Tag: ಏಕದಿನ ವಿಶ್ವಕಪ್‌ ಟೂರ್ನಿ

  • World Cup 2023: ಮೂರೇ ಪಂದ್ಯ – ಆರು ದಾಖಲೆ

    World Cup 2023: ಮೂರೇ ಪಂದ್ಯ – ಆರು ದಾಖಲೆ

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ (ICC World Cup) ಟೂರ್ನಿಯೂ ಅತ್ಯಂತ ವಿಶೇಷವಾಗಿದ್ದು, ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಸಿಡಿಯುತ್ತಲೇ ಇವೆ. ಆರಂಭಿಕ ಪಂದ್ಯದಲ್ಲೇ ಹಾಲಿಚಾಂಪಿಯನ್ಸ್‌ ಇಂಗ್ಲೆಂಡ್‌ (England) ತಂಡವನ್ನು ಬಗ್ಗು ಬಡಿದಿದ್ದ ಕಿವೀಸ್‌ ಚೊಚ್ಚಲ ಪಂದ್ಯದಲ್ಲೇ ದಾಖಲೆ ಸೃಷ್ಟಿಸಿತ್ತು.

    ಕಿವೀಸ್‌ ಆಟಗಾರರಾದ ಡಿವೋನ್‌ ಕಾನ್ವೆ ಮತ್ತು ರಚಿನ್‌ ರವೀಂದ್ರ 211 ಎಸೆತಗಳಲ್ಲಿ 273 ರನ್‌ ಜೊತೆಯಾಟ ನೀಡುವ ಮೂಲಕ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ದಾಖಲೆಯನ್ನ ಉಡೀಸ್‌ ಮಾಡಿದ್ದರು. ಅಷ್ಟೇ ಅಲ್ಲ ರಚಿನ್ ರವೀಂದ್ರ ಚೊಚ್ಚಲ ವಿಶ್ವಕಪ್​ನಲ್ಲೇ ಶತಕ ಸಿಡಿಸಿದ ವಿಶ್ವದ 16ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ 11 ಆಟಗಾರರೂ ಮೊದಲ ಬಾರಿಗೆ ಎರಡಂಕಿಯ ಸ್ಕೋರ್‌ ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

    ಆದ್ರೆ ಶನಿವಾರ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ವಿಶ್ವದಾಖಲೆಗಳ ಸುರಿಮಳೆಗೈದಿತು. ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಏಡನ್ ಮಾರ್ಕ್ರಮ್ (Adien Markram) ಅತ್ಯಂತ ವೇಗದ ಶತಕ ಸಿಡಿಸಿ 12 ವರ್ಷಗಳ ಹಳೆಯ ದಾಖಲೆಯನ್ನ ಉಡೀಸ್ ಮಾಡಿದರು. ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ 428 ರನ್ ಬಾರಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಸಿಡಿಸಿದ ವಿಶ್ವದಾಖಲೆಯನ್ನೂ ಮಾಡಿತು.

    ಟಾಸ್‌ ಸೋತು ಲಂಕಾ ವಿರುದ್ಧ ಮೊದಲು ಕ್ರೀಸ್‌ಗಿಳಿಸಿದ ದಕ್ಷಿಣ ಆಫ್ರಿಕಾ (South Africa) ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಹಾಗೂ ರಾಸಿ ವಾನ್‌ ಡೆರ್‌ ಡುಸೆನ್ ಇಬ್ಬರೂ ಭರ್ಜರಿ ಶತಕ ಸಿಡಿಸಿದರು. ಈ ಜೋಡಿ ವಿಕೆಟ್‌ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡೆನ್‌ ಮಾರ್ಕ್ರಮ್‌, ಲಂಕಾ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಮಾರ್ಕ್ರಮ್‌, 49 ಎಸೆತಗಳಲ್ಲೇ ಶತಕ ಸಿಡಿಸಿದರು. ಆ ಮೂಲಕ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ಸಿಡಿಸಿದ್ದ ಐರ್ಲೆಂಡ್ ಆಟಗಾರ ಕೆವಿನ್ ಓಬ್ರಿಯಾನ್ ದಾಖಲೆಯನ್ನ ನುಚ್ಚು ನೂರು ಮಾಡಿದರು. ಜೊತೆಗೆ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಮಾರ್ಕ್ರಮ್‌ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ 106 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.

    2015ರ ವಿಶ್ವಕಪ್‌ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎಬಿಡಿ ವಿಲಿಯರ್ಸ್‌ 31 ಎಸೆತಗಳಲ್ಲೇ ಶತಕ ಸಿಡಿಸಿರುವುದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಏಕದಿನ ವಿಶ್ವಕಪ್‌ನಲ್ಲಿ ಮೂಡಿಬಂದ ವೇಗದ ಶತಕಗಳು
    * ಏಡೆನ್ ಮಾರ್ಕ್ರಮ್ – ದಕ್ಷಿಣ ಆಫ್ರಿಕಾ- 49 ಎಸೆತಗಳು- ಶ್ರೀಲಂಕಾ ವಿರುದ್ಧ – ಹೊಸದಿಲ್ಲಿ- 2023
    * ಕೆವಿನ್ ಓಬ್ರಿಯನ್- ಐರ್ಲೆಂಡ್- 50 ಎಸೆತಗಳು- ಇಂಗ್ಲೆಂಡ್ ವಿರುದ್ಧ-ಬೆಂಗಳೂರು- 2011
    * ಗ್ಲೆನ್ ಮ್ಯಾಕ್ಸ್‌ವೆಲ್- ಆಸ್ಟ್ರೇಲಿಯಾ- 51 ಎಸೆತಗಳು- ಶ್ರೀಲಂಕಾ ವಿರುದ್ಧ- ಸಿಡ್ನಿ- 2015
    * ಎಬಿ ಡಿ ವಿಲಿಯರ್ಸ್- ದಕ್ಷಿಣ ಆಫ್ರಿಕಾ- 52 ಎಸೆತಗಳು- ವೆಸ್ಟ್ ಇಂಡೀಸ್ ವಿರುದ್ಧ- ಸಿಡ್ನಿ- 2015
    * ಐಯಾನ್ ಮಾರ್ಗನ್- ಇಂಗ್ಲೆಂಡ್- 57 ಎಸೆತಗಳು- ಆಫಾಘಾನಿಸ್ತಾನ ವಿರುದ್ಧ- ಓಲ್ಡ್ ಟಾಫರ್ಡ್- 2019

    ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು
    * 31 ಎಸೆತಗಳು – ಎಬಿಡಿ ವಿಲಿಯರ್ಸ್ – ವೆಸ್ಟ್ ಇಂಡೀಸ್ ವಿರುದ್ಧ- 2015
    * 44 ಎಸೆತಗಳು- ಮಾರ್ಕ್ ಬೌಚರ್- ಜಿಂಬಾಬ್ವೆ ವಿರುದ್ಧ-2006
    * 49 ಎಸೆತಗಳು- ಏಡೆನ್ ಮಾರ್ಕ್ರಮ್- ಶ್ರೀಲಂಕಾ ವಿರುದ್ಧ- 2023
    * 52 ಎಸೆತಗಳು- ಎಬಿಡಿ ವಿಲಿಯರ್ಸ್- ವೆಸ್ಟ್ ಇಂಡೀಸ್ ವಿರುದ್ಧ- 2015

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    ನವದೆಹಲಿ: ಸ್ಫೋಟಕ ಬ್ಯಾಟಿಂಗ್‌ ಮತ್ತು ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ, ಶ್ರೀಲಂಕಾ ವಿರುದ್ಧ 102 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಆದ್ರೆ ವಿಕೆಟ್‌ ಉರುಳಿದರೂ ಕೊನೆಯವರೆಗೂ ಹೋರಾಟ ನಡೆಸಿದ ಶ್ರೀಲಂಕಾ ತಂಡ ಸೋಲನುಭವಿಸಿದೆ.

    ಶನಿವಾರ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 429 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಸತತ ಹೋರಾಟದ ಹೊರತಾಗಿಯೂ 44.5 ಓವರ್‌ಗಳಲ್ಲಿ 326 ರನ್‌ ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಒಂದೆಡೆ ವಿಕೆಟ್‌ ಕಳೆದುಕೊಂಡರೂ ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸಿದ ಲಂಕಾ ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ಆರಂಭದಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡ ಲಂಕಾ ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ 3ನೇ ವಿಕೆಟ್‌ಗೆ ಕುಸಾಲ್ ಪೆರೆರಾ ಹಾಗೂ ಕುಸಲ್‌ ಮೆಂಡೀಸ್‌ ರಿಂದ 40 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಚರಿತ್‌ ಅಹಲಂಕಾ 65 ಎಸೆತಗಳಲ್ಲಿ 79 ರನ್‌ (4 ಸಿಕ್ಸರ್‌, 8 ಬೌಂಡರಿ) ಸಿಡಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು.

    ಒಂದೆಡೆ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದರೂ ಮತ್ತೊಂದೆಡೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ದಕ್ಷಿಣಾ ಆಫ್ರಿಕಾ ಬೌಲರ್‌ಗಳ ದಾಳಿಗೆ ತುತ್ತಾಗಿ ವಿಕೆಟ್‌ ಒಪ್ಪಿಸುತ್ತಿದ್ದರು. ಇದು ಲಂಕಾ ತಂಡನ್ನು ಸೋಲಿನ ಸುಳಿಗೆ ತಳ್ಳಿತ್ತು. ಕೊನೆಯಲ್ಲಿ ನಾಯಕ ದಸುನ್‌ ಶನಾಕ ಹೋರಾಟ ಕೂಡ ವ್ಯರ್ಥವಾಯಿತು. ಶನಾಕ 62 ಎಸೆತಗಳಲ್ಲಿ 68 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿಸಿದರೆ, ಕಸುನ್ ರಜಿತಾ 31 ಎಸೆತಗಳಲ್ಲಿ 33 ರನ್‌, ಮಥೀಶ ಪಥಿರಣ 5 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಲಂಕಾ 44.5 ಓವರ್‌ಗಳಲ್ಲಿ 326 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ದಕ್ಷಿಣಾ ಆಫ್ರಿಕಾ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಜೆರಾಲ್ಡ್ ಕೋಟ್ಜಿ 3 ವಿಕೆಟ್‌ ಕಿತ್ತರೆ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ತಲಾ ಎರಡೆರಡು ವಿಕೆಟ್‌ ಉರುಳಿಸಿದರು, ಲುಂಗಿ ಎನ್‌ಗಿಡಿ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 428 ರನ್‌ ಬಾರಿಸುವ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿತು. ಈ ಪೈಕಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ (Quinton de Kock) ಹಾಗೂ ತೆಂಬಾ ಬಹುಮಾ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರೂ 2ನೇ ವಿಕೆಟ್‌ಗೆ ಜೊತೆಯಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಡಿಕಾಕ್‌ ಜೋಡಿ 174 ಎಸೆತಗಳಲ್ಲಿ 204 ರನ್‌ ಸಿಡಿಸಿತ್ತು. ಡಿಕಾಕ್‌ 84 ಎಸೆತಗಳಲ್ಲಿ 100 ರನ್‌ (3 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, ಡುಸ್ಸೆನ್‌ 110 ಎಸೆತಗಳಲ್ಲಿ 108 ರನ್‌ (2 ಸಿಕ್ಸರ್‌, 13 ಬೌಂಡರಿ) ಬಾರಿಸಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್‌ ಮಾರ್ಕ್ರಮ್‌ (Adien Markram) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 196.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಾರ್ಕ್ರಮ್‌ 49 ಎಸೆತಗಳಲ್ಲೇ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಒಟ್ಟು 54 ಎಸೆತಗಳಲ್ಲಿ 106 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ಹೆನ್‌ರಿಚ್‌ ಕ್ಲಾಸೆನ್‌ 32 ರನ್‌, ಡೇವಿಡ್‌ ಮಿಲ್ಲರ್‌ 21 ಎಸೆತಗಳಲ್ಲಿ ಅಜೇಯ 39 ರನ್‌ ಹಾಗೂ ಮಾರ್ಕೊ ಜಾನ್ಸೆನ್‌ ಅಜೇಯ 12 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 428 ರನ್‌ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 2 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಮತೀಶ ಪಥಿರಣ, ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    ನವದೆಹಲಿ: ಭಾರತದ ಆತಿಥ್ಯದಲ್ಲಿ ವಿಶ್ವಕಪ್‌ (ODI World Cup) ಟೂರ್ನಿ ಶುರುವಾಗಿದ್ದು, ದಕ್ಷಿಣ ಆಫ್ರಿಕಾ (South Africa) ತಂಡ ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ಬರೆದಿದೆ.

    ಶನಿವಾರ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 428 ರನ್‌ ಬಾರಿಸಿದೆ. ಈ ಪೈಕಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಶತಕ ಸಿಡಿಸಿರುವುದು ವಿಶೇಷ. ಅಲ್ಲದೇ ಇದು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ ಸಹ ಆಗಿದೆ. ಇದನ್ನೂ ಓದಿ: ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    2015ರ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾ (Australia) 6 ವಿಕೆಟ್‌ ನಷ್ಟಕ್ಕೆ 417 ರನ್‌ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದಕ್ಕೂ ಮುನ್ನ 2007ರ ವಿಶ್ವಕಪ್‌ನಲ್ಲಿ ಭಾರತ ತಂಡ ಬರ್ಮುಡಾ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 413 ರನ್‌, ದಕ್ಷಿಣ ಆಫ್ರಿಕಾ 2015ರ ಫೆಬ್ರವರಿ 27ರಂದು ವೆಸ್ಟ್‌ ಇಂಡೀಸ್‌ ವಿರುದ್ಧ 408 ರನ್‌ ಹಾಗೂ ಮಾರ್ಚ್‌ 3 ರಂದು ಐರ್ಲೆಂಡ್‌ ವಿರುದ್ಧ 411 ರನ್‌ ಸಿಡಿಸಿ ದಾಖಲೆ ಬರೆದಿತ್ತು. ಇದೀಗ 428 ರನ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದೆ. ಇದನ್ನೂ ಓದಿ: World Cup 2023: ನೆದರ್ಲ್ಯಾಂಡ್ಸ್‌ ವಿರುದ್ಧ 81 ರನ್‌ಗಳ ಜಯ – ಬೌಲರ್‌ಗಳ ಕೈಚಳಕದಿಂದ ಪಾಕ್‌ ಶುಭಾರಂಭ

    ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ (Quinton de Kock) ಹಾಗೂ ತೆಂಬಾ ಬಹುಮಾ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ಆದ್ರೆ 2ನೇ ವಿಕೆಟಿಗೆ ಜೊತೆಯಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಡಿಕಾಕ್‌ ಜೋಡಿ 174 ಎಸೆತಗಳಲ್ಲಿ 204 ರನ್‌ ಸಿಡಿಸಿತ್ತು. ಡಿಕಾಕ್‌ 84 ಎಸೆತಗಳಲ್ಲಿ 100 ರನ್‌ (3 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, ಡುಸ್ಸೆನ್‌ 110 ಎಸೆತಗಳಲ್ಲಿ 108 ರನ್‌ (2 ಸಿಕ್ಸರ್‌, 13 ಬೌಂಡರಿ) ಬಾರಿಸಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್‌ ಮಾರ್ಕ್ರಮ್‌ (Adien Markram) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 196.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಾರ್ಕ್ರಮ್‌ 49 ಎಸೆತಗಳಲ್ಲೇ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಒಟ್ಟು 54 ಎಸೆತಗಳಲ್ಲಿ 106 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌; 100 ಪದಕ ಗೆದ್ದು ಇತಿಹಾಸ ಬರೆದ ಭಾರತ  

    ಈ ಬೆನ್ನಲ್ಲೇ ಹೆನ್‌ರಿಚ್‌ ಕ್ಲಾಸೆನ್‌ 32 ರನ್‌, ಡೇವಿಡ್‌ ಮಿಲ್ಲರ್‌ 21 ಎಸೆತಗಳಲ್ಲಿ ಅಜೇಯ 39 ರನ್‌ ಹಾಗೂ ಮಾರ್ಕೊ ಜಾನ್ಸೆನ್‌ ಅಜೇಯ 12 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 428 ರನ್‌ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 2 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಮತೀಶ ಪಥಿರಣ, ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ತಂಡ:
    428/5 – ದಕ್ಷಿಣ ಆಫ್ರಿಕಾ V/S ಶ್ರೀಲಂಕಾ- 2023
    417/6 – ಆಸೀಸ್‌ V/S ಅಫ್ಘಾನಿಸ್ತಾನ- 2015
    413/5 – ಭಾರತ V/S ಬರ್ಮುಡಾ- 2007
    411/4 – ದಕ್ಷಿಣ ಆಫ್ರಿಕಾ V/S ಐರ್ಲೆಂಡ್‌-2015
    408/5 – ದಕ್ಷಿಣ ಆಫ್ರಿಕಾ V/S ವೆಸ್ಟ್‌ ಇಂಡೀಸ್‌- 2015

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]