Tag: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ 2023

  • Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    ಹುಲುನ್ಬುಯರ್: ಅತಿಥೇಯ ಚೀನಾವನ್ನು (China) ಸೋಲಿಸಿ ಭಾರತ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯನ್ನು (Asian Champions Trophy) ಗೆದ್ದುಕೊಂಡಿದೆ. ಇಂದು ನಡೆದ ಫೈನಲ್‌ ಪಂದ್ಯವನ್ನು ಭಾರತ 1-0 ಅಂತರದಿಂದ ಗೆಲ್ಲುವುದರ ಮೂಲಕ ಐದನೇ ಬಾರಿ ಹಾಕಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

    ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತಕ್ಕೆ (India) ಚೀನಾ ಭಾರೀ ಪೈಪೋಟಿ ನೀಡಿತ್ತು. ಎರಡೂ ತಂಡಗಳು ಜಿದ್ದಿಗೆ ಬಿದ್ದಂತೆ ಆಡಿದ್ದವು. ಮೊದಲ ಮೂರು ಕ್ವಾರ್ಟರ್‌ ನಲ್ಲಿ ಇತ್ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ 51ನೇ ನಿಮಿಷದಲ್ಲಿ ಜುಗ್ರಾಜ್‌ ಸಿಂಗ್‌ (Jugraj Singh) ಅವರು ಗೋಲು ಹೊಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಈ ಮುನ್ನಡೆಯನ್ನು ಕಾಯ್ದುಕೊಂಡ ಭಾರತ ಕೊನೆಗೆ ವಿಜಯ ಸಾಧಿಸಿತು. ಹಲವು ಬಾರಿ ಚೀನಾ ಆಟಗಾರರು ಪ್ರಯತ್ನ ಪಟ್ಟರೂ ಗೋಲು ಹೊಡೆಯಲು ಭಾರತದ ಆಟಗಾರರು ಬಿಡಲಿಲ್ಲ. ಟೂರ್ನಿಯಲ್ಲಿ ಅತ್ಯುತ್ತಮ ಆಟವಾಡಿದ ‌ ನಾಯಕ ಹರ್ಮನ್‌ಪ್ರೀತ್ ಅರ್ಹವಾಗಿ ಸರಣಿಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರವಾದರು.

    ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಚೀನಾ ತಮ್ಮ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 3-0 ಅಂತರದಿಂದ ಭಾರತ ಗೆದ್ದುಕೊಂಡಿತ್ತು.

    ಉತ್ತಮ ಫಾರ್ಮ್‌ನಲ್ಲಿರುವ ಭಾರತ 2020ರ ಟೋಕಿಯೋ ಮತ್ತು ಈ ವರ್ಷ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದು ಬೀಗಿತ್ತು.

     

  • Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

    Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

    ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ-2023 ಫೈನಲ್‌ (Asian Champions Trophy Final Hockey) ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ (India vs Malaysia) ರೋಚಕ ಜಯ ಸಾಧಿಸಿದೆ. ಆ ಮೂಲಕ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿದೆ.

    ಚೆನ್ನೈನಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ 4-3 ಅಂತರದಲ್ಲಿ ಮಲೇಷ್ಯಾ ವಿರುದ್ಧ ವಿರೋಚಿತ ಜಯ ಗಳಿಸಿತು. ಆ ಮೂಲಕ ACT ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದನ್ನೂ ಓದಿ: Asian Champions Trophy Hockey 2023: 4-0 ಗೋಲುಗಳ ಅಂತರದಲ್ಲಿ ಪಾಕ್‌ ಮಣಿಸಿದ ಭಾರತ

    ರಣರೋಚಕ ಆಟದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಜುಗರಾಜ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ಮಲೇಷ್ಯಾದ ಕಮಲ್ ಅಬು ಅರ್ಜೈ 1-1 ರಿಂದ ಸಮಬಲ ಸಾಧಿಸಿದರು. ನಂತರ ಎರಡನೇ ಕ್ವಾರ್ಟರ್‌ನಲ್ಲಿ ರಾಝೀ ರಹೀಮ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಮಲೇಷ್ಯಾಗೆ 2-1 ಗೋಲು ಗಳಿಸಿದರು. ಅಮಿನುದ್ದೀನ್ ಮುಹಮ್ಮದ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ 3-1 ಗೋಲು ಗಳಿಸಿದರು.

    ಈ ವೇಳೆ ಭಾರತ ಮತ್ತೆ ಪುಟಿದೆದ್ದಿತು. ಮೂರನೇ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು 2-3 ಗೆ ಪರಿವರ್ತಿಸಿದರು. ನಂತರ ಗುರ್ಜಂತ್ 3-3 ಮೂಲಕ ಸಮಬಲಕ್ಕೆ ತಂದರು. ಕೊನೆಯದಾಗಿ ಆಕಾಶದೀಪ್ ಗೋಲ್‌ ನೀಡುವ ಮೂಲಕ ACT ಪ್ರಶಸ್ತಿಯನ್ನು ಭಾರತ ಮುಡಿಗೇರಿಸಿಕೊಳ್ಳಲು ಸಹಾಯ ಮಾಡಿದರು. ಇದನ್ನೂ ಓದಿ: ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]