Tag: ಏಕದಿನ ಟೂರ್ನಿ

  • 2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ಆಸೀಸ್ ಏಕದಿನ ಟೂರ್ನಿಗೆ ಕಮ್‍ಬ್ಯಾಕ್?

    ಮುಂಬೈ: ಟೀಂ ಇಂಡಿಯಾ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 60 ದಿನಗಳ ಬಳಿಕ ಬೌಲಿಂಗ್ ಅಭ್ಯಾಸ ನಡೆಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬಹುದಿನಗಳ ಬಳಿಕ ಮತ್ತೆ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆಸೀಸ್ ವಿರುದ್ಧದ ಏಕದಿನ ಟೂರ್ನಿಗೆ ಬಿಸಿಸಿಐ ತಂಡವನ್ನು ಆಯ್ಕೆ ಮಾಡಬೇಕಿದ್ದು ಸ್ಥಾನ ಸಿಗುವ ಸಾಧ್ಯತೆಯಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ 2019 ಜನವರಿಯಲ್ಲಿ ಆರಂಭವಾಗಲಿರುವ ಆಸೀಸ್ ಏಕದಿನ ಟೂರ್ನಿಯಲ್ಲಿ ಕಮ್‍ಬ್ಯಾಕ್ ಮಾಡಲು ಶ್ರಮವಹಿಸುತ್ತಿದ್ದೇನೆ. ಇದಕ್ಕಾಗಿ ಫಿಟ್ನೆಸ್ ಕಾಯ್ದುಕೊಳ್ಳಲು ಶ್ರಮವಹಿಸುತ್ತಿದ್ದು, ಮುಂಬೈನಲ್ಲಿ ಕಠಿಣ ಬೌಲಿಂಗ್ ಸೆಷನ್ಸ್‍ಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    2016 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಹಾರ್ದಿಕ್ ಪಾಂಡ್ಯ, ಉತ್ತಮ ಪ್ರದರ್ಶನದ ನೀಡುವ ಮೂಲಕ ನಿರಂತರವಾಗಿ ತಂಡದ ಸದಸ್ಯರಾಗಿದ್ದರು. 2019ರ ಮೇ-ಜುಲೈ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಸದ್ಯ ಹಾರ್ದಿಕ್ ಪಾಂಡ್ಯರ ಬಹುಮುಖ್ಯ ಗುರಿಯಾಗಿದೆ. ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯುತ್ತಿದಂತೆ ಆ ಸ್ಥಾನಕ್ಕೆ ಹಾರ್ದಿಕ್ ಸಹೋದರ ಕೃಣಾಲ್ ಪಾಂಡ್ಯ ಆಯ್ಕೆ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜಯಕ್ಕಾಗಿ ಓವರ್‌ನ 6 ಎಸೆತಗಳಲ್ಲೂ ಡೈವ್ ಮಾಡಲು ನಾನು ಸಿದ್ಧ – ವಿರಾಟ್

    ಜಯಕ್ಕಾಗಿ ಓವರ್‌ನ 6 ಎಸೆತಗಳಲ್ಲೂ ಡೈವ್ ಮಾಡಲು ನಾನು ಸಿದ್ಧ – ವಿರಾಟ್

    ಮುಂಬೈ: ದೇಶಕ್ಕಾಗಿ ಆಟದಲ್ಲಿ ಪ್ರತಿನಿಧಿಸುವುದು ಹೆಮ್ಮೆಯ ವಿಚಾರವಾಗಿದ್ದು, ತಂಡಕ್ಕಾಗಿ ಓವರ್‌ನ 6 ಎಸೆತಗಳಲ್ಲಿಯೂ ಡೈವ್ ಮಾಡಲು ನಾನು ಸಿದ್ಧನಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶದ ಪರ ಆಡುವ ಸಂದರ್ಭದಲ್ಲಿ ಪ್ರತಿಯೊಂದು ರನ್‍ಗಾಗಿ ನಾವು ಪೂರ್ಣ ಪ್ರಮಾಣದ ಪರಿಶ್ರಮ ಹಾಕಬೇಕಿದೆ. ಏಕೆಂದರೆ ತಂಡಕ್ಕಾಗಿ ಓವರ್ ಒಂದರ 6 ಎಸೆತಗಳಲ್ಲಿ ಡೈವ್ ಮಾಡಲು ನಾನು ಸಿದ್ಧ. ಇದು ಆಟಗಾರನಾಗಿ ನನ್ನ ಕರ್ತವ್ಯ ಎಂದು ಬಿಸಿಸಿಐ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.

    ತಂಡದ ಪರ ರನ್ ಗಳಿಸುವುದು ನಾನು ಬೇರೊಬ್ಬರ ಪರವಾಗಿ ಆಡಿದಂತೆ ಅಲ್ಲ ಅಥವಾ ನಾನು ಸಂಪೂರ್ಣ ಆಟಕ್ಕೆ ಬದ್ಧರಾಗಿದ್ದೇನೆ ಎಂದು ತೋರಿಸುವುದು ಅಲ್ಲ. ಕೇವಲ ತಂಡಕ್ಕಾಗಿ ಒಂದು ರನ್ ಅಧಿಕವಾಗಿ ಗಳಿಸುವುದು ಮಾತ್ರ ಇದರ ಉದ್ದೇಶವಾಗಿರುತ್ತದೆ. ಇದುವೇ ನನ್ನ ಉದ್ದೇಶವೂ ಆಗಿತ್ತು ಎಂದು ಸ್ಪಷ್ಟಪಡಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಡೈವ್ ಮಾಡಿ 150 ರನ್ ಪೂರ್ಣಗೊಳಿಸಿದ್ದರು.

    ಇದೇ ವೇಳೆ ತಮ್ಮ ದಾಖಲೆ ಕುರಿತು ಪ್ರತಿಕ್ರಿಯೆ ನೀಡಿದ ಕೊಹ್ಲಿ, ಅವು ಜೀವನದಲ್ಲಿ ಅಲ್ಪ ಭಾಗವಷ್ಟೇ. ಆದರೆ ಅವುಗಳನ್ನು ನೀವು ಎಲ್ಲಿಂದ ಆರಂಭಿಸಿದ್ದೀರಿ ಎನ್ನುವುದನ್ನು ಹೇಳುತ್ತದೆ. 10 ವರ್ಷಗಳಿಂದ ಆಡುತ್ತಿರುವುದು ವಿಶೇಷ ಎನಿಸುತ್ತಿದೆ. ನಾನು ನನ್ನ ಆಟವನ್ನು ಪ್ರೀತಿಸುತ್ತೇನೆ ಎಂದರು.

    ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಅಲ್ಲದೇ ಪಂದ್ಯದಲ್ಲಿ 157 ರನ್ ಸಿಡಿಸಿ ಹಲವು ಸಾಧನೆಗಳನ್ನು ಮಾಡಿದ್ದರು. ಇದನ್ನು ಓದಿ : ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ವೆಸ್ಟ್ ಇಂಡೀಸ್ ವಿರುದ್ಧ 5 ಪಂದಗಳ ಏಕದಿನ ಟೂರ್ನಿಯಲ್ಲಿ ಮುಂದಿನ 3 ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಭುವನೇಶ್ವರ್ ಕುಮಾರ್, ಬುಮ್ರಾ ತಂಡಕ್ಕೆ ಆಯ್ಕೆ ಆಗಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. 3ನೇ ಏಕದಿನ ಪಂದ್ಯ ಶನಿವಾರ ಪುಣೆಯಲ್ಲಿ ನಡೆಯಲಿದೆ.

  • ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಟೂರ್ನಿಯ 2 ಪಂದ್ಯಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟ ಮಾಡಿದ್ದು, ಆಯ್ಕೆ ಸಮಿತಿ ದಿನೇಶ್ ಕಾರ್ತಿಕ್ ಅವರಿಗೆ ಕೋಕ್ ನೀಡಿ ಯುವ ಆಟಗಾರ ರಿಷಭ್ ಪಂತ್‍ರನ್ನು ಆಯ್ಕೆ ಮಾಡಿದೆ.

    ಏಷ್ಯಾಕಪ್‍ನಲ್ಲಿ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೆ ತಂಡದ ನಾಯಕತ್ವ ವಹಿಸಿದ್ದಾರೆ. ಸದ್ಯ 14 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ತಂಡದಲ್ಲಿ ದಿನೇಶ್ ಕಾರ್ತಿಕ್, ಕೇದರ್ ಜಾದವ್, ಬುಮ್ರಾ, ಭುವನೇಶ್ವರ್, ಹಾರ್ದಿಕ್ ಪಾಂಡ್ಯ ಅವರಿಗೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ, ಕೇದರ್ ಜಾದವ್ ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ. ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯ ವೇಳೆ ಇಬ್ಬರು ಆಟಗಾರರು ಗಾಯಗೊಂಡಿದ್ದರು.

    ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ 5 ಇನ್ನಿಂಗ್ಸ್ ಗಳಿಂದ 146 ರನ್ ಮಾತ್ರ ಗಳಿಸಿದ್ದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದರ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿ ಅಕ್ಟೋಬರ್ 21 ರಿಂದ ನವೆಂಬರ್ 1ವರೆಗೂ ನಡೆಯಲಿದೆ.

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಧೋನಿ (ಕೀಪರ್), ರಿಷಭ್ ಪಂತ್, ಆರ್ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ಕೆಎಲ್ ರಾಹುಲ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv