Tag: ಏರೋ ಶೋ

  • ಏರ್ ಶೋ ಹಿಂಭಾಗದಲ್ಲಿ ಬೆಂಕಿ: 40 ಎಕರೆ ಅರಣ್ಯ ಪ್ರದೇಶ ಧಗಧಗ

    ಏರ್ ಶೋ ಹಿಂಭಾಗದಲ್ಲಿ ಬೆಂಕಿ: 40 ಎಕರೆ ಅರಣ್ಯ ಪ್ರದೇಶ ಧಗಧಗ

    ಬೆಂಗಳೂರು: ಯಲಹಂಕದ ಏರ್ ಶೋ ಪ್ರದೇಶದ ಗೇಟ್ ನಂಬರ್ 5ರಲ್ಲಿ ನಿನ್ನೆಯಷ್ಟೇ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಘಟನೆ ಮಾಸುವ ಮುನ್ನವೇ ಏರೋ ಶೋ ನಡೆಯುತ್ತಿರುವ ಹಿಂಭಾಗದ ವಾಯುನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

    ವಾಯುನೆಲೆಯ ಹಿಂಭಾಗದ ಆರ್ ಟಿಓ ಕಚೇರಿ ಬಳಿ ಇರುವ ಜಾರಕಬಂಡೆ ಅರಣ್ಯ ಪ್ರದೇಶದಲ್ಲಿರುವ 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

    ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಪ್ರದೇಶದಲ್ಲಿ ಒಣ ಹುಲ್ಲು ಇದ್ದಿದ್ದರಿಂದ ಬೆಂಕಿಯ ವ್ಯಾಪ್ತಿ ಹೆಚ್ಚಾಗಿದೆ. ಇದರಿಂದಾಗಿ ಅರಣ್ಯದ ಒಳಗೆ ಪ್ರವೇಶಿಸಲು ಸಾಧ್ಯವಾಗದಷ್ಟು ದಟ್ಟವಾಗಿ ಬೆಂಕಿ ಹೊತ್ತಿ ಉರಿಯುತ್ತಿದೆ.

    ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಗ್ನಿ ಶಾಮಕ ಸಿಬ್ಬಂದಿ ಶೇ.40ರಷ್ಟು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಮತ್ತಷ್ಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ಉಳಿಸಲು ಕಾಂಟ್ರ್ಯಾಕ್ಟರ್‌ಗಳು ಮುಂಜಾಗ್ರತ ಕ್ರಮಕೈಗೊಂಡಿಲ್ಲ: ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್

    ಹಣ ಉಳಿಸಲು ಕಾಂಟ್ರ್ಯಾಕ್ಟರ್‌ಗಳು ಮುಂಜಾಗ್ರತ ಕ್ರಮಕೈಗೊಂಡಿಲ್ಲ: ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್

    -ಬೆಂಕಿ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣನಾ?

    ಬೆಂಗಳೂರು: ಏರೋ ಶೋ ಕಾಂಟ್ರ್ಯಾಕ್ಟರ್ ಗಳು ಹಣ ಉಳಿಸಲು ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಹೀಗಾಗಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ ಎಂದು ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್ ಮಂಜುನಾಥ್ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಂಜುನಾಥ್, ಫ್ಯಾಬ್ರಿಕಾನಾ ಎಕ್ಸಿಬ್ಯುಷನ್ 1994ರಿಂದ 2007 ವರೆಗೂ ಆಫೀಸಿಯಲ್ ಕಾಂಟ್ರ್ಯಾಕ್ಟರ್ ಪಡೆದಿತ್ತು. ಆಗ ಅಗ್ನಿಶಾಮಕ ದಳವನ್ನು ಪ್ರತ್ಯೇಕವಾಗಿ ಸರ್ಕಾರದಿಂದ ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಕಾಂಟ್ರ್ಯಾಕ್ಟ್ ಕೈ ತಪ್ಪಿತ್ತು ಎಂದು ತಿಳಿಸಿದರು.

    ಏರೋ ಶೋ ಆರಂಭಕ್ಕೂ ಎರಡು ತಿಂಗಳ ಮುನ್ನವೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಕೊಳ್ಳಬೇಕು. ಈ ನಿಟ್ಟಿನಲ್ಲಿ ಏರೋ ಶೋ ನಡೆಯುವ ಸುತ್ತಮುತ್ತಲಿನ ಜಾಗದಲ್ಲಿರುವ ಒಣ ಹುಲ್ಲನ್ನು ತೆಗೆದು ಹಾಕಬೇಕು. ಮಣ್ಣು ಕಾಣುವವರೆಗೂ ನೆಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಆದರೆ ಈ ಬಾರಿ ಏರೋ ಶೋ ನಡೆಸುತ್ತಿರುವವರು ಒಣ ಹುಲ್ಲನ್ನು ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ದೂರಿದರು.

    ಏರೋ ಶೋ ನಡೆಯುವ ಸುತ್ತಲಿನ ಪ್ರದೇಶಕ್ಕೆ ದಿನವೂ ಸುಮಾರು 50 ಲಕ್ಷ ಲೀಟರ್ ನೀರು ಹಾಕಬೇಕು. ಇಂತಹ ಎಕ್ಸಿಬಿಷನ್‍ಗಳನ್ನು ಕೇವಲ ಒಬ್ಬರಿಗೆ ಕಾಂಟ್ರ್ಯಾಕ್ಟ್ ನೀಡಬಾರದು. ಏಕೆಂದರೆ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ನಿರ್ಧಾರಗಳನ್ನು ಕೇಂದ್ರ ರಕ್ಷಣಾ ಸಚಿವಾಲಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

    ಹಣ ಉಳಿಸುವ ಉದ್ದೇಶದಿಂದ ಅನೇಕ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಲಕ್ಷಿಸಿದ್ದಾರೆ. ರಕ್ಷಣಾ ಸಚಿವಾಲಯವು ಕಾಂಟ್ರ್ಯಾಕ್ಟ್ ನೀಡಲು ಟೆಂಡರ್ ಕರೆಯುತ್ತದೆ. ಹೀಗಾಗಿ ನಾನು ಕಳೆದ ಹತ್ತು ವರ್ಷಗಳಿಂದ ಕಾಂಟ್ರ್ಯಾಕ್ಟ್ ಪಡೆದು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೆ. ಆದರೆ ಈ ಬಾರಿ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಎಚ್‍ಎಎಲ್ ನನಗೆ ಕಾಂಟ್ರ್ಯಾಕ್ಟ್ ಕೈ ತಪ್ಪಿಸಿತು ಎಂದು ಹೇಳಿದರು.

    ಈ ಬಾರಿ ಕಾಂಟ್ರ್ಯಾಕ್ಟರ್ ಪಡೆದವರು ಯಾರು ಯಾವ ಕೆಲಸ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಅಷ್ಟೇ ಅಲ್ಲದೆ ಕಾಂಟ್ರ್ಯಾಕ್ಟ್ ಕೊಟ್ಟ ಬಳಿಕ ಎಚ್‍ಎಎಲ್ ಅಧಿಕಾರಿಗಳು ಬಂದು ಕಾಮಗಾರಿಯನ್ನು ಪರಿಶೀಲನೆ ಮಾಡಬೇಕು. ಆದರೆ ಹುಲ್ಲು ಇದ್ದರೂ ಏರೋ ಶೋ ಹೇಗೆ ನಡೆಸಿದರು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ದೂರಿದರು.

    https://www.youtube.com/watch?v=1MBmvHvh1bU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    -ಏರೋ ಇಂಡಿಯಾ ಶೋನಲ್ಲಿ ಅಗ್ನಿದೇವನ ರುದ್ರ ನರ್ತನ

    ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

    ಪಾರ್ಕಿಂಗ್ ಗೇಟ್ ನಂಬರ್ 5ರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಲಹಂಕ ವಾಯುನೆಲೆಯಲ್ಲಿಯ ಏರ್ ಶೋ ಸ್ಥಗಿತಗೊಂಡಿದೆ. ಪಾರ್ಕಿಂಗ್ ಲಾಟ್ ಬಳಿ ಒಣಹುಲ್ಲು ಹೆಚ್ಚಾಗಿದ್ದು, ಸಿಗರೇಟ್ ಹಾಕಿದ್ದರಿಂದ ಬೆಂಕಿ ಹತ್ತಲು ಕಾರಣ ಎಂದು ಹೇಳಲಾಗುತ್ತಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ವಾಹನದ ಮಾಲೀಕರು ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಯಾರನ್ನು ಒಳಗಡೆ ಬಿಡುತ್ತಿಲ್ಲ.

    ಯಲಹಂಕದ ಬಳಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕ ಮತ್ತು ಹೆಬ್ಬಾಳದ ಕಡೆ ಪ್ರಯಾಣ ಬೆಳೆಸುವವರು ಮಾರ್ಗ ಬದಲಿಸಿಕೊಳ್ಳುವುದು ಉತ್ತಮ. ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಎಂದು ಸಾವಿರಾರು ಸಂಖ್ಯೆಯಲ್ಲಿ ಜನರು ಏರ್ ಶೋ ಕಣ್ತುಂಬಿಕೊಳ್ಳಲು ಆಗಮಿಸಿದ್ದರು.

    ಬೆಂಕಿ ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಇಲ್ಲದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ತಮ್ಮ ಮುಂದೆಯೇ ನೆಚ್ಚಿನ ಕಾರು ಅಗ್ನಿದೇವನಿಗೆ ಆಹುತಿ ಆಗುತ್ತಿರೋದನ್ನು ಕಂಡು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಕೆಲವರು ನಮ್ಮ ಕಾರುಗಳನ್ನು ತೆಗೆದುಕೊಳ್ಳಲು ಒಳಗೆ ಬಿಡಿ ಎಂದು ಭದ್ರತಾ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

    https://www.youtube.com/watch?v=lVsSt2_gisQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv