Tag: ಏಕದಿನ ಸರಣಿ

  • ಹರಿಣರ ಬೇಟೆಯಾಡಿ ಸರಣಿ ಗೆದ್ದ ಭಾರತ – ಧೋನಿ ಟ್ರೆಂಡ್‌ ಮುಂದುವರಿಸಿದ ಕೆ.ಎಲ್‌ ರಾಹುಲ್‌

    ಹರಿಣರ ಬೇಟೆಯಾಡಿ ಸರಣಿ ಗೆದ್ದ ಭಾರತ – ಧೋನಿ ಟ್ರೆಂಡ್‌ ಮುಂದುವರಿಸಿದ ಕೆ.ಎಲ್‌ ರಾಹುಲ್‌

    – ಕಿಂಗ್‌ ಕೊಹ್ಲಿ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಟೀಂ‌ ಭಾರತದ 2ನೇ ನಾಯಕ ರಾಹುಲ್

    ಪರ್ಲ್‌: ಸಂಜು ಸ್ಯಾಮ್ಸನ್‌ ಅವರ ಚೊಚ್ಚಲ ಶತಕ ಹಾಗೂ ಅರ್ಷ್‌ದೀಪ್‌ ಸಿಂಗ್‌ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ. ಈ ಸರಣಿ ಗೆಲುವು ಕೆ.ಎಲ್‌ ರಾಹುಲ್‌ ನಾಯಕತ್ವಕ್ಕೆ ಮತ್ತಷ್ಟು ಬಲ ನೀಡಿದೆ.

    ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಹರಿಣರ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾದ 2ನೇ ನಾಯಕ ಎಂಬ ಖ್ಯಾತಿಯನ್ನೂ ರಾಹುಲ್‌ ಗಳಿಸಿದ್ದಾರೆ. ಇದರೊಂದಿಗೆ ಲೆಜೆಂಡ್‌ ಎಂ.ಎಸ್‌ ಧೋನಿ ಅವರ ಟ್ರೆಂಡನ್ನೇ ಮುಂದುವರಿಸಿ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಗಣ್ಯರಿಂದ ಸರಣಿ ಟ್ರೋಫಿ ಪಡೆಯುತ್ತಿದ್ದಂತೆ ಅದನ್ನು ಸಹ ಆಟಗಾರ ರಿಂಕು ಸಿಂಗ್‌ಗೆ ನೀಡಿದ್ದಾರೆ. ಗ್ರೂಪ್‌ ಫೋಟೋ ತೆಗೆಸಿಕೊಳ್ಳುವಾಗಲು ಕೆ.ಎಲ್‌ ರಾಹುಲ್‌ ಕೊನೆಯಲ್ಲಿ ನಿಂತು ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದಾರೆ. ಇದು ಧೋನಿ ಅಭಿಮಾನಿಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

    ಪರ್ಲ್‌ನ ಬೋಲೆಂಡ್‌ ಪಾರ್ಕ್‌ನಲ್ಲಿ ನಡೆದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 297 ರನ್‌ಗಳ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತ್ತಾದರೂ ಬಳಿಕ ಭಾರತದ ಸಂಘಟಿತ ಬೌಲಿಂಗ್‌ ದಾಳಿ ಎದುರಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ 45.5 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲೌಟ್‌ ಆಯಿತು. ಇದರಿಂದ ಭಾರತ 78 ರನ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿ ಕೈವಶ ಮಾಡಿಕೊಂಡಿತು.

    ಟೋನಿ ಡಿ ಜಾರ್ಜಿ ಅರ್ಧಶತಕ:
    2ನೇ ಪಂದ್ಯದಲ್ಲಿ ಹರಿಣರ ಪರ ಶತಕ ಸಿಡಿಸಿದ್ದ ಟೋನಿ ಡಿ ಜಾರ್ಜಿ ಅವರು 3ನೇ ಪಂದ್ಯದಲ್ಲಿಯೂ ಅತ್ಯುತ್ತಮ ಫಾರ್ಮ್‌ ಮುಂದುವರಿಸಿದರು. ಅಕ್ಷರ್‌ ಪಟೇಲ್‌ ಅವರ ಬೌಲಿಂಗ್‌ನಲ್ಲಿ ಒಂದು ಜೀವ ದಾನ ಪಡೆದಿದ್ದ ಟೋನಿ ಡಿ ಜಾರ್ಜಿ 87 ಎಸೆತಗಳಲ್ಲಿ 81 ರನ್ (3 ಸಿಕ್ಸರ್‌, 6 ಬೌಂಡರಿ) ಗಳಿಸಿ ಸತತ 2ನೇ ಶತಕ ಪೂರೈಸುವ ಮುನ್ಸೂಚನೆ ನೀಡಿದ್ದರು. ಆದ್ರೆ, ಇದಕ್ಕೆ ಅರ್ಷ್‌ದೀಪ್‌ ಸಿಂಗ್‌ ಬ್ರೇಕ್‌ ಹಾಕಿದರು. ನಾಯಕ ಏಡೆನ್‌ ಮಾರ್ಕ್ರಮ್‌ ಅನಗತ್ಯವಾಗಿ ರಿವರ್ಸ್‌ ಸ್ವೀಪ್‌ ತೆಗೆದುಕೊಳ್ಳಲು ಯತ್ನಿಸಿ ಸುಲಭ ಕೀಪರ್‌ ಕ್ಯಾಚ್‌ಗೆ ತುತ್ತಾದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಭಾರತೀರ ದಾಳಿ ಎದುರಿಸುವಲ್ಲಿ ವಿಫಲರಾದರು.

    ಇನ್ನುಳಿದಂತೆ ರೀಜಾ ಹೆಂಡ್ರಿಕ್ಸ್ 19 ರನ್‌, ರಾಸ್ಸಿ ವಾನ್‌ ಡೇರ್‌ ಡುಸ್ಸೆನ್‌ 2 ರನ್‌, ಹೆನ್ರಿಚ್‌ ಕ್ಲಾಸೆನ್‌ 21 ರನ್‌, ಡೇವಿಡ್‌ ಮಿಲ್ಲರ್‌ 10 ರನ್‌, ವಿಯಾನ್ ಮುಲ್ಡರ್ 1 ರನ್‌, ಕೇಶವ್‌ ಮಹಾರಾಜ್‌ 14 ರನ್‌, ಬ್ಯೂರಾನ್ ಹೆಂಡ್ರಿಕ್ಸ್ 18 ರನ್‌, ಲಿಜಾಡ್ ವಿಲಿಯಮ್ಸ್ 2 ರನ್‌ ಗಳಿಸಿದ್ರೆ ನಾಂದ್ರೆ ಬರ್ಗರ್ 1 ರನ್‌ ಗಳಿಸಿ ಅಜೇಯರಾಗುಳಿದರು.

    ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಅರ್ಷ್‌ದೀಪ್‌ ಸಿಂಗ್‌ 4 ವಿಕೆಟ್‌ ಕಿತ್ತ ಸಾಧನೆ ಮಾಡಿದರೆ, ವಾಷಿಂಗ್ಟನ್‌ ಸುಂದರ್ ಹಾಗೂ ಅವೇಶ್‌ ಖಾನ್ ತಲಾ 2 ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 296 ರನ್‌ ಕಲೆಹಾಕಿತ್ತು. ಸ್ಫೋಟಕ ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಹುಟ್ಟಿಸಿದ್ದ ರಜತ್‌ ಪಾಟಿದಾರ್‌ 22 ರನ್‌ ಗಳಿಸಿ ಔಟಾಗುತ್ತಿದ್ದಂತೆ, ಸತತ 2 ಅರ್ಧಶತಕ ಗಳಿಸಿದ್ದ ಸಾಯಿ ಸುದರ್ಶನ್‌ 10 ರನ್‌ಗೆ ಔಟಾದರು. 3ನೇ ವಿಕೆಟ್‌ಗೆ ಕೆ.ಎಲ್‌ ರಾಹುಲ್‌ ಹಾಗೂ ಸಂಜು ಸ್ಯಾಮ್ಸನ್‌ ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಅಷ್ಟರಲ್ಲಿ 35 ಎಸೆತಗಳಲ್ಲಿ 21 ರನ್‌ ಗಳಿಸಿದ್ದ ರಾಹುಲ್‌ ಔಟಾಗಿ ಪೆವಿಲಿಯನ್‌ಗೆ ಮರಳಿದರು.

    ಸಂಜು ಶತಕ-ತಿಲಕ್‌ ಅರ್ಧಶತಕ:
    4ನೇ ವಿಕೆಟ್‌ಗೆ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ ಎಡಗೈ-ಬಲಗೈ ಕಾಂಬಿನೇಷನ್‌ನಲ್ಲಿ ಹರಿಣ ಪಡೆಯ ಬೌಲರ್‌ಗಳನ್ನು ಕಾಡಿದರು. ಈ ಇಬ್ಬರು ಮಧ್ಯಮ ಓವರ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 4ನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟದ ಕೊಡುಗೆ ನೀಡಿದರು. ಸಮಯಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ ಅವರು 77 ಎಸೆತಗಳಲ್ಲಿ 52 ರನ್‌ ಕಲೆ ಹಾಕಿ, ಕೇಶವ್‌ ಮಹಾರಾಜ್‌ ಸ್ಪಿನ್‌ ದಾಳಿಗೆ ಔಟಾದರು. ಕೊನೆಯಲ್ಲಿ ರಿಂಕು ಸಿಂಗ್‌ 38 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು.

    2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್‌ಗೆ ಇಲ್ಲಿಯವರೆಗೂ ನಿಯಮಿತವಾಗಿ ಅವಕಾಶಗಳು ಸಿಕ್ಕಿರಲಿಲ್ಲ. ಈ ಕಾರಣದಿಂದಾಗಿ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, ಇತ್ತೀಚಿನ ದಿನಗಳಲ್ಲಿ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಲಯ ಹೊಂದಿರುವ ಸಂಜು ಸ್ಯಾಮ್ಸನ್‌ ಅವರು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದೇ ರೀತಿ ಗುರುವಾರ 3ನೇ ಏಕದಿನ ಪಂದ್ಯದಲ್ಲಿಯೂ ಎದುರಿಸಿದ 114 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 108 ರನ್‌ ಗಳಿಸಿದರು.

  • IND vs NZ 2nd ODI: 108ಕ್ಕೆ ನ್ಯೂಜಿಲೆಂಡ್ ಆಲೌಟ್ – ಭಾರತಕ್ಕೆ 109 ರನ್ ಗುರಿ

    IND vs NZ 2nd ODI: 108ಕ್ಕೆ ನ್ಯೂಜಿಲೆಂಡ್ ಆಲೌಟ್ – ಭಾರತಕ್ಕೆ 109 ರನ್ ಗುರಿ

    ರಾಯ್‍ಪುರ: ಭಾರತದ (Team India) ಬೌಲರ್‌ಗಳ ಬಿಗಿ ದಾಳಿಗೆ ನ್ಯೂಜಿಲೆಂಡ್ (New Zealand) 2ನೇ ಏಕದಿನ ಪಂದ್ಯದಲ್ಲಿ (2nd ODI) ಕೇವಲ 108 ರನ್‍ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 109 ರನ್‍ಗಳ ಗೆಲುವಿನ ಗುರಿ ಪಡೆದಿದೆ.

    ಟಾಸ್ ಗೆದ್ದ ಭಾರತದ ನಾಯಕ ರೋಹಿತ್‌ ಶರ್ಮಾ ಮೊದಲು ಬೌಲಿಂಗ್ ಆಯ್ದುಕೊಂಡರು. ಇತ್ತ ಭಾರತದ ಬೌಲಿಂಗ್ ಪಡೆ ಆರಂಭದಿಂದಲೇ ನ್ಯೂಜಿಲೆಂಡ್ ಮೇಲೆ ಬಿಗಿ ದಾಳಿ ಸಂಘಟಿಸಿತು. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    ಶಮಿ, ಸಿರಾಜ್, ಠಾಕೂರ್, ಪಾಂಡ್ಯ, ಕುಲ್‍ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಎಲ್ಲರೂ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಾಡಿದರು. ಈ ಆರು ಜನ ಬೌಲರ್‌ಗಳ ಸಂಘಟಿತ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಇದನ್ನೂ ಓದಿ: ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು

    ಫಿಲಿಪ್ಸ್ 36 ರನ್ (52 ಎಸೆತ, 5 ಬೌಂಡರಿ), ಬ್ರೇಸ್ವೆಲ್ 22 ರನ್ (30 ಎಸೆತ, 4 ಬೌಂಡರಿ) ಮತ್ತು ಸ್ಯಾಂಟ್ನರ್ 27 ರನ್ (39 ಎಸೆತ, 3 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ 7 ಮಂದಿ ಆಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರು. ಪರಿಣಾಮ 34.3 ಓವರ್‌ಗಳಲ್ಲಿ ನ್ಯೂಜಿಲೆಂಡ್ 108 ರನ್‍ಗಳಿಗೆ ಆಲೌಟ್ ಆಯಿತು.

    ಭಾರತದ ಪರ ಶಮಿ 3 ವಿಕೆಟ್ ಪಡೆದರೆ, ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಕಿತ್ತರು. ಉಳಿದಂತೆ ಸಿರಾಜ್, ಕುಲ್‍ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    ಢಾಕಾ: 3ನೇ ಏಕದಿನ ಪಂದ್ಯದಲ್ಲಿ (India vs Bangladesh 3rd ODI) ಬಾಂಗ್ಲಾದೇಶ ತಂಡವನ್ನು ಭಾರತ 227 ರನ್‌ಗಳಿಂದ ಸೋಲಿಸಿದೆ. ಆದರೆ ಬಾಂಗ್ಲಾದೇಶ ಏಕದಿನ ಸರಣಿ ಗೆದ್ದು ಬೀಗಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ (Ishan Kishan) ಆರಂಭದಿಂದಲೇ ಅಬ್ಬರಿಸಿ, ಸಿಕ್ಸರ್-ಬೌಂಡರಿಗಳ 210 (131) ಸಿಡಿಸಿದರು. ಕೊಹ್ಲಿ (Virat Kohli) ಕೂಡ 113 (91) ರನ್‌ ಗಳಿಸಿದ್ದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 409 ರನ್‌ ಗಳಿಸಿತ್ತು. ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಇದನ್ನು ಬೆನ್ನುಹತ್ತಿದ ಬಾಂಗ್ಲಾ ಪಡೆ 34 ಓವರ್‌ಗಳಲ್ಲಿ 182ರನ್‌ಗಳಿಗೆ ಸರ್ವ ಪತನ ಕಂಡಿತು. ಭಾರತಕ್ಕೆ ದಕ್ಕಿದ ಮೂರನೇ ಅತಿದೊಡ್ಡ ಗೆಲುವು ಇದಾಗಿದೆ. ಮೂರು ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶ 1-2 ರಲ್ಲಿ ಅಂತರದಲ್ಲಿ ಗೆದ್ದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಮೂರನೇ ಏಕದಿನ ಪಂದ್ಯ – ಭಾರತದ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ

    ಇಂದು ಮೂರನೇ ಏಕದಿನ ಪಂದ್ಯ – ಭಾರತದ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ

    ಟ್ರಿನಿನಾಡ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯ ಇಂದು ನಡೆಯಲಿದ್ದು, ಈಗಾಗಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್‌ನತ್ತ ಕಣ್ಣಿಟ್ಟಿದೆ.

    ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿ ಗೆದ್ದ ಸಂಭ್ರಮದಲ್ಲಿದ್ದರೆ, ಇತ್ತ ವೆಸ್ಟ್‌ ಇಂಡೀಸ್ ತವರಿನಲ್ಲಿ ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಮೂರನೇ ಏಕದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಎರಡು ಪಂದ್ಯಗಳನ್ನು ಕೂಡ ರೋಚಕವಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾಗೆ ಈ ಪಂದ್ಯ ತಮ್ಮ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಉತ್ತಮ ಅವಕಾಶವಾಗಿದೆ. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    ಶಿಖರ್ ಧವನ್ ನೇತೃತ್ವದ ಯುವ ತಂಡ ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನವನ್ನು ನೀಡಿದೆ. ಈಗಾಗಲೇ ಆರಂಭದ ಎರಡು ಪಂದ್ಯಗಳಲ್ಲಿ ಆಡಿರುವ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶುಭಮನ್ ಗಿಲ್, ಅಕ್ಷರ್ ಪಟೇಲ್ ತಮ್ಮ ಸಾಮರ್ಥ್ಯವನ್ನು ಈಗಾಗಲೇ ನಿರೂಪಿಸಿದ್ದಾರೆ. ಇದೀಗ ಇವರಿಗೆ ಮೂರನೇ ಪಂದ್ಯದಿಂದ ವಿಶ್ರಾಂತಿ ನೀಡಿ ಬೆಂಚ್ ಕಾಯ್ದ ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ಅರ್ಷದೀಪ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ವೆಸ್ಟ್ ಇಂಡೀಸ್ ತಂಡ ತವರಿನಲ್ಲಿ ಮೊದಲ ಎರಡು ಪಂದ್ಯ ಸೋತ ಬಳಿಕ ಇದೀಗ ಮೂರನೇ ಏಕದಿನ ಪಂದ್ಯದ ಗೆಲುವಿಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಇರಲು ನಿರ್ಧರಿಸಬಹುದು.

    ಭಾರತ ತಂಡ:
    ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೆ), ಸಂಜು ಸ್ಯಾಮ್ಸನ್ (ವಿ.ಕೆ), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

    ವೆಸ್ಟ್ ಇಂಡೀಸ್ ತಂಡ:
    ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಮೋ ಪಾಲ್, ರೋವ್‍ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್, ಹೇಡನ್ ವಾಲ್ಷ್.

    Live Tv
    [brid partner=56869869 player=32851 video=960834 autoplay=true]

  • ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ

    ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ

    ಟ್ರಿನಿನಾಡ್: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2 ವಿಕೆಟ್‍ಗಳ ಅಂತರದ ರೋಚಕ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

    ವೆಸ್ಟ್ ಇಂಡೀಸ್ ನೀಡಿದ 312 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಅಕ್ಷರ್ ಪಟೇಲ್ ಅಜೇಯ 64 ರನ್ (35 ಎಸೆತ, 3 ಬೌಂಡರಿ, 5 ಸಿಕ್ಸ್) ಚಚ್ಚಿ ಮ್ಯಾಚ್ ಫಿನಿಶ್ ಮಾಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ವಿಕೆಟ್ ಕಳೆದುಕೊಂಡು ಸಾಗಿದ ಭಾರತಕ್ಕೆ ಕೊನೆಯ ಓವರ್‌ನಲ್ಲಿ 8 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ ಮುಂದಿನ ಎರಡು ಎಸೆತಗಳಲ್ಲಿ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ರನ್ ಕಸಿದರು. ಕೊನೆಯ 3 ಎಸೆತಗಳಲ್ಲಿ ಭಾರತದ ಗೆಲುವಿಗೆ 6 ರನ್ ಬೇಕಾಗಿತ್ತು. 4 ಎಸೆತವನ್ನು ಸಿಕ್ಸರ್‌ಗಟ್ಟಿದ ಅಕ್ಷರ್ ಪಟೇಲ್ 49.4 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‍ಗಳನ್ನು ಕಳೆದುಕೊಂಡು ಇನ್ನೂ 2 ಎಸೆತ ಬಾಕಿ ಇರುವಂತೆ 2 ವಿಕೆಟ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್

    ಈ ಮೂಲಕ  3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಭಾರತ ಗೆದ್ದು ಬೀಗಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2007ರ ಬಳಿಕ ಏಕದಿನ ಸರಣಿ ಜಯದ ಅಜೇಯ ಓಟ ಮುಂದುವರಿಸಿ ವಿಶ್ವದಾಖಲೆ ಬರೆಯಿತು.

    ವಿಂಡೀಸ್ ನೀಡಿದ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ಬ್ಯಾಟಿಂಗ್‍ನಲ್ಲಿ ಶುಭಮನ್ ಗಿಲ್ 43 ರನ್ (49 ಎಸೆತ, 5 ಬೌಂಡರಿ) ಮತ್ತು ಶ್ರೇಯಸ್ ಅಯ್ಯರ್ 63 ರನ್ (71 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಗ್ರಕ್ರಮಾಂಕದಲ್ಲಿ ಆಸರೆಯಾದರು. ಗಿಲ್ ಔಟ್ ಆದ ಬಳಿಕ ಅಯ್ಯರ್, ಸಂಜು ಸ್ಯಾಮ್ಸನ್ 4ನೇ ವಿಕೆಟ್‍ಗೆ 99 ರನ್ (94 ಎಸೆತ) ಜೊತೆಯಾಟವಾಡಿದ್ದು ತಂಡಕ್ಕೆ ನೆರವಾಯಿತು. ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 54 ರನ್ (51 ಎಸೆತ, 3 ಬೌಂಡರಿ, 3 ಸಿಕ್ಸ್) ಬಾರಿಸಿ ರನ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಅಕ್ಷರ್ ಪಟೇಲ್ ಬೌಂಡರಿ, ಸಿಕ್ಸರ್ ಸಿಡಿಸುತ್ತ ತಂಡದ ಗೆಲುವಿನ ಜವಾಬ್ದಾರಿ ವಹಿಸಿಕೊಂಡರು. ಇನ್ನೇನು ಪಂದ್ಯ ರೋಚಕ ಹಂತ ತಲುಪಿದ್ದ ವೇಳೆ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯದ ಸಿಹಿ ನೀಡಿದರು. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ

    ಶತಕ ಸಿಡಿಸಿ ಶೈನ್ ಆದ ಶಾಯ್ ಹೋಪ್:
    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಶಾಯ್ ಹೋಪ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್‍ಗೆ 65 ರನ್ (55 ಎಸೆತ) ಜೊತೆಯಾಟವಾಡಿ ಈ ಜೋಡಿ ಬೇರ್ಪಟ್ಟಿತು. ಬಳಿಕ ಶಾಯ್ ಹೋಪ್ ನಾಯಕ ನಿಕೊಲಸ್ ಪೂರನ್ ತಂಡದ ರನ್ ಹೆಚ್ಚಿಸಲು ಮುಂದಾದರು. ಉತ್ತಮ ಲಯದಲ್ಲಿದ್ದ ಶಯ್ ಹೋಪ್ ಭಾರತದ ಬೌಲರ್‌ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪೂರನ್ 74 ರನ್ (77 ಎಸೆತ, 1 ಬೌಂಡರಿ, 6 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು. ಈ ಮೊದಲು ಈ ಜೋಡಿ 4 ವಿಕೆಟ್‍ಗೆ 117 ರನ್ (126 ಎಸೆತ) ಶತಕದ ಜೊತೆಯಾಟವಾಡಿ ಮಿಂಚಿತು. ಇತ್ತ ಸಿಕ್ಸ್ ಸಿಡಿಸಿ ಶತಕ ಪೂರೈಸಿದ ಶಯ್ ಹೋಪ್ 115 ರನ್ (135 ಎಸೆತ, 8 ಬೌಂಡರಿ, 3 ಸಿಕ್ಸ್) ಬಾರಿಸಿ ವೆಸ್ಟ್ ಇಂಡೀಸ್ ಬೃಹತ್ ಮೊತ್ತಕ್ಕೆ ಕಾರಣರಾದರು.

    ಅಂತಿಮವಾಗಿ ವಿಂಡೀಸ್ 50 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಸಿಡಿಸಿತು. ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಲಂಡನ್: ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಗೆಲುವು ಸಾಧಿಸಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಸರಣಿ ಜಯಕ್ಕಾಗಿ ಸೆಣಸಲಿವೆ.

    ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ರ ವೇಳೆಗೆ ಪಂದ್ಯ ಆರಂಭವಾಗಲಿದ್ದು, 2ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಶಾಕ್‌ನಿಂದ ಕಂಗೆಟ್ಟಿರುವ ಭಾರತ ಅಂತಿಮ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಪ್ಲಾನ್ ಬದಲಿಸಿಕೊಂಡು ಸರಣಿ ಜಯದ ಎದುರು ನೋಡುತ್ತಿದೆ. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದ ಭಾರತ 2ನೇ ಪಂದ್ಯದಲ್ಲಿ ಸೋಲು ಕಂಡಿತು. 247 ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ 100 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ, ಜಡೇಜಾ ಹೋರಾಡಿದರೂ ಅವರ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಗಲಿಲ್ಲ. ಇದೀಗ ಅಂತಿಮ ಪಂದ್ಯದಲ್ಲಿ ಟಿ20 ಮಾದರಿಯಂತೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿ ಕೈವಶ ಮಾಡಿಕೊಳ್ಳಲು ಭಾರತ ಮುಂದಾಗಿದೆ.

    ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಉತ್ತಮ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 2ನೇ ಪಂದ್ಯದಲ್ಲಿ ನಿರೀಕ್ಷಿತ ಆಟವಾಡದೇ ಇರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಅಲ್ಲದೆ ವಿರಾಟ್ ಕೊಹ್ಲಿ ಸಹ ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದರು. ಅಂತಿಮ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಿಂದ ಆಟಗಾರರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಜಸ್ಪ್ರಿತ್‌ ಬುಮ್ರಾ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆಯಾದರೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಇನ್ನಿಂಗ್ಸ್ ಮಧ್ಯದಲ್ಲಿ ಜೊತೆಯಾಟಗಳನ್ನು ಮುರಿಯುವುದರಲ್ಲಿ ಭಾರತ ಹಿಂದೆ ಬೀಳುತ್ತಿದೆ.

    ಮತ್ತೊಂದೆಡೆ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಟಿ20 ನಲ್ಲಿ ಭಾರತದ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಇದೀಗ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಸೇಡು ತೀರಿಕೊಳ್ಳಲು ಕಾತರವಾಗಿದೆ.

    Live Tv

    [brid partner=56869869 player=32851 video=960834 autoplay=true]

  • 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಲಂಡನ್: ಆರಂಭಿಕ ಪಂದ್ಯದಲ್ಲಿ ಮಾರಕ ವೇಗದ ಬೌಲಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ರೀಸ್ ಟೋಪ್ಲಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ 100 ರನ್‌ಗಳ ಅಂತರದಿಂದ ಸೋಲು ಕಂಡಿತು.

    ಲಾರ್ಡ್ಸ್ ಅಂಗಳದಲ್ಲಿ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49 ಓವರಲ್ಲಿ 246 ಗಳ ಸಾಧಾರಣ ಮೊತ್ತ ಗಳಿಸಿ ಆಲೌಟಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 38.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಅತಿಥೇಯ ಇಂಗ್ಲೆಂಡ್ 3 ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿತು. ಇದನ್ನೂ ಓದಿ: ಇಂದು ಭಾರತ-ಇಂಗ್ಲೆಂಡ್ 2ನೇ ಏಕದಿನ – ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ

    ಆರಂಭಿಕ ಆಘಾತ, ಬ್ಯಾಟಿಂಗ್ ವೈಫಲ್ಯ:
    ಟಾಸ್ ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕದಲ್ಲೇ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಗಳಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 27, ಹಾರ್ದಿಕ್ ಪಾಂಡ್ಯ 44 ಎಸೆತಗಳಲ್ಲಿ 29 ಹಾಗೂ ರವೀಂದ್ರ ಜಡೇಜಾ 44 ಎಸೆತಗಳಲ್ಲಿ 29 ರನ್‌ಗಳಿಸಿ ತಂಡಕ್ಕೆ ನೆರವಾದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿ ಗೆಲುವು ದಾಖಲಿಸುವಲ್ಲಿ ವಿಫಲರಾದರು. ಇದನ್ನೂ ಓದಿ: ಸ್ಫೋಟಕ ಶತಕ- ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಸೂರ್ಯ ಭಾರೀ ಹೈಜಂಪ್‌

    ವಿಲಿ, ಮೊಯಿನ್ ಅಲಿ ಆಸರೆ:
    ಭಾರತದ ಬೌಲಿಂಗ್ ಪಡೆಯ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು 102 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 33ರನ್ (2 ಸಿಕ್ಸರ್, 2 ಬೌಂಡರಿ), ಮೊಯಿನ್ ಅಲಿ 47 (2 ಬೌಂಡರಿ, 2 ಸಿಕ್ಸರ್) ಜೊತೆಯಾಟದಲ್ಲಿ 6ನೇ ವಿಕೆಟ್‌ಗೆ 62 ರನ್‌ಗಳನ್ನು ಸಿಡಿಸಿದರು. ನಂತರದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಡೇವಿಡ್ ವಿಲಿ 41 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಜೇಸನ್ ರಾಯ್ 23ರನ್ ಗಳಿಸಿದರೆ ಜಾನಿ ಬೈರ್‌ಸ್ಟೋವ್ 6 ಬೌಂಡರಿಗಳೊಂದಿಗೆ 38 ರನ್ ಸಿಡಿಸಿದರು.

    ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ 9ನೇ ಓವರ್‌ನಲ್ಲಿ ಜೇಸನ್ ರಾಯ್ ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಮೊದಲ ಯಶಸ್ಸು ಪಡೆದರು. ಚಾಹಲ್ ಜಾನಿ ಬೈರ್‌ಸ್ಟೋವ್ ವಿಕೆಟ್ ಅನ್ನು 15ನೇ ಓವರ್‌ನಲ್ಲಿ ಉರುಳಿಸಿದ ಚಾಹಲ್ ತಮ್ಮ ಖಾತೆ ತೆರೆದರು. ಜೋ ರೂಟ್ ಅವರನ್ನು LBW ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಡೇವಿಡ್ ವಿಲಿಗೆ ಅರ್ಧಶತಕ ಗಳಿಸಲು ಬುಮ್ರಾ ಬ್ರೇಕ್ ಹಾಕಿದರು. ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ್ದ ಬುಮ್ರಾ ಇಲ್ಲಿ ಡೇವಿಡ್ ಸೇರಿದಂತೆ ಎರಡು ವಿಕೆಟ್ ಗಳಿಸಿದರು.

    ಒಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಎರಡೂ ವಿಭಾಗಗಳ ವೈಫಲ್ಯದಿಂದಾಗಿ ಸೋಲನ್ನು ಅನುಭವಿಸಿತು.

    Live Tv
    [brid partner=56869869 player=32851 video=960834 autoplay=true]

  • ಕ್ಯಾಚ್‌ಗಳನ್ನು ಕೈ ಚೆಲ್ಲಿದರೂ ಕೊನೆಗೂ ಸರಣಿ ಗೆದ್ದ ಭಾರತ – ರೋಚಕವಾಗಿ  ಟೀಂ ಇಂಡಿಯಾ ಗೆದ್ದಿದ್ದು ಹೇಗೆ?

    ಕ್ಯಾಚ್‌ಗಳನ್ನು ಕೈ ಚೆಲ್ಲಿದರೂ ಕೊನೆಗೂ ಸರಣಿ ಗೆದ್ದ ಭಾರತ – ರೋಚಕವಾಗಿ ಟೀಂ ಇಂಡಿಯಾ ಗೆದ್ದಿದ್ದು ಹೇಗೆ?

    – ಕೊನೆಯ ಮೂರು ಓವರಿನಲ್ಲಿ ರನ್‌ಗೆ ಕಡಿವಾಣ
    – ಸ್ಯಾಮ್‌ ಕರ್ರನ್‌ ಸ್ಫೋಟಕ ಆಟ

    ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಕ್ಯಾಚ್‌ ಕೈ ಚೆಲ್ಲಿ ಸೋಲುವ ಭೀತಿಯಲ್ಲಿ ಸಿಲುಕಿದ್ದ ಭಾರತ ಕೊನೆಗೆ 7 ರನ್‌ಗಳಿಂದ ರೋಚಕವಾಗಿ ಗೆದ್ದು ಪೇಟಿಎಂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.

    330 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ ಟೆಸ್ಟ್‌ ಬಳಿಕ ಟಿ20 ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿದೆ.

    ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ 95 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು. ಒಂದು ಹಂತದಲ್ಲಿ 168 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸೋಲುವ ಭೀತಿಯಲ್ಲಿದ್ದ ಇಂಗ್ಲೆಂಡ್‌ ಸ್ಯಾಮ್‌ ಕರ್ರನ್‌, ಮೊಯಿನ್‌ ಆಲಿ, ಅದಿಲ್‌ ರಶೀದ್‌ ಅವರ ಸಾಹಸದಿಂದ 300 ರನ್‌ಗಳ ಗಡಿಯನ್ನು ದಾಟಿ ಗೆಲುವಿನ ಹತ್ತಿರ ಬಂದಿತ್ತು.

    ಭಾರತ ಗೆದ್ದಿದ್ದು ಹೇಗೆ?
    22 ರನ್‌ ಗಳಿಸಿದ್ದಾಗ ಹಾರ್ದಿಕ್‌ ಪಾಂಡ್ಯ ಸ್ಯಾಮ್‌ ಕರ್ರನ್‌ ಅವರ ಕ್ಯಾಚ್‌ ಕೆಚ್ಚಿಲ್ಲಿದ್ದರು. ಇದರ ಸಂಪೂರ್ಣ ಲಾಭವನ್ನು ಪಡೆದ ಕರ್ರನ್‌ ಅಜೇಯ 95 ರನ್‌ ಗಳಿಸಿ ಇಂಗ್ಲೆಂಡ್‌ ವಿಜಯದ ಹತ್ತಿರ ತಗೆದುಕೊಂಡು ಬಂದಿದ್ದರು. ಶಾರ್ದೂಲ್‌ ಠಾಕೂರ್‌ ಎಸೆದ ಇನ್ನಿಂಗ್ಸ್‌ನ 47ನೇ ಓವರಿನಲ್ಲಿ 18 ರನ್‌ ಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ಗೆ ಜಯದ ಆಸೆ ಚಿಗುರಿತ್ತು.

    ಕೊನೆಯ ಮೂರು ಓವರಿನಲ್ಲಿ 23 ರನ್‌ಗಳ ಅಗತ್ಯವಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ 48ನೇ ಓವರಿನಲ್ಲಿ 2 ವೈಡ್‌ ಸೇರಿದಂತೆ 4 ರನ್‌ ಬಂತು. ಹಾರ್ದಿಕ್‌ ಪಾಂಡ್ಯ ಎಸೆದ 49ನೇ ಓವರಿನಲ್ಲಿ 5 ರನ್‌ ಬಂತು. ಈ ಓವರಿನಲ್ಲಿ ಶಾರ್ದೂಲ್‌ ಠಾಕೂರ್‌ ಮಾರ್ಕ್‌ ವುಡ್‌ ಕ್ಯಾಚ್‌ ಡ್ರಾಪ್‌ ಮಾಡಿದರೆ ಕರ್ರನ್‌ ಅವರ ಕ್ಯಾಚನ್ನು ನಟರಾಜನ್‌ ಕೈ ಚೆಲ್ಲಿದರು. ಕ್ಯಾಚ್‌ಗಳು ಡ್ರಾಪ್‌ ಆದ ಕಾರಣ ಪಂದ್ಯ ರೋಚಕ ಘಟಕ್ಕೆ ತಲುಪಿತು.

    ಕೊನೆಯ 6 ಎಸೆತಕ್ಕೆ 14 ರನ್‌ಗಳ ಅಗತ್ಯವಿತ್ತು. ನಟರಾಜನ್‌ ಎಸೆದ ಮೊದಲ ಎಸೆತವನ್ನು ಕರ್ರನ್‌ ಲಾಂಗ್‌ ಆನ್‌ ಕಡೆಗೆ ಹೊಡೆದರು. ಈ ವೇಳೆ ಮಾರ್ಕ್‌ ವುಡ್‌ ಎರಡು ರನ್‌ ಓಡಲು ಪ್ರಯತ್ನಿಸಿದರು. ಆದರೆ ಹಾರ್ದಿಕ್‌ ಪಾಂಡ್ಯ ಬಾಲನ್ನು ಮಿಂಚಿನ ವೇಗದಲ್ಲಿ ಕೀಪರ್‌ಗೆ ಎಸೆದ ಪರಿಣಾಮ ಒಂದೇ ರನ್‌ ಬಂತು. ರಿಷಭ್‌ ಪಂತ್‌ ಬೇಲ್ಸ್‌ ಹಾರಿಸಿದ ಕಾರಣ ಮಾರ್ಕ್‌ ವುಡ್‌ ರನೌಟ್‌ ಆದರು. ಮುಂದಿನ ಎಸೆತದಲ್ಲಿ ಒಂದು ರನ್‌ ಬಂದರೆ ನಂತರ ಎರಡು ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5ನೇ ಎಸೆತದಲ್ಲಿ 4 ರನ್‌ ಬಂದರೆ 6ನೇ ಎಸೆತವನ್ನು ಕರ್ರನ್‌ ಲಾಂಗ್‌ ಆನ್‌ ಕಡೆಗೆ ಹೊಡೆದರೂ ರನ್‌ ಓಡದ ಕಾರಣ ಭಾರತ 7 ರನ್‌ಗಳಿಂದ ಗೆದ್ದುಕೊಂಡಿತು.

    ಜಾನಿ ಬೇರ್‌ಸ್ಟೋ 1 ರನ್‌, ಜೇಸನ್‌ ರಾಯ್‌ 14 ರನ್‌, ಬೇನ್‌ಸ್ಟೋಕ್ಸ್‌ 35 ರನ್‌, ಡೇವಿಡ್‌ ಮಲಾನ್‌ 50 ರನ್‌(50 ಎಸೆತ, 6 ಬೌಂಡರಿ), ಲಿಯಾಮ್‌ ಲಿವಿಂಗ್‌ಸ್ಟೋನ್‌ 36 ರನ್‌(31 ಎಸೆತ, 4 ಬೌಂಡರಿ, 1 ಸಿಕ್ಸರ್‌), ಮೊಯಿನ್‌ ಆಲಿ 29 ರನ್‌( 25 ಎಸೆತ, 2 ಬೌಂಡರಿ, 2 ಸಿಕ್ಸರ್‌), ಆದಿಲ್‌ ರಷಿದ್‌ 19 ರನ್‌, ಮಾರ್ಕ್‌ ವುಡ್‌ 14 ರನ್‌ ಹೊಡೆದರು.

  • ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್‍ಗಳ ರೋಚಕ ಜಯ

    – ಮೊದಲ ಪಂದ್ಯದಲ್ಲೇ ಮಿಂಚಿದ ನಟರಾಜನ್

    ಕ್ಯಾನ್ಬೆರಾ: ಇಂದು ನಡೆದ ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಡಿಯಾ 13 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದೆ.

    ಇಂದು ಕ್ಯಾನ್ಬೆರಾ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿಯವರ ಅರ್ಧಶಕ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ಫೋಟಕ ಆಟದಿಂದ ನಿಗಧಿತ 50 ಓವರಿನಲ್ಲಿ 302 ರನ್ ಗಳಿತ್ತು. ಈ ಗುರಿಯನ್ನು ಬೆನ್ನಟ್ಟಿ ಆಸೀಸ್ ತಂಡ ಜಸ್ಪ್ರೀತ್ ಬುಮ್ರಾ, ಟಿ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ನಲುಗಿ 13 ರನ್‍ಗಳ ಅಂತರದಿಂದ ಸೋತಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯವನ್ನು ಗೆದ್ದು ಕೊನೆಯ ಪಂದ್ಯವನ್ನು ಸೋಲುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದುಕೊಂಡಿತು.

    ಟಿ ನಟರಾಜನ್ ಮಿಂಚು
    ಇಂದಿನ ಪಂದ್ಯದಲ್ಲಿ ಭಾರತದ ಪರ ಪಾದಾರ್ಪಣೆ ಪಂದ್ಯವಾಡಿದ ಟಿ ನಟರಾಜನ್, ತಮ್ಮ ಕೋಟಾದ 10 ಓವರ್ ಬೌಲ್ ಮಾಡಿ 70 ರನ್ ನೀಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಜೊತೆಗೆ ಶಾರ್ದೂಲ್ ಠಾಕೂರ್ 10 ಓವರ್ ಉತ್ತಮವಾಗಿ ಬೌಲ್ ಮಾಡಿ 51 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಬುಮ್ರಾ ಪ್ರಮುಖ ಹಂತದಲ್ಲಿ ಮ್ಯಾಕ್ಸ್ ವೆಲ್ ಔಟ್ ಮಾಡಿ ಎರಡು ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದರು.

    ಇಂಡಿಯಾ ನೀಡಿದ್ದ 303 ರನ್ ಗುರಿಯನ್ನು ಬೆನ್ನಟ್ಟಲು ಬಂದ ಆಸೀಸ್‍ಗೆ ಟಿ ನಟರಾಜನ್ ಶಾಕ್ ನೀಡಿದರು. 7 ರನ್ ಗಳಿಸಿ ಆಡುತ್ತಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ನಟರಾಜನ್ ಬೌಲಿಂಗ್ ಬೌಲ್ಡ್ ಆದರು. ನಂತರ ಬಂದ ಸ್ಟೀವನ್ ಸ್ಮಿತ್‍ಅನ್ನು ಶಾರ್ದೂಲ್ ಠಾಕೂರ್ ಬೌಲ್ಡ್ ಮಾಡಿದರು. ನಾಯಕ ಆರೋನ್ ಫಿಂಚ್ ಬಿಟ್ಟರೆ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಯಾವ ಆಟಗಾರನೂ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಫಿಂಚ್ ಅವರು 82 ಬಾಲಿಗೆ 75 ರನ್ ಸಿಡಿಸಿ ಜಡೇಜಾ ಅವರಿಗೆ ಔಟ್ ಆದರು.

    ಇದಾದ ನಂತರ ಬಂದ ಮೊಯಿಸಸ್ ಹೆನ್ರಿಕ್ಸ್ 22 ರನ್ ಮತ್ತು ಕ್ಯಾಮರೂನ್ ಗ್ರೀನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆ ಸೇರಿಕೊಂಡು ಸ್ಫೋಟಕ ಆಟಕ್ಕೆ ಮುಂದಾದರು. ಆದರೆ 38 ಬಾಲಿಗೆ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ 59 ರನ್ ಸಿಡಿಸಿದ್ದ ಮ್ಯಾಕ್ಸ್ ವೆಲ್ ಅನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಮ್ಯಾಜಿಕ್ ಮಾಡದ ಕಾರಣ ಆಸೀಸ್ ಸೋತಿತು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲೇ ಶಿಖರ್ ಧವನ್ ಅವರನ್ನು ಕಳೆದುಕೊಂಡಿತ್ತು. ಆದರೆ ನಂತರ ಬಂದ ನಾಯಕ ಕೊಹ್ಲಿ 78 ಬಾಲಿಗೆ ಐದು ಬೌಂಡರಿ ಸಮೇತ 63 ರನ್ ಸಿಡಿಸಿದರು. ಕೊಹ್ಲಿ ಔಟ್ ಆದ ನಂತರ ಐಯ್ಯರ್ ಮತ್ತು ರಾಹುಲ್ ಕೂಡ ಔಟ್ ಆದರು. ಆದರೆ ನಂತರ ಒಂದಾದ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಆಟಕ್ಕೆ ಮುಂದಾದರು. ಹಾರ್ದಿಕ್ 76 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡಿರಿ ಸಮೇತ ಭರ್ಜರಿ 92 ರನ್ ಸಿಡಿಸಿದರು. ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಜಡೇಜಾ 50 ಬಾಲ್‍ನಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 66 ರನ್ ಸಿಡಿಸಿದರು.

  • ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಸಿಡ್ನಿ: ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಅವರಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್‌ ಫಿಂಚ್‌ ಅವರು ಕೈಯಿಂದ ಪಂಚ್‌ ಮಾಡಿದ್ದಾರೆ.

    ಎರಡನೇ ಪಂದ್ಯದಲ್ಲಿ ನವದೀಪ್‌ ಸೈನಿ 12ನೇ ಓವರ್‌ ಬೌಲ್‌ ಮಾಡುತ್ತಿದ್ದರು. ಗಂಟೆಗೆ 146 ಕಿ.ಮೀ ವೇಗದಲ್ಲಿ ಎಸೆದ 5ನೇ ಎಸೆತವನ್ನು ಹೊಡೆಯಲು ಫಿಂಚ್‌ ಪ್ರಯತ್ನ ಪಟ್ಟಿದ್ದರು. ಆದರೆ ಬಾಲ್‌ ಬ್ಯಾಟ್‌ಗೆ ಸಿಗದೇ ಹೊಟ್ಟೆಗೆ ಬಡಿಯಿತು. ಫುಲ್‌ ಟಾಸ್‌ ಆಗಿದ್ದ ಕಾರಣ ಅಂಪೈರ್‌ ನೋಬಾಲ್‌ ನೀಡಿದರು.

    ಬಳಿಕ ಫಿಂಚ್‌ ಮತ್ತು ವಾರ್ನರ್‌ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರ ಬಂದ ರಾಹುಲ್‌ ಗ್ಲೌಸ್‌ ನೋಡಿ ಎಡಕೈಯಲ್ಲಿ ದೇಹ ಮುಟ್ಟಲು ಯತ್ನಿಸಿದಾಗ ಫಿಂಚ್‌ ಎರಡು ಕೈಯಲ್ಲಿ ರಾಹುಲ್‌ ಹೊಟ್ಟೆಗೆ ಮೆಲ್ಲಗೆ ಕೈಯಿಂದ ಪಂಚ್‌ ಮಾಡಿದ್ದಾರೆ. ನಂತರ ಇಬ್ಬರು ಆಟಗಾರರು ನಕ್ಕಿದ್ದಾರೆ.

    ಈ ಹಿಂದೆ ಆಸ್ಟ್ರೇಲಿಯಾದ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕಿಚಾಯಿಸುತ್ತಿದ್ದರು. ಆದರೆ ಐಪಿಎಲ್‌ನಿಂದ ಆಟಗಾರರ ವರ್ತನೆಯೇ ಬದಲಾಗಿದ್ದು ಎಲ್ಲರೂ ಸ್ನೇಹಿತರಂತೆ ಆಡುತ್ತಿದ್ದಾರೆ.

    ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 389 ರನ್‌ ಗಳಿಸಿದೆ.

    ಸ್ಮಿತ್‌ 104 ರನ್‌ (64 ಎಸೆತ, 14 ಬೌಂಡರಿ, 2 ಸಿಕ್ಸರ್‌), ಡೇವಿಡ್‌ ವಾರ್ನರ್‌ 83 ರನ್‌(77 ಎಸೆತ, 7ಬೌಂಡರಿ, 3 ಸಿಕ್ಸರ್‌) ಲಬುಶೇನ್‌ 70 ರನ್‌(61 ಎಸೆತ, 5 ಬೌಂಡರಿ) ಗ್ಲೇನ್‌ ಮ್ಯಾಕ್ಸ್‌ವೆಲ್‌ 63 ರನ್‌(29 ಎಸೆತ, 4 ಬೌಂಡರಿ, 4 ಸಿಕ್ಸರ್‌), ನಾಯಕ ಫಿಂಚ್‌ 60 ರನ್‌(69 ಎಸೆತ, 6 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸೈನಿ 7ಓವರ್‌ ಮಾಡಿ 70 ರನ್‌ ನೀಡಿ ದುಬಾರಿಯಾದರು. 10 ಓವರ್‌ ಎಸೆದ ಬುಮ್ರಾ 79 ರನ್‌, ಶಮಿ 73 ರನ್‌ ನೀಡಿದರು. ಚಹಲ್‌ 9 ಓವರ್‌ ಎಸೆದು 71 ರನ್‌ ನೀಡಿದರು.

    https://twitter.com/Gajal_Dalmia/status/1332908132717142019