Tag: ಏಪ್ರಿಲ್

  • ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ನವದೆಹಲಿ: ಮಾರುತಿ ಕಂಪನಿಯ ಡಿಸೈರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹಗ್ಗೆಳಿಕೆಗೆ ಪಾತ್ರವಾಗಿದೆ. ಏಪ್ರಿಲ್‍ನಿಂದ ಆರಂಭಗೊಂಡ ಈ ಹಣಕಾಸು ವರ್ಷದಲ್ಲಿ 1.2 ಲಕ್ಷ  ಡಿಸೈರ್ ಕಾರು ಮಾರಾಟಗೊಂಡಿದೆ.

    ಕಳೆದ 15 ವರ್ಷಗಳಿಂದಲೂ ಮಾರುತಿ ಕಂಪನಿಯ ಅಲ್ಟೋ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ದೇಶದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿತ್ತು. ಆದರೆ ಈ ಬಾರಿ ಈ ಪಟ್ಟ ಡಿಸೈರ್‌ಗೆ ಸಿಕ್ಕಿದೆ. ಏಪ್ರಿಲ್‍ನಿಂದ ಆರಂಭಗೊಂಡು ನವೆಂಬರ್ ಅವಧಿಯವರೆಗೆ ಒಟ್ಟು 1,28,695 ಡಿಸೈರ್ ಕಾರುಗಳು ಮಾರಾಟಗೊಂಡಿದೆ.

     

    ಸೈಜ್ ಮತ್ತು ಸ್ಟೇಟಸ್ ವಿಚಾರದಲ್ಲಿ ಈ ಕಾರು ಜನರ ಮನ ಗೆದ್ದಿದೆ. ಈ ಹಿಂದೆ ಹ್ಯಾಚ್‍ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತಿತ್ತು. ಈಗ ಜನರ ಚಿಂತನೆ ಬದಲಾಗಿದ್ದು ಸುರಕ್ಷತೆಯತ್ತ ಗಮನ ನೀಡುತ್ತಾರೆ. ಇದರ ಪರಿಣಾಮ ಸೆಡಾನ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಈ ಅವಧಿಯಲ್ಲಿ ಹೋಂಡಾ ಅಮೇಝ್ 40,676 ಕಾರುಗಳು ಮಾರಾಟಗೊಂಡಿದ್ದರೆ, ಹುಂಡೈ ಕಂಪನಿ ಎಕ್ಸೆಂಟ್ 12,239 ಕಾರುಗಳು ಮಾರಾಟಗೊಂಡಿದೆ. ಫೋರ್ಡ್ ಕಂಪನಿಯ ಆಸ್ಪೈರ್ 6,765  ಕಾರುಗಳು ಮಾರಾಟಗೊಂಡಿದೆ.

    2017ಕ್ಕೆ ಮೂರನೇ ತಲೆಮಾರಿನ  ಡಿಸೈರ್ ಕಾರನ್ನು ಬಿಡುಗಡೆ ಮಾಡಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್, 1.3ಲೀಟರ್ ಡೀಸೆಲ್ ಎಂಜಿನ್ ನಲ್ಲಿ  ಡಿಸೈರ್ ಕಾರು ಲಭ್ಯವಿದೆ. 2,450 ಮಿ.ಮೀ ವೀಲ್ ಬೇಸ್, 3,995 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,515 ಮಿ.ಮೀ ಎತ್ತರವನ್ನು ಹೊಂದಿದೆ.

    2008 ರಲ್ಲಿ ಮೊದಲ ತಲೆಮಾರಿನ ಸ್ವಿಫ್ಟ್ ಡಿಸೈರ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ 19 ತಿಂಗಳಿನಲ್ಲಿ 1 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿತ್ತು.

  • ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ಬೆಂಗಳೂರು: ಕಮರ್ಶಿಯಲ್ ಹೀರೋಯಿನ್ ಆಗಿ ಮಿಂಚಬೇಕು, ಅದರಲ್ಲಿಯೇ ನಂಬರ್ ಒನ್ ಆಗಿ ನೆಲೆ ಕಂಡುಕೊಳ್ಳಬೇಕೆಂಬುದು ಬಹುತೇಕ ನಟಿಯರ ಏಕ ಮಾತ್ರ ಕನಸು. ಆದರೆ ನಿಜವಾದ ಕಲಾವಿದೆಯರಿಗೆ ಒಂದೇ ಟ್ರ್ಯಾಕಿನಲ್ಲಿ ಬಹು ದಿನ ನಡೆದರೆ ಮತ್ತೆತ್ತಲೋ ಹೊರಳಿಕೊಳ್ಳಬೇಕೆನ್ನಿಸುತ್ತೆ. ಸದ್ಯ ರಚಿತಾ ರಾಮ್ ಕೂಡಾ ಅದೇ ಮೂಡಿನಲ್ಲಿರೋ ವಿಚಾರ ಅವರದ್ದೇ ಮಾತುಗಳ ಮೂಲಕ ಅನಾವರಣಗೊಂಡಿದೆ.

    ರಚಿತಾ ರಾಮ್ ಆರಂಭದಲ್ಲಿ ಸೀರಿಯಲ್ ನಟಿಯಾಗಿ ಬೆಳಕಿಗೆ ಬಂದವರು. ಸೀರಿಯಲ್ಲಿನಲ್ಲಿ ನಟಿಸುತ್ತಿರುವಾಗಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ನಟಿಸೋ ಮೂಲಕ ರಚಿತಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಂಡಿದ್ದರು. ಆ ಬಳಿಕ ಸುದೀಪ್ ಅವರಂಥಾ ನಟರ ಜೊತೆಗೂ ನಟಿಸಿದ ರಚಿತಾ ಈಗ ಕನ್ನಡದ ಮುಖ್ಯ ನಾಯಕಿ. ಆದರೆ ಬಹು ಹಿಂದಿನಿಂದಲೇ ಕಮರ್ಶಿಯಲ್ ಇಮೇಜಿನಾಚೆಗೆ ಗುರುತಿಸಿಕೊಳ್ಳುವ ಬಯಕೆಯೊಂದು ಅವರಲ್ಲಿ ಮೂಡಿಕೊಂಡಿತ್ತಂತೆ. ಅದರ ಫಲವಾಗಿಯೇ ಅವರು ಏಪ್ರಿಲ್ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ!

    ಮೊನ್ನೆ ರಚಿತಾ ಅವರ ಹುಟ್ಟು ಹಬ್ಬವಿತ್ತಲ್ಲಾ? ಇದಕ್ಕೆ ಏಪ್ರಿಲ್ ಚಿತ್ರತಂಡ ಈ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಶುಭ ಕೋರಿತ್ತು. ಈ ಸಂದರ್ಭದಲ್ಲಿ ರಚಿತಾ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾದದ್ದು. ಇದರಲ್ಲಿನ ಏಪ್ರಿಲ್ ಡಿಸೋಜಾ ಎಂಬ ಪಾತ್ರ ಸವಾಲಿನದ್ದಂತೆ. ಅದನ್ನು ಖುಷಿಯಿಂದಲೇ ಸ್ವೀಕರಿಸಿರುವ ರಚಿತಾ ಈ ಮೂಲಕ ತಮ್ಮ ಮನದಾಸೆ ಈಡೇರುವ ಭರವಸೆ ಹೊಂದಿದ್ದಾರೆ. ಕಮರ್ಶಿಯಲ್ ಜಾಡಿನಲ್ಲಿಯೂ ಹೀಗೆಯೇ ಸವಾಲಿನ, ಅಪರೂಪದ ಪಾತ್ರಗಳನ್ನು ಆರಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಪ್ರಿಲ್ 1ರಿಂದ ಯಾವ ವಸ್ತು ದುಬಾರಿ, ಯಾವುದು ಚೀಪ್- ಇಲ್ಲಿದೆ ಪಟ್ಟಿ

    ಏಪ್ರಿಲ್ 1ರಿಂದ ಯಾವ ವಸ್ತು ದುಬಾರಿ, ಯಾವುದು ಚೀಪ್- ಇಲ್ಲಿದೆ ಪಟ್ಟಿ

    ನವದೆಹಲಿ: ಏಪ್ರಿಲ್ 1 ಅಂದರೆ ಇಂದಿನಿಂದ ಆರಂಭವಾಗಿರುವ ಹೊಸ ಆರ್ಥಿಕ ವರ್ಷದಲ್ಲಿ ದಿನಬಳಕೆಯ ಅನೇಕ ವಸ್ತುಗಳು ದುಬಾರಿಯಾಗಲಿವೆ. 2017-18ನೇ ಸಾಲಿನ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನ ಹೆಚ್ಚಿಸಿದ್ದರು ಹಾಗೇ ಇನ್ನೂ ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನ ಕಡಿಮೆ ಮಾಡಿದ್ದರು. ಇದಕ್ಕನುಗುಣವಾಗಿ ಕೆಲವು ವಸ್ತುಗಳು ದುಬಾರಿಯಾಗಿದ್ದರೆ ಮತ್ತೂ ಕೆಲವು ಅಗ್ಗವಾಗಿವೆ. ಅವುಗಳ ಪಟ್ಟಿ ಇಲ್ಲಿದೆ:

    ಯಾವುದು ದುಬಾರಿ?: 
    1. ಸಿಗರೇಟ್
    2. ಪಾನ್ ಮಸಾಲಾ
    3. ಸಿಗರ್
    4. ಬೀಡಿ
    5. ತಂಬಾಕು
    6. ಎಲ್‍ಇಡಿ ದೀಪದ ಘಟಕಗಳು
    7. ಗೋಡಂಬಿ
    8. ಅಲ್ಯೂಮಿನಿಯಂ ಅದಿರು
    9. ಆಪ್ಟಿಕಲ್ ಫೈಬರ್ ತಯಾರಿಕೆಯಲ್ಲಿ ಬಳಸುವ ಪಾಲಿಮರ್ ಲೇಪನವಿರುವ ಎಂಎಸ್ ಟೇಪ್
    10. ಬೆಳ್ಳಿ ನಾಣ್ಯಗಳು

    ಇದಲ್ಲದೆ ಏಪ್ರಿಲ್ 1ರಿಂದ ಕಾರ್, ಮೋಟಾರ್‍ಸೈಕಲ್ ಹಾಗೂ ಆರೋಗ್ಯ ವಿಮೆಗಳಿಗೆ ಹೆಚ್ಚಿನ ಪ್ರೀಮಿಯಮ್ ಪಾವತಿಸಬೇಕಾಗುತ್ತದೆ

    ಯಾವುದು ಅಗ್ಗ?: 
    1. ಆನ್‍ಲೈನ್ ರೈಲ್ವೆ ಟಿಕೆಟ್ ಕಾಯ್ದಿರಿಸುವುದು
    2. ಫ್ಯೂಲ್ ಸೆಲ್ ಆಧರಿತ ಶಕ್ತಿ ಉತ್ಪಾದಕ ಸಾಧನಗಳು
    3. ಗಾಳಿ ಚಾಲಿತ ಶಕ್ತಿ ಉತ್ಪಾದಕಗಳು
    4. ಎಲ್‍ಎನ್‍ಜಿ(ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್)/ ನೈಸರ್ಗಿಕ ಅನಿಲ
    5 ಸೋಲಾರ್ ಪ್ಯಾನೆಲ್‍ಗಳಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್
    6 ಲೆದರ್ ಉತ್ಪನ್ನಗಳ ತಯಾರಿಕೆಗೆ ಬಳಸುವ ವೆಜಿಟೆಬಲ್ ಟ್ಯಾನಿಂಗ್ ಎಕ್ಸ್ಟ್ರಾಕ್ಟ್ಸ್
    7. ಪಿಓಎಸ್ ಮಷೀನ್ ಕಾರ್ಡ್ ಮತ್ತು ಫಿಂಗರ್‍ಪ್ರಿಂಟ್ ರೀಡರ್‍ಗಳು
    8. ರಕ್ಷಣಾ ಸೇವೆಗಳಿಗೆ ಸಾಮೂಹಿಕ ಇನ್ಶೂರೆನ್ಸ್
    9. ಮನೆಬಳಕೆಯ ಆರ್‍ಓ ಮೆಂಬ್ರೆನ್ಸ್ ಘಟಕಗಳು