Tag: ಏರ್ ಶೋ

  • ಕಳೆದ 5 ವರ್ಷಗಳಲ್ಲಿ ರಷ್ಯಾದಿಂದ 13 ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ

    ಕಳೆದ 5 ವರ್ಷಗಳಲ್ಲಿ ರಷ್ಯಾದಿಂದ 13 ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ

    ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ (India) ಸುಮಾರು 13 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿರುವುದಾಗಿ ರಷ್ಯಾದ (Russia) ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅಷ್ಟೇ ಅಲ್ಲದೇ ಹತ್ತು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ ಎಂದು ತಿಳಿಸಿದೆ.

    ಭಾರತ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ರಗಳನ್ನು (Arms) ರಷ್ಯಾದಿಂದ ಖರೀದಿಸುವ ದೇಶವಾಗಿದೆ. ಖರೀದಿಯ ಆರ್ಡರ್‌ನಲ್ಲಿ ಶೇ.20 ರಷ್ಟು ಭಾರತದ ಪಾಲಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

    ಈ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್‌ನಲ್ಲಿ ಶಾಂತಿ ಮಾತುಕತೆಗೆ ಕರೆಕೊಟ್ಟಿದ್ದು ನೇರವಾಗಿ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಲು ಭಾರತಕ್ಕೆ ಸಾಧ್ಯವಾಗಿಲ್ಲ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

    ಭಾರತ ಸೇರಿದಂತೆ, ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳು ರಷ್ಯಾದ ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡುತ್ತಿವೆ ಎಂದು ಮಿಲಿಟರಿ ತಾಂತ್ರಿಕ ಸೇವೆಯ ಮುಖ್ಯಸ್ಥ ಡ್ಮಿಟ್ರೈ ಶುಘೈವ್ ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.

    ಏಷ್ಯಾದ ದೇಶಗಳಿಂದ ಎಸ್-400 ಟ್ರಯಾಫ್ ಕ್ಷಿಪಣಿ, ಸುಕೋಯ್‌ 30 ಯುದ್ಧ ವಿಮಾನಗಳು, ಮಿಗ್-29 ಹೆಲಿಕಾಪ್ಟರ್ ಮತ್ತು ಡ್ರೋಣ್‌ ಖರೀದಿಗೆ ಬೇಡಿಕೆಯಿದೆ ಎಂದು ಶುಘೈವ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆಯುತ್ತಿರುವ 14ನೇ ಅಂತರಾಷ್ಟ್ರೀಯ ಏರ್ ಶೋಗೆ 200 ಬಗೆಯ ವಿವಿಧ ಮಾದರಿಯ ಶಸ್ತ್ರಾಸ್ತ್ರಗಳು ಪ್ರದರ್ಶನಗೊಳ್ಳಲಿದೆ. ಏರ್ ಶೋನಲ್ಲಿ ಪ್ರದರ್ಶನಗೊಳ್ಳುವ ವಿಮಾನಗಳ ಬೇಡಿಕೆ ಆಧಾರದ ಮೇಲೆ ಸ್ಥಳೀಯವಾಗಿ ಉತ್ಪಾದಿಸಲು ಕಂಪನಿಗಳಿಗೆ ಭಾರತ ಒತ್ತಾಯಿಸಲಿದೆ ಎಂದು ವರದಿಯಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Air Show ಬಡತನ ಓಡಿಸುತ್ತಾ – ಪ್ರಧಾನಿ ಮೋದಿಗೆ ಹೆಚ್‌ಡಿಕೆ ಪ್ರಶ್ನೆ

    Air Show ಬಡತನ ಓಡಿಸುತ್ತಾ – ಪ್ರಧಾನಿ ಮೋದಿಗೆ ಹೆಚ್‌ಡಿಕೆ ಪ್ರಶ್ನೆ

    ಹುಬ್ಬಳ್ಳಿ: ಏರ್ ಶೋ (Air Show) ಬಡತನ ಓಡಿಸೋ ಕಾರ್ಯಕ್ರಮವಾ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy)  ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಶ್ನಿಸಿದ್ದಾರೆ.

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ 14ನೇ ಏರ್‌ ಶೋ ನಡೆಯುತ್ತಿದೆ. ಹಿಂದಿನಿಂದಲೂ ಇದನ್ನು ಮೋದಿಯೇ (Narendra Modi) ಆರಂಭಿಸಿದ್ರಾ? ಏರ್ ಶೋ ಬರೋದ್ರಿಂದ ಬಡತನ ನಿವಾರಣೆಯಾಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆಟ್ಟು ನಿಂತ ಅಂಬುಲೆನ್ಸ್ – ನಡುರಸ್ತೆಯಲ್ಲೇ 2 ಗಂಟೆ ನರಳಾಡಿದ ತುಂಬು ಗರ್ಭಿಣಿ

    ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ದು ಕಾರಣ: ಇದೇ ವೇಳೆ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿ, ಸಿದ್ದರಾಮಯ್ಯ ಸುಳ್ಳಿನ ರಾಮಯ್ಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಅವರೇ ಕಾರಣ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರ ಪತನದ ಬಗ್ಗೆ ಮಾತನ್ನಾಡಿದ್ದರು ಅಂತಾ ಹೆಚ್‌ಡಿಕೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಯಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಅಕ್ರಮ ಹೊರತಂದಿದ್ದು ನಾನು: ಬಿಜೆಪಿ (BJP) ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ. ಕುರ್ಚಿಗಾಗಿ ಕುತಂತ್ರ ರಾಜಕಾರಣ ಮಾಡ್ತೀರಿ ನಿಮಗೆ ನಾಚಿಕೆಯಾಗಬೇಕು. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡೋಕೆ ರೆಡಿಯಾಗಿದ್ರು. ಇನ್ನೂ 10 ವರ್ಷಗಳಾದ್ರೂ ಬಿಜೆಪಿಯನ್ನು ತೆಗೆಯೋಕೆ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ, ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.

    ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಹೆಚ್‌ಡಿಕೆ, ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ಬಿಜೆಪಿಯವರು ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡ್ತಿಲ್ಲ. ನಾನು ಪೇಶ್ವೆ ಮೂಲದ ಬಗ್ಗೆ ಪ್ರಶ್ನಿಸಿದ್ದೇನೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ಧ. ಅದಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.

    `ಜಾತಿ ವ್ಯವಸ್ಥೆಯನ್ನ ಹುಟ್ಟು ಹಾಕಿದ್ದೇ ಪಂಡಿತರು’ ಅಂತಾ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ನಾನು ಆ ಮಟ್ಟಕ್ಕೆ ಹೋಗಿಲ್ಲ. ಪೇಶ್ವೆ ಡಿಎನ್‌ಎ ಬಗ್ಗೆ ಮಾತ್ರ ಪ್ರಶ್ನೆ ಮಾಡಿದ್ದೇನೆ. ಬಿಜೆಪಿ ಹುನ್ನಾರಗಳ ಬಗ್ಗೆ ಜನಕ್ಕೆ ತಿಳಿಸ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಕ್ಷಣಾ ವಲಯದಲ್ಲಿ ಭಾರತ ಸುಭದ್ರವಾಗಿದೆ

    ರಕ್ಷಣಾ ವಲಯದಲ್ಲಿ ಭಾರತ ಸುಭದ್ರವಾಗಿದೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ: ಮೋದಿ

    ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ: ಮೋದಿ

    ಬೆಂಗಳೂರು: ಯಲಹಂಕದ (Yelahanka) ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ – 2023 (Aero India-2023) ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಮೋದಿ, ವಿಶ್ವದಲ್ಲೇ ಭಾರತದ ರಕ್ಷಣಾ ವಲಯ ದೊಡ್ಡ ಹೆಸರು ಮಾಡಿದೆ. ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

    ಏರ್ ಶೋ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ಏರೋ ಇಂಡಿಯಾದ ರೋಮಾಂಚನಕ್ಕೆ ಮನಸೋತಿದ್ದೇನೆ. ಬೆಂಗಳೂರಿನ ವಾತಾವರಣ ಎಲ್ಲರನ್ನೂ ಸೆಳೆಯುತ್ತಿದೆ. ಏರೋ ಇಂಡಿಯಾದ ಆಯೋಜನೆ ಹೊಸ ಸಾಮರ್ಥ್ಯದ ಉದಾಹರಣೆಯಾಗಿದೆ. ವಿಶ್ವ ಭಾರತವನ್ನು ಬೇರೆಡೆಗೆ ಕೊಂಡೊಯ್ಯುತ್ತಿದೆ. ವಿದೇಶಿ ಕಂಪನಿಗಳು ಸ್ಟಾಲ್ ಹಾಕಿದ್ದಾರೆ. ಏರೋ ಇಂಡಿಯಾ ಥೀಮ್ ರನ್‌ವೇ ಜಮೀನಿನಿಂದ ಆಕಾಶದ ವರೆಗೂ ಹೊಸತನ್ನು ನಿರೀಕ್ಷಿಸುತ್ತಿದೆ. ಏರೋ ಇಂಡಿಯಾದ ಜೊತೆ, ಡಿಒಎನ್ಸ್ ಕಾನ್ ಕ್ಲೈವ್ ಕೂಡ ಆಯೋಜಿಸಲಾಗಿದೆ. ಮಿತ್ರ ದೇಶದ ಜೊತೆ ಭಾರತ ವಿಶ್ವದ ಹೊಸತನ್ನು ಸೃಷ್ಟಿಸಿದೆ ಎಂದು ನುಡಿದರು.

    ಡಿಫೆನ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಶಕ್ತಿ ತುಂಬುತ್ತಿದೆ. ಹೊಸ ಇನೋವೇಷನ್ ಮಾಡಲು ಅವಕಾಶ ಸಿಕ್ಕಿದೆ. ಹೊಸ ಆಲೋಚನೆಗೆ ಉತ್ತೇಜನ ಸಿಕ್ಕಿದೆ. ಒಂದು ಕಾಲ ಇತ್ತು ಏರ್ ಶೋ ಬರಿ ಶೋ ಆಗಿತ್ತು. ಆದರೀಗ ಇದರ ಮಾದರಿಯನ್ನೇ ಬದಲಿಸಲಾಗಿದೆ. ಇದು ಬರೀ ಶೋ ಅಲ್ಲ, ನಮ್ಮ ದೇಶದ ಶಕ್ತಿ ಕೂಡ ಆಗಿದೆ. ದೇಶದಲ್ಲಿ ಡಿಫೆನ್ಸ್ ಕೇವಲ ಮಾರುಕಟ್ಟೆ ಮಾತ್ರ ಅಲ್ಲ, ಪಾರ್ಟ್ ಕೂಡ ಹೌದು ಎಂದು ಹಾಡಿ ಹೊಗಳಿದರು.

    ನಮ್ಮ ಟೆಕ್ನಾಲಜಿ ದೇಶದಲ್ಲಿ ಪ್ರಭಾವಶಾಲಿಯಾಗಿದೆ. ಪ್ರಾಮಾಣಿಕ ಹಾಗೂ ಸದೃಢವಾಗಿಸಿದೆ. ಭಾರತದ ಸಾಮರ್ಥ್ಯ ಪ್ರಮಾಣ ಹೆಚ್ಚಿಸಿದೆ. ಆಕಾಶದಲ್ಲಿ ಓಡೋ ತೇಜಸ್ ವೇಗ ಹೆಚ್ಚಿಸಿದೆ. ಗುಜರಾತ್, ತುಮಕೂರಿನಲ್ಲಿ ತಯಾರಾಗುತ್ತಿರುವ ವಿಮಾನ ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ನಾವು ರಿಫಾರ್ಮ್ ಮೂಲಕ ಎಲ್ಲಾ ವಿಭಾದಲ್ಲೂ ಬದಲಾಗುತ್ತಿದ್ದೇವೆ. ಡಿಫೆನ್ಸ್ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ ಎಂದರು.

    ಭಾರತ 9 ವರ್ಷಗಳಿಂದ ಡಿಫೆನ್ಸ್ನಲ್ಲಿ ಬದಲಾವಣೆ ಕಂಡಿದೆ. 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. 2 ಬಿಲಿಯನ್ ಇದ್ದ ಡಿಫೆನ್ಸ್ ರಫ್ತನ್ನು ಮುಂದೆ 5 ಬಿಲಿಯನ್‌ಗೆ ಹೆಚ್ಚಳ ಮಾಡಲಿದ್ದೇವೆ. ಫೈಟರ್ ಜೆಟ್ ತರ ಭಾರತ ಮುನ್ನುಗ್ಗುತ್ತಿದೆ. ಯಾವಾಗಲೂ ಎಲ್ಲಾ ರೀತಿಯಲ್ಲೂ ಮುನ್ನುಗ್ಗುತ್ತೇವೆ. ಆಕಾಶದಲ್ಲಿ ಪೈಲಟ್ ಹಾರಿಸುವ ರೀತಿ, ಸ್ವಾತಂತ್ರ್ಯ ಸರ್ಕಾರ ಇದೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದರು.

    ಇದಕ್ಕೂ ಮುನ್ನ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸಿದರು. ಕರ್ನಾಟಕದ ಈ ಐತಿಹಾಸಿಕ ಪ್ರದೇಶಕ್ಕೆ ನಿಮಗೆ ಸ್ವಾಗತ. ಮೋದಿ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಹೈಟ್ ಮತ್ತು ಸ್ಪೀಡ್ 2 ಪ್ರಮುಖ ವಿಚಾರ ಇಟ್ಟುಕೊಳ್ಳಲಾಗಿದೆ. ಲೋಕ ಕಲ್ಯಾಣ ಶಕ್ತಿ ಇದಾಗಿದ್ದು, ರಾಷ್ಟ್ರ ಸಶಕ್ತೀಕರಣಕ್ಕೆ ನಮ್ಮ ದೇಶ ಸದೃಢವಾಗಿದೆ ಎಂದರು. ಇದನ್ನೂ ಓದಿ: Exclusive Photo Album- ಮೋದಿ ಔತಣಕೂಟ : ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂ

    ಭಾರತ ರಕ್ಷಣಾ ಕ್ಷೇತ್ರದಲ್ಲಿ ಉತ್ತಮವಾಗಿ ಮುನ್ನುಗುತ್ತಿದೆ. ಕರ್ನಾಟಕದ ಭೂಮಿ, ಶೌರ್ಯ, ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಏರೋ ಇಂಡಿಯಾ ಆಯೋಜನೆ ಮೂಲಕ ಬೇರೆ ಬೇರೆ ಕಾರ್ಯಕ್ರಮ ರೂಪಿಸಲಾಗಿದೆ. ತುಮಕೂರು, ಲಕ್ನೋ, ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಇಂಡಸ್ಟ್ರಿ ಕಮೀಟ್‌ಮೆಂಡ್ ಎಕ್ಸ್ ಪ್ರೆಸ್. ಕರ್ನಾಟಕದಲ್ಲಿ ಸಿಗುವ ಗಂಧದ ಮರ ದೇಶ, ವಿದೇಶಗಳಿಗೆ ರಫ್ತು ಆಗುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸ್‌ನೆಸ್ ರ‍್ಯಾಂಕಿಂಗ್ ದಿನದಿಂದ ದಿನ ಮೇಲೆ ಬರುತ್ತಿದೆ. ಜಿ-20 ಶೃಂಗ ಸಭೆ ಮಾಡುವ ಅವಕಾಶ ಕೂಡ ಸಿಕ್ಕಿದೆ ಎಂದು ತಿಳಿಸಿದರು.

    ರಕ್ಷಣಾ ಇಲಾಖೆ ಎಲ್ಲರನ್ನೂ ಸ್ವಾಗತಿಸುತ್ತಿದೆ. 700ಕ್ಕೂ ಹೆಚ್ಚು ದೇಶದ ಎಕ್ಸಿಬ್ಯೂಟರ್ ಸ್ಟಾಲ್ ಹಾಕಿದ್ದಾರೆ. ಡಿಫೆನ್ಸ್ ಮ್ಯಾನುಫ್ಯಾಕ್ಚರ್ ಉತ್ತಮವಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ಆಗಮಿಸಿರೋ ಎಲ್ಲರಿಗೂ ಸ್ವಾಗತ ಕೋರುತ್ತೇನೆ ಎಂದರು.

    ಏರ್ ಶೋ ಉದ್ಘಾಟನಾ ಸಮಾರಂಭದ ವೇಳೆ ಗವರ್ನರ್ ಥಾವರ್ ಚಂದ್ ಗಹ್ಲೋಟ್, ಸಿಎಂ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರೀಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ, ರಕ್ಷಣಾ ಇಲಾಖೆ ರಾಜ್ಯ ಮಂತ್ರಿ, ಅಜಯ್ ಭಟ್ ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತವನ್ನು ಜಾಗತಿಕ ನಾಯಕನಾಗಿಸಲು ಕರ್ನಾಟಕ ದೊಡ್ಡ ಕೊಡುಗೆ ನೀಡಲಿದೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    ಬೆಂಗಳೂರು: ಚುನಾವಣಾ ರಾಜ್ಯ ಕರ್ನಾಟಕಕ್ಕೆ ಪದೇ ಪದೇ ಕೇಂದ್ರದ ನಾಯಕರು ಬಂದು ಹೋಗ್ತಿದ್ದಾರೆ. ಅಮಿತ್ ಶಾ (Amitshah) ಮತ್ತು ಮೋದಿ (Narendra Modi) ಅಂತು ವಾರದಲ್ಲಿ ಎರಡೆರಡು ಬಾರಿ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಬಿಜೆಪಿ ಅಲೆ ಸೃಷ್ಟಿಗೆ ಮುಂದಾಗಿದ್ದಾರೆ. ಇದೇ ವೇಳೆ ಇಂದು ಬೆಂಗಳೂರು ಏರ್ ಶೋ (Bengaluru AirShow) ಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭಾನುವಾರವೇ ಬೆಂಗಳೂರಿಗೆ ಆಗಮಿಸಿದ್ದಾರೆ.

    ಭಾನುವಾರ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ ಇಂದು ಯಲಹಂಕ ವಾಯುನೆಲೆಯಲ್ಲಿ ಏರ್ ಶೋಗೆ ಚಾಲನೆ ನೀಡಲಿದ್ದಾರೆ. ವಾರದಲ್ಲಿ 2ನೇ ಬಾರಿಗೆ ಬೆಂಗಳೂರಿಗೆ ಮೋದಿ ಭೇಟಿ ನೀಡ್ತಿದ್ದ ಈ ಮೂಲಕ ಬೆಂಗಳೂರು ಮತದಾರರ ಮನಗೆಲ್ಲಲು ದಾಳ ಹೂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ

    ಬಿಗಿ ಪೊಲೀಸ್ ಭದ್ರತೆ: ನರೇಂದ್ರ ಮೋದಿ ಇಂದು ಏರೋ ಶೋ ಉದ್ಘಾಟನೆಗೆ ಹೋಗುವ ರಸ್ತೆಯ ಉದ್ದಗಲಕ್ಕೂ ಖಾಕಿ ಸರ್ಪಗಾವಲು ಮಾಡಲಾಗಿದೆ. ರಾಜಭವನ (Rajabhavana) ದಿಂದ ಮೇಕ್ರಿ ಸರ್ಕಲ್‍ವರೆಗೂ 300 ಸಂಚಾರಿ ಪೊಲೀಸರು, 500ಕ್ಕೂ ಹೆಚ್ಚು ಲಾ ಅಂಡ್ ಅರ್ಡರ್ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಏರೋ ಶೋ (Air Show) ನಡೆಯುವ ಸ್ಥಳದಲ್ಲಿ ಕೆಎಆರ್‍ಪಿ ತುಕಡಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ರಾಜಭವನದಿಂದ ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಮೆಕ್ರಿ ಸರ್ಕಲ್ ಹೆಚ್‍ಕ್ಯೂಟಿಸಿಗೆ ಹೋಗಿ ಅಲ್ಲಿಂದ ಏರೋ ಶೋ ನಡೆಯುತ್ತಿರೋ ಸ್ಥಳಕ್ಕೆ ಹೆಲಿಕಾಪ್ಟರ್‍ನಲ್ಲಿ ತಲುಪಲಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಬೊಮ್ಮಾಯಿ

    ಎಲ್ಲೆಲ್ಲಿ ಸಂಚಾರ ನಿರ್ಬಂಧ: ಇತ್ತ ಏರ್‌ ಪೋರ್ಟ್ ರಸ್ತೆ (Airport Road) ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹೆಬ್ಬಾಳದ ಎಸ್ಟಿಮ್ ಮಾಲ್‍ನಿಂದ ಯಲಹಂಕವರೆಗೆ ನಿಷೇಧ ಹೇರಲಾಗಿದೆ. ಏರ್ ಶೋಗೆ ತೆರಳುವ ವಾಹನ ಸವಾರರು ನಿಗದಿತ ಪಾಸ್ ತೋರಿಸಿ ಫ್ಲೈ ಓವರ್ ಮೇಲೆ ತೆರಳಬಹುದು. ಯಲಹಂಕ, ಕೊಡಿಗೆಹಳ್ಳಿ, ಬ್ಯಾಟರಾಯನಪುರ ಸುತ್ತಮುತ್ತಲಿನ ಸಾರ್ವಜನಿಕರು ಫ್ಲೈ ಓವರ್ ಕೆಳಭಾಗದ ಸರ್ವಿಸ್ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಕೆಐಎಎಲ್‍ಗೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಏರ್‌ ಪೋರ್ಟ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕ ವಾಹನಗಳಿಗೆ ನಿಷೇಧ ಹೇರಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಬೊಮ್ಮಾಯಿ

    ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಬೊಮ್ಮಾಯಿ

    ಬೆಂಗಳೂರು: ಏರೋಸ್ಪೇಸ್ (Aerospace) ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ (Karnataka) ಸಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಭಾನುವಾರ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023ರ (Aero India 2023) ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಏರೋಸ್ಪೇಸ್ ನೀತಿ ಹಾಗೂ ರಕ್ಷಣಾ ಪಾರ್ಕ್‌ನ ಮೊದಲ ಹಂತ ಪೂರ್ಣಗೊಂಡಿದೆ. 2ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು (Bengaluru) ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ (Air Show) ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ. ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಸ್ವಂತ ಏರ್‌ಕ್ರಾಫ್ಟ್ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು, ಈ ದೇಶದ ಭವಿಷ್ಯಕ್ಕೆ ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ ಎಂದರು.

    ಗೌರವದ ಸಂಕೇತ:
    ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜನೆ ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು ಎಂದರು.

    ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ:
    ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ, ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು 2 ವರ್ಷಗಳ ಹಿಂದೆ ಏರ್ ಶೊ ಯಶಸ್ವಿಯಾಗಿ ಜರುಗಿಸಿದ್ದೇವೆ. ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ಅತ್ಯಂತ ದೊಡ್ಡ ಏರ್ ಶೋ ಆಗಿದ್ದು, ಅತಿ ಹೆಚ್ಚು ವಿದೇಶಿ ರಕ್ಷಣಾ ಮಂತ್ರಿಗಳು, ಏರ್‌ಪೋರ್ಸ್ ಸಿಇಒಗಳು, 35,000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ, 67 ವಸ್ತು ಪ್ರದರ್ಶನ, 600 ರಿಂದ 809ಗೆ ಪ್ರದರ್ಶನಗಳು, 98 ವಿದೇಶಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಒಪ್ಪಂದಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

    ವಾಯುಪಡೆಯ ಬಲವರ್ಧನೆ:
    ವಾಯುಪಡೆಯ ತಂತ್ರಜ್ಞಾನ, ಸಾಮರ್ಥ್ಯ, ಮಾನವ ಸಂಪನ್ಮೂಲ ಬಲಪಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ರಾಜನಾಥ್ ಸಿಂಗ್ ಅವರ ನಾಯಕತ್ವದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ, ತಂತ್ರಜ್ಞಾನ ಮೇಲ್ದರ್ಜೆಗೇರುವಲ್ಲಿ ಭಾರತ ಆತ್ಮ ನಿರ್ಭರವಾಗುತ್ತಿದೆ. ನಮ್ಮ ರಕ್ಷಣಾ ಉಪಕರಣಗಳನ್ನು ಶೇ.75 ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು, ಈಗ ರಪ್ತು ಮಾಡುತ್ತಿದ್ದೇವೆ. ಏರೋಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940 ರಲ್ಲಿ ಹೆಚ್‌ಎಎಲ್ ಸ್ಥಾಪನೆಯಾಗಿದ್ದು, ಎನ್‌ಎಎಲ್, ಬಿಹೆಚ್‌ಇಎಲ್, ಡಿಆರ್‌ಡಿಒ ಎಲ್ಲವೂ ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ

    1960 ರಲ್ಲಿ ಬೆಂಗಳೂರಿನಲ್ಲಿ ಇಸ್ರೋ ಆರಂಭವಾಯಿತು. ಪ್ರತಿ ದಶಕದಲ್ಲಿ ಏರೋಸ್ಪೇಸ್ ಅಭಿವೃದ್ಧಿಯಾಗಿದೆ. ಸ್ಥಳ, ಸಾಮರ್ಥ್ಯ, ವೃದ್ಧಿಯಾಗಿದೆ. 1960 ಆರ್ಯಭಟ ಉಪಗ್ರಹ ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ.67 ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಿಂದ ಉತ್ಪಾದನೆಯಾಗುತ್ತದೆ ಎಂದರು.

    ಏರೋ ಇಂಡಿಯಾ ಶೋ 2023ನ್ನು ಜನರು ನೆನಪಿನಲ್ಲಿಡುತ್ತಾರೆ ಅಲ್ಲದೇ ಇಲ್ಲಿಂದ ಒಳ್ಳೆಯ ನೆನಪುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ವಿಶ್ವಾಸವಿದ್ದು, ಏರೋಸ್ಪೇಸ್ ಹಾಗೂ ರಕ್ಷಣಾ ಉದ್ಯಮದ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ. ಅರ್ಧ ಜಗತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಇಡೀ ವಿಶ್ವವೇ ನಮ್ಮ ಕಡೆ ನೋಡುವಂತಾಗಬೇಕು ಎಂದು ಆಶಿಸಿದರು.

    14ನೇ ಬಾರಿ ಏರೋ ಇಂಡಿಯಾ ಶೋ ಆಯೋಜನೆ ಮಾಡಲು ನಮಗೆ ಈ ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು. ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಅಜಯ್ ಭಟ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗಿರಿಧರ್, ಎಸಿಎಸ್ ರಮಣ ರೆಡ್ಡಿ, ನಟರಾಜನ್, ಅನುರಾಗ್ ಬಾಜಪೇಯಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ದಲಿತಪರ ಸಂಘಟನೆಯಿಂದ ಜೈನ್ ವಿವಿ ಬೋರ್ಡ್‌ಗೆ ಮಸಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ ಹೋಟೆಲ್ ರೂಮ್‍ಗಳಿಗೆ ಭರ್ಜರಿ ಡಿಮ್ಯಾಂಡ್- 50 ಸಾವಿರ ಕೊಠಡಿಗಳು ಬುಕ್

    ಬೆಂಗಳೂರಿನ ಹೋಟೆಲ್ ರೂಮ್‍ಗಳಿಗೆ ಭರ್ಜರಿ ಡಿಮ್ಯಾಂಡ್- 50 ಸಾವಿರ ಕೊಠಡಿಗಳು ಬುಕ್

    ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿ ರಾಷ್ಟ್ರಮಟ್ಟದ ಸಭೆ, ಸಮಾರಂಭಗಳಿಗೆ ಸಾಕ್ಷಿಯಾಗುತ್ತಿದೆ. ಬೇರೆ ರಾಜ್ಯಗಳ, ವಿದೇಶದ ಜನರು ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿದ್ದಾರೆ. ಈ ತಿಂಗಳಲ್ಲೇ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ, ಜಿ-20, ಏರ್ ಶೋ (G-20 Air Show) ಗಳು ನಡೆಯುತ್ತಿವೆ.

    ಇದೇ ಫೆ.13ರಿಂದ 17ರ ತನಕ ಏರ್ ಶೋ ಆಯೋಜಿಸಲಾಗಿದೆ. ಹೀಗಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರತಿನಿಧಿಗಳು ಬೆಂಗಳೂರಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ನಗರದ ಥ್ರೀ ಸ್ಟಾರ್, ಫೈವ್ ಸ್ಟಾರ್ ಹೋಟೆಲ್‍ (Five Star Hotel) ಗಳು ಆಲ್ ಮೋಸ್ಟ್ ಭರ್ತಿಯಾಗಿವೆ. ಒಂದು ಅಂದಾಜಿನ ಪ್ರಕಾರ 50 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಅಂತಾ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

    ಕೆಲ ಹೋಟೆಲ್ ಗಳಲ್ಲಿ ಕೆಲವು ಕೊಠಡಿಗಳು ಸಿಕ್ಕರೂ, ಅವುಗಳ ರೇಟ್ ಸಹ ದುಪ್ಪಟಾಗಿದೆ. ಮೂರುಪಟ್ಟು, ನಾಲ್ಕುಪಟ್ಟು ಹೆಚ್ಚು ದರ ಕೊಟ್ಟು ಬುಕ್ ಮಾಡಬೇಕಾದ ಅನಿವಾರ್ಯ ಪರಸ್ಥಿತಿ ಬಂದಿದೆ. ಹೀಗಾಗಿ ಬೆಂಗಳೂರಿನ ಬಹುತೇಕ ಹೋಟೆಲ್‍ಗಳಲ್ಲಿ ಕೊಠಡಿಗಳು ಖಾಲಿ ಇಲ್ಲ. ಫೆ.20ರ ತನಕ ಇದೇ ಪರಿಸ್ಥಿತಿ ಇರಲಿದೆ ಅಂತಾ ಹೋಟೆಲ್ ಅಸೋಸಿಯೇಷನ್‍ನವರು ಹೇಳುತ್ತಾರೆ.

    ಒಟ್ಟಿನಲ್ಲಿ ಬೆಂಗಳೂರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು, ಬೆಂಗಳೂರಿನ ಹೋಟೆಲ್ ಗಳಲ್ಲಿ ರೂಮ್ ಸಿಗೋದು ಕಷ್ಟ ಆಗಿದೆ. ಇದನ್ನೂ ಓದಿ: ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ. 13 ರಿಂದ ಬೆಂಗ್ಳೂರಲ್ಲಿ ಏರ್ ಶೋ – LCA Tejas ಪ್ರಮುಖ ಆಕರ್ಷಣೆ

    ಫೆ. 13 ರಿಂದ ಬೆಂಗ್ಳೂರಲ್ಲಿ ಏರ್ ಶೋ – LCA Tejas ಪ್ರಮುಖ ಆಕರ್ಷಣೆ

    ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ (Yelahanka Air Force) ಫೆಬ್ರವರಿ 13 ರಿಂದ 17 ವರೆಗೆ ಏರ್ ಶೋ (Air Show) ನಡೆಯಲಿದೆ. ಈ ಬಾರಿ ಪೂರ್ಣ ಪ್ರಮಾಣದ ಎಲ್‍ಸಿಎ-ತೇಜಸ್ (LCA Tejas) ಯುದ್ಧ ವಿಮಾನವು ಪೂರ್ಣ ಕಾರ್ಯಾಚರಣಾ ಸಾಮರ್ಥ್ಯ (ಎಫ್‍ಒಸಿ) ವಿನ್ಯಾಸದಲ್ಲಿ ಏರೋ ಇಂಡಿಯಾ 2023ರ (Aero India) ಭಾರತೀಯ ಪೆವಿಲಿಯನ್‍ನ ಪ್ರಮುಖ ಆಕರ್ಷಣೆಯಾಗಿದೆ.

    ಏರೋ ಇಂಡಿಯಾ ದ್ವೈವಾರ್ಷಿಕ ಏರ್ ಶೋ ಮತ್ತು ವೈಮಾನಿಕ ಪ್ರದರ್ಶನವಾಗಿದ್ದು, ಇದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ವರೆಗೆ ನಡೆಯಲಿದೆ. ಈ ಪ್ರದರ್ಶನವನ್ನು ರಕ್ಷಣಾ ಸಚಿವಾಲಯ ಆಯೋಜಿಸಿದ್ದು ಇದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. “ದ ರನ್‍ವೇ ಟು ಎ ಬಿಲಿಯನ್ ಆಪರ್ಚುನಿಟೀಸ್”- ‘ಬಿಲಿಯನ್ ಅವಕಾಶಗಳಿಗೆ ರಹದಾರಿ’ ಎಂಬ ತನ್ನ ಘೋಷವಾಕ್ಯದೊಂದಿಗೆ, ಏರೋ ಇಂಡಿಯಾ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಹಾಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತಿದೆ. ಇದನ್ನೂ ಓದಿ: ಅದಾನಿ ವಿರುದ್ಧ ತನಿಖೆಗೆ ವಿಪಕ್ಷಗಳ ಆಗ್ರಹ – ಕಲಾಪ ಮುಂದೂಡಿಕೆ

    ಏರೋ ಇಂಡಿಯಾದ 14ನೇ ಆವೃತ್ತಿಯು ಫಿಕ್ಸೆಡ್ ವಿಂಗ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಹೊಂದಿರುತ್ತದೆ. ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್‍ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳು, ಸಿಸ್ಟಮ್‍ಗಳು (LRU) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ಪ್ಲಾಟ್‍ಫಾರ್ಮ್‍ಗಾಗಿ ಪೂರಕ-ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂಡಿಯಾ ಪೆವಿಲಿಯನ್ ಭಾರತದ ಪ್ರಗತಿಯನ್ನು ಮತ್ತಷ್ಟು ಬಿಂಬಿಸಲು ಮುಂದಾಗಿದೆ. ರಕ್ಷಣಾ ಬಾಹಾಕ್ಯಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡುವಂತೆ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಹುಡುಗಿಯರೇ ಇರೋದನ್ನ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ

    ಎಲ್‍ಸಿಎ ತೇಜಸ್ ವೈಶಿಷ್ಟ್ಯ:
    ಎಲ್ ಸಿಎ ತೇಜಸ್ ಒಂದೇ ಎಂಜಿನ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCS) ಜೊತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವನ್ನು ‘ಗಾಳಿ ಯುದ್ಧ’ ಮತ್ತು ‘ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ‘ವಿಚಕ್ಷಣ’ ಮತ್ತು ಆಂಟಿಶಿಪ್ ಪಾತ್ರಗಳನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಏರ್‌ಫ್ರೇಮ್‌ನಲ್ಲಿ ಸುಧಾರಿತ ಸಂಯೋಜನೆಗಳ ವ್ಯಾಪಕ ಬಳಕೆಯು ತೂಕದ ಅನುಪಾತ ಮತ್ತು ಕಡಿಮೆ ರೇಡಾರ್ ಸಂಕೇತಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತೇಜಸ್ ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್‍ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್‍ಎ ರಾಡಾರ್, ಎಸ್‍ಪಿಜೆಯೊಂದಿಗೆ ಯುಇಡಬ್ಲ್ಯೂಎಸ್, ಸಿಎಮ್‍ಡಿಎಸ್, ಎಚ್‍ಎಮ್‍ಡಿಎಸ್ ಡ್ಯಾಶ್‍ವಿ, ಬಿವಿಆರ್ ಕ್ಷಿಪಣಿ ಸಾಮರ್ಥ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ ಸಿಎ ಅಭಿವೃದ್ಧಿಯ ವಿಷಯದಲ್ಲಿ ಬಹಳ ಮುಂದುವರಿದಿದ್ದು, ಪ್ರಸ್ತುತ ವಾಯುಪಡೆ ಯುದ್ಧ ವಿಮಾನ ಮತ್ತು ಎಲ್‌ಸಿಎ ನೌಕಾ ವಿಮಾನಗಳು ಎರಡು ಆಸನಗಳಲ್ಲಿ ಲಭ್ಯವಿದೆ. ಎಲ್‌ಸಿಎ ತೇಜಸ್‍ಗಾಗಿ ಎಲ್‌ಸಿಎ, ಎಲ್‍ಐಎಫ್‍ಟಿ (ಲೀಡ್ ಇನ್ ಫೈಟರ್ ಟ್ರೈನರ್) ಮತ್ತು ಎಂಕೆ-2 (MK2) ನಂತಹ ಇತರ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

    ಎಲ್ ಸಿಎ ತೇಜಸ್ ಚಿಕ್ಕ ಮತ್ತು ಹಗುರವಾದ ವಿಮಾನಗಳಲ್ಲಿ ಒಂದಾಗಿದೆ. ಅತ್ಯುತ್ತಮ ವಿಮಾನ ಸುರಕ್ಷತಾ ಇತಿಹಾಸವನ್ನು ಹೊಂದಿದೆ. ಎಲ್ಲಾ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಎಲ್ಲಾ ನಾಲ್ಕು ರೂಪಾಂತರಗಳಲ್ಲಿ ಲಭ್ಯ. ಶೇ.90ರಷ್ಟು ಪ್ರದೇಶ ಮತ್ತು ಶೇ.45ರಷ್ಟು ತೂಕ ಒಳಗೊಂಡಿದೆ. ಕನಿಷ್ಠ ಆರ್‌ಸಿಎಸ್‌ ಜೊತೆಗೆ ಅತಿ ಎತ್ತರದಲ್ಲಿ ಹಾರಾಡುವ ಸೂಪರ್ ಸಾನಿಕ್. ಏರ್ ಕ್ರಾಫ್ಟ್ ಮೂಲಕ ಕ್ವಾಡ್-ರೆಡಂಡೆಂಟ್ ಫ್ಲೈ. ಎಯುಡಬ್ಲೂನ ಶೇ.30 ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ (ಎಲ್ಲ ತೂಕವೂ ಸೇರಿ) ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ (ಮುಕ್ತ ವಿನ್ಯಾಸ) ಹೊಂದಿದ್ದು, ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣೆ ಸ್ನೇಹಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ

    ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ

    ಬೆಂಗಳೂರು: 2023ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ (Bengaluru) ಏರ್ ಶೋ ಆಯೋಜಿಸಲಾಗಿದ್ದು, ಪ್ರಧಾನಿ‌ ಮೋದಿಯವರು (Narendra Modi) ಏರ್ ಶೋಗೆ (Air Show) ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಏರ್ ಶೋ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ ಎಂದರು.

    ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ : ಭಾರತದ ಎಂಜಿನಿಯರ್‌ಗಳ ಸಾಮರ್ಥ್ಯ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆಯನ್ನು ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೋಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್‌ಡಿಒ, ಎನ್‌ಎಎಲ್, ಎಚ್‌ಎಎಲ್‌ನಂತಹ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್‌ಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದು ಹೇಳಿದರು.

    ಶ್ರಮದ ಫಲ: ಕೊಲಿನ್ಸ್ ಏರೋಸ್ಪೇಸ್ ಎಂಜಿನಿಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ‌. ಈ ಸಂಸ್ಥೆ ಬೆಂಗಳೂರಿನ ಪ್ರಮುಖ ಎಂಜಿನಿಯರಿಂಗ್ ಕೇಂದ್ರವಾಗಿದೆ ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

    ಏರೋಸ್ಪೇಸ್ ಅತ್ಯಂತ ವಿಶೇಷ ಇದು ಮನುಷ್ಯನನ್ನು ಮತ್ತೊಂದು ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ. ಮನುಷ್ಯನ ಮನಸ್ಸನ್ನು ಒಂದು ಹಂತದವರೆಗೆ ವಿಸ್ತರಣೆ ಮಾಡಬಹುದು. ಮನುಷ್ಯನ ಬುದ್ಧಿ ಶಕ್ತಿ ಶೇ. 80ರಷ್ಟು ಬಳಕೆಯಾಗುವುದಿಲ್ಲ. ಪರಮಹಂಸ ಅತ್ಯಂತ ಭಾರವಾದ ಮತ್ತು ಶುಭ್ರ ಪಕ್ಷಿ ಅದು ಅತಿ ಎತ್ತರದಲ್ಲಿ ಹಾರಬಹುದು. ಅದು ಮಾನಸ ಸರೋವರದಲ್ಲಿ ಇರುತ್ತದೆ. ಅದೇ ರೀತಿ ಏರೋಸ್ಪೇಸ್ ಅತ್ಯಂತ ಎತ್ತರದಲ್ಲಿ ಹಾರಬಹುದು. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

    ಈ ಸಂದರ್ಭದಲ್ಲಿ ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜನಾರ್ದನ್‌ ರೆಡ್ಡಿಗೆ ಬಿಗ್‌ ರಿಲೀಫ್‌ – ಒಂದೇ ದಿನ 4 ಪ್ರಕರಣಗಳಿಂದ ಮುಕ್ತಿ

    Live Tv
    [brid partner=56869869 player=32851 video=960834 autoplay=true]

  • ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ವಾಷಿಂಗ್ಟನ್: ಏರ್‌ಪೋರ್ಟ್‍ನಲ್ಲಿ (Airport) ನಡೆದ ಏರ್ ಶೋನಲ್ಲಿ (Airshow) ಪರಸ್ಪರ 2 ವಿಮಾನಗಳು (Fighter Plane) ಡಿಕ್ಕಿ ಹೊಡೆದು ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್‍ನಲ್ಲಿ ನಡೆದಿದೆ.

    ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.

    2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್‌ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಈ ವೇಳೆ ವಿಮಾನವೆರಡಕ್ಕೂ ಬೆಂಕಿ ಹೊತ್ತಿಕೊಂಡು ಛಿದ್ರವಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಎರಡು ವಿಮಾನಗಳು ಯುದ್ಧ ಕಾಲದ ವಿಮಾನಗಳಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?

    Live Tv
    [brid partner=56869869 player=32851 video=960834 autoplay=true]