Tag: ಏರ್ ಇಂಡಿಯಾ

  • ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಸ್ಟ್ರೈಕ್

    ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಸ್ಟ್ರೈಕ್

    ಮುಂಬೈ: ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟಿಡ್‍ನ (ಎಐಎಟಿಎಸ್‍ಎಲ್) 400 ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ.

    ಬುಧವಾರ ರಾತ್ರಿ ಪ್ರಾರಂಭವಾಗಿದ್ದು ಇಂದು ಕೂಡ ಮುಂದುವರಿದಿತ್ತು. ಏರ್ ಇಂಡಿಯಾ ಸಿಬ್ಬಂದಿ ಏರ್‍ಪೋರ್ಟ್‍ನಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲನೆ, ಬ್ಯಾಗ್‍ಗಳನ್ನು ಲೋಡ್ ಹಾಗೂ ಅನ್‍ಲೋಡ್ ಮಾಡುವುದು, ವಿಮಾನ ಹಾಗೂ ಕಾರ್ಗೋಗಳನ್ನು ಸ್ವಚ್ಛ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಾರೆ. ಅಲ್ಲದೆ ಕೆಲವು ವಿದೇಶಿ ಏರ್‍ಲೈನ್ಸ್‍ಗಳ ಗುತ್ತಿಗೆಯನ್ನು ನೋಡಿಕೊಳ್ಳುತ್ತಾರೆ.

    ಪ್ರತಿಭಟನೆಯಿಂದ ಇಂದು ಎಲ್ಲಾ ಏರ್ ಇಂಡಿಯಾ ವಿವಾನಗಳ ಹಾರಾಟ ವಿಳಂಬವಾಗಿದೆ. ಮುಂಬೈ- ಬ್ಯಾಂಕಾಕ್ ಎಐ330 ವಿಮಾನ ಬೆಳಗ್ಗೆ 8.18ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ 7 ಗಂಟೆ ತಡವಾಗಿ ಹೊರಟಿದೆ. ಹಾಗೆಯೇ ಬೆಳಗಿನ ಜಾವ 1.30ಕ್ಕೆ ಹೊರಡಬೇಕಾದ ಮುಂಬೈ-ನೆವಾರ್ಕ್ ವಿಮಾನ 4.08ಕ್ಕೆ ಹೊರಟಿದೆ ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಪ್ರತಿಭಟನೆಯಿಂದ ಹಲವು ಏರ್ ಇಂಡಿಯಾ ವಿವಾನಗಳ ನಿರ್ಗಮನ ಹಾಗೂ ಆಗಮನದಲ್ಲಿ ಸರಿಸುಮಾರು 2 ಗಂಟೆ ಕಾಲ ವಿಳಂಬವಾಗಿದೆ. ಒಟ್ಟು 16 ಅಂತರಾಷ್ಟ್ರೀಯ ಮತ್ತು 8 ದೇಶಿಯ ವಿಮಾನ ಹಾರಾಟಕ್ಕೆ ಈ ಪ್ರತಿಭಟನೆಯ ಬಿಸಿ ತಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೇಕಾಫ್ ವೇಳೆ ತಡೆ ಗೋಡೆಗೆ ಏರ್‌ಇಂಡಿಯಾ ವಿಮಾನ ಡಿಕ್ಕಿ – 130 ಪ್ರಯಾಣಿಕರು ಸೇಫ್

    ಟೇಕಾಫ್ ವೇಳೆ ತಡೆ ಗೋಡೆಗೆ ಏರ್‌ಇಂಡಿಯಾ ವಿಮಾನ ಡಿಕ್ಕಿ – 130 ಪ್ರಯಾಣಿಕರು ಸೇಫ್

    ಚೆನ್ನೈ: ಏರ್‌ಇಂಡಿಯಾ ಸಂಸ್ಥೆಯ ವಿಮಾನವೊಂದು ಟೇಕಾಫ್ ವೇಳೆ ವಿಮಾನ ನಿಲ್ದಾಣದ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಘಟನೆ ನಡೆದ ವೇಳೆ ವಿಮಾನದಲ್ಲಿ 130 ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಇದ್ದರು ಎಂಬ ಮಾಹಿತಿ ಲಭಿಸಿದ್ದು, ಘಟನೆ ಬಳಿಕ ಬೇರೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕರೆದೊಯ್ಯಲಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ.

    ಆಗಿದ್ದು ಏನು?
    ಏರ್ ಇಂಡಿಯಾ 737 ಬೋಯಿಂಗ್ ವಿಮಾನ ತಿರುಚ್ಚಿಯಿಂದ ದುಬೈಗೆ ಹಾರಬೇಕಿತ್ತು. ಶುಕ್ರವಾರ ನಸುಕಿನ ಜಾವ 1.30ರ ವೇಳೆಗೆ ಪ್ರತಿ ಗಂಟೆಗೆ 250-290 ಕಿ.ಮೀ ವೇಗದಲ್ಲಿ ರನ್‍ವೇಯಲ್ಲಿ ಸಂಚರಿಸಿ ಬಳಿಕ ಟೇಕಾಫ್ ಆಗಿದೆ. ಟೇಕಾಫ್ ಆಗುವ ವೇಳೆ ವಿಮಾನದ ಚಕ್ರ ನಿಲ್ದಾಣದ ತಡೆಗೋಡೆ ಡಿಕ್ಕಿ ಹೊಡೆದಿದೆ. ಆದರೆ ಇದು ಪೈಲಟ್ ಗಮನಕ್ಕೆ ಬಂದಿರಲಿಲ್ಲ.

    ಈ ಘಟನೆಯ ಕೂಡಲೇ ತಿರುಚ್ಚಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಸಿಬ್ಬಂದಿ ಹಾನಿಯಾಗಿರುವ ಕುರಿತು ಮಾಹಿತಿ ನೀಡಿದರೂ ಪೈಲಟ್ ಸರಿ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಸುರಕ್ಷತಾ ದೃಷ್ಟಿಯಿಂದ ವಿಮಾನವನ್ನು ಮುಂಬೈ ಮಾರ್ಗಕ್ಕೆ ತಿರುಗಿಸಲಾಯಿತು. ಬೆಳಗ್ಗೆ 5.35ಕ್ಕೆ ಲ್ಯಾಂಡ್ ಆದ ಬಳಿಕ ಬೇರೊಂದು ವಿಮಾನದಲ್ಲಿ ದುಬೈಗೆ ಪ್ರಯಾಣಿಕರನ್ನು ಕಳುಹಿಸಲಾಯಿತು.

    ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ವೇಳೆ ವಿಮಾನದ ಆಂಟೆನಾ ಹಾಗೂ ಕೆಲ ಭಾಗಗಳಿಗೆ ಹಾನಿಯಾಗಿದ್ದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವಿಮಾನದ ಪೈಲಟ್ ಹಾಗೂ ಸಹ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಆಂತರಿಕ ತನಿಖೆ ಆರಂಭಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ: ಜೋಧ್‍ಪುರದ ಎಲ್ಲಾ ವಿಮಾನಗಳ ಹಾರಾಟ ರದ್ದು!

    ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ: ಜೋಧ್‍ಪುರದ ಎಲ್ಲಾ ವಿಮಾನಗಳ ಹಾರಾಟ ರದ್ದು!

    ಜೈಪುರ: ರಾಜಸ್ಥಾನದ ಜೋಧ್‍ಪುರ ವಿಮಾನ ನಿಲ್ದಾಣದಲ್ಲಿ ಹಾರಾಟಕ್ಕೆ ಸಿದ್ದವಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಕರೆ ಬಂದಿದ್ದರಿಂದ ಏರ್ ಇಂಡಿಯಾ ಸೇರಿದಂತೆ ಎಲ್ಲಾ ವಿಮಾನಗಳ ಹಾರಾಟವನ್ನು ವಿಮಾನ ನಿಲ್ದಾಣ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

    ಜೋಧ್‍ಪುರದಿಂದ ದೆಹಲಿಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಕರೆ ಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಜೋಧ್‍ಪುರದಿಂದ ಹೊರಡಬೇಕಾಗಿದ್ದ ಎಲ್ಲಾ ವಿಮಾನಗಳ ಹಾರಾಟವನ್ನು ತಡೆಹಿಡಿದ್ದಾರೆ. ಅಲ್ಲದೇ ಏರ್ ಇಂಡಿಯಾ ವಿಮಾನವನ್ನು ಭದ್ರತಾ ಪಡೆಗಳು ತೀವ್ರವಾಗಿ ತಪಾಸಣೆ ನಡೆಸುತ್ತಿವೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

    ಜೋಧ್‍ಪುರ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ ವಾಯು ನೆಲೆಗೆ ತಾಗಿಕೊಂಡೇ ಇರುವುದರಿಂದ, ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಜೋಧ್‍ಪುರ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವಲ್ಲದೇ, ಜೆಟ್ ಏರ್ ವೇಸ್ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳ ವಿಮಾನಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

    ಸದ್ಯ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರನ್ನು ಪೊಲೀಸರು ವ್ಯಾಪಕ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನದಲ್ಲಿ ಪ್ರಯಾಣಿಸ್ತಿದ್ದಾಗ ಮಹಿಳೆ ಪಕ್ಕದಲ್ಲೇ ಸೂಸು ಮಾಡ್ದ!

    ವಿಮಾನದಲ್ಲಿ ಪ್ರಯಾಣಿಸ್ತಿದ್ದಾಗ ಮಹಿಳೆ ಪಕ್ಕದಲ್ಲೇ ಸೂಸು ಮಾಡ್ದ!

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಹಿಳೆಯ ಪಕ್ಕದಲ್ಲೇ ಸೂಸು ಮಾಡಿದ ಘಟನೆ ನಡೆದಿದೆ.

    ಏರ್ ಇಂಡಿಯಾ ವಿಮಾನವು ನ್ಯೂಯಾರ್ಕ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯ ಮಗಳು ಈ ಬಗ್ಗೆ ಈ ಟ್ವೀಟ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಟ್ವೀಟ್ ನಲ್ಲೇನಿತ್ತು?:
    ವಿಮಾನದಲ್ಲಿ ಪ್ರಯಾಣಿಸಿದ ಮಹಿಳೆಯ ಮಗಳು ಇಂದ್ರಾಣಿ ಘೋಷ್, `ಶುಕ್ರವಾರ AI 102  ಏರ್ ಇಂಡಿಯಾದಲ್ಲಿ ಚಲಿಸುತ್ತಿದ್ದಾಗ ಪ್ರಯಾಣಿಕನೊಬ್ಬ ಪ್ಯಾಂಟ್ ಜಾರಿಸಿ ಅಮ್ಮ ಕುಳಿತಿದ್ದ ಸೀಟ್ ಪಕ್ಕದಲ್ಲೇ ಸೂಸು ಮಾಡಿದ್ದಾನೆ. ಇದರಿಂದಾಗಿ ಒಬ್ಬರೇ ಪ್ರಯಾಣಿಸುತ್ತಿದ್ದ ನನ್ನ ಅಮ್ಮ ಗಾಬರಿಯಿಂದ ಆಘಾತಕ್ಕೊಳಗಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

    ಇಂದ್ರಾಣಿ ಟ್ವೀಟ್ ಗಮನಿಸಿದ ಕೇಂದ್ರ ವಿಮಾನಯಾನ ಖಾತೆಯ ಸಚಿವ ಜಯಂತ್ ಸಿನ್ಹಾ ತಕ್ಷಣವೇ ಪ್ರತಿಕ್ರಿಯಿಸಿದ್ದು, ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಏರ್ ಇಂಡಿಯಾಗೆ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣದ ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಥವಾ ಇಲಾಖೆಗೆ ಸಲ್ಲಿಸಬೇಕು ಅಂತ ಹೇಳಿದ್ದಾರೆ.

    ಇದೇ ವೇಳೆ ನಿಮ್ಮ ಅಮ್ಮ ಇಂತಹ ಕೆಟ್ಟ ಸನ್ನಿವೇಶದಲ್ಲಿ ಒಬ್ಬರೇ ಪ್ರಯಾಣ ಬೆಳೆಸಿದ್ದು ದುರದೃಷ್ಟಕರ ಅಂತ ಹೇಳಿ ಕ್ಷಮೆಯಾಚಿಸಿದ್ದಾರೆ. ವಿಷಾದವೆಂದರೆ ಈ ಬಗ್ಗೆ ಇದೂವರೆಗೂ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸರಗೊಂಡ ಇಂದ್ರಾಣಿ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ. ಆ ಬಳಿಕ ಎಚ್ಚೆತ್ತ ಏರ್ ಇಂಡಿಯಾ ತನಿಖೆ ನಡೆಸಲು ಮುಂದೆ ಬಂದಿದೆ.

    ಇದೇ ವೇಳೆ ಇಂದ್ರಾಣಿ ಇಂತಹ ಅಸಹ್ಯಕರ ಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ವಿಮಾನಯಾನ ಕಂಪೆನಿಗಳಿಗೆ ಆಗ್ರಹಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಏರ್‍ಇಂಡಿಯಾವನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್ ನಲ್ಲಿ ತಿಗಣೆ ಕಾಟ!

    ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್ ನಲ್ಲಿ ತಿಗಣೆ ಕಾಟ!

    ಮುಂಬೈ: ತಿಗಣೆಗಳ ಕಾಟದಿಂದಾಗಿ ಬೇಸತ್ತು ಹೋದ ಏರ್ ಇಂಡಿಯಾ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಿಗಣೆ ಕಚ್ಚಿಸಿಕೊಂಡಿರುವ ಫೋಟೋಗಳನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೌಮ್ಯ ಶೆಟ್ಟಿ ಎಂಬ ಪ್ರಯಾಣಿಕರು ತನ್ನ ಮೂವರು ಮಕ್ಕಳೊಂದಿಗೆ ಅಮೆರಿಕದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಪ್ರಯಾಣದಲ್ಲಿ ಅವರು ಎದುರಿಸಿದ ತಿಗಣೆ ಕಾಟವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ನನ್ನ ಪುಟ್ಟ ಮಕ್ಕಳಿಗೆ ಆರಾಮದಾಯಕವಾಗಿರುತ್ತದೆ ಎಂದು ಅವರನ್ನು ಬಿಸಿನೆಸ್ ಕ್ಲಾಸ್ ನಲ್ಲಿ ಕರೆದೊಯ್ಯಲು ನಿಶ್ಚಯಿಸಿದೆ. ಆದರೆ ಏರ್ ಇಂಡಿಯಾ ಇಷ್ಟು ನೋವಿನ ಪ್ರಯಾಣ ನೀಡುತ್ತದೆ ಎಂದು ಊಹಿಸಿರಲಿಲ್ಲ. ತಿಗಣೆಗಳು ನಮ್ಮ ಕೈ, ಕಾಲು, ಕುತ್ತಿಗೆ ಹಾಗೂ ದೇಹದ ಅನೇಕ ಭಾಗಗಳಲ್ಲಿ ಕಚ್ಚಿ ಗಾಯಗೊಳಿಸಿವೆ ಎಂದು ದೂರಿದ್ದಾರೆ.

    https://twitter.com/saumshetty/status/1020295314878750721

    ವಿಮಾನದಲ್ಲಿರುವಾಗಲೇ ತಿಗಣೆ ಸಮಸ್ಯೆ ಬಗ್ಗೆ ಸಿಬ್ಬಂದಿಗೆ ಹೇಳಿದರೂ, ಅದೇ ಸೀಟ್ ನಲ್ಲೇ ಮಲಗುವಂತೆ ಸೂಚಿಸಿದ್ದರು. ಇನ್ನೇನು ಮುಂಬೈಗೆ ಬಂದಿಳಿಯಬೇಕು ಎನ್ನುವಾಗ ಮಾತ್ರ ಸೀಟ್ ಬದಲಾವಣೆ ಮಾಡಿಕೊಟ್ಟರು ಎಂದು ಆರೋಪಿಸಿದ್ದಾರೆ.

    ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿದ ಮತ್ತೊಬ್ಬ ಪ್ರಯಾಣಿಕರು ತಿಗಣೆ ಕಾಟದ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಟಾನ್ಸೆಕರ್ ಎಂಬವರು ಟ್ವೀಟ್ ನಲ್ಲಿ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಟ್ಯಾಗ್ ಮಾಡಿ, ಈಗಷ್ಟೇ ನನ್ನ ಕುಟುಂಬದ ಜತೆ ನ್ಯೂಯಾರ್ಕ್ ನಿಂದ ಏರ್ ಇಂಡಿಯಾ 144 ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮುಗಿಸಿದೆ. ನಮ್ಮ ಎಲ್ಲಾ ಸೀಟುಗಳು ತಿಗಣೆಗಳಿಂದ ಮುತ್ತಿಕೊಂಡಿದ್ದವು. ನಾನು ರೈಲಿನಲ್ಲಿ ತಿಗಣೆಗಳಿರುವುದನ್ನು ಕೇಳಿದ್ದೆನೆ. ಆದರೆ ಸರ್, ನಮ್ಮ ಮಹಾರಾಜ (ಬಿಸಿನೆಸ್) ಕ್ಲಾಸ್ ನಲ್ಲಿಯೂ ತಿಗಣೆಯಿರುವುದು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಬರೆದು ಅಸಮಾಧಾನವನ್ನು ಹೊರಹಾಕಿದ್ದಾರೆ.

    ಪ್ರವೀಣ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ತೊಂದರೆಯಿಂದಾಗಿ ಕ್ಷಮೆಯಿರಲಿ, ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ತಪ್ಪನ್ನು ಸರಿಪಡಿಸಲಾಗುತ್ತದೆ ಎಂದು ರೀ ಟ್ವೀಟ್ ಮಾಡಿದೆ.

  • ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್: ಸೌದಿ ಅರೇಬಿಯಾದ ರಿಯಾದ್ ಹೋಟೆಲ್‍ವೊಂದರಲ್ಲಿ ಏರ್ ಇಂಡಿಯಾ ಪೈಲಟ್‍ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ರಿತ್ವಿಕ್ ತಿವಾರಿ(27) ಮೃತಪಟ್ಟ ಪೈಲೆಟ್. ರಿತ್ವಿಕ್ ಹೋಟೆಲ್‍ನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ರಿತ್ವಿಕ್ ಹೋಟೆಲ್‍ನಲ್ಲಿರುವ ಜಿಮ್‍ನ ಶೌಚಾಲಯದಲ್ಲಿ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದ್ದರು. ಕೂಡಲೇ ರಿತ್ವಿಕ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ರಿತ್ವಿಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆಂದು ಕೌನ್ಸಿಲರ್ ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

    ಆಸ್ಪತ್ರೆಯ ಎಲ್ಲ ರಿಪೋರ್ಟ್‍ಗಳು ಪರಿಶೀಲಿಸಿದ್ದಾಗ ರಿತ್ವಿಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯ ಭಾರತದ ರಾಯಭಾರಿ ಸಿಬ್ಬಂದಿ ರಿತ್ವಿಕ್ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅನಿಲ್ ಹೇಳಿದ್ದಾರೆ.

    ನಾವು ರಿತ್ವಿಕ್ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದೇವೆ. ರಿತ್ವಿಕ್ ಮೃತದೇಹ ಭಾರತಕ್ಕೆ ಕಳುಹಿಸುವ ಮೊದಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

  • ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಕೊಚ್ಚಿ: 102 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನೊಳಗೊಂಡ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ವಿಮಾನ ಲ್ಯಾಂಡ್ ಆಗುವ ವೇಳೆ ಪಾರ್ಕಿಂಗ್ ವೇ ಕಡೆಗೆ ಸಮೀಪಿಸುತ್ತಿದ್ದಂತೆ ಪಥವನ್ನು ಬದಲಿಸಿದೆ. ಈ ಅವಘಡದಿಂದಾಗಿ ಬೋಯಿಂಗ್ 737-800 ವಿಮಾನದ ನೋಸ್ ವೀಲ್ ಜಖಂ ಆಗಿದೆ.

    ಘಟನೆಯಿಂದ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನ ಏಣಿ ಮೂಲಕ ಕೆಳಗಿಳಿಸಲಾಯ್ತು ಎಂದು ಕೊಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‍ನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆ ಹಾಗೂ ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ್ಲೂ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.

  • ಏರ್ ಇಂಡಿಯಾ ಫ್ಲೈಟ್‍ನಲ್ಲಿ ಎಸಿ ಸಮಸ್ಯೆ- ಪ್ರಯಾಣಿಕರು ಗಾಳಿ ಬೀಸಿಕೊಳ್ತಿರೋ ವಿಡಿಯೋ ವೈರಲ್

    ಏರ್ ಇಂಡಿಯಾ ಫ್ಲೈಟ್‍ನಲ್ಲಿ ಎಸಿ ಸಮಸ್ಯೆ- ಪ್ರಯಾಣಿಕರು ಗಾಳಿ ಬೀಸಿಕೊಳ್ತಿರೋ ವಿಡಿಯೋ ವೈರಲ್

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಎಸಿ ಸಮಸ್ಯೆಯಿಂದಾಗಿ ಪ್ರಯಾಣಿಕರು ಉಸಿರಾಟದ ಸಮಸ್ಯೆ ಎದುರಿಸಿದ್ದು, ವಿಪರೀತ ಸೆಕೆ ತಾಳಲಾರದೆ ತಮ್ಮ ಕೈಯಲ್ಲಿದ್ದ ಕರಪತ್ರ ಅಥವಾ ಮ್ಯಾಗಜಿನ್‍ಗಳಲ್ಲಿ ಗಾಳಿ ಬೀಸಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

    ಭಾನುವಾರ ಮಧ್ಯಾಹ್ನ 1.55ರ ವೇಳೆಗೆ ಏರ್ ಇಂಡಿಯಾ ಎಐ-880 ವಿಮಾನ ಪಶ್ಚಿಮ ಬಂಗಾಳದ ಬಾಗ್ದೋರಾದಿಂದ 168 ಪ್ರಯಾಣಿಕರನ್ನು ಹೊತ್ತು ನವದೆಹಲಿಗೆ ಹೊರಟಿತ್ತು. ವಿಮಾನ ಟೇಕ್ ಆಫ್ ಆದ 20 ನಿಮಿಷದಲ್ಲೇ ಎಸಿ ಕೆಲಸ ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರು ನೀಡಿದ್ದರು. ಕೆಲವು ಪ್ರಯಾಣಿಕರು ಆಕ್ಸಿಜನ್ ಮಾಸ್ಕ್ ಹಾಕಿಕೊಂಡ್ರೂ ಅದೂ ಕೂಡ ಕೆಲಸ ಮಾಡುತ್ತಿರಲಿಲ್ಲ ಎಂದು ವರದಿಯಾಗಿದೆ.

    ಪ್ರಯಾಣಿಕರು ವಿಮಾನದ ಸಿಬ್ಬಂದಿಗೆ ಎಸಿ ಕಾರ್ಯ ನಿರ್ವಹಿಸದ ಬಗ್ಗೆ ದೂರು ನೀಡಿದ್ದರು. ಸ್ವಲ್ಪ ಸಮಯದಲ್ಲೇ ಎಸಿಯನ್ನ ಸರಿ ಮಾಡಲಾಗುತ್ತದೆ ಎಂದು ಸಿಬ್ಬಂದಿ ಭರವಸೆ ನೀಡಿದ್ದರು. ಆದ್ರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

    ಘಟನೆಯಿಂದ ಸಿಟ್ಟಿಗೆದ್ದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಪ್ರಯಾಣಿಕರು ತಮ್ಮ ಕರವಸ್ತ್ರಗಳಲ್ಲಿ ಗಾಳಿ ಬೀಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಕೆಲ ಪ್ರಯಾಣಿಕರು ವಿಮಾನದಲ್ಲಿ ಎದುರಿಸಿದ ತೊಂದರೆಯ ಬಗ್ಗೆ ಟ್ವಿಟ್ಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಏರ್ ಇಂಡಿಯಾವನ್ನ ಸಂಪರ್ಕಿಸಿದಾಗ, ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

  • ಗಾಯಕ್‍ವಾಡ್ ಎಫೆಕ್ಟ್: ವಿಮಾನ ಹಾರಾಟ ವಿಳಂಬಕ್ಕೆ ಕಾರಣರಾದ್ರೆ ದಂಡ ವಿಧಿಸಲಿದೆ ಏರ್ ಇಂಡಿಯಾ!

    ಗಾಯಕ್‍ವಾಡ್ ಎಫೆಕ್ಟ್: ವಿಮಾನ ಹಾರಾಟ ವಿಳಂಬಕ್ಕೆ ಕಾರಣರಾದ್ರೆ ದಂಡ ವಿಧಿಸಲಿದೆ ಏರ್ ಇಂಡಿಯಾ!

    ನವದೆಹಲಿ: ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಶಿವಸೇನಾ ಸಂಸದ ರವೀಂದ್ರ ಗಾಯಕ್‍ವಾಡ್ ಚಪ್ಪಲಿಯಿಂದ ಹಲ್ಲೆ ಮಾಡಿದ ಪ್ರಕರಣದ ಬೆನ್ನಲ್ಲೇ ಇನ್ಮುಂದೆ ವಿಮಾನ ಹಾರಾಟ ವಿಳಂಬವಾಗಲು ಕರಣವಾಗೋ ಪ್ರಯಾಣಿಕರಿಗೆ ಭಾರೀ ದಂಡ ವಿಧಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.

    ಇದಕ್ಕಾಗಿ ಏರ್ ಇಂಡಿಯಾ ಹೊಸ ನಿಯಮವನ್ನ ರೂಪಿಸಿದ್ದು, 1 ಗಂಟೆವರೆಗೆ ತಡವಾದ್ರೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ 1 ರಿಂದ 2 ಗಂಟೆ ತಡವಾದ್ರೆ 10 ಲಕ್ಷ ರೂ. ಹಾಗೂ 2 ಗಂಟೆಗೂ ಮೀರಿ ತಡವಾದ್ರೆ ಬರೋಬ್ಬರಿ 15 ಲಕ್ಷ ರೂ ದಂಡ ವಿಧಿಸಲಿದೆ.

    ಈಗಾಗಲೇ ಏರ್ ಇಂಡಿಯಾ ಸಂಸ್ಥೆ ಲಾಗ್‍ಬುಕ್‍ನಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದೆ. ಈ ಹೊಸ ವ್ಯವಸ್ಥೆಯಡಿ ವಿಮಾನ ಹೊರಡುವುದು ತಡವಾದ್ರೆ, ಅದರಲ್ಲೂ ಪ್ರಯಾಣಿಕರ ದುರ್ನಡತೆಯ ಸಂದರ್ಭದಲ್ಲಿ ತಡವಾಗಲು ಕಾರಣವೇನು ಎಂಬುದನ್ನು ಇತರೆ ಎಲ್ಲಾ ಮಾಹಿತಿಯನ್ನ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ಪುಣೆ- ದೆಹಲಿ ವಿಮಾನದಲ್ಲಿ ತನ್ನನ್ನು ಬ್ಯುಸಿನೆಸ್ ಕ್ಲಾಸ್‍ನಿಂದ ಎಕಾನಮಿ ಕ್ಲಾಸ್‍ಗೆ ವರ್ಗಾಯಿಸಿದ್ದಕ್ಕೆ ಕೋಪಗೊಂಡ ಗಾಯಕ್‍ವಾಡ್ ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಚಪ್ಪಲಿಯಿಂದ ಹೊಡೆದಿದ್ದರು. ಹೀಗಾಗಿ 6 ವಿಮಾನಯಾನ ಸಂಸ್ಥೆಗಳು ಗಾಯಕ್‍ವಾಡ್ ಪ್ರಯಾಣದ ಮೇಲೆ ನಿಷೇಧ ಹೇರಿದ್ದವು. ಬಳಿಕ ನಿಷೇಧವನ್ನ ಹಿಂಪಡೆಯಲಾಗಿತ್ತು. ಗಾಯಕ್‍ವಾಡ್ ಅವರ ಈ ಅವಾಂತರದಿಂದ ವಿಮಾನ ಒಂದೂವರೆ ಗಂಟೆ ತಡವಾಗಿ ಹೊರಟಿತ್ತು.

  • ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಮುಂಬೈ: ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡರಿಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದೆ. ಗುರುವಾರ ಏರ್ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಅಧಿಕಾರ ದರ್ಪವನ್ನು ತೋರಿದ್ದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್ ಫೆಡರೇಷನ್(ಎಫ್‍ಐಎ) ಅಡಿಯಲ್ಲಿ ಬರುವ ಖಾಸಗಿ ಕಂಪೆನಿಗಳು ಗಾಯಕ್ವಾಡ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಟಿಕೆಟ್ ನೀಡದೇ ಇರಲು ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

    ಎಫ್‍ಐಎ ಸದಸ್ಯರಾಗಿರುವ ಜೆಟ್ ಏರ್‍ವೇಸ್, ಗೋ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ರವೀಂದ್ರ ಅವರ ಮೇಲೆ ಕಠಿಣ ಕ್ರಮವನ್ನು ತಗೆದುಕೊಂಡಿದೆ ಎಂದು ಎಫ್‍ಐಎ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಸಿಬ್ಬಂದಿಗೆ ಹೊಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಏರ್ ಇಂಡಿಯಾದ ಅಧಿಕಾರಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಬ್ಲಾಕ್‍ಲಿಸ್ಟ್ ಅವಧಿ ಎಲ್ಲಿಯವರೆಗೆ ಇರಲಿದೆ ಎನ್ನುವುದು ತಿಳಿದು ಬಂದಿಲ್ಲ.

    ಉಸ್ಮನಾ ಬಾದ್ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ನಿವೃತ್ತ ಅಂಚಿನಲ್ಲಿರೋ ತಮ್ಮ ತಂದೆ ವಯಸ್ಸಿನ ಏರ್ ಇಂಡಿಯಾದ ಸಿಬ್ಬಂದಿ ಸುಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದರು. ಬಳಿಕ ವಿಮಾನದಲ್ಲಿ ಸೀಟ್ ಬದಲಾವಣೆ ವಿಚಾರದಲ್ಲಿ ಗಲಾಟೆ ನಡೆದಾಗ ಹೊಡೆದಿದ್ದೇನೆ ಅಂತ ಪೌರುಷ ತೋರಿದ್ದರು.

    ರವೀಂದ್ರ ಗಾಯಕ್ವಾಡ್ ಪುಣೆಯಿಂದ ದೆಹಲಿಯತ್ತ ಹೊರಟಿದ್ದರು. ನಾನು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದು, ಆದ್ರೆ ನನ್ನ ಎಕನಾಮಿ ಕ್ಲಾಸ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಏರ್ ಇಂಡಿಯಾ ವಿರುದ್ಧ ಆರೋಪ ಮಾಡಿದ್ದರು. ಘಟನೆ ಬಗ್ಗೆ ಮಾತಾನಾಡಿರೋ ಹಲ್ಲೆಗೊಳಗಾದ ಸಿಬ್ಬಂದಿ ಸುಕುಮಾರ್ ಈ ದೇಶವನ್ನು ಆ ದೇವರೇ ಕಾಪಾಡಬೇಕು ಅಂತಾ ಬೇಸರ ವ್ಯಕ್ತಪಡಿಸಿದ್ದರು.

    ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ವಿರುದ್ಧ ಎರಡು ಎಫ್‍ಐಆರ್ ಗಳನ್ನು ದಾಖಲಿಸಿದೆ. ಒಂದು ತಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದು ಮತ್ತು 40 ನಿಮಿಷ ವಿಮಾನ ಪ್ರಯಾಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದೆ.