Tag: ಏರೋ ಇಂಡಿಯಾ ಏರ್ ಶೋ

  • `ಏರೋ ಇಂಡಿಯಾ 2023′ ಏರ್ ಶೋಗೆ ದಿನಾಂಕ ಫಿಕ್ಸ್

    `ಏರೋ ಇಂಡಿಯಾ 2023′ ಏರ್ ಶೋಗೆ ದಿನಾಂಕ ಫಿಕ್ಸ್

    ಬೆಂಗಳೂರು: 2 ವರ್ಷಗಳಿಗೊಮ್ಮೆ ನಡೆಯುವ ಭಾರತದ ಏರ್ ಶೋ (Air Show) `ಏರೋ ಇಂಡಿಯಾ- 2023′ (Aero India-2023) ಮುಂದಿನ ವರ್ಷ ಫೆಬ್ರವರಿ 13 ರಿಂದ 17ರ ವರೆಗೆ ಬೆಂಗಳೂರಿನ (Bengaluru) ಯಲಹಂಕಾದಲ್ಲಿ (Yalahanka) ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

    ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದ್ದು, ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಘೋಷಣೆಯಾಗಿದೆ. ಫೆಬ್ರವರಿ 13-17ರ ವರೆಗಿನ ದಿನಾಂಕವನ್ನು ಗುರುತು ಮಾಡಿಕೊಳ್ಳಿ. 2023ರ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಡಿಕೆ ಬೆಳೆಗಾರರ ಜೊತೆ ಸರ್ಕಾರ ಇದೆ : ಬೊಮ್ಮಾಯಿ

    ಇದು ಏರೋ ಇಂಡಿಯಾದ 14ನೇ ಆವೃತ್ತಿಯಾಗಲಿದೆ. ಹಿಂದಿನ ವರ್ಷದಂತೆ, ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನದ ದಿನಾಂಕಗಳನ್ನು ಮುಂಚಿತವಾಗಿ ಘೋಷಿಸಿದೆ. ಆದರೆ ಪ್ರದರ್ಶನದಲ್ಲಿ ಭಾಗವಹಿಸಲಿರುವ ದೇಶಗಳು ಹಾಗೂ ಪ್ರದರ್ಶಕರ ಬಗ್ಗೆ ಯಾವುದೇ ರೀತಿಯ ಉಲ್ಲೇಖಗಳನ್ನು ಮಾಡಲಾಗಿಲ್ಲ. ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ವಿವಿಧ ಸಮಿತಿಗಳು ಪ್ರಕಟ

    Live Tv
    [brid partner=56869869 player=32851 video=960834 autoplay=true]