Tag: ಏತ ನೀರಾವರಿ ಕಾಮಗಾರಿ

  • ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ಹಾಸನ: ಎತ್ತಿನ ಹೊಳೆ ಯೋಜನೆಗೆ (Yettinahole Project) ಚಾಲನೆ ನೀಡಲಿರುವ ಹಿನ್ನೆಲೆ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ನಡೆದ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಭಾಗಿಯಾದರು. 9 ಪೂರ್ಣಾಹುತಿ ಕುಂಭಗಳಿಗೆ ಬಿಲ್ವ ಪತ್ರೆ ಹಿಡಿದು ಪೂಜೆ ಸಲ್ಲಿಸಿದರಲ್ಲದೇ ಭಕ್ತಿ ಭಾವರಿಂದ ಪೂಜೆ ನೆರವೇರಿಸಿದರು. ಇದೇ ವೇಳೆ ಗಣಪತಿ, ವಾಸ್ತು, ಮೃತ್ಯುಂಜಯ, ನವಗ್ರಹ ಹೋಮಗಳನ್ನು ನೆರವೇರಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದು ಐತಿಹಾಸಿಕ ದಿನ, ಐತಿಹಾಸಿಕ ಕ್ಷಣ. ಇದು ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಯೋಜನೆ. ರಾಜ್ಯದ ಜನತೆಗೆ ತುಂಬಾ ಸಂತೋಷವಾಗಿದೆ. ಗೌರಿ ಹಬ್ಬದ ದಿನವೇ ಗಂಗೆ ಪೂಜೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಭಗೀರಥ ಪ್ರಯತ್ನ ಮಾಡಿ ಯೋಜನೆ ಮಾಡಿದೆ. ಈ ಯೋಜನೆ ಜಾರಿ ಸಾದ್ಯವೇ ಇಲ್ಲ ಎಂದಿದ್ದರು, ಆದರೆ ನಾವು ಸವಾಲಾಗಿ ಸ್ವೀಕಾರ ಮಾಡಿ ಜಾರಿ ಮಾಡಿದ್ದೇವೆ ಎಂದು ಬೀಗಿದ್ದಾರೆ. ಇದನ್ನೂ ಓದಿ: ಟಿಫಿನ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದಿದ್ದಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಪ್ರಾಂಶುಪಾಲ

    ಛಲ, ಸಂಕಲ್ಪ, ಸ್ಚಇಚ್ಛೆಯಿಂದ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ನಮ್ಮ ಸಂಕಲ್ಪ, ನಮ್ಮ ಪ್ರತಿಷ್ಠೆ ಕೂಡ ಆಗಿತ್ತು. ಅಧಿಕಾರಿಗಳು, ನೌಕರರು ಯೋಜನೆ ಮಾಡಿದವರು ಎಲ್ಲರ ಪರಿಶ್ರಮ ಇದೆ. ಈ ಯೋಜನೆ ಜಾರಿಗಾಗಿ ಹಲವರು ಪ್ರಯತ್ನ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿ ಜಾರಿ ಮಾಡಿದ್ರು. ಇದು ನನಗೆ ಸಿಕ್ಕ ಭಾಗ್ಯ ಎಂದು ಬಣ್ಣಿಸಿದರು. ಇದನ್ನೂ ಓದಿ: ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಗಂಗೆ-ಗೌರಿಗೆ ನಮನ ಅರ್ಪಿಸಿ ಯೋಜನೆಗೆ ಚಾಲನೆ ನೀಡಿದ್ದೇವೆ ಎನ್ನುತ್ತಲೇ ʻಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯʼ ಎಂಬ ಶ್ಲೋಕ ಹೇಳಿದರು. ಇದು ಕೆರೆ ತುಂಬಿಸೊ ಭಾಗ್ಯದ ಯೋಜನೆ, ಏನೇ ಕಷ್ಟ ಆದರೂ ಜಾರಿ ತರೋ ಪ್ರಯತ್ನ ಮಾಡಿದ್ದೇನೆ. ಇನ್ನೂ ಚಾಲೆಂಜ್ ಇದೆ ಎಲ್ಲವನ್ನು ಹಿಮ್ನೆಟ್ಟಿಸಿ ಜಾರಿ ಮಾಡ್ತೇವೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

  • ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಬೆಂಗಳೂರು: ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ (Yettinahole Project) ಏತ ಕಾಮಗಾರಿಗಳಿಗೆ ಗೌರಿ ಹಬ್ಬದಂದು (ಸೆ.6ರ೦ದು) ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ (Bengaluru Rural), ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಈಗಾಗಲೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೇನೆ ಎಂದು ವಿವರಿಸಿದರು. ಇದನ್ನೂ ಓದಿ: ಧರೆಗುರುಳಿದ ಶಿವಾಜಿ ಪ್ರತಿಮೆ; ಮಹಾರಾಷ್ಟ್ರ ಸರ್ಕಾರದ ವಿರುದ್ಧ `ಚಪ್ಪಲಿ ಸೇವೆ’ ಪ್ರತಿಭಟನೆ ನಡೆಸಿದ ವಿಪಕ್ಷಗಳು

    ಈ ಯೋಜನೆ ಮೂಲಕ ನೀರನ್ನು ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ (Forest Department) ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿವೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟೆಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್‌ಗಳು ನೀರನ್ನು ಎತ್ತುತ್ತಿವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಮಾಸ್ ಬಂಡುಕೋರರ ದಾಳಿ- ಒತ್ತೆಯಾಳುಗಳ 6 ಶವ ಪತ್ತೆಹಚ್ಚಿ ವಶಪಡಿಸಿಕೊಂಡ ಇಸ್ರೇಲ್

    ಜನ ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಜಾಗ ಕಿರಿದಾಗಿರುವ ಕಡೆ ಪೊಲೀಸರಿಗೆ ಹೇಳಿ ಜನರು ನೀರು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಿದ್ದೇವೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೂ ಆಹ್ವಾನ ನೀಡುವಂತೆ ನನ್ನ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಪವಿತ್ರ ಕಾರ್ಯಕ್ಕೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ಡಿಕೆಶಿ ಕರೆ ನೀಡಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಉತ್ತಮ ಸ್ಪಂದನೆ – ಸಂಜೆ 6 ಗಂಟೆವರೆಗೂ ಇರಲಿದೆ ಮೇಳ

    ಇದೇ ವೇಳೆ ಸಿಎಂ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಏನೆಲ್ಲಾ ವಿಷಯ ಚರ್ಚೆಯಾಯ್ತು ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡಿವೆ. ಈಗ ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಗಾಂಧೀಜಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನವನ್ನು ವಿಶ್ವವೇ ಗಮನಿಸಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಮುಂದಿನ ಒಂದುವಾರದಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವರದಿ ನೀಡುವಂತೆ ಸಚಿವರಿಗೆ ತಿಳಿಸಲಾಗಿದೆ. ಪಕ್ಷದ ವತಿಯಿಂದಲೂ ಕಾರ್ಯಕ್ರಮ ಮಾಡಲಾಗುತ್ತಿದ್ದು, ಆ ಬಗ್ಗೆ ಪಕ್ಷದ ಕಚೇರಿಯಲ್ಲಿ ಚರ್ಚೆ ಮಾಡಿದ್ದೆವು ಎಂದು ತಿಳಿಸಿದರು.

    ಇದೇ ವೇಳೆ ಕೋವಿಡ್‌ ಹಗರಣದ ವರದಿ ಕುರಿತು ಮಾತನಾಡಿ, ಕುನ್ಹಾ ಅವರ ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ. ಸುಧಾಕರ್ ಅವರ ಹೇಳಿಕೆಯ ಬಗ್ಗೆಯೂ ಮಾಹಿತಿ ಇಲ್ಲ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:  SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್‌