Tag: ಏಕ್‍ನಾಥ್ ಶಿಂಧೆ

  • ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ

    ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ

    ಮುಂಬೈ: ಪುಣೆ ವಿಮಾನ ನಿಲ್ದಾಣಕ್ಕೆ (Pune Airport) ಜಗದ್ಗುರು ಸಂತ ತುಕಾರಾಂ ಮಹಾರಾಜ್ ವಿಮಾನ ನಿಲ್ದಾಣ (Jagadguru Saint Tukaram Maharaj Airport) ಎಂದು ಮರುನಾಮಕರಣ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

    ಪುಣೆಯ ಲೋಹೆಗಾಂವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (International Airport) ಜಗದ್ಗುರು ಸಂತ ತುಕಾರಾಂ ಮಹಾರಾಜ್ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಏಕನಾಥ್ ಶಿಂಧೆ (Ekanath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ (Maharashtra Government) ಸೋಮವಾರ ಅನುಮೋದಿಸಿದೆ.ಇದನ್ನೂ ಓದಿ: PUBLiC TV Impact – ವರದಿಯ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತು ಬಾಲಕನಿಗೆ ಶಿಕ್ಷಣ ಭಾಗ್ಯ

    ಇದಕ್ಕೂ ಮೊದಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nithin Gadkari) ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವಂತೆ ಶಿಫಾರಸು ಮಾಡಿದ್ದರು.

    ವಿಮಾನಯಾನ ಸಚಿವ ಮುರುಳೀಧರ್ ಮೊಹೇಲ್ (Murlidhar Mohol) ಮಾತನಾಡಿ, ಇದೀಗ ಏಕ್‌ನಾಥ್ ಶಿಂಧೆ ನೇತೃತ್ವದ ಸರ್ಕಾರವು ಮಹಾರಾಜ್ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಇಂದು ಸಲ್ಲಿಸಿದೆ. ಮರುನಾಮಕರಣ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆಯಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ಕೇಂದ್ರ ಸರ್ಕಾರ ಮತ್ತು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ

  • ಹೃದಯಾಘಾತದಿಂದ ಮರಾಠಿ ನಟ ಪ್ರದೀಪ್ ಪಟವರ್ಧನ್ ನಿಧನ

    ಹೃದಯಾಘಾತದಿಂದ ಮರಾಠಿ ನಟ ಪ್ರದೀಪ್ ಪಟವರ್ಧನ್ ನಿಧನ

    ರಾಠಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ಪ್ರದೀಪ್ ಪಟವರ್ಧನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರದೀಪ್ ಅಗಲಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಸಂತಾಪ ಸೂಚಿಸಿದ್ದಾರೆ.‌‌

    ರಂಗಭೂಮಿ ಹಿನ್ನಲೆ ಇರುವ ನಟ ಪ್ರದೀಪ್, ಮರಾಠಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಳ್ತಿದ್ದಾರೆ. ಕಿರುತೆರೆ ಜತೆಗೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದರು. ಇನ್ನು ೬೪ ವರ್ಷದ ನಟ ಪ್ರದೀಪ್ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ನಟ ಪ್ರದೀಪ್ ನಿಧನದಿಂದ ಮರಾಠಿ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ:ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ಮರಾಠಿ ಸಿನಿಮಾಗಳಲ್ಲಿನ ತಮ್ಮ ಅದ್ಭುತ ನಟನೆಯಿಂದಾಗಿ ಪ್ರದೀಪ್ ಪಟವರ್ಧನ್ ಅವರು ಪ್ರೇಕ್ಷಕರ ಹೃದಯ ಗೆದ್ದಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಪ್ರಪಂಚಕ್ಕೆ ತೀವ್ರ ನಷ್ಟ ಆಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು, ಸಹಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಅಧಿಕೃತ ನಿವಾಸ ತೊರೆದ ಉದ್ದವ್ ಠಾಕ್ರೆ

    ಸಿಎಂ ಅಧಿಕೃತ ನಿವಾಸ ತೊರೆದ ಉದ್ದವ್ ಠಾಕ್ರೆ

    ಮುಂಬೈ: ಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆ ಕುರಿತಂತೆ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕೃತ ನಿವಾಸ ತೊರೆದಿದ್ದಾರೆ.

    ಇಂದು ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಆದರೂ ಇವರ ಕುಟುಂಬ ಸಿಎಂ ಅಧಿಕೃತ ನಿವಾಸವನ್ನು ತೊರೆದು ಸ್ವಂತ ನಿವಾಸಕ್ಕೆ ತೆರಳಿದ್ದಾರೆ.

    Uddhav Thackeray

    ಇಂದು ಫೇಸ್‍ಬುಕ್ ಲೈವ್‍ಗೆ ಬಂದಿದ್ದ ಅವರು ಮಹಾರಾಷ್ಟ್ರ ರಾಜೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ್ದರು. ಆ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದರು.ನಮ್ಮ ಜನರಿಗೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದು ಬೇಕಿಲ್ಲದಿದ್ದರೆ, ಯಾವುದೇ ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಹೇಳಿದರೆ, ತಕ್ಷಣವೇ ನಾನು ರಾಜೀನಾಮೆ ಸಲ್ಲಿಸುತ್ತೇನೆ. ನಾನು ‘ವರ್ಷ’ ನಿವಾಸದಿಂದ ಮಾತೋಶ್ರಿಗೆ ಮರಳುತ್ತೇನೆ ಎಂದಿದ್ದರು. ಇದನ್ನೂ ಓದಿ: ಶಿವಸೇನೆಯ ಉಳಿವಿಗಾಗಿ ಮೈತ್ರಿಯಿಂದ ಹೊರಬರುವುದು ಅನಿವಾರ್ಯ: ಏಕನಾಥ್ ಶಿಂಧೆ

    ಈಗಾಗಲೇ ಸಂಜಯ್ ರಾವತ್ ಟ್ವೀಟ್ ಮಾಡಿದ್ದು, ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣೆಗೆಗಳ ಪಯಣ ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಶಾಸಕಾಂಗ ಸಭೆಯನ್ನು ವಿಸರ್ಜನೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ರಾಜ್ಯಪಾಲ, ಸಿಎಂಗೆ ಕೊರೊನಾ

    Live Tv