Tag: ಏರ್ ಪೋರ್ಟ್

  • ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಡಿಕೆಶಿ ಆತ್ಮೀಯ ಸ್ವಾಗತ

    ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಡಿಕೆಶಿ ಆತ್ಮೀಯ ಸ್ವಾಗತ

    ಬೆಂಗಳೂರು: ನಗರದ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟ‌ರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರಿಗೆ ಆಗಮಿಸಿದರು.

    ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DK Shivakumar) ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇದನ್ನೂ ಓದಿ: ನನ್ನನ್ನು ಅರೆಸ್ಟ್ ಮಾಡಿ, ನನಗೆ VVIP ಟ್ರೀಟ್ಮೆಂಟ್ ಬೇಕಾಗಿಲ್ಲ: ಬಿ.ಕೆ ಹರಿಪ್ರಸಾದ್

    ಈ ಸಮಯದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್, ಭಾರತೀಯ ಜನತಾ ಪಾರ್ಟಿ ರಾಜ್ಯಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹಾಗೂ ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

    ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

    ಬೆಂಗಳೂರು: ಸಾರಿಗೆ ಇಲಾಖೆಯ ವತಿಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು‌ (KH Muniyappa) ಕೆಎಸ್‍ಆರ್ ಟಿಸಿ (KSRTC) ಮತ್ತು ಬಿಎಂಟಿಸಿ (BMTC) ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ಬಸ್‍ಗಳಿಗೆ ಹಸಿರು ನಿಶಾನೆ ತೋರಿದರು.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Airport) ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದು ಎಲ್ಲಾ ವಿಮಾನ ನಿಲ್ದಾಣಗಳಿಗಿಂತ ವಿಭಿನ್ನವಾಗಿದೆ ಮತ್ತು ಅತಿ ದೊಡ್ದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಂಚಾರ ಮಾಡಲು ಬಿಎಂಟಿಸಿ ಮತ್ತು ವಾಯುವಜ್ರದ ಎಲೆಕ್ಟ್ರಿಕ್ ಬಸ್‍ಗಳ ಸೇವೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಸ್ ಗಳನ್ನು ನೀಡಲು ಸಚಿವರು ಒಪ್ಪಿಗೆಯನ್ನು ನೀಡಿದರು.

    ಈಗಾಗಲೇ ಟರ್ಮಿನಲ್ 1 ರಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದು, ಟರ್ಮಿನಲ್ 2 ರಲ್ಲಿ ನಿಲ್ದಾಣ ಇರಲಿಲ್ಲ. ಹೀಗಾಗಿ ಪ್ರಯಾಣಿಕರು ಟರ್ಮಿನಲ್ 2 ರಿಂದ ಟರ್ಮಿನಲ್ 1 ಗೆ ಬೇರೆ ಬಸ್ ಮೂಲಕ ಆಗಮಿಸಿ ನಂತರ ವಾಯುವಜ್ರ ಬಸ್ ಏರಬೇಕಿತ್ತು. ಆದರೆ ಈಗ ಟರ್ಮಿನಲ್ 2 ರಲ್ಲೇ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಅನೂಕೂಲಕರವಾಗಿದೆ. ಇದನ್ನೂ ಓದಿ: ಅಂಬಾರಿ ಆನೆ ‘ಅರ್ಜುನ’ಗೆ ಕಾಟೇರ ಸಿನಿಮಾ ಅರ್ಪಣೆ

    ಇದೇ ವೇಳೆ ದೇವನಹಳ್ಳಿ ತಾಲೂಕಿನ ತೂಬಗೆರೆ ಪಂಚಾಯ್ತಿಗೆ ಬಸ್‍ಗಳ ಅನಾನುಕೂಲ ಇರುವುದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸಲು ಸಾರಿಗೆ ಸಚಿವರಿಗೆ ಮನವಿಯನ್ನು ನೀಡಲಾಯಿತು. ದೊಡ್ಡಬಳ್ಳಾಪುರ ತಾಲೂಕಿನ ಎಸ್‍ಎಸ್ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಬರುವುದರಿಂದ ಬಸ್ ವ್ಯವಸ್ಥೆಗಳು ಹಾಗೂ ಅನ್ನ ದಾಸೋಹ ಭವನವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದೂ ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿಯನ್ನು ನೀಡಲಾಯಿತು.

  • ಒಳ ಉಡುಪಿನಲ್ಲಿ ಚಿನ್ನ ಇಟ್ಟು ಸಾಗಾಣೆ- 55 ಲಕ್ಷ ಮೌಲ್ಯದ ಗೋಲ್ಡ್ ಸೀಜ್

    ಒಳ ಉಡುಪಿನಲ್ಲಿ ಚಿನ್ನ ಇಟ್ಟು ಸಾಗಾಣೆ- 55 ಲಕ್ಷ ಮೌಲ್ಯದ ಗೋಲ್ಡ್ ಸೀಜ್

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ (Customs Officers) ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನ ವಶಕ್ಕೆ ಪಡೆದಿದ್ದಾರೆ.

    ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್‍ಗೆ (Bengaluru Aiport) ಆಗಮಿಸಿದ್ದ ಪ್ರಯಾಣಿಕನನ್ನು ಚೆಕ್ಕಿಂಗ್ ಮಾಡಿದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಆತನನ್ನು ತೀವ್ರ ತಪಾಸಣೆ ನಡೆಸಿದಾಗ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಪ್ಯಾಂಟ್ ನ ಸೊಂಟದ ನಡುವೆ ಮರೆಮಾಚಿ ಸಾಗಾಟಕ್ಕೆ ಯತ್ನಿಸಿದ್ದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಸದ್ಯ ವಿದೇಶಿ ಪ್ರಯಾಣಿಕನ ಬಳಿ 55 ಲಕ್ಷ ಮೌಲ್ಯದ 907 ಗ್ರಾಂ ತೂಕದ ಚಿನ್ನ (Gold) ಸೀಜ್ ಮಾಡಿದ್ದಾರೆ.

  • Shivamogga Airport ನಾಮಕರಣ ವಿವಾದ- ಉದ್ಘಾಟನೆಗೆ ಡೇಟ್ ಫಿಕ್ಸ್ ಆದ್ರೂ ಫೈನಲ್ ಆಗಿಲ್ಲ ಹೆಸರು!

    Shivamogga Airport ನಾಮಕರಣ ವಿವಾದ- ಉದ್ಘಾಟನೆಗೆ ಡೇಟ್ ಫಿಕ್ಸ್ ಆದ್ರೂ ಫೈನಲ್ ಆಗಿಲ್ಲ ಹೆಸರು!

    ಶಿವಮೊಗ್ಗ: ಜಿಲ್ಲೆಯ ಏರ್ ಪೋರ್ಟ್‍ಗೆ ಗಣ್ಯರ ಹೆಸರು ನಾಮಕರಣ ಮಾಡುವ ವಿಚಾರ ಮತ್ತಷ್ಟು ಕಾವು ಪಡೆದಿದೆ. ಮೊದಲಿಗೆ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರು ಕೇಳಿಬಂದರೂ ಖುದ್ದು ಯಡಿಯೂರಪ್ಪನವರೇ ತಮ್ಮ ಹೆಸರು ಬೇಡ ಕುವೆಂಪು (kuvempu) ಹೆಸರಿಡಿ ಎಂದು ಪ್ರಸ್ತಾವನೆ ಇಟ್ಟಿದ್ರು. ಆದರೆ ಕುವೆಂಪು ಹೆಸರು ಬದಲಿಗೆ ಮತ್ತೊಬ್ಬರ ಹೆಸರಿಡಲು ಮಲೆನಾಡಲ್ಲಿ ಕೂಗು ಎದ್ದಿದೆ.

    ದಶಕಗಳ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಈಗ ರೆಡಿಯಾಗಿದೆ. ಎಲ್ಲಾ ರೀತಿಯಲ್ಲಿಯೂ, ಲೋಹದ ಹಕ್ಕಿ ಹಾರಾಟಕ್ಕೆ ವಿಮಾನ ನಿಲ್ದಾಣ ಸಜ್ಜಾಗಿದೆ. ನೈಟ್ ಲ್ಯಾಂಡಿಂಗ್ ಸೇರಿದಂತೆ, ದೇಶದಲ್ಲಿಯೇ, ಅತ್ಯಂತ ಕಡಿಮೆ ಖರ್ಚಿನಲ್ಲಿ ರೆಡಿಯಾಗಿರೋ ಈ ವಿಮಾನ ನಿಲ್ದಾಣವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಯೇ ಫೆಬ್ರವರಿ 27ರಂದು ಉದ್ಘಾಟನೆಗೊಳಿಸಲಿದ್ದಾರೆ. ಆದರೆ ಉದ್ಘಾಟನೆಗೆ ಡೇಟ್ ಫಿಕ್ಸ್ ಆದರೂ ಇನ್ನೂ ಏರ್ ಪೋರ್ಟ್ ಗೆ ನಾಮಕರಣವೇ ಫೈನಲ್ ಆಗಿಲ್ಲ. ಏರ್ ಪೋರ್ಟ್ ಗೆ ನನ್ನ ಹೆಸರು ಬೇಡ ಕುವೆಂಪು ಹೆಸರಿಡಿ ಅಂತ ಬಿಎಸ್‍ವೈ ಹೇಳಿರುವುದಕ್ಕೆ ಕೆಲವರು ಸಂತೋಷ ವ್ಯಕ್ತಪಡಿಸಿದ್ರೆ, ಜಿಲ್ಲೆಯ ಪ್ರಬಲ ಸಮುದಾಯವೊಂದು ಕುವೆಂಪು ನಾಮಕರಣಕ್ಕೆ ಅಪಸ್ವರ ಎತ್ತಿದೆ. ಇದನ್ನೂ ಓದಿ: ಮೋದಿಯಿಂದ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ: ಬಿಎಸ್‍ವೈ

    ವಿವಿಧ ಹೆಸರುಗಳನ್ನು ಸೂಚಿಸಿ ಹೋರಾಟ ಮಾಡಿದವರೂ ಕುವೆಂಪು ಹೆಸರನ್ನು ಸ್ವಾಗತಿಸಿದ್ದರು. ಆದರೆ ಇದೀಗ ಜಿಲ್ಲೆಯ ಬಹು ಸಂಖ್ಯಾತ ಆರ್ಯ ಈಡಿಗ ಸಮಾಜದವರು ಸಂಘಟನೆ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ನೇತೃತ್ವದಲ್ಲಿ ಕುವೆಂಪು ಹೆಸರನ್ನು ವಿರೋಧಿಸಿದ್ದಾರೆ. ಅಲ್ಲದೇ ಮಾಜಿ ಸಿ.ಎಂ ಮತ್ತು ವರ್ಣರಂಜಿತ ರಾಜಕಾರಣಿ ಎಂದೇ ಫೇಮಸ್ ಆಗಿದ್ದ ದಿ.ಎಸ್.ಬಂಗಾರಪ್ಪ ಹೆಸರನ್ನು ಏರ್ ಪೋರ್ಟ್ ಗೆ ಇಡಿ ಅಂತಾ ಒತ್ತಾಯಿಸಿದ್ದಾರೆ.

    ಒಟ್ಟಾರೆ ಜನ ಸೇವೆಗೆ ಶಿವಮೊಗ್ಗದ ಏರ್ ಪೋರ್ಟ್ ಉದ್ಘಾಟನೆ ಏನೋ ಆಗ್ತಿದೆ. ಆದರೆ ಆ ಏರ್ ಪೋರ್ಟ್ ಅನ್ನು ಯಾವ ಹೆಸರಿನಲ್ಲಿ ಕರೆಯಬೇಕು ಎಂಬುದು ಮಾತ್ರ ಇನ್ನೂ ಫೈನಲ್ ಆಗಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ವಾಷಿಂಗ್ಟನ್: ಏರ್‌ಪೋರ್ಟ್‍ನಲ್ಲಿ (Airport) ನಡೆದ ಏರ್ ಶೋನಲ್ಲಿ (Airshow) ಪರಸ್ಪರ 2 ವಿಮಾನಗಳು (Fighter Plane) ಡಿಕ್ಕಿ ಹೊಡೆದು ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್‍ನಲ್ಲಿ ನಡೆದಿದೆ.

    ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.

    2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್‌ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಈ ವೇಳೆ ವಿಮಾನವೆರಡಕ್ಕೂ ಬೆಂಕಿ ಹೊತ್ತಿಕೊಂಡು ಛಿದ್ರವಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಎರಡು ವಿಮಾನಗಳು ಯುದ್ಧ ಕಾಲದ ವಿಮಾನಗಳಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?

    Live Tv
    [brid partner=56869869 player=32851 video=960834 autoplay=true]

  • ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

    ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

    ಬೆಂಗಳೂರು: ಯುರೋಪ್, ಅಮೆರಿಕ ದೇಶಗಳಲ್ಲಿ ಗಣನೀಯವಾಗಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ಕೋವಿಡ್-19 ನಾಲ್ಕನೇ ಅಲೆಯ ಭೀತಿಯಲ್ಲಿರುವ ಭಾರತಕ್ಕೂ ಇದರ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ಹೌದು. ಕೋವಿಡ್ ಆತಂಕದ ನಡುವೆ ಇದೀಗ ಸಿಲಿಕಾನ್ ಸಿಟಿಗೆ ಮಂಕಿ ಪಾಕ್ಸ್ (Monkey Pox) ಭಯ ಶುರುವಾಗಿದೆ. ಹೀಗಾಗಿ ಏರ್ ಪೋರ್ಟ್ ಪ್ರಯಾಣಿಕರ ಮೇಲೆ ಕಣ್ಗಾವಲು ಇಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

    MONKEY

    ಎಲ್ಲಾ ಕಡೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಇದುವರೆಗೆ ರಾಜ್ಯ ರಾಜಧಾನಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಕಂಡು ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಏನಿದು ಮಂಕಿ ಪಾಕ್ಸ್..?: ಈ ವೈರಸ್ ಸಿಡುಬು ರೋಗಕ್ಕೆ ಕಾರಣವಾದ ವೆರಿಯೊಲಾ ವೈರಸ್ (Variola Virus) ಹಾಗೂ ಸಿಡುಬು ರೋಗಕ್ಕೆ ಬಳಸಲಾದ ವ್ಯಾಕ್ಸಿನಿಯಾ ವೈರಸ್‍ನ (Vaccinia virus) ಆರ್ಥೋಪಾಕ್ಸ್ ವೈರಸ್‍ (Orthomyxo Viruse)ಗೆ ಸೇರಿದ್ದಾಗಿದೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಲಕ್ಷಣಗಳೇನು..?: ಮೈಮೇಲೆ ಕೆಂಪು ದದ್ದುಗಳ ಜೊತೆಗೆ ಜ್ವರದ ರೋಗಲಕ್ಷಣಗಳು ಕಂಡುಬರುತ್ತದೆ. ಜ್ವರ, ನೆಗಡಿ, ತಲೆನೋವು, ಮೈಕೈ ನೋವು ಮುಂತಾ ಸಾಮಾನ್ಯ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ.

    ಸ್ಮಾಲ್‍ಪಾಕ್ಸ್ ಲಸಿಕೆಯಿಂದ ರಕ್ಷಣೆ: ಮಂಕಿಪಾಕ್ಸ್ ವೈರಸ್‍ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ ಸ್ಮಾಲ್‍ಪಾಕ್ಸ್ ಗೆ ಬಳಸುವ ಲಸಿಕೆಯು ಶೇ.85 ರಷ್ಟು ರಕ್ಷಣೆ ನೀಡುತ್ತದೆ. ಈ ಎರಡೂ ವೈರಸ್‍ಗಳ ಮಧ್ಯೆ ಬಹಳ ಸಾಮ್ಯತೆ ಇದೆ. ಇಲ್ಲಿಯವರೆಗೆ, ವೈರಸ್ ಹೆಚ್ಚಾಗಿ ಆಫ್ರಿಕಾಕ್ಕೆ ಸೀಮಿತವಾಗಿತ್ತು. ಈಗ ಯುರೋಪ್‍ನ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್‍ಲ್ಯಾಂಡ್ಸ್, ಇಟಲಿ ಮತ್ತು ಸ್ವೀಡನ್‍ಗಳಲ್ಲಿ ಖಚಿತವಾಗಿದೆ.

    ಗಾಳಿಯಲ್ಲಿ ಹರಡುವುದಿಲ್ಲ: ಮಂಕಿಪಾಕ್ಸ್ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಅಲ್ಲದೆ ಲೈಂಗಿಕ ಸಂಪರ್ಕ ಇದ್ದವರಲ್ಲೂ ಪತ್ತೆಯಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ಗಾಯಗಳು, ದೇಹದಿಂದ ಹೊರಬರುವ ದ್ರವಾಂಶ, ಉಸಿರಾಟ ಹಾಗೂ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

     

  • ಬಾಂಗ್ಲಾದಿಂದ ಬಂದು ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಹಿಳೆ ಅರೆಸ್ಟ್!

    ಬಾಂಗ್ಲಾದಿಂದ ಬಂದು ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಹಿಳೆ ಅರೆಸ್ಟ್!

    ಬೆಂಗಳೂರು: ಬಾಂಗ್ಲಾ ದೇಶದಿಂದ ಬಂದು ಭಾರತದಲ್ಲಿ ಹಿಂದೂ ಆಗಿ ಅಕ್ರಮವಾಗಿ ಭಾರತೀಯ ಸಾರ್ವಭೌಮತ್ವ ಪಡೆದಿದ್ದ, ಮಹಿಳೆಯೊಬ್ಬಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ರೋನಿ ಬೇಗಂ ಅಕ್ರಮವಾಗಿ ಗಡಿ ನುಸುಳಿದ್ದ ಮಹಿಳೆ. ಬೇಗಂ 2006 -2007 ರಲ್ಲಿ ಅಕ್ರಮವಾಗಿ ಭಾರತದ ಗಡಿ ನುಸುಳಿದ್ದು, 2015 ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಅವಳು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದಳು. ಮಹಿಳೆಯು ನಿತೀನ್ ಕುಮಾರ್ ಎಂಬಾತನನ್ನು ಬಾಂಬೆಯಲ್ಲಿ ವಿವಾಹವಾಗಿದ್ದಳು. ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಹೆಸರು ಬದಲಿಸಿಕೊಂಡು ಪಾಯಲ್ ಗೋಷ್ ಎಂದು ಮರು ನಾಮಕರಣ ಮಾಡಿಕೊಂಡಿದ್ದಳು. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ

    ನಕಲಿ ದಾಖಲೆ ಕೊಟ್ಟು ಭಾರತದ ಪ್ರಜೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಳು. ಈ ವೇಳೆ ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮಹಿಳೆಯು ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಕ್ರಿಯೇಟ್ ಮಾಡಿಕೊಂಡಿದ್ದು, ವೆಸ್ಟ್ ಬೆಂಗಾಲ್ ಏರ್ ಪೋರ್ಟ್‍ನಲ್ಲಿ ಲಾಕ್ ಆಗಿದ್ದಾಳೆ. ಇದನ್ನೂ ಓದಿ: ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್‌ ಆಗಿ ಬಳಸುತ್ತೇನೆ

    ಈ ಕುರಿತು ಎಫ್‍ಆರ್‍ಆರ್‍ಒ ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂನನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರನ್ನು ಸಹ ಹುಡುಕಲು ಪೊಲೀಸರು ಬಲೆ ಬೀಸಿದ್ದಾರೆ.

  • ಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್ ಇರುತ್ತೆ: ಸುಧಾಕರ್

    ಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್ ಇರುತ್ತೆ: ಸುಧಾಕರ್

    ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆ ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗಟಿವ್ ಬಂದರೂ ಒಂದು ವಾರ ಕ್ವಾರಂಟೈನ್‍ನಲ್ಲಿರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

    ಕೆಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬೊಟ್ಸ್ ವಾನಾ ಹೊಸ ರೂಪಾಂತರಿ ತಳಿಯ ಬಗ್ಗೆ ಮಾತನಾಡಿದ ಅವರು, ಒಂದು ವಾರದಿಂದ ದಕ್ಷಿಣ ಆಫ್ರಿಕಾ, ಇಸ್ರೆಲ್, ಹಾಂಕಾಂಗ್ ನಲ್ಲಿ ಹೊಸ ತಳಿ ಪತ್ತೆಯಾಗಿದೆ. 9 ತಿಂಗಳಿಂದ ಡೆಲ್ಟಾ ಬಿಟ್ಟು ರೂಪಂತಾರಗೊಂಡ ವೈರಸ್ ಕಂಡು ಬಂದಿರಲಿಲ್ಲ. ಇದೀಗ ಕೊರೊನಾ ಹೊಸ ರೂಪಾಂತರಿ ತಳಿಗೆ ಒಮಿಕ್ರಾನ್ ಎಂದು ನಾಮಕರಣ ಮಾಡಿದ್ದಾರೆ. ಸಮುದಾಯಕ್ಕೆ ಬಂದರೆ ಈ ವೈರಸ್ ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಇದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದನ್ನೂ ಓದಿ: ಹೊಸ ಕೋವಿಡ್ ತಳಿಯಿಂದ ತಲ್ಲಣ – ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ

    ಶುಕ್ರವಾರ ನಿನ್ನೆ ಸಭೆ ನಡೆಸಿದ್ದೇವೆ. ಏರ್ ಪೋರ್ಟ್‌ಗಳಲ್ಲಿ ಕೂಡ ಟೆಸ್ಟ್ ಮಾಡಲಾಗುತ್ತಿದೆ. ನೆಗಟಿವ್ ಬರುವ ತನಕ ಹೊರಗಡೆ ಬರುವ ಹಾಗಿಲ್ಲ. ಈಗಾಗಲೇ ಮಾರ್ಗ ಸೂಚಿ ಪ್ರಕಟ ಮಾಡಿದ್ದೇವೆ. ನೆಗಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಿದ್ದೇವೆ.

    ಧಾರವಾಡ ವಿದ್ಯಾರ್ಥಿಗಳ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ. ಇಂಟರ್ ನ್ಯಾಷನಲ್ ಸ್ಕೂಲ್‍ನ 30 ಮಕ್ಕಳಿಗೆ ಪಾಸಿಟಿವ್ ಆಗಿದೆ. ಆದರೆ ಯಾರಲ್ಲೂ ಗಂಭೀರ ಗುಣಲಕ್ಷಣಗಳು ಕಂಡುಬಂದಿಲ್ಲ. ಇನ್ನೂ 45 ಲಕ್ಷ ಜನ ಲಸಿಕೆ ತೆಗದುಕೊಂಡಿಲ್ಲ. ರಾಷ್ಟ್ರೀಯ ಸರಾಸರಿಯಲ್ಲಿ ಮೊದಲ ಡೋಸ್ 90 ರಷ್ಟು ಲಸಿಕೆಯಾಗಿದೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

    ಈ ಹೊಸ ತಳಿಯು ಈ ಹಿಂದಿನ ರೋಗಲಕ್ಷಣಗಳನ್ನೇ ಹೊಂದಿದೆ. ಇದೊಂದು ವೇಗವಾಗಿ ಹರಡುವ ರೂಪಾಂತರ ತಳಿಯಾಗಿದ್ದು, ನಾಲ್ಕು ರಾಷ್ಟ್ರಗಳಲ್ಲಿ ಈ ವೈರಸ್ ಹರಡಿದೆ. ಹೀಗಾಗಿ ಅಲ್ಲಿಂದ ಬರುವ ಪ್ರಯಾಣಿಕ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದಿದ್ದಾರೆ. ದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

    ಇದೇ ವೇಳೆ ನಾನ್ ಕೋವಿಡ್ ಮೆಡಿಸಿನ್ ಕೊರತೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗಳಲ್ಲಿ ಡಿಹೆಚ್‍ಓಗಳ ಅಕೌಂಟ್‍ಗೆ 38 ಕೋಟಿ ಹಣ ಕಳಿಸಿಕೊಟ್ಟಿದ್ದೇವೆ. ಜನರಲ್ ಮೆಡಿಸಿನ್‍ಗೆ 2-3 ದಿನಗಳಲ್ಲಿ ಔಷಧಿ ಲಭ್ಯವಾಗಲಿದೆ. ವೈರಸ್ ಹರಡಿರುವ ದೇಶಗಳಿಂದ ಬರುವ ಪ್ರಯಾಣಿಕರ ಟೆಸ್ಟಿಂಗ್ ನಡೆಸಿ, 250-300 ಜನರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಹೊಸ ಕೋವಿಡ್ ತಳಿಯಿಂದ ತಲ್ಲಣ – ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ

    ಬೆಂಗಳೂರು: ಕೋವಿಡ್ ನಿಯಂತ್ರಣ, ಲಸಿಕೆ ವಿಚಾರ ಹಾಗೂ ಹೊಸ ತಳಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಸಂಜೆ ಸಭೆ ನಡೆಸಲಿದ್ದಾರೆ.

    ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ನಿದ್ದೆಗೆಡಿಸಿದೆ. ಹೊಸ ರೂಪಾಂತರ ತಳಿಗೆ ‘ಒಮಿಕ್ರಾನ್ ಅಥವಾ ಬಿ.1.1.529’ ಹೆಸರಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೂಪಾಂತರಿ ತಳಿ ಕಳವಳಕಾರಿ ಎಂದು ಘೋಷಿಸಿದೆ.

    ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸಂಜೆ 4 ಗಂಟೆಗೆ ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲಿದ್ದಾರೆ. ಜೊತೆಗೆ ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು, ಬೆಂಗಳೂರು ನಗರ ಡಿಸಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಸೂಚನೆ ನೀಡಿದ್ದಾರೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೂ ಕೂಡಾ ಸಭೆಗೆ ಆಹ್ವಾನಿಸಿದ್ದಾರೆ. ದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

    ವಿಶ್ವದ ನಾಲ್ಕು ರಾಷ್ಟ್ರಗಳಲ್ಲಿ ಓಮಿಕ್ರೋನ್ ತನ್ನ ಆರ್ಭಟ ಶುರು ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ. ದಕ್ಷಿಣ ಆಫ್ರಿಕಾ, ಬೊಟ್ಸ್ ವಾನಾ, ಸಿಂಗಾಪುರ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ಏರ್ ಪೋರ್ಟ್‌ನಲ್ಲಿ ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ನೆಗೆಟಿವ್ ಇದ್ದರೂ ಕೂಡ ಒಂದು ವಾರ ಕ್ವಾರಂಟೈನ್ ಗೊಳಿಸಲಾಗುತ್ತಿದೆ ಹಾಗೂ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿಯ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪಡೆಯಲಿದ್ದಾರೆ. ದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

    ಸೋಂಕು ಹಬ್ಬಿದ ರಾಷ್ಟ್ರಗಳಿಂದ ಬಂದ ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡರೆ, ಅವರ ಸ್ಯಾಂಪಲ್ಸ್ ಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ.

  • ಮಳೆಗೆ ರಸ್ತೆ ಕಾಣದೇ ಬೆಂಗ್ಳೂರಲ್ಲಿ ಭೀಕರ ಅಪಘಾತ – ಏರ್ ಪೋರ್ಟ್ ರೋಡಲ್ಲಿ ಮೂವರು ದುರ್ಮರಣ

    ಮಳೆಗೆ ರಸ್ತೆ ಕಾಣದೇ ಬೆಂಗ್ಳೂರಲ್ಲಿ ಭೀಕರ ಅಪಘಾತ – ಏರ್ ಪೋರ್ಟ್ ರೋಡಲ್ಲಿ ಮೂವರು ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ಅವಾಂತರಗಳು ಮುಂದುವರಿದಿದೆ. ಭಾರೀ ವರ್ಷಧಾರೆಗೆ ಬೆಂಗಳೂರು ಏರ್ ಪೋರ್ಟ್ ರೋಡ್‍ನ ಬೆಟ್ಟಹಲಸೂರು ಕ್ರಾಸ್ ಬಳಿ ರಸ್ತೆ ಕಾಣದೆ ಡಿವೈರ್ ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಕಾರು ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಬೆಟ್ಟಹಲಸೂರು ಬಳಿಯ ಫ್ಲೈ ಓವರ್ ಮೇಲೆ ಅಪಘಾತ ಸಂಭವಿಸಿದೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಳೆಯಿಂದಾಗಿ ರಸ್ತೆ ಕಾಣದೆ ಡಿವೈಡರ್‍ಗೆ ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿನ ಮೇಲೆ ಕಾರು ಬಿದ್ದಿದೆ. ಇದನ್ನೂ ಓದಿ: ತಿರುಪತಿಯಲ್ಲಿ ಪ್ರವಾಹ- ಜಲಪಾತದಂತೆ ಧುಮ್ಮಿಕ್ಕುತ್ತಿದೆ ಮಳೆ ನೀರು, ಕೊಚ್ಚಿ ಹೋಗ್ತಿವೆ ವಾಹನಗಳು!

    ಮಳೆ ಹಿನ್ನೆಲೆ ಕಾರಿನಲ್ಲಿದ್ದ ಮೃತದೇಹ ತೆಗೆಯಲು ಹರಸಾಹಸಪಟ್ರು. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ