Tag: ಏಷ್ಯನ್ ಗೇಮ್ಸ್

  • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

    ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

    – ಬೆಳ್ಳಿ ಪದಕ ವಿಜೇತರಿಗೆ 6 ಕೋಟಿ ರೂ, ಕಂಚಿನ ಪದಕ ವಿಜೇತರಿಗೆ 3 ಕೋಟಿ ರೂ. ಪ್ರೋತ್ಸಾಹಧನ

    ಬೆಂಗಳೂರು: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ಘೋಷಣೆ. ಇದನ್ನೋ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಇದೇ 2024ರ ಜುಲೈ 26ರಿಂದ ಆಗಸ್ಟ್‌ 11ರ ವರೆಗೆ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಹಬ್ಬ ನಡೆಯಲಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಇದನ್ನೋ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಕ್ರೀಡಾ ಕ್ಷೇತ್ರಕ್ಕೆ ಸಿಎಂ ಕೊಡುಗೆ ಅಪಾರ:

    * ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಹುದ್ದೆ ಮೀಸಲು.

    * ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ 70 ಎಕರೆ ಪ್ರದೇಶದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ನಗರ (Sports City) ಸ್ಥಾಪನೆ ಹಾಗೂ 4 ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳ ನಿರ್ಮಾಣ.

    * ರಾಜ್ಯದ ವಿವಿಧ ಕ್ರೀಡಾ ಸಂಘ ಸಂಸ್ಥೆಗಳಿಗೆ 12 ಕೋಟಿ ರೂ. ಅನುದಾನ

    * ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ಘೋಷಣೆ.

    • ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕ್ರಮ.

    * ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ.

  • ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ತೆರೆ – ಐತಿಹಾಸಿಕ 107 ಪದಕಗಳೊಂದಿಗೆ ಭಾರತ ವಿದಾಯ

    ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ತೆರೆ – ಐತಿಹಾಸಿಕ 107 ಪದಕಗಳೊಂದಿಗೆ ಭಾರತ ವಿದಾಯ

    ಹ್ಯಾಂಗ್‌ಝೌ: ಚೀನಾದ‌ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಗೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿದ್ದು, ಭಾರತ ಅದ್ಭುತ ಸಾಧನೆಯೊಂದಿಗೆ ವಿದಾಯ ಹೇಳಿದೆ. ಏಷ್ಯನ್‌ ಗೇಮ್ಸ್‌ನ ಧ್ವಜವನ್ನು ಮುಂದಿನ ಅತಿಥೇಯ ನಗರವಾದ ದೋಹಾ, ಕತಾರ್‌ಗೆ ಹಸ್ತಾಂತರಿಸುವ ನಿರೀಕ್ಷೆಯಿದ್ದು, 2027ಕ್ಕೆ ದೋಹಾದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯಲಿದೆ.

    ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಶತಕ ಬಾರಿಸಿದೆ. ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಸೇರಿ ಒಟ್ಟು 107 ಪದಕಗಳನ್ನ ಬಾಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಭಾರತದ ಕ್ರೀಡಾಪಟುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ, ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆಯೊಂದಿಗೆ ವಿದಾಯ ಹೇಳಿದೆ. ನಮ್ಮ ಅಸಾಧಾರಣ ಕ್ರೀಡಾಪಟುಗಳು 107 ಪದಕಗಳನ್ನು ತಂದುಕೊಟ್ಟಿದ್ದಾರೆ. ಕಳೆದ 60 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ್ದು, ಇಡೀ ರಾಷ್ಟ್ರವೇ ಹರ್ಷಗೊಂಡಿದೆ. ನಮ್ಮ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಕಠಿಣ ಪರಿಶ್ರಮ ದೇಶಕ್ಕೆ ಹೆಮ್ಮೆ ತಂದಿದೆ. ಅವರ ವಿಜಯ ಮಾಲೆ ನೆನಪಿಡುವ ಕ್ಷಣಗಳನ್ನ ಕಲ್ಪಿಸಿದೆ ಎಂದು ಶ್ಲಾಘಿಸಿದ್ದಾರೆ.

    ಏಷ್ಯನ್‌ ಗೇಮ್ಸ್‌ನಲ್ಲಿ ಒಟ್ಟು 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳೊಂದಿಗೆ 107 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಹೆಚ್ಚಿನ ಪದಕ ಪಡೆದ 4ನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

    ಇನ್ನೂ 383 ಪದಕ ಪಡೆದ ಚೀನಾ (201 ಚಿನ್ನ, 111 ಬೆಳ್ಳಿ, 71 ಕಂಚು) ಮೊದಲ ಸ್ಥಾನ, 188 ಪದಕ ಪಡೆದ (52 ಚಿನ್ನ, 67 ಬೆಳ್ಳಿ, 69 ಕಂಚು) ಜಪಾನ್‌ 2ನೇ ಸ್ಥಾನದಲ್ಲಿದ್ದರೆ, 190 ಪದಕ ಪಡೆದ (42 ಚಿನ್ನ, 38 ಬೆಳ್ಳಿ, 41 ಕಂಚು) ಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ

    Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ

    ಹ್ಯಾಂಗ್‌ಝೌ: ಈ ಹಿಂದೆ ಇಂಡೋನೇಷ್ಯಾ ಮತ್ತು ಕೊರಿಯಾ ಓಪನ್ಸ್‌ ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದಿದ್ದ ಭಾರತದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಏಷ್ಯನ್ ಗೇಮ್ಸ್‌ನ (Asian Games) ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ (Badminton) ಸ್ಪರ್ಧೆಯಲ್ಲೂ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.

    ಶನಿವಾರ ಭಾರತದ ಜೋಡಿ ದಕ್ಷಿಣ ಕೊರಿಯಾದ ಚೋಯ್ ಸೊಲ್ಗು ಮತ್ತು ಕಿಮ್ ವೊನ್ಹೋ ಅವರನ್ನು 21-18, 21-16 ಅಂತರದ ನೇರ ಗೇಮ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದೆ. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್ ವಿರುದ್ಧ 21-17, 21-12 ಅಂತರದಲ್ಲಿ ಈ ಜೋಡಿ ಜಯ ಸಾಧಿಸಿತ್ತು. ಇದನ್ನೂ ಓದಿ: World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    ಈಗಾಗಲೇ ಒಟ್ಟು 382 ಪದಕಗಳನ್ನು (200 ಚಿನ್ನ, 111 ಬೆಳ್ಳಿ, 71 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 186 ಪದಕಗಳನ್ನು (51 ಚಿನ್ನ, 66 ಬೆಳ್ಳಿ, 69 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ 190 ಪದಕಗಳನ್ನ (42 ಚಿನ್ನ, 59 ಬೆಳ್ಳಿ, 89 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಆದ್ರೆ ಈವರೆಗೆ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚು ಸೇರಿದಂತೆ ಒಟ್ಟು 107 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಹ್ಯಾಂಗ್‌ಝೋ: ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದ ಏಷ್ಯನ್‌ ಗೇಮ್ಸ್‌ (Asian Games 2023) ಕಬಡ್ಡಿ ಫೈನಲ್‌ನಲ್ಲಿ (Kabaddi Final) ಇರಾನ್‌ (Iran) ತಂಡವನ್ನು29 -33 ಅಂಕಗಳಿಂದ ಸೋಲಿಸಿ ಭಾರತ ಚಿನ್ನದ ಪದಕವನ್ನು (Gold Medal) ಗೆದ್ದುಕೊಂಡಿದೆ.

    ಈ ಮೂಲಕ ಈ ಕ್ರೀಡಾಕೂಟದ ಮಹಿಳೆಯರ ಮತ್ತು ಪುರುಷರ ಎರಡೂ ಕಬಡ್ಡಿಯಲ್ಲಿ ಭಾರತ (India) ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    https://twitter.com/TheCrickFun/status/1710574840963600783

    ಆಗಿದ್ದೇನು?
    ಎರಡು ತಂಡಗಳು 28 ಅಂಕಗಳಿಸಿದ್ದಾಗ ಭಾರತದ ಪವನ್‌ ಶೆರಾವತ್‌ (Pawan Sehrawat) ರೈಡ್ ಮಾಡುತ್ತಿದ್ದರು. ಡು-ಆರ್‌-ಡೈ ರೈಡ್‌ ವೇಳೆ ಇರಾನ್‌ ಆಟಗಾರನ್ನು ಟಚ್‌ ಮಾಡಲು ಪ್ರಯತ್ನಿಸಿ ವಿಫಲರಾಗಿ ಲಾಬಿ ಗೆರೆಯನ್ನು ಟಚ್‌ ಮಾಡಿದರು. ಈ ವೇಳೆ ಇರಾನಿನ 4 ಆಟಗಾರರು ಲಾಬಿಯಲ್ಲಿ ಪವನ್‌ ಅವರನ್ನು ಹಿಡಿದರು.

    ಪವನ್‌ ಔಟಾದ ಬೆನ್ನಲ್ಲೇ ಇರಾನ್‌ ತಂಡಕ್ಕೆ 1 ಅಂಕವನ್ನು ನೀಡಲಾಯಿತು. ಈ ತೀರ್ಪು ಬಂದ ಕೂಡಲೇ ಭಾರತದ ತಂಡ ಆಟಗಾರರು, ಕೋಚ್‌ ಅಂಪೈರ್‌ ಜೊತೆ ಅಂಕ ನೀಡುವುಂತೆ ಚರ್ಚೆ ನಡೆಸಿದರು.

    ನಂತರ ರಿವ್ಯೂ ನೋಡಿದಾಗ ಪವನ್‌ ಇರಾನ್‌ ಆಟಗಾರರನ್ನು ಟಚ್‌ ಮಾಡದೇ ಇರುವ ವಿಷಯ ದೃಢಪಟ್ಟಿತ್ತು. ರಿವ್ಯೂ ನಂತರ ಭಾರತ ತಂಡಕ್ಕೆ 4 ಅಂಕಗಳನ್ನು ನೀಡಲಾಯಿತು. ಭಾರತಕ್ಕೆ 4 ಅಂಕ ನೀಡಿದ್ದಕ್ಕೆ ಇರಾನ್‌ ತಂಡ ಭಾರೀ ವಿರೋಧ ವ್ಯಕ್ತಪಡಿಸಿತು. ಎರಡು ತಂಡಗಳು ಅಂಕದ ವಿಷಯದ ಬಗ್ಗೆ ವಾದ ಮುಂದುವರಿಸುತ್ತಿದ್ದಂತೆ ಪಂದ್ಯವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

    ನಿಮಯ ಏನು ಹೇಳುತ್ತೆ?
    ರೈಡರ್‌ ಎದುರಾಳಿ ಆಟಗಾರನನ್ನು ಟಚ್‌ ಮಾಡದೇ ಲಾಬಿಯನ್ನು ಟಚ್‌ ಮಾಡಿದಾಗ ಎದುರಾಳಿ ಆಟಗಾರರು ರೈಡರ್‌ ಅನ್ನು ಹಿಡಿದರೆ ಆಗ ಆ ಎಲ್ಲಾ ಡಿಫೆಂಡರ್‌ಗಳು ಔಟ್‌ ಎಂದು ಅಂತಾರಾಷ್ಟ್ರೀಯ ಕಬಡ್ಡಿಯ ನಿಯಮ ಹೇಳುತ್ತದೆ. ಆದರೆ ಭಾರತದಲ್ಲಿ ನಡೆಯುವ ಪ್ರೊ ಕಬಡ್ಡಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಯಿಸಲಾಗಿದ್ದು, ಸಂದರ್ಭದಲ್ಲಿ ರೈಡರ್‌ ಮಾತ್ರ ಔಟ್‌ ಎಂದು ಘೋಷಿಸಲಾಗುತ್ತದೆ.

    ಅಂತಾರಾಷ್ಟ್ರೀಯ ಕಬಡ್ಡಿ ನಿಯಮದ ಪ್ರಕಾರ 4 ಮಂದಿಯೂ ಔಟ್‌ ಎಂದು ಭಾರತ ವಾದಿಸಿತ್ತು. ಕೊನೆಗೆ ಯಾವ ತಂಡಕ್ಕೆ ಅಂಕ ನೀಡಬೇಕೆಂದು ಎಂದು ನಿರ್ಧಾರ ತೆಗೆದುಕೊಳ್ಳಲು ಸುಮಾರು ಒಂದು ಗಂಟೆ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ ವಿಡಿಯೋ ರಿಪ್ಲೈ ನೋಡಿ ರೆಫ್ರಿಗಳು ಚರ್ಚೆ ಮಾಡಿ ಭಾರತಕ್ಕೆ 4 ಅಂಕ ನೀಡಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ 2023ರ ಕ್ರಿಕೆಟ್‌ ಟೂರ್ನಿಯಲ್ಲಿ (Asian Games Cricket) ಭಾರತ ಚೊಚ್ಚಲ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

    ಶನಿವಾರ ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಆದ್ರೆ ಟೀಂ ಇಂಡಿಯಾ (Team India) ಉತ್ತಮ ರನ್‌ರೇಟ್‌ ಹೊಂದಿದ್ದರಿಂದ ಚಿನ್ನದ ಪದಕ ಗೆದ್ದುಕೊಂಡಿತು.

    2010 ಮತ್ತು 2014ರ ಏಷ್ಯನ್ ಗೇಮ್ಸ್‌ ಟೂರ್ನಿಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿತ್ತು. 2010ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಬಾಂಗ್ಲಾದೇಶ, 2014ರ ಆವೃತ್ತಿಯಲ್ಲಿ ಶ್ರೀಲಂಕಾ (Sri Lanka) ಪುರುಷರ ತಂಡ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ ಪ್ರವೇಶಿಸಿದ ಟೀಂ ಇಂಡಿಯಾ ಚೊಚ್ಚಲ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ. ಅಫ್ಘಾನಿಸ್ತಾನ ಸತತ‌ 3ನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇದಕ್ಕೂ ಮೊದಲು ಹ್ಯಾಂಗ್‌ಝೌನಲ್ಲಿ ನಡೆದ ಟಿ20 ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಬಾಚಿಕೊಂಡಿತು.

    ಪಿಂಗ್‌ಫೆಂಗ್ ಕ್ಯಾಂಪಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ನೀಡಿತ್ತು. ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ಎದುರಿಸುವಲ್ಲಿ ವಿಫಲವಾದ ಅಫ್ಘಾನಿಸ್ತಾನ ತಂಡ 4ನೇ ಓವರ್‌ನಲ್ಲೇ 12 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದು ಟೀಂ ಇಂಡಿಯಾಕ್ಕೆ ವರದಾನವಾಯಿತು. ಇದನ್ನೂ ಓದಿ: 20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

    ಅಂತಿಮವಾಗಿ ಅಫ್ಘಾನಿಸ್ತಾನ 18.2 ಓವರ್‌ಗಲ್ಲಿ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿ ಆಡುತ್ತಿದ್ದಾಗಲೇ ಮಳೆ ಕಾಟ ಶುರುವಾಯಿತು. ಮಳೆ ಬಿಡುವು ನೀಡದ ಕಾರಣ ಹಿಂದಿನ ಪಂದ್ಯಗಳ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಭಾರತ ತಂಡವನ್ನು ವಿನ್ನರ್‌ ಎಂದು ಘೋಷಿಸಲಾಯಿತು. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

    ಅಫ್ಘಾನ್‌ ಪರ ಶಾಹಿದುಲ್ಲಾ 49 ರನ್‌ (43 ಎಸೆತ, 2 ಸಿಕ್ಸರ್‌, 3 ಬೌಂಡರಿ), ನಾಯಕ ಗುಲ್ಬದಿನ್ ನೈಬ್ 27 ರನ್‌ ಹಾಗೂ ಅಫ್ಸರ್‌ ಝಾಝಿ 15 ರನ್‌ಗಳ ಕೊಡುಗೆ ನೀಡಿದರೆ, ಉಳಿದವರು ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತುತ್ತಾದರು. ಭಾರತದ ಪರ ಅರ್ಷ್‌ದೀಪ್‌ ಸಿಂಗ್‌, ಶಿವಂ ದುಬೆ, ಶಹಬಾಜ್ ಅಹಮದ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಷ್ಯನ್‌ ಗೇಮ್ಸ್‌; 100 ಪದಕ ಗೆದ್ದು ಇತಿಹಾಸ ಬರೆದ ಭಾರತ

    ಏಷ್ಯನ್‌ ಗೇಮ್ಸ್‌; 100 ಪದಕ ಗೆದ್ದು ಇತಿಹಾಸ ಬರೆದ ಭಾರತ

    ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2023ರಲ್ಲಿ (Asian Games) ಭಾರತ ಇತಿಹಾಸ ಸೃಷ್ಟಿಸಿದೆ. ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಸೆಂಚುರಿ ಬಾರಿಸಿದೆ. ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳನ್ನು (100 Medal Mark) ಜಯಿಸಿದ್ದಾರೆ.

    ಭಾರತದ (India) ಕ್ರೀಡಾ ಪ್ರಾಧಿಕಾರವು ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ತನ್ನ 100 ಪದಕವನ್ನು ಪಡೆಯುತ್ತಿದ್ದಂತೆ ಇತಿಹಾಸವನ್ನು ನಿರ್ಮಿಸಲಾಗಿದೆ. ಟೀಮ್‌ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಕನಸುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್‌ ಗೇಮ್ಸ್‌ನಲ್ಲಿ ಸಿಕ್ಕಿವೆ. ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು. ಇದನ್ನೂ ಓದಿ: Asian Games 2023: ಅರ್ಚರಿಯಲ್ಲಿ ಚಿನ್ನ ಗೆದ್ದ ಭಾರತ

    ಭಾರತ ತಂಡವು ಈ ಬಾರಿ ಅನೇಕ ಅಚ್ಚರಿಯ ಪದಕಗಳನ್ನು ಗೆದ್ದಿದೆ. ಮಹಿಳಾ ಟೇಬಲ್ ಟೆನಿಸ್‌ನಲ್ಲಿ ಸುತೀರ್ಥ ಮುಖರ್ಜಿ ಮತ್ತು ಅಯ್ಹಿಕಾ ಮುಖರ್ಜಿ ಕಂಚಿನ ಪದಕ ಗೆದ್ದರು. ಸೆಮಿಫೈನಲ್‌ನಲ್ಲಿ ಬಲಿಷ್ಠ ಚೀನಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ್ದು ವಿಶೇಷವಾಗಿತ್ತು.

    ಜಾವೆಲಿನ್ ಎಸೆತದಲ್ಲಿ ಕಿಶೋರ್ ಕುಮಾರ್ ಜೆನಾ ಅವರ ಬೆರಗುಗೊಳಿಸುವ 86.77 ಮೀಟರ್ ಎಸೆತವು ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಗಮನ ಸೆಳೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಹ್ಯಾಂಗ್‌ಝೌ: ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ (Asian Games 2023) ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದು ಸಾಧನೆ ಮಾಡಿದೆ. ಫೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ (Olympics 2024) ಅರ್ಹತೆ ಪಡೆದುಕೊಂಡಿದೆ.

    ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, 2 ಗೋಲು ದಾಖಲಿಸಿ ಮಿಂಚಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಹೊಳಪು ತಂದ ಹಾಕಿ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಅಲ್ಲದೇ ಇದು ಭಾರತಕ್ಕೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ದಕ್ಕಿದ 22ನೇ ಪದಕವಾಗಿದೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಈಗಾಗಲೇ ಒಟ್ಟು 354 ಪದಕಗಳನ್ನು (187 ಚಿನ್ನ, 104 ಬೆಳ್ಳಿ, 63 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 169 ಪದಕಗಳನ್ನು (47 ಚಿನ್ನ, 57 ಬೆಳ್ಳಿ, 65 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್‌ ಕೊರಿಯಾ 169 ಪದಕಗಳನ್ನ (36 ಚಿನ್ನ, 49 ಬೆಳ್ಳಿ, 84 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಆದ್ರೆ ಈವರೆಗೆ 22 ಚಿನ್ನ, 34 ಬೆಳ್ಳಿ ಹಾಗೂ 39 ಕಂಚು ಸೇರಿದಂತೆ ಒಟ್ಟು 95 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಅಲ್ಲದೇ ಈಗಾಗಲೇ ಕ್ರಿಕೆಟ್‌ನಲ್ಲಿ ಫೈನಲ್‌ ತಲುಪಿರುವ ಭಾರತಕ್ಕೆ ಮತ್ತೊಂದು ಚಿನ್ನ ಲಭಿಸುವ ವಿಶ್ವಾಸ ಹೊಂದಿದೆ. ಹಾಗಾಗಿ ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 100 ಪದಕಗಳನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games: ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ – ಫೈನಲಿಗೆ ಭಾರತ

    Asian Games: ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ – ಫೈನಲಿಗೆ ಭಾರತ

    ಹ್ಯಾಂಗ್‌ಝೋ: ಏಷ್ಯನ್‌ ಕ್ರೀಡಾಕೂಟದ ಕ್ರಿಕೆಟ್‌ (Asian Games Cricket) ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ (Team India) ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 9.1 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 97 ರನ್‌ ಗಳಿಸಿತು.

    ನೇಪಾಳ ವಿರುದ್ಧ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ ಈ ಬಾರಿ ಮೊದಲ ಓವರ್‌ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಮುರಿಯದ ಎರಡನೇ ವಿಕೆಟಿಗೆ ನಾಯಕ ಋತುರಾಜ್‌ ಗಾಯಕ್‌ವಾಡ್‌ (Ruturaj Gaikwad) ಮತ್ತು ತಿಲಕ್‌ ವರ್ಮಾ (Tilak Varma) 52 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡಿ ಜಯ ತಂದುಕೊಟ್ಟರು.

    ಗಾಯಕ್‌ವಾಡ್‌ 40 ರನ್‌ (26 ಎಸೆತ, 4 ಬೌಂಡರಿ, 3 ಸಿಕ್ಸರ್‌), ತಿಲಕ್‌ ವರ್ಮಾ 55 ರನ್‌(26 ಎಸೆತ, 2 ಬೌಂಡರಿ, 6 ಸಿಕ್ಸರ್‌) ಹೊಡೆದರು.  ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಬಾಂಗ್ಲಾ ಪರ ಪರ್ವೇಜ್ ಹೊಸೈನ್ ಎಮಾನ್ 23 ರನ್‌, ಜೇಕರ್ ಅಲಿ ಔಟಾಗದೇ 24 ರನ್‌ ಹೊಡೆದರು.‌ ಭಾರತದ ಪರ ಸಾಯಿ ಕಿಶೋರ್ 3 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಕಿತ್ತರೆ, ಅರ್ಶ್‌ದೀಪ್‌ ಸಿಂಗ್‌ ತಿಲಕ್‌ ವರ್ಮಾ , ರವಿ ಬಿಶ್ಣೋಯಿ, ಶಹಬಾಜ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಧ್ಯೆ ಇಂದು ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಭಾನುವಾರ ಫೈನಲ್‌ ನಡೆಯಲಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಅರ್ಚರಿಯಲ್ಲಿ ಚಿನ್ನ ಗೆದ್ದ ಭಾರತ

    Asian Games 2023: ಅರ್ಚರಿಯಲ್ಲಿ ಚಿನ್ನ ಗೆದ್ದ ಭಾರತ

    ಬೀಜಿಂಗ್: ಏಷ್ಯನ್‌ ಗೇಮ್ಸ್‌ನ  (Asian Games 2023) ಅರ್ಚರಿ ಕಾಂಪೌಂಡ್‌ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್‌ ತೈಪೆಯನ್ನು ಮಣಿಸಿ ಭಾರತ ಚಿನ್ನದ ಪದಕ ಜಯಸಿದೆ.

    ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರು ಏಷ್ಯನ್ ಗೇಮ್ಸ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮವಾಗಿ 230-229 ಅಂತರದಲ್ಲಿ ಚೈನೀಸ ತೈಪೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಒಂದು ಪಾಯಿಂಟ್‌ನಿಂದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಯಿ-ಹ್ಸುವಾನ್ ಚೆನ್, ಐ-ಜೌ ಹುವಾಂಗ್ ಮತ್ತು ಲು-ಯುನ್ ವಾಂಗ್ ಅವರನ್ನು ಸೋಲಿಸಿದರು. ಇದನ್ನೂ ಓದಿ: ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ

    ಬುಧವಾರ ನಡೆದ ಕಾಂಪೌಂಡ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿಯೂ ಭಾರತ ಚಿನ್ನ ಗೆದ್ದಿತ್ತು. ಗುರುವಾರದ ಗೆಲುವಿನಿಂದ ಭಾರತಕ್ಕೆ ಅರ್ಚರಿಯಲ್ಲಿ (Archery) ಎರಡನೇ ಚಿನ್ನದ ಪದಕ ಬಂದಿದೆ.

    ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 83 ಪದಕಗಳು ಬಂದಿವೆ. 20 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಗಳನ್ನು ಭಾರತ ಗೆದ್ದಿದೆ. ಆ ಮೂಲಕ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದ ಪದಕ ಬೇಟೆ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ‌ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023- ಗ್ರೀಕೊ ರೋಮನ್ ಕುಸ್ತಿಯಲ್ಲಿ ಭಾರತಕ್ಕೆ 13 ವರ್ಷಗಳ ಬಳಿಕ ಪದಕ

    Asian Games 2023- ಗ್ರೀಕೊ ರೋಮನ್ ಕುಸ್ತಿಯಲ್ಲಿ ಭಾರತಕ್ಕೆ 13 ವರ್ಷಗಳ ಬಳಿಕ ಪದಕ

    ಹಾಂಗ್ ಝೌ: ಏಷ್ಯನ್ ಗೇಮ್ಸ್ 2023ರ (Asian Games 2023) ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ 87 ಕೆ.ಜಿ ಗ್ರೀಕೊ ರೋಮನ್ ಕುಸ್ತಿಯಲ್ಲಿ (Roman Medal) ಭಾರತದ (India) ಕುಮಾರ್ ಕಂಚಿನ ಪದಕ ಪಡೆದಿದ್ದಾರೆ. ಈ ಮೂಲಕ ಈ ಸ್ಪರ್ಧೆಯಲ್ಲಿ 13 ವರ್ಷಗಳ ನಂತರ ಪದಕ ಗೆದ್ದಂತಾಗಿದೆ.

    ಸುನಿಲ್ ಅವರು ಕಿರ್ಗಿಸ್ತಾನದ ಅಟಾಬೆಕ್ ಅಜಿಸ್ಟೆಕೋವ್ ವಿರುದ್ಧ ಗೆಲುವು ಸಾಧಿಸಿದರು. ಈ ಹಿಂದೆ 2010ರ ಏಷ್ಯನ್ ಗೇಮ್ಸ್‍ನಲ್ಲಿ ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ರವಿಂದರ್ ಸಿಂಗ್ (60 ಕೆ.ಜಿ) ಮತ್ತು ಸುನಿಲ್ ಕುಮಾರ್ ರಾಣಾ (66 ಕೆ.ಜಿ) ಕಂಚಿನ ಪದಕ ಜಯಿಸಿದ್ದರು. ಇದನ್ನೂ ಓದಿ: Asian Games 2023 – ಜಾವೆಲಿನ್‍ನಲ್ಲಿ ನೀರಜ್‍ಗೆ ಚಿನ್ನ, ಜೇನಾಗೆ ಬೆಳ್ಳಿ

    ಪುರುಷರ 5000 ಮೀಟರ್ ಓಟದಲ್ಲಿ ಅವಿನಾಶ್ ಸಾಬ್ಳೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 800 ಮೀಟರ್ ಮಹಿಳೆಯರ ಓಟದಲ್ಲಿ ಹರ್ಮಿಲನ್ ಬೆನ್ಸ್ ಬೆಳ್ಳಿ ಪದಕ ಜಯಿಸಿದ್ದಾರೆ.

    ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಇಂದು (ಬುಧವಾರ) ಮೂರು ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತವು 81 ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಉನ್ನತ ಸಾಧನೆಯಾಗಿದೆ. ಇದನ್ನೂ ಓದಿ: Asian Games 2023 – ಒಟ್ಟು 71 ಪದಕ ಗೆದ್ದು ದಾಖಲೆ ಬರೆದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]