Tag: ಏರ್ ಇಂಡಿಯಾ

  • ಏರ್ ಇಂಡಿಯಾಗೆ 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು

    ಏರ್ ಇಂಡಿಯಾಗೆ 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ (Air India Flight) ಮಹಿಳೆಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಮೂತ್ರವಿಸರ್ಜನೆ (Pee) ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್ ಇಂಡಿಯಾಗೆ 30 ಲಕ್ಷ ರೂ. ದಂಡವನ್ನು (Fine) ವಿಧಿಸಿದೆ.

    ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ವಿಮಾನಕ್ಕೆ 30 ಲಕ್ಷ ರೂ. ದಂಡ ವಿಧಿಸಿದ್ದಲ್ಲದೇ ಅಂದು ಘಟನೆ ನಡೆದ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಕೂಡಾ 3 ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಈ ಘಟನೆ 2022ರ ನವೆಂಬರ್ 26ರಂದು ನಡೆದಿದೆ. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿರುವುದಾಗಿ ತಿಳಿಸಿದೆ.

    ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ. ಘಟನೆಯ ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 4 ತಿಂಗಳ ಕಾಲ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಕಿರಿಯ ಪುತ್ರನ ನಿಶ್ಚಿತಾರ್ಥ ಸಡಗರ – ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನಲ್ಲ, ಅವರೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು – ನ್ಯಾಯಾಲಯಕ್ಕೆ ಶಂಕರ್ ಮಿಶ್ರಾ ಹೇಳಿಕೆ

    ನಾನಲ್ಲ, ಅವರೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು – ನ್ಯಾಯಾಲಯಕ್ಕೆ ಶಂಕರ್ ಮಿಶ್ರಾ ಹೇಳಿಕೆ

    ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ (Shankar Mishra) ದೆಹಲಿ ನ್ಯಾಯಾಲಯದ (Delhi Sessions Court) ಮುಂದೆ ಹಾಜರಾಗಿದ್ದು, ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದಾರೆ.

    `ನಾನಲ್ಲ ಬದಲಿಗೆ ಮಹಿಳೆಯೇ (Women Passenger) ತನ್ನ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾಳೆ’ ಎಂದು ಶಂಕರ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವ ಶಂಕರ್ ಮಿಶ್ರಾ, ದೂರುದಾರರ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿಲ್ಲ, ಮಹಿಳೆಯೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಳೆ. ದೂರುದಾರ ಮಹಿಳೆಯ ಸೀಟು ನಿರ್ಬಂಧಿಸಲಾಗಿತ್ತು ನಾನು ಅಲ್ಲಿಗೆ ತೆರಳಲು ಸಾಧ್ಯವಿರಲಿಲ್ಲ. ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಳೆ ಎಂದು ದೂರಿದ್ದಾರೆ.

    ದೂರುದಾರ ಮಹಿಳೆ ಕಥಕ್ ನೃತ್ಯಗಾರ್ತಿ, ಶೇ.80 ಕಥಕ್ ನೃತ್ಯಗಾರರಿಗೆ ಈ ಸಮಸ್ಯೆ ಇದೆ ಎಂದು ಶಂಕರ್ ಮಿಶ್ರಾ ಅವರ ವಕೀಲರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ತುಳು ಹಾಡಿಗೆ ದನಿಯಾದ ಗಾಯಕಿ ಮಂಗ್ಲಿ

    ಮಹಿಳೆಯ ಆಸನವನ್ನ ಹಿಂದಿನಿಂದ ಮಾತ್ರ ಸಂಪರ್ಕಿಸಬಹುದು, ಮುಂದಿನ ಸೀಟಿನಿಂದ ಸಂಪರ್ಕಿಸಲು ಸಾಧ್ಯವಿಲ್ಲ. ಹಿಂದಿನಿಂದ ಮೂತ್ರ ಮಾಡಿದರು ಅದು ಸೀಟಿನ ಮುಂಭಾಗದ ಪ್ರದೇಶಕ್ಕೆ ತಲುಪಲು ಸಾಧ್ಯವಿಲ್ಲ ಎಂದು ವಕೀಲರು ವಾದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಪಣಜಿ: ಏರ್ ಇಂಡಿಯಾ (Air India) ವಿಮಾನದಲ್ಲಿ (Flight) ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಗೋ ಫಸ್ಟ್ (Go First) ವಿಮಾನದಲ್ಲಿ ಕಿರುಕುಳದ (Harassment) ಇನ್ನೊಂದು ಪ್ರಕರಣ ವರದಿಯಾಗಿದೆ.

    ಜನವರಿ 5 ರಂದು ನವದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಮಹಿಳಾ ಗಗನಸಖಿಗೆ (Flight Attendant) ವಿದೇಶಿ ಪ್ರಯಾಣಿಕನೊಬ್ಬ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಪ್ರಯಾಣಿಕ ಆಕೆಗೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

    ವರದಿಗಳ ಪ್ರಕಾರ ವ್ಯಕ್ತಿ ಪದೇ ಪದೇ ತನ್ನೊಂದಿಗೆ ಕುಳಿತುಕೊಳ್ಳುವಂತೆ ಪೀಡಿಸಿದ್ದಾನೆ. ಆತ ಈ ವೇಳೆ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ವಿಮಾನ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಿಮಾನ ಭದ್ರತಾ ಸಂಸ್ಥೆ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಆದರೆ ಇದು ಬೆಳಕಿಗೆ ಬಂದಿರುವುದು ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಳಿಕ.

    ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಆರೋಪಿ ಶಂಕರ್ ಮಿಶ್ರಾ ತನ್ನ ಪ್ಯಾಂಟ್ ಬಿಚ್ಚಿ ವಯಸ್ಸಾದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಏರ್ ಇಂಡಿಯಾ ಆತನನ್ನು ಹೋಗಲು ಬಿಟ್ಟಿತ್ತು. ಆದರೆ ಘಟನೆ ಬಗ್ಗೆ ಮಹಿಳೆ ಜನವರಿ 5 ರಂದು ವಿಮಾನಯಾನ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಘಟನೆ ಬೆಳಕಿಗೆ ಬರುತ್ತಲೇ ಶಂಕರ್ ಮಿಶ್ರಾ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಶುಕ್ರವಾರ ದೆಹಲಿ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಶನಿವಾರ ಬೆಳಗ್ಗೆ ಆತನನ್ನು ದೆಹಲಿಗೆ ಒಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ನವದೆಹಲಿ/ಬೆಂಗಳೂರು: ನ್ಯೂಯಾರ್ಕ್‌ನಿಂದ  (New York) ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಸಹಪ್ರಯಾಣಿಕ ಶಂಕರ್ ಮಿಶ್ರಾನನ್ನು ಬೆಂಗಳೂರಿನಲ್ಲಿ (Bengaluru) ದೆಹಲಿ ಪೊಲೀಸರು (Delhi Police) ಬಂಧಿಸಿದ್ದರು. ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ದೆಹಲಿ ಪಟಿಯಾಲ ಹೌಸ್ ಕೋರ್ಟ್ (Delhi’s Patiala House court) ಮಿಶ್ರಾನನ್ನ ಜನವರಿ 21ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಆದೇಶಿಸಿದೆ. ಜನವರಿ 11 ರಂದು ಮಹೇಶ್ ಮಿಶ್ರಾ ಕೇಸ್‌ಗೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: 22 ರಾಜ್ಯಗಳಲ್ಲಿ ಬಿಸಿನೆಸ್‌ ಮಾಡ್ತಿದ್ದೇವೆ; ಎಲ್ಲವನ್ನೂ ಬಿಜೆಪಿ ಜೊತೆ ಮಾಡ್ತಿಲ್ಲ – ಗೌತಮ್‌ ಅದಾನಿ

    ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದ ದೆಹಲಿ ಪೊಲೀಸರು ಇಲ್ಲಿನ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಿದ್ದರು. ಪೊಲೀಸರು ಆರೋಪಿಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಆದಾಗ್ಯೂ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: 9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಮಿಶ್ರಾ ಏರ್ ಇಂಡಿಯಾದ ಇಬ್ಬರು ಕ್ಯಾಪ್ಟನ್‌ಗಳು ಹಾಗೂ ಮೂವರು ಕ್ಯಾಬಿನ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಹಾಗಾಗಿ ಅವರನ್ನೂ ವಿಚಾರಿಸಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಏನಿದು ಘಟನೆ?
    ನ್ಯೂಯಾರ್ಕ್ ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ ಎಐ-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದರು. ಮೂತ್ರದಿಂದ ಮಹಿಳೆಯ ಬಟ್ಟೆ, ಶೂ, ಬ್ಯಾಗ್ ಒದ್ದೆಯಾಗಿತ್ತು. ಬ್ಯಾಗ್‌ನಲ್ಲಿ ಅಮೆರಿಕನ್ ಕರೆನ್ಸಿ, ಪಾಸ್‌ಪೋರ್ಟ್ ಸೇರಿ ಮುಖ್ಯವಾದ ದಾಖಲೆಗಳಿದ್ದವು. ಏರ್ ಹೋಸ್ಟೆಸ್ ಕೂಡಾ ಇದನ್ನು ಮುಟ್ಟಲು ನಿರಾಕರಿಸಿದ್ರು. ಬಳಿಕ ಮಹಿಳೆಯನ್ನು ಬಾತ್ ರೂಂಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ ನೀಡಿದ್ರು. ನಂತರ ಬೇರೆ ಸೀಟ್ ಕೊಡುವಂತೆ ಮಹಿಳೆ ಕೇಳಿಕೊಂಡಿದ್ದರು. ಈ ವೇಳೆ ಸೀಟ್‌ಗಳೆಲ್ಲಾ ಭರ್ತಿಯಾಗಿದೆ ಎಂದು ಸಿಬ್ಬಂದಿ ಏರ್ ಹೋಸ್ಟೆಸ್ ಪ್ರಯಾಣ ಮಾಡುವ ಸೀಟ್ ನೀಡಿ ದೆಹಲಿಗೆ ಕರೆದುಕೊಂಡು ಬಂದಿದ್ದರು.

    ಈ ಘಟನೆಯ ಬಳಿಕ ಮಹಿಳೆ ಬಳಿ ಶಂಕರ್ ಮಿಶ್ರಾ ಕ್ಷಮೆಯಾಚಿಸಿದ್ದ. ಆದರೆ ಏರ್ ಇಂಡಿಯಾ ಮಾತ್ರ ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ಮಹಿಳೆಯೊಂದಿಗೆ ಏರ್ ಇಂಡಿಯಾ ಸಿಬ್ಬಂದಿ ನಡೆದುಕೊಂಡ ರೀತಿಯಿಂದ ಮನನೊಂದು ಮಹಿಳೆ ಈ ಬಗ್ಗೆ ಟಾಟಾ ಸನ್ಸ್ ಗ್ರೂಪ್‌ನ ಮುಖ್ಯಸ್ಥರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದರು. ಶನಿವಾರ (ಜ.7) ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ

    ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ

    ಬೆಂಗಳೂರು: ನ್ಯೂಯಾರ್ಕ್‍ನಿಂದ (New York) ನವದೆಹಲಿಗೆ (Delhi) ಸಂಚರಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಸಹಪ್ರಯಾಣಿಕ ಕಂಠಪೂರ್ತಿ ಕುಡಿದು ಮೂತ್ರ ವಿಸರ್ಜಿಸಿದ ಆರೋಪಿ ಶಂಕರ್ ಮಿಶ್ರಾನನ್ನು (Shankar Mishra) ಬೆಂಗಳೂರಿನಲ್ಲಿ (Bengaluru) ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜಿಸಿದ ಕುರಿತಾಗಿ ಮಹಿಳೆ ಟಾಟಾ ಸನ್ಸ್ ಗ್ರೂಪ್‍ನ (Tata Groups) ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದರು. ಆ ಬಳಿಕ ಆರೋಪಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ಎಸ್ಕೇಪ್ ಆಗಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ಆರೋಪಿ ಪತ್ತೆಗಾಗಿ ಕಾರ್ಯಚರಣೆಯಲ್ಲಿ ತೊಡಗಿದ್ದರು. ಇದೀಗ ಬೆಂಗಳೂರಿನ ಸಂಜಯ್ ನಗರ ಗೆಸ್ಟ್ ಹೌಸ್‍ನಲ್ಲಿ ತಲೆಮರೆಸಿಕೊಂಡಿದ್ದ ಶಂಕರ್ ಮಿಶ್ರಾನ ಬಂಧವಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ – ಬೆಂಗಳೂರು ಕಂಪನಿಯಿಂದ ಆರೋಪಿ ವಜಾ

    ಏನಿದು ಘಟನೆ?
    ನ್ಯೂಯಾರ್ಕ್‍ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ AI-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದರು. ಮೂತ್ರದಿಂದ ಮಹಿಳೆಯ ಬಟ್ಟೆ, ಶೂ, ಬ್ಯಾಗ್ ಒದ್ದೆಯಾಗಿತ್ತು. ಬ್ಯಾಗ್‍ನಲ್ಲಿ ಅಮೆರಿಕನ್ ಕರೆನ್ಸಿ, ಪಾಸ್‍ಪೋರ್ಟ್ ಸೇರಿ ಮುಖ್ಯವಾದ ದಾಖಲೆಗಳಿದ್ದವು. ಏರ್ ಹೋಸ್ಟೆಸ್ ಕೂಡಾ ಇದನ್ನು ಮುಟ್ಟಲು ನಿರಾಕರಿಸಿದ್ರು. ಬಳಿಕ ಮಹಿಳೆಯನ್ನು ಬಾತ್ ರೂಂಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ ನೀಡಿದ್ರು. ನಂತರ ಬೇರೆ ಸೀಟ್ ಕೊಡುವಂತೆ ಮಹಿಳೆ ಕೇಳಿಕೊಂಡಿದ್ದರು. ಈ ವೇಳೆ ಸೀಟ್‍ಗಳೆಲ್ಲಾ ಭರ್ತಿಯಾಗಿದೆ ಎಂದು ಸಿಬ್ಬಂದಿ ಏರ್ ಹೋಸ್ಟೆಸ್ ಪ್ರಯಾಣ ಮಾಡುವ ಸೀಟ್ ನೀಡಿ ದೆಹಲಿ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ

    ಈ ಘಟನೆಯ ಬಳಿಕ ಮಹಿಳೆ ಬಳಿ ಶಂಕರ್ ಮಿಶ್ರಾ ಕ್ಷಮೆಯಾಚಿಸಿದ್ದ. ಆದರೆ ಏರ್ ಇಂಡಿಯಾ ಮಾತ್ರ ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ಮಹಿಳೆಯೊಂದಿಗೆ ಏರ್ ಇಂಡಿಯಾ ಸಿಬ್ಬಂದಿ ನಡೆದುಕೊಂಡ ರೀತಿಯಿಂದ ಮನನೊಂದು ಮಹಿಳೆ ಈ ಬಗ್ಗೆ ಟಾಟಾ ಸನ್ಸ್ ಗ್ರೂಪ್‍ನ ಮುಖ್ಯಸ್ಥರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳೆ ಮೇಲೆ ಮೂತ್ರ ವಿಸರ್ಜನೆ – ಬೆಂಗಳೂರು ಕಂಪನಿಯಿಂದ ಆರೋಪಿ ವಜಾ

    ಮಹಿಳೆ ಮೇಲೆ ಮೂತ್ರ ವಿಸರ್ಜನೆ – ಬೆಂಗಳೂರು ಕಂಪನಿಯಿಂದ ಆರೋಪಿ ವಜಾ

    ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿ (Air India Flight) ಹಿರಿಯ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಯನ್ನು ವೇಲ್ಸ್‌ ಫಾರ್ಗೋ ಕಂಪನಿ ವಜಾಗೊಳಿಸಿದೆ.

    ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಅಮೆರಿಕದ ಹಣಕಾಸು ಸಂಸ್ಥೆ ವೇಲ್ಸ್ ಫಾರ್ಗೋ ಸಂಸ್ಥೆಯ ಭಾರತ ಉಪಾಧ್ಯಕ್ಷ ಶಂಕರ್ ಮಿಶ್ರಾ ಇದೀಗ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ಬೆಂಗಳೂರು (Bengaluru), ಮುಂಬೈನಲ್ಲಿ (Mumbai) ಶೋಧ ಕಾರ್ಯ ನಡೆದಿದೆ. ಲುಕೌಟ್ ನೊಟೀಸ್ ಕೂಡ ಜಾರಿಯಾಗಿದೆ. ಇದನ್ನೂ ಓದಿ: ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ

    ಈ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ ವೇಲ್ಸ್ ಫಾರ್ಗೋ (Wells Fargo) ಸಂಸ್ಥೆ ಶಂಕರ್ ಮಿಶ್ರಾ ನನ್ನ ಕೆಲಸದಿಂದಲೇ ವಜಾ ಮಾಡಿದೆ. ಈ ನಡುವೆ ಪ್ರಕರಣ ಬೆಳಕಿಗೆ ಬಂದ ನಂತರ ತೀವ್ರ ಇರಿಸುಮುರುಸಿಗೆ ಗುರಿಯಾಗಿರುವ ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆ ಎಚ್ಚೆತ್ತುಕೊಂಡಿದ್ದು, ಮುಂದೆ ಇಂತಹ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ದೇವಾಲಯಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ – ತರಬೇತಿ ಪಡೀತಿದ್ದ ಪೈಲಟ್ ಸಾವು

    ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಅನುಚಿತ ವರ್ತನೆ ತೋರಿದ ಘಟನೆಗಳು ನಡೆದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರಯಾಣಿಕರು ರಾಜಿಯಾದರೂ ಮೇಲಾಧಿಕಾರಿಗಳ ಗಮನಕ್ಕೆ ತರಲೇಬೇಕು ಎಂದು ಎಚ್ಚರಿಸಿದೆ. ಡಿಜಿಸಿಎ ಕೂಡ ವಿಮಾನ ಸಿಬ್ಬಂದಿಗೆ ಪ್ರತ್ಯೇಕ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

    ಇದಕ್ಕೂ ಮುನ್ನ ಪೊಲೀಸ್ ತನಿಖೆ (Police Investigation) ವೇಳೆ ಸಂತ್ರಸ್ತೆ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದರು. ಮೂತ್ರ ವಿಸರ್ಜನೆ ಮಾಡಿದ ನಂತರ ಅವನು ಅಳಲು ಪ್ರಾರಂಭಿಸಿದ. ನನ್ನಲ್ಲಿ ಕೈಮುಗಿದು ಕ್ಷಮೆಯಾಚಿಸಿದ. ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. ಅಲ್ಲದೇ ಅವನು ನಾನು ಫ್ಯಾಮಿಲಿ ಮ್ಯಾನ್, ಘಟನೆಯಿಂದ ನನ್ನ ಹೆಂಡತಿ ಮಗುವಿಗೆ ತೊಂದರೆಯಾಗಬಾರದು ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ. ಆದ್ದರಿಂದ ಅವನ ವಿರುದ್ಧ ಆರೋಪ ಹೊರಿಸುವುದು ನನಗೆ ತುಂಬಾ ಕಷ್ಟಕರವೆನಿಸಿತ್ತು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ

    ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ

    ನವದೆಹಲಿ: ನ್ಯೂಯಾರ್ಕ್‍ನಿಂದ (New York) ನವದೆಹಲಿಗೆ (Delhi) ಸಂಚರಿಸುತ್ತಿದ್ದ ಏರ್ ಇಂಡಿಯಾ (Air India)  ವಿಮಾನದಲ್ಲಿ (Flight) ಮಹಿಳೆಯೊಬ್ಬರ ಮೇಲೆ ಸಹಪ್ರಯಾಣಿಕ ಕಂಠಪೂರ್ತಿ ಕುಡಿದು ಮೂತ್ರ ವಿಸರ್ಜಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ನ್ಯೂಯಾರ್ಕ್‍ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ AI-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ (Drunk Man) ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಈ ಬಗ್ಗೆ ಮಹಿಳೆ ಕೂಡಲೇ ಏರ್ ಇಂಡಿಯಾ ವಿಮಾನದಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂದಿ ಬಂದು ವಿಚಾರಿಸುತ್ತಿದ್ದಂತೆ ಕುಡಿದ ಮತ್ತಿನಲ್ಲಿ ಏನು ಅರಿಯದವರಂತೆ ವರ್ತಿಸಿದ್ದಾರೆ. ಇದನ್ನೂ ಓದಿ: ಹತ್ಯೆ ಕೇಸ್- ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ

    ಘಟನೆ ಬಳಿಕ ಮಹಿಳೆ ಈ ಬಗ್ಗೆ ಟಾಟಾ ಸನ್ಸ್‌ ಗ್ರೂಪ್‌ನ (Tata Group) ಮುಖ್ಯಸ್ಥ ನಟರಾಜನ್‌ ಚಂದ್ರಶೇಖರನ್‌ ಅವರಿಗೆ ಪತ್ರ ಬರೆದು ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನದ ಸಿಬ್ಬಂದಿ ಘಟನೆಯ ಬಳಿಕ ಈ ಬಗ್ಗೆ ಯಾವುದೇ ರೀತಿಯ ರೆಸ್ಪಾನ್ಸ್ ಮಾಡಿಲ್ಲ. ಇದರಿಂದ ವಿಮಾನದಲ್ಲಿ ಸಂಚರಿಸುವಾಗ ನಮ್ಮ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ಊಟದ ಬಳಿಕ ವಿಮಾನದ ಲೈಟ್ ಆಫ್ ಮಾಡಲಾಗಿತ್ತು. ಈ ವೇಳೆ ಪ್ರಯಾಣಿಕರೊಬ್ಬರು ನನ್ನ ಸೀಟ್ ಬಳಿ ಬಂದು ಮೂತ್ರ ವಿಸರ್ಜಿಸಿದ್ದಾರೆ. ಈ ವೇಳೆ ಅವರ ಖಾಸಗಿ ಅಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಘಟನೆ ಬಗ್ಗೆ ಇದೀಗ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ನವದೆಹಲಿ: 2024ರ ಮಾರ್ಚ್ ವೇಳೆಗೆ ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ (Air India) ವಿಸ್ತಾರಾ ಏರ್‌ಲೈನ್ಸ್ (Vistara Airlines) ಅನ್ನು ವಿಲೀನಗೊಳಿಸುವುದಾಗಿ ಟಾಟಾ ಸಮೂಹ (TaTa Groups) ಅಧಿಕೃತವಾಗಿ ಘೋಷಿಸಿದೆ.

    ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ  ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೌಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗಾಪುರ ಏರ್‌ಲೈನ್ಸ್ (Singapore Airlines) ಕಳೆದ ಅಕ್ಟೋಬರ್‌ನಲ್ಲೇ ತಿಳಿಸಿತ್ತು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ಪ್ರಸ್ತುತ ವಿಸ್ತಾರಾದಲ್ಲಿ (Vistara Airlines) ಟಾಟಾ ಸಮೂಹವು ಶೇ.51ರಷ್ಟು ಪಾಲು ಹೊಂದಿದೆ. ಉಳಿದ ಶೇ.49 ಷೇರು ಸಿಂಗಾಪುರ ಏರ್‌ಲೈನ್ಸ್‌ನಲ್ಲೇ ಇದೆ. ಇದೀಗ ವಹಿವಾಟಿನ ಭಾಗವಾಗಿ ಎಸ್‌ಐಎ, ಏರ್ ಇಂಡಿಯಾದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?

    ಈಗಾಗಲೇ ಏರ್ ಇಂಡಿಯಾದ ಪೂರ್ಣ ಮಾಲೀಕತ್ವ ಹೊಂದಿರುವ ಟಾಟಾ ಸಮೂಹ, ಏರ್‌ಏಷ್ಯಾ ಇಂಡಿಯಾ (AirAsia India) ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಹೂಡಿಕೆಯ ಭಾಗವಾಗಿ ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತು.

    ಸದ್ಯ 2024ರ ಮಾರ್ಚ್ ತಿಂಗಳೊಳಗೆ ವಿಲೀನಗೊಳಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ (Air India) ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಿದೆ.

    ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು (Women’s) ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಏರ್ ಇಂಡಿಯಾಗೆ 1,000 ಕೋಟಿ ಮರುಪಾವತಿ, ದಂಡ ಪಾವತಿಸಲು ಅಮೆರಿಕ ಆದೇಶ

    ಏರ್ ಇಂಡಿಯಾಗೆ 1,000 ಕೋಟಿ ಮರುಪಾವತಿ, ದಂಡ ಪಾವತಿಸಲು ಅಮೆರಿಕ ಆದೇಶ

    ವಾಷಿಂಗ್ಟನ್: ಟಾಟಾ ಗ್ರೂಪ್ಸ್ (Tata-Group) ಒಡೆತನದ ಏರ್ ಇಂಡಿಯಾಗೆ (Air India)  ಮರುಪಾತಿ (Refund) ಹಾಗೂ ದಂಡವಾಗಿ (Fine) ಅಮೆರಿಕ (America) 121.5 ಮಿಲಿಯನ್ ಡಾಲರ್ (ಸುಮಾರು 987 ಕೋಟಿ ರೂ.) ವಿಧಿಸಿದೆ. ಈ ಮೂಲಕ ಏರ್ ಇಂಡಿಯಾ ಭಾರೀ ನಷ್ಟ ಅನುಭವಿಸಲಿದೆ.

    ಕೋವಿಡ್ ಸಾಂಕ್ರಾಮಿಕ ವೇಳೆಯಲ್ಲಿ ಸಾಕಷ್ಟು ಬಾರಿ ವಿಮಾನ ರದ್ದತಿ ಹಾಗೂ ವಿಮಾನ ಬದಲಾವಣೆ ಮಾಡಿರುವ ಹಿನ್ನೆಲೆ ಏರ್ ಇಂಡಿಯಾ ಸೇರಿದಂತೆ ಒಟ್ಟು 6 ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕ ಒಟ್ಟು 600 ಮಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂ.) ಮರುಪಾವತಿ ಮಾಡುವಂತೆ ಹೇಳಿದೆ.

    ವರದಿಗಳ ಪ್ರಕಾರ, ಏರ್ ಇಂಡಿಯಾ ರದ್ದುಗೊಳಿಸಿದ ಹಾಗೂ ವಿಮಾನಗಳನ್ನು ಬದಲಿಸಿದ ಕಾರಣಕ್ಕೆ ಸಲ್ಲಿಸಲಾದ 1,900 ಮರುಪಾವತಿ ದೂರುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವುಗಳಿಗೆ ಪ್ರತಿಕ್ರಿಯಿಸಲು 100ಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡಿದೆ.

    ಏರ್ ಇಂಡಿಯಾ ವಿಮಾನ ರದ್ದತಿ ಹಾಗೂ ವಿಳಂಬಗೊಳಿಸಿದ್ದಕ್ಕೆ ತಮ್ಮ ಗ್ರಾಹಕರಿಗೆ ಸಕಾಲದಲ್ಲಿ ಮರುಪಾವತಿಯನ್ನು ಮಾಡಿಲ್ಲ. ತಮ್ಮ ಗ್ರಾಹಕರಿಗೆ ಮರುಪಾವತಿ ಮಾಡುವಲ್ಲಿ ತೀವ್ರವಾದ ವಿಳಂಬ ಮಾಡಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಸಂಸ್ಥೆಗೆ ದಂಡ ವಿಧಿಸಿರುವುದಾಗಿ ಅಮೆರಿಕದ ಸಾರಿಗೆ ಇಲಾಖೆ ತಿಳಿಸಿದೆ.

    ಏರ್ ಇಂಡಿಯಾದೊಂದಿಗೆ ಫ್ರಾಂಟಿಯರ್, ಟಿಎಪಿ ಪೋರ್ಚುಗಲ್, ಏರೋ ಮೆಕ್ಸಿಕೋ, ಇಐ ಎಐ ಮತ್ತು ಏವಿಯಾಂಕಾ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ 121.5 ಮಿಲಿಯನ್ ಡಾಲರ್ ಮರುಪಾವತಿಯೊಂದಿಗೆ 1.4 ಮಿಲಿಯನ್ ಡಾಲರ್ (11 ಕೋಟಿ ರೂ.) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]