸರನ್ನು ಮೊದಲು ಕರೆಯುತ್ತಿದ್ದಂತೆ ರಾಮಗಂಗಾ ರಾಷ್ಟ್ರೀಯ ಉದ್ಯಾನ ಎಂದು ಮರುಸ್ಥಾಪಿಸಬೇಕು ಎಂದು ರಾಜ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ
ಸದ್ಯ ಈ ವಿಚಾರವಾಗಿ ವನ್ಯಜೀವಿ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ವನ್ಯಜೀವಿ ಪ್ರೇಮಿ ಪ್ರಕಾಶ್ ಕಿಮೋತಿ, ನಾವು ಹೆಸರನ್ನು ಬದಲಾಯಿಸುವುದಕ್ಕಿಂತ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
– 2023 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ವಿಶ್ವಾಸ – ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಗಡ್ಕರಿ
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಿರ್ಮಾಣವಾಗಲಿರುವ ಏಷ್ಯಾದ ಅತಿ ಉದ್ದದ ದ್ವಿಮುಖ ರಸ್ತೆ ಸುರಂಗ ನಿರ್ಮಾಣ ಕಾಮಗಾರಿ ಅವಧಿಗೆ ಮುನ್ನವೇ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ, ಸಂಪರ್ಕ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
14.5 ಕಿ.ಮೀ ಉದ್ದ ಜೊಜಿಲಾ ಸುರಂಗ ರಸ್ತೆಯನ್ನು ಪರಿಶೀಲಿಸಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಈ ಸುರಂಗ ನಿರ್ಮಾಣದ ಕಾಮಗಾರಿ ಸೆಪ್ಟೆಂಬರ್ 2026ರ ಒಳಗಡೆ ಪೂರ್ಣಗೊಳ್ಳಬೇಕೆಂಬ ಗುರಿಯನ್ನು ಹಾಕಲಾಗಿತ್ತು. ಆದರೆ ನಾನು 2023ರ ಡಿಸೆಂಬರ್ ಒಳಗಡೆ ಪೂರ್ಣಗೊಳಿಸಬೇಕೆಂದು ಕೇಳಿದ್ದೇನೆ. ಇದರಿಂದ 2024 ಗಣರಾಜ್ಯೋತ್ಸವಕ್ಕೆ ಮೊದಲು ಪ್ರಧಾನಿಗಳು ಉದ್ಘಾಟನೆ ಮಾಡಬಹುದು. ಇದು ನನಗೆ ಸವಾಲಿನ ವಿಚಾರವಾಗಿದ್ದರೂ ಆದರೆ ಈ ಕಾಮಗಾರಿಯನ್ನು ಅವಧಿಗೂ ಮೊದಲೇ ಎಂಜಿನಿಯರ್‌ಗಳು ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಗುತ್ತಿಗೆದಾರರಿಗೆ ವೇಗವಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಸುರಂಗ ಜನರ ಸೇವೆಗೆ ಲಭ್ಯವಾಗಬೇಕು. ನಾವು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ ಎಂದು ಇದರ ಅರ್ಥವಲ್ಲ. ಹಿಮಾಲಯದಲ್ಲಿ ಈ ರೀತಿಯದ್ದನ್ನು ನಿರ್ಮಿಸುವುದು ಸುಲಭವಲ್ಲ. ಆದರೆ ಅವರು ಅದನ್ನು ಮಾಡಬಹುದು ಎಂದು ನನಗೆ ಖಾತ್ರಿಯಿದೆ ಎಂದು ಗಡ್ಕರಿ ಹೇಳಿದರು.
ಸುರಂಗ ಯಾಕೆ?
4,600 ಕೋಟಿ ರೂ. ವೆಚ್ಚದ 14.5 ಕಿಮೀ ಉದ್ದದ ಜೊಜಿಲಾ ಸುರಂಗವು ಏಷ್ಯಾದ ಅತಿ ಉದ್ದದ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು 11,500 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿದೆ. ಇದು ಕಾಶ್ಮೀರ ಮತ್ತು ಲಡಾಖ್ ನಡುವೆ ಎಲ್ಲಾ ಹವಾಮಾನ ಸಮಯದಲ್ಲಿ ದೀರ್ಘಕಾಲಿಕ ಸಂಪರ್ಕವನ್ನು ಒದಗಿಸಲಿದೆ.
ಪ್ರಸ್ತುತ ಶ್ರೀನಗರ ಮತ್ತು ಲೇಹ್ ಮಧ್ಯೆ 5 ತಿಂಗಳ ಕಾಲ ಮಾತ್ರ ರಸ್ತೆ ಸಂಪರ್ಕವಿದೆ. ನವೆಂಬರ್ ನಿಂದ ಏಪ್ರಿಲ್ ವರೆಗೆ ಲೇಹ್ ಸಂಪರ್ಕ ಕಡಿತಗೊಳ್ಳುತ್ತದೆ. ಚಳಿಗಾಲದ ತಿಂಗಳಲ್ಲಿ ಈ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸುತ್ತದೆ. ಹಿಮಪಾತ ಸಂಭವಿಸುವ ಕಾರಣ ಸಂಚಾರವನ್ನು ಬಂದ್ ಮಾಡಲಾಗುತ್ತಿತ್ತು.
ಜನರಿಗೆ ಮಾತ್ರ ಅಲ್ಲದೇ ಭಾರತೀಯ ಸೇನೆಗೂ ಲೇಹ್ ತಲುಪಲು ಕಷ್ಟವಾಗುತ್ತಿತ್ತು. ಸೇನೆ ದೂರದ ಮಾರ್ಗಗಳನ್ನು ಬಳಸಿ ಲೇಹ್ ತಲುಪಬೇಕಿತ್ತು. ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾದ ರಸ್ತೆಗಳು ಇರುವ ಕಾರಣ ಇದು ಕೇಂದ್ರದ ಚಿಂತೆಗೆ ಕಾರಣವಾಗಿತ್ತು. ಈ ಕಾರಣಕ್ಕೆ ಕೇಂದ್ರ ಸರ್ಕಾರ ವರ್ಷದ 365 ದಿನವೂ ಲಡಾಖ್ ಸಂಪರ್ಕಿಸಲು ಜೊಜಿಲಾ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ
ಈ ಮೊದಲು ಬಾಲ್ತಾನ್‍ನಿಂದ ಮೀನಾ ಮಾರ್ಗಗಳ ನಡುವಿನ ಅಂತರ 40 ಕಿ.ಮೀ ಇದ್ದರೆ ಈಗ ಇದು 14 ಕಿ.ಮೀ ಕಡಿತಗೊಂಡಿದೆ. ಅಂದಾಜಿನ ಪ್ರಕಾರ ಪ್ರಯಾಣದ ಸಮಯವನ್ನು ಪ್ರಸ್ತುತ 3.5 ಗಂಟೆಗಳಿಂದ 15 ನಿಮಿಷಗಳಿಗೆ ಇಳಿಯಲಿದೆ. ಹೈದರಾಬಾದಿನ ಮೆಗಾ ಎಂಜಿನಿಯರಿಂಗ್ ಆಂಡ್ ಇನ್‍ಫ್ರಾಸ್ಟ್ರಕ್ಷರ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಿದೆ.
जोजिला टनल के बन जाने से यात्रा का समय 3 घंटे से घटकर 15 मिनट हो जाएगा और यात्री NH 1 पर हिमस्खलन मुक्त सुरक्षित यात्रा कर सकेंगे। #PragatiKaHighwaypic.twitter.com/aSOj1ATbs8
ಮೂಲಸೌಕರ್ಯಕ್ಕೆ ಒತ್ತು:
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಭಾಗವಾಗಿ ಈ ಜೊಜಿಲಾ ಸುರಂಗ ನಿರ್ಮಾಣಗೊಳ್ಳುತ್ತಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ 20 ಮತ್ತು ಲಡಾಖ್‍ನಲ್ಲಿ 11 ಸುರಂಗ ಯೋಜನೆ ನಿರ್ಮಿಸಲು ಸರ್ಕಾರ ಮುಂದಾಗಿದೆ.