Tag: ಏರ್ ಲಿಫ್ಟ್

  • ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ಬೀದರ್: ಉತ್ತರ ಪ್ರದೇಶದ ಖೇರಿ ಹೈವೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 7 ಜನ ಹಾಗೂ ಕಲಬುರಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.

    ಇಂದು ಅವರ ಮೃತದೇಹಗಳು ಲಕ್ನೋದಿಂದ ಏರ್-ಲಿಫ್ಟ್ ಮಾಡಿ ಹೈದರಾಬಾದ್‍ಗೆ ತಂದು ಅಲ್ಲಿಂದ ರಸ್ತೆ ಮೂಲಕ 7 ಅಂಬುಲೆನ್ಸ್‌ಗಳಲ್ಲಿ 4 ಗಂಟೆಗೆ ಬೀದರ್‌ಗೆ ತರಲಾಯಿತು. ಓರ್ವ ವ್ಯಕ್ತಿಯ ಮೃತದೇಹವನ್ನು ಕಲಬುರಗಿಗೆ ರವಾನೆ ಮಾಡಲಾಯಿತು.  ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

    ಮೃತದೇಹಗಳು ಬೀದರ್‌ಗೆ ಬರುತ್ತಿದ್ದಂತೆ ಗುಂಪಾ ಬಳಿಯ ಅವರ ನಿವಾಸದಲ್ಲಿ ಕುಟುಂಬಸ್ಥರ ಹಾಗೂ ಸ್ಥಳೀಯರು ಆಕ್ರಂದನ ಮುಗಿಲು ಮುಟ್ಟಿತು. ಬಳಿಕ ಬೀದರ್ ತಾಲೂಕಿನ ಸುಲ್ತಾನಪುರ್‌ದಲ್ಲಿ 6 ಜನರನ್ನು ಲಿಂಗಾಯತ ಸಂಪ್ರದಾಯದಂತೆ ಸುರಿಯುವ ಮಳೆಯ ನಡುವೆ ಅಂತ್ಯಕ್ರಿಯೆ ಮಾಡಿದರು. ಇದನ್ನೂ ಓದಿ: ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಓರ್ವ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇದಾರನಾಥ್, ಭದ್ರಿನಾಥ್, ಅಯೋಧ್ಯೆ ಸೇರಿದಂತೆ ತೀರ್ಥಯಾತ್ರೆಗೆ ಹೋಗಿದ್ದ ಬೀದರ್ ಮೂಲದ 16 ಜನರಲ್ಲಿ 7 ಜನ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

  • ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    – ಅಮೆರಿಕ ಸೇನೆ ಗುರಿಯಾಗಿಸಿ ನಡೆದ ದಾಳಿ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆತ್ತರ ಕೋಡಿ ಮುಂದುವರಿದಿದ್ದು, ಇಂದು ನಡೆದ ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದರು.

    ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಪಶ್ಚಿಮ ರಿಹಾಯಶಿ ಇಲಾಖೆಯ ಖಾಜಾ-ಏ-ಬುಗಾರದಲ್ಲಿ ಈ ದಾಳಿ ನಡೆದಿದೆ. ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದಲ್ಲಿ ಬಿದ್ದು ಸ್ಫೋಟಗೊಂಡಿದೆ. ಆದ್ರೆ ಇದರಲ್ಲಿ ಯಾವುದೇ ಸೂಸೈಡ್ ಬಾಂಬರ್ ಗಳು ಇರಲಿಲ್ಲ ಎಂಬುದರ ಬಗ್ಗೆ ಖಚಿತ ಮಾಹಿತಿ ಪ್ರಕಟವಾಗಿಲ್ಲ.

    ಕಾಬೂಲ್ ಸ್ಥಳೀಯ ಮಾಧ್ಯಮಗಳ ಪ್ರಕಾರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಅಫ್ಘಾನ್ ಪೊಲೀಸರ ಪ್ರಕಾರ ರಾಕೆಟ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರವೇ ಕಾಬೂಲ್ ಏರ್ ಪೋರ್ಟ್ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ತಮ್ಮ ದೇಶದ ಜನರು ವಿಮಾನ ನಿಲ್ದಾಣದತ್ತ ಬರಬಾರದು ಎಂದು ಹೇಳಿದ್ದರು. ಇತ್ತ ತಾಲಿಬಾನಿಗಳು ಸಹ ಐಸಿಸ್-ಕೆ ದಾಳಿ ನಡೆಸುವ ಸಾಧ್ಯತೆಗಳಿದ್ದು, ಜನರು ವಿಮಾನ ನಿಲ್ದಾಣದತ್ತ ಬರಕೂಡದು ಎಂದು ಹೇಳಿ, ಏರ್ ಪೋರ್ಟಿಗೆ ಸಂಪರ್ಕಿಸುವ ರಸ್ತೆಗಳಿಗೆ ತನ್ನ ಜನರನ್ನು ನಿಯೋಜಿಸಿತ್ತು. ಇದನ್ನೂ ಓದಿ: ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

    ಐಎಸ್‍ಕೆಪಿ ಉಗ್ರರು ಯಾವುದೇ ಕ್ಷಣದಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎನ್ನಲಾಗಿದೆ. ಈ ದಾಳಿ ನಡುವೆಯೂ ಕಾಬೂಲ್ ಏರ್ ಪೋರ್ಟ್ ನಿಂದ ಜನರ ಏರ್‍ಲಿಫ್ಟ್ ಮುಂದುವರಿದಿದೆ. ಈ ಮಧ್ಯೆ ಕಾಬೂಲ್ ಸೇರಿ ಎಲ್ಲಾ ಕಡೆ, ಬ್ಯಾಂಕ್ ಮತ್ತು ಎಟಿಎಂಗಳಿಗೆ ಜನ ಮುಗಿಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿನ ಹಣ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಬ್ಯಾಂಕ್‍ನಲ್ಲಿ ದುಡ್ಡಿಲ್ಲ. ಎಟಿಎಂನಲ್ಲಿಯೂ ದುಡ್ಡಿಲ್ಲದೇ ಜನ ಪರದಾಡುತ್ತಿದ್ದಾರೆ. ಜನ ಆಕ್ರೋಶಗೊಳ್ಳುತ್ತಿದ್ದಂತೆ ಅವರನ್ನು ಚೆದುರಿಸಲು ತಾಲಿಬಾನ್ ಉಗ್ರರು ಬ್ಯಾಂಕ್ ಬಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟ

    ಈ ನಡುವೆ ಭಾರತದೊಂದಿಗೆ ತಾಲಿಬಾನ್ ಉತ್ತಮ ಬಾಂದವ್ಯ ಬಯಸುತ್ತಿದೆ ಅಂತ ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸಂದೇಶ ನೀಡಿದ್ದಾರೆ. ಈ ಎಲ್ಲದರ ಮಧ್ಯೆ, ಭಾರತ-ಅಫ್ಘಾನ್ ಸ್ನೇಹದ ಭಾಗವಾಗಿ ಹೆರಾತ್‍ನಲ್ಲಿ ಭಾರತ ಕಟ್ಟಿಸಿರುವ ಬೃಹತ್ ಅಣೆಕಟ್ಟಿಗೆ ಭೇಟಿಗೆ ತಾಲಿಬಾನಿಗಳು ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್, ಬದಲಾದ ಪರಿಸ್ಥಿತಿಯಲ್ಲಿ ನಾವೂ ವ್ಯೂಹಗಳನ್ನು ಬದಲಿಸುತ್ತಿದ್ದೇವೆ. ಎಂಥಹ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧ ಇದ್ದೇವೆ ಎಂದು ಘೋಷಿಸಿದ್ದಾರೆ.

  • ಕಾಬೂಲ್‍ನಲ್ಲಿ ಎಟಿಎಂಗಳ ಮುಂದೆ ಜನಸಾಗರ – ಬ್ಯಾಂಕ್ ಸಿಬ್ಬಂದಿಯಿಂದ ಪ್ರತಿಭಟನೆ

    ಕಾಬೂಲ್‍ನಲ್ಲಿ ಎಟಿಎಂಗಳ ಮುಂದೆ ಜನಸಾಗರ – ಬ್ಯಾಂಕ್ ಸಿಬ್ಬಂದಿಯಿಂದ ಪ್ರತಿಭಟನೆ

    ಕಾಬೂಲ್: ತಾಲಿಬಾನ್ ಉಗ್ರರ ದಾಳಿಯಿಂದ ಈಗಾಗಲೇ ತತ್ತರಿಸಿ ಹೋಗಿದ್ದ ಜನರು ಈಗ ಹಣಕ್ಕಾಗಿ ಪರದಾಡುವಂತೆ ಆಗಿದೆ.

    ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕ್ ವಹಿವಾಟು ಪ್ರಾರಂಭವಾಗಿದ್ದು, ಇದರ ಮಧ್ಯೆ ‘ನ್ಯೂ ಕಾಬೂಲ್ ಬ್ಯಾಂಕ್’ ಸಿಬ್ಬಂದಿ ಸೇರಿದಂತೆ ಇತರೆ ಸರ್ಕಾರಿ ಉದ್ಯೋಗಿಗಳು ತಮ್ಮ ಐದಾರು ತಿಂಗಳ ವೇತನ ನೀಡುವಂತೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಜನರು ಎಟಿಎಂ ಮುಂದೆ ಕ್ಯೂ ನಿಂತು ಹಣವಿಲ್ಲದೇ ದಿಕ್ಕಿತೋಚದ ಪರಿಸ್ಥಿತಿಯಲ್ಲಿದ್ದಾರೆ.ಇದನ್ನೂ ಓದಿ:ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    ಇತ್ತೀಚೆಗಷ್ಟೇ ಬ್ಯಾಂಕ್ ಪ್ರಾರಂಭಿಸಿದ್ದರೂ ಸಹ ಎಟಿಎಂನಲ್ಲಿ ಹಣವಿಲ್ಲವೆಂದು ಜನರು ಪೇಚಾಡುತ್ತಿದ್ದಾರೆ. ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಹ ಅವುಗಳಲ್ಲಿ ದಿನಕ್ಕೆ 200 ಡಾಲರ್ ಅಷ್ಟೇ ಹಣ ತೆಗೆಯಲು ಸಾಧ್ಯವಾಗುತ್ತಿದೆ. ಈ ಕಾರಣಕ್ಕೆ ಎಟಿಎಂ ಮುಂದೆ ಜನರ ಕ್ಯೂ ನಿಂತಿದ್ದಾರೆ.

    ಗುರುವಾರ ಬಾಂಬ್ ದಾಳಿ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ತಾಲಿಬಾನಿಗಳನ್ನು ವಿಮಾನ ನಿಲ್ದಾಣದ ಸಮೀಪ ಮತ್ತು ಸಂಪರ್ಕಿಸುವ ಕಲ್ಪಿಸುವ ಮಾರ್ಗಗಳಲ್ಲಿ ಜನರನ್ನು ನೇಮಿಸಿದೆ. ಇತ್ತ ಬ್ರಿಟನ್, ಜರ್ಮನಿ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಮಾಡೋದನ್ನ ಸ್ಥಗಿತಗೊಳಿಸಿವೆ. ಇತ್ತ ಆಗಸ್ಟ್ 31ರೊಳಗೆ ರಕ್ಷಣಾ ಕಾರ್ಯ ಪೂರ್ಣವಾಗದಿದ್ರೆ ನಮ್ಮ ಕಾರ್ಯಚರಣೆ ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆಗಸ್ಟ್ 31ರೊಳಗೆ ತಮ್ಮ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕಾಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

     

  • ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಕಾಬೂಲ್: ಅಮೆರಿಕ ಎಚ್ಚರಿಕೆ ನಡುವೆಯೂ ಮತ್ತೆ ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಗುಂಡಿನ ಸದ್ದು ಕೇಳಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಭಯಗೊಂಡ ಜನರು ಚದುರಿದ್ದಾರೆ. ಗುಂಡಿನ ದಾಳಿ ಜೊತೆ ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.

    ಗುಂಡಿನ ದಾಳಿ ಯಾರು ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಘಟನೆ ಹೊಣೆಯನ್ನು ಹೊತ್ತುಕೊಂಡಿಲ್ಲ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಪ್ರಾಣ ಕಳೆದುಕೊಂಡಿದ್ದರು.

    ಒಂದು ದಿನ ಮುಂಚೆಯೇ ಅಮೆರಿಕ ಉಗ್ರರ ದಾಳಿಯ ಸುಳಿವು ನೀಡಿತ್ತು. ಆದ್ದರಿಂದ ತನ್ನ ದೇಶದ ಜನರಿಗೆ ಕಾಬೂಲ್ ವಿಮಾನ ನಿಲ್ದಾಣದತ್ತ ತೆರಳದಂತೆ ಸೂಚನೆ ನೀಡಿತ್ತು. ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್, ಈಸ್ಟ್ ಗೇಟ್ ಮತ್ತು ನಾರ್ಥ್ ಗೇಟ್ ಬಳಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ಸಂದೇಶ ನೀಡಿತ್ತು. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

    ಕಾಬೂಲ್ ನಿಂದ ಅಮೆರಿಕ ಸೇನೆ ಹಿಂದಿರುಗುವ ಮೊದಲೇ ಐಎಸ್‍ಐಎಸ್ ದಾಳಿ ನಡೆಸುವ ಎಚ್ಚರಿಕೆಯನ್ನು ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದರು. ಈ ಕುರಿತು ಮಾಹಿತಿ ನೀಡಿರುವ¸ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ, ಕಾಬೂಲ್ ಏರ್ ಪೋರ್ಟ್ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ಆತಂಕಗಳ ನಡುವೆಯೂ ನಮ್ಮ ಸೈನಿಕರು ಸಂತ್ರಸ್ತರನ್ನು ಏರ್ ಲಿಫ್ಟ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಈ ಕಾರ್ಯಾಚರಣೆ ಮುಂದಿನ ದಿನಗಳು ಅಪಾಯಕಾರಿಯಾಗಿರಲಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ!

    ಗುರುವಾರ ಬಾಂಬ್ ದಾಳಿ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ತಾಲಿಬಾನಿಗಳನ್ನು ವಿಮಾನ ನಿಲ್ದಾಣದ ಸಮೀಪ ಮತ್ತು ಸಂಪರ್ಕಿಸುವ ಕಲ್ಪಿಸುವ ಮಾರ್ಗಗಳಲ್ಲಿ ಜನರನ್ನು ನೇಮಿಸಿದೆ. ಇತ್ತ ಬ್ರಿಟನ್, ಜರ್ಮನಿ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಮಾಡೋದನ್ನ ಸ್ಥಗಿತಗೊಳಿಸಿವೆ. ಇತ್ತ ಆಗಸ್ಟ್ 31ರೊಳಗೆ ರಕ್ಷಣಾ ಕಾರ್ಯ ಪೂರ್ಣವಾಗದಿದ್ರೆ ನಮ್ಮ ಕಾರ್ಯಚರಣೆ ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆಗಸ್ಟ್ 31ರೊಳಗೆ ತಮ್ಮ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕಾಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

  • ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್

    ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತೆರಳಿದ್ದ ಉಕ್ರೇನ್ ವಿಮಾನ ಹೈಜಾಕ್ ಮಾಡಲಾಗಿದೆ. ತಮ್ಮ ವಿಮಾನವನ್ನು ಇರಾನ್ ಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಉಕ್ರೇನ್ ಸರ್ಕಾರದ ಸಚಿವರು ಹೇಳಿದ್ದಾರೆ. ಭಾನುವಾರವೇ ವಿಮಾನವೇ ಹೈಜಾಕ್ ಆಗಿದ್ದು, ಕೆಲ ಅಪರಿಚಿತರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಉಕ್ರೇನ್ ಸರ್ಕಾರ ಹೇಳಿದೆ.

    ಉಕ್ರೇನ್ ಡೆಪ್ಯುಟಿ ವಿದೇಶಾಂಗ ಮಂತ್ರಿ ಯೆವ್ಗೆನಿ ಯೆನಿನ್, ಭಾನುವಾರ ಕೆಲ ಅಪರಿಚಿತರು ವಿಮಾನ ಹೈಜಾಕ್ ಮಾಡಿದ್ದು, ಇರಾನ್ ನತ್ತ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಜನರು ಏರ್ ಪೋರ್ಟ್ ತಲುಪದ ಕಾರಣ ವಿಮಾನವನ್ನು ನಿಗದಿತ ಪ್ಲಾನ್ ನಂತೆ ಮೂರು ಸ್ಥಳಗಳಿಗೆ ತೆಗೆದುಕೊಂಡು ಹೋಗಲು ವಿಫಲವಾಗಿದ್ದೇವೆ ಎಂದು ಹೇಳಿದ್ದಾರೆ.

    ವಿಮಾನ ಈಶಾನ್ಯ ಇರಾನಿನ ಮಶಹದ್ ಏರ್ ಪೋರ್ಟ್ ಗೆ ಬಂದಿತ್ತು. ಅಲ್ಲಿ ರೀಪ್ಯೂಲಿಂಗ್ ಬಳಿಕ ಉಕ್ರೇನ್ ನತ್ತ ಟೇಕಾಫ್ ಆಗಿತ್ತು. ನಂತರ ಕಿವ್ ವಿಮಾನ ನಿಲ್ದಾಣದಲ್ಲಿ ಅದು ಲ್ಯಾಂಡ್ ಆಗಿತ್ತು ಎಂದು ಇರಾನ್ ಮಂತ್ರಿ ಅಬ್ಬಾಸ್ ಅಸ್ಲಾನಿ ಮಾಹಿತಿ ನೀಡಿದ್ದಾರೆ.

    ವಿಮಾನ ಹೈಜಾಕ್ ಮಾಡಿದವರು ಶಸ್ತ್ರಸಜ್ಜಿತರಾಗಿದ್ದರು. ಆದ್ರೆ ಇದುವರೆಗೂ ಈ ವಿಮಾನ ಹೈಜಾಕ್ ಮಾಡಿದವರು ಯಾರು ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ಉಕ್ರೇನ್ ನಿರಂತರವಾಗಿ ತನ್ನ ಜನರನ್ನು ಏರ್ ಲಿಫ್ಟ್ ಮಾಡುತ್ತಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಕೆಲ ವರದಿಗಳ ಪ್ರಕಾರ, ಕಾಬೂಲ್ ನಿಂದ ಕಿವ್ ವರೆಗೂ 83 ಜನರನ್ನು ಕರೆದುಕೊಂಡು ಬರಲಾಗಿತ್ತು. ಇದರಲ್ಲಿ 31 ಉಕ್ರೇನ್ ಪ್ರಜೆಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅಫ್ಘಾನಿಸ್ತಾದಲ್ಲಿ 100 ಉಕ್ರೇನ್ ಪ್ರಜೆಗಳಿದ್ದು, ಅವರನ್ನ ವಾಪಸ್ ಕರೆಸಿಕೊಳ್ಳುವ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ತಾಲಿಬಾನಿಗಳು ಕಾಬೂಲ್ ನಗರ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಭಾರತ, ಫ್ರಾನ್ಸ್, ಉಕ್ರೇನ್, ಜರ್ಮನಿ, ಬ್ರಿಟನ್, ಅಮೆರಿಕ ತನ್ನ ಪ್ರಜೆಗಳನ್ನು ಕರೆಸಿಕೊಳ್ಳುತ್ತಿದೆ. ನಾಟೋ ದೇಶಗಳ ಜೊತೆ ಸೇರಿ ಕಾಬೂಲ್ ವಿಮಾನ ನಿಲ್ದಾಣವನ್ನು ಅಮೆರಿಕ ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ. ಅಮೆರಿಕದ ಸಹಾಯದಿಂದ ಇನ್ನಿತರ ದೇಶಗಳು ಪ್ರಜೆಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದನ್ನೂ ಓದಿ: ಯುದ್ಧದಲ್ಲಿ ಸಹಾಯ ಮಾಡಿದ ಅಫ್ಘನ್ನರಿಗೆ ಅಮೆರಿಕದಲ್ಲಿ ಆಶ್ರಯ: ಜೋ ಬೈಡನ್ ಘೋಷಣೆ

  • ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    – ಕಾಬೂಲ್‍ನಲ್ಲಿ ಉಳಿದವರ ಏರ್ ಲಿಫ್ಟ್ ಗೆ ಕಸರತ್ತು

    ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಲು ಮೋದಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮಧ್ಯರಾತ್ರಿ 135 ಮಂದಿ ಭಾರತೀಯರು ಸೇಫಾಗಿ ದೆಹಲಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಮೂರು ದಿನಗಳ ಹಿಂದೆ 135 ಭಾರತೀಯರನ್ನು ಕಾಬೂಲ್‍ನಿಂದ ಖತಾರ್ ನ ದೋಹಾಗೆ ಏರ್ ಲಿಫ್ಟ್ ಮಾಡಲಾಗಿತ್ತು. ಅವರನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದೋಹದಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗಿದೆ.

    ಅಫ್ಘನ್‍ನಲ್ಲಿ ಸಿಲುಕಿರುವ ಉಳಿದ ಹಿಂದೂಗಳನ್ನು, ಸಿಖ್ಖರನ್ನು, ಮುಸ್ಲಿಮರನ್ನು, ಕ್ರೈಸ್ತರನ್ನು ಕಾಪಾಡಲು ಕಸರತ್ತುಗಳನ್ನು ನಡೆಸಲಾಗ್ತಿದೆ. ಆದ್ರೆ ತಾಲಿಬಾನ್ ಉಗ್ರರು ಅಷ್ಟು ಸುಲಭಕ್ಕೆ ಭಾರತೀಯರನ್ನು ಏರ್ ಪೋರ್ಟ್ ತಲುಪಲು ಬಿಡ್ತಿಲ್ಲ. ಅಲ್ಲಿ ಸಿಲುಕಿರುವ ಭಾರತೀಯರೊಬ್ಬರ ಪ್ರಕಾರ, ಅವರನ್ನು ವಿಮಾನನಿಲ್ದಾಣಕ್ಕೆ ಕರೆದೊಯ್ಯಲು ಕಳೆದ ಎರಡು ದಿನಗಳಿಂದ ನಿರಂತರ ಪ್ರಯತ್ನಗಳು ನಡೆಯತ್ತಿವೆ. ದಾರಿ ಮಧ್ಯೆ ತಾಲಿಬಾನಿ ಉಗ್ರರು ಬಿಡುತ್ತಿಲ್ಲ. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

    ಭಾರತೀಯರು ಇರುವ ಬಸ್ ತಪಾಸಣೆ ನಡೆಸಿದ ಉಗ್ರರು, ಅದರಲ್ಲಿ ಅಫ್ಘಾನಿ ಹಿಂದೂಗಳು, ಸಿಖ್ಖರನ್ನು ಭಾರತೀಯರಿಂದ ಬೇರ್ಪಡಿಸಿ ಫ್ಯಾಕ್ಟರಿಯೊಂದಕ್ಕೆ ಕರೆದೊಯ್ದಿದ್ದಾರೆ. ಕೆಲವರು ಭಯದಿಂದ ಗುರುದ್ವಾರಕ್ಕೆ ವಾಪಸ್ ಆಗಿದ್ದಾರೆ. ಉಳಿದ ಭಾರತೀಯರು ಏರ್ ಪೋರ್ಟ್ ಸಮೀಪದ ಕಲ್ಯಾಣಮಂಟಪದಲ್ಲಿ ಬೀಡುಬಿಟ್ಟಿದ್ದಾರೆ. ಇದರಲ್ಲಿ ಕನ್ನಡಿಗರು ಕೂಡ ಇದ್ದಾರೆ ಎನ್ನಲಾಗಿದೆ. ತಾಲಿಬಾನಿಗಳು ಕೆಲ ಭಾರತೀಯರ ಮೊಬೈಲ್‍ಗಳನ್ನು ಉಡೀಸ್ ಮಾಡಿದ್ದಾರೆ. ಅಲ್ಲದೇ 150 ಭಾರತೀಯರನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೆ ಇದು ಸುಳ್ಳು ಎಂದು ಸ್ವತಃ ತಾಲಿಬಾನ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

  • ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    – ಸ್ನಾನ ಮಾಡಿಸಿ ಹಾಲು ನೀಡಿದ್ರು

    ಕಾಬೂಲ್: ಕಾಬೂಲ್ ವಿಮಾನನಿಲ್ದಾಣದ ಬಳಿ ಅಮ್ಮನಿಂದ ದೂರವಾಗಿದ್ದ ಮಗುವಿಗೆ ಟರ್ಕಿ ಸೈನಿಕರು ಆಹಾರ ನೀಡಿ ರಕ್ಷಿಸಿರುವ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಫ್ಘಾನಿಸ್ತಾನ ನರಹಂತಕರ ಕೈವಶಗೊಂಡು ಆರು ದಿನಗಳು ಕಳೆದಿದ್ದು, ಪ್ರತಿನಿತ್ಯ ಹೃದಯವಿದ್ರಾವಕ ದೃಶ್ಯಗಳು ಬೆಳಕಿಗೆ ಬರುತ್ತಿವೆ.

    ಟರ್ಕಿ ಸೈನಿಕರನ್ನು ಶುಕ್ರವಾರ ಕಾಬೂಲ್ ವಿಮಾನ ನಿಲ್ದಾಣದ ಬಳಿ ನಿಯೋಜಿಸಲಾಗಿತ್ತು. ಫರಿಶ್ತಾ ರಹಮಾನಿ ಎಂಬಾತ ಎರಡು ತಿಂಗಳ ಮಗುವನ್ನು ತೆಗೆದುಕೊಂಡು ಓಡಾಡುತ್ತಿದ್ದನು. ಮಗುವನ್ನು ಕಂಡು ಸೈನಿಕರು ಆತನನ್ನು ಕರೆದು ವಿಚಾರಿಸಿದ್ದಾರೆ. ಈ ವೇಳೆ ಮಗುವಿನ ತಾಯಿ ಹಿಂದೆ ಉಳಿದುಕೊಂಡರು. ಈಗ ಮಗು ಹಸಿವಿನಿಂದ ಅಳುತ್ತಿದೆ ಎಂದು ಕಣ್ಣೀರು ಹಾಕಿದ್ದಾನೆ.

    ಮಗುವಿನ ಆಕ್ರಂದನಕ್ಕೆ ಕರಗಿದ ಟರ್ಕಿ ಸೈನಿಕರು ಕಂದಮ್ಮನ ತಂದೆಯನ್ನು ಸುರಕ್ಷಿತ ಸ್ಥಳದಲ್ಲಿರಲು ಅವಕಾಶ ಮಾಡಿಕೊಟ್ಟಿದ್ದಾರೆ. ನಂತರ ಮಗುವಿಗೆ ಸ್ನಾನ ಮಾಡಿಸಿ ಹಾಲುಣಿಸಿ ಆರೈಕೆ ಮಾಡಿದ್ದಾರೆ. ಅಲ್ಲಿದ್ದ ಮಹಿಳಾ ಸೈನಿಕ ಸಿಬ್ಬಂದಿ ಮಗುವಿಗೆ ಜೋಗುಳ ಹಾಡಿ ಸಮಾಧಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

    ಅಫ್ಘಾನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಅಮೆರಿಕ ಸೈನಿಕರು:
    ಜನರನ್ನ ಏರ್ ಲಿಫ್ಟ್ ಮಾಡಲಾಗ್ತಿದೆ ಎಂದು ಸುದ್ದಿ ತಿಳಿದು ಅಫ್ಘನ್ನರು ವಿಮಾನ ನಿಲ್ದಾಣದತ್ತ ದೌಡಾಯಿಸುತ್ತಿದ್ದಾರೆ. ತಾಲಿಬಾನಿಗಳಿಂದಾಗಿ ವಿಮಾನ ನಿಲ್ದಾಣದ ಹೊರಗಡೆ ಕಾಯುತ್ತಾ, ತಮ್ಮನ್ನು ದೇಶದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಅಮೆರಿಕ ಸೈನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಊಟ, ನೀರು ಇಲ್ಲದೇ ಕುಳಿತ ಅಫ್ಘನ್ನರಿಗೆ ಅಮೆರಿಕ ಸೈನಿಕರು ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

  • ಕ್ವಾರೆಂಟೈನ್‍ನಲ್ಲಿದ್ದ ಗರ್ಭಿಣಿಗೆ ಸಿಗದ ಸೂಕ್ತ ಚಿಕಿತ್ಸೆ- ಹೊಟ್ಟೆಯಲ್ಲೇ ಪ್ರಾಣ ಬಿಟ್ಟ ಕಂದಮ್ಮ

    ಕ್ವಾರೆಂಟೈನ್‍ನಲ್ಲಿದ್ದ ಗರ್ಭಿಣಿಗೆ ಸಿಗದ ಸೂಕ್ತ ಚಿಕಿತ್ಸೆ- ಹೊಟ್ಟೆಯಲ್ಲೇ ಪ್ರಾಣ ಬಿಟ್ಟ ಕಂದಮ್ಮ

    ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ ಎಂಬ ಆರೋಪವೊಂದು ವೈದ್ಯರ ವಿರುದ್ಧ ಕೇಳಿಬಂದಿದೆ.

    ಮೇ 12ರಂದು ದುಬೈನಿಂದ ಗರ್ಭಿಣಿ ಏರ್ ಲಿಫ್ಟ್ ಆಗಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಆಕೆಯನ್ನು ಹೊಟೇಲ್ ಕ್ವಾರಂಟೈನ್ ಆಗಿದ್ದರು. ಮರುದಿನ ನಡೆದ ತಪಾಸಣೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಗರ್ಭಿಣಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಗರ್ಭಿಣಿಯ ಆರೋಗ್ಯ ತಪಾಸಣೆ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ವರದಿ ನೆಗೆಟಿವ್ ಬಂದರೂ ಗರ್ಭಿಣಿಗೆ ಹೋಂ ಕ್ವಾರಂಟೈನ್ ಸಿಗಲಿಲ್ಲ. ಇಷ್ಟು ಮಾತ್ರವಲ್ಲದೆ ಮಂಗಳೂರಿನ ಕೆಲ ಖಾಸಗಿ ಆಸ್ಪತ್ರೆ ವೈದ್ಯರು ಕೂಡ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

    ಒಟ್ಟಿನಲ್ಲಿ ಎರಡನೇ ಟೆಸ್ಟ್ ನಲ್ಲಿ ಕೋವಿಡ್ ನೆಗೆಟಿವ್ ಬಂದರೂ ಚಿಕಿತ್ಸೆ ಸಿಗದೇ ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರೇ ನೇರ ಹೊಣೆ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶ್ರೀಲಂಕಾ ದಾಳಿ- ಕೋರಮಂಗಲದ ವ್ಯಕ್ತಿಯ ಕತ್ತಿನ ಭಾಗದಲ್ಲಿ ಸಿಲುಕಿಕೊಳ್ತು ಕಬ್ಬಿಣದ ಚೂರು!

    ಶ್ರೀಲಂಕಾ ದಾಳಿ- ಕೋರಮಂಗಲದ ವ್ಯಕ್ತಿಯ ಕತ್ತಿನ ಭಾಗದಲ್ಲಿ ಸಿಲುಕಿಕೊಳ್ತು ಕಬ್ಬಿಣದ ಚೂರು!

    – ಮಧ್ಯಾಹ್ನ ಬೆಂಗ್ಳೂರಿಗೆ ಏರ್ ಲಿಫ್ಟ್

    ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕೋರಮಂಗಲದ ಪುರುಷೋತ್ತಮ ರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇವರ ಎದೆ ಭಾಗಕ್ಕೆ ನುಗ್ಗಿದ ಕಬ್ಬಿಣದ ಸರಳು ಹೊಕ್ಕಿದ್ದು, ಕತ್ತಿನ ಭಾಗದಲ್ಲಿ ಕಬ್ಬಿಣದ ಚೂರು ಸಿಲುಕಿಕೊಂಡಿದೆ. ಕೊಲಂಬೋದ ಖಾಸಗಿ ಆಸ್ಪತ್ರೆಯಲ್ಲಿ ಪುರುಷೋತ್ತಮ್ ರೆಡ್ಡಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ.

    ಇಂದು ಮಧ್ಯಾಹ್ನ ಬೆಂಗಳೂರಿಗೆ ಪುರುಷೋತ್ತಮ್ ರನ್ನು ಕರೆದುಕೊಂಡು ಬರಲಾಗುತ್ತಿದ್ದು, ಝೀರೋ ಟ್ರಾಫಿಕ್‍ ಮೂಲಕ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಪುರುಷೋತ್ತಮ್ ರೆಡ್ಡಿ ಯಲಹಂಕ ಶಾಸಕ ಎಸ್ ವಿಶ್ವನಾಥ್ ಸಂಬಂಧಿ ಹಾಗೂ ಮೃತ ನಾಗರಾಜ್ ರೆಡ್ಡಿಯ ಆಪ್ತ ಸ್ನೇಹಿತರಾಗಿದ್ದರು. ಅವಘಡ ನಡೆದಂದು ಇವರು ಶ್ರೀಲಂಕಾದ ಶಾಂಗ್ರೀಲಾ ಹೋಟೆಲ್‍ನಲ್ಲಿ ತಂಗಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    ಏನಿದು ಘಟನೆ?: 
    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಸೇಂಟ್ ಅಂತೋನಿಯ ಶ್ರೈನ್, ಜಿಯಾನ್ ಚರ್ಚ್, ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊದ ಶಾಂಗ್ರಿ-ಲಾ ಹೋಟೆಲ್, ಕಿಂಗ್ಸ್ಬರಿ ಹೋಟೆಲ್, ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ, ಮಹವಿಲಾ ಗಾರ್ಡನ್ಸ್‍ನಲ್ಲಿ ಬಾಂಬ್ ಸ್ಫೋಟವಾಗಿದೆ. ಇದನ್ನೂ ಓದಿ: ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ – ಶತಕೋಟ್ಯಧಿಪತಿಯ ಮೂವರು ಮಕ್ಕಳು ಬಲಿ

    ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿತ್ತು. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿತ್ತು. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತಿತ್ತು.

  • ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ಏರ್ ಲಿಫ್ಟ್

    ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ಏರ್ ಲಿಫ್ಟ್

    ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರ ಮೃತದೇಹವನ್ನು ಏರ್ ಲಿಫ್ಟ್ ಮೂಲಕ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ರಕ್ಷಣಾ ಇಲಾಖೆ ಅನುಮತಿ ನೀಡಿದೆ.

    ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಪಾರ್ಥಿವ ಶರೀರದ ದರ್ಶನಗೈದು ಪ್ರತಿಕ್ರಿಯಿಸಿದ ಸಿಎಂ, ಮಂಡ್ಯ ಜಿಲ್ಲೆಯ ಅಭಿಮಾನಿಗಳು ತವರಿಗೆ ಮೃತ ಶರೀರವನ್ನು ತರುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಸೇನೆಯ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.

    ನನ್ನ ಮನವಿಗೆ ಸ್ಪಂದಿಸಿದ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅರ್ಧಗಂಟೆಯಲ್ಲಿ ತಿಳಿಸುತ್ತೇನೆ ಎಂದಿದ್ದಾರೆ. ದಯವಿಟ್ಟು ಮಂಡ್ಯ ಜನರು ಆಕ್ರೋಶ ಮಾಡಬೇಡಿ ಎಂದು ಸಿಎಂ ಮನವಿ ಮಾಡಿದ್ದರು.

    ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ತದನಂತರ ಕಂಠೀರವ ಸ್ಟೇಡಿಯಂಗೆ ತಂದು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv