Tag: ಏರ್ ಸರ್ಜಿಕಲ್ ಸ್ಟ್ರೈಕ್

  • ಕಾಂಗ್ರೆಸ್‍ನಿಂದ ಮೋದಿ ಏರ್ ಸರ್ಜಿಕಲ್ ಸ್ಟ್ರೈಕ್ ಹೇಳಿಕೆ ಟ್ರೋಲ್-ವಿಡಿಯೋ ನೋಡಿ

    ಕಾಂಗ್ರೆಸ್‍ನಿಂದ ಮೋದಿ ಏರ್ ಸರ್ಜಿಕಲ್ ಸ್ಟ್ರೈಕ್ ಹೇಳಿಕೆ ಟ್ರೋಲ್-ವಿಡಿಯೋ ನೋಡಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಏರ್ ಸರ್ಜಿಕಲ್ ಸ್ಟ್ರೈಕ್ ಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಇದೇ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಕಾಲೆಳೆದಿದೆ.

    ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬಳಿಕ ನಡೆದಿದ್ದ ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಧಾನಿ ಮೋದಿ ಆಡಿರುವ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನ್ಯೂಸ್ ನೇಷನ್ ಹೆಸರಿನ ಹಿಂದಿ ನ್ಯೂಸ್ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಮೋದಿ ಸರ್ಜಿಕಲ್ ದಾಳಿ ಬಗ್ಗೆ ಮಾತಾಡಿದ್ದರು.

    ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
    ದಾಳಿಯ ಮುನ್ನ ರಾತ್ರಿ 9 ಗಂಟೆಗೆ ರಿವ್ಯೂವ್ ಮಾಡಿದೆ. ಮತ್ತೊಮ್ಮೆ ರಾತ್ರಿ 12 ಗಂಟೆಗೆ ದಾಳಿಯ ಪ್ಲಾನ್ ನೋಡಿದೆ. ಅಂದು ರಾತ್ರಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮ ರೇಡಾರ್ ಕೆಟ್ಟಿತ್ತು. ದಾಳಿಗೆ ವಾತಾವರಣ ಸಹಕರಿಸುತ್ತಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆ ನೀಡಿದರು. ದಾಳಿಯ ರಹಸ್ಯವನ್ನು ಎಲ್ಲಿಯೂ ಲೀಕ್ ಆಗಿರಲಿಲ್ಲ. ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಲೀಕ್ ಆದ್ರೆ ಹೇಗೆ ಎಂಬ ಸಂಶಯ ಕಾಡಿತ್ತು. ಮೋಡಗಳಿಂದ ನಮ್ಮ ರಡಾರ್ ಕೆಲಸ ಮಾಡುತ್ತಿಲ್ಲ. ಹಾಗೆ ಶತ್ರುಗಳ ರಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ನಾವು ರಡಾರ್ ನಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಎಲ್ಲ ಅಧಿಕಾರಿಗಳು ಗೊಂದಲದಲ್ಲಿದ್ದಾಗ ಹೋಗಿ ದಾಳಿ ನಡೆಸಿ ಎಂದು ಅದೇಶಿಸಿದೆ ಎಂದರು.

    ದಟ್ಟ ಮೋಡದಲ್ಲೂ ರಡಾರ್‍ಗಳು ವಿಮಾನಗಳನ್ನು ಪತ್ತೆ ಹಚ್ಚುವ ಸಾಮಥ್ರ್ಯವನ್ನು ಹೊಂದಿರುತ್ತವೆ. ಮೋದಿಗಿಂತ ಭಾರತೀಯ ವಾಯುಸೇನೆಯ ಅಧಿಕಾರಿಗಳು ದಡ್ಡರೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ, 2014ರಿಂದಲೂ ಸುಳ್ಳು, ಮೂರ್ಖತನ ಮತ್ತು ಭ್ರಷ್ಟಾಚಾರದ ಹೊಸ ರಡಾರ್ ಹೊಂದಿದ್ದೇವೆ ಎಂದು ವ್ಯಂಗ್ಯ ಮಾಡಿದ್ರೆ, ಕಾಂಗ್ರೆಸ್ ತನ್ನ ಟ್ವಿಟರ್ ನಲ್ಲಿ ಐದು ವರ್ಷದ ಆಡಳಿತದಲ್ಲಿ ಸುಳ್ಳು ಹೇಳುತ್ತಾ ಬಂದಿದ್ದೀರಿ ಎಂದು ಬರೆದುಕೊಂಡಿದೆ.

  • ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

    ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

    ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

    ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

  • ಕರ್ನಾಟಕದಲ್ಲಿರುವುದು ನಾಟಕ ಸರ್ಕಾರ, ಸುದ್ದಿಗೋಷ್ಠಿ ಸಮಾವೇಶದಲ್ಲೂ ಕಣ್ಣೀರು – ಮೋದಿ

    ಕರ್ನಾಟಕದಲ್ಲಿರುವುದು ನಾಟಕ ಸರ್ಕಾರ, ಸುದ್ದಿಗೋಷ್ಠಿ ಸಮಾವೇಶದಲ್ಲೂ ಕಣ್ಣೀರು – ಮೋದಿ

    – ದುರ್ಬಲ ಸಿಎಂ ಕಣ್ಣೀರು ಹಾಕ್ತಾರೆ
    – ಬಲಿಷ್ಠ ಸರ್ಕಾರ ನೋಡಲು ದೆಹಲಿಗೆ ಬನ್ನಿ
    – ಕಾಂಗ್ರೆಸ್‍ಗೆ ಅಭದ್ರ ಸರ್ಕಾರ, ದುರ್ಬಲ ಸಿಎಂ ಬೇಕು

    ಬಾಗಲಕೋಟೆ: ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಸರ್ಕಾರವನ್ನು ನೀವೆಲ್ಲರೂ ನೋಡಿದ್ದೀರಿ. ಸುಭದ್ರ ಸರ್ಕಾರ ನೋಡಲು ದೆಹಲಿ ನೋಡಿ, ಅಭದ್ರ ಸರ್ಕಾರ ನೋಡಲು ಬೆಂಗಳೂರು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸರ್ಕಾರ ಪ್ರತಿ ಸುದ್ದಿಗೋಷ್ಠಿ, ಸಮಾವೇಶದಲ್ಲಿ ಕಣ್ಣೀರು ಹರಿಸುತ್ತಿದೆ. ಕರ್ನಾಟಕದ ನಾಟಕದಲ್ಲಿ ಎಮೋಷನ್, ಒಳಗೊಳಗೆ ಒಬ್ಬರ ಮೇಲೋಬ್ಬರು ದ್ವೇಷ ಕಾರುತ್ತಿದ್ದಾರೆ. ಕಾಂಗ್ರೆಸ್‍ಗೆ ಇಂತಹ ಅಭದ್ರ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ. ಕರ್ನಾಟಕದ ದುರ್ಬಲ ಮುಖ್ಯಮಂತ್ರಿ ಕಣ್ಣೀರು ಹಾಕೋದನ್ನು ನಿಲ್ಲಿಸುತ್ತಿಲ್ಲ ಎಂದು ಕಿಡಿಕಾರಿದರು.

    ಮೈತ್ರಿ ಸರ್ಕಾರ ಬಹುದಿನಗಳ ಕಾಲ ಉಳಿಯಲ್ಲ ಎಂಬುವುದು ಬಹುತೇಕ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಐದು ವರ್ಷದಲ್ಲಿ ಬಾಚಿಕೊಳ್ಳಲು ಪ್ಲಾನ್ ಮಾಡಿದ್ದ ಹಣವನ್ನು ಈಗಲೇ ದೋಚಿಕೊಳ್ಳುತ್ತಿದ್ದಾರೆ. ಇಂತಹುದೇ ದುರ್ಬಲ, ಅಭದ್ರತೆಯ ಸರ್ಕಾರ ಕೇಂದ್ರದಲ್ಲಿತ್ತು. 5 ವರ್ಷದ ಹಿಂದೆ ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದರು. ಆ ಸರ್ಕಾರ ಕೇವಲ ಹಗರಣದಿಂದ ಕೂಡಿತ್ತು. ಇದರಿಂದ ಬೇಸತ್ತ ದೇಶದ ಜನತೆ 2014ರಲ್ಲಿ ದೆಹಲಿಯಲ್ಲಿ ಚೌಕಿದಾರನ ಭದ್ರ ಸರ್ಕಾರವನ್ನು ನೇಮಕ ಮಾಡಿದರು ಎಂದರು.

    2009ರಲ್ಲಿ ಮುಂಬೈ ಉಗ್ರರ ದಾಳಿ ಬಳಿಕ ಚುನಾವಣೆ ನಡೆದಿತ್ತು. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ದಾಳಿಯಲ್ಲಿ ಪಾಕಿಸ್ತಾನದ ಭಾಗಿಯಾಗಿದ್ದಾರೆ ಎಂದು ಪಾಕ್ ಒಪ್ಪುವಂತೆ ಮಾಡಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿತ್ತು. ಇದನ್ನು ದೊಡ್ಡ ಸಾಧನೆ ಎಂಬಂತೆ ಕಾಂಗ್ರೆಸ್ ಹೇಳಿಕೊಂಡಿತ್ತು. ಇಂದು ನಮ್ಮ ಸರ್ಕಾರ ಅವರ ಮನೆಯೊಳಗೆ ನುಗ್ಗಿ ಶತ್ರುಗಳನ್ನು ಹೊಡೆದುರುಳಿಸಿ ಬಂದಿದೆ. ಇದರ ಪರಿಣಾಮ ಪಾಕಿಸ್ತಾನ ವಿಶ್ವದಲ್ಲಿಯೇ ಕಣ್ಣೀರು ಹಾಕುತ್ತಿದೆ. ಹೋದ ಕಡೆಯಲ್ಲ ಮೋದಿ ನಮ್ಮ ಮೇಲೆ ದಾಳಿ ಮಾಡುತ್ತಾನೆ, ನಮ್ಮನ್ನ ರಕ್ಷಿಸಿ ಎಂದು ಸಹಾಯ ಕೇಳುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಮ್ಮ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

    https://twitter.com/BJP4Karnataka/status/1118818594643693568

    ಪಾಕಿಸ್ತಾನ ವೈರಿಗಳ ಸತ್ತರೆ, ನಮ್ಮವರು ಅಳಲು ಆರಂಭಿಸಿದರು. ಗೂಗಲ್ ಮುಂದೆ ಕುಳಿತು ಬಾಲಕೋಟ್ ಭಾರತದಲ್ಲಿದೆ ಎಂದು ಹೇಳಿದರು. ಅವರಿಗೆ ಬಾಲಕೋಟ್ ಮತ್ತು ಬಾಗಲಕೋಟೆಯ ವ್ಯತ್ಯಾಸವು ಗೊತ್ತಾಗಲಿಲ್ಲ. ಇಂದಿಗೂ ಕಾಂಗ್ರೆಸ್ ಹಾಗೂ ಘಟಬಂಧನ್ ಪಕ್ಷಗಳು ಸರ್ಜಿಕಲ್ ಮತ್ತು ವೈಮಾನಿಕ ದಾಳಿಯನ್ನು ಒಪ್ಪಿಕೊಂಡಿಲ್ಲ. ಒಡೆದು ಆಳುವ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಮತಗಳಿಗಾಗಿ ಒಂದೇ ತಾಯಿಯ ಮಕ್ಕಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕಾಂಗ್ರೆಸ್ ಮುಂದಾಗಿತ್ತು. ಇಂದು ಲಿಂಗಾಯತ ವಿಚಾರದಲ್ಲಿ ಕಾಂಗ್ರೆಸ್ ಸಚಿವರೇ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ಬಸವಣ್ಣನನ್ನು ನೀಡಿದ ಜನ್ಮಭೂಮಿಯಲ್ಲಿದ್ದೇನೆ. ಬಸವಣ್ಣ ತಿಳಿಸಿದ ಮಾರ್ಗದಲ್ಲಿ ನಿಮ್ಮ ಸೇವಕ ಕೆಲಸ ಮಾಡುತ್ತಿದ್ದಾನೆ. ದೇಶ ಇಂದು ಏನೇ ಆಭಿವೃದ್ಧಿ ಕಂಡಿದ್ದರೂ ಎಲ್ಲದರ ಹಿಂದೆ ಜನತೆಯ ಆಶೀರ್ವಾದವಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ನಮ್ಮ ದೇಶದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಬಡ ಮತ್ತು ಸಾಮಾನ್ಯ ವರ್ಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಡಿ ದಾಟಿ ಶತ್ರುಗಳನ್ನು ನಾಶ ಮಾಡಿದೆ. ಈ ಎಲ್ಲ ಕೆಲಸಗಳು ನಡೆಯಲು ಕೇವಲ ಸ್ಪಷ್ಟ ಪ್ರಾಮಾಣಿಕತೆಯಿಂದ ಸಾಧ್ಯವಾಗಿದೆ ಎಂದರು.

    ಬಾಗಲಕೋಟೆ ಇಳಕಲ್ ಸೀರೆಯ ನೇಕಾರರಿಗೆ ಪಿಂಚಣಿ ಸಿಗುವಂತೆ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಲಿದೆ. ಆಲಮಟ್ಟಿ ಡ್ಯಾಂ ಹೂಳು ತೆಗೆಯಲು ಅನುದಾನ ಮತ್ತು ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಈ ವೇಳೆ ಮೋದಿ ಭರವಸೆ ನೀಡಿದರು.

  • ಏರ್ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಉಗ್ರ ಮಸೂದ್ ಅಜರ್ ಮಟಾಷ್?

    ಏರ್ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಉಗ್ರ ಮಸೂದ್ ಅಜರ್ ಮಟಾಷ್?

    ನವದೆಹಲಿ: ಫೆಬ್ರವರಿ 14ರಂದು ಜೈಷ್-ಎ-ಮೊಹಮ್ಮದ್ ಸಂಘಟನೆ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಭಾರತದ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪ್ರತಿಕಾರವಾಗಿ ಫೆಬ್ರವರಿ 26ರ ಬೆಳಗಿನ ಜಾವ ಭಾರತದ ವಾಯುಪಡೆ ಉಗ್ರರ ಶಿಬಿರಗಳಾದ ಬಾಲಕೋಟ್, ಮುಝಾಫರ್ ಬಾದ್ ಮತ್ತು ಚಿಕೋಟಿಯ ನೆಲೆಗಳನ್ನು ಧ್ವಂಸಗೊಳಿಸಿತ್ತು. ದಾಳಿಗೊಳಗಾದ ಬಾಲಕೋಟ್ ನಲ್ಲಿಯೇ ಮಸೂದ್ ಅಜರ್ ಇದ್ದನು ಎಂದು ಹೇಳಲಾಗುತ್ತಿದೆ.

    ದಾಳಿಯ ಬಳಿಕ ಪಾಕ್ ಸರ್ಕಾರ ಅಲ್ಲಿಯ ಮೃತದೇಹಗಳ ಜೊತೆ ಮಸೂದ್ ನನ್ನು ರಾವಲ್ಫಿಂಡಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರೆಡು ದಿನಗಳಿಂದ ಮಸೂದ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬ ವದಂತಿ ಹಬ್ಬಿತ್ತು. ಪಾಕ್ ಸರ್ಕಾರ ಸತ್ಯ ಮರೆಮಾಡಿ, ಭಾರತದ ನಡೆಸಿದ ದಾಳಿಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭಾರತ ಪರಿಸರ ಭಯೋತ್ಪಾದನೆ ನಡೆಸುತ್ತಿದೆ ಎಂದು ಆರೋಪಿಸಿತ್ತು.

    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಎರಡು ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ, ಒಂದು ವೇಳೆ ಭಾರತ ಖಚಿತ ಸಾಕ್ಷಿಗಳನ್ನು ನೀಡಿದ್ರೆ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

    ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮಸೂದ್ ಅಜರ್ ನನ್ನು ಪಾಕಿಸ್ತಾನ ರಹಸ್ಯವಾಗಿ ಆತನನ್ನು ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

    ಫೆಬ್ರವರಿ 28ರಂದು ಭಾರತದ ಸೇನಾನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಭಾರತದ ವಾಯುಪಡೆ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್ ವಶಕ್ಕೆ ಒಳಪಟ್ಟಿದ್ದರು. ಇದಾದ ಬಳಿಕ ಮಾರ್ಚ್ 1ರಂದು ಪಾಕಿಸ್ತಾನ ಅಭಿನಂದನ್ ಅವರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ನವದೆಹಲಿ: ಬಾಲ್‍ಕೋಟ್ ಜೈಷ್ ಉಗ್ರ ಸಂಘಟನೆಯ ಪ್ರಮುಖ ಕೇಂದ್ರ. ಅಲ್ಲಿ ಉಗ್ರರ ತರಬೇತಿ, ತರಬೇತುದಾರರು, ಶಸ್ತ್ರಾಸ್ತ್ರ ಸಂಗ್ರಹ ಮಾಡಲಾಗಿತ್ತು ಅಂತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದರು. ಅಲ್ಲದೆ ಈ ಕ್ಯಾಂಪನ್ನು ಉಡಾಯಿಸದೇ ಹೋಗಿದ್ದಲ್ಲಿ ಭಾರತದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೀತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ ಐದು ಪ್ರಮುಖ ಕಾರಣಗಳಿವೆ.

    1. ಉಗ್ರರಿಗೆ ಪಾಕಿಸ್ತಾನದ ಯಾವುದೇ ತಾಣ ಸುರಕ್ಷಿತವಲ್ಲ
    ಭಾರತ ಇದೇ ಮೊದಲ ಬಾರಿಗೆ ವೈಮಾನಿಕ ದಾಳಿ ಬಗ್ಗೆ ಹಾಕಿಕೊಂಡಿದ್ದ ತನ್ನ ಮಾನಸಿಕ ಬೇಲಿಯನ್ನು ಮೀರಿ ಹೊರ ಬಂತು. 12 ಎಐಎಫ್ ಫೈಟರ್ ಜೆಟ್‍ಗಳು ಪಾಕ್ ವೈಮಾನಿಕ ಪ್ರದೇಶಕ್ಕೆ ನುಗ್ಗಿ ಬಾಲಕೋಟ್, ಚಕೋಟಿ, ಮುಜಾಫರ್‍ಬಾದ್‍ನಲ್ಲಿ ಉಗ್ರರನ್ನು ಸಂಹರಿಸಿದವು. ಅಷ್ಟೇ ಅಲ್ಲ, ಸುರಕ್ಷಿತವಾಗಿ ವಾಪಸ್ ಬಂದವು. ಈ ಮೂಲಕ ಪಾಕಿಸ್ತಾನದಲ್ಲಿರುವ ಯಾವ ಸ್ಥಳವೂ ಉಗ್ರರಿಗೆ ಸುರಕ್ಷಿತವಲ್ಲ. ಅದು ಇಸ್ಲಾಮಾಬಾದ್ ಇರಬೋದು ಅಥವಾ ರಾವಲ್‍ಪಿಂಡಿ ಇರಬೋದು ಅನ್ನೋ ಕಠಿಣ ಸಂದೇಶ ರವಾನಿಸಿತ್ತು.

    2. ಯಾವ ಬೆದರಿಕೆಗೂ ಬಗ್ಗಲ್ಲವೆಂದು ಪಾಕ್‍ಗೆ ಪಾಠ
    ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಯಾವುದೇ ಕ್ಷಣದಲ್ಲಿಯೂ ಪ್ರತಿಕಾರ ತೀರಿಸಬಹುದು ಎಂದು 2 ದಿನಗಳ ಹಿಂದಷ್ಟೇ ಪಾಕ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ರು. ಆದರೆ, ಪಾಕ್ ಗಡಿ ದಾಟಿ ಬಂದ ಭಾರತೀಯ ಸೇನೆಯನ್ನು ಸುಮ್ಮನೆ ಬಿಡಲ್ಲ. ನಮ್ಮ ಬಳಿಯೂ ಅಣ್ವಸ್ತ್ರ ಇದೆ ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ವಾಯುಸೇನೆ 12 ಜೆಟ್‍ಗಳ ಮೂಲಕ ಅವರ ನೆಲಕ್ಕೆ ನುಗ್ಗಿ ಉಗ್ರಾಘಾತ ಮಾಡಿ ಬಂದಿವೆ. ಈ ಮೂಲಕ ನೀವು ಏನ್ ಬೇಕಾದರೂ ಮಾಡಿ ಯಾವ ಬೆದರಿಕೆಗೂ ಬಗ್ಗಲ್ಲ ಅಂತ ಸೇನೆ ಹೇಳಿ ಬಂದಿದೆ.

    3. ಉಗ್ರರ ಕ್ಯಾಂಪ್‍ಗಳೇ ಟಾರ್ಗೆಟ್
    ಪಾಕಿಸ್ತಾನದ ಜೈಷ್ ಉಗ್ರರು ಅಡಗುವ ಪ್ರದೇಶಗಳು ಜನಸಂದಣಿಯಿಂದ ಕೂಡಿರುತ್ತವೆ. ಲಾಹೋರ್ ಬಳಿಯ ಜೈಶ್ ಹೆಡ್‍ಕ್ವಾಟ್ರಸ್ ಮುಂದಕ್ಕೆ ಅಥವಾ ದಕ್ಷಿಣ ಪಂಜಾಬ್‍ನ ಬಹವಾಲ್‍ಪುರದ ಕೇಂದ್ರಗಳು ಇದಕ್ಕೆ ಉದಾಹರಣೆ. ಕೈಬರ್ ಪಖ್ತುಂಖ್ವಾದ ಉಗ್ರ ತರಬೇತಿ ಕೇಂದ್ರ ದಟ್ಟ ಅರಣ್ಯದಲ್ಲಿದೆ. ಹಾಗಾಗಿ ಇದನ್ನೇ ಉಡೀಸ್ ಮಾಡುವ ಎಂದು ತಳಮಟ್ಟದಲ್ಲಿ ದಾಳಿ ನಡೆಸುವ ಸಾಮಥ್ರ್ಯದೊಂದಿಗೆ 12 ಜೆಟ್‍ಗಳು ಉಗ್ರರ ಕ್ಯಾಂಪ್‍ಗಳನ್ನು ಟಾರ್ಗೆಟ್ ಮಾಡಿದವು. ಹೀಗಾಗಿ ಜನರ ಜೀವಹಾನಿಗೆ ಆಸ್ಪದವೇ ಕೊಡಲಿಲ್ಲ.

    4. ಭಾರತದ ತಾಂತ್ರಿಕ ಶ್ರೇಷ್ಠತೆ ಪ್ರದರ್ಶನ
    ಪಾಕಿಸ್ತಾನದ ಹದ್ದಿನ ಕಣ್ಣನ್ನು ತಪ್ಪಿಸಿ ಒಳನುಗ್ಗಿದ ಭಾರತೀಯ ಸೇನೆಯ ಯಶಸ್ಸಿನ ಜೊತೆಗೆ ನಮ್ಮ ದೇಶದ ಐಎಎಫ್‍ನ ತಾಂತ್ರಿಕ ಶ್ರೇಷ್ಠತೆ ಕೂಡ ಸಾಬೀತಾಗಿದೆ. ಅಮೆರಿಕದಲ್ಲಿ ಸಿದ್ಧಪಡಿಸಲಾದ ಪಾಕಿಸ್ತಾನದ ರಡಾರ್ ರಕ್ಷಣೆಯನ್ನು ಭೇದಿಸಿದ ಮಿರಾಜ್ ಜೆಟ್‍ಗಳು ಕಣ್ಮುಚ್ಚಿ ಕಣ್ತೆರೆಯುವಂತೆ ಮಿಂಚಿನ ಸಂಚಾರದ ದಾಳಿ ಮಾಡಿ ಉಗ್ರರ ಹೆಡೆಮುರಿ ಕಟ್ಟಿದೆ. ಈ ಮೂಲಕ ತನ್ನ ಟೆಕ್ನಿಕಲ್ ಸುಪಿರಿಯಾರಿಟಿಯನ್ನು ಜಗತ್ತಿಗೇ ಪ್ರದರ್ಶಿಸಿದೆ.

    5. ಜಾಗತಿಕ ಮಟ್ಟದಲ್ಲಿ ಭಾರತಕ್ಕಿಲ್ಲ ಆತಂಕ
    ಜಾಗತಿಕ ಮಟ್ಟದಲ್ಲೂ ವಿರೋಧ ಕಟ್ಟಿಕೊಳ್ಳಬಾರದು. ಉಗ್ರರನ್ನು ಸುಮ್ಮನೆ ಬಿಡಬಾರದು ಎಂದು ನಡೆಸಿದ ಏರ್ ಸ್ಟ್ರೈಕ್ ಸಕ್ಸಸ್ ಆಗಿದೆ. ಯಾಕಂದ್ರೆ, ವಿಶ್ವದ ಯಾವ ದೇಶವೂ ಸಹ ಭಾರತದ ದಾಳಿಯ ಬಗ್ಗೆ ಆಕ್ಷೇಪ ಎತ್ತಿಲ್ಲ. ಜೊತೆಗೆ ಭಾರತ ಈ ದಾಳಿಯನ್ನು ಯುದ್ಧ ಎಂದು ಒಪ್ಪಿಕೊಂಡಿಲ್ಲ. ನಾವು ಯಾವುದೇ ಯುದ್ಧ ಸಾರುತ್ತಿಲ್ಲ, ದಾಳಿಯನ್ನಷ್ಟೇ ಮಾಡಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಷ್ಟರ ಮಟ್ಟಿಗೆ ನಮ್ಮ ಯೋಧರು ತಮ್ಮ ಟಾರ್ಗೆಟ್, ಆಪರೇಷನ್ ಅನ್ನು ಫಿನಿಶ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಯು ದಾಳಿಗೆ ಪ್ರತಿಕ್ರಿಯಿಸಿದ ನವಜೋತ್ ಸಿಂಗ್ ಸಿಧು

    ವಾಯು ದಾಳಿಗೆ ಪ್ರತಿಕ್ರಿಯಿಸಿದ ನವಜೋತ್ ಸಿಂಗ್ ಸಿಧು

    ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಾಗ ಪಾಕಿಸ್ತಾನ ಪರ ಬ್ಯಾಟ್ ಬೀಸಿದ್ದ ಪಂಜಾಬ್‍ನ ಕಾಂಗ್ರೆಸ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ತಮ್ಮ ಕವನದ ಮೂಲಕ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಉಗ್ರರರಿಗೆ ಈ ರೀತಿಯ ದಾಳಿಯ ಮೂಲಕವೇ ನೀಡಬೇಕು. ಶಾಂತಿಯಿಂದ ಮಾತನಾಡಿದ್ರೆ ಅವರು ಮತ್ತಷ್ಟು ಚಿಗುರಿಕೊಳ್ಳುತ್ತಾರೆ. ಹಾಗಾಗಿ ಏಟಿಗೆ ಏದಿರೇಟು ಇಂದು ಅನಿವಾರ್ಯವಾಗಿದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

    ಸಿಧು ಟ್ವೀಟ್: ಕಬ್ಬಿಣ ಕಬ್ಬಿಣವನ್ನೇ ಕತ್ತರಿಸುತ್ತದೆ. ಬೆಂಕಿ ಬೆಂಕಿಯನ್ನೇ ನಾಶ ಮಾಡುತ್ತೆ. ಒಂದು ವೇಳೆ ಹಾವು ಕಚ್ಚಿದ್ರೆ, ಔಷಧಿಯನ್ನು ಅದರ ವಿಷದಿಂದಲೇ ತಯಾರು ಮಾಡಲಾಗುತ್ತೆ. ಉಗ್ರರನ್ನು ನಾಶ ಮಾಡುವ ಅನಿವಾರ್ಯತೆ ಇದೆ. ಭಾರತೀಯ ವಾಯಸೇನೆಗೆ ಜೈ. ಜೈ ಹಿಂದ್ ಜೈ, ಹಿಂದ್ ಕೀ ಸೇನಾ ಎಂದು ಬರೆದುಕೊಂಡಿದ್ದಾರೆ.

    ಪುಲ್ವಾಮಾ ಬಗ್ಗೆ ಸಿಧು ಹೇಳಿದ್ದೇನು?
    ದಾಳಿಯಲ್ಲಿ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಭಯೋತ್ಪಾದನೆಗೆ ಯಾವುದೇ ದೇಶ, ಧರ್ಮ ಅಂತಿಲ್ಲ. ಭಾರತ, ಪಾಕಿಸ್ತಾನದ ಜೊತೆ ಮಾತನಾಡಬೇಕು. ಆದರೆ ಯಾರೋ ಮಾಡಿದ ಕೃತ್ಯಕ್ಕೆ ಯಾವುದೇ ದೇಶದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವುಗಳಿಗೆಲ್ಲ ಶಾಂತಿ ಮಾತುಕತೆ ಒಂದೇ ಪರಿಹಾರ ಎಂದು ಹೇಳುವ ಮೂಲಕ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಪರೋಕ್ಷವಾಗಿ ಕ್ಲೀನ್‍ಚಿಟ್ ನೀಡಿದ್ದರು.

    ತಮ್ಮ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಲೇ ಪ್ರತಿಕ್ರಿಯಿಸಿದ್ದ ಸಿಧು, ದಾಳಿಯ ಬಳಿಕವೂ ಶಾಂತಿ ಮಂತ್ರವೇ ಇದಕ್ಕೆ ಪರಿಹಾರ ಎಂದು ಪುನರ್ ಉಚ್ಚರಿಸಿದ ಸಿಧು, ಯಾರು ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇದುವೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ. 71 ವರ್ಷಗಳಿಂದಲೂ ಇದೇ ನಡೆಯುತ್ತಿದೆ. ಭಯೋತ್ಪಾಧನೆಯಿಂದ ಏನು ಸಾಧಿಸಲು ಆಗುವುದಿಲ್ಲ. ಇದಕ್ಕೆ ಶಾಂತಿ ಮಾತುಕತೆಯೇ ಪರಿಹಾರ ಎಂದು ಹೇಳುವ ಮೂಲಕ ಪಾಕ್ ಜೊತೆಗಿನ ಮಾತುಕತೆಯನ್ನು ಸಮರ್ಥಿಸಿಕೊಂಡಿದ್ದರು.

    ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದ್ದರಿಂದ ಖ್ಯಾತ ಕಪಿಲ್ ಶರ್ಮಾ ಶೋದ ಪ್ರಮುಖ ಆಕರ್ಷಣೆ ಆಗಿದ್ದ ಕಾರ್ಯಕ್ರಮದಿಂದ ಹೊರಹಾಕಲಾಗಿದೆ.

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 21 ನಿಮಿಷದಲ್ಲಿ 3 ಉಗ್ರರ ತರಬೇತಿ ಶಿಬಿರಗಳು ಮಟಾಷ್

    21 ನಿಮಿಷದಲ್ಲಿ 3 ಉಗ್ರರ ತರಬೇತಿ ಶಿಬಿರಗಳು ಮಟಾಷ್

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (Line Of Control) ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ. ಇದನ್ನೂ ಓದಿ:ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ.

    ಈಗಾಗಲೇ ದಾಳಿಯ ಬಗ್ಗೆ ಪ್ರಧಾನಿಗಳಿಗೆ ಎನ್‍ಎಸ್‍ಎ ಮುಖ್ಯಸ್ಥ ಅಜಿತ್ ಧೋವಲ್ ವಿವರಣೆ ನೀಡಿದ್ದಾರೆ. ದಾಳಿಯ ಬಳಿಕ ಭಾರತದ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ಮೋದಿ ಅವರು ಅಜಿತ್ ಧೋವಲ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೈಷ್ ಉಗ್ರರ 3 ಅಲ್ಫಾ ಕಂಟ್ರೋಲ್ ರೂಂಗಳು ಉಡೀಸ್-ಮಿರಾಜ್ ಯುದ್ಧ ವಿಮಾನ ಬಳಸಿದ್ದು ಯಾಕೆ..?

    ಜೈಷ್ ಉಗ್ರರ 3 ಅಲ್ಫಾ ಕಂಟ್ರೋಲ್ ರೂಂಗಳು ಉಡೀಸ್-ಮಿರಾಜ್ ಯುದ್ಧ ವಿಮಾನ ಬಳಸಿದ್ದು ಯಾಕೆ..?

    ನವದೆಹಲಿ: ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಭಾರತೀಯ ವಾಯು ಸೇನೆ ಕಾಶ್ಮೀರ ಗಡಿ ಭಾಗದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಜೈಷ್ ಉಗ್ರರ ಮೂರು ಅಲ್ಫಾ ಕಂಟ್ರೋಲ್ ರೂಂಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಏರ್ ಸರ್ಜಿಕಲ್ ಸ್ಟ್ರೈಕ್ ಬಳಸಿಕೊಳ್ಳಲಾಗಿದೆ.

    ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ. ಮೂರು ದಾಳಿಯಲ್ಲಿ ಭಾರತೀಯ ವಾಯುಸೇನೆ ಯಶಸ್ವಿಯಾಗಿದೆ. ಈಗಾಗಲೇ ದಾಳಿಯ ಬಗ್ಗೆ ಪ್ರಧಾನಿಗಳಿಗೆ ಎನ್‍ಎಸ್‍ಎ ಮುಖ್ಯಸ್ಥ ಅಜಿತ್ ಧೋವಲ್ ವಿವರಣೆ ನೀಡಿದ್ದಾರೆ. ದಾಳಿಯ ಬಳಿಕ ಭಾರತದ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ಮೋದಿ ಅವರು ಅಜಿತ್ ಧೋವಲ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಮಿರಾಜ್-2000 ಯಾಕೆ..?
    ಮೊದಲ ಬಾರಿಗೆ ಏರ್ ಫೋರ್ಸ್ ಬಳಕೆ ಮಾಡಿದ್ದು ಒಂದು ಸಾರಿ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಮಿರಾಜ್ ತನ್ನ ಗುರಿಯನ್ನು ತಪ್ಪಲ್ಲ. ಮಿರಾಜ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಯುದ್ಧ ವಿಮಾನವಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಎನ್.ವಿ.ತ್ಯಾಗಿ ಹೇಳಿದ್ದಾರೆ.

    ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ನಿಂದ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಅಂಕಿ ಅಂಶಗಳು ಹೊರಬರಬೇಕಿದೆ. ಬಾಲಕೋಟ, ಮುಜಾಫರ್ ಬಾದ್, ಚಾಕೋಟಿಯಲ್ಲಿರುವ ಮೂರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (Line Of Control) ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ. ಕಾಶ್ಮೀರದ ಬಾಲ್ಕೋಟ್ ನಲ್ಲಿ ನೆಲೆ ಕಂಡುಕೊಂಡಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದೆ. ಆದ್ರೆ ಈ ಬಗ್ಗೆ ಇದೂವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

    ಮಿರಾಜ್- 2000 ಹೆಸರಿನ 12 ಜೆಟ್ ಗಳನ್ನು ಬಳಸಿ ಇಂದು ಬೆಳಗ್ಗಿನ ಜಾವ 3.30ಕ್ಕೆ ವೈಮಾನಿಕ ದಾಳಿ ನಡೆದಿದ್ದು, ಕೆಲವು ದೃಶ್ಯಗಳು ಮತ್ತು ಫೋಟೋಗಳನ್ನು ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುತ್ತಿವೆ. ಭಾರತೀಯ ಸೇನೆಯ ಯುದ್ಧ ವಿಮಾನಗಳು ಎಲ್‍ಓಸಿ ಗಡಿಯನ್ನು ದಾಟಿ ಪಾಕಿಸ್ತಾನದತ್ತ ಬರುತ್ತಿವೆ ಎಂದು ಪಾಕ್ ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv