Tag: ಏಕನಾಥ್

  • ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಕಾದಂಬರಿ ಆಧಾರಿತ ‘ಭಾಗ್ಯಶ್ರೀ’ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

    ಬಾಗಲಕೋಟೆ ಜಿಲ್ಲೆಯವರಾದ ಆಶಾ ಶಾಹಿರ ಬೀಳಗಿ ಹಾಗೂ ಶಾಹಿರ ಬೀಳಗಿ ಬನಶಂಕರಿ ಆಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ. ಎಸ್ ಮಲ್ಲೇಶ್ ಅವರ ಕಾದಂಬರಿ ‘ಭಾಗ್ಯಶ್ರೀ’ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ. ಪ್ರಾರ್ಥನ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಕುಮಾರಿ ಹೀರಾ ಈ ಚಿತ್ರದಲ್ಲಿ ‘ಭಾಗ್ಯಶ್ರೀ’ ಪಾತ್ರವನ್ನು ಮಾಡಿದ್ದಾರೆ.

    ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೇ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕೂವರೆ ನಿಮಿಷಗಳ ಕಾಲ ಮೂಡಿಬಂದಿದೆ. ಕಾರ್ತಿಕ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಮೂರು ಹಾಡುಗಳು ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ.