Tag: ಏಡ್ಸ್

  • ಮುಂದಿನ 5 ವರ್ಷಗಳಲ್ಲಿ ಭಾರತ, ಕರ್ನಾಟಕ ಏಡ್ಸ್ ಮುಕ್ತವಾಗಲಿ: ಸಿಎಂ

    ಮುಂದಿನ 5 ವರ್ಷಗಳಲ್ಲಿ ಭಾರತ, ಕರ್ನಾಟಕ ಏಡ್ಸ್ ಮುಕ್ತವಾಗಲಿ: ಸಿಎಂ

    ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯ ಏಡ್ಸ್ (AIDS) ಮುಕ್ತವಾಗುವ ನಿಟ್ಟಿನಲ್ಲಿ ನಾವೆಲ್ಲರು ಜಾಗೃತಿ ಮೂಡಿಸೋಣ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆ ನೀಡಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ (World AIDS Day 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತೀಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು ಎಂದರು.

    2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ. ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಇನ್ನು ಐದಾರು ವರ್ಷಗಳಲ್ಲಿ ಸೊನ್ನೆಯ ದಿನ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ ಎಂದು ಹೇಳಿದರು.

    ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ರೋಗಿಗಳೊಂದಿಗೆ ಮಾತನಾಡಿದರೆ ರೋಗ ಬರುತ್ತದೆ ಅಂತ. ಆದರೆ ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ ಕಾಯಿಲೆ ತಡೆಗಟ್ಟಲು ಸಾಧ್ಯ. ಆಮೇಲೆ ಅನುಭವಿಸುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಅಂತ ಕರೆ ಕೊಟ್ಟರು.

    ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದರೆ ಇದು ವಾಸಿಯಾಗದ ರೋಗ. ಇಷ್ಟೆಲ್ಲಾ ವಿಜ್ಞಾನದ ಬೆಳವಣಿಗೆಯಾದರೂ ಏಡ್ಸ್, ರೋಗಕ್ಕೆ ಮಾತ್ರ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಸಮುದಾಯಗಳು ಮುನ್ನಡೆಸಲಿ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷದ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 2017 ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದರು.

    ಸಮಾರಂಭದಲ್ಲಿ ಭಾಗವಹಿಸಿದ್ದ ಏಡ್ಸ್ ತಗಲಿರುವ ವ್ಯಕ್ತಿಯೊಂದಿಗೆ ಮಾತನಾಡಿದ ಸಿಎಂ, ಕಾಯಿಲೆ ಬಂದ ನಂತರ 26 ವರ್ಷಗಳ ಕಾಲ ಬದುಕಿದ್ದಾರೆ ಹಾಗೂ ಧೈರ್ಯವಾಗಿದ್ದಾರೆ ಎಂದು ಸಭಿಕರಿಗೆ ತಿಳಿಸಿದರು. ಆಂಜಿಯೋಪ್ಲಾಸ್ಟಿಯಾಗಿದ್ದರೂ ಧೈರ್ಯವಾಗಿ ಅದನ್ನು ಎದುರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಪ್ರೇಮ್, ನಟಿ ಸಂಜನಾ ಗಲ್ರಾನಿ ಸೇರಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ನಟಿ ಶಿಲ್ಪಾ ಶೆಟ್ಟಿಗೆ ನಟ ರಿಚರ್ಡ್ ಗೇರ್ ಮುತ್ತಿಟ್ಟ ಪ್ರಕರಣ : 15 ವರ್ಷವಾದರೂ ಇನ್ನೂ ಜೀವಂತ

    ನಟಿ ಶಿಲ್ಪಾ ಶೆಟ್ಟಿಗೆ ನಟ ರಿಚರ್ಡ್ ಗೇರ್ ಮುತ್ತಿಟ್ಟ ಪ್ರಕರಣ : 15 ವರ್ಷವಾದರೂ ಇನ್ನೂ ಜೀವಂತ

    ಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯ ಮೇಲೆ ಹಾಲಿವುಡ್ ನಟ ರಿಚರ್ಡ್ ಗೇರ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಒತ್ತಾಯದಿಂದ ಮುತ್ತಿಟ್ಟ ಪ್ರಕರಣ, 15 ವರ್ಷ ಕಳೆದರೂ ಇನ್ನೂ ಜೀವಂತವಾಗಿದೆ. ಈಗಾಗಲೇ ಈ ಪ್ರಕರಣ ಖುಲಾಸೆಗೊಂಡಿದ್ದರೂ, ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದಾರೆ ರಾಜಸ್ಥಾನದ ಅಲ್ವಾರ್ ಪೊಲೀಸರು.  ಹಾಗಾಗಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

    2007ರಲ್ಲಿ ರಾಜಸ್ಥಾನದ ಚಾರಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಒತ್ತಾಯ ಮಾಡಿ ಶಿಲ್ಪಾ ಶೆಟ್ಟಿಗೆ ಕಿಸ್ ಮಾಡಿದ್ದರು ರಿಚರ್ಡ್ ಗೇರ್. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸಾರ್ವಜನಿಕ ವೇದಿಕೆಯ ಮೇಲೆ ಹೀಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ದೂರು ಸಲ್ಲಿಕೆಯಾಗಿತ್ತು. ಶಿಲ್ಪಾ ಶೆಟ್ಟಿ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲವೆಂದು ಕೋರ್ಟ್ ಮೊರೆ ಹೋಗಿದ್ದರು. ಕಳೆದ ಜನವರಿಯಲ್ಲಿ ಮುಂಬೈನ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಶಿಲ್ಪಾ ಶೆಟ್ಟಿಯನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನದ ಅಲ್ವಾರ್ ಪೊಲೀಸರು ಏಪ್ರಿಲ್ ನಲ್ಲಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಶಿಲ್ಪಾ ಶೆಟ್ಟಿ ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ತಾವು ಸಾರ್ವಜನಿಕ ವ್ಯಕ್ತಿಯಾಗಿ ಹೇಗೆ ವರ್ತಿಸಬೇಕು ಎಂಬ ಅರಿವಿದೆ. ಹಾಗಾಗಿ  ಮೇಲ್ಮನವಿ ವಜಾ ಗೊಳಿಸಿ ಎಂದು ತಮ್ಮ ವಕೀಲರ ಮೂಲಕ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಚ್‌ಐವಿ ಪೀಡಿತನಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

    ಹೆಚ್‌ಐವಿ ಪೀಡಿತನಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

    ಹೊಸದಿಲ್ಲಿ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬ ಹೆಚ್‌ಐವಿಯಿಂದ ಬಳಲುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್‌ ಮತ್ತು ಪಮಿಡಿಘಂಟಂ ಶ್ರೀ ನರಸಿಂಹ ಅವರಿದ್ದ ಪೀಠವು, ಆ ವ್ಯಕ್ತಿಯ ಎಚ್‌ಐವಿ ವೈದ್ಯಕೀಯ ವರದಿಯನ್ನು ಗಮನಿಸಿ ಜಾಮೀನು ನೀಡಿದೆ. ಇದನ್ನೂ ಓದಿ: 10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    ಆರೋಪಿಯ ವೈದ್ಯಕೀಯ ವರದಿಯ ಪ್ರಕಾರ, ರೋಗಿಯು ವಿಶ್ರಾಂತಿ ಸಮಯದಲ್ಲಿ ತೀವ್ರವಾದ ಉಸಿರಾಟದ ಸಮಸ್ಯೆ ಹೊಂದಿದ್ದಾನೆ. ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ರೋಗನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ ಪುನರಾವರ್ತಿತ ಸೋಂಕಿಗೆ ಒಳಗಾಗುವ ಅಪಾಯದಲ್ಲಿದ್ದಾನೆ. ರೋಗಿಗೆ ನಿಯಮಿತ ಚಿಕಿತ್ಸೆ ಅಗತ್ಯವಿರುತ್ತದೆ.

    ವ್ಯಕ್ತಿಯು ಹೆಚ್‌ಐವಿಯಿಂದ ಬಳಲುತ್ತಿದ್ದಾನೆ. ಅಲ್ಲದೇ ರೋಗನಿರೋಧಕ ಶಕ್ತಿಯ ಕೊರತೆ ಇದೆ. ಹೀಗಾಗಿ ಷರತ್ತುಗಳನ್ವಯ ಜಾಮೀನು ಮಂಜೂರು ಮಾಡಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ಇದನ್ನೂ ಓದಿ: ಬುಲ್ಡೋಜರ್ ಭಯಕ್ಕೆ ಬಿದ್ದು ಕಾರು ಕಳ್ಳರ ಬಗ್ಗೆ ಬಾಯ್ಬಿಟ್ಟ ಕಿಂಗ್‍ಪಿನ್

    ಅವರ ವಿರುದ್ಧ ಹಲವು ಪ್ರಕರಣಗಳು ಬಾಕಿ ಇವೆ ಎಂದು ಕೋರ್ಟ್‌ ಗಮನಿಸಿದೆ. ಅರ್ಜಿದಾರರ ಮೇಲ್ಮನವಿಯನ್ನು ತನ್ನ ಆರಂಭಿಕ ಅನುಕೂಲಕ್ಕಾಗಿ ಭರಿಸಲು ಮತ್ತು ವಿಲೇವಾರಿ ಮಾಡಲು ಹೈಕೋರ್ಟ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.‌

  • ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಉಡುಪಿ: ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಹಿರಿಯರು, ನಾಟಿ ವೈದ್ಯರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

    ಉಡುಪಿಯಲ್ಲಿ ಆಯೋಜಿಸಲಾಗಿದ್ದ ಹಲಸು ಮೇಳದಲ್ಲಿ ಮಾತನಾಡಿದ ಅವರು, ಹಲಸಿನ ಹಣ್ಣು ಹೆಚ್ಚೆಚ್ಚು ತಿಂದರೆ ಏಡ್ಸ್ ಬರುವುದಿಲ್ಲ. ಹಲಸಿನ ಕಾಯಿ ತಿಂದರೆ ಏಡ್ಸ್ ಕೂಡಾ ನಿಯಂತ್ರಣವಾಗುತ್ತೆ ಎಂದು ಹಿರಿಯರು ಹೇಳಿರುವುದನ್ನು ಕೇಳಿದ್ದೇನೆ. ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕೆಲವೊಮ್ಮೆ ಇಂತಹಾ ರೂಮರ್ಸ್ ನಿಂದಲೇ ವಿಷಯ ಹೆಚ್ಚು ಪ್ರಚಾರ ಪಡೆಯುತ್ತದೆ. ಹಲಸಿನ ಹಣ್ಣು ಹೆಚ್ಚೆಚ್ಚು ಸೇಲ್ ಆಗುತ್ತದೆ ಎಂದು ಹೇಳಿದರು.

    ದೊಡ್ಡಣಗುಡ್ಡೆಯಲ್ಲಿ ನಡೆಯುತ್ತಿರುವ ಹಲಸು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಲಸಿನ ಕಾಯಿ ತಿಂದರೆ ಮಧುಮೇಹವೂ ಕಡಿಮೆಯಾಗುತ್ತದೆ. ಏಡ್ಸ್ ರೋಗ ನಿಯಂತ್ರಣಕ್ಕೂ ಹಲಸು ಒಳ್ಳೆಯದು ಎಂದರು. ಈ ಮೂಲಕ ಹೊಸದೊಂದು ವಿಚಾರವನ್ನು ಉಡುಪಿ ಶಾಸಕ ರಘುಪತಿ ಭಟ್ ತೆರೆದಿಟ್ಟಿದ್ದಾರೆ. ಶಾಸಕರ ಮಾತು ಕೇಳಿದ ಹಲಸು ಮೇಳಕ್ಕೆ ಆಗಮಿಸಿದ್ದ ಹಲವರಲ್ಲಿ ಚರ್ಚೆಗೆ ಕಾರಣವಾಗಿತ್ತು.

  • ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ನವದೆಹಲಿ: ಪಂಜಾಬ್ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಪಿಎಸ್‍ಎಸಿಎಸ್) ಏಡ್ಸ್ ತಡೆಗಟ್ಟಲು ತಪ್ಪು ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ಎಡವಟ್ಟು ಮಾಡಿಕೊಂಡಿದೆ.

    ಏಡ್ಸ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕರಪತ್ರ ಮಾಡಿದ್ದೇವೆ ಎಂದು ಪ್ರಕಟಿಸಿರುವ ಸಂಸ್ಥೆ. ಮೊದಲಿಗೆ ಏಡ್ಸ್ ಬಂದಿರೋ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಕೊಡಬೇಡಿ, ಅವರಿಂದಲೂ ಶೇಕ್ ಹ್ಯಾಂಡ್ ತೆಗೆದುಕೊಳ್ಳಬೇಡಿ ಎಂಬ ಸೂಚನೆಗಳನ್ನು ನೀಡಿದೆ. ಇಷ್ಟೇ ಅಲ್ಲದೇ ಇನ್ನು ಹಲವು ರೀತಿಯಲ್ಲಿ ಕಾಯಿಲೆ ಹರಡುವುದಾಗಿ ಹಾಗೂ ಸಂಕ್ರಾಮಿಕ ರೋಗವೆಂದು ತಪ್ಪು ಮಾಹಿತಿ ನೀಡಿದೆ.

    ಕರಪತ್ರದಲ್ಲಿ ಏನಿದೆ?
    1. ಏಡ್ಸ್ ರೋಗಿಗಳ ಜೊತೆ ಶೇಕ್ ಹ್ಯಾಂಡ್ ಮಾಡಿದ್ರೆ ನಿಮಗೂ ರೋಗ ಬರುತ್ತದೆ.
    2. ರೋಗಿಗಳು ಬಳಸಿದ ಊಟದ ಪ್ಲೇಟ್, ಚೇರ್, ಮೊಬೈಲ್ ಫೋನ್, ಕಂಪ್ಯೂಟರ್‍ಯಿಂದ ಕಾಯಿಲೆ ಬರುತ್ತದೆ.
    3. ಏಡ್ಸ್ ರೋಗಿಗಳು ಬಳಸಿದ ಶೌಚಾಲಯವನ್ನು ಬಳಸಿದರೂ ನಿಮಗೆ ರೋಗ ಬರುತ್ತದೆ.

  • ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚಿಕ್ಕಮಗಳೂರು: ರಕ್ತ ಟೆಸ್ಟ್ ಮಾಡ್ತೀನಿ ಅಂತ ಸೂಜಿಯಲ್ಲಿ ಮುಖಕ್ಕೆ ಚುಚ್ತಾನೆ. ನಿಮಗೆ ಏಡ್ಸ್ ಇದೆ ಅಂತಾನೆ. ನರ್ಸ್‍ಗೆ ನಿನ್ನ ಏಪ್ರಾನ್ ಬಿಚ್ಚು, ಬಿಪಿ ಟೆಸ್ಟ್ ಮಾಡ್ಬೇಕು ಅಂತಾ ಎಳೆದಾಡ್ತಾನೆ. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಶೂಶ್ರುಕಿಯರಿಗೆ ಸೂಚಿಸ್ತಾನೆ. ಹೌದು ಚಿಕ್ಕಮಗಳೂರನಲ್ಲಿ ಇಂತಹ ಮೆಂಟಲ್ ಡಾಕ್ಟರ್‍ವೊಬ್ಬ ಇದ್ದಾನೆ.

    ಆತನ ಹೆಸರು ವೀರೇಶ್ ವೈ ನರೇಗಲ್. ಎಂಬಿಬಿಎಸ್, ಡಿ ಆರ್ಥೋ ಅಂಡ್ ಎಂಎಸ್ ಆರ್ಥೋ ಓದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್. 35 ವರ್ಷ ಸರ್ವೀಸ್ ಇರೋ ಈತ ಇಲ್ಲಿಗೆ ಬಂದು ವರ್ಷವಾಗಿದೆ. ಸುಸ್ತು, ಜ್ವರ ಅಂತ ಆಸ್ಪತ್ರೆಗೆ ಬಂದ ರೋಗಿಗೆ ಯಾವುದೇ ರೀತಿಯ ಬ್ಲಡ್ ಟೆಸ್ಟ್ ಮಾಡ್ದೆ ನಿನಗೆ ಏಡ್ಸ್ ಇದೆ. ಬೆಂಗಳೂರು ಅಥವಾ ಮಂಗಳೂರಿಗೆ ಹೋಗಿ ಅಂತ ರೆಫರ್ ಮಾಡಿದ್ದಾನೆ. ಹೀಗಾಗಿ ರೋಗಿ ಭಯ ಬಿದ್ದು ಬ್ಲಡ್ ಟೆಸ್ಟ್ ಮಾಡಿಸಿದ್ರೆ ಯಾವ ಏಡ್ಸ್ ಕೂಡ ಇರಲಿಲ್ಲ.

    ಇನ್ನೊಂದು ಕೇಸ್ ನೋಡೋದಾದ್ರೆ ಕಾಲು ನೋವು ಅಂತಾ ವಯೋವೃದ್ಧೆಯೊಬ್ಬರು ಬಂದ್ರೆ ರಕ್ತ ಟೆಸ್ಟ್ ಮಾಡ್ತೀನಿ ಅಂತಾ ಸೂಜಿ ತಗೊಂಡು ಮೂಗು, ಮುಖ, ಹಣೆಗೆಲ್ಲಾ ರಕ್ತ ಬರುವಂತೆ ಚುಚ್ಚಿದ್ದಾನೆ. ಡ್ಯೂಟಿ ಮಾಡ್ತಿದ್ದ ಸಿಸ್ಟರ್ ಬಳಿ ಬಂದು ನಿನ್ನ ಏಪ್ರೋನ್ ಬಿಚ್ಚು, ನಿನಗೆ ಬಿಪಿ ಚೆಕ್ ಮಾಡ್ಬೇಕು ಅಂತ ಹಿಂಸೆ ನೀಡಿದ್ದಾನೆ.

    ಈ ಡಾಕ್ಟರ್‍ನ ಇನ್ನಷ್ಟು ಪುರಾಣ ನೋಡೋದಾದ್ರೆ, ಹೆರಿಗೆಯಾದ ಮಹಿಳೆಗೆ ಯಾವ್ಯಾವುದೋ ಔಷಧಿ ಕೊಡ್ತಾನೆ. ನೈಟ್ ಡ್ಯೂಟಿ ಮಾಡೋ ಡಿ ದರ್ಜೆ ನೌಕರರ ಮೇಲೆ ಕಾರಣವಿಲ್ಲದೆ ಕಂಪ್ಲೆಂಟ್ ಕೊಡ್ತಾನೆ. ಹೀಗಾಗಿ ಡಾಕ್ಟರ್ ಮೇಲೆ ನರ್ಸ್‍ಗಳೇ ದೂರು ನೀಡಿದ್ದಾರೆ.

    ಒಟ್ನಲ್ಲಿ ಈ ವೈದ್ಯನ ಹುಚ್ಚಾಟಕ್ಕೆ ಆಸ್ಪತ್ರೆಯ ಸಿಬ್ಬಂದಿಗಳೇ ಬೆಚ್ಚಿ ಬಿದ್ದಿದ್ದಾರೆ.

     

  • ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಬೆಳಗಾವಿ: ಹೆಚ್‍ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್‍ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

    ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ ಡಿಪ್ಲೊಮಾ ಎಂಜಿನಿಯರ್. ಆದರೆ ಇವರು ಸಮಾಜ ಸೇವೆ ಮಾತ್ರ ವಿಭಿನ್ನ. ಎಚ್‍ಐವಿ ಪೀಡಿತ ಅನಾಥ ಮಕ್ಕಳ ವಸತಿ ನಿಲಯಕ್ಕಾಗಿ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟು ಮಕ್ಕಳ ಶಾಲಾ ಶಿಕ್ಷಣ, ಆರೈಕೆ ಸಹಿತ ಉನ್ನತ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.

    ಪ್ರೇರಣೆ ಏನು?
    ಗೆಳೆಯನ ಹುಟ್ಟುಹಬ್ಬದ ನಿಮಿತ್ತವಾಗಿ ಬೆಳಗಾವಿ ಜಿಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಅಪಘಾತವಾದ ಪಾಸಿಟವ್ ಮಗುವೊಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರು ನೋಡದೇ ನಿರಾಕರಿಸಿದಾಗ ಮಹೇಶ್ ಅವರು ಮನನೊಂದು ಇಂಥ ಮಕ್ಕಳ ಬೆಂಬಲಕ್ಕೆ ನಿಂತು ಇಂದಿಗೆ ದೊಡ್ಡದಾದ ಸಂಸ್ಥೆ ಕಟ್ಟಿ 2,200 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ ಸಂಸ್ಥೆಯಲ್ಲಿ 76 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅದರಲ್ಲಿ 16 ಜನ ಅನಾಥ ಮಹಿಳೆಯರು ಸೊಂಕಿನಿಂದ ಬಳಲುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.

    ಸಮಾಜದಲ್ಲಿ ತಿರಸ್ಕೃತಗೊಂಡ ಇಂಥ ಮಕ್ಕಳಿಗೆ ಸೂರು ಕಲ್ಪಿಸಿ ದಿನನಿತ್ಯ ಅವರ ಆರೋಗ್ಯ ಜೊತೆಗೆ ವಿದ್ಯಾಭ್ಯಾಸವನ್ನು ಕಲ್ಪಸುವುದು ದೊಡ್ಡ ಕೆಲಸ. ಚಿಕ್ಕ ವಯಸ್ಸಿನಲ್ಲಿಯೇ ಮಹೇಶ ಇಂಥ ದೊಡ್ಡ ಕೆಲಸಕ್ಕಾಗಿ ಕೈ ಹಾಕಿದ್ದನ್ನು ಕಂಡ ಪಾಲಕರು ತಮ್ಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಮಹೇಶ ಸಂಸ್ಥೆಗೆ ನೀಡಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    2008 ರಲ್ಲಿ ಕೇವಲ 6 ಮಕ್ಕಳನ್ನು ಪಡೆದುಕೊಂಡು ಮಹೇಶ್ ಅವರು ಈ ಸಮಾಜ ಸೇವೆಯನ್ನು ಆರಂಭಿಸಿದರು. ತಮ್ಮ ಸಂತ ಮನೆಯನ್ನು ಕೆಡವಿ ಅಲ್ಲಿ ಈಗ ದೊಡ್ಡದಾದ ವಸತಿ ಶಾಲೆಯನ್ನು ಕಟ್ಟುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಕ್ಕಳ ಪೋಷಣೆಗಾಗಿ ಆಯಾಗಳು, ಅಂಗನವಾಡಿ, ಆಸ್ಪತ್ರೆಗೆ, ಶಾಲೆಗೆ ಕಳುಹಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಎಲ್ಲರನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಮಹೇಶ್ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಈ ಸೇವೆ ಮಾಡುತ್ತಿರುವುದು ವಿಶೇಷ.