ನವದೆಹಲಿ: ಅಹಮದಾಬಾದ್‌ನಲ್ಲಿ 270 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತ ಕುರಿತು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ವರದಿಯನ್ನು ಪ್ರಕಟಿಸಿದೆ.
ಜೂ.12 ರಂದು ಬೋಯಿಂಗ್ ಡ್ರೀಮ್‌ಲೈನರ್ 787-8 ಅಪಘಾತಕ್ಕೀಡಾಗಲು ಕಾರಣ ಏನೆಂಬುದು ಯಕ್ಷ ಪ್ರಶ್ನೆಯಾಗಿತ್ತು. ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿಮಾನವು ಹಾರಾಟದ ಸಮಯದಲ್ಲಿ ಗರಿಷ್ಠ ವೇಗ ಪಡೆದುಕೊಂಡ ಹೊತ್ತಿಗೆ ಎಂಜಿನ್-1 ಮತ್ತು ಎಂಜಿನ್-2ಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದು ‘ರನ್’ ಸ್ಥಿತಿಯಿಂದ ‘ಕಟ್‌ಆಫ್’ ಸ್ಥಿತಿಗೆ ತಲುಪಿದೆ. ಈ ಎರಡೂ ಎಂಜಿನ್‌ಗಳು ಒಂದು ಸೆಕೆಂಡು ಅಂತರದಲ್ಲಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಕಾಕ್‌ಪಿಟ್‌ನ ಸಂಭಾಷಣೆಯು ಬ್ಲ್ಯಾಕ್‌ಬಾಕ್ಸ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ
ನವದೆಹಲಿ: 270 ಜನರ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತದ (Ahmedabad Plane Crash) ನಂತರದ ದಿನಗಳಲ್ಲಿ ಕರ್ತವ್ಯದ ಸ್ಥಳದಲ್ಲಿ ಪಾರ್ಟಿ ಮೂಡ್‌ನಲ್ಲಿದ್ದ ಏರ್ ಇಂಡಿಯಾ (Air India) ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಅಹಮದಾಬಾದ್‌ನಲ್ಲಿ 270 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತವಾಗಿ ಕೆಲ ದಿನಗಳೂ ಕಳೆದಿರಲಿಲ್ಲ. ಕರಾಳತೆ ಇನ್ನೂ ಮಾಸದಿದ್ದರೂ, ಗುರುಗ್ರಾಮ್‌ನ AISATS ಕಚೇರಿಯಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ಏರ್ ಇಂಡಿಯಾ 171 ವಿಮಾನದ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳೊಂದಿಗೆ ಕಂಪನಿಯು ನಿಲ್ಲುತ್ತದೆ ಎಂದು AISATS ವಕ್ತಾರರು ತಿಳಿಸಿದ್ದಾರೆ. ಅಲ್ಲದೇ, ತಮ್ಮದೇ ಸಿಬ್ಬಂದಿಯ ಈ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಂತಹ ಸಂಭ್ರಮಕ್ಕೆ ಇದು ಸೂಕ್ತ ಸಮಯವಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!
ಇಂತಹ ನಡವಳಿಕೆಯು ನಮ್ಮ ಮೌಲ್ಯಗಳಿಗೆ ತಕ್ಕುದಲ್ಲ. ನಾವು ಸಹಾನುಭೂತಿ, ವೃತ್ತಿಪರತೆ ಮತ್ತು ಹೊಣೆಗಾರಿಕೆಗೆ ಬದ್ಧರಾಗಿದ್ದೇವೆ. ಈ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ದೆಹಲಿಯಿಂದ (Delhi) ಜಮ್ಮುವಿಗೆ (Jammu) ಹೊರಟಿದ್ದ ಏರ್ ಇಂಡಿಯಾ (Air India) ವಿಮಾನ ತಾಂತ್ರಿಕ ದೋಷದಿಂದಾಗಿ ದೆಹಲಿಗೆ ವಾಪಸಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ IX2564 ವಿಮಾನವೊಂದು ಭಾನುವಾರ ದೆಹಲಿಯಿಂದ ಜಮ್ಮುವಿಗೆ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷದಿಂದಾಗಿ ಲ್ಯಾಂಡಿಂಗ್ ಆಗದೇ ದೆಹಲಿಗೆ ಹಿಂದಿರುಗಿದೆ. ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿ, ದೆಹಲಿಯಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿತು.ಇದನ್ನೂ ಓದಿ: ನಾವು, ನಮ್ಮ ಕುಟುಂಬ ಇ.ಡಿ ಎದುರಿಸಲು ರೆಡಿ ಇದ್ದೇವೆ: ಡಿಕೆಶಿ
ಅದೇ ದಿನ ಭಾನುವಾರ ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಹಕ್ಕಿ ಡಿಕ್ಕಿಯಾಗಿದ್ದಕ್ಕೆ ರದ್ದುಗೊಳಿಸಲಾಯಿತು. ಬಳಿಕ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗಿದೆ.
ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗಳಿಗಾಗಿ ಹಾಗೂ ವಿಮಾನ ಹಾರಾಟದ ತೊಂದರೆಗಳ ಪರಿಶೀಲನೆಗಾಗಿ ತಾತಾಲ್ಕಿಕವಾಗಿ ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಯಾವುದೇ ತೊಂದರೆಯಾಗದಂತೆ ನೊಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಹಳದಿ ಲುಕ್‌ನಲ್ಲಿ ಬಿಂದಾಸ್ ಸ್ಟೆಪ್ ಹಾಕಿದ ವೈಷ್ಣವಿ ಗೌಡ!
ನವದೆಹಲಿ: 168 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಇಂಡಿಗೋ (IndiGo Flight) ವಿಮಾನ ಹಾರಾಟದ ಸಮಯದಲ್ಲೇ ‘ಮೇಡೇ’ ಘೋಷಿಸಿದೆ. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
168 ಪ್ರಯಾಣಿಕರಿದ್ದ ಇಂಡಿಗೋದ ಗುವಾಹಟಿ-ಚೆನ್ನೈ ವಿಮಾನವು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ನಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಪೈಲಟ್‌ಗಳು ‘ಮೇಡೇ’ ಘೋಷಿಸಿದ ಕೆಲ ಹೊತ್ತಲ್ಲೇ ಈ ದುರಂತ ಸಂಭವಿಸಿತ್ತು. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್ ಕೊಟ್ಟ ಕೊನೆಯ ಸಂದೇಶ
ಗುರುವಾರ ಈ ಘಟನೆ ನಡೆದಿದೆ. ಇಂಧನವು ತೀರಾ ಕಡಿಮೆ ಇದ್ದ ಇಂಡಿಗೋ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಪತ್ತಿನ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ಸಿಬ್ಬಂದಿಗೆ ಮಾಹಿತಿ ನೀಡಿತು. ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ವಿಮಾನವು ರಾತ್ರಿ 8:20 ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?
ಮಧುರೈಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಆಕಾಶದಲ್ಲೇ ತಾಂತ್ರಿಕ ದೋಷವನ್ನು ಅನುಭವಿಸಿತು. ಸುಮಾರು 168 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕೆಳಗಿಳಿಸಲಾಯಿತು.
ನವದೆಹಲಿ: ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕುವಂತೆ ಏರ್ ಇಂಡಿಯಾಗೆ (Air India) ನಾಗರಿಕ ವಿಮಾನಯಾನ ನಿಯಂತ್ರಕ (DGCA) ಸೂಚಿಸಿದೆ.
ವಿಮಾನ ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳಿಂದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣ ತೆಗೆದುಹಾಕುವಂತೆ ಆದೇಶಿಸಲಾಗಿದೆ.
ಹೆಸರು ಬಹಿರಂಗಪಡಿಸದ ಮೂವರು ಅಧಿಕಾರಿಗಳ ವಿರುದ್ಧ ವಿಳಂಬ ಮಾಡದೇ ಆಂತರಿಕ ತನಿಖೆ ನಡೆಸಬೇಕು. ಒಂದು ವೇಳೆ ವಿಫಲವಾದರೆ ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣೆಯ ಅನುಮತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಕ್ಕೆ ಕಾರಣವಾಗಬಹದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಹಾಸನ ಡಿಸಿ
ನಿಯಂತ್ರಕ ಹೊರಡಿಸಿದ ಶೋಕಾಸ್ ನೋಟಿಸ್ ಪ್ರಕಾರ, ಮೇ 16 ಮತ್ತು ಮೇ 17 ರಂದು ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ಏರ್ ಇಂಡಿಯಾ ನಿರ್ವಹಿಸುವ ಎರಡು ವಿಮಾನಗಳು – ಎಐ 133 – ಗರಿಷ್ಠ ಹಾರಾಟದ ಕರ್ತವ್ಯ ಸಮಯ ಮಿತಿ 10 ಗಂಟೆಗಳನ್ನು ಮೀರಿತ್ತು ಎಂದು ತಿಳಿಸಿದೆ.
ಶೋಕಾಸ್ ನೋಟಿಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿತದ್ದು 7 ದಿನಗಳ ಒಳಗಡೆ ಉತ್ತರಿಸಬೇಕೆಂದು ಏರ್ ಇಂಡಿಯಾಗೆ ಸೂಚಿಸಿದೆ.
ಅಹಮದಾಬಾದ್: ಏರ್ ಇಂಡಿಯಾವಿಮಾನ ದುರಂತದಲ್ಲಿ (Air India Crash) ಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಒಟ್ಟು 215 ಡಿಎನ್‌ಎ (DNA) ವರದಿಗಳು ಮ್ಯಾಚ್ ಆಗಿವೆ. ಈ ಪೈಕಿ 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್, 32 ಬ್ರಿಟಿಷ್ ಮತ್ತಿ ಕೆನಡಿಯನ್ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
15 ಮೃತದೇಹಗಳನ್ನು ಏರ್ ಅಂಬುಲೆನ್ಸ್ ಹಾಗೂ 183 ಮೃತದೇಹಗಳನ್ನು ರೋಡ್ ಅಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಇದೆಲ್ಲವೂ ಸೇರಿ ಒಟ್ಟಾರೆ 222 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 8 ಮಂದಿ ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.
ಬ್ಲ್ಯಾಕ್ ಬಾಕ್ಸ್ ಅಮೆರಿಕಗೆ ರವಾನೆ
ಸದ್ಯ ಪತನವಾಗಿರುವ ಏರ್ ಇಂಡಿಯಾ ಬೋಯಿಂಗ್-787 ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ಡಿಕೋಡ್ ಮಾಡಲು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೂನ್ 13ರಂದು ಬಿಜೆ ಮೆಡಿಕಲ್ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ (Black Box) ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಹಮದಾಬಾದ್: ಇಲ್ಲಿನ ಮೇಘನಿ ನಗರದಲ್ಲಿ ಪತನವಾದ ಏರ್ ಇಂಡಿಯಾ (Air India) ಬೋಯಿಂಗ್-787 ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ಡೇಟಾ ರಿಕವರಿಗಾಗಿ ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ 13ರಂದು ಬಿಜೆ ಮೆಡಿಕಲ್ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ (Black Box) ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?
2ನೇ ಬ್ಲ್ಯಾಕ್ ಬಾಕ್ಸ್ ಪರಿಶೀಲನೆ
ಏರ್ ಇಂಡಿಯಾ ಬೋಯಿಂಗ್-787 ವಿಮಾನದ 2ನೇ ಬ್ಲ್ಯಾಕ್ ಬಾಕ್ಸ್ (ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್) ಕಳೆದ ಭಾನುವಾರ ಪತ್ತೆಯಾಗಿತ್ತು. ಇದು ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಆಗಿದ್ದು, ವಿಮಾನದಲ್ಲಿ ಪ್ರತಿ ಸೆಕೆಂಡ್‌ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. ಇದು ಕಾಕ್‌ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ತಿಳಿಸಿದ್ದರು. ಸದ್ಯ 2ನೇ ಬ್ಲ್ಯಾಕ್‌ಬಾಕ್ಸ್ ಅನ್ನು ಭಾರತದಲ್ಲೇ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು
ಏನಿದು ಬ್ಲ್ಯಾಕ್ ಬಾಕ್ಸ್?
ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?
ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ, ಸುತ್ತಲೂ ಬೆಂಕಿ ಇದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.
ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.
ನವದೆಹಲಿ: ದ್ವೀಪಸಮೂಹದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ (Volcanic Eruption) ದೆಹಲಿಯಿಂದ ಇಂಡೋನೇಷ್ಯಾದ ಬಾಲಿಗೆ (Bali) ತೆರಳುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವು ದೆಹಲಿಗೆ ವಾಪಸ್ ಆಗಿದೆ.
ಬುಧವಾರ ದೆಹಲಿಯಿಂದ ಬಾಲಿಗೆ ಏರ್ ಇಂಡಿಯಾ ವಿಮಾನ AI2145 ಹೊರಟಿತ್ತು. ಬಾಲಿಯ ಗಮ್ಯಸ್ಥಾನ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದ ವರದಿಗಳು ಕೇಳಿಬಂದವು. ಸುರಕ್ಷತೆಯ ದೃಷ್ಟಿಯಿಂದ ದೆಹಲಿಗೆ ಹಿಂತಿರುಗಲು ಸೂಚಿಸಲಾಯಿತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಒದಗಿಸಲಾಗಿದೆ. ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ
ಬಾಲಿಯ ಪೂರ್ವದಲ್ಲಿರುವ ಜ್ವಾಲಾಮುಖಿ ಸ್ಫೋಟಗೊಂಡ ನಂತರ ಬುಧವಾರ ಬಾಲಿಗೆ ಹೋಗುವ ಮತ್ತು ಬರುವ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧೀನಗರ: ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ (Air India Plane Crash) ವಿಮಾನ ಭೀಕರ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ (Vishwas Kumar Ramesh) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹಾಸ್ಟೆಲ್‌ವೊಂದಕ್ಕೆ ವಿಮಾನ ಡಿಕ್ಕಿಯಾಗಿ ಅವಘಡ ಸಂಭವಿಸಿದಾಗ, ತುರ್ತು ನಿರ್ಗಮನ ಬಾಗಿಲು ತೆರೆದು ವಿಶ್ವಾಸ್ ಜಿಗಿದು ಬದುಕುಳಿದಿದ್ದರು. ಸಣ್ಣಪುಟ್ಟ ಗಾಯಗಳಿಂದ ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಗಾಯಾಳು ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಬೆಂಗಳೂರು – ಲಂಡನ್ ಸೇರಿದಂತೆ ದಿಢೀರ್ 7 ಏರ್ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು
ಚಿಕಿತ್ಸೆ ಬಳಿಕ ವಿಶ್ವಾಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ನಂತರ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ತನ್ನ ಜೊತೆ ಪ್ರಯಾಣಿಸಿದ್ದ ಸಹೋದರ ವಿಮಾನ ಪತನದಲ್ಲಿ ಮೃತಪಟ್ಟಿದ್ದ.
ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ 40 ವರ್ಷದ ಬ್ರಿಟಿಷ್ ಪ್ರಜೆ ವಿಶ್ವಾಸ್. ವಿಮಾನ ಅಪಘಾತದ ಸುದ್ದಿ ತಿಳಿದ ನಂತರ ವಿಶ್ವಾಸ್ ಅವರ ಕುಟುಂಬ ಯುಕೆಯಿಂದ ಆಗಮಿಸಿತು. ವಿಶ್ವಾಸ್ ಮತ್ತು ಅವರ ಸಹೋದರ ಇಬ್ಬರೂ ದಿಯು ಮೂಲದವರಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಭಾರತಕ್ಕೆ ವಿಮಾನದಲ್ಲಿ ಬಂದಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ
ಬುಧವಾರ ಬೆಳಗ್ಗೆ ಅಜಯ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವು ದಿಯುನಲ್ಲಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಎನ್ಎ ಮಾದರಿಯು ಅವರ ಗುರುತನ್ನು ದೃಢಪಡಿಸಿದ ನಂತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.
ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನ 171 ಅಪಘಾತಕ್ಕೀಡಾಗಿದೆ. ದುರಂತದಲ್ಲಿ 270 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಕೆಲವೇ ಕ್ಷಣಗಳ ನಂತರ ವೈರಲ್ ಆಗಿರುವ ವೀಡಿಯೊದಲ್ಲಿ, ಗಾಯಗೊಂಡಿದ್ದ ವಿಶ್ವಾಸ್ ಅಂಬುಲೆನ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ
ನವದೆಹಲಿ: ತಾಂತ್ರಿಕ ದೋಷ ಮತ್ತು ವಿಮಾನಗಳ ಲಭ್ಯತೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಟ್ಟು ಏಳು ಏರ್ ಇಂಡಿಯಾ (Air India) ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ರದ್ದಾದ ವಿಮಾನಗಳಲ್ಲಿ ಆರು ಬೋಯಿಂಗ್ 787-8 ಡ್ರೀಮ್‌ಲೈನರ್‌ಗಳು (787 Dreamliners) ಆಗಿದೆ.
ಯಾವೆಲ್ಲ ವಿಮಾನ ರದ್ದು?
AI915 – ದೆಹಲಿಯಿಂದ ದುಬೈ – B788 ಡ್ರೀಮ್‌ಲೈನರ್
AI153 – ದೆಹಲಿಯಿಂದ ವಿಯೆನ್ನಾ – B788 ಡ್ರೀಮ್‌ಲೈನರ್
AI143 – ದೆಹಲಿಯಿಂದ ಪ್ಯಾರಿಸ್ – B788 ಡ್ರೀಮ್‌ಲೈನರ್
AI159 – ಅಹಮದಾಬಾದ್‌ನಿಂದ ಲಂಡನ್ – B788 ಡ್ರೀಮ್‌ಲೈನರ್
AI170 – ಲಂಡನ್‌ನಿಂದ ಅಮೃತಸರ – B788 ಡ್ರೀಮ್‌ಲೈನರ್
AI133 – ಬೆಂಗಳೂರಿನಿಂದ ಲಂಡನ್ – B788 ಡ್ರೀಮ್‌ಲೈನರ್
AI179 – ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋ – B777
ಜೂನ್ 12 ರಂದು ಅಹಮದಾಬಾದ್‌ನಲ್ಲಿ ದುರ್ಘಟನೆ ನಡೆದ ಬಳಿಕ ಏರ್ ಇಂಡಿಯಾ ತನ್ನ ವಿಮಾನಗಳಲ್ಲಿ ಅದರಲ್ಲೂ ವಿಶೇಷವಾಗಿ ಅದರ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್‌ನ ಸುರಕ್ಷತಾ ತಪಾಸಣೆಗಳನ್ನು ಹೆಚ್ಚಿಸಿದೆ.
ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ಅವರನ್ನು ಆದಷ್ಟು ಬೇಗ ಅವರು ತೆರಳಬೇಕಾದ ಜಾಗಗಳಿಗೆ ಅವರನ್ನು ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ನಾವು ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದೇವೆ. ಮರುಪಾವತಿ ಅಥವಾ ಉಚಿತ ಮರುಹೊಂದಿಸುವಿಕೆಯನ್ನು ಸಹ ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.