Tag: ಏರ್ ಫೋರ್ಸ್

  • ಶುಕ್ರವಾರ ಐತಿಹಾಸಿಕ ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ ಕಲರವ

    ಶುಕ್ರವಾರ ಐತಿಹಾಸಿಕ ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ ಕಲರವ

    ಬೀದರ್: ಬೀದರ್ (Bidar) ಜಿಲ್ಲಾಡಳಿತ ಹಾಗೂ ಸ್ಥಳೀಯ ಏರ್‌ಫೋರ್ಸ್ ಸ್ಟೇಷನ್‌ದಿಂದ ಶುಕ್ರವಾರ ಮತ್ತು ಶನಿವಾರ ಬಹಮನಿ ಸುಲ್ತಾನರ ಐತಿಹಾಸಿಕ ಕೋಟೆ ಮೇಲೆ ಏರ್ ಶೋ (Air Show) ಹಮ್ಮಿಕೊಳ್ಳಲಾಗಿದೆ.

    ಎರಡು ದಿನಗಳ ಕಾಲ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಎರಡನೇ ದಿನದಂದು ಸಾರ್ವಜನಿಕ ವೀಕ್ಷಣೆಗೆ ಏರ್ ಶೋ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ (Surya Kirana Aerobatic Team) ಆಕರ್ಷಕ ವೈಮಾನಿಕ ಪ್ರದರ್ಶನವನ್ನು ನಡೆಸಿಕೊಡಲಿದ್ದಾರೆ. ಕಳೆದ ವರ್ಷ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೀಗಾಗಿ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದೆಂದು ಹೆಚ್ಚಿನ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    ಬೀದರ್ ಜಿಲ್ಲೆಯಲ್ಲೇ ಏರ್ ಫೋರ್ಸ್ (Air Force) ಇರುವುದರಿಂದ ಏರ್ ಶೋ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಿ ಆನಂದ ಪಡಲಿದ್ದಾರೆ. ಆಗಸದಲ್ಲಿನ ವೈಮಾನಿಕ ಪ್ರದರ್ಶನ ನೋಡುಗರಿಗೆ ರೋಮಾಂಚನ ಹಾಗೂ ಮೈನವಿರೇಳಿಸುವಂತೆ ಆಕರ್ಷಿಸಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್ ಫೋರ್ಸ್ ನಿಂದ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್

    ಏರ್ ಫೋರ್ಸ್ ನಿಂದ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್

    – ಜಾಲಹಳ್ಳಿ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ

    ಬೆಂಗಳೂರು: ಸಾರ್ವಜನಿಕರಿಗಾಗಿ ಏರ್ ಫೋರ್ಸ್ 100 ಹಾಸಿಗೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲು ನಿರ್ಧರಿಸಿದೆ.

    ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದು, ಮೇ 6ರಿಂದ ಆಕ್ಸಿಜನ್ ಸಹಿತ 20 ಬೆಡ್‍ಗಳು ಕಾರ್ಯರಂಭ ಆಗಲಿದೆ. ನಂತರ ಮೇ 20ರ ವೇಳಗೆ ಇನ್ನುಳಿದ 80 ಬೆಡ್ ಗಳನ್ನ ಸಿದ್ಧಪಡಿಸಲಾಗುವುದು ಎಂದು ವಾಯುಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಸ್ಫೋಟವಾಗತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ಸೋಂಕಿತರು ಆಸ್ಪತ್ರೆಗಳ ಹುಡುಕಾಟದಲ್ಲಿದ್ದಾರೆ. ಬೆಂಗಳೂರಿನಲ್ಲಿಯೂ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಲ್ತ್ ಎಮೆರ್ಜೆನ್ಸಿಯನ್ನ ಮನಗಂಡ ಏರ್‍ಫೋರ್ಸ್ ಸಾರ್ವಜನಿಕರ ಸಹಾಯಕ್ಕೆ ಮುಂದಾಗಿದೆ.

     

     

  • ಪ್ರಧಾನಿ, ರಾಷ್ಟ್ರಪತಿ ಹಾರಾಟಕ್ಕೆ ಬಂದಿಳಿದ ವಿಶೇಷ ಏರ್ ಇಂಡಿಯಾ ಒನ್ ವಿಮಾನ- ವಿಡಿಯೋ

    ಪ್ರಧಾನಿ, ರಾಷ್ಟ್ರಪತಿ ಹಾರಾಟಕ್ಕೆ ಬಂದಿಳಿದ ವಿಶೇಷ ಏರ್ ಇಂಡಿಯಾ ಒನ್ ವಿಮಾನ- ವಿಡಿಯೋ

    ನವದೆಹಲಿ: ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್ ವಿಮಾನ ಇಂದು ಭಾರತ ತಲುಪಿದೆ.

    ಅಮೆರಿಕಾದಿಂದ ದೆಹಲಿಯ ಏರ್ ಪೋರ್ಟ್‍ಗೆ ಏರ್ ಇಂಡಿಯಾ ಒನ್ ಬಂದಿಳಿಯಿತು. ಆಗಸ್ಟ್ ನಲ್ಲಿಯೇ ಈ ವಿಮಾನ ಭಾರತಕ್ಕೆ ಹಸ್ತಾಂತರ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದೀಗ ಏರ್ ಇಂಡಿಯಾ ಒನ್ ದೆಹಲಿ ತಲುಪಿದೆ.

    ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ಎರಡು ಬೋಯಿಂಗ್-777 ವಿಮಾನಗಳನ್ನು ಏರ್ ಇಂಡಿಯಾ ಒನ್ ಹೆಸರಲ್ಲಿ ತಯಾರಿಸಲು ಆರ್ಡರ್ ನೀಡಲಾಗಿತ್ತು. ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಬೋಯಿಂಗ್-747 ವಿಮಾನವನ್ನು ಬಳಸಲಾಗುತ್ತಿದೆ. ಮತ್ತೊಂದು ಬೋಯಿಂಗ್-777 ಏರ್ ಇಂಡಿಯಾ ಒನ್ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.

    ಏರ್ ಇಂಡಿಯಾ ಒನ್ ವಿಶೇಷತೆ:
    ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ವಿಮಾನ ಹೊಂದಿದ್ದು, 1,300 ಕೋಟಿ ರೂ. ಮೌಲ್ಯದ ಅಲ್ಟ್ರಾ ಸೂಪರ್ ವಿಮಾನ ಇದಾಗಿದೆ. ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್, ಮಿನಿ ಮೆಡಿಕಲ್ ಸೆಂಟರ್ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮಥ್ರ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್ ಕ್ಲಾಸ್ ಸೀಟ್ ಅಳವಡಿಕೆ ಮಾಡಲಾಗಿದ್ದ, ವಾಯುಸೇನೆ ಪೈಲಟ್‍ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್ ಮಾಡದೆ ಮಧ್ಯ ಗಾಳಿಯಲ್ಲಿ ಆಡಿಯೋ ಮತ್ತು ವಿಡಿಯೋ ಸಂವಹನ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

  • ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ನವದೆಹಲಿ: ಬೆಂಗಳೂರಿನ ಮಾಜಿ ಚೀಫ್ ಟ್ರೇನಿಂಗ್ ಕಮಾಂಡರ್ ಏರ್ ಮಾರ್ಷಲ್ ಆರ್ ಕೆಎಸ್ ಭಡೌರಿಯಾ ಅವರು ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಲಿದ್ದಾರೆ.

    ಪ್ರಸ್ತುತ ವಾಯು ಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಭಡೌರಿಯಾ ಅವರನ್ನು ವಾಯು ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತಿದೆ. ಭಡೌರಿಯಾ ಅವರು ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಪಡೆದಿದ್ದಾರೆ. ಎಡಿಸಿಯ ಸುಪ್ರೀಂ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರು 25ನೇ ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಿದ್ದರು. ಸೆಪ್ಟೆಂಬರ್ 30ರಂದು ಧನೋವಾ ಅವರು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆ ಭಡೌರಿಯಾ ಅವರನ್ನು ಅವರ ಜಾಗಕ್ಕೆ ನೇಮಿಸಲಾಗಿದೆ.

    ಭಡೌರಿಯಾ ಅವರು ಈ ವರೆಗೆ 4,250 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಒಟ್ಟು 26 ವಿವಿಧ ಯುದ್ಧ ವಿಮಾನಗಳು ಹಾಗೂ ಸಾಗಣಿಕಾ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೆ, ಪ್ರಾಯೋಗಿಕ ಪರೀಕ್ಷಾ ಪೈಲೆಟ್, ಕ್ಯಾಟ್ ‘ಎ’ ಅರ್ಹ ಫ್ಲೈಯಿಂಗ್ ಇನ್‍ಸ್ಟ್ರಕ್ಟರ್ ಹಾಗೂ ಪೈಲೆಟ್ ಅಟ್ಯಾಕ್ ಇನ್‍ಸ್ಟ್ರಕ್ಟರ್ ಅನುಭವ ಹೊಂದಿದ್ದಾರೆ. ಈ ಹಿಂದೆ ಫ್ರೆಂಚ್ ವಾಯುಪಡೆಯ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ರಫೇಲ್ ವಿಮಾನವನ್ನು ಸಹ ಭಡೌರಿಯಾ ಹಾರಿಸಿದ್ದರು. ಭಡೌರಿಯಾ ಅವರು 1980ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‍ಗೆ ನಿಯೋಜನೆಗೊಂಡಿದ್ದರು.

  • ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ಬಳ್ಳಾರಿ: ಇಂಧನ ಖಾಲಿಯಾಗಿ ತುರ್ತು ಲ್ಯಾಂಡಿಂಗ್ ಆದ ಹೆಲಿಕಾಪ್ಟರ್ ಅನ್ನು ಸ್ಥಳೀಯರು ಬಸ್ ತಳ್ಳಿದಂತೆ ತಳ್ಳಿರುವ ಘಟನೆ ಸಂಡೂರು ತಾಲೂಕಿನ ಎಸ್.ಆರ್. ಪುರದಲ್ಲಿ ನಡೆದಿದೆ.

    ನೆರೆ ಸಂತ್ರಸ್ತರ ರಕ್ಷಣೆಗೆ ನೆರವಾಗಲೆಂದು ಬೆಂಗಳೂರಿನಿಂದ ಬೆಳಗಾವಿ ಕಡೆ ವಾಯುಸೇನೆಯ ಹೆಲಿಕಾಪ್ಟರ್ ಹೊರಟಿತ್ತು. ಮಾರ್ಗ ಮಧ್ಯೆ ಇಂಧನ ಕಡಿಮೆ ಇದೆ ಎನ್ನುವುದು ಪೈಲಟ್‍ಗೆ ಗೊತ್ತಾಗಿದೆ. ಕೂಡಲೇ ಪೈಲಟ್ ಸುರಕ್ಷಿತವಾಗಿ ಖಾಲಿ ಭೂಮಿಯಲ್ಲಿ ತುರ್ತು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಲ್ಯಾಂಡ್ ಆದ ವಿಚಾರ ತಿಳಿದು ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವಿಚಾರ ಗೊತ್ತಾಗಿ ಕುಡುತಿನಿ ಪಿಎಸ್‍ಐ ಮೊಹಮ್ಮದ್ ರಫಿ ನೇತೃತ್ವದಲ್ಲಿ ಪೊಲೀಸರು ಜಿಂದಾಲ್ ಫ್ಯಾಕ್ಟರಿಗೆ ತೆರಳಿ ವೈಮಾನಿಕ ಇಂಧನವನ್ನು ತಂದು ಹೆಲಿಕಾಪ್ಟರಿಗೆ ತುಂಬಿಸಿದ್ದಾರೆ.

    ಇಂಧನ ತುಂಬಿಸಿದ್ದರೂ ಹೆಲಿಕಾಪ್ಟರ್ ಮಣ್ಣಿನಲ್ಲಿ ಸ್ವಲ್ಪ ಹೂತು ಹೋಗಿತ್ತು. ಹೀಗಾಗಿ ಗ್ರಾಮಸ್ಥರು ಹೆಲಿಕಾಪ್ಟರ್ ಅನ್ನು ಬಸ್ಸು ತಳ್ಳಿದಂತೆ ದೂಡಿದ್ದಾರೆ. ಬಳಿಕ ಹೆಲಿಕಾಪ್ಟರ್ ಬೆಳಗಾವಿ ಕಡೆ ಪ್ರಯಾಣ ಬೆಳೆಸಿತು. ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹೋಗುವ ಭರದಲ್ಲಿ ಸಿಬ್ಬಂದಿ ಇಂಧನ ಎಷ್ಟಿದೆ ಎನ್ನುವುದನ್ನು ಪರಿಶೀಲನೆ ಮಾಡದ ಪರಿಣಾಮ ಭೂ ಸ್ಪರ್ಶ ಮಾಡಿತ್ತು.

     

  • ಯಲಹಂಕ ವಾಯುನೆಲೆಯಲ್ಲಿ 2 ದಿನ ಮೊಕ್ಕಾಂ ಹಾಕಿದ್ದ ನಕಲಿ ಐಎಎಸ್ ಅಧಿಕಾರಿ ಅರೆಸ್ಟ್!

    ಯಲಹಂಕ ವಾಯುನೆಲೆಯಲ್ಲಿ 2 ದಿನ ಮೊಕ್ಕಾಂ ಹಾಕಿದ್ದ ನಕಲಿ ಐಎಎಸ್ ಅಧಿಕಾರಿ ಅರೆಸ್ಟ್!

    ಬೆಂಗಳೂರು: ಐಎಎಸ್ ಅಧಿಕಾರಿ ಎಂದು ನಕಲಿ ದಾಖಲೆ ಸೃಷ್ಟಿಸಿ ನಗರದ ಯಲಹಂಕ ವಾಯುನೆಲೆಯಲ್ಲಿ 2 ದಿನಗಳ ಕಾಲ ಮೊಕ್ಕಾಂ ಹೂಡಿದ್ದ ವ್ಯಕ್ತಿಯನ್ನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.

    ಪೂರ್ಣಚಂದ್ರ ದಾಸ್ ಬಂಧಿತ ಆರೋಪಿಯಾಗಿದ್ದು, ಸೆಪ್ಟೆಂಬರ್ 25ರಂದು ಯಲಹಂಕ ವಾಯನೆಲೆಯ ಒಳಗೆ ಪತ್ನಿಯೊಂದಿಗೆ ಪ್ರವೇಶ ಪಡೆದಿದ್ದ. ತಾನು ದೆಹಲಿ ಮೂಲದ ಐಎಎಸ್ ಅಧಿಕಾರಿ ಎಂದು ಗುರುತಿನ ಚೀಟಿ ನೀಡಿದ್ದ. ಅಲ್ಲದೇ ತಾನು ಡೈರೆಕ್ಟರೇಟ್ ಪರ್ಸನಲ್ ಆಂಡ್ ಟ್ರೈನಿಂಗ್‍ನಲ್ಲಿ ಅಧಿಕಾರಿ ಎಂದು ಹೇಳಿದ್ದ. ಅಲ್ಲದೇ ಸೆ. 25 ರಿಂದ 26ರವರೆಗೆ ಮೆಸ್ ನಲ್ಲಿ ರೂಮ್ ನೀಡುವಂತೆ ಕೇಳಿದ್ದ. ಇದರ ಅನ್ವಯ ಆಫೀಸರ್ಸ್ ಮೆಸ್‍ನಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಐಎಎಸ್ ಅಧಿಕಾರಿ ಎಂದು ಹೇಳಿದ್ದ ಪೂರ್ಣಚಂದ್ರ ದಾಸ್ ನೀಡಿದ್ದ ಗುರುತಿನ ಚೀಟಿ ಹಾಗೂ ಸಹಿ ಮಾಡುವ ವೇಳೆ ಬರೆದಿದ್ದ ಹೆಸರಿನಲ್ಲಿ ಅಕ್ಷರ ದೋಷ ಇರುವುದನ್ನು ಅಧಿಕಾರಿಗಳು ಗಮನಿಸಿದ್ದು, ಇದರಿಂದ ಅನುಮಾನಗೊಂಡು ದೆಹಲಿ ಕಚೇರಿಗೆ ಸಂಪರ್ಕ ಮಾಡಿದ್ದಾರೆ. ಈ ವೇಳೆ ಪೂರ್ಣಚಂದ್ರ ದಾಸ್ ನಕಲಿ ಐಎಎಸ್ ಅಧಿಕಾರಿ ಎಂದು ತಿಳಿದುಬಂದಿದೆ.

    ಸದ್ಯ ಆರೋಪಿಯ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 419 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಬಂಧಿಸಲಾಗಿರುವ ಪೂರ್ಣಚಂದ್ರ ದಾಸ್ 2017 ರಲ್ಲೂ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್‍ನಲ್ಲಿ ತಂಗಿದ್ದ ಕುರಿತು ಮಾಹಿತಿ ಲಭಿಸಿದ್ದು, 5 ದಿನಗಳ ಕಾಲ ಐಎಎಸ್ ಅಧಿಕಾರಿ ಎಂದು ರೂಮ್ ಪಡೆದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪೂರ್ಣಚಂದ್ರ ದಾಸ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ನಕಲಿ ಅಧಿಕಾರಿಯ ಹೆಸರಿನಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv