Tag: ಏಕ್ತಾ ಕಪೂರ್

  • ಕಾಮ ಪ್ರಚೋದಕ ಕಥೆ, ಲಕ್ಷ್ಮಿ ದೇವತೆ ಫೋಟೋ : ಏಕ್ತಾ ಕಪೂರ್ ವಿರುದ್ಧ ಗರಂ

    ಕಾಮ ಪ್ರಚೋದಕ ಕಥೆ, ಲಕ್ಷ್ಮಿ ದೇವತೆ ಫೋಟೋ : ಏಕ್ತಾ ಕಪೂರ್ ವಿರುದ್ಧ ಗರಂ

    ಹಿಂದಿ ಕಿರುತೆರೆಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಮತ್ತೊಂದು ವಿವಾದವನ್ನು (Controversy) ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಓಟಿಟಿಯ ಪ್ರಸಾರಕ್ಕಾಗಿ ನಿರ್ಮಾಣವಾಗುತ್ತಿರುವ ವೆಬ್ ಸರಣಿಯ (Web Series) ಪೋಸ್ಟರ್ ನಲ್ಲಿ ಹಿಂದೂ ದೇವತೆಯನ್ನು  ಅವಹೇಳನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ. ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

    ಸದ್ಯ ಏಕ್ತಾ ಕಪೂರ್ ಮಾಲೀಕತ್ವದ ಆಲ್ಟ್ ಬಾಲಾಜಿ ಟೆಲಿಫಿಲ್ಮ್ಸ್ ‘ಗಾಂಡಿ ಬಾತ್’ (Gandhi Bath) ಎನ್ನುವ ವೆಬ್ ಸರಣಿಯನ್ನು ಆರಂಭಿಸಿದೆ. ಇದೀಗ 6ನೇ ಸರಣಿ ಸಿದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ವೊಂದನ್ನು ರಿಲೀಸ್ ಮಾಡಲಾಗಿದೆ. ಆ ಪೋಸ್ಟರ್‌ನಲ್ಲಿ ಲಕ್ಷ್ಮಿ ದೇವತೆಗೆ (Goddess Lakshmi) ಹೋಲುವಂತಹ ಮಹಿಳೆ ಇದ್ದಾಳೆ. ಆ ಮಹಿಳೆಯ ಮೂಲಕ ಲಕ್ಷ್ಮಿ ದೇವತೆಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

    ಗಾಂಡಿಬಾತ್ ವೆಬ್ ಸರಣಿಯ ಥಂಬ್ ನೈಲ್ ಪೋಸ್ಟರ್‌ನಲ್ಲಿ ಸೊಂಟದ ಬಳಿ ಕಮಲದ ಹೂವು, ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಇರುವ ಮಹಿಳೆ ಬಾಯಿ ಮೇಲೆ ಬೆರಳಿಟ್ಟು ‘ಶ್’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ವಿವಾದಕ್ಕೀಡಾಗಿದೆ. ಇದೊಂದು ಗ್ರಾಮೀಣ ಭಾರತದ ಕಾಮ ಪ್ರಚೋದಕ ಕಥೆಯನ್ನು ಒಳಗೊಂಡಿರುವ ವೆಬ್ ಸರಣಿಯಾಗಿದ್ದರಿಂದ ಕೆಲವರನ್ನು ಕಣ್ಣು ಕೆಂಪಗಾಗಿಸಿದೆ.

    ಈ ಹಿಂದೆ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿತ್ತು. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿತ್ತು. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.

     

    ಇದೇ ವೆಬ್ ಸರಣಿಯ‍ಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು. ಆಗ ಯೋಧರೊಬ್ಬರು ಕೋರ್ಟಿಗೆ ಮೊರೆ ಹೋಗಿದ್ದರು.

  • ಏಕ್ತಾ ಕಪೂರ್‌ಗೆ XXX ಸಂಕಷ್ಟ: ಯೂತ್ಸ್ ಹಾಳು ಮಾಡುತ್ತಿದ್ದೀರಿ ಎಂದ ಸುಪ್ರೀಂ ಕೋರ್ಟ್

    ಏಕ್ತಾ ಕಪೂರ್‌ಗೆ XXX ಸಂಕಷ್ಟ: ಯೂತ್ಸ್ ಹಾಳು ಮಾಡುತ್ತಿದ್ದೀರಿ ಎಂದ ಸುಪ್ರೀಂ ಕೋರ್ಟ್

    ಬಾಲಿವುಡ್ ಖ್ಯಾತ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿದೆ. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿದೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.

    ಇದೇ ವೆಬ್ ಸರಣಿಯ‍ಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಈ ದೂರಿಗೆ ಸಂಬಂಧಪಟ್ಟಂತೆ ಸತತವಾಗಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಕೋರ್ಟಿಗೆ ಹಾಜರಾಗದ ಕಾರಣ, ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನು ರದ್ದು ಮಾಡುವಂತೆ ಏಕ್ತಾ ಮತ್ತೆ ಕೋರ್ಟಿಗೆ ಮೊರೆ ಹೋಗಿದ್ದರು. ಈ ಸಮಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವೆಸ್ ಸರಣಿ ಬಗ್ಗೆ ಕಿಡಿಕಾರಿದ್ದಾರೆ. ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ ಮತ್ತು ಯಾರು ಅದನ್ನು ನೋಡಬೇಕು ಎಂದು ಬಯಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವೆಬ್ ಸರಣಿಗೆ (Web Series) ಸಂಬಂಧಿಸಿದಂತೆ ಈಗಾಗಲೇ ಹಲವು ದೃಶ್ಯಗಳನ್ನು ತಗೆದುಹಾಕಿರುವುದಾಗಿ ಈ ಹಿಂದೆಯೇ ಏಕ್ತಾ ಹೇಳಿಕೊಂಡಿದ್ದರು. ಯಾವ ದೃಶ್ಯಗಳು ಆಕ್ಷೇಪಾರ್ಹ ಎಂದು ಜನರು ಹೇಳಿದ್ದರೋ, ಅದೆಲ್ಲವನ್ನೂ ಕಿತ್ತು ಹಾಕಲಾಗಿದೆ ಎಂದೂ ತಿಳಿಸಿದ್ದರು. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದರು. ಆದರೆ, ಈ ಮಾತನ್ನು ಕೋರ್ಟ್ ಒಪ್ಪಲಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ಕೇಸ್ ಬಗ್ಗೆಯೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ.

    Live Tv
    [brid partner=56869869 player=32851 video=960834 autoplay=true]

  • XXX- ಎಕ್ಸ್ ಎಕ್ಸ್ ಎಕ್ಸ್ ವೆಬ್ ಸೀರಿಸ್ ಯೋಧರಿಗೆ ಅಪಮಾನ : ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಗೆ ಕೋರ್ಟ್ ವಾರೆಂಟ್

    XXX- ಎಕ್ಸ್ ಎಕ್ಸ್ ಎಕ್ಸ್ ವೆಬ್ ಸೀರಿಸ್ ಯೋಧರಿಗೆ ಅಪಮಾನ : ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಗೆ ಕೋರ್ಟ್ ವಾರೆಂಟ್

    ಬಾಲಿವುಡ್ ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಬಂಧನಕ್ಕೆ ಬಿಹಾರ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಸಮನ್ಸ್ ಜಾರಿಯಾದರೂ ಏಕ್ತಾ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾ.ವಿಕಾಸ್ ಕುಮಾರ್ ಅವರು ಬಂಧನದ ವಾರೆಂಟ್ ಜಾರಿ ಮಾಡಿದ್ದಾರೆ. ಕೇವಲ ಏಕ್ತಾ ಕಪೂರ್ ಮಾತ್ರವಲ್ಲ, ಅವರ ತಾಯಿ ಶೋಭಾ ಕಪೂರ್ (Shobha Kapoor) ಮೇಲೂ ಬಂಧನದ (Arrest) ವಾರೆಂಟ್ ಜಾರಿಯಾಗಿದೆ.

    ಏಕ್ತಾ ಕಪೂರ್ ಅವರ ಬಾಲಾಜೀ ಬ್ಯಾನರ್ ಅಡಿ ‘ಎಕ್ಸ್.ಎಕ್ಸ್.ಎಕ್ಸ್’ ವೆಬ್ ಸೀರಿಸ್ ತಯಾರಾಗಿದ್ದು, ಈ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡಲಾಗಿದೆ ಎಂದು ಮತ್ತು ಯೋಧರ ಕುಟುಂಬದ ಭಾವನೆಗಳಿಗೆ ಘಾಸಿ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ನಿವೃತ್ತ ಸೈನಿಕ ಶಂಭು ಕುಮಾರ್ ಅವರು ಏಕ್ತಾ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. 2020ರಲ್ಲಿ ಬಿಹಾರದಲ್ಲಿ (Bihar) ದೂರು ದಾಖಲಾಗಿತ್ತು. ಏಕ್ತಾ ಮತ್ತು ಅವರ ತಾಯಿಗೆ ಸಮನ್ಸ್ ಕೂಡ ಜಾರಿ ಮಾಡಿದ್ದರು. ಇದನ್ನೂ ಓದಿ:ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

    ದೂರಿನ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದರೂ, ಏಕ್ತಾ ಕೋರ್ಟಿಗೆ ಹಾಜರಾಗಿರಲಿಲ್ಲ. ಅಲ್ಲದೇ, ಸೀರಿಸ್ ಬಗ್ಗೆ ಆಕ್ಷೇಪನೆ ಮತ್ತು ವಿರೋಧದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳನ್ನು ಡಿಲಿಟ್ ಕೂಡ ಮಾಡಲಾಗಿತ್ತು. ಇಷ್ಟೆಲ್ಲ ಮಾಡಿದ ನಂತರ ಸ್ಪಷ್ಟನೆ ಅಗತ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕೋರ್ಟ್ ಗೆ ಹಾಜರಾಗದ ಹಿನ್ನೆಯಲ್ಲಿ ವಾರೆಂಟ್ (Warrant) ಜಾರಿ ಮಾಡಲಾಗಿದೆ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.

    ಕಿರುತೆರೆಯ ಹೆಸರಾಂತ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆಗಿರುವ  ಏಕ್ತಾ ಕಪೂರ್, ತಮ್ಮ ಬಾಲಾಜಿ ಟೆಲಿಫಿಲ್ಮ್ಸ್ (Balaji Tele Films) ಮೂಲಕ ಸಾಕಷ್ಟು ಧಾರಾವಾಹಿಗಳನ್ನು ಮತ್ತು ವೆಬ್ ಸೀರಿಸ್ ನೀಡಿದ್ದಾರೆ. ಸಾಕಷ್ಟು ಯುವ ನಟರನ್ನು ಕಿರುತೆರೆ ಲೋಕಕ್ಕೆ ಪರಿಚಯಿಸಿದ್ದಾರೆ. ಅಲ್ಲದೇ, ಅನೇಕ ದೂರುಗಳನ್ನೂ ಅವರು ಈಗಾಗಲೇ ಎದುರಿಸಿದ್ದಾರೆ. ಈಗ ವಾರೆಂಟ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನಿಷೇಧದ ಬಗ್ಗೆ ಏಕ್ತಾ ಕಪೂರ್ ಪ್ರತಿಕ್ರಿಯೆ

    `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನಿಷೇಧದ ಬಗ್ಗೆ ಏಕ್ತಾ ಕಪೂರ್ ಪ್ರತಿಕ್ರಿಯೆ

    ಬಾಲಿವುಡ್‌ನಲ್ಲಿ ಈಗಾಗಲೇ ಬಾಯ್ಕಾಟ್ ಟ್ರೆಂಡ್‌ಗೆ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಲಿಯಾಗಿದೆ. ಜತೆಗೆ ಖಾನ್‌ಗಳ ಚಿತ್ರಗಳನ್ನ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ನಿರ್ಮಾಪಕಿ ಏಕ್ತಾ ಕಪೂರ್ ಬಾಯ್ಕಾಟ್ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಆಮೀರ್ ಖಾನ್ ನಟಿಸಿ, ನಿರ್ದೇಶಿಸಿದ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಬಾಯ್ಕಾಟ್ ಟ್ರೆಂಡ್‌ಗೆ ಬಲಿಯಾಗಿರುವ ಈ ಸಿನಿಮಾ ನಂತರ ಇನ್ನುಳಿದ ಖಾನ್‌ಗಳ ಚಿತ್ರಗಳ ಮೇಲೆ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಈ ಕುರಿತು ಸಂದರ್ಶನವೊಂದರಲ್ಲಿ ಏಕ್ತಾ ಕಪೂರ್ ಮಾತನಾಡಿದ್ದಾರೆ. ಇದನ್ನೂ ಓದಿ:ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದ ಸೋನು ಶ್ರೀನಿವಾಸ್ ಗೌಡ

    ಸಿನಿಮಾ ಜಗತ್ತಿಗೆ ಅತ್ಯುತ್ತಮ ಚಿತ್ರಗಳನ್ನ ಕೊಡುಗೆ ಕೊಟ್ಟಿರುವರನ್ನು ಬಹಿಷ್ಕರಿಸುವುದು ವಿಚಿತ್ರ ಸಂಗತಿ. ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಚಿತ್ರರಂಗದ ದಂತಕಥೆಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಆತ್ಮಹತ್ಯೆ- ಎಂಟು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

    ಸುಶಾಂತ್ ಆತ್ಮಹತ್ಯೆ- ಎಂಟು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

    ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ವಕೀಲ ಸುಧಿರ್ ಕುಮಾರ್ ಓಜಾ ಮುಜಾಫರ್ಪುರ್ ನ್ಯಾಯಾಲಯದಲ್ಲಿ ದೂರು ದಾಖಲಸಿದ್ದಾರೆ.

    ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲ ಓಜಾ ಆರೋಪಿಸಿದ್ದಾರೆ.

    ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

    ಭಾನುವಾರ ಬೆಳಗ್ಗೆ 9.30ಕ್ಕೆ ಜ್ಯೂಸ್ ಕುಡಿದು ತನ್ನ ಕೋಣೆ ಸೇರಿದ್ದ ಸುಶಾಂತ್ ಸಿಂಗ್ ರಜಪೂತ್, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಮನೆಯಲ್ಲಿ ಅಡುಗೆ ಕೆಲಸದವ, ಮ್ಯಾನೇಜರ್ ಮತ್ತು ಓರ್ವ ಗೆಳೆಯನಿದ್ದ. ಸೋಮವಾರ ಸಂಜೆ ಸುಶಾಂತ್ ಅಂತ್ಯಕ್ರಿಯೆ ಮುಂಬೈನ ವಿಲೆ ಪಾರ್ಲೆಯ ಸೇವಾ ಸಮಾಜದಲ್ಲಿ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕುಟುಂಬ ಮತ್ತು ಆಪ್ತರಿಗೆ ಅಂತಿಮ ವಿಧಿ ವಿಧಾನಗಳಲ್ಲಿ ಅನುಮತಿ ನೀಡಲಾಗಿತ್ತು. ಮಾನಸಿಕ ಖಿನ್ನತೆಗೊಳಗಾಗಿದ್ದರಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೈ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್‍ಗೆ ಧೋನಿ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ಅವರನ್ನು ಬಾಲಿವುಡ್ ತಾರತಮ್ಯದಿಂದ ನೋಡಲಾಗುತ್ತಿತ್ತು ಎಂಬ ಸುದ್ದಿ ಹರಿದಾಡಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‍ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್‍ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.

  • ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ?- ಏಕ್ತಾ ಕಪೂರ್

    ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ?- ಏಕ್ತಾ ಕಪೂರ್

    -ವಿವಾದದ ಸುಳಿಯಲ್ಲಿ ತ್ರಿಪಲ್ ಎಕ್ಸ್ 2

    ಮುಂಬೈ: ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮತ್ತು ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ ಎಂದು ಪ್ರಶ್ನಿಸುವ ಮೂಲಕ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ.

    ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ಸಹ ದಾಖಲಾಗಿದೆ. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಈಗಾಗಲೇ ವೆಬ್ ಸೀರೀಸ್ ನಲ್ಲಿ ವಿವಾದಾತ್ಮಕ ಎನ್ನಲಾದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ಏಕ್ತಾ ಕಪೂರ್ ಸ್ಪಷ್ಟಪಡಿಸಿದ್ದಾರೆ.

    ವೆಬ್ ಸೀರೀಸ್ ಆ ತುಣುಕುಗಳಿಗೆ ಕತ್ತರಿ ಹಾಕಿ, ಭಾರತೀಯ ಸೇನೆ ಮತ್ತು ಸೈನಿಕರ ಪತ್ನಿಯರ ಬಳಿ ನಾನು ಕ್ಷಮೆ ಕೇಳಲು ಸಿದ್ಧಳಿದ್ದೇನೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರೋದರಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ.

    ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲ ವ್ಯಕ್ತಿಗಳು ತಾವು ದೊಡ್ಡ ಹೋರಾಟಗಾರರು ಎಂದು ತಿಳಿದು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ನಮ್ಮನ್ನು ಆಶ್ಲೀಲವಾಗಿ ಟ್ರೋಲ್ ಮಾಡುವದರ ಜೊತೆಗೆ ಆತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ. ಇದು ಸೆಕ್ಸ್ ಅಥವಾ ಸೇನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ರೇಪ್ ಮಾಡುವದಾಗಿ ಬೆದರಿಕೆಯೊಡ್ಡುವ ವ್ಯಕ್ತಿ ನನ್ನನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀನಿ ಅಂತಾ ಆರೋಪಿಸುತ್ತಾನೆ. ಹಾಗಾದಾರೆ ರೇಪ್ ಮಾಡೋದಕ್ಕಿಂತ ಸೆಕ್ಸ್ ತುಂಬಾನೇ ಕೆಟ್ಟದ್ದು ಅಲ್ವಾ? ಎಂದು ಟ್ರೋಲರ್ ಗಳಿಗೆ ತಿರುಗೇಟು ನೀಡಿದ್ದಾರೆ.

    ವೈಯಕ್ತಿಕವಾಗಿ ನಾನು ಸೈನಿಕರನ್ನು ಗೌರವಿಸುತ್ತೇನೆ. ವೆಬ್ ಸೀರೀಸ್ ನಲ್ಲಿರೋದು ಕೇವಲ ಒಂದು ಕಾಲ್ಪನಿಕ ಪಾತ್ರ. ಹೌದು, ಈ ಪಾತ್ರ ಸೃಷ್ಟಿಸಿದ್ದು ತಪ್ಪು. ಹಾಗಾಗಿ ತಪ್ಪನ್ನು ಒಪ್ಪಿಕೊಂಡು ವಿವಾದಾತ್ಮಕ ದೃಶ್ಯಗಳನ್ನು ತೆಗೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಟ್ರೋಲ್‍ಗಳಿಗೆ ಸರಿಯಾದ ಉತ್ತರ ನೀಡುತ್ತೇನೆ. ಸೈಬರ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ನನಗಾದ ಮಾನಸಿಕ ನೋವು ಬೇರೆ ಮಹಿಳೆಯರಿಗೆ ಆಗೋದು ಬೇಡ ಎಂದು ಹೇಳಿದ್ದಾರೆ.