Tag: ಏರ್ ಕ್ರಾಫ್ಟ್

  • ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಕಾಬೂಲ್: ತಾಲಿಬಾನಿಗಳು ನೀಡಿದ ಎಚ್ಚರಿಕೆಯಂತೆ ಅಮೆರಿಕ ಸೇನೆ ಸೋಮವಾರ ಕಾಬೂಲ್ ನಿಂದ ತೆರಳಿದ್ದಾರೆ. ಆದ್ರೆ ತೆರಳುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿ 73 ಏರ್ ಕ್ರಾಫ್ಟ್ ಗಳನ್ನು ಬಳಕೆ ಬರದಂತೆ ಮಾಡಿ ಹೋಗಿದ್ದಾರೆ. ಇತ್ತ ಅಮೆರಿಕ ಸೈನಿಕರ ವಿಮಾನ ಟೇಕಾಫ್ ಆಗುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಏರ್ ಪೋರ್ಟ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    73 ಏರ್ ಕ್ರಾಫ್ಟ್ ಗಳನ್ನು ಹಮಿದ್ ಕರ್ಜಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಆದ್ರೆ ಇನ್ಮುಂದೆ ಈ ಏರ್ ಕ್ರಾಫ್ಟ್ ಬಳಕೆಗೆ ಬರದಂತೆ ನಿಷ್ಕ್ರಿಯಗೊಳಿಸಲಾಗಿದೆ. ಈ ವಿಮಾನಗಳು ಮುಂದೆ ಹಾರಾಡುವ ಸ್ಥಿತಿಯಲ್ಲಿಲ್ಲ. ಇವುಗಳನ್ನು ಮತ್ತೆ ರಿಪೇರಿ ಮಾಡಲು ಸಹ ಸಾಧ್ಯವಿಲ್ಲ ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನೆಥ್ ಮೌಕೆಂಜಿ ಹೇಳಿದ್ದಾರೆ.

    ಅಮೆರಿಕ ಸೇನೆ ಸುಮಾರು 70 ಮೇನ್ ರಿಜಿಸ್ಟೆಂಟ್ ಆಂಬುಶ್ ಪ್ರೊಟೆಕ್ಷನ್ (MRAP) ವೆಹಿಕಲ್ ಗಳನ್ನು ಕಾಬೂಲ್ ವಿಮಾನನಿಲ್ದಾಣದಲ್ಲಿ ಬಿಟ್ಟು ತೆರಳಿದೆ. ಈ ವೆಹಿಕಲ್ ಗಳು ಐಇಡಿ ದಾಳಿ ಮತ್ತು ಶತ್ರುಗಳ ದಾಳಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ. ಒಂದು ವೆಹಿಕಲ್ ಬೆಲೆ ಸುಮಾರು 10 ಲಕ್ಷ ಡಾಲರ್ ಗೂ ಅಧಿಕವಾಗಿದೆ. ಆದ್ರೆ ಇವುಗಳನ್ನು ಸಹ ಅಮೆರಿಕ ಬಳಕೆ ಬಾರದಂತೆ ನಿಷ್ಕ್ರಿಯ ಮಾಡಿದೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

    ಅಮೆರಿಕ ಸೇನೆ ತೆರಳುತ್ತಿದ್ದಂತೆ ರಾತ್ರಿ 12 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣ ಪ್ರವೇಶಿಸಿದ ತಾಲಿಬಾನಿಗಳು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಇನ್ಮುಂದೆ ಸಂಪೂರ್ಣ ಅಫ್ಘಾನಿಸ್ತಾನ ನಮ್ಮದು. ಇದು ನಮ್ಮೆಲ್ಲರ ಗೆಲುವು, ಇದುವೆ ಸ್ವತಂತ್ರ ದಿನ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಣ ಎಂದು ತಾಲಿಬಾನಿಗಳು ಘೋಷಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

  • ಏರ್ ಕ್ರಾಫ್ಟ್ ದುರಂತ- ಸ್ಥಳೀಯರಿಗೆ ಧನ್ಯವಾದ ತಿಳಿಸಿದ್ರು ಗಾಯಾಳು ಪೈಲಟ್

    ಏರ್ ಕ್ರಾಫ್ಟ್ ದುರಂತ- ಸ್ಥಳೀಯರಿಗೆ ಧನ್ಯವಾದ ತಿಳಿಸಿದ್ರು ಗಾಯಾಳು ಪೈಲಟ್

    ಬೆಂಗಳೂರು: ನಗರದ ಯಲಹಂಕ ವಾಯನೆಲೆಯಲ್ಲಿ ನಡೆದಿದ್ದ ಏರ್ ಕ್ರಾಫ್ಟ್ ದುರಂತ ಪ್ರಕರಣದಲ್ಲಿ ಗಾಯಗೊಂಡಿದ್ದ ಪೈಲಟ್ ವಿಜಯ್ ಅವರು ಸ್ಥಳೀಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಏರ್ ಶೋಗೆ ತಾಲೀಮು ನಡೆಸುವ ವೇಳೆ ಎರಡು ಸೂರ್ಯಕಿರಣ್ ಲಘು ವಿಮಾನ ಪರಸ್ಪರ ಡಿಕ್ಕಿಯಾಗಿ ಇಸ್ರೋ ಲೇಔಟ್‍ನಲ್ಲಿ ಕೆಳಗೆ ಬಿದ್ದಿದ್ದವು. ಈ ವೇಳೆ ಅಲ್ಲಿದ್ದ ಸ್ಥಳೀಯರಾದ ಚೇತನ್ ಮತ್ತು ಸ್ನೇಹಿತರು ಪೈಲಟ್ ವಿಜಯ್ ಅವರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದರು. ಇದನ್ನು ಸ್ಮರಿಸಿಕೊಂಡ ಪೈಲಟ್ ವಿಜಯ್ ಅವರು ಶುಕ್ರವಾರ ಕಮಾಂಡೋ ಆಸ್ಪತ್ರೆಗೆ ಅವರನ್ನು ಬರಮಾಡಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ನಡೆದಿದ್ದೇನು?
    ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿತ್ತು. ನಗರದ ಯಲಹಂಕದಲ್ಲಿ ಎರಡು ಸೂರ್ಯ ಕಿರಣ್ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕುರುಳಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv