Tag: ಏರ್‌ಪೋರ್ಟ್‌ ರಸ್ತೆ

  • ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

    ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

    ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಬಿಬಿಎಂಪಿ (BBMP) ಏರ್‌ಪೋರ್ಟ್ ರಸ್ತೆ (Airport Road) ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

    ಸಿಲಿಕಾನ್ ಸಿಟಿಯಲ್ಲಿ (Silicon City) ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ರಸ್ತೆಗಳ ಪೈಕಿ ಏರ್‌ಪೋರ್ಟ್ ರಸ್ತೆ ಕೂಡ ಒಂದು. ಹೀಗಾಗಿ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ.ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌ ಭೇಟಿ

    ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಹೆಣ್ಣೂರು, ಬಾಗಲೂರು ಮಾರ್ಗದಲ್ಲಿ ಹೆಚ್ಚು ಟ್ರಾಫಿಕ್ ಇರುತ್ತದೆ. ಹೀಗಾಗಿ ಟ್ರಾಪಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಹೆಣ್ಣೂರು ಜಂಕ್ಷನ್‌ನಿಂದ ಬಾಗಲೂರುವರೆಗೂ ಎಲಿವೇಟೆಡ್ ಕಾರಿಡಾರ್ ಮಾಡಲಿದ್ದಾರೆ. ಎಲಿವೆಟೆಡ್ ಕಾರಿಡಾರ್ ಆದರೆ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಟ್ರಾಫಿಕ್ ಕಡಿಮೆ ಆಗುತ್ತದೆ.

    ಇನ್ನೂ ಏರ್‌ಪೋರ್ಟ್ಗೆ ಕನೆಕ್ಟ್ ಆಗುವ ಮಾರ್ಗಕ್ಕೆ ತುಂಬಾ ಅನುಕೂಲಕರ ಆಗಿರಲಿದೆ. ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆ ಇಟ್ಟಿದ್ದು, ಈ ವರ್ಷದಲ್ಲೇ ಮುಗಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ ಕೇಸ್‌ಗೆ ಟ್ವಿಸ್ಟ್ – ನಮ್ಮಿಬ್ಬರಿಗೂ ಮದುವೆಯಾಗಿದೆ ಅಂತ ಪೊಲೀಸರಿಗೆ ತಿಳಿಸಿದ ಯುವತಿ

  • KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್, ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

    ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದಾಗ ದೇವನಹಳ್ಳಿ ಸಮೀಪದ ಚಿಕ್ಕಸಣ್ಣೆ ಬಳಿ ಕಲ್ಲು ಸಾಗಿಸುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್, ಟ್ರ್ಯಾಕ್ಟರ್‌ನಿಂದ ತಪ್ಪಿಸಿಕೊಳ್ಳಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು, ಟ್ರಾಕ್ಟರ್ ಮೇಲೆ ಹರಿದಿದೆ. ಅಲ್ಲದೇ ಬ್ಯಾರಿಕೇಡ್ ಭೇದಿಸಿಕೊಂಡು ರಸ್ತೆ ಬದಿಗೆ ಬಂದು ನಿಂತಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಸದ್ಯ ಕಾರಿನಲ್ಲಿದ್ದವರು ತೆಲಂಗಾಣ ಮೂಲದ ಗುಪ್ತಚರ ಇಲಾಖೆಯ ಡಿಸಿಪಿ ಹಾಗೂ ಅವರ ಕುಟುಂಬದವರು ಎಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿಗೆ ಡ್ಯಾಮೇಜ್ ಆಗಿದ್ದು, ಜೊತೆಗೆ ಬಸ್‍ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಚಿಕ್ಕಪುಟ್ಟ ಗಾಯಗಳಾಗಿದೆ. ಇದೀಗ ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ  ಪೊಲೀಸರು ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್‍ ಠಾಕ್ರೆ ಆಸ್ಪತ್ರೆಗೆ ದಾಖಲು- ನಾಳೆ ಶಸ್ತ್ರಚಿಕಿತ್ಸೆ